ರಾಜ್ಯ ಘೋಷಕರ ವರದಿ
ಅನೌಪಚಾರಿಕ ಸಾಕ್ಷಿ ಫಲಬಿಡುತ್ತದೆ
ಯೇಸು ಒಂದು ಬಾವಿಯ ಬಳಿ ಸಮಾರ್ಯದ ಸ್ತ್ರೀಯೊಬ್ಬಳಿಗೆ,“ಕುಡಿಯುವುದಕ್ಕೆ ಕೊಡು” ಎಂದು ಹೇಳಿ ಆರಂಭಿಸಿದ ಸಂಭಾಷಣೆ ಅನೌಪಚಾರಿಕವಾದರೂ ಹೆಚ್ಚು ಕಾರ್ಯಸಾಧಕವಾದ ಸಾಕ್ಷಿಗೆ ನಡಿಸಿತು.(ಯೋಹಾನ 4:7) ಇಂದು ನಾವೂ ಹಾಗೆಯೇ ಅನೌಪಚಾರಿಕ ಸಾಕ್ಷಿಸಂಧರ್ಭಗಳ ವಿಷಯ ಎಚ್ಚರದಿಂದಿರುವಲ್ಲಿ ಅತ್ಯಂತ ಕಾರ್ಯಸಾಧಕರಾಗಬಲ್ಲೆವು. ಆಸ್ಟ್ರೇಲಿಯದ ಒಬ್ಬ ಸಹೋದರನು ಒಂದು ಪಾರ್ಕ್ ಬೆಂಚಿನಲ್ಲಿ ಕುಳಿತು ದಿನವಚನವನ್ನು ಓದಲಾಗಿ ಅನೌಪಚಾರಿಕ ಸಂಭಾಷಣೆಯನ್ನಾರಂಭಿಸಿದನು. ಕುತೂಹಲಿಯಾದ ಒಬ್ಬನು ಆ ಪುಸ್ತಕವನ್ನು ನೋಡಿ ತನಗೂ ಶಾಸ್ತ್ರಾಸಕ್ತಿ ಇದೆಯೆಂದು ಹೇಳಿದನು. ಕ್ಯಾಥಲಿಕ್ ಶಾಲೆಯಲ್ಲಿ ವಿಕಾಸವಾದ ಕಲಿತು ಈಗ ಧರ್ಮಶೃದ್ಧೆ ಇಲ್ಲದ ಇವನು ಯಾವುದನ್ನು ನಂಬಬೇಕೆಂದು ತಿಳಿಯದೆ ಇದ್ದನು. ಸಹೋದರನು ಅವನಿಗೆ, ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಇವೂಲ್ಯೂಷನ್ ಆರ್ ಬೈ ಕ್ರಿಯೇಷನ್?a ಎಂಬ ಪುಸ್ತಕವನ್ನು ಪಡೆಯುವ ಏರ್ಪಾಡು ಮಾಡಿದನು. ಎರಡು ದಿನಗಳ ತರುವಾಯ ಪುಸ್ತಕದೊಂದಿಗೆ ಈ ವ್ಯಕ್ತಿಯ ಸ್ಥಳಕ್ಕೆ ಹೋದಾಗ ಅವನು ಅಲ್ಲಿರಲಿಲ್ಲ. ಅವನ ಸೆಕ್ರೆಟರಿ, “ನಾವು ಈ ಪುಸ್ತಕಕ್ಕಾಗಿಯೇ ಕಾಯುತ್ತಿದ್ದೆವು” ಎಂದು ಹೇಳಿ ಹೆಚ್ಚುಕಡಮೆ ಅದನ್ನು ಕಸಿದುಕೊಂಡಳು.
