ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 12/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1994
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
ಇನ್ನಷ್ಟು
ಎಚ್ಚರ!—1994
g94 12/8 ಪು. 30

ನಮ್ಮ ವಾಚಕರಿಂದ

ದುಶ್ಚಟಗಳು “ದುಶ್ಚಟಗಳು—ಅವುಗಳ ಹಿಂದುಗಡೆ ಏನಿದೆ?” (ಮೇ 22, 1994) ಎಂಬ ಸರಣಿಗೆ ನಿಮಗೆ ತುಂಬಾ ಉಪಕಾರ. ಆ ಲೇಖನಗಳನ್ನು ನಾನು ಆರಂಭದಿಂದ ಮುಕ್ತಾಯದ ತನಕ ಎರಡು ಸಲ ಓದಿದೆ. ನೋಡಿ, ನನಗೆ ತಿನ್ನುವ ಕ್ರಮರಾಹಿತ್ಯವಿದೆ. ಚಿಕಿತ್ಸಾಲಯವೊಂದರಲ್ಲಿ ಚಿಕಿತ್ಸೆ ಪಡೆದ ಬಳಿಕ ನನಗೆ ಸ್ವಲ್ಪ ಉತ್ತಮವೆನಿಸಿದೆ, ಆದರೆ ಆಗಾಗ್ಗೆ ಇನ್ನೂ ನನಗೆ ಪ್ರಯಾಸವಿದೆ. ಆ ಲೇಖನವು ನನ್ನ ನಿರ್ಧಾರವನ್ನು ಬಲಪಡಿಸಿತು.

ಟಿ. ಎಸ್‌., ಜರ್ಮನಿ

ನಾನು ಮಾಜಿ ಅಮಲೌಷಧ ಮತ್ತು ಮದ್ಯಪಾನ ವ್ಯಸನಿ. ನೀವು ಕೊಡುವಂಥ ಬುದ್ಧಿವಾದವು ನಿಜವಾಗಿಯೂ ಸೂಕ್ತವಾಗಿದೆ. ನಮ್ಮ ಸೃಷ್ಟಿಕರ್ತನ ಕಣ್ಣಿನಲ್ಲಿ ಒಬ್ಬ ವ್ಯಸನಿಯು ಸಂಪೂರ್ಣವಾಗಿ ಶುದ್ಧನಾಗಿರ ಸಾಧ್ಯವಿಲ್ಲದ್ದರಿಂದ, ಒಂದು ದುಶ್ಚಟವು ಆತ್ಮಿಕತೆಗೆ ತಡೆಗಟ್ಟಾಗಿದೆ ಎಂದು ಗ್ರಹಿಸುವಂತೆ ಸಹ ನಾನು ಪ್ರೇರಿಸಲ್ಪಟ್ಟೆ.

ಎಮ್‌. ಜಿ., ಫ್ರಾನ್ಸ್‌

ಆರೂವರೆ ವರ್ಷಗಳ ಹಿಂದೆ, ಕೊಕೇನ್‌ ದುಶ್ಚಟಕ್ಕೆ ಬಲಿಯಾದ ಒಬ್ಬ ಮಗನನ್ನು ನಾನು ಕಳೆದುಕೊಂಡೆ. ಅಂಥ ನೋವನ್ನು ಅನುಭವಿಸಿ ಬದುಕಿದರ್ದಿಂದ, ನನ್ನ ಸ್ವಂತ ಆಹಾರದ ದುಶ್ಚಟವನ್ನು ಎದುರಿಸಲು ನಾನು ಸಿದ್ಧಳಾಗಿದ್ದೆ. ಮದ್ಯವ್ಯಸನಿಯ ಒಂದು ಕುಟುಂಬದಲ್ಲಿ ಬೆಳೆದದರ್ದಿಂದ, ನನ್ನನ್ನು ಸಾಂತ್ವನಗೊಳಿಸಲಿಕ್ಕಾಗಿ ಮತ್ತು ನೋವಿನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾನು ಆಹಾರವನ್ನು ಉಪಯೋಗಿಸಲು ಕಲಿತಿದ್ದೆ. ಕೇವಲ ಸೋಲನ್ನು ಹೊಂದಲು, ನಾನು ಪಥ್ಯಗಳನ್ನು ಪ್ರಯತ್ನಿಸಿದೆ. ಇನ್ನೂ ಹೆಚ್ಚಾಗಿ ಒಬ್ಬ ಕ್ರೈಸ್ತಳೋಪಾದಿ 20 ವರ್ಷಗಳ ಅನಂತರ ಯೆಹೋವನ ಪ್ರೀತಿಯನ್ನು ಸವಿಯುವುದು ಅಧಿಕ ಸಹಾಯದ್ದಾಗಿದೆ. ಲೇಖನಗಳಿಗಾಗಿ ನಿಮಗೆ ಬಹಳ ಬಹಳ ಉಪಕಾರ.

