“ಇರುವೆಯ ಹತ್ತಿರ ಹೋಗಿ”
“ಅಸಾಧಾರಣವಾದ ಇರುವೆಗಳು”—ಎಂಬ ಆ ತಲೆಬರಹವು, ಯೆಹೋವನ ಸಾಕ್ಷಿಗಳ ಕ್ಷಿಪ್ರ ನಿರ್ಮಿತ ರಾಜ್ಯಸಭಾಗೃಹವೊಂದರ ಕುರಿತಾಗಿ ಕೆಲವು ವರ್ಷಗಳ ಹಿಂದೆ ವಾರ್ತಾಪತ್ರಿಕೆಯೊಂದರಲ್ಲಿ ಕಾಣಿಸಿಕೊಂಡಿತು. ಆ ತಲೆಬರಹವನ್ನು ಯಾವುದು ಪ್ರೇರಿಸಿತು? ಅಂಥ ಒಂದು ನಿರ್ಮಾಣದ ನಿವೇಶನವನ್ನು ವಿಮಾನದಿಂದ ತೆಗೆದ ಛಾಯಚಿತ್ರದಲ್ಲಿ ನೀವು ನೋಡುವಾಗ ಅದನ್ನು ಅರ್ಥೈಸಲಿಕ್ಕೆ ಕ್ಲಿಷ್ಟವಾಗೇನೂ ಇರುವುದಿಲ್ಲ. ಅದೇ ವಾರ್ತಾಪತ್ರಿಕೆಯ ಲೇಖನದಲ್ಲಿ ಉಪಶೀರ್ಷಿಕೆಯೊಂದು ವಿವರಿಸುವುದು: “ಒಂದು ನಿರ್ಮಾಣ ನಿವೇಶನದಲ್ಲಿ ಯೆಹೋವನ ಐನೂರು ಸಾಕ್ಷಿಗಳು—ಒಂದು ಸ್ವಪ್ನಾತ್ಮಕವಾದ ಇರುವೆಗೂಡು.”
ಪ್ರಾಯಶಃ ವರದಿಗಾರನು ಗ್ರಹಿಸಿದ್ದಕ್ಕಿಂತ ಹೆಚ್ಚಾಗಿ ಈ ಉಪಮೆಯು ತಕ್ಕದ್ದಾಗಿದೆ. ಬಹು ದೂರ ಮೇಲಿನಿಂದ ಒಂದು ನಿರ್ಮಾಣದ ನಿವೇಶನದ ಸುತ್ತಲು, ಕೆಲವು ನೂರಾರು ಜನರು ಸಾಗಿಹೋಗುತ್ತಿರುವುದು ಒಂದು ಇರುವೆಗೂಡಿನ ಮೇಲಿರುವ ಇರುವೆಗಳಿಗೆ ಅನುರೂಪವಾಗಿರಬಹುದೆಂಬದು ಸಮ್ಮತವೇ. ಆದರೆ ಈ ವಿದ್ಯಮಾನದಲ್ಲಿ ಅನುರೂಪವು ತೋರ್ಕೆಗಿಂತ ಹೆಚ್ಚಿನದ್ದಾಗಿದೆ. ಇದು ಏಕೆ? ಯೆಹೋವನ ಸಾಕ್ಷಿಗಳು ಜ್ಞಾನೋಕ್ತಿ 6:6ರಲ್ಲಿರುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಅದು ಹೇಳುವುದು: “ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು (“ವಿವೇಕ,” NW) ತಂದುಕೋ.” ಇರುವೆಗಳನ್ನು ಲಕ್ಷ್ಯವಿಟ್ಟು ನೋಡುವ ಮೂಲಕ ಒಬ್ಬನು ಹೇಗೆ ವಿವೇಕಿಯಾಗಸಾಧ್ಯವಿದೆ?
