ವಾಗ್ದಾನ ದೇಶದಿಂದ ದೃಶ್ಯಗಳು
ಯೆರೂಸಲೇಮ್—ಬೈಬಲಿನ ಘಟನೆಗಳ ಕೇಂದ್ರ
ಅಧಿಕಾಂಶ ರಾಷ್ಟ್ರಗಳಿಗೆ ಒಂದು ರಾಜಧಾನಿ, ಸರಕಾರ ನೆಲೆಸಿರುವ ಒಂದು ಪ್ರಮುಖ ನಗರವಿರುವುದಾದರೂ, ಮಾನವಕುಲದ ರಾಜಧಾನಿಯೋಪಾದಿ ಯೆರೂಸಲೇಮನ್ನು ಬೈಬಲ್ ವಿದ್ಯಾರ್ಥಿಗಳು ಯೋಚಿಸಬಹುದು. ಇದು ಹಾಗೆ ಯಾಕೆಂದರೆ, ಅಲ್ಲಿ ಸಂಭವಿಸಿದ ವಿಸ್ಮಯಕಾರೀ ಸಂಗತಿಗಳು ನಮಗೆಲ್ಲರಿಗೂ ಪ್ರಾಮುಖ್ಯತೆಯದ್ದಾಗಿದೆ.
ಯೆರೂಸಲೇಮಿನ ದಕ್ಷಿಣಕ್ಕಿರುವ ಉತ್ತರದ ನೆಲದಲ್ಲಿ ನೀವು ನಿಂತಿರುವುದಾದರೆ, ನೀವು ಮೇಲಿನ ದೃಶ್ಯವನ್ನು ಕಾಣಬಲ್ಲಿರಿ. aಎರಡು ಕಣಿವೆಗಳು ಕಡುಹಸಿರಿನ ಮರಗಳಿರುವಲ್ಲಿ ಸಂಧಿಸುತ್ತವೆ. ಕಿದ್ರೋನ್ ಕಣಿವೆಯು ಬಲ ಬದಿಯಿಂದ ಕೆಳಗಡೆ ಬರುತ್ತದೆ. ಪಶ್ಚಿಮ ಯಾ ಎಡಪಕ್ಕದಲ್ಲಿ ಹಿನ್ನೋಮ್ ಕಣಿವೆಯ ಒಂದು ಭಾಗವಾಗಿದ್ದು, ಗೆಹೆನ್ನಾವೆಂಬ ಬೈಬಲ್ ಹೆಸರಿಗೆ ಇದು ಕಾರಣವಾಗಿತ್ತು. (ಮತ್ತಾಯ 10:28; 23:33) ಇದರನಡುವಿನಲ್ಲಿ (ಈಗ ಅಸ್ತಿತ್ವದಲ್ಲಿರುವ ಗೋಡೆಗಳ ಮುಂದುಗಡೆ ಸೂರ್ಯ ಪ್ರಕಾಶದಿಂದ ಬೆಳಗಲ್ಪಟ್ಟಿದೆ) ಪುರಾತನ ದಾವೀದ ನಗರವು ಕಟ್ಟಲ್ಪಟ್ಟಿತ್ತು. ಗೋಡೆಗಳ ಒಳಗಡೆ ಒಂದು ಐತಿಹಾಸಿಕ ಸ್ಥಳದಲ್ಲಿ ಎರಡು ವಿಶಿಷ್ಟಕರ ಮುಸ್ಲಿಮ್ ಕಟ್ಟಡಗಳಿವೆ. ಗೋಡೆಗೆ ಸಮೀಪದಲ್ಲಿ ಮಸೀದಿಯೊಂದರ ಬೆಳ್ಳಿಯ ನೀಲಿಯ ಗುಂಬಜ ಮತ್ತು ಹಿಂಬದಿಯಲ್ಲಿ ಡೋಮ್ ಆಫ್ ದ ರೊಕ್ನ ಬಂಗಾರದ ಅರ್ಧಗೋಲಾಕಾರದ ಮೆಲ್ಛಾವಣಿ ಇದೆ.
