ವಿಮೋಚನಕಾಂಡ
1 ಇಸ್ರಾಯೇಲ ಅಂದ್ರೆ ಯಾಕೋಬ ಈಜಿಪ್ಟ್* ದೇಶಕ್ಕೆ ಬಂದಾಗ ಅವನ ಜೊತೆ ಅವನ ಗಂಡುಮಕ್ಕಳು ತಮ್ಮತಮ್ಮ ಕುಟುಂಬದ ಜೊತೆ ಬಂದ್ರು.+ ಆ ಗಂಡುಮಕ್ಕಳು ಯಾರಂದ್ರೆ 2 ರೂಬೇನ್, ಸಿಮೆಯೋನ್, ಲೇವಿ, ಯೆಹೂದ.+ 3 ಇಸ್ಸಾಕಾರ್, ಜೆಬುಲೂನ್, ಬೆನ್ಯಾಮೀನ್. 4 ದಾನ್, ನಫ್ತಾಲಿ. ಗಾದ್, ಅಶೇರ್.+ 5 ಯೋಸೇಫ ಮುಂಚೆಯಿಂದಾನೇ ಈಜಿಪ್ಟಲ್ಲಿದ್ದ. ಯಾಕೋಬನ ವಂಶದವರು ಒಟ್ಟು 70 ಜನ.+ 6 ಸ್ವಲ್ಪ ದಿನ ಆದ್ಮೇಲೆ ಯೋಸೇಫ ತೀರಿಹೋದ.+ ಅವನ ಅಣ್ಣತಮ್ಮಂದಿರು ಮತ್ತು ಆ ಪೀಳಿಗೆಯವರೆಲ್ಲ ತೀರಿಹೋದ್ರು. 7 ಇಸ್ರಾಯೇಲ್ಯರ ವಂಶ ದೊಡ್ಡದಾಯ್ತು. ಅವರು ದಿನದಿಂದ ದಿನಕ್ಕೆ ಬಲ ಆಗ್ತಾ ಹೋದ್ರು. ಅವರ ಸಂಖ್ಯೆ ತುಂಬ ಬೇಗ ಜಾಸ್ತಿ ಆಯ್ತು. ಎಷ್ಟಂದ್ರೆ ಆ ದೇಶದಲ್ಲೆಲ್ಲಾ ತುಂಬ್ಕೊಂಡ್ರು.+
8 ಸ್ವಲ್ಪ ವರ್ಷ ಆದ್ಮೇಲೆ ಒಬ್ಬ ಹೊಸ ರಾಜ ಈಜಿಪ್ಟನ್ನ ಆಳೋಕೆ ಶುರುಮಾಡಿದ. ಅವನಿಗೆ ಯೋಸೇಫನ ಬಗ್ಗೆ ಗೊತ್ತಿರಲಿಲ್ಲ. 9 ಆ ರಾಜ ತನ್ನ ಜನರಿಗೆ “ಇಸ್ರಾಯೇಲ್ಯರು ನಮಗಿಂತ ಜಾಸ್ತಿ ಆಗಿದ್ದಾರೆ, ಬಲಿಷ್ಠರಾಗಿದ್ದಾರೆ!+ 10 ಅದಕ್ಕೆ ಅವರ ವಂಶ ಬೆಳೆಯದ ಹಾಗೆ ನಾವು ಏನಾದ್ರೂ ಮಾಡೋಣ. ಇಲ್ಲದಿದ್ರೆ ಮುಂದೆ ಶತ್ರುಗಳು ನಮ್ಮ ವಿರುದ್ಧ ಯುದ್ಧಕ್ಕೆ ಬಂದಾಗ ಇಸ್ರಾಯೇಲ್ಯರು ಅವರ ಜೊತೆ ಸೇರ್ಕೊಳ್ತಾರೆ. ನಮ್ಮ ವಿರುದ್ಧ ಯುದ್ಧ ಮಾಡಿ ಈ ದೇಶ ಬಿಟ್ಟು ಹೋಗ್ತಾರೆ” ಅಂದ.