ಎಸ್‌. ಇ., ಅಮೆರಿಕ

ಪುನರವತಾರ ನಾನೊಬ್ಬ ಮುಸಲ್ಮಾನನಾದರೂ, ನಾನು ಎಚ್ಚರ!ದ ಒಬ್ಬ ಕ್ರಮದ ಓದುಗನು. “ಈ ಹಿಂದೆ ಜೀವಿಸಿದ್ದೀರೊ? ನೀವು ಪುನಃ ಜೀವಿಸುವಿರೊ?” (ಜೂನ್‌ 8, 1994) ಎನ್ನುವ ನಿಮ್ಮ ಇತ್ತೀಚೆಗಿನ ಸರಣಿಗೆ ನನ್ನ ಪ್ರಾಮಾಣಿಕವಾದ ಉಪಕಾರಗಳನ್ನು ವ್ಯಕ್ತಪಡಿಸಲು ನಾನು ಇಚ್ಛಿಸುತ್ತೇನೆ. ಅದು ಬಹಳ ಬೋಧಪ್ರದವಾಗಿತ್ತೆಂದು ನಾನು ಕಂಡುಕೊಂಡೆ. ಪುನರವತಾರದ ಅಸ್ತಿತ್ವದ ಕುರಿತು ಪಟ್ಟುಹಿಡಿಯುವ ನನ್ನ ಕೆಲವು ಸ್ನೇಹಿತರನ್ನು ಸರಿಪಡಿಸಲು ಉಪಯೋಗಿಸ ಸಾಧ್ಯವಿರುವ ವಿಷಯವನ್ನು ದೀರ್ಘ ಸಮಯದಿಂದ ನಾನು ಹುಡುಕುತ್ತಿದ್ದೆ. ಕೊಡಲ್ಪಟ್ಟ ಮಾಹಿತಿಯೊಂದಿಗೆ, ಪುನರುತ್ಥಾನವಿರುವ ಕಾರಣ, ಪುನರವತಾರವಿರಲು ಸಾಧ್ಯವಿಲ್ಲವೆಂದು ಅವರು ಖಂಡಿತವಾಗಿ ಒಪ್ಪುವರೆಂದು ನಾನು ನಂಬುತ್ತೇನೆ.

