ನಾವೆಂದಾದರೂ ಅವರನ್ನು ಪುನ: ನೋಡುವೆವೋ?
“ನೀನು ನಮ್ಮನ್ನು ಶಾಶ್ವತವಾಗಿ ಬಿಟ್ಟುಹೋಗಿದ್ದೀ. ಅದು ಎಷ್ಟೊಂದು ಅನಿರೀಕ್ಷಿತವಾಗಿತ್ತು. ಆದರೆ ನಿನ್ನ ಮರಣದಿಂದಾದ ಗಾಢ ಗಾಯದ ಮಧ್ಯೆಯೂ ನೀನು ಯಾವಾಗಲೂ ನಮ್ಮ ಹೃದಯದಲ್ಲಿ ನಮ್ಮೊಂದಿರುವಿ. ನಿನ್ನೊಂದಿಗೆ ನಾವು ಆನಂದಿಸಿದ ಆ ಸಂತೋಷದ ವರ್ಷಗಳನ್ನು ಹಾಗೂ ನಿನ್ನನ್ನು ಒಂದು ದಿವಸ ಕಾಣುವ ನಮ್ಮ ನಿರೀಕ್ಷೆಯನ್ನು ನಾವೆಂದೂ ಮರೆಯುವದಿಲ್ಲ.”
ಲಕ್ಷಮ್ಬರ್ಗ್ನ ಗ್ರಾಂಡ್ ಡಚ್ಚಿಯಲ್ಲಿ ತಮಗೆ ಪ್ರಿಯರಾದವರ ಮರಣಾನಂತರ ವಾರ್ತಾಪತ್ರಗಳ ಸ್ಮಾರಕ ಸೂಚಕಗಳಲ್ಲಿ ಮುದ್ರಿತವಾಗುವ ಇಂಥ ಭಾವನೆಗಳನ್ನು ಬದುಕಿ ಉಳಿದಿರುವ ಅವರ ಕುಟುಂಬಗಳೂ ಮಿತ್ರರೂ ಪದೇಪದೇ ವ್ಯಕ್ತ ಪಡಿಸುತ್ತಾರೆ. ಲೋಕವ್ಯಾಪಕವಾಗಿ ತದ್ರೀತಿಯ ಯೋಚನೆಗಳು ಇತರರ ಮನಸ್ಸುಗಳಲ್ಲಿಯೂ ಇರುತ್ತವೆ. ನೆನಪಿನ ಬೆಚ್ಚಗೆನ ಯೋಚನೆಗಳೊಂದಿಗೆ ಅವರ ನಿಧನದಿಂದುಂಟಾದ ಮೈಜುಮ್ಮೆನ್ನಿಸುವ ನಿರಾಶೆ—ಅನಿಶ್ಚಿತತೆಭರಿತ ನಿರೀಕ್ಷೆಯದು. ಪ್ರಿಯನೊಬ್ಬನ ಮರಣಾನಂತರ ನಿಮಗೂ ಅಂಥಾ ಪ್ರತಿಕ್ರಿಯೆಗಳಾಗಿರಬಹುದು ಅಥವಾ ಅವುಗಳನ್ನು ಮಿತ್ರನೊಬ್ಬನಿಂದ ನೀವು ಕೇಳಿರಬಹುದು.
ಹೆಚ್ಚಿನ ಜನರಿಗೆ ತಮ್ಮ ಮೃತರಾದ ಪ್ರಿಯ ಜನರನ್ನು ನೋಡುವ ನಿರೀಕ್ಷೆಯು ಗಲಿಬಿಲಿಯದ್ದೂ ಅಸ್ವಷ್ಟವೂ ಆಗಿರುತ್ತದೆ. ಕಾರಣಗಳು ಸರಳವೇ. ವಿಷಯದ ಕುರಿತು ಮಾಹಿತಿ ಪಡೆಯಲು ಈ ದಿನಗಳಲ್ಲಿ ಸಮಯ ವ್ಯಯಿಸುವವರು ನಿಜವಾಗಿಯೂ ಕೊಂಚವೇ ಎನ್ನಬೇಕು. ಮತ್ತು ಒಬ್ಬನು ಪ್ರಯತ್ನಿಸಿದ್ದಾಗ್ಯೂ, ಆ ಪ್ರಶ್ನೆಯ ಮೇಲೆ ಹೆಚ್ಚಿನ ಧರ್ಮಗಳು ನೀಡುವ ಮಾಹಿತಿಯು ತೀರಾ ಅಸ್ವಷ್ಟ ಇಲ್ಲವೇ ನಂಬಲು ತೀರಾ ವಿಲಕ್ಷಣವಾದದ್ದು.