ಒಂದು ವಿಷಯಕ್ಕಾಗಿ, ಇರುವೆಗಳು ಅಧಿಕತಮವನ್ನು ಪೂರೈಸುತ್ತವೆ. ಬೈಬಲ್ ಎನ್‌ಸೈಕ್ಲೋಪೀಡಿಯಾ ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಅವಲೋಕಿಸುವುದು: “ಅವುಗಳು ಭವಿಷ್ಯತ್ತಿಗಾಗಿ ಹುಟ್ಟರಿವಿನಿಂದ ತಯಾರಿಸುವುದು ಮಾತ್ರ ಗಮನಾರ್ಹವಲ್ಲ, ಅವುಗಳ ಪಟ್ಟು ಹಿಡಿಯುವಿಕೆ ಮತ್ತು ದೃಢನಿಶ್ಚಯವು ಸಹ. ಅವು ಅನೇಕ ವೇಳೆ, ತಮ್ಮ ಭಾರಕ್ಕಿಂತ ಇಮ್ಮಡಿಯಾಗಿರುವ ಭಾರವನ್ನು ಬಿಗಿಯಾಗಿ ಹಿಡಿದು ಎಳೆದುಕೊಂಡು ಹೋಗುತ್ತಾ, ಆ ನಿರ್ದಿಷ್ಟವಾದ ಕೆಲಸವನ್ನು ಪೂರ್ತಿಗೊಳಿಸಲು ಸಾಧ್ಯವಿರುವುದನ್ನೆಲ್ಲ ಮಾಡುತ್ತವೆ. ಅವು ಕಡಿದಾದ ಪ್ರಪಾತದಲ್ಲಿ ಬಿದ್ದು, ಜಾರಿ, ಕೆಳಗೆ ಉರುಳಿದರೂ ಹಿಮ್ಮೆಟ್ಟಲು ನಿರಾಕರಿಸುತ್ತವೆ.”a
ತದ್ರೀತಿಯಲ್ಲಿ, ಯೆಹೋವನ ಸಾಕ್ಷಿಗಳು ನಿರ್ಮಾಣ ಸಾಮಾನುಗಳ ವಿಷಯದಲ್ಲಿ ತಮ್ಮ ದೇಹದ ಭಾರಕ್ಕಿಂತ ಇಮ್ಮಡಿಯಾದ ಭಾರವನ್ನು ಎಳೆಯದಿದ್ದರೂ, ತುಲನಾತ್ಮಕವಾಗಿ ಕೊಂಚವೇ ಸಮಯದಲ್ಲಿ ತಮ್ಮ ನಿರ್ಮಾಣ ಯೋಜನೆಗಳನ್ನು ಎಷ್ಟು ಹೆಚ್ಚಾಗಿ ಅವರು ಪೂರೈಸುತ್ತಾರೆನ್ನುವ ಮೂಲಕ ಆಗಿಂದಾಗ್ಗೆ ಅವರ ನೆರೆಹೊರೆಯವರನ್ನು ವಿಸ್ಮಯಗೊಳಿಸುತ್ತಾರೆ. ಅವರ ರಾಜ್ಯ ಸಭಾಗೃಹಗಳು ಕೇವಲ ಎರಡು ಅಥವಾ ಮೂರು ದಿನಗಳ ಕಾಲಗತಿಯಲ್ಲಿ, ತಳಪಾಯದಿಂದ ಕ್ಷಿಪ್ರವಾಗಿ ಎಬ್ಬಿಸಲ್ಪಟ್ಟು ಪೂರ್ಣಗೊಳಿಸಲ್ಪಡುವುದನ್ನು ನೋಡುವುದು ಅಸಾಮಾನ್ಯವೇನೂ ಆಗಿರುವುದಿಲ್ಲ!
ಇದೆಲ್ಲವನ್ನು ಅವರು ಹೇಗೆ ಮಾಡಿ ಮುಗಿಸುತ್ತಾರೆ? ಇನ್ನೊಂದು ಮುಖ್ಯ ಅಂಶದಲ್ಲಿ ಇರುವೆಯನ್ನು ಅನುಕರಿಸುವ ಮೂಲಕವೇ. ಇರುವೆಗಳ ಬಗ್ಗೆ ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಹೇಳುವುದು: “ಗಮನಾರ್ಹವಾಗಿ ಸಹಕಾರ ಪ್ರವೃತ್ತಿಯವುಗಳಾಗಿರುವ ಅವುಗಳು, ತಮ್ಮ ಗೂಡುಗಳನ್ನು ಬಹಳ ಶುದ್ಧವಾಗಿಡುತ್ತವೆ ಮತ್ತು ತಮ್ಮ ಜೊತೆ ಕೆಲಸಗಾರರಿಗೆ ಆಸ್ಥೆಯನ್ನು ತೋರಿಸುತ್ತವೆ, ಕೆಲವೊಮ್ಮೆ ಘಾಸಿಗೊಂಡ ಅಥವಾ ನಿತ್ರಾಣಗೊಂಡ ಇರುವೆಗಳನ್ನು ಗೂಡುಗಳಿಗೆ ಹಿಂದಿರುಗಿಸಲು ನೆರವಾಗುತ್ತವೆ.” “ಪ್ರತಿ ಬ್ರಾಂಚನ್ನು ಪ್ರತಿನಿಧಿಸುವ ಕಟ್ಟಡ ವೃತ್ತಿಯ ಸುಮಾರು 80 ಕಸಬುದಾರರ ಮತ್ತು 400 ಸ್ವಯಂಸೇವಕರ ಬೆಂಬಲದ ಮೂಲಕ ಒಂದು ಬಿಗುಪಿಲ್ಲದ ವಾತಾವರಣದಲ್ಲಿ ಪ್ರಸನ್ನತೆಯೊಂದಿಗೆ ಪೂರೈಸಿದ ಒಂದು ಮಹತ್ತರವಾದ ಪ್ರಯಾಸ” ಎಂದು ವರ್ಣಿಸುವ ಮೂಲಕ, ಮೇಲೆ ಉಲ್ಲೇಖಿಸಲ್ಪಟ್ಟ ವರದಿಗಾರನು ಸಾಕ್ಷಿಗಳ ತದ್ರೀತಿಯ ಸಹಕಾರಿ ಆತ್ಮದಿಂದ ಮನತಾಕಿಸಲ್ಪಟ್ಟಂತೆ ತೋರುತ್ತದೆ.”