ಆದರೆ ಯೆರೂಸಲೇಮ್, ಮತ್ತು ಈಗ ಸಮತಟ್ಟಾಗಿರುವ ನೆಲದಲ್ಲಿ ಈಗ ನಿಂತಿರುವ ಎರಡು ಗುಮ್ಮಟಾಕಾರದ ಕಟ್ಟಡಗಳು ವಿಶೇಷವಾಗಿ ನಿಮಗೆ ಯಾಕೆ ವೈಶಿಷ್ಟತೆಯಾಗಿದೆ? ಒಳ್ಳೇದು, ಮರದಲ್ಲಿ ಸಿಕ್ಕಿಕೊಂಡಿರುವ ಟಗರಿನ ಚಿತ್ರವು ಯಾವ ಬೈಬಲ್ ದಾಖಲೆಯನ್ನು ನಿಮ್ಮ ಮನಸ್ಸಿಗೆ ತರುತ್ತದೆ? ಪ್ರಾಯಶಃ ಅಬ್ರಹಾಮನದ್ದಾಗಿರಬಹುದು. ಹೌದು, ಮೋರಿಯ ಬೆಟ್ಟಕ್ಕೆ ತನ್ನ ಮಗನಾದ ಇಸಾಕನೊಂದಿಗೆ ಪ್ರಯಾಣಿಸಿದ್ದನು. ಪ್ರಾಯಶಃ ಇದು ನೀವು ನೋಡುವ ಗುಮ್ಮಟವನ್ನು ಹತ್ತಿರದ ಕಲ್ಲು ಬಂಡೆಗಳ ಅದರ ಸಮೀಪದ ಸ್ಥಳವಾಗಿದ್ದಿರಬೇಕು. ನಂಬಿಕೆಯಿಂದ ತನ್ನ ಪ್ರೀತಿಯ ಪುತ್ರನನ್ನು ಬಲಿಕೊಡಲು ಅಬ್ರಹಾಮನು ಇಚ್ಛೆಯುಳ್ಳವನಾಗಿದ್ದನು. ಆದರೆ ದೇವದೂತನೊಬ್ಬನು ಅವನ ಕೈಯನ್ನು ತಡೆದನು. ಅನಂತರ ಅಬ್ರಹಾಮನು ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿಕೊಂಡಿರುವುದನ್ನು” ಕಂಡನು ಮತ್ತು “ತನ್ನ ಮಗನಿಗೆ ಬದಲಾಗಿ” ಯಜ್ಞವರ್ಪಿಸಿದನು. ಆದುದರಿಂದ ಯೆರೂಸಲೇಮನ್ನು ವೀಕ್ಷಿಸುವಾಗ ಈ ನಾಟಕೀಯ ಘಟನೆ ನೆನಪಿಗೆ ಬರಬಹುದು.—ಆದಿಕಾಂಡ 22:1-13.
ತದನಂದರ ಸಮಯದಲ್ಲಿ ಇನ್ನಿತರ ಯಜ್ಞಗಳು, ಈಗಿರುವ ಗುಮ್ಮಟಾಕಾರದ ಕಟ್ಟಡಗಳ ಸಮತಟ್ಟಾದ ಸ್ಥಳದಲ್ಲಿ ಯೆಹೋವನಿಗೆ ಭವ್ಯವಾದ ದೇವಾಲಯವನ್ನು ಸೊಲೋಮೋನನು ಕಟ್ಟಿದಾಗ, ಅರ್ಪಿಸಲ್ಟಟ್ಟವು. (2 ಪೂರ್ವಕಾಲ 3:1) ವಾರ್ಷಿಕ ಹಬ್ಬಗಳಿಗಾಗಿ ತಮ್ಮ ಪ್ರಾಣಿಗಳ ಯಜ್ಞಗಳಿಗಾಗಿ ಆ ಪ್ರದೇಶದ ಎಲ್ಲಿಡೆಗಳಿಂದ ಇಸ್ರಾಯೇಲ್ಯರು ಬರುವದನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸಿರಿ. ಇದರಲ್ಲಿ ಅತೀ ಮಹತ್ವಪೂರ್ಣವಾದದ್ದು ದೋಷಪರಿಹಾರಕ ದಿನ. ಆ ದಿನ ಆರಿಸಲ್ಪಟ್ಟ ಒಂದು ಹೋತವನ್ನು “ಅಜಾಜೇಲನಿಗೋಸ್ಕರ ಅರಣ್ಯಕ್ಕೆ ಒಯ್ದು ಬಿಟ್ಟು ಬಿಡಬೇಕು.” ಇದು ಬಹುಶಃ ಕಿದ್ರೋನ್ ಕಣಿವೆಯ ಕೆಳಗಡೆ ಮತ್ತು ಅನಂತರ ಆಗ್ನೇಯಕ್ಕಿರುವ ಯೂದಾಯದ ಅರಣ್ಯ ಪ್ರದೇಶವಾಗಿರಬಹುದು. ಇನ್ನೊಂದು ಹೋತ ಮತ್ತು ಹೋರಿಯನ್ನು ವಧಿಸಿ, ಅವುಗಳ ರಕ್ತವನ್ನು ಯಾಜಕರುಗಳಿಗಾಗಿಯೂ, ಜನರಿಗಾಗಿಯೂ ದೋಷಪರಿಹಾರಕ್ಕಾಗಿ ಯಜ್ಞದಲ್ಲಿ ಬಳಸಲ್ಪಡುತ್ತಿತ್ತು. ಸ್ವಲ್ಪ ರಕ್ತವನ್ನು ದೇವಾಲಯ ಮಹಾ ಪವಿತ್ರಸ್ಥಾನದಲ್ಲಿ, ಪರದೆಯನ್ನು ದಾಟಿ ಕೊಂಡೊಯ್ಯಲಾಗುತ್ತಿತ್ತು. ಆದುದರಿಂದ ಅದನ್ನು ಮನಸ್ಸಿನಲ್ಲಿಟ್ಟು ನಗರದ ಚಿತ್ರವನ್ನು ನೀವು ದೃಷ್ಟಿಸಬಹುದು.—ಯಾಜಕಕಾಂಡ 16:1-14.
ಯೆರೂಸಲೋಮಿನ ಇವೆಲ್ಲ ಯಜ್ಞಗಳು ಯೇಸುಕ್ರಿಸ್ತನ ಪರಿಪೂರ್ಣ ಯಜ್ಞವನ್ನು ಮುನ್ಸೂಚಿಸುತ್ತಿತ್ತು. ಭೂಮಿಯ ಮೇಲಿನ ಅವನ ಕೊನೆಯ ರಾತ್ರಿಯಲ್ಲಿ, ಅದು ಪೂರ್ಣ ಹುಣ್ಣಿಮೆಯ ದಿನವಾಗಿತ್ತು. ಯೇಸುವು ಕೊನೆಯ ನ್ಯಾಯಬದ್ಧ ಪಸ್ಕ ಹಬ್ಬವನ್ನು ಆಚರಿಸಲು ಯೇಸುವು ತನ್ನ ಅಪೊಸ್ತಲರನ್ನು ಒಟ್ಟಗೂಡಿಸಿದ್ದನು. ದೇವಾಲಯದ ಪ್ರದೇಶದ ಎಡಪಕ್ಕ(ಪಶ್ಚಿಮ)ದಲ್ಲಿ ನಗರದ ಎತ್ತರ ಭಾಗದ ಮನೇ ಮಾಳಿಗೆಯ ಕೋಣೆಯೊಂದು ಇದಾಗಿತ್ತೆಂದು ಎಣಿಸಲಾಗಿದೆ. ಕರ್ತನ ಸಂಜಾ ಭೋಜನವನ್ನು ಯೋಸುವು ಸ್ಥಾಪಿಸಿದ ನಂತರ, ಅವನು ಅಪೊಸ್ತಲರನ್ನು ಒಲಿವ್ ಬೆಟ್ಟಕ್ಕೆ ಕೊಂಡೊಯ್ಯುತ್ತಾನೆ. ಇದು ಕಿದ್ರೋನ್ ಕಣಿವೆಯ ಆಚೇ ಪಕ್ಕದಲ್ಲಿದೆ, ದೇವಾಲಯದ ಪೂರ್ವ(ಬಲ)ದಲ್ಲಿದೆ.—ಲೂಕ 22:14-19.