ನಿಮಗೆ ತಿಳಿದಿರುವಂತೆ, ಹೆಚ್ಚಿನವರಿಗೆ ಮೃತರಿಗಿರುವ ಒಂದೇ “ಭಾವೀ ಜೀವನ” ಅವರ ಕುಟುಂಬ ವಂಶಗಳ ಮುಂದುವರಿಕೆಯೇ. ಜನರು ‘ತಮ್ಮ ಮಕ್ಕಳಲ್ಲಿ ಜೀವಿತ ಮುಂದುವರಿಸುತ್ತಾರೆ’ ಎಂಬ ವೀಕ್ಷಣೆಯನ್ನು ನೀವು ಕೇಳಿರಬಹುದು. ಆದರೆ ಅಂತಹ ಜೀವಿತವು ಸತ್ತವರಿಗೆ ಯಾವುದಾದರೂ ಪ್ರಜ್ನೆಯುಕ್ತ ಲಾಭವನ್ನು ತರುತ್ತದೋ ಅಥವಾ ಬದುಕಿರುವವರಿಗೆ ಅವರನ್ನು ಪುನೊ:ಮ್ಮೆ ಕಾಣುವ ನಿರೀಕ್ಷೆಯನ್ನು ಕೊಡುತ್ತದೋ? ಇಲ್ಲವೇ ಇಲ್ಲ! ಹಾಗಾದರೆ ಇಂಥ ನೋಟದಲ್ಲಿ ಇರುವ ಆದರಣೆಯಾದರೋ ಕೊಂಚವೇ.
ಈಗಾಗಲೇ ಸತ್ತಿರುವ ಮತ್ತು ಇನ್ನೂ ಜೀವಿಸುತ್ತಿರುವ ನಮ್ಮ ಸ್ವಂತ ಪ್ರಿಯಜನರ ಹಿತಚಿಂತನೆಯ ಕಾರಣ, ಈ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕಾಗಿದೆ: ನಮ್ಮ ಪ್ರಿಯನೊಬ್ಬನು ಸಾಯುವುದಾದರೆ, ನಾವು ಅವನನ್ನು ಪುನ: ಎಂದಾದರೂ ನೋಡಲಿರುವೆವೋ? ಉತ್ತರವು ಹೌದೆಂದಾದರೆ, ಅದು ಯಾವಾಗ ಮತ್ತು ಎಲ್ಲಿ? ಸ್ವರ್ಗದಲ್ಲೋ? ಅಥವಾ ಇಲ್ಲಿ ಇದೇ ಭೂಮಿಯಲ್ಲೋ? ನಿಜವಾಗಿ ಸತ್ತ ನಮ್ಮ ಪ್ರಿಯರಿಗೂ ಮತ್ತು ನಮಗೂ ಭವಿಷ್ಯದಲ್ಲಿ ಯಾವ ನಿರೀಕ್ಷೆಯಿದೆ?
ನೇರವಾಗಿ ಹೇಳುವುದಾದರೆ, ಈ ಪ್ರಶ್ನೆಗಳ ಕುರಿತು ಸುಸಮಾಚಾರವಿದೆ. ಇದು ಖಂಡಿತವಾದ ಹಾಗೂ ಹರ್ಷಗೊಳಿಸುವ ನಿರೀಕ್ಷೆಯಾದರ್ದಿಂದ ಹಿತಕರವಾದದ್ದು. ಇದೊಂದು ಹೊಸವಾರ್ತೆ ಯಾಕಂದರೆ ಹೆಚ್ಚಿನ ಜನರು ಕೇಳಿರುವ, ಧಾರ್ಮಿಕ ಮೂಲಗಳಿಂದಲೂ ಪಡೆದಿರುವ, ಸಮಾಚಾರಕ್ಕಿಂತ ಇದು ವಿಭಿನ್ನವಾಗಿದೆ.
