ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 6/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1997
  • ಅನುರೂಪ ಮಾಹಿತಿ
  • ಡಿಸ್‌ಲೆಕ್ಸಿಯಾ ನನ್ನನ್ನು ಹಿಮ್ಮೆಟ್ಟಿಸಲಿಲ್ಲ
    ಎಚ್ಚರ!—2009
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1997
ಇನ್ನಷ್ಟು
ಎಚ್ಚರ!—1997
g97 6/8 ಪು. 30

ನಮ್ಮ ವಾಚಕರಿಂದ

ಕಂಪ್ಯೂಟರ್‌ ಆಟಗಳು ನಾನು 15 ವರ್ಷ ಪ್ರಾಯದವನು, ಮತ್ತು “ಯುವ ಜನರು ಪ್ರಶ್ನಿಸುವುದು . . . ನಾನು ಕಂಪ್ಯೂಟರ್‌ ಅಥವಾ ವಿಡಿಯೊ ಆಟಗಳನ್ನು ಆಡಬೇಕೊ?” (ಸೆಪ್ಟೆಂಬರ್‌ 8, 1996) ಎಂಬ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಅದು ನಿಜವಾಗಿಯೂ ಅಂತಹ ಆಟಗಳ ಕೆಟ್ಟ ಪಾರ್ಶ್ವವನ್ನು ತೋರಿಸಿತು, ಮತ್ತು ಅವನ್ನು ಆಡುವುದರಿಂದ ಆಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ತೂಗಿನೋಡುವಂತೆ ಅದು ಕ್ರೈಸ್ತರಿಗೆ ಸಹಾಯಮಾಡುವುದು.

ಎಫ್‌. ಆರ್‌., ಇಂಡೊನೇಷಿಯ

ನಾನು 17 ವರ್ಷ ಪ್ರಾಯದವನು, ಮತ್ತು ನಾನು ಹಿಂಸಾತ್ಮಕ ಕಂಪ್ಯೂಟರ್‌ ಆಟಗಳನ್ನು ಪ್ರೀತಿಸುತ್ತಿದ್ದೆ. ಅವು ನನ್ನ ಮೇಲೆ ಪ್ರಭಾವ ಬೀರುವುದಿಲ್ಲವೆಂದು ನಾನು ಆಲೋಚಿಸಿದೆ, ಆದರೆ ನಾನು ಅಂತಹ ಆಟಗಳಿಗೆ, ವಿಶೇಷವಾಗಿ ನೀವು ವಿವರಿಸಿದಂತಹ ಹಿಂಸಾತ್ಮಕ ರೀತಿಯದ್ದಕ್ಕೆ, ಬಹು ವ್ಯಸನಿಯಾದೆ. ಈಗ ನಾನು, ಹಿಂಸಾಚಾರಕ್ಕೆ ಹಾಗೂ ರಕ್ತಪಾತಕ್ಕೆ ಸಂಬಂಧಿಸಿದ್ದ ನನ್ನ ಎಲ್ಲಾ ಕಂಪ್ಯೂಟರ್‌ ಡಿಸ್ಕ್‌ಗಳನ್ನು ನಾಶಮಾಡಿದ್ದೇನೆ. ಪರಿಣಾಮವೇನು? ನನಗೆ ಮನಸ್ಸು ಹಗುರವಾದಂತೆ ಅನಿಸುತ್ತದೆ, ಮತ್ತು ಯೆಹೋವ ದೇವರ ಕುರಿತು ಅಭ್ಯಾಸಿಸುವುದರಲ್ಲಿ, ಕಲಿಯುವುದರಲ್ಲಿ, ಹಾಗೂ ಮಾತಾಡುವುದರಲ್ಲಿ ಕಳೆಯಲು ನನಗೆ ಹೆಚ್ಚಿನ ಸಮಯವಿದೆ.

