ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 4/1 ಪು. 21
  • ಮಹಾ ಚಿತ್ರಕಾರನಾದ ಯೆಹೋವ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಹಾ ಚಿತ್ರಕಾರನಾದ ಯೆಹೋವ
  • ಕಾವಲಿನಬುರುಜು—1990
  • ಅನುರೂಪ ಮಾಹಿತಿ
  • ಕಲೆ ಎಂದರೇನು?
    ಎಚ್ಚರ!—1995
  • ಎಳೆಯರೇ, ಯೆಹೋವನನ್ನು ಸ್ತುತಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
    ಯೆಹೋವನಿಗೆ ಹಾಡಿರಿ
  • ಹರ್ಷದಿ ಹಾಡಿ ಕೊಂಡಾಡು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಕಾವಲಿನಬುರುಜು—1990
w90 4/1 ಪು. 21

ಮಹಾ ಚಿತ್ರಕಾರನಾದ ಯೆಹೋವ

“ಕಲಾಕಾರರು ಅಸಂಖ್ಯಾತ ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳನ್ನು ಚಿತ್ರಿಸುತ್ತಾರೆ. ಮತ್ತು ಅವರ ಕಲಾಕೃತಿಗಳು ನೂರಾರು, ಸಾವಿರಾರು ಡಾಲರುಗಳಿಗೂ ಮಾರಲ್ಪಡುತ್ತವೆ. ಆದರೂ ಮಹಾ ಕಲಾಕಾರನೂ ಸೂರ್ಯಾಸ್ತಮಾನ ಮತ್ತು ಸೂರ್ಯೋದಯಗಳ ಮೂಲನೂ ಆದ ಯೆಹೋವ ದೇವರು ನಮಗೆ ಪ್ರತಿದಿನ ಒಂದೊಂದನ್ನು ಉಚಿತವಾಗಿ ಕೊಡುತ್ತಾನೆ. ಮೂಲಕೃತಿಗಳು ನಕಲು ಪ್ರತಿಗಳಿಗಿಂತ ಎಷ್ಟೋ ಮಿಗಿಲು. ಇದು ನಮ್ಮನ್ನು ನಿರ್ಮಾಣಿಕನಾದ ಆತನನ್ನು ಗಣ್ಯಮಾಡುವಂತೆ ಕಾರಣವಾಗಬೇಡವೇ?” ಎಂಬದಾಗಿ ಯೆಹೋವನ ಸಾಕ್ಷಿಗಳ ಒಬ್ಬ ಸಂಚಾರ ಮೇಲ್ವಿಚಾರಕರು ಹವಾಯಿಯ ಒಂದು ಸಭೆಗೆ ಕೊಟ್ಟ ಒಂದು ಬಾಷಣದಲ್ಲಿ ವಿವೇಚಿಸಿದರು.

ರಾಜ್ಯ ಸಭಾಗೃಹಕ್ಕೆ ಮೊತ್ತಮೊದಲು ಹಾಜರಾಗಿದ್ದ ಒಬ್ಬಾಕೆ ನಾಸ್ತಿಕ ಸ್ತ್ರೀಯು ಸಭೆಯಲ್ಲಿದ್ದಳು. ಶುಶ್ರೂಷಕನ ವಿವೇಚನೆಯನ್ನು ಆಕೆ ಗಮನಿಸಿದಳು ಆದರೆ ದೇವರ ಅಸ್ತಿತ್ವದ ಕುರಿತಾದ ಬಲವಾದ ಸಂದೇಹಗಳು ಇನ್ನೂ ಉಳಿದವು. ಆದರೂ, ಸುಮಾರು ಎರಡು ವರ್ಷಗಳ ಅನಂತರ ಕಾರಲ್ಲಿ ಮನೆಗೆ ಹಿಂದಿರುಗುವಾಗ ಆಕೆ ವಾಹನಸಂದಣಿಯೊಳಗೆ ಸಿಕ್ಕಿಬಿದ್ದಳು. ಇದು ಒಂದು ಬಹು ರಮ್ಯವಾದ ಸೂರ್ಯಾಸ್ತಮಾನವನ್ನು ಅವಳು ಗಮನಿಸುವಂತೆ ಕಾರಣಮಾಡಿತು. ಆಕೆಯ ಯೋಚನೆಗಳು ಆ ಸಂಚಾರ ಮೇಲ್ವಿಚಾರಕನ ಮಾತುಗಳನ್ನು ನೆನಪಿಸಿದವು.

