ಯೇಸುವಿನ ಜೀವನ ಮತ್ತು ಶುಶ್ರೂಷೆ
ಯೇಸುವಿನ ಒಂದು ಹಟ್ಟುಹಬ್ಬದಂದು ಕೂಲೆ
ಯೇಸು ತನ್ನ ಅಪೊಸ್ತಲರಿಗೆ ಸೂಚನೆ ಕೊಟ್ಟಾದ ಮೇಲೆ, ಅವರನ್ನು ಇಬ್ಬಿಬ್ಬರಾಗಿ ಕ್ಷೇತ್ರಕ್ಕೆ ಕಳುಹಿಸುತ್ತಾನೆ. ಸಹೋದರರಾದ ಪೇತ್ರ ಮತ್ತು ಅಂದ್ರೆಯರು ಪ್ರಾಯಶಃ ಒಟ್ಟಿಗೆ ಹೋಗಿರಬಹುದು, ಯಾಕೋಬ ಮತ್ತು ಯೋಹಾನ, ಫಿಲಿಪ್ಪ ಮತ್ತು ಬಾರ್ತೆಲೋಮಾಯ, ತೋಮ ಮತ್ತು ಮತ್ತಾಯ, ಯಾಕೋಬ ಮತ್ತು ತದ್ದಾಯ, ಸೀಮೋನ್ ಮತ್ತು ಇಸ್ಕಾರಿಯೋತ ಯೂದನು ಸಹಾ ಹಾಗೆಯೇ ಹೋಗಿದ್ದಿರಬೇಕು. ಆ ಆರು ಜತೆ ಸುವಾರ್ತಿಕರು ತಾವು ಹೋದಲ್ಲೆಲ್ಲಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾರೆ ಮತ್ತು ಅದ್ಭುತ ಕೃತ್ಯಗಳನ್ನು ನಡಿಸುತ್ತಾರೆ.
ಈ ಮಧ್ಯೆ ಸ್ನಾನಿಕನಾದ ಯೋಹಾನನು ಇನ್ನೂ ಸೆರೆಮನೆಯಲ್ಲಿದ್ದನು. ಈಗ ಸುಮಾರು ಎರಡು ವರ್ಷದಿಂದ ಅವನು ಅಲ್ಲಿದ್ದಾನೆ. ಹೆರೋದ ಅಂತಿಪ್ಪನು ಅವನ ಅಣ್ಣನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ತನಗಾಗಿ ಇಟ್ಟು ಕೊಳ್ಳುವುದು ತಪ್ಪು ಎಂದು ಯೋಹಾನನು ಬಹಿರಂಗವಾಗಿ ಘೋಷಿಸಿದ್ದು ನಿಮಗೆ ನೆನಪಿರ ಬಹುದು. ಹೆರೋದ ಅಂತಿಪ್ಪನು ಮೋಶೆಯ ಧರ್ಮಶಾಸ್ತ್ರ ವನ್ನು ಪಾಲಿಸುವುದಾಗಿ ಹೇಳುತ್ತಿದ್ದರಿಂದ, ಯೋಗ್ಯವಾಗಿಯೇ, ಯೋಹಾನನು ಈ ವ್ಯಭಿಚಾರಿ ಸಂಯೋಗವನ್ನು ಖಂಡಿಸಿದ್ದನು. ಈ ಕಾರಣಕ್ಕಾಗಿಯೇ ಹೆರೋದನು ಯೋಹಾನನ್ನು ಸೆರೆಮನೆಗೆ ಹಾಕಿದ್ದನು, ಪ್ರಾಯಶಃ ಹೆರೋದ್ಯಳ ಒತ್ತಾಯದಿಂದಾಗಿ.
ಯೋಹಾನನು ನೀತಿವಂತ ಪುರುಷನೆಂದು ಹೆರೋದ ಅಂತಿಪ್ಪನಿಗೆ ತಿಳಿಯುತ್ತದೆ ಮತ್ತು ಸಂತೋಷದಿಂದ ಕಿವಿಗೊಟ್ಟನೂ ಸಹ. ಅವನನ್ನು ಏನು ಮಾಡಲಿ ಎಂಬ ಪೇಚಾಟಕ್ಕೆ ಬೀಳುತ್ತಾನೆ. ಆದರೆ ಹೆರೋದ್ಯಳಾದರೋ, ಯೋಹಾನನ್ನು ಹಗೆ ಮಾಡುತ್ತಾಳೆ ಮತ್ತು ಅವನನ್ನು ಕೊಲ್ಲಲು ಸಂದರ್ಭ ಹುಡುಕುತ್ತಾ ಇರುತ್ತಾಳೆ. ಕಟ್ಟ ಕಡೆಗೆ, ಅವಳು ಕಾಯುತ್ತಿದ್ದ ಸಂದರ್ಭ ಬರುತ್ತದೆ.
