ದೇವಭಕ್ತಿಯ ಹೆತ್ತವರನ್ನು ಗಣ್ಯಮಾಡುವುದು
ಅವರ ಮಕ್ಕಳನ್ನು ಜವಾಬ್ದಾರಿಯುತರನ್ನಾಗಿ ಮತ್ತು ದೈವಭಕ್ತಿಯುಳ್ಳ ಪ್ರೌಢರನ್ನಾಗಿ ಬೆಳೆಯಿಸಲು ಕಷ್ಟಪಟ್ಟು ಕೆಲಸ ಮಾಡುವ ಹೆತ್ತವರು, ಅವರ ಪ್ರಯತ್ನಗಳು ಯಶಸ್ವಿಯಾಗುವಾಗ ಸಂತೋಷಗೊಳ್ಳುತ್ತಾರೆ. ಆ ಒಳ್ಳೇ ಪಾಲನೆಗಾಗಿ ಅವರ ಮಕ್ಕಳು ಗಣ್ಯತೆಯನ್ನು ವ್ಯಕ್ತಪಡಿಸುವಾಗ ಕೂಡ ಅವರು ತುಂಬಾ ಸಂತೋಷಿಸುತ್ತಾರೆ.
ಅವರ ವಿವಾಹದ ಅನಂತರ, ಒಬ್ಬ ಮಗ ಮತ್ತು ಅವನ ಹೆಂಡತಿಯಿಂದ, ಅವನ ಹೆತ್ತವರಿಗೆ ಕಳುಹಿಸಲ್ಪಟ್ಟ ಒಂದು ಪತ್ರವು ಇದಾಗಿದೆ:
“ಪ್ರೀತಿಯ ಡ್ಯಾಡಿ ಮತ್ತು ಮಮ್ಮಿ:
“ಓ, ನಾವು ಎಲ್ಲಿಂದ ಪ್ರಾರಂಭಿಸುವುದು? ನಮ್ಮ ವಿವಾಹದ ದಿನದಲ್ಲಿ ನಿಮ್ಮ ಪ್ರೀತಿ, ಬೆಂಬಲ, ಮತ್ತು ಔದಾರ್ಯತೆಯನ್ನು ನಾವು ಎಷ್ಟೊಂದು ಗಣ್ಯಮಾಡಿದೆವೆಂಬದನ್ನು ಹೇಳುವ ಮೂಲಕ ಆರಂಭಿಸೋಣ. ಅದು ಸತ್ಯವಾಗಿಯೂ ಒಂದು ವಿಶೇಷ ದಿನವಾಗಿತ್ತು, ಮತ್ತು ನಿಮ್ಮ ಹಾಜರಿಯು ಅಮೂಲ್ಯವಾದುದ್ದಾಗಿತ್ತು. ಅದಕ್ಕೆ ಕೂಡಿಸಿ, ಅಷ್ಟು ಮಾತ್ರ ಸಾಕಾಗಲಾರದೋ ಎಂಬಂತೆ, ನಮ್ಮ ಮಧುಮಾಸವನ್ನು ಅಷ್ಟೊಂದು ಆನಂದಕರವಾಗಿ ಮಾಡುವುದರಲ್ಲಿ ನಮಗೆ ನೆರವು ನೀಡಿದಿರಿ. ಮೇಲಿರುವುದೆಲ್ಲವೂ ಎಂಥ ಎದ್ದು ಕಾಣುವ, ಪ್ರೀತಿಯ, ಸಮಂಜಸತೆಯ, ಮತ್ತು ವಿನೋದ-ಪ್ರಿಯ ಹೆತ್ತವರು ನೀವಾಗಿದ್ದೀರಿ ಮತ್ತು ಸದಾ ಆಗಿರುತಿದ್ದೀರಿ ಎಂಬುದರ ಕುರಿತಾದ ಹೆಚ್ಚಿನ ರುಜುವಾತಾಗಿದೆ!