ನಮ್ಮ ಸಾಮಾನ್ಯ ಶಕದ ಮೊದಲನೆ ಶತಮಾನದಲ್ಲಿ ಕ್ರೈಸ್ತ ಮಿಶನೆರಿ ಪೌಲನು ಗ್ರೀಸಿನ ಏಥೆನ್ಸ್ನಲ್ಲಿದ್ದಾಗ, ಅವನು ಮೃತರಿಗಿರುವ ಶಾಸ್ತ್ರೀಯ ನಿರೀಕ್ಷೆಯ ಕುರಿತು ಮಾತಾಡಿದನು. ಆಲಿಸಿದವರಲ್ಲಿ ಕೆಲವರು ವಿಚಾರಿಸುವ ಮನೋಭಾವದವರೂ, ಇನ್ನಿತರರು ತಿರಸ್ಕಾರ ವ್ರವೃತ್ತಿಯವರೂ ಆಗಿದ್ದರು. ಕೆಲವು ತತ್ವಜ್ಞಾನಿಗಳು ಅವನೊಂದಿಗೆ ಚರ್ಚಾಸ್ಪದ ಸಂಭಾಷಣೆಯನ್ನು ಮುಂದರಿಸಲು ಬಯಸಿದರು, ಮತ್ತು ಅವರಂದದ್ದು: “ಈ ಮಾತಾಳಿ ಏನು ಹೇಳಬೇಕೆಂದಿದ್ದಾನೆ? ಇತರರು ಅವನೊಬ್ಬ ಅನ್ಯ ದೇಶಗಳ ದೆವ್ವಗಳನ್ನು ಪ್ರಸಿದ್ಧ ಪಡಿಸುವವನು ಎಂದು ಹೇಳಿಕೊಂಡರು. ಇದು ಯಾಕೆಂದರೆ ಅವನು ಯೇಸುವಿನ ಶುಭವಾರ್ತೆಯನ್ನು ಮತ್ತು ಪುನರುತ್ಥಾನದ ಕುರಿತಾಗಿ ಸಾರುತಿದ್ದದರಿಂದಲೇ.” (ಅಪೋ. 17:18) ಹೌದು, ಪೌಲನು ಹೇಳಲಿದ್ದ ಶುಭವಾರ್ತೆಯಲ್ಲಿ ಪುನರುತ್ಥಾನವು ಒಳಗೊಂಡಿತ್ತು.
ಭವಿಷ್ಯದ ಪುನುತ್ಥಾನದ—ಸತ್ತವರನ್ನು ಪುನ: ಜೀವಂತ ನೋಡುವ ಕುರಿತಾದ ಭಾಷಣವನ್ನು ನೀವು ಹೇಗೆ ವೀಕ್ಷಿಸುವಿರಿ? ಇದೊಂದು ನಿಷ್ಪಯ್ರೋಜಕ ಮಾತಾಳಿತನವೆಂದು ನಿಮಗೆ ತೋರುತ್ತದೋ? ಇಲ್ಲವೇ, ನಿಮ್ಮ ಧಾರ್ಮಿಕ ಶಿಕ್ಷಣದ ಹಾಗೂ ವೈಯಕ್ತಿಕ ನೋಟದ ಕಾರಣ, ಮೃತರ ನಿರೀಕ್ಷೆಯ ಕುರಿತಾದ ಶಾಸ್ತ್ರೀಯ ಸಂದೇಶವು ಒಬ್ಬ “ಅನ್ಯ ದೇವರಿಂದ ಬಂದದ್ದೋ’ ಎಂಬಂತೆ ಹೊಸದೂ ಅಪರಿಚಿತವೂ ಆಗಿ ಕಾಣುತ್ತದೋ?
ಪೌಲನಿಗೆ ಅಥೇನಿಯರು ಹೇಳಿದ್ದು: “ಅಪೂರ್ವವಾದ ಸಂಗತಿಗಳನ್ನು ನಮಗೆ ಶ್ರುತಪಡಿಸುತ್ತಿಯಲ್ಲಾ; ಆದಕಾರಣ ಅವೇನಿದ್ದಾವೆಂದು ತಿಳಿಯಲು ನಮಗೆ ಅಪೇಕ್ಷೆ ಇದೆ.” (ಅಪೋ. 17:20) ನಮ್ಮ ಸತ್ತವರಿಗಾಗಿ ಮತ್ತು ಜೀವಿಸುತ್ತಿರುವ ನಮಗೆ ಬೈಬಲಿನ ನಿರೀಕ್ಷೆ ಏನೆಂದು ತಿಳಿಯಲು ನೀವು ಆಶಿಸುತ್ತೀರೋ? ಹಾಗಿದ್ದರೆ, ಮುಂದಿನ ಲೇಖನ ನಿಮಗೆ ಆಸಕ್ತಿದಾಯಕವಾಗಿರುವುದು. (w89 6/15)