ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 4/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1996
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1996
ಇನ್ನಷ್ಟು
ಎಚ್ಚರ!—1996
g96 4/8 ಪು. 30

ನಮ್ಮ ವಾಚಕರಿಂದ

ನಿದ್ರೆ “ನಿಮ್ಮ ದೇಹಕ್ಕೆ ನಿದ್ರೆಯು ಅಗತ್ಯವಾಗಿರುವುದರ ಕಾರಣ” (ಜೂನ್‌ 8, 1995) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರಗಳು. ಇದು ನನ್ನ ಕಣ್ಣುಗಳನ್ನು ತೆರೆಸಿತೆಂದು ನಾನು ಹೇಳಲೇಬೇಕು. ಒಬ್ಬ ವೈದ್ಯಕೀಯ ವಿದ್ಯಾರ್ಥಿಯೋಪಾದಿ, ನನ್ನ ಅಧ್ಯಯನಗಳೊಂದಿಗೆ ಸಮವಾಗಿ ಮುಂದುವರಿಯಲು ಪ್ರಯತ್ನಿಸುತ್ತಾ, ನಾನು ನಿದ್ರೆಯ ಅನೇಕ ಅಮೂಲ್ಯ ತಾಸುಗಳನ್ನು ಕಳೆದುಕೊಳ್ಳುತ್ತೇನೆ. ಈ ಲೇಖನದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಪರಿಣಾಮಗಳಲ್ಲಿ ಕೆಲವನ್ನು ನಾನು ಅನುಭವಿಸಿದ್ದೇನೆ. ಹೆಚ್ಚು ಉತ್ತಮವಾದ ನಿದ್ರಾ ವಿಧಾನಗಳನ್ನು ಬೆಳೆಸಿಕೊಳ್ಳಲು ನಾನು ಪ್ರಯತ್ನಿಸುವೆ.

ಎಲ್‌. ಏಚ್‌., ಟ್ರಿನಿಡಾಡ್‌

ಅಜ್ಜಅಜ್ಜಿಯರು “ನೀವು ಅಜ್ಜಅಜ್ಜಿಯರನ್ನು ಮಾನ್ಯಮಾಡುತ್ತೀರೊ?” (ಜುಲೈ 8, 1995) ಎಂಬ ಸರಣಿಯನ್ನು ನಾನು ಓದಿದಾಗ ಆನಂದದ ಕಣ್ಣೀರನ್ನು ನಾನು ಸುರಿಸಿದೆ. ನಾನು ನನ್ನ ಅತ್ತೆಮಾವಂದಿರೊಂದಿಗೆ ವಿಪರೀತ ಕಾಠಿನ್ಯದಿಂದ ಜೀವಿಸುತ್ತಿದ್ದೆ, ಆದುದರಿಂದ ನಿಮ್ಮ ಲೇಖನವು ಸಕಾಲದಲ್ಲಿ ಬಂತು. ಇದು, ಅವರಿಗೆ ಅರ್ಹವಾಗಿದ್ದ ಸೂಕ್ತವಾದ ಗೌರವದೊಂದಿಗೆ ನಾನು ಅವರನ್ನು ಉಪಚರಿಸುತ್ತಿರಲಿಲ್ಲವೆಂಬುದನ್ನು ನಾನು ಗ್ರಹಿಸಿಕೊಳ್ಳುವಂತೆ ಮಾಡಿತು. ಅಗತ್ಯವಾದ ಬದಲಾವಣೆಗಳನ್ನು ಮಾಡಲು ನಾನು ಮುಂದುವರಿದೆ, ಮತ್ತು ನಾವೆಲ್ಲರೂ ಹೆಚ್ಚು ಸಂತೋಷಿತರಾಗಿದ್ದೇವೆ.