ಎಸ್‌. ಎ., ಗ್ರೀಸ್‌

ನಿರಾಶ್ರಿತ ಬಿಕ್ಕಟ್ಟು ನಾನು ಬುರುಂಡಿಯಿಂದ ಬಂದ ಒಬ್ಬ ನಿರಾಶ್ರಿತ, ಮತ್ತು “ನಿರಾಶ್ರಿತ ಬಿಕ್ಕಟ್ಟು—ಎಂದಾದರೂ ಅಂತ್ಯಗೊಂಡೀತೆ?” (ಸೆಪ್ಟೆಂಬರ್‌ 8, 1996) ಎಂಬ ಲೇಖನಮಾಲೆಗಾಗಿ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಬಯಸುತ್ತೇನೆ. ಈ ವಿಷಯದ ಕುರಿತಾದ ಯೆಹೋವನ ದೃಷ್ಟಿಕೋನವನ್ನು ಮತ್ತು ಹೇಗೆ ಪುರಾತನ ಕಾಲಗಳಲ್ಲಿ, ತನ್ನ ಜನರು ನಿರಾಶ್ರಿತರನ್ನು ಪ್ರೀತಿ ಹಾಗೂ ದಯೆಯಿಂದ ಉಪಚರಿಸುವಂತೆ ಆತನು ತಿಳಿಸಿದನು ಎಂಬುದನ್ನು ಕಲಿಯಲು ನಾನು ಬಹಳ ಉತ್ತೇಜಿತನಾದೆ. ಈ ಲೇಖನಗಳಿಗಾಗಿ ನಾನು ನಿಮಗೆ ಉಪಕಾರ ಹೇಳುತ್ತೇನೆ; ಅವು ನಿಜವಾಗಿಯೂ ನನ್ನನ್ನು ಸಂತೈಸಿದವು.

ಡಿ. ಎಮ್‌., ಕೆನ್ಯ

ಬಸ್‌ ದುರಂತ “ಯೆಹೋವನ ಬಲದಿಂದ ದುರಂತವನ್ನು ಜಯಿಸುವುದು” (ಸೆಪ್ಟೆಂಬರ್‌ 8, 1996) ಎಂಬ ಲೇಖನವನ್ನು ಓದುತ್ತಿರುವಾಗ ನನಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ ಏಕೆಂದರೆ ಅದು ನನ್ನನ್ನು ವೈಯಕ್ತಿಕವಾಗಿ ಬಾಧಿಸಿತು. ನಾನು ಕೂಡ ನನ್ನ ಅತ್ಯಾಪ್ತ ಸ್ನೇಹಿತೆಯೊಂದಿಗೆ ಒಂದು ಅಪಘಾತದಲ್ಲಿ ಸಿಕ್ಕಿಬಿದ್ದಿದ್ದೆ. ಗಂಭೀರವಾದ ಗಾಯಗಳ ಕಾರಣ ಅವಳು ಕೆಲವು ತಾಸುಗಳ ಬಳಿಕ ತೀರಿಕೊಂಡಳು. ನಾನು ಬದುಕಿ ಉಳಿದು, ಅವಳು ಉಳಿಯದಿದ್ದಕ್ಕಾಗಿ, ಅನಂತರದ ಐದು ವರುಷಗಳಲ್ಲಿ ದುಃಖದ ಮತ್ತು ದೋಷದ ತೀವ್ರ ಭಾವನೆಗಳನ್ನು ಅಂಗೀಕರಿಸಲು ಹಾಗೂ ನಿಭಾಯಿಸಲು ನಾನು ಕಲಿತೆ. ಯೆಹೋವನು ನನ್ನ ಪ್ರಿಯ ಸ್ನೇಹಿತೆಯನ್ನು ನೆನಪಿಸಿಕೊಳ್ಳುವನೆಂದು ನಾನು ಆತನಲ್ಲಿ ಭರವಸೆಯಿಡುತ್ತೇನೆ. ಸ್ಪೆಯ್ನ್‌ನಲ್ಲಿ ನಡೆದ ಈ ದುರಂತದಲ್ಲಿ ತಮ್ಮ ಪ್ರಿಯ ಜನರನ್ನು ಕಳೆದುಕೊಂಡವರಿಗಾಗಿಯೂ ನನಗೆ ಅನುಕಂಪವಿದೆ.

ಜೆ. ಟಿ., ಅಮೆರಿಕ

ತೊದಲುವುದು “ತೊದಲುಮಾತಿನವರ ನಾಲಿಗೆಯೂ ನುಡಿಯುವದು” (ಸೆಪ್ಟೆಂಬರ್‌ 8, 1996) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಪೆಟರ್‌ ಕುಂಟ್ಸ್‌ರ ಅನುಭವವು ನನ್ನನ್ನು ಬಹಳವಾಗಿ ಬಲಪಡಿಸಿತು. ನಾನು ಕೂಡ ತೊದಲುತ್ತೇನೆ. ಒಂದು ಬೈಬಲ್‌ ಭಾಷಣವನ್ನು ಕೊಡುವ ಮೊದಲು, ನನ್ನನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿಕೊಳ್ಳಲು ನನಗೆ ಸಹಾಯಮಾಡುವಂತೆ ಯೆಹೋವನಲ್ಲಿ ನಾನು ಯಾವಾಗಲೂ ಕೇಳಿಕೊಳ್ಳುತ್ತೇನೆ.

