ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 1/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1994
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
ಇನ್ನಷ್ಟು
ಎಚ್ಚರ!—1994
g94 1/8 ಪು. 30

ನಮ್ಮ ವಾಚಕರಿಂದ

ಗೃಹ ಶಾಲಾ ಶಿಕ್ಷಣ “ಗೃಹ ಶಾಲಾ ಶಿಕ್ಷಣ—ಅದು ನಿಮಗೊ?” ಎಂಬ ನಿಮ್ಮ ಲೇಖನವನ್ನು ನಾನು ಗಣ್ಯಮಾಡಿದೆ. (ಜುಲೈ 8, 1993) ಸ್ವತಃ ನನಗೆ ಮನೆಯಲ್ಲಿ ಕಲಿಸಲಾಗುತ್ತಿದೆ, ಮತ್ತು ನನ್ನ ಶಾಲಾ ಕೆಲಸದಲ್ಲಿ ನಾನು ಏನನ್ನು ಸಾಧಿಸಬೇಕೊ ಅದನ್ನು ನಾನು ಸಾಧಿಸತ್ತಿರಲಿಲ್ಲ. ಆದರೆ ನಿಮ್ಮ ಲೇಖನವನ್ನು ನಾನು ಓದಿದಾಗ, ಅದು ನನ್ನನ್ನು ಪ್ರಚೋದಿಸಿತು. ಈಗ ವೇಳಾಪಟ್ಟಿಯನ್ನು ನಾನು ಅನುಸರಿಸುತ್ತಾ ಇದ್ದೇನೆ.

ಎನ್‌. ಎಸ್‌., ಅಮೆರಿಕ

ಕುಟುಂಬ ಯೋಜನೆ “ಕುಟುಂಬ ಯೋಜನೆ—ಒಂದು ಜಾಗತಿಕ ವಿವಾದಾಂಶ” ಲೇಖನಗಳನ್ನು ಪ್ರದರ್ಶಿಸುವ ನಿಮ್ಮ ಜೂನ್‌ 8, 1993ರ ಪತ್ರಿಕೆಯಿಂದ ನಾನು ಬಹಳವಾಗಿ ರೇಗಿಸಲ್ಪಟ್ಟೆ. ಜವಾಬ್ದಾರ ಕ್ರೈಸ್ತರು ತಮ್ಮ ಕುಟುಂಬದ ಗಾತ್ರವನ್ನು ಸೀಮಿತಗೊಳಿಸುವ ಆವಶ್ಯಕತೆ ಇದೆ ಎಂಬ ಸೂಚನೆಯನ್ನು ನೀಡುವುದು ಅವಿವೇಕವಾಗಿದೆ. ಆದಿಕಾಂಡದಲ್ಲಿ [“ಭೂಮಿಯಲ್ಲಿ ತುಂಬಿ”ಕೊಳ್ಳಲು] ಇರುವ ದೇವರ ಆಜ್ಞೆಯು, ಕ್ರೈಸ್ತರಿಗೆ ಅನ್ವಯಿಸುವುದಿಲ್ಲವೆಂದು ನೀವು ಯಾವ ಆಧಾರದ ಮೇಲೆ ಸೂಚಿಸುತ್ತೀರಿ?