ಎರಡು ತಾಸುಗಳ ಬಳಿಕ ಸಹೋದರನಿಗೆ ಆ ವ್ಯಕ್ತಿ ಪೋನ್ ಮಾಡಿ ಕ್ರಿಯೇಷನ್ ಪುಸ್ತಕದ ಇನ್ನೆರಡು ಪ್ರತಿಗಳನ್ನು ತರುವಂತೆಯೂ ತನ್ನನ್ನು ಆಫೀಸಿನಲ್ಲಿ ಭೇಟಿ ಮಾಡುವಂತೆಯೂ ಕೇಳಿಕೊಂಡನು. ಸಹೋದರನು ಆಫೀಸಿಗೆ ಹೋದಾಗ ಅಲ್ಲಿ ಈ ವ್ಯಕ್ತಿಯೂ ಇನ್ನಿಬ್ಬರೂ ಹಾಜರಿದ್ದರು. ಸೆಕ್ರೆಟರಿಯ ಸಮೇತ ಅವರೊಂದಿಗೆ ಬೈಬಲ್ ಅಧ್ಯಯನ ಆರಂಭವಾಗಿ ಸಹೋದರನು ವಾರಕ್ಕೆ ಎರಡಾವರ್ತಿ ಬರುವಂತೆ ಏರ್ಪಡಿಸಲಾಯಿತು. ಮುಂದಿನ ವಾರಗಳಲ್ಲಿ ಆ ವ್ಯಕ್ತಿಯ ‘ಹೊಸದಾಗಿ ಹುಟ್ಟಿದ ಕ್ರೈಸ್ತ’ ಪ್ರೇಯಸಿ ಬೈಬಲ್ ಪ್ರಶ್ನೆಗಳನ್ನು ಬರೆದು ಚೀಟಿಗಳನ್ನು ಕಳುಹಿಸುತ್ತಾ ಇದ್ದಳು. ಕೊನೆಗೆ, ಅವಳು ಮಾತ್ರವಲ್ಲ ಆ ಪುರುಷನ ವ್ಯಾಪಾರದ ಪಾಲುದಾರನು ಮತ್ತು ಅವನ ವಿಕಾಸವಾದಿಯಾಗಿದ್ದ ಸ್ನೇಹಿತನು ಅಧ್ಯಯನದಲ್ಲಿ ಸೇರಿದರು.
ಅವರು ತಮ್ಮ ಬೈಬಲ್ ಅಧ್ಯಯನವನ್ನು ಕ್ರಮವಾಗಿ ಐದು ತಿಂಗಳು ಮುಂದುವರಿಸಿದರು. ವಾರದ ಎರಡನೆಯ ಅಧ್ಯಯನ ಪಾರ್ಕಿನಲ್ಲಿ ನಡೆಯಿತು. ಬಳಿಕ ಸೆಕ್ರೆಟರಿಯ ಇನಿಯನು ಅಧ್ಯಯನದ ಗುಂಪನ್ನು ಸೇರಿದನು. ಸ್ವಲ್ಪದರಲ್ಲಿ, ಮೊದಲ ವ್ಯಕ್ತಿಯ ಪಾಲುದಾರನೂ ಇವನ ಸ್ನೇಹಿತನೂ ಅಮೇರಿಕದ ಐಡಹೊ ಪ್ರಾಂತ್ಯಕ್ಕೆ ಹೋಗಿ ಅಲ್ಲಿ ಅಧ್ಯಯನ ಮುಂದುವರಿಸಿದರು. ಕೆಲವು ವಾರಗಳಲ್ಲಿ, ಮೊದಲನೆಯ ವ್ಯಕ್ತಿಯನ್ನು ಒಬ್ಬ ಪೂರ್ತಿ ಅಪರಿಚಿತನು ಸಮೀಪಿಸಿ ಪಾರ್ಕಿನಲ್ಲಿ ನಡೆಯುತ್ತಿದ್ದ ಚರ್ಚೆಗೆ ಏನಾಯಿತೆಂದು ಕೇಳಿದನು. ಅವನು ನಡೆಯುತ್ತಿದ್ದ ಅಧ್ಯಯನಕ್ಕೆ ಕಿವಿಗೊಡುತ್ತಿದ್ದನಂತೆ. ಇವನೊಂದಿಗೂ ಅಧ್ಯಯನ ಏರ್ಪಡಿಸಲಾಯಿತು.
