ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 1/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1995
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
ಇನ್ನಷ್ಟು
ಎಚ್ಚರ!—1995
g95 1/8 ಪು. 30

ನಮ್ಮ ವಾಚಕರಿಂದ

ಪುನರವತಾರ “ಈ ಹಿಂದೆ ನೀವು ಜೀವಿಸಿದ್ದೀರೊ? ನೀವು ಪುನಃ ಜೀವಿಸುವಿರೊ?” (ಜೂನ್‌ 8, 1994) ಎಂಬ ಅತ್ಯುತ್ತಮವಾದ ಲೇಖನಗಳ ಸರಣಿಗಳಿಗಾಗಿ ನಿಮಗೆ ಉಪಕಾರ. ಮೃತರ ಸ್ಥಿತಿಯ ಕುರಿತಾದ ಸತ್ಯವನ್ನು ಈ ಲೇಖನಗಳು ಒಂದು ಸರಳವಾದ ಮತ್ತು ನ್ಯಾಯಸಮ್ಮತವಾದ ವಿಧಾನದಲ್ಲಿ ತಿಳಿಸುತ್ತವೆ. ಈ ವಿಷಯದ ಸಂಬಂಧದಲ್ಲಿ ಸತ್ಯಕ್ಕಾಗಿ ಹುಡುಕುತ್ತಿರುವ ಯಾವನಾದರೂ ನೀವು ಬರೆದಿರುವುದನ್ನು ಅಂಗೀಕರಿಸುವಂತೆ ಒತ್ತಾಯಿಸಲ್ಪಡುವನು ಎಂದು ನಾನು ನಂಬುತ್ತೇನೆ.

ಎಫ್‌. ಪಿ., ಇಟೆಲಿ

ಹಿಂದಿನ ಬಾಕ್ಸರ್‌ “ನಾನು ಪ್ರೀತಿಸಿದ್ದನ್ನು ದ್ವೇಷಿಸಲು ನಾನು ಕಲಿತೆ” (ಜೂನ್‌ 8, 1994) ಎಂಬ ಲೇಖನಕ್ಕಾಗಿ ನಿಮಗೆ ಬಹಳ ಉಪಕಾರ. ನನ್ನ ಗಂಡನ ವೈದ್ಯಕೀಯ ಸಮಸ್ಯೆಗಳಲ್ಲಿ ಕೆಲವನ್ನು ತಿಳಿಯುವಂತೆ ಆಬ್ದೂಲ್ಯೊ ನೂನ್ಯೆಸ್‌ರ ಕಥೆಯು ನಮಗೆ ಸಹಾಯ ಮಾಡಿದೆ. ಹಿಂದಿನ ಒಬ್ಬ ಬಾಕ್ಸರ್‌ನೋಪಾದಿ ಅವರೂ ಖಿನ್ನತೆಯಿಂದ ಕಷ್ಟಾನುಭವಿಸುತ್ತಾರೆ. ನಿಜವಾಗಿಯೂ, ತನ್ನ ಜೀವಿತ ಮಾರ್ಗವನ್ನು ಬದಲಾಯಿಸುವಂತೆ ನನ್ನ ಗಂಡನಿಗೆ ಸಹಾಯ ಮಾಡಿರುವಾತನು ಯೆಹೋವ ದೇವರೇ ಆಗಿದ್ದಾನೆ!

