ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 7/13 ಪು. 12-13
  • ಇಂಡೊನೇಶಿಯ! ಹೋಗೋಣವೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಂಡೊನೇಶಿಯ! ಹೋಗೋಣವೇ?
  • ಎಚ್ಚರ!—2013
ಎಚ್ಚರ!—2013
g 7/13 ಪು. 12-13

ನಾಡು-ನಿವಾಸಿಗಳು

ಇಂಡೊನೇಶಿಯ! ಹೋಗೋಣವೇ?

ಇಂಡೊನೇಶಿಯ ರಾಷ್ಟ್ರದಲ್ಲಿ ಸುಮಾರು 17,000 ದ್ವೀಪಗಳಿವೆ. ಇಲ್ಲಿನ ಜನರು ಸ್ನೇಹಭಾವ, ಸಹನೆ, ಸಭ್ಯತೆ ಮತ್ತು ಅತಿಥಿಸತ್ಕಾರಕ್ಕೆ ಹೆಸರುವಾಸಿ.

ಇವರ ಮುಖ್ಯ ಆಹಾರ ಅನ್ನ. ಅದರ ಜತೆಗೆ ಇತರ ಭಕ್ಷ್ಯಗಳು ಮತ್ತು ಹಣ್ಣುಗಳು. ಭಕ್ಷ್ಯಗಳಲ್ಲಿ ಹೆಚ್ಚಾಗಿ ಸಂಬಾರ ಪದಾರ್ಥಗಳನ್ನು ಬಳಸುತ್ತಾರೆ. ಇಂಡೊನೇಶಿಯದ ಕೆಲವೆಡೆ ನೆಲದ ಮೇಲೆ ಚಾಪೆ ಹಾಸಿ ಮನೆಮಂದಿಯೆಲ್ಲ ಕೂತು ಊಟಮಾಡುತ್ತಾರೆ. ಅನ್ನವನ್ನು ಕೈಯಿಂದ ತಿನ್ನುತ್ತಾರೆ. ಹೀಗೆ ತಿಂದರೆ ರುಚಿ ಹೆಚ್ಚು ಎನ್ನುತ್ತಾರೆ ಅಲ್ಲಿನ ಜನರು.

ಇಂಡೊನೇಶಿಯನ್ನರು ಕಲೆ, ನೃತ್ಯ, ಸಂಗೀತ ಪ್ರಿಯರು. ಆ್ಯಂಕ್‌ಲಾನ್‌ ಎನ್ನುವುದು ಅವರು ಬಳಸುವ ಒಂದು ವಿಶೇಷ ಸಂಗೀತ ಸಾಧನ. ಇದನ್ನು ಹೇಗೆ ಮಾಡುತ್ತಾರೆಂದರೆ, ಬಿದಿರಿನ ಕೊಳವೆಗಳನ್ನು ಚೌಕಟ್ಟೊಂದಕ್ಕೆ ಸಡಿಲವಾಗಿ ಕಟ್ಟುತ್ತಾರೆ. ಇದನ್ನು ಕುಲುಕಿದಾಗ ಒಂದು ಇಂಪಾದ ಸ್ವರ ಹೊರಬರುತ್ತೆ. ಹೀಗೆ ಅನೇಕ ಸ್ವರಗಳು ಸೇರಿ ಒಂದು ಹಾಡು ಹೊರಬರಬೇಕಾದರೆ ತುಂಬ ವಾದ್ಯಗಾರರು ಸೇರಿ ತಮ್ಮ ತಮ್ಮ ಆ್ಯಂಕ್‌ಲಾನ್‌ ಅನ್ನು ಒಮ್ಮೆಲೆ ನುಡಿಸಬೇಕಾಗುತ್ತೆ.

15ನೇ ಶತಮಾನದ ವರೆಗೆ ಇಂಡೊನೇಶಿಯದಲ್ಲಿ ಹಿಂದೂಗಳು ಮತ್ತು ಬೌದ್ಧರೇ ಜಾಸ್ತಿ ಇದ್ದರು. 16ನೇ ಶತಮಾನದಷ್ಟಕ್ಕೆ ಮುಸ್ಲಿಮರು ಮೇಲುಗೈ ಸಾಧಿಸಿದರು. ಅದೇ ಸಮಯದಲ್ಲಿ ಸಂಬಾರ ಪದಾರ್ಥಗಳಿಗಾಗಿ ಇಂಡೊನೇಶಿಯಕ್ಕೆ ಬಂದ ಯುರೋಪಿಯನ್ನರು ಕ್ರೈಸ್ತತ್ವವನ್ನು ಪರಿಚಯಿಸಿದರು.