ಎ. ಡಿ. ಅಮೆರಿಕ

ಆದಾಮ ಮತ್ತು ಹವ್ವರಿಗೆ “ಭೂಮಿಯಲ್ಲಿ ತುಂಬಿ”ಕೊಳ್ಳಲು ಇದ್ದ ದೇವರ ಆಜ್ಞೆಯು, ನೋಹ ಮತ್ತು ಅವನ ಕುಟುಂಬಕ್ಕೆ ಮತ್ತೊಮ್ಮೆ ಹೇಳಲ್ಪಟ್ಟಿತ್ತು. ಹಾಗಿದ್ದರೂ, ಬೈಬಲ್‌ ಎಲ್ಲಿಯೂ, ಉತ್ಪಾದಕ ಆಜ್ಞೆಯನ್ನು ಕ್ರೈಸ್ತರ ಮೇಲೆ ಹೇರುವುದಿಲ್ಲ. (ಆದಿಕಾಂಡ 1:28; 9:1-5; ಅ. ಕೃತ್ಯಗಳು 15:29) ವಾಸ್ತವದಲ್ಲಿ, “ಪರಲೋಕರಾಜ್ಯದ ನಿಮಿತ್ತವಾಗಿ” ಅವಿವಾಹಿತರಾಗಿ ಉಳಿಯುವ ಕ್ರೈಸ್ತರನ್ನು ಬೈಬಲ್‌ ಪ್ರಶಂಸಿಸುತ್ತದೆ. (ಮತ್ತಾಯ 19:12; 1 ಕೊರಿಂಥ 7:38) ಆದುದರಿಂದ, ಹೆರಿಗೆ ಮತ್ತು ಜನನ ನಿಯಂತ್ರಣದ ವಿಷಯಕ್ಕೆ ಬಂದಾಗ, ವೈಯಕ್ತಿಕ ದಂಪತಿಗಳು ತಮ್ಮ ಸ್ವಂತ ನಿರ್ಣಯಗಳನ್ನು ಮಾಡಬೇಕು. ಕ್ರೈಸ್ತರು ತಮ್ಮ ಮಕ್ಕಳ ಶಾರೀರಿಕ, ಭಾವನಾತ್ಮಕ, ಮತ್ತು ಆತ್ಮಿಕ ಆವಶ್ಯಕತೆಗಳ ಬಗೆಗೆ ಕಾಳಜಿ ವಹಿಸಬೇಕೆಂದು ಆಜ್ಞಾಪಿಸಲ್ಪಟ್ಟಿರುವುದರಿಂದ, ಅಂತಹ ಕಾಳಜಿಯನ್ನು ಸಲ್ಲಿಸಲಿಕ್ಕಾಗಿ ಜವಾಬ್ದಾರ ಹೆತ್ತವರು ತಮ್ಮ ಕುಟುಂಬದ ಗಾತ್ರವನ್ನು ಸೀಮಿತಗೊಳಿಸುವುದು ವಿವೇಕಪ್ರದವೆಂದು ಎಣಿಸಬಹುದು. (1 ತಿಮೊಥೆಯ 5:8) ಮಕ್ಕಳು “ಯೆಹೋವನಿಂದ ಬಂದ ಸ್ವಾಸ್ತ್ಯವು” ಎಂಬ ನಿಜತ್ವವನ್ನು ಇದು ಯಾವ ರೀತಿಯಲ್ಲಿಯೂ ಕಡೆಗಣಿಸುವುದಿಲ್ಲ. (ಕೀರ್ತನೆ 127:3)—ಸಂಪಾ.