ಎಸ್‌. ಎಸ್‌., ಅಮೆರಿಕ

ವೇದನೆ ನಾನು ಒಬ್ಬ ವೃತ್ತಿಪರ ಸಂವಾಹಕನಾಗಿದ್ದೇನೆ ಮತ್ತು “ವೇದನೆರಹಿತ ಜೀವಿತವು ಶಕ್ಯವೊ?” (ಜುಲೈ 8, 1994) ಎಂಬ ನಿಮ್ಮ ಸರಣಿಗಳಿಗಾಗಿ ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಈ ವಿಷಯದ ಸಂಶೋಧನೆ ಮತ್ತು ನಿರೂಪಣೆಯಲ್ಲಿ ವ್ಯಕ್ತವಾಗಿರುವ ಒಳನೋಟ, ಸಮತೂಕತೆ, ಮತ್ತು ವಿವೇಕದಿಂದ ನಾನು ಬಹಳವಾಗಿ ಪ್ರಚೋದಿಸಲ್ಪಟ್ಟೆ. ಈ ಲೇಖನವು ವಿಶೇಷಜ್ಞರು, ರೋಗಿಗಳು ಮತ್ತು ಇತರರಿಗೆ ಅಮೂಲ್ಯವಾದ ಸಹಾಯಕವಾಗಿರುವುದು. ದೇವರ ರಾಜ್ಯದ ಕೆಳಗೆ ನಿರಂತರವಾದ ವೇದನೆಯು ಇನ್ನೆಂದಿಗೂ ಅಸ್ತಿತ್ವದಲ್ಲಿರದ ದಿನಕ್ಕಾಗಿ ಎದುರುನೋಡುತ್ತಾ, ಸಂವಾಹನ ತಂತ್ರಗಳನ್ನು ಉಪಯೋಗಿಸುತ್ತಾ ವೇದನೆಯನ್ನು ಹೋರಾಡಲು ನಾನು ಮುಂದುವರಿಯುತ್ತೇನೆ.

ಡಿ. ಟಿ., ಡೆನ್ಮಾರ್ಕ್‌

ಈ ಲೇಖನಗಳು ನನಗೆ ಹೆಚ್ಚು ಸಮಾಧಾನವನ್ನು ನೀಡಿದವು. ನನ್ನಂತೆ, ವೇದನೆಯೊಂದಿಗೆ ದಿನಾಲು ನಿಭಾಯಿಸುತ್ತಿರುವ ಇತರ ಅನೇಕರೊಂದಿಗೆ ಅವುಗಳನ್ನು ನಾನು ಹಂಚಿಕೊಂಡೆ.

ಎಮ್‌. ಜಿ., ಅಮೆರಿಕ

ಮೃದ್ವಸ್ಥಿ ತಟ್ಟೆಯು ಜಾರಿದ್ದರ ಕಾರಣ ಕಳೆದ ಎರಡೂವರೆ ವರ್ಷಗಳಿಂದ ನಾನು ನಿಯತಕಾಲಿಕವಾಗಿ ನಿರ್ಬಂಧದಲ್ಲಿದ್ದು, ನನ್ನ ಹಾಸಿಗೆಯಲ್ಲಿ ಮಲಗಿದ್ದಲ್ಲಿಂದ ನಿಮಗೆ ಬರೆಯುತ್ತಿದ್ದೇನೆ. “ನೀವು ಬೆನ್ನು ನೋವಿನಿಂದ ಕಷ್ಟಾನುಭವಿಸುತ್ತಿದ್ದೀರೊ?” (ಜೂನ್‌ 8, 1994) ಎಂಬ ಅತ್ಯಂತ ಒಳ್ಳೆಯ ಲೇಖನಕ್ಕಾಗಿ ನಿಮಗೆ ಉಪಕಾರ. ನೀವು ನನ್ನೊಂದಿಗೆ ಮಾತಾಡುತ್ತಿದ್ದೀರೊ ಎಂಬಂತೆ ಅದು ಇದ್ದುದರಿಂದ, ಅದನ್ನು ಓದುವಾಗ ನಾನು ಅತ್ತೆ. ಯಾರಾದರೂ ಈ ಸಮಸ್ಯೆಯನ್ನು ಇಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದೆಂದು ನಂಬುವುದು ನನಗೆ ಕಷ್ಟಸಾಧ್ಯವಾಗಿತ್ತು.

