ವಾಚಕರಿಂದ ಪ್ರಶ್ನೆಗಳು
◼ ಕ್ರೈಸ್ತ ವಿವಾಹಿತ ದಂಪತಿಗಳು ಗರ್ಭನಿರೋಧಕ ಗುಳಿಗೆಗಳನ್ನು ಉಪಯೋಗಿಸುವುದು ಬೈಬಲ್ ಸೂತ್ರಗಳಿಗೆ ಹೊಂದಿಕೆಯಾಗಿದೆಯೆ?
ಕ್ರೈಸ್ತ ದಂಪತಿಗಳಿಗೆ ಮಕ್ಕಳನ್ನು ಪಡೆಯುವ ಬದ್ಧತೆಯಿದೆಯೆಂದಾಗಲಿ ಹಾಗಿದ್ದರೆ ಅವರಿಗೆ ಎಷ್ಟು ಮಕ್ಕಳಿರಬೇಕೆಂದಾಗಲಿ ಶಾಸ್ತ್ರಗಳು ಸ್ಪಷ್ಟವಾಗಿ ಹೇಳುವುದಿಲ್ಲ. ಪ್ರತಿ ದಂಪತಿಗಳು ಖಾಸಗಿಯಾಗಿ ಮತ್ತು ಜವಾಬ್ದಾರಿಯಿಂದ ತಮ್ಮ ಕುಟುಂಬದ ಗಾತ್ರವನ್ನು ನಿಯಂತ್ರಿಸಲು ಪ್ರಯತ್ನಿಸಬೇಕೊ ಎಂಬುದನ್ನು ನಿರ್ಣಯಿಸಬೇಕು. ಹುಟ್ಟುತಡೆಗೆ ಅವರು ಸಮ್ಮತಿಸುವಲ್ಲಿ ಯಾವ ಗರ್ಭನಿರೋಧಕವನ್ನು ಆಯ್ದುಕೊಳ್ಳಬೇಕೆಂಬುದೂ ಅವರ ವ್ಯಕ್ತಿಪರ ನಿರ್ಣಯ. ಆದರೂ ಅವರ ಬೈಬಲ್ ತಿಳುವಳಿಕೆ ಮತ್ತು ಅವರ ಮನಸ್ಸಾಕ್ಷಿಗನುಸಾರವಾಗಿ, ಒಂದು ನಿರ್ದಿಷ್ಟ ವಿಧಾನವು ಜೀವದ ಪವಿತ್ರತೆಗೆ ಸನ್ಮಾನವನ್ನು ತೋರಿಸುತ್ತದೆಯೆ ಎಂದು ಅವರು ಚಿಂತಿಸಬೇಕು.
ಒಬ್ಬ ವ್ಯಕ್ತಿಯ ಜೀವ ಗರ್ಭಧಾರಣೆಯಲ್ಲಿ ಆರಂಭವಾಗುತ್ತದೆಂದು ಬೈಬಲು ಸೂಚಿಸುತ್ತದೆ. ಜೀವದಾತನು ಗರ್ಭದ ಜೀವವನ್ನು, ಮುಂದೆ ಗರ್ಭದಲ್ಲಿ ಬೆಳೆಯಲಿರುವ “ಪಿಂಡವಾಗಿರುವಾಗ” ಸಹ ನೋಡುತ್ತಾನೆ.(ಕೀರ್ತನೆ 139:16; ವಿಮೋಚನಕಾಂಡ 21:22,23a; ಯೆರೆಮೀಯ 1:5) ಆದುದರಿಂದ, ಗರ್ಭ ತಾಳಿರುವ ಜೀವವನ್ನು ಅಂತ್ಯಗೊಳಿಸಲು ಯಾವ ಪ್ರಯತ್ನವನ್ನೂ ಮಾಡಬಾರದು. ಹಾಗೆ ಮಾಡುವುದು ಗರ್ಭಪಾತವೇ ಸರಿ.