11 ಅದಕ್ಕೆ ಈಜಿಪ್ಟಿನವರು ಇಸ್ರಾಯೇಲ್ಯರಿಗೆ ಕಷ್ಟವಾದ ಕೆಲಸ ಕೊಡೋಕೆ, ಅವರನ್ನ ಪೀಡಿಸೋಕೆ ಅಧಿಕಾರಿಗಳಿಗೆ ಹೇಳಿದ್ರು.+ ಆ ಅಧಿಕಾರಿಗಳು ಅವರಿಂದ ಬಲವಂತವಾಗಿ ದುಡಿಸ್ಕೊಳ್ತಾ ಇದ್ರು. ಹೀಗೆ ಇಸ್ರಾಯೇಲ್ಯರಿಂದ ಕೆಲಸ ಮಾಡಿಸಿ ಫರೋಹನಿಗೋಸ್ಕರ ಪಿತೋಮ್ ಮತ್ತು ರಾಮ್ಸೇಸ್+ ಅನ್ನೋ ಉಗ್ರಾಣ ಪಟ್ಟಣಗಳನ್ನ ಕಟ್ಟಿಸಿದ್ರು. 12 ಆದ್ರೆ ಇಸ್ರಾಯೇಲ್ಯರನ್ನ ಎಷ್ಟು ಹೆಚ್ಚಾಗಿ ಪೀಡಿಸಿದ್ರೋ ಅಷ್ಟೇ ಹೆಚ್ಚಾದ್ರು. ಎಲ್ಲಾ ಕಡೆ ತುಂಬ್ಕೊಂಡ್ರು. ಆದ್ರಿಂದ ಇಸ್ರಾಯೇಲ್ಯರಂದ್ರೆ ಈಜಿಪ್ಟಿನ ಜನ ತುಂಬ ಹೆದರುತಿದ್ರು, ಅವರನ್ನ ನೋಡಿ ಅಸಹ್ಯಪಡ್ತಿದ್ರು.+ 13 ಈಜಿಪ್ಟಿನ ಜನ್ರು ಇಸ್ರಾಯೇಲ್ಯರನ್ನ ಗುಲಾಮರಾಗಿ ಮಾಡ್ಕೊಂಡು ಇನ್ನೂ ಜಾಸ್ತಿ ದುಡಿಸ್ಕೊಂಡ್ರು.+ 14 ಮಣ್ಣಿನ ಗಾರೆ ಕೆಲಸ, ಇಟ್ಟಿಗೆ ಮಾಡೋ ಕೆಲಸ, ಹೊಲದಲ್ಲಿ ಎಲ್ಲಾ ಕೆಲಸ ಮಾಡಲೇಬೇಕು ಅಂತ ಒತ್ತಾಯ ಮಾಡಿ ಕೊಡಬಾರದ ಕಷ್ಟ ಕೊಟ್ರು. ಅವರಿಂದ ಎಲ್ಲ ತರದ ಬಿಟ್ಟಿ ಕೆಲಸಗಳನ್ನ ಮಾಡಿಸ್ಕೊಂಡ್ರು.+ ಇದ್ರಿಂದ ಅವರಿಗೆ ಜೀವನದ ಮೇಲೆ ಜಿಗುಪ್ಸೆ ಹುಟ್ಟಿಬಿಡ್ತು.
