ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g17 ನಂ. 2 ಪು. 10-11
  • ನ್ಯೂಜಿಲೆಂಡ್‌ ಸುತ್ತೋಣ ಬನ್ನಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನ್ಯೂಜಿಲೆಂಡ್‌ ಸುತ್ತೋಣ ಬನ್ನಿ
  • ಎಚ್ಚರ!—2017
ಎಚ್ಚರ!—2017
g17 ನಂ. 2 ಪು. 10-11
ನ್ಯೂಜಿಲೆಂಡ್‌ನ ಮಿಲ್‌ಫೋರ್ಡ್‌ಸೌಂಡ್‌

ಮಿಲ್‌ಫೋರ್ಡ್‌ ಸೌಂಡ್‌

ನಾಡು-ನಿವಾಸಿಗಳು | ನ್ಯೂಜಿಲೆಂಡ್‌

ನ್ಯೂಜಿಲೆಂಡ್‌ ಸುತ್ತೋಣ ಬನ್ನಿ

ಭೂಪಟದಲ್ಲಿ ನ್ಯೂಜಿಲೆಂಡ್‌

ಸುಮಾರು 800 ವರ್ಷಗಳ ಹಿಂದೆ ಮಾವೊರಿ ಬುಡಕಟ್ಟಿನವರು ಸಾಗರದಲ್ಲಿ ಸಾವಿರಾರು ಮೈಲು ಪ್ರಯಾಣ ಮಾಡಿ ನ್ಯೂಜಿಲೆಂಡಿಗೆ ಬಂದು ನೆಲೆಸಿದರು. ತಾವು ಬಿಟ್ಟು ಬಂದ ಉಷ್ಣವಲಯದಲ್ಲಿರುವ ಪಾಲಿನೇಷಿಯದ ದ್ವೀಪಗಳಿಗೆ ಭಿನ್ನವಾದ ಭೂಪ್ರದೇಶವನ್ನು ಅವರಿಲ್ಲಿ ಕಂಡುಕೊಂಡರು. ಈ ಪ್ರದೇಶ ಬೆಟ್ಟ ಮತ್ತು ಹಿಮನದಿಗಳಿಂದ ಆವೃತವಾಗಿದ್ದು ಇಲ್ಲಿ ಹಿಮ ಬೀಳುತ್ತದೆ ಮತ್ತು ಬಿಸಿನೀರಿನ ಬುಗ್ಗೆಗಳಿವೆ. ಸುಮಾರು 500 ವರ್ಷಗಳ ನಂತರ ಇಲ್ಲಿ ದೂರದ ಯುರೋಪಿನಿಂದ ಇನ್ನೊಂದು ಜನಾಂಗದ ಜನರು ಬಂದು ನೆಲೆಸಿದರು. ಇಂದು ನ್ಯೂಜಿಲೆಂಡಿನ ಹೆಚ್ಚಿನವರಲ್ಲಿ ಆಂಗ್ಲೊ-ಸ್ಯಾಕ್ಸನ್‌ ಮತ್ತು ಪಾಲಿನೇಷಿಯನ್‌ ಮೂಲದ ಸಂಪ್ರದಾಯಗಳಿವೆ. ಇಲ್ಲಿನ ಶೇ.90​ರಷ್ಟು ಜನರು ನಗರವಾಸಿಗಳು. ವೆಲಿಂಗ್ಟನ್‌ ಪಟ್ಟಣವು ಪ್ರಪಂಚದಲ್ಲೇ ಅತಿ ದಕ್ಷಿಣ ತುದಿಯಲ್ಲಿರುವ ರಾಜಧಾನಿ ಎಂಬ ಹೆಸರು ಪಡೆದಿದೆ.

ನ್ಯೂಜಿಲೆಂಡಿನ ಉತ್ತರ ದ್ವೀಪದ ಕುದಿಯುತ್ತಿರುವ ಕೆಸರು ಗುಂಡಿಗಳು

ಉತ್ತರ ದ್ವೀಪದ ಕುದಿಯುತ್ತಿರುವ ಕೆಸರು ಗುಂಡಿಗಳು

ನ್ಯೂಜಿಲೆಂಡ್‌ ಬೇರೆ ದೇಶಗಳಿಂದ ಪ್ರತ್ಯೇಕವಾಗಿದ್ದರೂ ತನ್ನ ವೈವಿಧ್ಯಮಯ ಮತ್ತು ರಮಣೀಯ ಪ್ರಕೃತಿ ಸೌಂದರ್ಯದಿಂದಾಗಿ ಪ್ರತಿವರ್ಷ ಮೂವತ್ತು ಲಕ್ಷದಷ್ಟು ಪ್ರವಾಸಿಗರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ.

