ಪರಿವಿಡಿ
ಭಾಗ 1 ಯೆಹೋವನ ಬಳಿಗೆ ಯಾಕೆ ಮರಳಿ ಬರಬೇಕು?
ನಮಗಿಂದು ಇರುವಂಥ ಸಮಸ್ಯೆಗಳನ್ನೇ ಬೈಬಲ್ ಕಾಲದ ಜನರು ಸಹ ಎದುರಿಸಿದ್ದರು. ಆಗ ಯೆಹೋವ ದೇವರು ಅವರ ಕಡೆಗೆ ಸಹಾಯಹಸ್ತ ಚಾಚಿದನು. ಇಂದು ನಮಗೂ ಅದೇ ರೀತಿ ಸಹಾಯ ಮಾಡುತ್ತೇನೆ ಎಂದು ಆತನು ಮಾತುಕೊಟ್ಟಿದ್ದಾನೆ. ಕಾಳಜಿವಹಿಸುವ, ಪ್ರೀತಿಯ ಕುರುಬನಾದ ಯೆಹೋವನು ತಪ್ಪಿಹೋದ ತನ್ನ ಕುರಿಗಳನ್ನು ಹುಡುಕುತ್ತಾನೆ ಮತ್ತು ತನ್ನ ಮಂದೆಗೆ ಮರಳಿ ಬರುವಂತೆ ಆಮಂತ್ರಿಸುತ್ತಾನೆ.
ಭಾಗ 1 ‘ಕಳೆದುಹೋದ ಕುರಿಯನ್ನು ನಾನೇ ಹುಡುಕುವೆನು’
ಭಾಗ 2-4 ಮರಳಿ ಬರಲು ಯಾವೆಲ್ಲಾ ಅಡ್ಡಿತಡೆಗಳಿರಬಹುದು?
ಯೆಹೋವನ ನಂಬಿಗಸ್ತ ಸೇವಕರು ಸಹ ಚಿಂತೆ, ಇತರರಿಂದ ನೋವು ಮತ್ತು ದೋಷಿ ಭಾವನೆಯನ್ನು ಅನುಭವಿಸಿದ್ದಾರೆ. ಅದರಿಂದಾಗಿ ಅವರ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿದೆ. ಈ ಸಮಸ್ಯೆಗಳಿಂದ ಹೊರಬರಲು, ತನ್ನ ಜನರೊಂದಿಗೆ ಪುನಃ ಸಹವಾಸಿಸಲು, ಸಂತೋಷವನ್ನು ಮತ್ತೆ ಪಡೆಯಲು ಯೆಹೋವನು ಅವರಿಗೆ ಹೇಗೆ ಸಹಾಯ ಮಾಡಿದನು ಎಂದು ತಿಳಿಯಿರಿ.
ಭಾಗ 2 ಚಿಂತೆ-ಒತ್ತಡ “ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ”
ಭಾಗ 3 ಇತರರಿಂದಾದ ನೋವು ನಮಗೆ ‘ದೂರುಹೊರಿಸಲು ಕಾರಣವಿದ್ದಾಗ’
ಭಾಗ 4 ದೋಷಿ ಭಾವನೆ “ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು”
ಭಾಗ 5 ಯೆಹೋವನ ಬಳಿ ಮರಳಿ ಬರಲು ಏನು ಮಾಡಬೇಕು?
ನೀವು ನಿಜವಾಗಿಯೂ ಮರಳಿ ಬರಬೇಕೆಂದು ಯೆಹೋವನು ಬಯಸುತ್ತಾನೆ ಎನ್ನಲು ಕೆಲವು ಆಧಾರಗಳನ್ನು ತಿಳಿಯಿರಿ. ದೂರ ಹೋದ ಅನೇಕರು ಹೇಗೆ ಮರಳಿ ಬಂದರು? ಮರಳಿದಾಗ ಸಭೆಯಲ್ಲಿರುವವರು ಅವರನ್ನು ಹೇಗೆ ಆಮಂತ್ರಿಸಿದರು? ಆಧ್ಯಾತ್ಮಿಕ ಚಟುವಟಿಕೆಗಳನ್ನು ಪುನಃ ಹುರುಪಿನಿಂದ ಮಾಡಲು ಹಿರಿಯರು ಅವರಿಗೆ ಹೇಗೆ ಸಹಾಯ ನೀಡಿದರು ಎಂದು ತಿಳಿಯಿರಿ.