ಎ. ಟಿ., ಕೆನಡ

ನನ್ನ ತಂದೆಯನ್ನು ಒಂದು ನರ್ಸಿಂಗ್‌ ಹೋಮ್‌ಗೆ ನಾವು ಸೇರಿಸಬೇಕಾದಾಗ, ಒಂದು ವಾರಕ್ಕೆ ಮೂರು ಬಾರಿ ಅವರನ್ನು ಭೇಟಿ ಮಾಡಲು ನಾವು ನಿರ್ಧರಿಸಿದೆವು. ಆ ವಚನವನ್ನು ನಾವು ಎರಡು ವರ್ಷಗಳಿಂದ ಕಾಪಾಡಿಕೊಂಡುಬಂದಿದ್ದೇವೆ. ಮನೆಯ ಪ್ರತಿದಿನದ ಸಣ್ಣ ವಾರ್ತೆ ಅವರಿಗೆ ಬಹಳ ಪ್ರಾಮುಖ್ಯವಾಗಿದೆ! ಈ ನಿಯತಕ್ರಮವನ್ನು ಕಾಪಾಡಿಕೊಳ್ಳುವುದು, ಒಂದು ದೃಢ ನಿರ್ಧಾರವನ್ನು ಕೇಳಿಕೊಳ್ಳುತ್ತದೆ, ಆದರೆ ಮೊಮ್ಮಕ್ಕಳು ಹಾಗೂ ಅಜ್ಜಅಜ್ಜಿಯರು ಇದರಿಂದ ಪ್ರಯೋಜನಹೊಂದುತ್ತಾರೆ.

ಪಿ. ಎಲ್‌., ಅಮೆರಿಕ

ಒಬ್ಬ ಕ್ಯಾಥೊಲಿಕಳೋಪಾದಿ, ಲೇಖನಗಳು ಕ್ರೈಸ್ತಧರ್ಮದ ಸೂತ್ರಗಳು ಅಥವಾ ಧರ್ಮದ ಮೇಲೆ ಕೇಂದ್ರೀಕರಿಸಲಿಲ್ಲವೆಂಬ ಸಂಗತಿಯಿಂದ ನಾನು ಪ್ರಭಾವಿತಳಾದೆ. ಪ್ರಾಯೋಗಿಕವಾಗಿ ಅಲಕ್ಷಿಸಲ್ಪಟ್ಟಿರುವ ಒಂದು ಅಗತ್ಯದೊಂದಿಗೆ ನೀವು ಧೈರ್ಯವಾಗಿ ವ್ಯವಹರಿಸಿದ್ದೀರಿ.

ಎ. ಬಿ., ಕೊಸ್ಟರೀಕ

ದುರ್ವಾಸನೆಯ ಉಸಿರು “ದುರ್ವಾಸನೆಯ ಉಸಿರಿನ ವಿಷಯದಲ್ಲಿ ನೀವೇನು ಮಾಡಬಲ್ಲಿರಿ?” ಎಂಬ ಬೋಧಪ್ರದ ಲೇಖನಕ್ಕಾಗಿ ನಾನು ನಿಮಗೆ ಉಪಕಾರಸಲ್ಲಿಸಬೇಕು. (ಜುಲೈ 8, 1995) ಅದು ನನ್ನ ಸಮಸ್ಯೆಯಾಗಿತ್ತು! ದುರ್ವಾಸನೆಯ ಉಸಿರಿನ ಸಮಸ್ಯೆಯಿರುವುದು ನಿಮ್ಮನ್ನು ಖಿನ್ನರನ್ನಾಗಿ ಮಾಡುತ್ತದೆಂಬುದು ಸತ್ಯ. ನಾನು ಎರಡು ಬಾರಿ ದಂತ ವೈದ್ಯರನ್ನು ಭೇಟಿಯಾದೆ, ಆದರೆ ಆ ದುರ್ವಾಸನೆಯು ಇನ್ನೂ ಉಳಿಯಿತು. ಈ ಲೇಖನದಲ್ಲಿರುವ ಸಲಹೆಗಳನ್ನು ನಾನು ಅನ್ವಯಿಸಿದೆ, ಮತ್ತು ಅವು ಕಾರ್ಯನಡಿಸುತ್ತಿವೆ. ಭೂಗೋಲದ ಸುತ್ತಲೂ ಇರುವ ಜನರಿಗೆ ಸಹಾಯ ಮಾಡುವುದನ್ನು ದಯವಿಟ್ಟು ಮುಂದುವರಿಸಿರಿ.

ಆರ್‌. ಓ. ಐ., ನೈಜೀರಿಯ

ಭಾರತದ ಸ್ತ್ರೀಯರು “ಭಾರತದ ಸ್ತ್ರೀಯರು—21ನೆಯ ಶತಮಾನದೊಳಗೆ ಪ್ರವೇಶಿಸುತ್ತಿರುವುದು” ಎಂಬ ಲೇಖನವನ್ನು ನಾನು ಗಣ್ಯಮಾಡಿದೆ. (ಆಗಸ್ಟ್‌ 8, 1995) ನನ್ನ ಸ್ವಂತ ಸಂಸ್ಕೃತಿಗಿಂತ ತೀರ ಭಿನ್ನವಾದ ಒಂದು ಸಂಸ್ಕೃತಿಯನ್ನು ಭಾರತವು ಹೊಂದಿರುವುದರಿಂದ, ನಾನು ಯಾವಾಗಲೂ ಅದನ್ನು ಆಕರ್ಷಕವಾದದ್ದಾಗಿ ಕಂಡುಕೊಂಡೆ. ದೇವರ ರಾಜ್ಯದ ಕೆಳಗೆ ಮಾತ್ರವೇ ಭಾರತೀಯ ಸ್ತ್ರೀಗೆ ನಿಜ ಬಿಡುಗಡೆಯು ಬರುವುದೆಂಬುದನ್ನು ನಿಮ್ಮ ಲೇಖನವು ತೋರಿಸಿತು. ತಾವು ಗೌರವಿಸುವ ಗಂಡಂದಿರಿಂದ ಎಲ್ಲಾ ಸ್ತ್ರೀಯರು ನಿಜವಾಗಿಯೂ ಪ್ರೀತಿಸಲ್ಪಡುವ ಹಾಗೂ ಪೋಷಿಸಲ್ಪಡುವ ಸಮಯಕ್ಕಾಗಿ ನಾನು ಎದುರುನೋಡುತ್ತೇನೆ.

ಡಬ್ಲ್ಯೂ. ಎಸ್‌., ಬ್ರಿಟಿಷ್‌ ಕೊಲಂಬಿಯ

ಋತುಬಂಧ ಸ್ತ್ರೀರೋಗಸಂಬಂಧಿತ ಔಷಧಗಳಲ್ಲಿ ವೈಶಿಷ್ಟ್ಯವುಳ್ಳದ್ದಾಗಿರುವ ಒಂದು ಔಷದವಸ್ತುಗಳ ಕಂಪೆನಿಯನ್ನು ನಾವು ನಿರ್ವಹಿಸುತ್ತೇವೆ. “ಹೆಚ್ಚು ಉತ್ತಮವಾದ ತಿಳಿವಳಿಕೆಯನ್ನು ಪಡೆದುಕೊಳ್ಳುವುದು” (ಫೆಬ್ರವರಿ 22, 1995, ಇಂಗ್ಲಿಷ್‌) ಎಂಬ ಶಿರೋನಾಮವುಳ್ಳ, ಋತುಬಂಧದ ಕುರಿತಾದ ಲೇಖನವನ್ನು ಅತ್ಯಂತ ಆಸಕ್ತಿಕರವಾದದ್ದಾಗಿ ನಾವು ಕಂಡುಕೊಂಡೆವು, ಮತ್ತು ಆ ವಿಷಯದ ಕುರಿತು ನೀವು ಒಂದು ಲೇಖನವನ್ನು ಬರೆದುದರಿಂದ ನಾವು ಸಂತೋಷಗೊಂಡಿದ್ದೇವೆ. ಹಾಗಿದ್ದರೂ, “ಎಸ್ಟ್ರೋಜನ್‌ ಪುನರ್‌ಭರ್ತಿ ಮಾಡುವ ಚಿಕಿತ್ಸೆಯ ಕುರಿತಾಗಿ ಏನು?” ಎಂಬ ರೇಖಾಚೌಕವು ಹೇಳುವುದೇನಂದರೆ, “ಹಾರ್ಮೋನ್‌ ಪುನರ್‌ಭರ್ತಿ ಮಾಡುವ ಕಟ್ಟುಪಾಡಿಗೆ ಪ್ರೊಜೆಸ್ಟರಾನನ್ನು ಕೂಡಿಸುವುದು . . . ಹೃದ್ರೋಗದ ಮೇಲಿನ ಎಸ್ಟ್ರೋಜನ್‌ನ ಪ್ರಯೋಜನಕರವಾದ ಪರಿಣಾಮದ ಮೇಲೆ ತಡೆಯನ್ನುಂಟುಮಾಡುತ್ತದೆ.” ಇದು ವಿಶೇಷವಾಗಿ ಸ್ವಾಭಾವಿಕ ಪ್ರೊಜೆಸ್ಟಿನ್‌ಗಳ ವಿಷಯದಲ್ಲಿ ಯಾವಾಗಲೂ ಸತ್ಯವಾಗಿರುವುದಿಲ್ಲ.

