ಒಂದು ಆರೋಗ್ಯಕರವಾದ ಸಮಾಜವನ್ನು ಬೆಳೆಸುವುದು
ನ್ಯೂ ಆಫ್ರಿಕನ್ ಪತ್ರಿಕೆಯ ನಿಯುಕ್ತ ಸಂಪಾದಕನು ಇತ್ತೀಚೆಗೆ ಬರೆದದ್ದು: “ಇಂದು ಆಫ್ರಿಕದ ಯಾವುದೇ ದೇಶಕ್ಕೆ ಹೋಗಿರಿ ಮತ್ತು ಕಾಡುವ ದಾರಿದ್ರ್ಯದಲ್ಲಿ ಗುಂಪುಗಳು ನರಳುತ್ತಿರುವಾಗ, ಒಂದು ಚಿಕ್ಕ ಸಂಖ್ಯೆಯ ಶ್ರೀಮಂತ ಜನರಾದರೋ ಆಡಂಬರದಲ್ಲಿ ಜೀವಿಸುತ್ತಿರುವುದನ್ನು ನೀವು ಕಂಡುಕೊಳ್ಳುವಿರಿ. . . . ಈ ದಾರಿದ್ರ್ಯದ ಪಾಶವನ್ನು ನಾವು ಹೇಗೆ ತಪ್ಪಿಸಿಕೊಳ್ಳಬಲ್ಲೆವು? ಸರಳತೆಯ ಪರಿಹಾರವು: ಶ್ರೀಮಂತರನ್ನು ತೆಗೆದುಹಾಕಿ, ಸಂಪತ್ತನ್ನು ಹಂಚಿಕೊಳ್ಳುವುದೇ ಆಗಿದೆ. ನಿಜತ್ವದಲ್ಲಿ, ಇದು ಸಾಧಕವಲ್ಲ. ಪ್ರಥಮವಾಗಿ, ಎಲ್ಲರಿಗೆ ಸಾಕಾಗುವಷ್ಟು ಸಂಪತ್ತು ಇಲ್ಲ. ದ್ವಿತೀಯವಾಗಿ, ಶ್ರೀಮಂತರನ್ನು ತೆಗೆದುಹಾಕಿರಿ ಮತ್ತು ತತ್ಕ್ಷಣವೇ ಮತ್ತೊಬ್ಬ ಶ್ರೀಮಂತರಿಂದ ಅವರು ಪುನಃ ಸ್ಥಾಪಿಸಲ್ಪಡುವರು. ತೃತೀಯವಾಗಿ, ಸಮಾಜ ಸ್ವಾಮ್ಯವಾದ ಆದರ್ಶ ಧ್ಯೇಯದಲ್ಲಿನ ಪ್ರಯೋಗಗಳು, ಕೇವಲ ದಾರಿದ್ರ್ಯವನ್ನು ಸಮವಾಗಿ ಹಂಚುವುದರಲ್ಲಿ [ಸಫಲಗೊಂಡಿವೆ.]
“ಎಲ್ಲ ದೇಶಗಳಲ್ಲಿ ಎಲ್ಲ ವಯಸ್ಸಿನವರಲ್ಲಿ ಸಫಲತೆಯನ್ನು ಹೊಂದಿರುವ ವಿಕಸಿತ ಸ್ಥಿತಿಯ ಏಕಮಾತ್ರ ಪರಿಹಾರವು: ಒಬ್ಬೊಬ್ಬ ವ್ಯಕ್ತಿಯ ವಿಕಸನವೇ ಆಗಿದೆ. ಸಮಾಜಗಳನ್ನು ರೂಪಿಸುವವರು ಸ್ವತಃ ಜನರಾಗಿದ್ದಾರೆ. ಸುಶಿಕ್ಷಿತರು, ಸ್ವಸ್ಥರು, ದೃಢಾಭಿಪ್ರಾಯವುಳ್ಳವರು ಮತ್ತು ಹೊಸ ತಯಾರಿಕೆಗಳನ್ನು ಕಂಡುಹಿಡಿಯುವ ಜನರು, ಸ್ವಭಾವ ಸಿದ್ಧವಾಗಿಯೇ ಸ್ವಸ್ಥವಾದ, ಹುರುಪಿನ ಸಮಾಜಗಳನ್ನು ಉತ್ಪಾದಿಸುವರು.”
