ಬಲಾತ್ಕಾರ ಸಂಭೋಗ ಅವಳೇನು ಓದಿದ್ದಳೋ ಅದರಿಂದ ಸಂರಕ್ಷಣೆ ಆಯಿತು
ಒಬ್ಬ ಬಲಾತ್ಕಾರಿ ಸಂಭೋಗಿಯು ಒಂದು ವೇಳೆ ಆಕ್ರಮಿಸಿದರೆ, ನೀವೇನು ಮಾಡುವಿರಿ? ವಿರೋಧಾತ್ಮಕ ಸಲಹೆಗಳು ಇವೆ. ಪ್ರತಿಭಟನೆಯು ಆಕ್ರಮಣಗಾರರನ್ನು ಕೇವಲ ರೇಗಿಸುತ್ತದೆ ಎಂದು ಕೆಲವರ ವಾದ, ಆದಾಗ್ಯೂ ಸ್ತ್ರೀಯು ಪ್ರತಿಭಟಿಸಬೇಕು ಎಂದು ಬೈಬಲು ಸೂಚಿಸುತ್ತದೆ. (ಧರ್ಮೋಪದೇಶಕಾಂಡ 22:23-27) ಉತ್ತಮ ಸಲಹೆ ಯಾವುದು?
ದ ಅಮೆರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ನ ಜನವರಿ ಸಂಚಿಕೆಯಲ್ಲಿ ಪ್ರಕಾಶಿತವಾದ ಒಂದು ಹೊಸ ಅಧ್ಯಯನವು ಪ್ರತಿಭಟನೆಯನ್ನು ಸೂಚಿಸುತ್ತದೆ. ಲೇಖನವನ್ನುವುದು: “ಪ್ರಾಯೋಗಿಕ ಸಂಶೋಧನೆಯು ಒಮ್ಮುಖವಾಗಿ ಒಂದು ಮಹತ್ವದ ಸಮಾಪ್ತಿಗೆ ಬಂತು: ಪ್ರತಿಭಟನೆಯು ಧಾಳಿಯ ಸಂಭವನೀಯತೆಯ ಪೂರೈಸುವಿಕೆಯನ್ನು ಪ್ರಾಯಶಃ ಕಡಿಮೆಗೊಳಿಸುತ್ತದೆ.” ಕಳೆದ ಸಪ್ಟಂಬರಿನಲ್ಲಿ ಜಪಾನಿನಲ್ಲಿ ಒಬ್ಬ ಸ್ತ್ರೀಗೆ ಸಂಭವಿಸಿದ್ದರ ಮೂಲಕ ಉದಾಹರಿಸಲ್ಪಟ್ಟಿದೆ. ಅವಳೊಬ್ಬಳೇ ವಾಸಿಸುತ್ತಿದ್ದ ಮನೆಗೆ ತಡವಾಗಿ ಅವಳು ಹಿಂತೆರಳಿದ್ದಳಷ್ಟೇ. ಅವಳು ವಿವರಿಸುವುದು:
“ಒಬ್ಬ ಬಲಾತ್ಕಾರಿ ಸಂಭೋಗಿಯು ಮನೆಯೊಳಕ್ಕೆ ನುಗ್ಗಿ ಕದಗಳಿಗೆ ಬೀಗ ಹಾಕಿದನು. ಪಕ್ಕನೆ ಸಂಭವಿಸಿದ ಘಟನೆಯಿಂದ ಆಶ್ಚರ್ಯ ಹಾಗೂ ಗಾಬರಿಗೊಂಡು ನಾನು ಸ್ಥಂಭಿತಳಾದೆ. ಆ ಮನುಷ್ಯನು ನನ್ನನ್ನು ಹಾಸುಕೊಣೆಯೊಳಗೆ ಎಳೆದೊಯ್ಯಲು ಪ್ರಯತ್ನಿಸಿದನು, ಆದರೆ ನಾನೊಂದು ಕಂಭವನ್ನು ಹಿಡಿದುಕೊಂಡೆ ಮತ್ತು ಪ್ರತಿಭಟಿಸಿದೆ.
“ಆಗ ನನಗೆ ಧರ್ಮೋಪದೇಶಕಾಂಡ 22ನೆಯ ಅಧ್ಯಾಯದ ವಚನಗಳು ನೆನಪಿಗೆ ಬಂದವು. ಬಲಾತ್ಕರಿಸಲ್ಪಟ್ಟಾಗ ಸ್ತ್ರೀಯು ಒಂದು ವೇಳೆ ಕೂಗಿಕೊಳ್ಳದೇ ಹೋದರೆ, ಅವಳು ಪುರುಷನಿಗೆ ಸಮ್ಮತಿಸಿದಂತಾಗುತ್ತದೆ ಮತ್ತು ಅದು ಯೆಹೋವನ ವಿರುದ್ಧ ಪಾಪಗೈದವಳಾಗುತ್ತಾಳೆ ಎಂದು ಅಲ್ಲಿ ಹೇಳುತ್ತದೆ. ಹಾಗೂ ‘ಬಲಾತ್ಕಾರ ಸಂಭೋಗ—ನಿಮ್ಮನ್ನು ಹೇಗೆ ಸ್ವತಃ ರಕ್ಷಿಸಿಕೊಳ್ಳುತ್ತೀರಿ?’ ಎಂಬ ಒಕ್ಟೋಬರ್ 8, 1980ರ ಜಪಾನಿನ ಸಂಚಿಕೆಯ ಎಚ್ಚರ!ದಲ್ಲಿ ಓದಿದ ಲೇಖನವು ನಾನು ನೆನಪಿಸಿಕೊಂಡೆ. ಇದು ಇಂಗ್ಲೀಷಿನಲ್ಲಿ ಜುಲೈ 8, 1980ರಲ್ಲಿ ಬಂದಿತ್ತು.