ಬಿ. ಏಚ್‌., ಇಂಗ್ಲೆಂಡ್‌

ಹತ್ತು ದಿನಗಳ ಹಿಂದೆಯಷ್ಟೇ ನಾನು ಬೆನ್ನಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕ್ತಾಯು, ಮತ್ತು ನಿಷ್ಕೃಷ್ಟವಾದ ಸಮಾಚಾರಕ್ಕಾಗಿ ನಿಮಗೆ ನಾನು ಉಪಕಾರ ಹೇಳುತ್ತೇನೆ. ನನ್ನ ವೇದನೆಯ ಕಾರಣವನ್ನು ತಿಳಿದುಕೊಳ್ಳುವಂತೆ ಈ ಲೇಖನವು ನನಗೆ ಸಹಾಯ ಮಾಡಿತು. ಕೊಡಲ್ಪಟ್ಟಿರುವ ಸಲಹೆಗಳು ಬಹಳ ಪ್ರಯೋಜನಕರವಾದವುಗಳಾಗಿವೆ, ಮತ್ತು ಅನೇಕರು ಅವುಗಳನ್ನು ಅನ್ವಯಿಸುವರು ಮತ್ತು ಶಸ್ತ್ರಚಿಕಿತ್ಸೆಯನ್ನು ತಡೆಗಟ್ಟುವರು ಎಂದು ನಾನು ಭರವಸೆ ಇಡುತ್ತೇನೆ.

ಕೆ. ಜಿ., ಹಂಗೆರಿ

ಆತ್ಮಹತ್ಯೆ “ಯುವ ಜನರು ಪ್ರಶ್ನಿಸುವುದು . . . ಆತ್ಮಹತ್ಯೆಯು ಪರಿಹಾರವೆ?” (ಎಪ್ರಿಲ್‌ 8, 1994) ಎಂಬ ಲೇಖನವನ್ನು ನಾನು ಆತಂಕ ಮತ್ತು ಉದ್ರೇಕದ ಭಾವನೆಗಳಿಂದ ಓದಿದೆ. ನಾನು 20 ವರ್ಷ ಪ್ರಾಯದವಳು ಮತ್ತು ನಾನು ಈಗ ಪೂರ್ಣ ಸಮಯದ ಒಬ್ಬ ಶುಶ್ರೂಷಕಳಾಗಿದ್ದೇನೆ. ಆದರೆ ಸ್ವಲ್ಪ ಸಮಯದ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳುವವಳಾಗಿದ್ದೆ. ಯೆಹೋವನು ನನಗೆ ಸಹಾಯ ಮಾಡಿದ್ದಾನೆ ಮತ್ತು ನನ್ನನ್ನು ಕೈಯಿಂದ ಹಿಡಿಯಲು ಮುಂದುವರಿದಿದ್ದಾನೆ. ಕೆಲವೇ ದಿವಸಗಳ ಹಿಂದೆ, ತಾನು ತನ್ನನ್ನು ಕೊಂದುಕೊಳ್ಳಲು ಪ್ರಯತ್ನಿಸಿದ್ದಳೆಂದು ನನ್ನ ಆಪ್ತ ಸ್ನೇಹಿತೆಯರಲ್ಲಿ ಒಬ್ಬಳು ನನಗೆ ಹೇಳಿದಳು, ಅವಳು ನಿರಾಶಳಾಗದಂತೆ ಅವಳಿಗೆ ಸಹಾಯ ಮಾಡುವಂತಹ ಪ್ರಾಯೋಗಿಕ ಸಲಹೆಗಾಗಿ ನಾನು ಹುಡುಕಿದೆ. ಈ ಲೇಖನವು ನನ್ನ ಪ್ರಾರ್ಥನೆಗಳಿಗೆ ಉತ್ತರ ನೀಡಿತು.

