“ಯಥಾರ್ಥವಾದ ರೀತಿಯಲ್ಲಿ ಉತ್ತರಿಸುವುದು”
ಪರ್ವತ ಪ್ರಸಂಗದಲ್ಲಿ, ಯೇಸುವು “ಧರ್ಮ ಶಾಸ್ತ್ರ ಮತ್ತು ಪ್ರವಾದಿಗಳ ವಚನ” ಗಳಿಗೆ ಸೂಚಿಸಿದ್ದಾನೆ. ಇಬ್ರಿಯ ಶಾಸ್ತ್ರ ಗ್ರಂಥದಲ್ಲಿ ಮೂರನೆಯ ಭಾಗ ಬರವಣಿಗೆಗಳು ಎಂದಾಗಿವೆ, ಇದರಲ್ಲಿ ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳು ಮುಂತಾದ ಕಾವ್ಯಮಯ ಪುಸ್ತಕಗಳಿವೆ. (ಮತ್ತಾಯ 7:12; ಲೂಕ 24:44) ಇವುಗಳಲ್ಲಿಯೂ ದೇವರ ವಿವೇಕವು ಅಡಕವಾಗಿದೆ.
ಉದಾಹರಣೆಗೆ, ಇಸ್ರಾಯೇಲ್ಯರ ನ್ಯಾಯಾಧಿಪತಿಗಳಿಗೆ ಜ್ಞಾನೋಕ್ತಿಯು ಎಚ್ಚರಿಸಿದ್ದು: “ಯಾವನು ಅಧರ್ಮಿಗೆ—ನೀನು ಧರ್ಮಾತ್ಮ ಎಂದು ಹೇಳುತ್ತಾನೋ ಅವನನ್ನು ಜನರು ಶಪಿಸುವರು, ರಾಷ್ಟ್ರದ ಪ್ರಜೆಗಳು ದೂಷಿಸುವರು. ಆದರೆ ದುಷ್ಟನನ್ನು ಗದರಿಸುವವರಿಗಾದರೋ ಶುಭವಾಗುವುದು, ಸುಖಕರವಾದ ಆಶೀರ್ವಾದವು ಲಭಿಸುವುದು. ಯಥಾರ್ಥವಾದ ರೀತಿಯಲ್ಲಿ ಉತ್ತರಿಸುವವನ ತುಟಿಗಳನ್ನು ಮುದ್ದಿಸುವರು.”—ಜ್ಞಾನೋಕ್ತಿ 24:24-26, NW.
ನ್ಯಾಯಾಧಿಪತಿಯೊಬ್ಬನು ಲಂಚ ವ ಸಜ್ವನ-ಪಕ್ಷಪಾತದ ಒತ್ತಡಕ್ಕೆ ಮಣಿದು, ದುಷ್ಟನನ್ನು ನೀತಿವಂತನೆಂದು ಘೋಷಿಸಿದರೆ, ಆ ಪದವಿಗೆ ಅವನು ಅಯೋಗ್ಯನೆಂದು ಇತರರು ಕಾಣುವರು. ಯಾಕೆ, ಅಂತಹ ನ್ಯಾಯದ ದುರ್ವರ್ತನೆಯ ಬಗ್ಯೆ ಕೇಳಿದ ವಿಧರ್ಮಿ “ರಾಷ್ಟ್ರಗಳ ಪ್ರಜೆಗಳು” ಸಹಿತ ಧಿಕ್ಕಾರದಿಂದ ಪ್ರತಿಕ್ರಿಯೆ ತೋರಿಸುವರು ! ಇನ್ನೊಂದು ಪಕ್ಕದಲ್ಲಿ, ನ್ಯಾಯಾಧಿಪತಿಯೊಬ್ಬನು ಧೈರ್ಯದಿಂದ ದುಷ್ಟ ಮನುಷ್ಯನನ್ನು ಗದರಿಸುವುದಾದರೆ ಮತ್ತು ವ್ಯವಹರಿಸುತ್ತಿರುವ ಮೊಕದ್ದಮೆಯಲ್ಲಿ ಯಥಾರ್ಥವಾದ ರೀತಿಯಲ್ಲಿ ಉತ್ತರಿಸಿರುವುದಾದರೆ, ಅವನು ಜನರ ಗೌರವ ಮತ್ತು ಪ್ರೀತಿಯನ್ನು ಗಳಿಸುವನು. ಅಧಿಕ ಸಂಖ್ಯಾತ ಜನರು ಅವನಿಗೆ “ಸುಖಕರವಾದ ಆಶೀರ್ವಾದವನ್ನು” ಕೋರುವರು. ಜ್ಞಾನೋಕ್ತಿಯು ಇದನ್ನು ಇನ್ನಷ್ಟು ಹೆಚ್ಚಾಗಿ ಹೇಳುತ್ತಾನೆ: “ಯಥಾರ್ಥವಾದ ರೀತಿಯಲ್ಲಿ ಉತ್ತರಿಸುವವನ ತುಟಿಗಳನ್ನು ಮುದ್ದಿಸುವರು.”
ಅಂತಹ ಮುದ್ದಿಸುವಿಕೆಯು ಪರಸ್ಪರ ಗೌರವವನ್ನು —ಬುದ್ಧಿವಾದ ಕೊಡುವವನ ಮತ್ತು ಅವನ ನೇರವಾದ ಯಥಾರ್ಥ ಗದರಿಸುವಿಕೆಯನ್ನು ಅವಲೋಕಿಸುವವರ ನಡುವೆ—ಸೂಚಿಸುತ್ತದೆ. ಪ್ರಾಯಶಃ ಗದರಿಸಲ್ಪಟ್ಟವನು ಸ್ವತಹ ಮೆಚ್ಚಿಕೆಯಿಂದ ಪ್ರತಿವರ್ತಿಸ ಬಹುದು ಮತ್ತು ನ್ಯಾಯಾಧಿಪತಿಯ ಕಡೆಗೆ ಮಮತೆಯನ್ನು ವ್ಯಕ್ತಪಡಿಸಬಹುದು. ಜ್ಞಾನೋಕ್ತಿ 28:23 ಹೇಳುವುದು: “ಮುಖಸ್ತುತಿ ಮಾಡುವವನಿಗಿಂತಲೂ ಗದರಿಸುವವನು ಬಳಿಕ ಹೆಚ್ಚು ದಯಾಪಾತ್ರನಾಗುವನು.” ಆದಕಾರಣ ಇಂದು ಸಭೆಯ ಹಿರಿಯರಾಗಿ ಸೇವೆ ಸಲ್ಲಿಸುವವರು, ಮಿತ್ರತ್ವ ಯಾ ಕೌಟುಂಬಿಕ ಸಂಬಂಧಗಳ ಕಾರಣ ಅವರ ನ್ಯಾಯತೀರ್ಪು ಅಡ್ಡಮಾರ್ಗ ಹಿಡಿಯಲು ಬಿಡುವುದನ್ನು ಹೋಗಲಾಡಿಸತಕ್ಕದ್ದು. ಆವಶ್ಯವಾದ ಬುದ್ಧಿವಾದವನ್ನು ಯಥಾರ್ಥವಾದ ರೀತಿಯಲ್ಲಿ ಕೊಡುವುದರಿಂದ, ಹಿರಿಯರು ಸಭೆಯ ಗೌರವವನ್ನು ಗಳಿಸುವರು.