“ನಾನು ನೇರವಾದ ಮತ್ತು ಇಕ್ಕಟ್ಟಾದ ಮಾರ್ಗದಲ್ಲಿ ನಿಲ್ಲಲು ಶಕ್ತನಾಗಿರುವುದು ಯಾಕೆ ಎಂದು ನೀವೆಂದಾದರೂ ಆಶ್ಚರ್ಯಗೊಂಡಿದ್ದೀರೋ? ಯಾಕಂದರೆ, ಯೆಹೋವ ದೇವರೆಡೆಗೆ ಪ್ರೀತಿ ಮಾತ್ರವಲ್ಲ, ನಿಮ್ಮಿಬ್ಬರಿಗೂ ಹೆಚ್ಚಾದ ಗೌರವವನ್ನು ನಾನು ಯಾವಾಗಲೂ ಕೊಡುವವನಾಗಿದ್ದೇನೆ. ಈ ಗೌರವವು ಎಷ್ಟೊಂದು ಬಲವಾದದ್ದಾಗಿದೆಯೆಂದರೆ ಅದು ನಿಮ್ಮ ಶಿಸ್ತಿನಿಂದ ಕೂಡಿಸಲ್ಪಟ್ಟು, ವಿಚಾರಗಳನ್ನು ನಿರ್ವಹಿಸುವಾಗ ಮತ್ತು ನಿರ್ಣಯಗಳನ್ನು ಮಾಡುವಾಗ ಅದು ನಾನು ಯಾವಾಗಲೂ ಗಂಭೀರವಾಗಿ ಆಲೋಚಿಸುವಂತೆ ಮಾಡುತ್ತದೆ. ದೇವರ ಚಿತ್ತವನ್ನು ಮಾಡುವುದರಲ್ಲಿ ನನ್ನ ಜೀವಿತದ ಸಾಫಲ್ಯವು ನಿಶ್ಚಯವಾಗಿಯೂ ಬಹುತೇಕವಾಗಿ ನನ್ನ ಕುರಿತು ನಿಮ್ಮ ಸುಸಂಗತವಾದ ಪ್ರೀತಿ ಮತ್ತು ಶಿಸ್ತು ಮತ್ತು ಯೆಹೋವನಿಗೆ ಮತ್ತು ಆತನ ಸಂಸ್ಥೆಯ ಕಡೆಗಿರುವ ನಿಮ್ಮ ಶಾಶ್ವತವಾದ ಭಕ್ತಿಯೇ ಆಗಿದೆ.
“ನಿಮ್ಮಿಬ್ಬರ ಕುರಿತಾದ ನನ್ನ ಬಾಲ್ಯಾವಸ್ಥೆಯ ಎಲ್ಲಾ ನೆನಪುಗಳನ್ನು ನಾನು ತೆಗೆದುಕೊಳ್ಳುವುದಾದರೆ ಮತ್ತು ಅವುಗಳನ್ನು ಜತೆಗೂಡಿಸುವುದಾದರೆ, ನೀವು ಹೇಳಿದ್ದೆಲ್ಲವನ್ನು ನಾನು ಜ್ಞಾಪಿಸಿಕೊಳ್ಳಬಹುದಾಗಿಲವ್ಲೆಂದು ಹೇಳುವುದಾದರೂ, ನಿಮ್ಮ ಎದ್ದು ಕಾಣುವ ನಡತೆ, ವಿಶೇಷವಾಗಿ ಯೆಹೋವನೆಡೆಗೆ ಮತ್ತು ಇತರರ ಕಡೆಗಿದ್ದ ನಿಮ್ಮ ಪ್ರೀತಿಯನ್ನು ನಾನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇನೆ.
“ನಾವು ನಿಮ್ಮನ್ನು ಹೆಚ್ಚು, ಅತಿ ಹೆಚ್ಚಾಗಿ ಪ್ರೀತಿಸುತ್ತೇವೆ.
“ನಿಮ್ಮ ಮಗ ಮತ್ತು ಸೊಸೆ,
“ಎಲ್. ಮತ್ತು ಡಬ್ಲ್ಯು.”