ಕೆ. ಎಸ್‌., ನೈಜೀರಿಯಾ

ವೈಜ್ಞಾನಿಕ ವಂಚನೆ? “ವಿಜ್ಞಾನಿಗಳು ಸಾರ್ವಜನಿಕರನ್ನು ಮೂರ್ಖರಾಗಿಸುತ್ತಾರೆ” (ಜನವರಿ 8, 1994, ಇಂಗ್ಲಿಷ್‌) ಎನ್ನುವ ನಿಮ್ಮ ಇತ್ತೀಚೆಗಿನ ಲೇಖನವು ನನ್ನ ಗಮನಕ್ಕೆ ಬಂದಿತು. ಒಳಗೊಂಡ ಆ ವಿಜ್ಞಾನಿಗಳು ಅನಂತರ ಸರಿಪಡಿಸಿದ ಒಂದು ಸಾಧಾರಣ ತಪ್ಪನ್ನು ಮಾಡಿದ್ದರೆಂದು ಕಾಣಿಸುತ್ತದೆ. ವಿಜ್ಞಾನವು ಕೆಲಸಮಾಡಬೇಕಾಗಿರುವುದು ಹೀಗೆಯೇ, ಆದರೆ ನಿಮ್ಮ ಲೇಖನದ ಶಿರೋನಾಮೆಯು ಯಾವುದೋ ವಿಧದ ತಪ್ಪನ್ನು ಸೂಚಿಸುತ್ತದೆ. ವಿವಾದಕೊಳಕ್ಕಾಗಿರುವ ಬುರುಡೆಯ ಗುಮ್ಮಟವು ಕತ್ತೆಯದ್ದರಂತೆ ಇರಬಹುದು, ಆದರೆ ಆ ನಿಜತ್ವಕ್ಕೂ ಪ್ರಸಿದ್ಧವಾದ “ಲೂಸೀ” ಅಸ್ಥಿಪಂಜರದಂಥ ಕಂಡುಹಿಡಿತಗಳ ಪ್ರಾಮಾಣ್ಯಕ್ಕೂ ಯಾವ ಸಂಬಂಧವೂ ಇಲ್ಲ. ಈ ಸೃಷ್ಟಿಜೀವಿಗಳು ಇದ್ದವೆಂದು ನಮಗೆ ಗೊತ್ತಿದೆ.

ಎಮ್‌. ಪಿ., ಅಮೆರಿಕ

ಈ ನಿರ್ದಿಷ್ಟ ಕಂಡುಹಿಡಿಯುವಿಕೆಯಲ್ಲಿ ಒಳಗೊಂಡಿದ್ದ ವಿಜ್ಞಾನಿಗಳು ಉದ್ದೇಶಪೂರ್ವಕವಾಗಿ ಅಪ್ರಾಮಾಣಿಕರಾಗಿದ್ದರೆಂದು ನಾವು ಸೂಚಿಸುತ್ತಿದ್ದಿಲ್ಲ. ವಾಸ್ತವವಾಗಿ, ಸ್ವತಃ ಡಾ. ಮೋಯಾ ಅವರನ್ನು ನಾವು ಉದಾಹರಿಸಿದೆವು ಮತ್ತು ಅವರ ನಿಷ್ಕಾಪಟ್ಯವನ್ನು ಸೂಚಿಸಿದೆವು. ವೈಯಕ್ತಿಕ, ರಾಜಕೀಯ, ಮತ್ತು ರಾಷ್ಟ್ರೀಯತೆಯ ಅಭಿರುಚಿಗಳ ಪರವಾಗಿ ಹೇಗೆ ವೈಜ್ಞಾನಿಕ ಸತ್ಯವು ತ್ಯಜಿಸಲ್ಪಡುತ್ತದೆಂದು ದೃಷ್ಟಾಂತಿಸಲು ಈ ಘಟನೆಯನ್ನು ಉಪಯೋಗಿಸಿದೆವು. ಯುಕ್ತವಾದ ಅವಶೇಷದ ಮಾದರಿಗಳು ಕಂಡುಹಿಡಿಯಲ್ಪಟ್ಟಿವೆ, ನಿಜ. ಆದರೂ ಈ ಸೃಷ್ಟಿಜೀವಿಗಳು ನಿಜವಾಗಿ ಮಾನವಕುಲದ ಪೂರ್ವಜರಾಗಿದ್ದವು ಅನ್ನುವದಕ್ಕೆ ಯಾವುದೇ ರುಜುವಾತು ಇಲ್ಲಿರುವುದಿಲ್ಲ. ಉದಾಹರಣೆಗಾಗಿ “ಲೂಸೀ”ಗೆ, ಮನುಷ್ಯರ ಮೆದುಳಿನ ಮೂರನೇ ಒಂದು ಅಂಶದಷ್ಟು ಗಾತ್ರದ ಒಂದು ಮೆದುಳಿತ್ತು. ಸ್ಪಷ್ಟವಾಗಿಗಿ ಇದು ಈಗ ಅಳಿದುಹೋಗಿರುವ ಒಂದು ಕಪಿಯ ಜಾತಿಗಿಂತ ಹೆಚ್ಚಿಗೆಯೇನೂ ಅಲ್ಲ.—ಸಂಪಾ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