15 ಶಿಫ್ರಾ, ಪೂಗಾ ಅನ್ನೋ ಇಬ್ರಿಯ* ಹೆಂಗಸರು ಹೆರಿಗೆ ಮಾಡಿಸ್ತಿದ್ರು.* ಈಜಿಪ್ಟಿನ ರಾಜ ಅವರನ್ನ ಕರೆದು 16 “ನೀವು ಇಬ್ರಿಯ ಸ್ತ್ರೀಯರಿಗೆ ಹೆರಿಗೆ ಮಾಡಿಸುವಾಗ+ ಹುಟ್ಟೋ* ಮಗು ಗಂಡಾಗಿದ್ರೆ ಕೊಲ್ಲಬೇಕು, ಹೆಣ್ಣಾಗಿದ್ರೆ ಉಳಿಸಬೇಕು” ಅಂದ. 17 ಆದ್ರೆ ಹೆರಿಗೆ ಮಾಡಿಸೋರು ಸತ್ಯದೇವರಿಗೆ ಭಯಪಡ್ತಿದ್ರು. ಅದಕ್ಕೆ ರಾಜ ಹೇಳಿದ ಹಾಗೆ ಗಂಡುಮಕ್ಕಳನ್ನ ಸಾಯಿಸಲಿಲ್ಲ.+ 18 ಸ್ವಲ್ಪ ದಿನ ಆದ್ಮೇಲೆ ಈಜಿಪ್ಟಿನ ರಾಜ ಆ ಹೆರಿಗೆ ಮಾಡಿಸೋರನ್ನ ಕರೆದು “ನೀವ್ಯಾಕೆ ಗಂಡುಮಕ್ಕಳನ್ನ ಸಾಯಿಸಲಿಲ್ಲ?” ಅಂತ ಕೇಳಿದ. 19 ಅವರು “ಇಬ್ರಿಯ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರ ತರ ಅಲ್ಲ, ತುಂಬ ಚುರುಕು. ನಾವು ಹೋಗೋ ಮುಂಚೆನೇ ಮಗು ಹೆತ್ತುಬಿಡ್ತಾರೆ” ಅಂದ್ರು.
20 ಹೆರಿಗೆ ಮಾಡಿಸ್ತಿದ್ದ ಆ ಹೆಂಗಸರು ಹೀಗೆ ಮಾಡ್ತಾ ಇದ್ದಿದಕ್ಕೆ ದೇವರು ಅವರಿಗೆ ಆಶೀರ್ವಾದ ಮಾಡಿದನು. ಇಸ್ರಾಯೇಲ್ಯರು ಇನ್ನೂ ಜಾಸ್ತಿ ಆಗಿ ಬಲಶಾಲಿ ಆಗ್ತಾ ಹೋದ್ರು. 21 ಹೆರಿಗೆ ಮಾಡಿಸೋ ಆ ಹೆಂಗಸರಿಗೆ ಸತ್ಯದೇವರ ಮೇಲೆ ಭಯ ಇದ್ದದ್ರಿಂದ ದೇವರು ಅವರಿಗೆ ಮಕ್ಕಳನ್ನ ಕೊಟ್ಟು ಆಶೀರ್ವಾದ ಮಾಡಿದನು. 22 ಕೊನೆಗೆ ಫರೋಹ ತನ್ನೆಲ್ಲ ಜನ್ರಿಗೆ “ಇಬ್ರಿಯರಿಗೆ ಹುಟ್ಟೋ ಎಲ್ಲಾ ಗಂಡು ಮಕ್ಕಳನ್ನ ನೀವು ನೈಲ್ ನದಿಗೆ ಎಸೆದುಬಿಡಿ, ಆದ್ರೆ ಹೆಣ್ಣು ಮಕ್ಕಳನ್ನ ಉಳಿಸಿ” ಅಂತ ಆಜ್ಞೆ ಕೊಟ್ಟ.+
2 ಲೇವಿ ಕುಲದ ಒಬ್ಬ ಪುರುಷ ಅದೇ ಕುಲದ ಒಬ್ಬ ಸ್ತ್ರೀಯನ್ನ ಮದುವೆ ಆದ.+ 2 ಅವಳಿಗೆ ಒಂದು ಗಂಡುಮಗು ಆಯ್ತು. ಅದು ತುಂಬ ಮುದ್ದಾಗಿದೆ ಅಂತ ಅದನ್ನ ಮೂರು ತಿಂಗಳು ಬಚ್ಚಿಟ್ಟಳು.+ 3 ಆಮೇಲೆ ಮಗುನ ಬಚ್ಚಿಡೋಕೆ ಆಗಿಲ್ಲ.+ ಆಗ ಅವಳು ಪಪೈರಸ್ ಗಿಡದಿಂದ ಮಾಡಿದ ಬುಟ್ಟಿ* ತಗೊಂಡು ಅದಕ್ಕೆ ಟಾರಿನಂಥ ಅಂಟು ಹಚ್ಚಿದಳು. ಮಗುನ ಆ ಬುಟ್ಟಿಯಲ್ಲಿಟ್ಟು ಅದನ್ನ ನೈಲ್ ನದಿತೀರದಲ್ಲಿ ಬೆಳೆದ ಆಪುಹುಲ್ಲಿನ ಮಧ್ಯ ಇಟ್ಟಳು. 4 ಮಗುವಿನ ಅಕ್ಕ+ ಮಗುಗೆ ಏನಾಗುತ್ತೆ ಅಂತ ನೋಡೋಕೆ ಸ್ವಲ್ಪ ದೂರದಲ್ಲಿ ನಿಂತಳು.