ಯೆಹೋವನ ಸಾಕ್ಷಿಗಳು ತಮ್ಮ ಬೈಬಲ್‌ ಶಿಕ್ಷಣ ಕಾರ್ಯದಿಂದಾಗಿ ಜಗತ್ತಿನಲ್ಲಿ ಪ್ರಸಿದ್ಧರು. 1931ರಿಂದ ಇಂಡೊನೇಶಿಯದಲ್ಲೂ ಉತ್ಸುಕತೆಯಿಂದ ಈ ಸೇವೆಯನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ಅಲ್ಲಿ ಅವರ ಸಂಖ್ಯೆ 22,000 ಮೀರಿದೆ. ಶ್ರವಣ ವೈಕಲ್ಯವಿರುವ ಜನರಿಗೆ ಆಧ್ಯಾತ್ಮಿಕ ಸಹಾಯ ನೀಡಲು ತುಂಬ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಯೇಸು ಕ್ರಿಸ್ತನ ಮರಣದ ಸ್ಮರಣೆಯ ಕಾರ್ಯಕ್ರಮವನ್ನು ಯೆಹೋವನ ಸಾಕ್ಷಿಗಳು ಸನ್ನೆ ಭಾಷೆಯಲ್ಲೂ ಏರ್ಪಡಿಸಿದ್ದರು. ಅದಕ್ಕೆ 500ಕ್ಕೂ ಹೆಚ್ಚು ಜನ ಹಾಜರಾಗಿದ್ದರು. (g13-E 04)

ನಿಮಗೆಷ್ಟು ಗೊತ್ತು. . .

ಈ ಕೆಳಗಿನವುಗಳಲ್ಲಿ ಯಾವುದು ಇಂಡೊನೇಶಿಯದಲ್ಲಿ ಇದೆ?

  1. (ಅ) 20,000 ಪ್ರಭೇದದ ಗಿಡಗಳು

  2. (ಆ) ಪ್ರಪಂಚದಲ್ಲೇ ಅತೀ ದೊಡ್ಡ ಗಾತ್ರದ ಸಸ್ತನಿಗಳು

  3. (ಇ) ಪ್ರಪಂಚದಲ್ಲೇ ಅತೀ ದೊಡ್ಡ ಹೂವು

  4. (ಈ) ಪ್ರಪಂಚದಲ್ಲೇ ಅತೀ ಎತ್ತರದ ಹೂವು

ಉತ್ತರ: ಎಲ್ಲ ನಾಲ್ಕು. ಪ್ರಪಂಚದಲ್ಲೇ ಅತೀ ದೊಡ್ಡ ಹೂವಿನ ಸುತ್ತಳತೆ 3 ಅಡಿ (91 ಸೆಂ.ಮೀ.) ಅತೀ ಉದ್ದದ ಹೂವಿನ ಎತ್ತರ 10 ಅಡಿ (3 ಮೀ.)

ಒಂದು ಕಿರುನೋಟ

  • ಜನಸಂಖ್ಯೆ: 23 ಕೋಟಿ 76 ಲಕ್ಷ

  • ರಾಜಧಾನಿ: ಜಕಾರ್ತ

  • ಹವಾಮಾನ: ಉಷ್ಣವಲಯದ ಹವೆ

  • ರಫ್ತು-ರವಾನೆ: ತಾಳೆ ಎಣ್ಣೆ, ರಬ್ಬರ್‌, ಪೆಟ್ರೋಲಿಯಂ, ಕಲ್ಲಿದ್ದಲು

  • ಭಾಷೆ: ಬಹಾಸ ಇಂಡೊನೇಶಿಯ ಭಾಷೆ. ಇನ್ನೂ ನೂರಾರು ಪ್ರಾಂತೀಯ ಭಾಷೆಗಳು ಮತ್ತು ಉಪಭಾಷೆಗಳು

  • ಧರ್ಮ: ಇಸ್ಲಾಂ (88%)

ಎಚ್ಚರ! ಪತ್ರಿಕೆ 98 ಭಾಷೆಗಳಲ್ಲಿ ಲಭ್ಯವಾಗುತ್ತಿದೆ. ಅದರಲ್ಲಿ ಬಹಾಸ ಇಂಡೊನೇಶಿಯ ಭಾಷೆ ಕೂಡ ಒಂದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