ಶಾಲಾ ಯೋಜನೆಗಳಿಗೆ ಅಮೂಲ್ಯ ಸಹಾಯ
“ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ನಾನು ಇಂದಿನ ವರೆಗೆ ಓದಿರುವ ಪತ್ರಿಕೆಗಳಲ್ಲಿ ಅತ್ಯಂತ ಬೋಧಪ್ರದವೂ, ಓದಲು ಮತ್ತು ಅರ್ಥ ಮಾಡಿಕೊಳ್ಳಲು ಬಹಳ ಸುಲಭವೂ, ಅತ್ಯಂತ ಸಮಯೋಚಿತವೂ, ಮತ್ತು ಅತ್ಯಂತ ಉತ್ತೇಜನಕಾರಿಯೂ ಆಗಿರುವುದು ನಿಶ್ಚಯ,” ಎಂದು ಹದಿವಯಸ್ಸಿನ ಓದುಗಳೊಬ್ಬಳು ಬರೆದಳು. “ನನ್ನ ಶಾಲೆಯ ಅಧಿಕಾಂಶ ಕಾರ್ಯಯೋಜನೆಗಳಿಗಾಗಿ ಸಮಾಚಾರವು ಈ ಪತ್ರಿಕೆಗಳಿಂದ ಬಂದಿದೆ. ನಾನು ಶಾಲೆಯಲ್ಲಿ ಯಾವುದೋ ವಿಷಯವನ್ನು ಅಭ್ಯಸಿಸುತ್ತಿರುವಾಗ, ನನ್ನನ್ನು ಉತ್ತೇಜಿಸಲು ಮತ್ತು ಮುಖ್ಯ ವಿಷಯವನ್ನು ಮತ್ತು ಅದರ ಪ್ರಮುಖತೆಯನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿ ಸಹಾಯ ಮಾಡಲು ಅದೇ ವಿಷಯದ ಮೇಲಿನ ಒಂದು ಲೇಖನವು ಇದೆ.
“ಉದಾಹರಣೆಗೆ” ಅವಳು ವಿವರಿಸಿದ್ದು, “ನಾವು ಭಾಗವಹಿಸಬೇಕಾಗಿದ್ದ ವಿಜ್ಞಾನ ಪ್ರದರ್ಶನಕ್ಕೆ ಒಂದು ವಿಜ್ಞಾನ ಕಾರ್ಯಯೋಜನೆಗಾಗಿ ಮುಖ್ಯ ವಿಷಯವೊಂದು ನನಗೆ ಅಗತ್ಯವಿತ್ತು. ಕಾರ್ಯಯೋಜನೆಯು ಮೂರು ಪೋಸ್ಟರ್ಗಳು, ಒಂದು ವರದಿ, ಮತ್ತು ಒಂದು ಪ್ರತಿಕೃತಿಯನ್ನು ಅಗತ್ಯಪಡಿಸಿತು. ಆದುದರಿಂದ 1989, ಸಪ್ಟಂಬರ 8ರ ಅವೇಕ್!ನಲ್ಲಿ ಚರ್ಚಿಸಲಾಗಿದ್ದ ಸಸ್ಯಾಗಾರ ಪರಿಣಾಮದ ವಿಷಯವನ್ನು ವಿಕಸಿಸಲು ನಾನು ನಿರ್ಧರಿಸಿದೆ. ಲೇಖನಗಳಲ್ಲಿ ಕಂಡುಬಂದ ದೃಷ್ಟಾಂತಗಳ ಮೇಲೆ ನನ್ನ ಪೋಸ್ಟರ್ಗಳನ್ನು ನಾನು ಆಧರಿಸಿದೆ ಮತ್ತು ನನ್ನ ವರದಿಗಾಗಿ ಅದರಲ್ಲಿದ್ದ ಸಮಾಚಾರವನ್ನು ನಾನು ಉಪಯೋಗಿಸಿದೆ. ನನ್ನ ಜೀವವಿಜ್ಞಾನದ ಶಿಕ್ಷಕರು ನನಗೆ ಎ (A) ಗ್ರೇಡನ್ನು ಕೊಟ್ಟರು, ಮತ್ತು ಜೀವಿಪರಿಸ್ಥಿತಿ ಶಾಸ್ತ್ರ ಮತ್ತು ಸಂರಕ್ಷಣೆಯ ವಿಭಾಗಕ್ಕಾಗಿ ಪ್ರಥಮ ಸ್ಥಾನದ ಬಹುಮಾನವನ್ನು ನಾನು ಪಡೆದುಕೊಂಡೆ!”
ನಿಮ್ಮ ಮನೆಗೆ ಅಂಚೆಯ ಮೂಲಕ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಒಂದು ಪ್ರತಿ ಕಳುಹಿಸಲ್ಪಡಬೇಕೆಂದು ನೀವು ಬಯಸುವಲ್ಲಿ, ಅಥವಾ ಒಂದು ಉಚಿತ ಗೃಹ ಬೈಬಲ್ ಅಧ್ಯಯನವನ್ನು ನೀವು ಮಾಡಬಯಸುವಲ್ಲಿ, ದಯಮಾಡಿ Praharidurg Prakashan Society, Plot A/35, Nr Industrial Estate, Nangargaon, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.