ಸಂತಾನ ನಿರೋಧಕ ಗುಳಿಗೆಗಳನ್ನು ಲೋಕದಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಅವು ಶಿಶುಜನನವನ್ನು ಹೇಗೆ ತಡೆಯುತ್ತವೆ? ಎರಡು ಪ್ರಧಾನ ವಿಧಗಳ ಗುಳಿಗೆಗಳಿವೆ—ಕಾಂಬಿನೇಶನ್ ಪಿಲ್ ಮತ್ತು ಪ್ರೋಜೆಸ್ಟಿನ್-ಓನ್ಲಿ ಪಿಲ್(ಮಿನಿಪಿಲ್). ಸಂಶೋಧನೆಯು ಜನನವನ್ನು ತಡೆಯಲು ಅವುಗಳಲ್ಲಿರುವ ಮುಖ್ಯ ರಚನೆಯನ್ನು ಸ್ಪಷ್ಟಗೊಳಿಸಿದೆ.
ಕಾಂಬಿನೇಶನ್ ಗುಳಿಗೆಯಲ್ಲಿ ಎಸ್ಟ್ರೋಜೆನ್ ಮತ್ತು ಪ್ರೋಜೆಸ್ಟಿನ್ ಎಂಬ ಚೋದಕಸ್ರಾವಗಳಿವೆ. ಅಮೆರಿಕದ ಫುಡ್ ಎಂಡ್ ಡ್ರಗ್ ಸಂಘಕ್ಕನುಸಾರ ಕಾಂಬಿನೇಶನ್ ಗುಳಿಗೆಯ “ಮೂಲ ರಚನಾವಿಧ” “ಅಂಡಾಣುವನ್ನು ನಿಷೇಧಿಸುವುದು” ಆಗಿದೆ. ಇದನ್ನು ಹೊಂದಿಕೆಯಾಗಿ ತಕ್ಕೊಳ್ಳುವಲ್ಲಿ ಈ ವಿಧದ ಗುಳಿಗೆ ಹೆಚ್ಚುಕಡಿಮೆ ಯಾವಾಗಲೂ ಅಂಡಾಶಯದಿಂದ ಹೊರಬರುವ ಅಂಡವನ್ನು ತಡೆಯುತ್ತದಂತೆ. ಅಂಡ ಯಾ ಅಂಡಾಣು ಬರದಿರುವಲ್ಲಿ ಅಂಡನಾಳಗಳಲ್ಲಿ ಗರ್ಭಧಾರಣೆಯಾಗ ಸಾಧ್ಯವಿಲ್ಲ. ಈ ವಿಧದ ಗುಳಿಗೆ “(ಯಾವುದು ನೆಡಲ್ಪಡುವಿಕೆಯ ಸಂಭವನೀಯತೆಯನ್ನು ಕಡಮೆ ಮಾಡುತ್ತದೊ) ಆ ಎಂಡೋಮೆಟ್ರಿಯಮ್[ಗರ್ಭದ ಪದರ]”ನಲ್ಲಿ ಬದಲಾವಣೆಗಳನ್ನು ಸಹ ಮಾಡಬಹುದಾದರೂ ಇದು ದ್ವಿತೀಯ ರಚನಾವಿಧವೆಂದು ಎಣಿಸಲ್ಪಡುತ್ತದೆ.