ಎ. ಸಿ., ಇಟೆಲಿ

ಕಳೆದ ವಾರವಷ್ಟೇ ಆತ್ಮಹತ್ಯೆಯ ಆಲೋಚನೆಗಳು ನನ್ನ ಹೃದಯದಲ್ಲಿ ಬಲವಾಗಿದ್ದವು. ಒಬ್ಬ ಕ್ರೈಸ್ತ ಹಿರಿಯರು ಮತ್ತು ಅವರ ಹೆಂಡತಿ ನನಗೆ ಆಪ್ತ ಸ್ನೇಹಿತರಾಗಿ ಪರಿಣಮಿಸಿದರು ಮತ್ತು ಆತ್ಮಹತ್ಯೆಯ ಆಲೋಚನೆಗಳೊಂದಿಗೆ ಯಶಸ್ವಿಯಾಗಿ ವ್ಯವಹರಿಸಲಿಕ್ಕಾಗಿ ನನಗೆ ಸಹಾಯ ಮಾಡಿದರು. ಖಿನ್ನತೆಯ ಕುರಿತಾದ ನಿಮ್ಮ ಅನೇಕ ಲೇಖನಗಳು ನನಗೆ ಜೀವರಕ್ಷಕವಾಗಿವೆ.

ಡಿ. ಜೆ., ಅಮೆರಿಕ

ಲೇಖನಕ್ಕಾಗಿ ನಿಮಗೆ ಹೃದಯಾಂತರಾಳದಿಂದ ನನ್ನ ಉಪಕಾರವನ್ನು ನಾನು ವ್ಯಕ್ತಪಡಿಸಲೇ ಬೇಕಾಯಿತು. ಅದು ನನ್ನಲ್ಲಿ ಬಲವಾದ ಭಾವನೆಗಳನ್ನು ಉಂಟುಮಾಡಿತು, ಅದರಂತೆ ನಾನು ಇಂದಿಗೂ ಜ್ಞಾಪಿಸಿಕೊಳ್ಳಬಲ್ಲ ಯಾವುದೇ ಲೇಖನವಿಲ್ಲ. ಆತ್ಮಹತ್ಯೆಯು, ಸಹಿಸಲು ಸಾಧ್ಯವಿಲ್ಲದಂತೆ ಭಾಸವಾಗುವ ಪರಿಸ್ಥಿತಿಗಳಿಂದ ಬಿಡುಗಡೆಯ ಒಂದು ಮಾರ್ಗ, ಆಯ್ಕೆಯಾಗಿತ್ತು ಎಂದು ಕೆಲವು ವರ್ಷಗಳ ಹಿಂದೆ ನಾನು ನಂಬಿದ್ದೆ ಎಂದು ನಾನು ವಿವರಿಸಬೇಕಾಗಿದೆ. ಆದರೂ, ಜೀವಿಸಲಿಕ್ಕಾಗಿ ಎಲ್ಲಕ್ಕಿಂತಲೂ ಅತ್ಯುತ್ತಮವಾದ ಕಾರಣ—ನಾನು ಜೀವಿಸುವಂತೆ ಯೆಹೋವನು ಬಯಸಿದನು—ವು ನನಗಿದೆ ಎಂದು ಹೆತ್ತವರ ಮತ್ತು ಸ್ನೇಹಿತರ ಸಹಾಯದಿಂದ, ನಾನು ತಿಳಿದುಕೊಂಡೆ.

ಎಮ್‌. ವಿ., ಅಮೆರಿಕ

ಈ ಲೇಖನವು ಗ್ರಹಿಸಬಲ್ಲದ್ದೂ, ಉತ್ತಮವಾಗಿ ಬರೆಯಲ್ಪಟ್ಟದ್ದೂ ಆದದ್ದಾಗಿ ನಾನು ಕಂಡುಕೊಂಡೆ. ಆತ್ಮಹತ್ಯೆಯ ಆಲೋಚನೆಗಳನ್ನು ಆದರಿಸುವ ಯಾರಿಗಾದರೂ ಸಹಾಯ ಮಾಡಲಿಕ್ಕಾಗಿ ಇದು ವಿಪರೀತ ಅಮೂಲ್ಯವಾದ ಸಾಧನವಾಗಿದೆ ಎಂದು ನನಗನಿಸುತ್ತದೆ. ಒಳಗೊಂಡಿದ್ದ ಎಲ್ಲಾ ಉದಾಹರಣೆಗಳಿಂದ ನಾನು ಹೃದಯಸ್ಪರ್ಶಿತನಾದೆ.

ಎಲ್‌. ಎಸ್‌., ಅಮೆರಿಕ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