“ಹೇಗೂ ನಾನು ಯೋಚಿಸಿದೆ: ‘ನಾನು ಕಿರುಚಲೇ ಬೇಕು ಮತ್ತು ನನ್ನ ಯೋಗ್ಯತೆಗಾಗಿ ಎಲ್ಲಾ ರೀತಿಯಲ್ಲಿ ಅವನನ್ನು ಪ್ರತಿಭಟಿಸಬೇಕು.’ ಆದುದರಿಂದ ನಾನು ಗಟ್ಟಿಯಾಗಿ ಅರಚಿದೆ: ‘ಯೆಹೋವನೇ, ನನಗೆ ಸಹಾಯಮಾಡು!’ ಹೀಗೆ ಪುನಃ ಪುನಃ ಮಾಡುವುದನ್ನು ಮುಂದುವರಿಸಿದೆ. ಬಲಾತ್ಕಾರಿ ಸಂಭೋಗಿಯು ನನ್ನ ಕೈಗಳನ್ನು ಬಲಕ್ಕೆ ಎಳೆದಾಗ, ನಾನು ಎಡಕ್ಕೆ ಎಳೆಯುತ್ತಿದ್ದೆ. ಅವನು ಮುಂದಕ್ಕೆ ಎಳೆದಾಗ ನಾನು ಹಿಂದಕ್ಕೆಳೆದೆ, ಅವನು ನನ್ನ ಬಾಯಿ ಮುಚ್ಚಿ ನಾನು ಅರಚದಂತೆ ಮಾಡಲು ಪ್ರಯತ್ನಿಸಿದಾಗ, ನಾನವನನ್ನು ಕಚ್ಚಿದೆ. ಯಾವುದೇ ರೀತಿಯಲ್ಲಿ ನಾನವನನ್ನು ಪ್ರತಿಭಟಿಸುತ್ತಾ ಇದ್ದೆ.
“ಕ್ರಮೇಣ ನಾನು ದಣಿದೆ. ಉಸಿರಾಡಲು ನನಗೆ ಕಷ್ಟವಾಗಲಾರಂಭಿಸಿತು, ಮತ್ತು ನನ್ನ ಹೃದಯ ನಿಂತುಹೋಗುತ್ತದೆಂದು ನಾನೆಣಿಸಿದೆ, ಆದರೂ ಅವನನ್ನು ಪ್ರತಿಭಟಿಸಲು ನನಗೆ ಮಾಡಲು ಸಾಧ್ಯವಿರುವುದನ್ನೆಲ್ಲಾ ಮಾಡುವುದನ್ನು ಮುಂದುವರಿಸಿದೆ ಮತ್ತು ಸಹಾಯಕ್ಕಾಗಿ ಯೆಹೋವನಿಗೆ ಬೇಡುತ್ತಾ ಇದ್ದೆ. ಇದರ ಫಲವಾಗಿ ಬಲಾತ್ಕಾರ ಸಂಭೋಗಿಯು ಬಿಟ್ಟುಬಿಟ್ಟನು, ಅವಸರದಿಂದ ಬಾಗಿಲಿನೆಡೆಗೆ ಹೋದನು ಮತ್ತು ಹೊರಗೆ ನಡೆದನು.
“ಯೆಹೋವನ ಸಹಾಯದಿಂದ ಮತ್ತು ಎಚ್ಚರ!ದಲ್ಲಿ ನಾನೇನು ಓದಿದೇನೋ ಅದನ್ನು ಅನ್ವಯಿಸಿದ್ದರ ಕಾರಣ ಬಲಾತ್ಕಾರ ಸಂಭೋಗಕ್ಕೆ ಬಲಿಯಾಗುವುದರಿಂದ ನಾನು ತಪ್ಪಿಸಿಕೊಂಡೆ ಎಂದು ನಂಬುತ್ತೇನೆ. ನಾನು ಎಚ್ಚರ!ದ ಲೇಖನವನ್ನು ಓದಿರದಿರುತ್ತಿದ್ದರೆ, ಭಯದ ಕಾರಣ ನಾನು ಸುಮ್ಮನೆ ಕುಳಿತುಕೊಳ್ಳುತ್ತಿದ್ದೆ ಮತ್ತು ದುಷ್ಕರ್ಮಿಯು ತಾನು ಹೇಳಿದ್ದನ್ನು ಮಾಡುತ್ತಿದ್ದನು. ನಿಮಗೆ ತುಂಬಾ, ತುಂಬಾ ಉಪಕಾರಗಳು.” (g89 8/22)