ಆದರೂ, ತಮ್ಮ ರಾಜ್ಯ ಸಭಾಗೃಹವನ್ನು ಕಟ್ಟಲು ಯೆಹೋವನ ಸಾಕ್ಷಿಗಳು ಉಪಯೋಗಿಸುವ ಸಕಲ ಕಠಿನ ಪರಿಶ್ರಮ ಮತ್ತು ಸಹಕಾರವು, ಮುಂಬರುವ ವರ್ಷಗಳಲ್ಲಿ ಸಭಾಗೃಹಗಳ ಒಳಗೆ ಏನು ಸಂಭವಿಸುತ್ತದೋ ಅದರ ಮುನ್‌ರುಚಿ ಮಾತ್ರ ಆಗಿದೆ. ಅಲ್ಲಿ ಅವರು ತಮ್ಮ ಸಾರುವ ಮತ್ತು ಕಲಿಸುವ ಕೆಲಸವನ್ನು ವ್ಯವಸ್ಥಾಪಿಸುತ್ತಾ, ಆತ್ಮೋನ್ನತಿಯೂ ಶೈಕ್ಷಣಿಕವೂ ಆದ ಕೂಟಗಳನ್ನು ಸಾದರಪಡಿಸುತ್ತಾ ಕಠಿನ ಪರಿಶ್ರಮ ಮಾಡುತ್ತಾ ಮತ್ತು ಕೂಡಿ ಸಹಕರಿಸುತ್ತಾ ಮುಂದುವರಿಯುತ್ತಾರೆ. ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ಯೇಸು ಭೂಮಿಯಲ್ಲಿದ್ದಾಗ ತನ್ನ ಹಿಂಬಾಲಕರಿಗೆ ತೋರಿಸಿದ ಅದೇ ರೀತಿಯ ಪ್ರೀತಿಯ ಆಸ್ಥೆಯನ್ನು ಅವರು ಒಬ್ಬರಿನ್ನೊಬ್ಬರಿಗೆ ತೋರಿಸಲಿಕ್ಕೆ ಪ್ರಯತ್ನಿಸುತ್ತಾರೆ.—ಯೋಹಾನ 13:34, 35.
ನೀವೆಂದಾದರೂ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವೊಂದನ್ನು ನೋಡಿರುವುದಾದರೆ ಮತ್ತು ಒಳಗೆ ಏನು ನಡೆಯುತ್ತದೆಂದು ನೀವು ಕೌತುಕಗೊಂಡಿದ್ದರೆ, ಸ್ವತಃ ನೀವೇ ಬಂದು ನೋಡುವಂತೆ ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತೇವೆ. ಒಂದು ಹೃತ್ಪೂರ್ವಕವಾದ ಸ್ವಾಗತವನ್ನು ಮತ್ತು ಬೋಧಪ್ರದವಾದ ಭೇಟಿಯ ಭರವಸೆಯ ಆಶ್ವಾಸನೆಯನ್ನು ನಾವು ನಿಮಗೆ ನೀಡಬಲ್ಲೆವು.
[ಅಧ್ಯಯನ ಪ್ರಶ್ನೆಗಳು]
a ವಾಚ್‌ಟವರ್ ಬೈಬಲ್ ಆ್ಯಂಡ್ ಸೊಸೈಟಿ, ಇವರಿಂದ ಪ್ರಕಾಶಿತ.
[ಪುಟ 42 ರಲ್ಲಿರುವ ಚಿತ್ರ]
ಫ್ರ್ಯಾನ್ಸ್‌ನ ಆರಿಲ್ಯಾಕ್‌ನಲ್ಲಿ ಒಂದು ಕ್ಷಿಪ್ರ ನಿರ್ಮಿತ ರಾಜ್ಯ ಸಭಾಗೃಹ
[ಪುಟ 42 ರಲ್ಲಿರುವ ಚಿತ್ರ ಕೃಪೆ]
Line drawings: Pharaoh’s ant. Lydekker