5 ಆಗ ಫರೋಹನ ಮಗಳು ನೈಲ್ ನದಿಯಲ್ಲಿ ಸ್ನಾನ ಮಾಡೋಕೆ ಬಂದಳು. ಅವಳ ಸೇವಕಿಯರು ನದಿತೀರದಲ್ಲಿ ನಡಿತಿದ್ದಾಗ ಫರೋಹನ ಮಗಳು ಆ ಬುಟ್ಟಿಯನ್ನ ನೋಡಿದಳು. ತಕ್ಷಣ ತನ್ನ ದಾಸಿನ ಕಳಿಸಿ ಆ ಬುಟ್ಟಿ ತರಿಸಿದಳು.+ 6 ಬುಟ್ಟಿ ತೆರೆದಾಗ ಅದ್ರಲ್ಲಿ ಒಂದು ಗಂಡುಮಗು ಇತ್ತು! ಅದು ಅಳ್ತಿತ್ತು. ಅವಳು “ಇದು ಇಬ್ರಿಯರ ಮಗು” ಅಂದಳು. ಆ ಮಗುನ ನೋಡಿ ಅವಳಿಗೆ ಪಾಪ ಅನಿಸ್ತು. 7 ಆಗ ಆ ಮಗುವಿನ ಅಕ್ಕ ಬಂದು “ಈ ಮಗುನ ಸಾಕೋಕೆ ಒಬ್ಬ ಇಬ್ರಿಯ ಸ್ತ್ರೀಯನ್ನ ಕರ್ಕೊಂಡು ಬರ್ಲಾ?” ಅಂತ ಫರೋಹನ ಮಗಳನ್ನ ಕೇಳಿದಳು. 8 ಅದಕ್ಕೆ ಅವಳು “ಸರಿ, ಕರ್ಕೊಂಡು ಬಾ!” ಅಂದಳು. ತಕ್ಷಣ ಆ ಹುಡುಗಿ ಹೋಗಿ ಮಗುವಿನ ಅಮ್ಮನನ್ನೇ ಕರ್ಕೊಂಡು ಬಂದಳು.+ 9 ಫರೋಹನ ಮಗಳು ಆ ಸ್ತ್ರೀಗೆ “ಈ ಮಗುನ ತಗೊಂಡು ಹೋಗಿ ಹಾಲು ಕೊಟ್ಟು ಸಾಕು. ನಾನು ನಿನಗೆ ಸಂಬಳ ಕೊಡ್ತೀನಿ” ಅಂದಳು. ಆ ಸ್ತ್ರೀ ಮಗುನ ತಗೊಂಡು ಹೋಗಿ ಸಾಕಿದಳು. 10 ಮಗು ಬೆಳೆದು ದೊಡ್ಡವನಾದಾಗ ಆ ಸ್ತ್ರೀ ಅವನನ್ನ ಫರೋಹನ ಮಗಳ ಹತ್ರ ಕರ್ಕೊಂಡು ಬಂದಳು. ಅವಳು ಅವನನ್ನ ತನ್ನ ಮಗನಾಗಿ ಸ್ವೀಕರಿಸಿದಳು.+ “ಇವನನ್ನ ನಾನು ನೀರಿಂದ ಎತ್ಕೊಂಡೆ” ಅಂತ ಹೇಳಿ ಅವನಿಗೆ ಮೋಶೆ* ಅಂತ ಹೆಸರಿಟ್ಟಳು.+