ಇದನ್ನು ದೃಷ್ಟಿಸಲು ಸಹಾಯವಾಗುವಂತೆ, ಕೆಳಗಡೆಯ ಚಿತ್ರವನ್ನು ನೋಡಿರಿ. ಇದು ಯೆರೂಸಲೇಮಿನಿಂದ ಪೂರ್ವಕ್ಕೆ ಹೋಗುವಂತೆ ತೆಗೆಯಲಾಗಿದೆ. ಪ್ರಾಯಶಃ ಯೇಸುವು ಕರ್ತನ ಸಂಜಾ ಭೋಜನವನ್ನು ನಡಿಸಿದ ಪ್ರದೇಶದಿಂದ ಆಗಿದೆ. ಈ ದೃಷ್ಟಿಕೋನದಿಂದ ನೀವು ಕೆಳಗಡೆ ಎಡಪಕ್ಕದಲ್ಲಿ ದೇವಾಲಯದ ಬೆಟ್ಟದ ಪ್ರದೇಶದಲ್ಲಿನ ಮಸೀದಿಯ ಗುಮ್ಮಟವನ್ನು ಚಂದ್ರಪ್ರಕಾಶದಿಂದ ನೀಲಿ ಬಣ್ಣದ್ದು ಕಾಣುವಿರಿ. ದೂರದಲ್ಲಿ ಕಿದ್ರೋನ್ ಕಣಿವೆಯ ಪೂರ್ವದಲ್ಲಿ (ನೋಟದ ಗೆರೆಯ ಕೆಳಗಡೆ) ಮತ್ತು ಅನಂತರ ಗೆತ್ಸೇಮನೆಯ ತೋಟದ ಮರಗಳು ಕಾಣುತ್ತವೆ. ಬಲಪಕ್ಕದ ಎತ್ತರದ ಒಲಿವ್ ಬೆಟ್ಟವಿದೆ.
ಏಪ್ರಿಲ್ 10, 1990 ರಲ್ಲಿ ಪೂರ್ಣ ಹುಣ್ಣಿಮೆ ಚಂದ್ರನಾಗಿರುತ್ತಾನೆ, ಆಗ ಭೂಗೋಳದ ಎಲ್ಲಿಡೆಗಳಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಗಳು (ಸೂರ್ಯಾಸ್ತಮಾನದ ನಂತರ) ಕರ್ತನ ಸಂಜಾ ಭೋಜನದ ಆಚರಣೆಗಾಗಿ, ಯೇಸುವಿನ ಯಜ್ಞಾರ್ಪಿತ ಮರಣವನ್ನು ನೆನಪಿಸಿಕೊಳ್ಳಲು ಒಟ್ಟು ಸೇರುತ್ತವೆ. bಅಲ್ಲಿರಲು ಯೋಜನೆಯನ್ನು ದಯಮಾಡಿ ಮಾಡಿರಿ. ಆ ದಿನ, ಯೆರೂಸಲೇಮನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಗತ ಘಟನೆಗಳಲ್ಲಿ ಕೆಲವನ್ನು ನೆನಪಿಸಲು ಮತ್ತು ಮರಣದಲ್ಲಿ ತನ್ನಾತ್ಮವನ್ನು ಯೇಸುವು ಸುರಿಸಿದ ಸಂಬಂಧದಲ್ಲಿ ಧ್ಯಾನಿಸಲು ನೀವು ಬಯಸಬಹುದು. ಈ ರೀತಿಯಲ್ಲಿ ಯೇಸುವು ಯೆಹೋವನ ನೀತಿಯುಕ್ತತೆಯನ್ನು ಸಮರ್ಥಿಸಿದನು ಮತ್ತು ಪಾಪ ಹಾಗೂ ಮರಣದಿಂದ ವಿಶ್ವಾಸಿಸುವ ಮಾನವಕುಲವನ್ನು ವಿಮೋಚಿಸಿದನು.—1 ಕೊರಿಂಥ 11:23-26; ಇಬ್ರಿಯ 9:11-28.
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳ 1989ರ ಕ್ಯಾಲೆಂಡರಿ ನಲ್ಲಿ ಇದರ ದೊಡ್ಡ ಗಾತ್ರದ ಚಿತ್ರವಿದೆ.
b ಕರ್ತನ ಸಂಜಾ ಭೋಜನವನ್ನು ಆಚರಿಸುವ ಸಮಯವನ್ನು ಲೆಕ್ಕಿಸುವ ವಿವರಣೆಗಾಗಿ ಜೂನ್ 15, 1977, ದ ವಾಚ್ ಟವರ್ ನ 383 ಪುಟವನ್ನು ನೋಡಿರಿ.
[Picture Credit Lines on page 26]
Pictorial Archive (Near Eastern History) Est.
Pictorial Archive (Near Eastern History) Est.