ನಿಯುಕ್ತ ಸಂಪಾದಕನು ಮಾದರಿಯೊಂದಕ್ಕಾಗಿ ಹುಡುಕುತ್ತಿದ್ದಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಂದನ್ನು ಅವನು ಕಂಡುಕೊಳ್ಳಸಾಧ್ಯವಿತ್ತು. ಆಫ್ರಿಕದಲ್ಲಿ, ದಿಟವಾಗಿ ಲೋಕದಾದ್ಯಂತ, ಭೌಗೋಲಿಕ ಸಮಾಜವೊಂದರ ಶಿಕ್ಷಿತ, ಸ್ವಸ್ಥ ಸದಸ್ಯರಾಗಿ ಪರಿಣಮಿಸಲು ಜನರಿಗೆ ಸಹಾಯ ನೀಡುವುದರಲ್ಲಿ ಸಾಕ್ಷಿಗಳು ಕಾರ್ಯ ನಡೆಸುತ್ತಿದ್ದಾರೆ. ಇತರ ವಿಷಯಗಳೊಂದಿಗೆ, ಅನಕ್ಷರಸ್ಥ ವಯಸ್ಕರಿಗೆ ಓದುಬರಹವನ್ನು ಅವರು ಕಲಿಸುತ್ತಾರೆ. ತಮ್ಮ ಪ್ರಕಾಶನಗಳ ಮುಖಾಂತರ, ಆರೋಗ್ಯ ತತ್ವ, ಆರೋಗ್ಯ ಆರೈಕೆ, ಮತ್ತು ಕುಟುಂಬ ಸಂಬಂಧಗಳಲ್ಲಿನ ಉಪದೇಶವನ್ನು ಅವರು ನೀಡುತ್ತಾರೆ. ತಮ್ಮ ಕೂಟಗಳಲ್ಲಿ ಅಂತೆಯೇ ವ್ಯಕ್ತಿಪರವಾಗಿ, ಪ್ರಾಮಾಣಿಕರು, ಪರಿಶ್ರಮಿಗಳು, ಮತ್ತು ಉತ್ಪನ್ನಕಾರಕರಾಗಿರಬೇಕೆಂಬ ಬೈಬಲ್ ಸಲಹೆಗೆ ಅನುವರ್ತಿಸಲು ಸಾಕ್ಷಿಗಳು ಒಬ್ಬರಿನೊಬ್ಬರನ್ನು ಪ್ರೋತ್ಸಾಹಿಸುತ್ತಾರೆ.
ಫಲಿತಾಂಶವು ಪ್ರಬಲವಾದ, ಲೋಕವ್ಯಾಪಕವಾಗಿ ಹತ್ತಿರ ಹತ್ತಿರ ಐವತ್ತು ಲಕ್ಷ ಜನರಿಂದ ರಚಿಸಲ್ಪಟ್ಟ ರೋಮಾಂಚಕಾರಿಯಾದ ಸಮಾಜವೊಂದಾಗಿದೆ. ಆದರೆ ಸಾಕ್ಷಿಗಳು ಇದಕ್ಕಾಗಿ ಮಾನ್ಯತೆಯನ್ನು ತೆಗೆದುಕೊಳ್ಳುವುದಿಲ್ಲ. ಅವರು ಹೀಗೆ ಹೇಳುವ ಸಜೀವ ದೇವರಿಗೆ ತಮ್ಮ ಆತ್ಮಿಕ ಏಳೆಯ್ಗನ್ನು ಅಧ್ಯಾರೋಪಿಸುತ್ತಾರೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.
ಬೈಬಲ್ ಮತ್ತು ಅದರ ವ್ಯಾವಹಾರಿಕ ಸಲಹೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಬಯಸುವುದಾದರೆ, ನಿಮ್ಮ ಸ್ಥಳಿಕ ರಾಜ್ಯ ಸಭಾಗೃಹದಲ್ಲಿನ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿರಿ, ಅಥವಾ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟ ನಿಮ್ಮ ಸಮೀಪವಿರುವ ವಿಳಾಸಕ್ಕೆ ಬರೆಯಿರಿ.