ಡಾ. ಟಿ. ಡಬ್ಲ್ಯೂ. ಮತ್ತು ಜೆ. ಕೆ., ಜರ್ಮನಿ

ನಮ್ಮನ್ನು ಸದ್ಯೋಚಿತಗೊಳಿಸಿದುದಕ್ಕಾಗಿ ನಿಮಗೆ ಉಪಕಾರ. ಹೃದ್ರೋಗದ ಅಪಾಯವನ್ನು ಅಧಿಕಗೊಳಿಸುತ್ತಾ, ಪ್ರೊಜೆಸ್ಟಿನ್‌ಗಳು ಏಚ್‌ಡಿಎಲ್‌ (HDL)ನ ಅಥವಾ “ಒಳ್ಳೆಯ” ಕಲೆಸ್ಟರಾಲ್‌ನ ಮಟ್ಟಗಳನ್ನು ಕಡಿಮೆಗೊಳಿಸಬಹುದೆಂದು ಹೆಚ್ಚು ಹಳತಾದ ಮೂಲಗಳು ಸೂಚಿಸಿರುವಾಗ, ತೀರ ಇತ್ತೀಚೆಗಿನ ಸಂಶೋಧನೆಯು ಬೇರೆ ರೀತಿಯಲ್ಲಿ ಸೂಚಿಸುತ್ತದೆ. “ಕೇವಲ ಎಸ್ಟ್ರೋಜನ್‌ ಅಥವಾ ಪ್ರೊಜೆಸ್ಟಿನ್‌ನೊಂದಿಗೆ ಸಂಯುಕ್ತಗೊಂಡು [“ಒಳ್ಳೆಯ” ಕಲೆಸ್ಟರಾಲ್‌ನ ಮಟ್ಟಗಳನ್ನು] ಉತ್ತಮಗೊಳಿಸುತ್ತದೆ” ಎಂದು, “ಜೆಎಎಮ್‌ಎ” (JAMA)ದ ಜನವರಿ 18, 1995ರ ಸಂಚಿಕೆಯಲ್ಲಿ ವರದಿಸಲ್ಪಟ್ಟ ಇತ್ತೀಚಿನ ಅಧ್ಯಯನವೊಂದು ಪ್ರತಿಪಾದಿಸಿತು. ಹಾರ್ಮೋನ್‌ ಚಿಕಿತ್ಸೆಗಳ ದೀರ್ಘಕಾಲಿಕ ಪರಿಣಾಮಗಳಲ್ಲಿ ಎಲ್ಲವನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲು, ಹೆಚ್ಚು ಸಂಶೋಧನೆಯು ಮಾಡಲ್ಪಡಬೇಕಾಗುವುದು ಎಂಬುದರಲ್ಲಿ ಸಂಶಯವಿಲ್ಲ.—ಸಂಪಾ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