ಎಮ್‌. ಎಮ್‌., ಇಟಲಿ

ನಾನು 20 ವರುಷದವನಾದಾಗ, ಇತರರೊಂದಿಗೆ ಮಾತಾಡುವುದು ಹಾಗೂ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದ ವೇದಿಕೆಯಿಂದ ಮಾತಾಡುವುದು ನನಗೆ ಕಷ್ಟವಾಗುತ್ತಿರುವುದನ್ನು ನಾನು ಕಂಡುಕೊಂಡೆ. ಒಂದು ನೇಮಕದ ನಂತರ ನಾನು ಬಹಳವಾಗಿ ಬೆವರುತ್ತಿದ್ದೆ ಮತ್ತು ಅಸಾಮಾನ್ಯವಾದ ಬಳಲಿಕೆಯಾಗುತ್ತಿತ್ತು. ಈ ಸಮಸ್ಯೆಯಿದ್ದಾಗ್ಯೂ ಯೆಹೋವನನ್ನು ಸೇವಿಸುತ್ತಿರುವ ಒಬ್ಬ ಜೊತೆ ಕ್ರೈಸ್ತನ ಅನುಭವವನ್ನು ಓದುವುದು ಖಂಡಿತವಾಗಿಯೂ ಬಹಳ ಉತ್ತೇಜನಕರವಾಗಿದೆ. ವಿಷಯಗಳ ಕುರಿತು ಒಂದು ಸಕಾರಾತ್ಮಕ ದೃಷ್ಟಿಯನ್ನು ಹೊಂದಿರುವಂತೆ ಇದು ನನಗೆ ಸಹಾಯಮಾಡಿದೆ.

ಎಮ್‌. ಎಸ್‌., ಜಪಾನ್‌

ಈ ಅನುಭವವನ್ನು ಪ್ರಕಟಿಸಿದ್ದಕ್ಕಾಗಿ ನಿಮಗೆ ಉಪಕಾರ ಹೇಳಲು ನಾನು ಪ್ರೇರಿಸಲ್ಪಟ್ಟಿದ್ದೇನೆ. ಬಾಲ್ಯದಿಂದಲೂ ನನಗೆ ಇದೇ ಸಮಸ್ಯೆಯಿತ್ತು. ಪೆಟರ್‌ನಂತೆ, ನಾನು ಸಭೆಯಲ್ಲಿ ಒಬ್ಬ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದೇನೆ, ಮತ್ತು ನನ್ನ ನೇಮಕಗಳನ್ನು ಪೂರೈಸುವ ಬಲಕ್ಕಾಗಿ ನಾನು ಯೆಹೋವನ ಮೇಲೆ ಆತುಕೊಳ್ಳಬೇಕಾಗಿದೆ. ಈಗ ನಾನು ಇತರರಿಗೆ ಅವರ ಮಾತಾಡುವಿಕೆಯ ಬಗ್ಗೆ ಸಹಾಯಮಾಡುತ್ತಾ, ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ನಡಿಸುತ್ತೇನೆ.