ಸಿಲ್ವರ್‌ ಟ್ರೀ ಫರ್ನ್‌ ಮರ

30 ಅಡಿಗಿಂತ ಹೆಚ್ಚು ಉದ್ದ ಬೆಳೆಯುವ ಸಿಲ್ವರ್‌ ಟ್ರೀ ಫರ್ನ್‌

ಟಕಾಹಿ ಎಂಬ ಹಾರಲಾಗದ ಪಕ್ಷಿ

ಅಳಿದುಹೋಗಿದೆ ಎಂದು 1948ರ ತನಕ ಭಾವಿಸಲಾದ ಟಕಾಹಿ ಎಂಬ ಹಾರಲಾಗದ ಪಕ್ಷಿ

ಇಲ್ಲಿ ಬಣ್ಣ-ಬಣ್ಣದ, ಭಿನ್ನ ಗಾತ್ರದ ವೈವಿಧ್ಯಮಯ ವನ್ಯಜೀವಿಗಳು ಮತ್ತು ಪ್ರಪಂಚದಲ್ಲೆಲ್ಲೂ ಇಲ್ಲದಷ್ಟು ಜಾತಿಯ ಹಾರಲಾಗದ ಪಕ್ಷಿಗಳಿವೆ. ಟುವಾಟರ ಎಂಬ ಹಲ್ಲಿಯ ಜಾತಿಗೆ ಸೇರಿದ ಸರೀಸೃಪದ ಬೀಡು ಇದೇ ಆಗಿದೆ. ಈ ಸರೀಸೃಪ ನೂರು ವರ್ಷ ಬದುಕುತ್ತದೆ! ನ್ಯೂಜಿಲೆಂಡ್‌ ಕೆಲವು ಜಾತಿಯ ಬಾವಲಿಗಳು, ಸಮುದ್ರದಲ್ಲಿರುವ ತಿಮಿಂಗಿಲ ಮತ್ತು ಡಾಲ್ಫಿನ್‌ಗಳಂಥ ಸಸ್ತನಿಗಳ ತವರೂರಾಗಿದೆ.

ಸುಮಾರು 120 ವರ್ಷಗಳಿಂದ ನ್ಯೂಜಿಲೆಂಡಿನಲ್ಲಿ ಯೆಹೋವನ ಸಾಕ್ಷಿಗಳಿದ್ದಾರೆ. ಅವರು ಇಲ್ಲಿ ನಿಊಯನ್‌, ರರಟಾಂಗನ್‌, ಸಮೋವನ್‌, ಟಾಂಗನ್‌ ಮುಂತಾದ ಪಾಲಿನೇಷಿಯನ್‌ ಭಾಷೆಗಳನ್ನು ಸೇರಿಸಿ ಕಡಿಮೆಪಕ್ಷ 19 ಭಾಷೆಗಳಲ್ಲಿ ಬೈಬಲನ್ನು ಕಲಿಸುತ್ತಾರೆ.

ಹಾಡಿಗೆ ತಕ್ಕಂತೆ ನರ್ತಿಸುತ್ತಿರುವ ಮಾವೊರಿ ಜನರು

ಸಾಂಪ್ರದಾಯಿಕ ಉಡುಪು ಧರಿಸಿ ಹಾಡಿಗೆ ತಕ್ಕಂತೆ ನರ್ತಿಸುತ್ತಿರುವ ಮಾವೊರಿ ಜನರು

ನಿಮಗೆ ಗೊತ್ತಿತ್ತಾ?

ನೆದರ್ಲೆಂಡ್ಸ್‌ನ ಒಂದು ಪ್ರದೇಶವಾದ ಜೀಲೆಂಡ್‌ನಿಂದ ನ್ಯೂಜಿಲೆಂಡ್‌ ಎಂಬ ಹೆಸರು ಬಂತು. ನ್ಯೂಜಿಲೆಂಡ್‌ನ ಮಾವೊರಿ ಹೆಸರಾದ ಔಟೀಅರೋವದ ಅರ್ಥ “ಉದ್ದವಾದ ಬಿಳಿ ಮೋಡದ ದೇಶ” ಎಂದಾಗಿದೆ.

ನ್ಯೂಜಿಲೆಂಡಿನ ಹೆಚ್ಚಿನ ಜನರು ಇಂಗ್ಲಿಷ್‌ ಭಾಷೆ ಮಾತಾಡುತ್ತಾರೆ. ಸ್ಥಳೀಯ ಭಾಷೆಯಾದ ಮಾವೊರಿ ಮರುಬಳಕೆಗೆ ಬಂದಿದೆ. ಇದನ್ನು ಈಗ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಯೆಹೋವನ ಸಾಕ್ಷಿಗಳ ಅಧಿಕೃತ ವೆಬ್‌ಸೈಟ್‌ ಮಾವೊರಿ ಭಾಷೆಯಲ್ಲಿ ಲಭ್ಯವಿದೆ.

  • ಜನಸಂಖ್ಯೆ: 47 ಲಕ್ಷ

  • ರಾಜಧಾನಿ: ವೆಲಿಂಗ್ಟನ್‌

  • ಭೂಪ್ರದೇಶ: ಉತ್ತರ ದ್ವೀಪದಲ್ಲಿ ಜ್ವಾಲಾಮುಖಿಗಳಿವೆ ಮತ್ತು ನೆಲದಡಿಯ ವಿಪರೀತ ಉಷ್ಣತೆಯ ಪರಿಣಾಮಗಳನ್ನು ಇಲ್ಲಿ ನೋಡಬಹುದು. ದಕ್ಷಿಣ ದ್ವೀಪದಲ್ಲಿ ಸಾವಿರಾರು ಹಿಮನದಿಗಳಿವೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