ಯೆಹೋವನು ತನ್ನ ನಾಮವನ್ನು ಪ್ರಕಟಿಸಿದ್ದೇಕೆ?
1964ರಲ್ಲಿ ಪೋಲೆಂಡಿನಲ್ಲಿ ಪ್ರಕಾಶಿತವಾದ ಒಂದು ವ್ಯಾಖ್ಯಾನವು ಈ ಪ್ರಶ್ನೆಯನ್ನು ಒಂದು ಅತಿ ವಿಚಾರಪ್ರೇರಕ ರೀತಿಯಲ್ಲಿ ಉತ್ತರಿಸಿದೆ. ರೋಮನ್ ಕ್ಯಾಥ್ಲಿಕ್ ಚರ್ಚ್ನ ಮುದ್ರಣಾಧಿಕಾರದ ಕೆಳಗೆ, ಲುಬ್ಲಿನ್ ಯುನಿರ್ವಸಿಟಿಯ ಪ್ರೊಫೆಸರರಾದ ಡಾ. ಸಾನ್ಟಿಸ್ಲಾ ಲ್ಯಾಕ್, ಗಮನಿಸಿದ್ದು:
“ವಿಮೋಚಿತ ಜನರು ಮಾನವ ಕುಲದ ಮುಂದೆ ದೇವರ ನಾಮಕ್ಕೆ ಜವಾಬ್ದಾರರಾಗಿದ್ದಾರೆ.” “ಅನ್ಯ ಜನರು ಯಾಹ್ವೇ [ಯೆಹೋವ] ನಾಮವನ್ನು ಸುತ್ತಿಸುವಂತೆ ಮತ್ತು ಅವರದನ್ನು ದೂಷಿಸ”ದಂತೆ ಪ್ರಯತ್ನಗಳನ್ನು ಮಾಡುವುದು ಇಸ್ರಾಯೇಲ್ಯರ ಜವಾಬ್ದಾರಿಯಾಗಿತ್ತು. “ಯಾಹ್ವೇ ಎಂಬದಕ್ಕೆ ಒಂದರ್ಥವಿದೆ. . . ಆ ನಾಮವನ್ನು ಅರಿಕೆಮಾಡುವವರಿಗೆ ತೋರಿಸುವ ಪ್ರತಿಕ್ರಿಯೆಯ ಮೇಲೆ ಆಧರಿಸಿ ಲೋಕಕ್ಕೆ ತೀರ್ಪಾಗುವುದು.” ಪ್ರೊಫೆಸರರು ಘೋಷಿಸಿದ್ದೇನಂದರೆ, “ಯಾಹ್ವೇ ಎಂಬ ಹೆಸರು ರಾಷ್ಟ್ರಗಳಲ್ಲಿ ಮಹೋನ್ನತವೆನಿಸುವುದು . . . ಅದು ಭೂಲೋಕದಲ್ಲೆಲ್ಲೂ ಹಬ್ಬುವುದು. ಮೋಶೆಗೆ ಆ ನಾಮದ ಅಂತಿಮ ಗುರಿ . . . ಅದೇ ಅಗಿತ್ತು.”
ಹೌದು, ಮಲಾಕಿಯ 1:11 ಹಾಗೆಯೇ ಪ್ರವಾದಿಸಿದೆ: “ಅನ್ಯ ಜನಾಂಗಗಳಲ್ಲಿ ನನ್ನ ನಾಮವು ಘನವಾಗುವುದು. ಇದು ಸೇನಾಧೀಶ್ವರ ಯೆಹೋವನ ನುಡಿ.” ಮತ್ತು “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗು”ವಂತೆ ಆ ಹೆಸರನ್ನು ಇಂದು ಲೋಕ ವ್ಯಾಪಕವಾಗಿ ಸಾರುತ್ತಿರುವವರು ಯಾರು? ಯೆಹೋವನ ಸಾಕ್ಷಿಗಳೇ! “ಆತನ ಹೆಸರಿಗಾಗಿರುವ ಜನರಿಗೆ” ಹೌದು, “ಆ ನಾಮವನ್ನು ಅರಿಕೆ ಮಾಡುವವರಿಗೆ,” ಜನತೆಯು ತೋರಿಸುವ ಪ್ರತಿಕ್ರಿಯೆಯು ಅವರಿಗೆ ಜೀವ ಮತ್ತು ಮರಣದ ವಿಷಯವಾಗಿದೆ. ಯೆಹೋವ ಮತ್ತು ಆತನ ಸಾಕ್ಷಿಗಳಿಗೆ ನಿಮ್ಮ ಪ್ರತಿಕ್ರಿಯೆಯೇನು?—ಅಪೊಸ್ತಲರ ಕೃತ್ಯಗಳು 2:21; 15:14; ಇದಕ್ಕೆ ಮಲಾಕಿಯ 3:16-18ನ್ನು ಹೋಲಿಸಿ. (w90 2/1)