“ಗತವಿಷಯಗಳನ್ನು ತೊಡೆದುಹಾಕುವುದು”
“ಸೃಷ್ಟಿಯೆಲ್ಲವೂ ಒಟ್ಟಿಗೆ ನರಳುತ್ತಾ ಇರುವುದನ್ನು ಮತ್ತು ಇಂದಿನ ವರೆಗೂ ಒಟ್ಟಿಗೆ ವೇದನೆಪಡುತ್ತಾ ಇರುವುದನ್ನು ನಾವು ಬಲ್ಲೆವು.” ಸುಮಾರು 2,000 ವರ್ಷಗಳ ಹಿಂದೆ ಈ ಮಾತುಗಳು ಬರೆಯಲ್ಪಟ್ಟಾಗ ಅದು ಸತ್ಯವಾಗಿತ್ತು, ಮತ್ತು ಇಂದು ಸಹ ಸತ್ಯವಾಗಿದೆ. ಆದರೆ ಇತಿಹಾಸವನ್ನು, ಅದರ ಸಕಲ ಮಾನವ ಕಷ್ಟಾನುಭವದೊಂದಿಗೆ ತೊಡೆದು ಹಾಕುವುದು ಸಾಧ್ಯವೊ?—ರೋಮಾಪುರ 8:22, NW.
ಇದೇ ವಿಷಯವನ್ನು ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಶಿರೋನಾಮವುಳ್ಳ ಪೂರ್ಣ ವರ್ಣದ 32 ಪುಟಗಳ ಬ್ರೋಷರ್ ಚರ್ಚಿಸುತ್ತದೆ. “ಈ ಲೋಕದಲ್ಲಿ ನಾವು ಸಹಿಸಿಕೊಂಡಿರಬಹುದಾದ ಕಷ್ಟಾನುಭವಕ್ಕಾಗಿ ದೇವರು ನಮಗೆ ಪರಿಹಾರವನ್ನೊದಗಿಸುವನು” ಎಂದು ಅದು ಹೇಳುತ್ತದೆ. “ನಮ್ಮನ್ನು ಬಾಧಿಸಿದಂತಹ ಕೆಟ್ಟ ಗತಕಾಲವನ್ನು ದೇವರು ಮಹತ್ತಾದ ಕನಿಕರದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಸರಿಪಡಿಸಲಿರುವನು.”
ಒಂದು ಉಜ್ವಲವಾದ ಭವಿಷ್ಯತ್ತು ನಮಗಾಗಿ ಕಾದಿರಿಸಲ್ಪಟ್ಟಿದೆಯೆಂಬ ಮನವೊಪ್ಪಿಸುವ ಪುರಾವೆಯನ್ನು ಈ ಪ್ರಕಾಶನವು ಪ್ರಕಟಪಡಿಸುತ್ತದೆ. ಈ ಬ್ರೋಷರನ್ನು ಓದಿದ ಬಳಿಕ, 20 ವರ್ಷ ಪ್ರಾಯದ ಕೆನಡದವಳೊಬ್ಬಳು ಬರೆದದ್ದು: “ಈ ಪ್ರಕಾಶನವು ನನ್ನ ಹೃದಯವನ್ನು ಎಷ್ಟೊಂದು ಸ್ಪರ್ಶಿಸಿತೆಂಬುದನ್ನು ಮಾತುಗಳಲ್ಲಿ ನಾನು ವ್ಯಕ್ತಪಡಿಸಲಾರೆ! ನಿಜವಾಗಿಯೂ ಇದು ಒಂದು ಅಮೂಲ್ಯವಾದ ರತ್ನವಾಗಿದೆ. ದೇವರು ನಮಗಾಗಿ ಇಟ್ಟಿರುವ ಆಶ್ಚರ್ಯಕರ ನಿರೀಕ್ಷೆಯ ಕುರಿತು ಇದು ನಮಗೆ ನೆನಪು ಹುಟ್ಟಿಸುತ್ತದೆ. ‘ಗತವಿಷಯಗಳನ್ನು ತೊಡೆದುಹಾಕುವುದು’ ಎಂಬ ಭಾಗವು ಪ್ರೀತಿಪೂರ್ಣವಾಗಿ ಬರೆಯಲ್ಪಟ್ಟಿದೆಯೆಂದು ನನಗನಿಸುತ್ತದೆ. ಯೆಹೋವನು ನಮ್ಮನ್ನು ಎಷ್ಟು ಹೆಚ್ಚಾಗಿ ಪ್ರೀತಿಸುತ್ತಾನೆಂಬುದನ್ನು ನಮಗೆ ಜ್ಞಾಪಿಸಿದ್ದಕ್ಕಾಗಿ ಉಪಕಾರಗಳು.”
ಈ ಬ್ರೋಷರ್ನ ಒಂದು ಪ್ರತಿಯನ್ನು ನೀವು ಬಯಸುವುದಾದರೆ ಅಥವಾ ಈ ವಿಷಯವನ್ನು ಚರ್ಚಿಸಲಿಕ್ಕಾಗಿ ನಿಮ್ಮ ಮನೆಗೆ ಯಾರಾದರೊಬ್ಬರು ಭೇಟಿ ನೀಡುವಂತೆ ನೀವು ಅಪೇಕ್ಷಿಸುವುದಾದರೆ, ದಯವಿಟ್ಟು Watch Tower, H-58, Old Khandala Road, Lonavla 410 401, Mah., India, ಇವರಿಗೆ, ಅಥವಾ ಪುಟ 5ರಲ್ಲಿ ಕೊಟ್ಟಿರುವ ತಕ್ಕ ವಿಳಾಸಕ್ಕೆ ಬರೆಯಿರಿ.