ಎನ್‌. ಓ. ಎನ್‌., ನೈಜೀರಿಯ

ಪಾಂಪೆ ನಾನು ಇತ್ತೀಚೆಗೆ, “ಪಾಂಪೆ—ಸಮಯವು ಕದಲದೆ ನಿಂತ ಸ್ಥಳ” (ಅಕ್ಟೋಬರ್‌ 8, 1996) ಎಂಬ ನಿಮ್ಮ ಲೇಖನವನ್ನು ಓದಿ, ಸಂಪೂರ್ಣವಾಗಿ ಆನಂದಿಸಿದೆ. ಇದು ಬಹುಮಟ್ಟಿಗೆ ನಾವು ಅಲ್ಲಿಗೆ ಭೇಟಿಕೊಟ್ಟಂತೆ ಇತ್ತು! ಆದರೆ ನಾನು ಒಂದು ವಿಷಯದ ಕುರಿತಾದ ಸ್ಪಷ್ಟತೆಯನ್ನು ಗಣ್ಯಮಾಡುವೆನು. ಆ ಲೇಖನವು ಹೇಳುವುದು: ಪಾಂಪೆಯನ್ನು ಸಂದರ್ಶಿಸುವ ಯಾವನೂ “ಜೋಳವನ್ನು (ಇಂಗ್ಲಿಷ್‌ನಲ್ಲಿ) ಬೀಸಲಿಕ್ಕಾಗಿರುವ ಗಿರಣಿಗಳನ್ನು ಇನ್ನೂ ಅವಲೋಕಿಸಸಾಧ್ಯವಿದೆ.” ನನ್ನದು ತಪ್ಪಿದ್ದರೆ ಸರಿಪಡಿಸಿ, ಆದರೆ ಜೋಳವೆಂಬ ಧಾನ್ಯವು ಅಮೆರಿಕ ಭೂಖಂಡಕ್ಕೆ ತಿಳಿದಿದೆ ಹೊರತು ಕ್ರಿಸ್ಟೋಫರ್‌ ಕೊಲಂಬಸ್‌ನ ದಿವಸಗಳ ತನಕವೂ ಯೂರೋಪಿನವರಿಗೆ ತಿಳಿದಿರಲಿಲ್ಲವಲ್ಲ?

ಆರ್‌. ಡಿ., ಅಮೆರಿಕ

ಈ ವಿಷಯದಲ್ಲಿ ಯಾವುದೇ ಗಲಿಬಿಲಿಯನ್ನು ನಾವು ಉಂಟುಮಾಡಿದ್ದರೆ, ಕ್ಷಮಿಸಿರಿ. “ಧಾನ್ಯ”ವನ್ನು (ಇಂಗ್ಲಿಷ್‌ನಲ್ಲಿ) ಬೀಸಲಿಕ್ಕಾಗಿರುವ ಗಿರಣಿಗಳನ್ನು ಅಲ್ಲಿ ಅವಲೋಕಿಸಸಾಧ್ಯವಿದೆ ಎಂಬುದಾಗಿ ಹೇಳಿದ್ದರೆ ಉತ್ತಮವಾಗಿರುತ್ತಿತ್ತು. ಆಸಕ್ತಿಕರವಾಗಿ, “ಜೋಳ”ಕ್ಕಾಗಿರುವ ಇಂಗ್ಲಿಷ್‌ ಪದವು ಬರಿಯ ಗೋಧಿ ಅಥವಾ ಓಟ್ಸ್‌ನಂತಹ “ಏಕದಳ ಧಾನ್ಯದ ಪೈರಿನ ಬೀಜಗಳನ್ನು” ಅರ್ಥೈಸಬಲ್ಲದು.—ಸಂಪಾ.

ಬಾಲ್ಯದಿಂದಲೂ ನಾನು ಪುರಾತನ ಇತಿಹಾಸದಿಂದ ಆಕರ್ಷಿಸಲ್ಪಟ್ಟಿದ್ದೇನೆ. ನಿರ್ದಿಷ್ಟವಾಗಿ ಪಾಂಪೆಯ ಇತಿಹಾಸವು ಯಾವಾಗಲೂ ನನ್ನ ಮನಸ್ಸನ್ನು ಸೆರೆಹಿಡಿದಿದೆ. ನಾನು ಈ ಲೇಖನವನ್ನು ಓದಿದಾಗ, ಆ ಪಟ್ಟಣದೊಳಗೆ ನಾನು ಸಂಚಾರಮಾಡುತ್ತಿದ್ದೇನೋ ಎಂಬಂತೆ ನನಗೆ ಅನಿಸಿತು. ಅದ್ಭುತಕರ! ನನಗೆ ಹೊಸದಾಗಿದ್ದಂತಹ ಅನೇಕ ವಿವರಗಳನ್ನು ನಾನು ಕಲಿತುಕೊಂಡೆ. ನಮ್ಮ ದಿನದ ಅಂತ್ಯದ ಸಮಯದೊಂದಿಗೆ ಮಾಡಿದ ಹೋಲಿಕೆಯೂ ನನಗೆ ಇಷ್ಟವಾಯಿತು. ನಾನು ಭೇಟಿನೀಡಲಾಗದ ಸ್ಥಳಗಳನ್ನು ತಿಳಿದುಕೊಳ್ಳಲು ನನಗೆ ಸಹಾಯಮಾಡಿದ್ದಕ್ಕಾಗಿ ನಿಮಗೆ ಉಪಕಾರ.

ಜೆ. ಎಸ್‌. ಎ., ಬ್ರೆಸಿಲ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