ಸಾ.ಶ. 32 ರ ಪಸ್ಕಕ್ಕೆ ಮುಂಚಿತವಾಗಿ ಹೆರೋದನು ತನ್ನ ಹುಟ್ಟು ಹಬ್ಬದ ಒಂದು ದೊಡ್ಡ ಆಚರಣೆಯನ್ನು ಏರ್ಪಡಿಸುತ್ತಾನೆ. ಆ ಸತ್ಕಾರಗೋಷ್ಟಿಗಾಗಿ ಹೆರೋದನ ಅರಮನೆಯ ಉಚ್ಛ ಅಧಿಕಾರಿಗಳು, ಸೇನಾಪತಿಗಳು ಹಾಗೂ ಗಲಿಲಾಯದ ಪ್ರಮುಖ ನಾಗರಿಕರು ಒಟ್ಟುಸೇರಿದ್ದರು. ಸಂಜೆಯಾದಾಗ, ಮಾಜಿ ಗಂಡ ಫಿಲಿಪ್ಪನಿಂದ ಹೆರೋದ್ಯಳಿಗೆ ಹುಟ್ಟಿದ್ದ ಎಳೇ ಮಗಳು, ಸಲೋಮಿ, ಅತಿಥಿಗಳ ಮುಂದೆ ನಾಟ್ಯವಾಡುವಂತೆ ಕಳುಹಿಸಲ್ಪಟಳ್ಟು. ಸಭಿಕ ಗಂಡಸರು ಅವಳ ನಾಟ್ಯದಿಂದ ಮುಗ್ಧರಾದರು, ಅದು ನಿಸ್ಸಂದೇಹವಾಗಿ ಮನಮೋಹಕವಾಗಿತ್ತು.
ಹೆರೋದನು ಸಲೋಮಿಯನ್ನು ಬಲು ಮೆಚ್ಚಿದನು. “ಬೇಕಾದದ್ದನ್ನು ಕೇಳಿಕೋ, ಕೊಡುತ್ತೇನೆ” ಎನ್ನುತ್ತಾನೆ. “ನೀನು ಏನು ಕೇಳಿ ಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧ ರಾಜ್ಯವನ್ನು ಕೇಳಿದರೂ, ಕೊಡುತ್ತೇನೆ” ಎಂದು ಆಣೆಯಿಟ್ಟೂ, ಘೋಷಿಸುತ್ತಾನೆ.
ಉತ್ತರ ಕೊಡುವ ಮುಂಚೆ ಸಲೋಮಿ ತನ್ನ ತಾಯಿಯನ್ನು ಸಂಪರ್ಕಿಸಲು ಹೊರಗೆ ಹೋಗುತ್ತಾಳೆ. “ನಾನು ಏನು ಕೇಳಿ ಕೊಳ್ಳಲಿ?” ಎಂದು ವಿಚಾರಿಸುತ್ತಾಳೆ.
ಕಟ್ಟ ಕಡೆಗೆ ಸಂದರ್ಭ ಸಿಕ್ಕಿತು ! “ಸ್ನಾನಿಕನಾದ ಯೋಹಾನನ ತಲೆ,” ಎನ್ನುತ್ತಾಳೆ ಹೆರೋದ್ಯಳು, ಅನುಮಾನಿಸದೇ.
ಕೂಡಲೇ ಸಲೋಮಿ ಹೆರೋದನ ಬಳಿಗೆ ಹಿಂತಿರುಗಿ, “ಈ ಕ್ಷಣದಲ್ಲೀ ಸ್ನಾನಿಕನಾದ ಯೋಹಾನನ ತಲೆಯನ್ನು ಪರಾತಿನಲ್ಲಿ ನನಗೆ ತರಿಸಿ ಕೊಡಬೇಕು” ಎಂದು ವಿನಂತಿಸುತ್ತಾಳೆ.