ಪಾನಲಂಪಟತೆ ಎಪ್ರಿಲ್‌ 8 ಮತ್ತು ಮೇ 8, 1993ರ ಸಂಚಿಕೆಗಳಲ್ಲಿ, “ಮದ್ಯಪಾನ ನಿಜವಾಗಿಯೂ ನನ್ನನ್ನು ವ್ಯಸನಿಯಾಗಿ ಮಾಡಬಲ್ಲದೊ?” ಮತ್ತು “ನಾನು ಕುಡಿಯುವುದನ್ನು ಹೇಗೆ ನಿಲ್ಲಿಸಬಲ್ಲೆ?” ಎಂಬ “ಯುವ ಜನರು ಪ್ರಶ್ನಿಸುವುದು . . . ” ಉತ್ಕೃಷ್ಟ ಲೇಖನಗಳಿಗೆ ನಿಮಗೆ ಉಪಕಾರಗಳು. ನಾನು 48 ವರ್ಷ ಪ್ರಾಯದವನು ಮತ್ತು ಪಾನಲಂಪಟತೆಯನ್ನು ಜಯಿಸುವ ಪ್ರಕ್ರಿಯೆಯಲ್ಲಿ ಇದ್ದೇನೆ. ದೇಹ, ಮನಸ್ಸು ಮತ್ತು ಆತ್ಮದ ಈ “ರೋಗ”ದ ಧ್ವಂಸಗೊಳಿಸುವ ಪರಿಣಾಮಗಳು, ಅತಿ ದುಃಖಕರವಾದವುಗಳು. ಮದ್ಯವ್ಯಸನಿಯಾಗಿದ್ದೇನೆಂದು ನಾನು ಗ್ರಹಿಸಲು ಆರಂಭಿಸಿದಾಗ, ಯೆಹೋವನಿಗೆ ನನ್ನನ್ನು ಕ್ಷಮಿಸಲು ಎಂದಿಗೂ ಸಾಧ್ಯವಾಗುವುದಿಲ್ಲವೆಂದು ನನಗೆ ಅನಿಸಿತು. ಆದರೆ ನಾನು ಹಿರಿಯರ ಬಳಿಗೆ ಹೋದೆ, ಮತ್ತು ಅವರು ನನಗೆ ಪ್ರೀತಿಪರ ಸಹಾಯವನ್ನು ಕೊಟ್ಟರು. ಒಂದು ಮರುಕೊಳಿಸುವಿಕೆಯ ಬಳಿಕ, ನಾನು ಮದ್ಯಪಾನ ಚಿಕಿತ್ಸಾ ಕಾರ್ಯಕ್ರಮವನ್ನು ಪ್ರವೇಶಿಸಿದೆ. ಈಗ ಕುಡಿಯಲು ಚೋದಿಸಲ್ಪಟ್ಟಾಗ, ನಾನು ಪ್ರಾರ್ಥಿಸುತ್ತೇನೆ ಮತ್ತು ದೇವರ ಹೊಸ ಲೋಕದ ಕುರಿತು ಮನನ ಮಾಡುತ್ತೇನೆ. ಪಾನಲಂಪಟತೆಯನ್ನು ನಿರ್ವಹಿಸುವ ಯಾ ಉತ್ತೇಜಕ ಜೀವನಾನುಭವಗಳನ್ನು ಹೇಳುವ ಅನೇಕ ಕಾವಲಿನಬುರುಜು ಮತ್ತು ಎಚ್ಚರ! ಲೇಖನಗಳನ್ನು ಕೂಡ ನಾನು ಓದುತ್ತೇನೆ. ಯೆಹೋವನ ಜನರು ಅನುಭವಿಸುವ ಸಮಸ್ಯೆಗಳ ನಿಮ್ಮ ತಿಳಿವಳಿಕೆಗಾಗಿ ಮತ್ತು ನಮಗೆ ಉತ್ತಮ ಲೇಖನಗಳನ್ನು ಕೊಡುವುದಕ್ಕಾಗಿ ನಿಮಗೆ ಉಪಕಾರಗಳು.

ಸಿ. ಡಿ., ಅಮೆರಿಕ

ಶಾಲಾ ಮನೆಗೆಲಸ “ಯುವ ಜನರು ಪ್ರಶ್ನಿಸುವುದು . . . ಇಷ್ಟೊಂದು ಶಾಲಾ ಮನೆಗೆಲಸದ ಕುರಿತು ನಾನು ಏನು ಮಾಡಬಲ್ಲೆ?” ಎಂಬ ಲೇಖನಕ್ಕಾಗಿ ನಿಮಗೆ ಬಹಳ ಉಪಕಾರಗಳು. (ಜುಲೈ 8, 1993) ಬಹಳಷ್ಟು ಶಾಲಾ ಮನೆಗೆಲಸದ ಒತ್ತಡದ ಕೆಳಗೆ ನಾನು ನಿಜವಾಗಿಯೂ ಇದ್ದ ಸಮಯದಲ್ಲಿ ನಾನು ಲೇಖನವನ್ನು ಓದಿದೆ. ವಿಶ್ರಾಂತಿಸಲು ಯಾ ಕ್ರೈಸ್ತ ಕೂಟಗಳಿಗೆ ತಯಾರಿಸಲು ನನಗೆ ಸಮಯವಿರಲಿಲ್ಲ. ನಿಮ್ಮ ಸಲಹೆಗಳನ್ನು ಈಗ ನಾನು ಅನ್ವಯಿಸುತ್ತಾ ಇದ್ದೇನೆ.