ಇದೆಲ್ಲದರ ಪರಿಣಾಮವೋ? ಪಾರ್ಕಿನ ಪ್ರಥಮ ಸಂಪರ್ಕದಿಂದ ಹಿಡಿದು ಹದಿನೆಂಟು ತಿಂಗಳುಗಳಲ್ಲಿ, ಪ್ರಥಮ ವ್ಯಕ್ತಿ ಮತ್ತು ಅವನ ಮೊದಲ ‘ಹೊಸದಾಗಿ ಹುಟ್ಟಿದ ಕ್ರೈಸ್ತ’ ಪ್ರೇಯಸಿ ವಿವಾಹ ಮಾಡಿಕೊಂಡು ದೀಕ್ಷಾಸ್ನಾನ ಹೊಂದಿದರು. ಸೆಕ್ರೆಟರಿ ಮತ್ತು ಅವಳ ಇನಿಯನೂ ವಿವಾಹ ಮಾಡಿಕೊಂಡು ದೀಕ್ಷಾಸ್ನಾನ ಹೊಂದಿದರು. ಅಮೇರಿಕಕ್ಕೆ ಹೋಗಿದ್ದ ಪಾಲುದಾರನೂ ಅವನ ಸ್ನೇಹಿತನೂ ದೀಕ್ಷಾಸ್ನಾನ ಹೊಂದಿ ಅವರಲ್ಲಿ ಒಬ್ಬನು ಈಗ ಕ್ರಮವಾಗಿ ಆಕ್ಸಿಲಿಯರಿ ಪಯನೀಯರನಾಗಿ ಸೇವೆಮಾಡುತ್ತಿದ್ದಾನೆ. ಪಾರ್ಕಿನ ಬೈಬಲ್ ಚರ್ಚೆಯನ್ನು ಕೇಳುತ್ತಿದವನು ತನ್ನ ಅಧ್ಯಯನ ಮುಂದುವರಿಸಿದನು. ಬಳಿಕ ಅವನು ಅಯರ್ಲೆಂಡಿಗೆ ವಲಸೆ ಹೋಗಿ ಅಲ್ಲಿ ದೀಕ್ಷಾಸ್ನಾನಕ್ಕೆ ಎದುರು ನೋಡುತ್ತಿದ್ದಾನೆ!
ಒಬ್ಬ ಸಹೋದರನು ತನ್ನ ಊಟದ ಹೊತ್ತಿನ ಪ್ರಯೋಜನ ತಕ್ಕೊಂಡು ಅನೌಪಚಾರಿಕ ಸಾಕ್ಷಿಕೊಟ್ಟದ್ದರಿಂದ ಇದೆಲ್ಲ ನಡೆಯಿತು, ಮತ್ತು ಯೆಹೋವನು ಅವನ ಪ್ರಯತ್ನವನ್ನು ಆಶೀರ್ವದಿಸಿದನು. ಇದೇ ರೀತಿ ನಾವೂ ಯೆಹೋವನ ರಾಜ್ಯಸಂದೇಶಕ್ಕಾಗಿ ಹಸಿದಿರುವವರಿಗೆ ಸುವಾರ್ತೆ ನೀಡಲು ಸಕಲ ಸಂದರ್ಭಗಳ ಪ್ರಯೋಜನವನ್ನೂ ತೆಗೆದುಕೊಳ್ಳೋಣ! (w90 6/1)
[ಅಧ್ಯಯನ ಪ್ರಶ್ನೆಗಳು]
a ವಾಚಟ್ವರ್ ಬೈಬಲ್ ಆ್ಯಂಡ್ ಟ್ರ್ಯೆಕ್ಟ್ ಸೊಸೈಟಿ ರವರಿಂದ ಪ್ರಕಾಶಿಸಲ್ಪಟಿದೆ.