ಆಕೆ ಹೇಳಿದ್ದು: “ವಾಹನಸಂದಣಿಯಲ್ಲಿ ಸಿಕ್ಕಿಬಿದ್ದ ಬಗ್ಗೆ ಬೇಸರಿಸುವ ಬದಲಿಗೆ ನಾನೊಂದು ಸುಂದರವಾದ ಸೂರ್ಯಾಸ್ತಮಾನವನ್ನು ನೋಡುತ್ತಾ ಕುಳಿತೆ. ಅದು ಮಹಾ ಚಿತ್ರಕಾರನೂ ನಿರ್ಮಾಣಿಕನೂ ಆದ ಯೆಹೋವ ದೇವರನ್ನು ಗಣ್ಯಮಾಡುವದರ ಕುರಿತು ಆ ಭಾಷಕನು ಹೇಳಿದ್ದನ್ನು ನನ್ನ ನೆನಪಿಗೆ ತಂದಿತು. ಅದು ನನ್ನನ್ನು ‘ಪ್ರಾಯಶ: ಅವನಂದದ್ದು ನಿಜವಿರಬೇಕು; ನಿಜವಾಗಿಯೂ ಒಬ್ಬ ನಿರ್ಮಾಣಿಕನು ಇರಲೂ ಬಹುದು’ ಎಂದು ಯೋಚಿಸುವಂತೆ ಮಾಡಿತು. ಮನೆಯ ಕಡೆಗೆ ಮುಂದರಿದಷ್ಟಕ್ಕೆ ನಾನದರ ಕುರಿತು ಯೋಚಿಸ ತೊಡಗಿದೆ ಮತ್ತು ಆ ರಾತ್ರಿ ರಾಜ್ಯಗೃಹಕ್ಕೆ ಮೊದಲಾಗಿ ನನ್ನನ್ನು ಆಮಂತ್ರಿಸಿದ ಆ ನನ್ನ ಸ್ನೇಹಿತೆಗೆ ಫೋನ್‌ ಮಾಡಿದೆ. ಬೈಬಲನ್ನು ಅಭ್ಯಾಸಿಸ ತೊಡಗಿದೆ ಮತ್ತು ಈಗ ನಾನು ನನ್ನ ನಿರ್ಮಾಣಿಕನೂ ದೇವರೂ ಆಗಿರುವ ಯೆಹೋವನನ್ನು ಆರಾಧಿಸುತ್ತೇನೆ.’

ಕೀರ್ತನೆಗಾರನಂತೆ ಈ ಮಹಿಳೆಯು ಯೆಹೋವನನ್ನು ಸೃಷ್ಟಿಯ ಮಹಾ ಚಿತ್ರಕಾರನಾಗಿ ಗಣ್ಯಮಾಡಿದಳು ಮಾತ್ರವಲ್ಲ ಆತನ ಸ್ತುತಿಯನ್ನು ಹಾಡುವವಳಾಗಿಯೂ ಪರಿಣಮಿಸಿದಳು. ಕೀರ್ತನೆಗಾರನು ಬರೆದದ್ದು: “ಆಕಾಶಮಂಡಲದಿಂದ ಯೆಹೋವನಿಗೆ ಸುತ್ತಿಯುಂಟಾಗಲಿ. . ಸೂರ್ಯಚಂದ್ರರೇ ಆತನನ್ನು ಸ್ತುತಿಸಿರಿ. ಹೊಳೆಯುವ ಎಲ್ಲಾ ನಕ್ಷತ್ರಗಳೇ ಆತನನ್ನು ಸ್ತುತಿಸಿರಿ. . .ಅವು ಯೆಹೋವನ ನಾಮವನ್ನು ಸ್ತುತಿಸಲಿ. ಆತನು ಅಪ್ಪಣೆಕೊಡಲು ಅವು ಉಂಟಾದವು.” (w89 1/15)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