ಎಚ್ಚರ! ನೈಜ ಪರಿಹಾರಗಳನ್ನು ಒದಗಿಸುತ್ತದೆ
ಅಮೆರಿಕದ ವಿನ್ಟನ್, ಐಅವಾದ, ಒಬ್ಬ ವಾಚಕಳು ಎಚ್ಚರ!ದ ಕುರಿತಾಗಿ ಇಷ್ಟ ಪಡುವುದು ಅದನ್ನೇ. “ಪ್ರಿಯ ಸಂಪಾದಕರೆ,” ಎನ್ನುವ ಅಭಿವಂದನೆಯೊಂದಿಗೆ ಅವಳು ಹೇಳುವುದು:
“ಎಚ್ಚರ!ದಲ್ಲಿರುವ ಸಮಯೋಚಿತವಾದ ಲೇಖನಗಳಿಗಾಗಿ ಮೆಚ್ಚಿಗೆಯನ್ನು ವ್ಯಕ್ತಪಡಿಸಲು ನಾನು ಬರೆಯುತ್ತಿದ್ದೇನೆ. ನಾನು ಪಡೆಯುವ ಪ್ರತಿ ಸಂಚಿಕೆಯಿಂದ ನಾನು ಪ್ರಭಾವಿಸಲ್ಪಡುತ್ತೇನೆ ಮತ್ತು ಈ ಪತಿಕ್ರೆಯಲ್ಲಿರುವ ಲೇಖನಗಳ ಉತ್ಕೃಷ್ಟ ಗುಣದ ಕುರಿತು ನಾನು ಸತತವಾಗಿ ಜ್ಞಾಪಿಸಲ್ಪಡುತ್ತೇನೆ.
“ಇಷ್ಟೊಂದು ಕೆಟ್ಟ ಸಮಾಚಾರಗಳು ಇಂದು ಲೋಕದಲ್ಲಿ ಇರುವ ಕಾರಣ, ಅನೇಕ ಪತ್ರಿಕೆಗಳು ಓದಲು ಅಥವಾ ಕಣ್ಣಾಡಿಸಲು ತುಂಬಾ ನಿರುತ್ಸಾಹವುಳ್ಳವುಗಳಾಗಿವೆ. ಮತ್ತೊಂದು ಕಡೆ, ಎಚ್ಚರ!ವಾದರೋ ಯಾವಾಗಲೂ ಪ್ರಸ್ತುತ ಅಭಿರುಚಿ ಮತ್ತು ನಮಗೆಲ್ಲರಿಗೆ ಪ್ರಮುಖವಾಗಿರುವ ವಿಷಯದೊಂದಿಗೆ ವ್ಯವಹರಿಸುವಾಗ, ಅದರ ಪ್ರಸ್ತಾಪವು ಅದ್ವಿತೀಯವಾಗಿದೆ. ಎಚ್ಚರ!ವು ಬೈಬಲಿನ ವಾಗ್ದಾನಗಳಲ್ಲಿ ಭರವಸೆಯನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಪ್ರಮಾಣಗ್ರಂಥವಾಗಿ ಬೈಬಲಿಗೆ—ಮಾನವರ ಭಿನ್ನವಾಗಿರುವ ಯಾ ಕಾಲ್ಪನಿಕ ಅಭಿಪ್ರಾಯಗಳಿಗಲ್ಲ—ಗಮನ ಸೆಳೆಯುವ ಮೂಲಕ ಸಾರ್ವತ್ರಿಕ ಸಮಸ್ಯೆಗಳಿಗೆ ಒಂದು ನಿಜ ಹಾಗೂ ಬಾಳಿಕೆ ಬರುವ ಪರಿಹಾರವನ್ನು ನೀಡುತ್ತದೆಂದು ಕಂಡುಹಿಡಿಯಲು ವಾಚಕರು ಸದಾ ಖಾತ್ರಿಯಿಂದಿರಬಲ್ಲರು.
“ಅನೇಕ ವರ್ಷಗಳಿಂದ ಎಚ್ಚರ!ವನ್ನು ಓದುವುದರಲ್ಲಿ ನಾನು ನಿಜವಾಗಿಯೂ ಆನಂದವನ್ನು ಹೊಂದಿದ್ದೇನೆ. ಯಾವುದು ಜೀವನವನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕ ಪ್ರಸ್ತಾಪವನ್ನು ಕೊಡುವಾಗ ಭವಿಷ್ಯತ್ತಿನ ಕುರಿತು ಸಕಾರತ್ಮಾಕ ಹೊರನೋಟವನ್ನು ಕಾಪಾಡಿಕೊಳ್ಳುತ್ತದೋ ಅದೇ ನಮಗೆಲ್ಲರಿಗೆ ಇರುವ ಅತ್ಯುಪಯುಕ್ತ ವಾಚನವು. ಯಾವುದು ಪ್ರಾಮುಖ್ಯವಾಗಿದೆಯೆಂದು ನೋಡಲು ವಾಚಕರಿಗೆ ಸಹಾಯ ನೀಡುತ್ತಿರುವುದಕ್ಕಾಗಿ ನಿಮಗೆ ಉಪಕಾರ.”
ನಿಮ್ಮ ಮನೆಗೆ ಅಂಚೆಯ ಮೂಲಕ ಎಚ್ಚರ!ದ ಒಂದು ಪ್ರತಿ ಕಳುಹಿಸಲ್ಪಡಬೇಕೆಂದು ನೀವು ಬಯಸುವಲ್ಲಿ, Praharidurg Prakashan Society, Plot A/35, Nr Industrial Estate, Nangargaon, Lonavla, 410 401 Mah., ಇವರಿಗೆ, ಅಥವಾ ಪುಟ 5ರಲ್ಲಿ ಕೊಟ್ಟಿರುವ ತಕ್ಕ ವಿಳಾಸಕ್ಕೆ ಬರೆಯಿರಿ.