ಗೀತೆ 40
ನಿನ್ನ ಆಯ್ಕೆ ಏನು?
1. ನಿಂಗೆ ಯಾರು ಇಷ್ಟ?
ನಿನ್ನ ಒಡೆಯ ಯಾರು?
ನನ್ನ ಒಡೆಯ, ನನ್ನ ದೇವ್ರು,
ಯಾಹು ಅಪ್ಪ ನಂಗೆ ಇಷ್ಟ.
ನನ್ನ ಪೂರ್ಣ ಭಕ್ತಿ,
ನನ್ನ ಹೃದಯ ಶಕ್ತಿ,
ಪೂರ್ತಿ ಅರ್ಪಣೆ ನನ್ನ ಯಾಹುಗೆ
ನನ್ನ ಜೀವ ಯೆಹೋವ.
2. ನಿನ್ನ ಆಯ್ಕೆ ಏನು
ಜೀವ ಅಥವಾ ಸಾವಾ?
ಈ ಲೋಕದಲಿ ಆಸ್ತಿ ಮಾಡಿ
ಜೀವ ಹೋದ್ರೆ ಏನು ಲಾಭ?
ನೀನು ಸತ್ಯ ಬಿಟ್ಟು
ಲೋಕ ಅರಸಿ ಹೋದ್ರೆ,
ಯೆಹೋವ ಅಪ್ಪ ಮನ್ಸು ನೋವುತ್ತೆ.
ನೀನು ತುಂಬ ಅಮೂಲ್ಯ
3. ನನ್ನ ಆಯ್ಕೆ ಜೀವ
ಇಲ್ಲ ಬಿಡಲ್ಲ ಸತ್ಯ.
ಎಲ್ಲ ಘನತೆ ಕೀರ್ತಿ ಸ್ತುತಿ
ನಿಂಗೆ ಮಾತ್ರ ಯಾಹು ಅಪ್ಪ.
ತುಂಬಾ ಮೌಲ್ಯ ಕೊಟ್ಟು
ನನ್ನ ಬಿಡಿಸ್ದೆ ನೀನು.
ನಿನ್ನ ಪ್ರೀತಿಗೆ ಕೋಟಿ ನಮನ
ನಿನ್ನ ತ್ಯಾಗ ಅಪಾರ
(ಯೆಹೋ. 24:15; ಕೀರ್ತ. 116:14, 18; 2 ತಿಮೊ. 2:19 ಸಹ ನೋಡಿ)