ಹೆರೋದನು ಬಹು ದುಃಖ ಪಟ್ಟನು. ಆದರೂ, ಅವನ ಅತಿಥಿಗಳು ಅವನು ಮಾಡಿದ್ದ ಆಣೆಯನ್ನು ಕೇಳಿದರ್ದಿಂದ, ಅದನ್ನು ಪಾಲಿಸದೆ ಇರಲು ಪೇಚಾಟಕ್ಕೆ ಬಿದ್ದನು, ಇದು ಒಬ್ಬ ನಿರ್ದೋಷಿ ಮನುಷ್ಯನನ್ನು ಕೊಲ್ಲುವ ಅರ್ಥದಲ್ಲಿದ್ದಾಗ್ಯೂ ಅವನದನ್ನು ನಡಿಸಿದನು. ಒಬ್ಬ ಸಂಹಾರಕನನ್ನು ಈ ಭಯಾನಕ ಸಂದೇಶದೊಂದಿಗೆ ಕೂಡಲೇ ಕಳುಹಿಸಲಾಯಿತು. ಅವನು ತುಸುಹೊತ್ತಿನಲ್ಲೀ ತಲೆಯನ್ನು ಪರಾತಿನಲ್ಲಿ ತಂದು ಸಲೋಮಿಗೆ ಕೊಡುತ್ತಾನೆ. ಅವಳು ಹೋಗಿ ಅದನ್ನು ತಾಯಿಗೆ ಕೊಡುತ್ತಾಳೆ. ಯೋಹಾನನ ಶಿಷ್ಯರು ಇದನ್ನು ಕೇಳಿದಾಗ, ಬಂದು, ಅವನ ಶವವನ್ನು ತೆಗೆದು ಸಮಾಧಿ ಮಾಡುತ್ತಾರೆ. ಅನಂತರ ಅವರು ಆ ಸಂಗತಿಯನ್ನು ಯೇಸುವಿಗೆ ತಿಳಿಸುತ್ತಾರೆ.
ತದನಂತರ, ಯೇಸು, ಜನರನ್ನು ವಾಸಿಮಾಡುವದನ್ನೂ ಮತ್ತು ದೆವ್ವಗಳನ್ನು ಬಿಡಿಸುವುದನ್ನೂ ಹೆರೋದನು ಕೇಳಿದಾಗ, ಅವನು ಹೆದರಿಹೋದನು. ಯೇಸು ನಿಜವಾಗಿ ಸತ್ತವರೊಳಗಿಂದ ಎಬ್ಬಿಸಲ್ಪಟ್ಟ ಯೋಹಾನನೋ ಎಂದವನ ಹೆದರಿಕೆಗೆ ಕಾರಣ. ಯೇಸುವನ್ನು ನೋಡಲು ಅವನು ಬಲು ಅಪೇಕ್ಷೆ ಪಡುತ್ತಾನೆ, ಆತನ ಸಾರುವಿಕೆಯನ್ನು ಕೇಳಲಿಕ್ಕಾಗಿ ಅಲ್ಲ, ತನ್ನ ಭಯಕ್ಕೆ ನಿಜ ಕಾರಣವದೆಯೋ ಎಂದು ದೃಢೀಕರಿಸಲಿಕ್ಕಾಗಿಯೇ. ಮತ್ತಾಯ 10:1-5; 11:1; 14:1-12; ಮಾರ್ಕ 6:14-29; ಲೂಕ 9:7-9.
◆ ಯೋಹಾನನು ಸೆರೆಮನೆಯಲ್ಲಿದ್ದದ್ದೇಕೆ, ಮತ್ತು ಹೆರೋದನು ಅವನನ್ನು ಕೊಲ್ಲಲು ಏಕೆ ಬಯಸಲಿಲ್ಲ?
◆ ಯೋಹಾನನನ್ನು ಹೆರೋದ್ಯಳು ಕಟ್ಟಕಡೆಗೆ ಕೊಲ್ಲಲು ಶಕ್ತಳಾದದ್ದು ಹೇಗೆ?
◆ ಯೋಹಾನನ ಮರಣಾನಂತರ, ಹೆರೋದನು ಯೇಸುವನ್ನು ನೋಡಲು ಬಯಸಿದ್ದು ಏಕೆ? (w87 8/15)
[ಪುಟ 9 ರಲ್ಲಿ ಇಡೀ ಪುಟದ ಚಿತ್ರ]