ಬದಿ ಪರಿಣಾಮಗಳನ್ನು ಕಡಮೆ ಮಾಡುವ ಕಾರಣದಿಂದ ಎಸ್ಟ್ರೋಜೆನ್ ಕಡಮೆ ಪ್ರಮಾಣದಲ್ಲಿರುವ ಕಾಂಬಿನೇಶನ್ ಗುಳಿಗೆಗಳನ್ನು ತಯಾರಿಸಲಾಗಿದೆ. ಇಂಥ ಕಮ್ಮಿ ಪ್ರಮಾಣದ ಕಾಂಬಿನೇಶನ್ ಗುಳಿಗೆಗಳು ಅಂಡಾಶಯದಲ್ಲಿ ಹೆಚ್ಚು ಚಟುವಟಿಕೆಯನ್ನು ಅನುಮತಿಸುತ್ತದೆಂಬುದು ವ್ಯಕ್ತ. ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್ ಸಂಘದ ಕಾಂಟ್ರಸೆಪ್ಟಿವ್ ಡೆವಲಪ್‌ಮೆಂಟ್ ಬ್ರಾಂಚಿನ ಮುಖ್ಯಾಧಿಕಾರಿ, ಡಾ. ಗೇಬ್ರಿಯೆಲ್ ಬಿಯಾಲಿ ಹೇಳುವುದು:“ವೈಜ್ಞಾನಿಕ ಸಾಬೀತಿನ ಮುಖ್ಯಾಂಶವು, ಕಡಮೆ ಪ್ರಮಾಣದ ಎಸ್ಟ್ರೋಜೆನ್ ಗುಳಿಗೆಯಲ್ಲಿ ಸಹ ಅಂಡಾಣು, 100 ಪ್ರತಿಶತವಲ್ಲ, ಹೆಚ್ಚು ಸಂಭವನೀಯವಾಗಿ, 95 ಪ್ರತಿಶತ ತಡೆಯಲ್ಪಡುತ್ತದೆ. ಆದರೆ ಕೇವಲ ಅಂಡಾಣು ಹೊರಬಂದಿರುವ ನಿಜತ್ವವು ಗರ್ಭಾಧಾನ ಸಂಭವಿಸಿದೆ ಎಂದು ಹೇಳುವುದಕ್ಕೆ ಸಮಾನವಾಗಿರುವುದಿಲ್ಲ.”
ಒಬ್ಬ ಮಹಿಳೆ ರಚಿಸಲ್ಪಟ್ಟ ತಖ್ತೆಗನುಸಾರ ಈ ಕಾಂಬಿನೇಶನ್ ಗುಳಿಗೆ ತ್ಕಕೊಳ್ಳಲು ತಪ್ಪುವಲ್ಲಿ ದ್ವಿತೀಯ ರಚನಾವಿಧವು ಜನನ ತಡೆಯುವುದರಲ್ಲಿ ಪಾತ್ರ ವಹಿಸುವ ಹೆಚ್ಚಿನ ಸಾಧ್ಯತೆ ಇದೆ. ಎರಡು ಕಡಮೆ ಪ್ರಮಾಣದ ಗುಳಿಗೆ ತಿನ್ನಲು ತಪ್ಪಿದ ಸ್ತ್ರೀಯರ ಒಂದು ಅಧ್ಯಯನವು 36 ಪ್ರತಿಶತ ಸ್ತ್ರೀಯರಿಗೆ ಅಂಡಾಣು “ಪಲಾಯನ” ಸಂಭವಿಸಿತೆಂದು ತೋರಿಸಿತು. ಇಂಥ ಸಂದರ್ಭಗಳಲ್ಲಿ, “ಎಂಡೋಮೆಟ್ರಿಯಮ್ ಮತ್ತು ಗರ್ಭಕೋಶದ ಲೋಳೆಪದಾರ್ಥದ ಮೇಲೆ ಈ ಗುಳಿಗೆಗಳ ಪರಿಣಾಮವು. . .ಗರ್ಭನಿರೋಧಕ ರಕ್ಷೆಯನ್ನು ಕೊಡುತ್ತಾ ಹೋಗಬಹುದು” ಎಂದು ಕಾಂಟ್ರಸೆಪ್ಶನ್ ಪತ್ರಿಕೆ ವರದಿ ಮಾಡುತ್ತದೆ.