ಎಮ್‌. ಎಚ್‌., ಅಮೆರಿಕ

“ಇಷ್ಟೊಂದು ಶಾಲಾ ಮನೆಗೆಲಸದ ಕುರಿತು ನಾನು ಏನು ಮಾಡಬಲ್ಲೆ?” ಎಂಬ ಲೇಖನಕ್ಕಾಗಿ ನಿಮಗೆ ಉಪಕಾರಗಳು. (ಜುಲೈ 8, 1993) ಅದರಲ್ಲಿದ್ದ ಸಲಹೆಗಳನ್ನು ನಾನು ಕೂಡಲೇ ಆಚರಣೆಗೆ ತಂದೆ, ಮತ್ತು ನಾನು ನಿಜವಾಗಿಯೂ ಅವುಗಳಿಂದ ಪ್ರಯೋಜನ ಪಡೆದಿದ್ದೇನೆ. ಆತ್ಮಿಕ ವಿಷಯಗಳಿಗಾಗಿ ನಾನು ಈಗ ಹೆಚ್ಚಿನ ಸಮಯವನ್ನು ಕಾದಿರಿಸಬಲ್ಲೆ. ಅನೇಕ ಉಪಕಾರಗಳು!

ಎಮ್‌. ಎಮ್‌., ಇಟಲಿ

ಅಂಗವಿಕಲತೆಗಳು (ಸೆಪ್ಟಂಬರ 8, 1993ರ) “ಯುವ ಜನರು ಪ್ರಶ್ನಿಸುವುದು . . . ನಾನೊಂದು ಅಂಗವಿಕಲತೆಯಿಂದ ಕಷ್ಟವನ್ನು ಯಾಕೆ ಅನುಭವಿಸಬೇಕು?” ಎಂಬ ಲೇಖನವು, ಈ ಸಮಸ್ಯೆಯನ್ನೇ ಯಥಾವತ್ತಾಗಿ ನಿರ್ವಹಿಸಿತು. ನಾನು ಎರಡು ಕಾಲುಗಳಲ್ಲಿ ಅಂಗವಿಕಲನಾಗಿದ್ದೇನೆ ಮತ್ತು ಜನರು ನನ್ನನ್ನು ದಯೆಯ ಭಾವದಿಂದ ನೋಡುವಾಗ ನಾನು ಬಹಳ ಸೂಕ್ಷ್ಮಸಂವೇದಿ. ಒಬ್ಬ ಭಿಕ್ಷುಕನಂತೆ—ಯಾರಾದರೂ ನನಗೆ ದಾನವನ್ನು ಕೊಡುವಾಗ, ಅದು ನನ್ನ ಅನಿಸಿಕೆಗಳನ್ನು ಬಹಳವಾಗಿ ನೋಯಿಸುತ್ತದೆ. ಯೆಹೋವನು ಶಾರೀರಿಕ ಸ್ಥಿತಿಯನ್ನಲ್ಲ ಆದರೆ “ಹೃದಯವನ್ನೇ ನೋಡುವವನಾಗಿದ್ದಾನೆ” ಎಂಬ ವಿಷಯವನ್ನು ಅರಿಯುವುದೇ ನನ್ನನ್ನು ಸಂತೈಸುತ್ತದೆ.—1 ಸಮುವೇಲ 16:7.

ಎ. ಎ. ಎ. ಎಸ್‌., ಬ್ರೆಸೀಲ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