ಲೋಕದ ಭಾಗವಲ್ಲವೊ?
ಜರ್ಮನಿಯ ಎಚ್ಚರ! ಸುದ್ದಿಗಾರರಿಂದ
“ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:16) ಈ ಮಾತುಗಳೊಂದಿಗೆ ಯೇಸು ರಾಜಕೀಯ ವ್ಯವಹಾರಗಳ ಕುರಿತು ತನ್ನ ಹಿಂಬಾಲಕರ ಸಂಪೂರ್ಣ ತಟಸ್ಥತೆಯನ್ನು ವರ್ಣಿಸಿದನು. ಇಂದು ಕ್ರೈಸ್ತರೆಂದು ಹೇಳಿಕೊಳ್ಳುವವರು ಈ ಮಟ್ಟವನ್ನು ಮುಟ್ಟುತ್ತಾರೋ?
1990ರಲ್ಲಿ ಅದರ ಮುಕ್ತಾಯದ ತನಕ ಒಂದು ಸಮತಾವಾದ ಸರಕಾರದ ಮೂಲಕ ಯಾವುದು ಆಳಲ್ಪಟ್ಟಿತ್ತೋ, ಆ ಹಿಂದಿನ ಜರ್ಮನ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್ (ಜಿಡಿಆರ್)ನಲ್ಲಿ ಕ್ರೈಸ್ತಪ್ರಪಂಚದವರ ಒಳಗೂಡುವಿಕೆಯ ಸಂಬಂಧವಾಗಿ ವೃತ್ತಪತ್ರಕೆಯ ಈ ಕೆಳಗಿನ ವ್ಯಾಖ್ಯೆಗಳನ್ನು ಪರಿಗಣಿಸಿರಿ.
• “ಜಿಡಿಆರ್‌ನ ಲೂತರನ್ ಚರ್ಚು ಈಗ ಸ್ವಲ್ಪ ಸಮಯಕ್ಕಾಗಿ ಶಾಂತಿಭರಿತ ವಿಪ್ಲವದ ತವರಾಗಿ ವೈಭವದಲ್ಲಿ ಹಿತಾನುಭವಿಸಿರುವುದರಿಂದ, ಅದರ ಜನಪ್ರಿಯತೆಯು ಕ್ಷಿಪ್ರವಾಗಿ ಕುಸಿಯುತ್ತಿರುವಂತೆ ಭಾಸವಾಗುತ್ತದೆ. ಅನೇಕರಿಗೆ ಅದು ಆ ಸರಕಾರಕ್ಕೆ ಆಧಾರಸ್ತಂಭವೂ ಷ್ಟಾಜೀ (ರಾಜ್ಯ ಭದ್ರತಾ ಖಾತೆ)ಗೆ ವಿನೋದ ತಾಣವೂ ಆಗಿತ್ತೆಂದು ತೋರಿಬರುತ್ತದೆ.”—ಡೀ ಸ್ಟೈಟ್, ನವಂಬರ 1991.
• “ವಿವಿಧ ಪ್ರಾಂತಗಳ ಲೂತರನ್ ಚರ್ಚುಗಳು . . . ಷ್ಟಾಜೀಯೊಂದಿಗೆ ಚರ್ಚಿನ ಕೆಲಸಗಾರರ ಮತ್ತು ಸದಸ್ಯರ ಒಳಗೂಡುವಿಕೆಯ ಕುರಿತಾಗಿ ದಿಗ್ಭಮ್ರೆಯನ್ನು ವ್ಯಕ್ತಪಡಿಸಿವೆ.”—ಏಫಾಂಗೇಲಿಶ ಕಾಮೆಂಟರ, ಜನವರಿ 1991.
• “ರಾಜಕೀಯದಲ್ಲಿ ಕ್ರಿಯಾಶೀಲರಾಗಿರುವ ಕಾರಣ, ಪಾದ್ರಿಗಳು ತಮ್ಮ ಜನರನ್ನು ಮೊದಲು ಪರಾಮರಿಸುತ್ತಿದ್ದ ಹಾಗೆ ಇನ್ನು ಮುಂದೆ ಪರಾಮರಿಸುತ್ತಿಲ್ಲವೆಂಬ ದೂರುಗಳನ್ನು [ಲೂತರನ್] ಚರ್ಚಿನ ಮುಖಂಡರು ಕೇಳುತ್ತಾರೆ.”—ಸ್ಯೂಡೈಚ ಟ್ಸೈಟುಂಗ್, ಫೆಬ್ರವರಿ 1990.
• “ಎರಡು ಜರ್ಮನ್ ರಾಜ್ಯಗಳ ರಾಜಕೀಯ ಸಂಬಂಧದಲ್ಲಿ [ಲೂತರನ್] ಚರ್ಚು ಯಾವಾಗಲೂ ಒಂದು ಸಹಾಯಪೂರ್ವಕ ಪಾತ್ರವನ್ನು ವಹಿಸಿತ್ತೆಂದು ವೈಟ್ಸೇಕರ್ [ಜರ್ಮನಿಯ ಫೆಡರಲ್ ರಿಪಬ್ಲಿಕ್‌ನ ಮಾಜಿ ರಾಷ್ಟ್ರಾಧ್ಯಕ್ಷ] ಹೇಳಿದರು.”—ವೆಟ್ರಾವರ್ ಟ್ಸೈಟುಂಗ್, ಫೆಬ್ರವರಿ 1992.
ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವುದು ಲೂತರನ್ ಚರ್ಚಿಗೆ ಮಾತ್ರ ಸೀಮಿತವಾಗಿರಲಿಲ್ಲ. “ಕಾರ್ಯತಃ ಪ್ರತಿಯೊಂದು (ಪ್ರಾಟೆಸ್ಟಂಟ್) ಚರ್ಚಿನ ಸಂಘಟನೆ ಷ್ಟಾಜೀ ನಿಯೋಗಿಗಳ ಮೂಲಕ ಒಳಹೊಕ್ಕಲ್ಪಟ್ಟಿತ್ತು,” ಎಂದು ದಿ ಯುರೋಪಿಯನ್ ವರದಿಸಿತು. ಯಾರನ್ನು ದಿ ಯುರೋಪಿಯನ್ “ಸಮತಾವಾದಿ ಅಧಿಕಾರಿಗಳೊಂದಿಗೆ ಪ್ರಾಟೆಸ್ಟಂಟ್ ಚರ್ಚಿನ ಮುಖ್ಯ ಸಂಧಾನಕಾರ”ನೆಂದು ವರ್ಣಿಸುತ್ತದೋ ಆ ಮಾನ್‌ಫ್ರೆಡ್ ಷ್ಟಾಲ್ಪ ತನ್ನ ಪ್ರತಿವಾದದಲ್ಲಿ ಹೇಳಿದ್ದು: “ಅದು ನಮ್ಮ ಉದ್ದೇಶವನ್ನು ಪೂರೈಸಿದ್ದರೆ, ನಾನು ಪಿಶಾಚನೊಂದಿಗೆ ಹಸ್ತಲಾಘವವನ್ನು ಮಾಡುತ್ತಿದ್ದೆ.”
ಇಟಲಿಯಲ್ಲಿರುವ ಮಾಫಿಯಾ ಮತ್ತು ವೈದಿಕರ ನಡುವಣ ನಿಕಟ ಸಂಬಂಧವನ್ನು ಲಂಡನ್‌ನ ಗಾರ್ಡಿಯನ್ ವರದಿಸಿತು. ಅದು ಹೇಳಿದ್ದು: “ಚರ್ಚು ಮತ್ತು ಕೋಸ ನಾಸ್ಟ್ರ ಎಷ್ಟು ದೀರ್ಘಕಾಲ ಶಾಂತಿಪೂರ್ವಕವಾಗಿ ಸಹಜೀವನ ಮಾಡಿವೆಯೆಂದರೆ ಪದೇ ಪದೇ ಚರ್ಚಿನ ಮೇಲೆ ಭಾಗಿತ್ವದ ದೂರು ಹೊರಿಸಲಾಗುತ್ತದೆ.”
ಹಿಂದಿನ ಕೆಜಿಬಿಯೊಂದಿಗೆ ಕೆಲವು ರಷ್ಯನ್ ಆರ್ತೊಡಾಕ್ಸ್ ಪಾದ್ರಿಗಳ ಸಹೋದ್ಯಮದ ಬಗ್ಗೆ ಒಂದು ಲೇಖನವನ್ನು ಟೊರಾಂಟೋ ಸ್ಟಾರ್ ಪ್ರಕಾಶಿಸಿತು. ಆ ವರದಿ ಹೇಳುವುದು: “ಸಮತಾವಾದಿ ಸರಕಾರದೊಂದಿಗೆ ಚರ್ಚಿನ ಸಹೋದ್ಯಮದ ಕುರಿತ ಪ್ರಕಟನೆಗಳು ಅತ್ಯಂತ ಧ್ವಂಸಕಾರಿ ಹೊಡೆತವನ್ನು ಪ್ರತಿನಿಧಿಸುತ್ತವೆ. . . . ಕೆಜಿಬಿ ಪತ್ರಾಗಾರದಿಂದ ವಿಷಯವು . . . ಚರ್ಚಿನ ಹಿರಿಯ ಅಧಿಕಾರಿಗಳು ಕೇವಲ ತಮ್ಮ ಸ್ವಂತ ಮೂಲ ಸೂತ್ರಗಳಿಗೆ ದ್ರೋಹ ಮಾಡಿದ್ದು ಮಾತ್ರವಲ್ಲ, ಎಲ್ಲ ಕಡೆಯಲ್ಲಿರುವ ಧಾರ್ಮಿಕ ಮುಖಂಡರನ್ನು ಅಪಮಾನ ಪಡಿಸಲಿಕ್ಕೆ ಸಿದ್ಧರಾಗಿದ್ದರೆಂದೂ ಸೂಚಿಸಿತು.”
ಕ್ರೈಸ್ತಪ್ರಪಂಚದ ಚರ್ಚುಗಳು ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವುದನ್ನು ಮುಂದುವರಿಸುತ್ತಿರುವ ಸಮಯದಲ್ಲೇ, ಯಥಾರ್ಥ ಕ್ರೈಸ್ತತ್ವವು ಲೋಕದ ಭಾಗವಾಗಿರಬಾರದೆಂಬ ಯೇಸುವಿನ ಆಜೆಗ್ಞೆ ಬಲವಾಗಿ ಅಂಟಿಕೊಳ್ಳುತ್ತದೆ.