ಇನ್ನೊಂದು ವಿಧದ ಗುಳಿಗೆಯಾದ ಪ್ರೋಜೆಸ್ಟಿನ್-ಓನ್ಲಿ(ಮಿನಿಪಿಲ್) ಗುಳಿಗೆಯ ವಿಷಯವೇನು? ಡ್ರಗ್ ಇವ್ಯಾಲ್ಯುಏಶನ್ಸ್(1986) ವರದಿ ಮಾಡುವುದು:“ಪ್ರೋಜೆಸ್ಟಿನ್-ಓನ್ಲಿ ಮಿನಿಪಿಲ್ಸ್‌ಗಳಲ್ಲಿ ಅಂಡಾಣು ಸಂಯಮ ಪ್ರವೃತ್ತಿ ಗರ್ಭನಿರೋಧದ ಪ್ರಧಾನ ಲಕ್ಷಣವಲ್ಲ. ಈ ಕಾರಕಗಳು ಯಾವುದು ವೀರ್ಯಕ್ಕೆ ಸಂಬಂಧಸೂಚಕವಾಗಿ ಅಭೇಧ್ಯವೊ ಅಂಥ ದಪ್ಪದ ಗರ್ಭಕೋಶದ ಲೋಳೆಪದಾರ್ಥವನ್ನು ರೂಪಿಸುತ್ತವೆ; ಅವು ನಾಳದಲ್ಲಿ ಪ್ರಯಾಣದ ಸಮಯವನ್ನು ಹೆಚ್ಚಿಸಬಹುದು ಮತ್ತು [ಯಾವುದು ಫಲವತ್ತಾಗಿರುವ ಅಂಡಾಣುವಿನ ಬೆಳವಣಿಗೆಯನ್ನು ತಡೆಯುತ್ತದೊ ಅಂಥ] ಎಂಡೋಮೆಟ್ರಿಯಲ್ ಜಟಿಲತೆಯನ್ನೂ ಉಂಟುಮಾಡಬಹುದು.”
ಪ್ರೋಜೆಸ್ಟಿನ್-ಓನ್ಲಿ ಗುಳಿಗೆಯ ಉಪಯೋಗದಿಂದ, “ಅದನ್ನು ಬಳಸುವ 40%ಕ್ಕೂ ಹೆಚ್ಚು ಮಂದಿಯಲ್ಲಿ ಕ್ರಮಬದ್ಧ ಅಂಡಾಣು ಬಿಡುಗಡೆ ಉಂಟಾಗುತ್ತದೆ” ಎಂಬುದು ಕೆಲವು ಸಂಶೋಧಕರ ವಾದ. ಹೀಗೆ, ಈ ಗುಳಿಗೆ ಪದೇ ಪದೇ ಅಂಡಾಣು ಬಿಡುಗಡೆಯನ್ನು ಅನುಮತಿಸುತ್ತದೆ. ಗರ್ಭಕೋಶದ ಕತ್ತಿನಲ್ಲಿರುವ ದಪ್ಪಗಿನ ಲೋಳೆಪದಾರ್ಥ ವೀರ್ಯದ ದಾಟುವಿಕೆಯನ್ನು ತಡೆದು ಹೀಗೆ, ಗರ್ಭಧಾರಣೆಯನ್ನು ಅನುಮತಿಸಲಿಕ್ಕಿಲ್ಲ. ಇದು ಸಫಲವಾಗದಿರುವಲ್ಲಿ, ಗುಳಿಗೆಯು ಗರ್ಭಕೋಶದಲ್ಲಿ ಉಂಟುಮಾಡುವ ಪ್ರತಿಕೂಲ ಪರಿಸರವು ಗರ್ಭಿತವಾದ ಅಂಡಾಣು ಅಲ್ಲಿ ಸ್ಥಿರವಾಗಿ ನೆಡಲ್ಪಟ್ಟು ಶಿಶುವಾಗಿ ಬೆಳೆಯದಂತೆ ತಡೆಯಬಹುದು.
ಹೀಗೆ, ಸಂತಾನನಿರೋಧಕ್ಕಾಗಿ ಕ್ರಮವಾಗಿ ಉಪಯೋಗಿಸಲ್ಪಡುವಾಗ ಈ ಎರಡು ವಿಧದ ಗುಳಿಗೆಗಳೂ ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಧಾರಣೆಯನ್ನು ತಡೆಯುವಂತೆ ಕಂಡುಬಂದು ಗರ್ಭಪಾತವನ್ನುಂಟು ಮಾಡುವುದಿಲ್ಲ. ಆದರೂ, ಪ್ರೋಜೆಸ್ಟಿನ್-ಓನ್ಲಿ(ಮಿನಿಪಿಲ್) ಗುಳಿಗೆ ಪದೇ ಪದೇ ಅಂಡಾಣು ಬಿಡುಗಡೆಯನ್ನು ಅನುಮತಿಸುವುದರಿಂದ, ಅದು ಕೆಲವು ಸಲ, ಬಸಿರಾಗಿ ಆರಂಭವಾದ ಜೀವ ಗರ್ಭಾಶಯದಲ್ಲಿ ನೆಡಲ್ಪಡುವುದನ್ನು ತಡೆದು, ಹೀಗೆ ಜನನವನ್ನು ತಡೆಯುವ ಹೆಚ್ಚಿನ ಸಾಧ್ಯತೆ ಇದೆ. ವೈಜ್ಞಾನಿಕ ಅಧ್ಯಯನಗಳು, ಸಾಮಾನ್ಯವಾಗಿ(ಸಂತಾನನಿರೋಧಕ ಗುಳಿಗೆಗಳ ಪರಿಣಾಮವಿಲ್ಲದ ಗರ್ಭಗಳಲ್ಲಿ) “ಗರ್ಭಿತವಾದ ಅಂಡಾಣುಗಳಲ್ಲಿ ಅರ್ವತ್ತು ಸೇಕಡ. . .ಮುಟ್ಟು ಪ್ರಥಮವಾಗಿ ನಿಲ್ಲುವ ಸಮಯಕ್ಕೆ ಮೊದಲೇ ನಷ್ಟಗೊಳ್ಳುತ್ತವೆ” ಎಂದು ಸೂಚಿಸುತ್ತವೆ. ಮತ್ತು ಇದು, ಗರ್ಭಿತವಾದ ಅಂಡಾಣು ನೆಡಲ್ಪಡುವುದನ್ನು ತಡೆಯಲು ಹೆಚ್ಚು ಸಂಭವನೀಯತೆ ಇರುವ ಸಂತಾನನಿರೋಧ ವಿಧಾನವನ್ನು ಆಯ್ದುಕೊಳ್ಳುವುದಕ್ಕೆ ತೀರಾ ಭಿನ್ನವಾಗಿದೆ.
ಹೀಗೆ, ದಂಪತಿಗಳು ವೈದ್ಯರೊಂದಿಗೆ ಸಂತಾನನಿರೋಧ ಗುಳಿಗೆಯ ಉಪಯೋಗವನ್ನು ಚರ್ಚಿಸುವಾಗ ಪರಿಗಣಿಸಲು ನಿಶ್ಚಿತವಾದ ನೈತಿಕ ವಿಷಯಗಳೂ ಇವೆ. ಕ್ರೈಸ್ತರು ಖಾಸಗಿಯಾದ ಮತ್ತು ವ್ಯಕ್ತಿಪರವಾದ ಪ್ರಶ್ನೆಗಳನ್ನು ಸಹ ನಮ್ಮ ದೇವರ ಮತ್ತು ಜೀವದಾತನ ಮುಂದೆ ನಾವು “ಒಳ್ಳೇ ಮನಸ್ಸಾಕ್ಷಿ”ಯಿಂದ ಇರುವಂತೆ ತೀರ್ಮಾನಿಸಬೇಕು.—ಅಪೊಸ್ತಲರ ಕೃತ್ಯ 23:1; ಗಲಾತ್ಯ 6:5. (w89 6/15)
[ಅಧ್ಯಯನ ಪ್ರಶ್ನೆಗಳು]
a ಆಗಸ್ಟ್ 1, 1977ರ ದ ವಾಚ್‌ಟವರ್ ಪತ್ರಿಕೆಯ 478-80 ಪುಟಗಳನ್ನು ನೋಡಿ.