11 ಮೋಶೆ ಯುವಕನಾದಾಗ ತನ್ನ ಇಬ್ರಿಯ ಸಹೋದರರು ಬಿಟ್ಟಿಕೆಲಸ ಮಾಡ್ತಾ ಎಷ್ಟು ಕಷ್ಟಪಡ್ತಿದ್ದಾರೆ ಅಂತ ನೋಡೋಕೆ ಹೋದ.+ ಆಗ ಒಬ್ಬ ಈಜಿಪ್ಟಿನವನು ಒಬ್ಬ ಇಬ್ರಿಯ ಸಹೋದರನಿಗೆ ಹೊಡಿಯೋದನ್ನ ನೋಡಿದ. 12 ಆಗ ಅವನು ಆಕಡೆ ಈಕಡೆ ನೋಡಿ ಯಾರೂ ಇಲ್ಲದೆ ಇದ್ದಿದ್ರಿಂದ ಈಜಿಪ್ಟಿನ ಆ ವ್ಯಕ್ತಿಯನ್ನ ಕೊಂದು ಮರಳಲ್ಲಿ ಹೂತುಹಾಕಿದ.+
13 ಮಾರನೇ ದಿನ ಮೋಶೆ ಹೊರಗೆ ಹೋದಾಗ ಇಬ್ಬರು ಇಬ್ರಿಯ ಗಂಡಸರು ಜಗಳ ಮಾಡೋದನ್ನ ನೋಡಿದ. ಆಗ ಮೋಶೆ ತಪ್ಪು ಮಾಡಿದವನಿಗೆ “ನೀನ್ಯಾಕೆ ಅವನನ್ನ ಹೊಡಿತಾ ಇದ್ದಿಯಾ? ಅವನು ನಿನ್ನ ಸಹೋದರನಲ್ವಾ?”+ ಅಂತ ಕೇಳಿದ. 14 ಅದಕ್ಕವನು “ನಮ್ಮನ್ನ ಕೇಳೋಕೆ ನೀನ್ಯಾರು? ನಮ್ಮ ಅಧಿಕಾರಿನಾ, ನ್ಯಾಯಾಧೀಶನಾ? ಆ ಈಜಿಪ್ಟಿನ ವ್ಯಕ್ತಿಯನ್ನ ಕೊಂದ ಹಾಗೆ ನನ್ನನ್ನೂ ಕೊಲ್ಲಬೇಕಂತ ಇದ್ದೀಯಾ?”+ ಅಂದ. ತಾನು ಮಾಡಿದ್ದು ಎಲ್ರಿಗೂ ಗೊತ್ತಾಗಿಬಿಟ್ಟಿದೆ ಅಂತ ಮೋಶೆಗೆ ಭಯ ಆಯ್ತು.
15 ಈ ವಿಷ್ಯ ಫರೋಹನ ಕಿವಿಗೆ ಬಿದ್ದಾಗ ಅವನು ಮೋಶೆಯನ್ನ ಕೊಲ್ಲೋಕೆ ಪ್ರಯತ್ನಿಸಿದ. ಆದ್ರೆ ಮೋಶೆ ಫರೋಹನಿಂದ ದೂರ ಮಿದ್ಯಾನ್+ ದೇಶಕ್ಕೆ ಓಡಿಹೋದ. ಅಲ್ಲಿ ಹೋಗಿ ಒಂದು ಬಾವಿ ಹತ್ರ ಕೂತ. 16 ಮಿದ್ಯಾನಿನ ಪುರೋಹಿತನಿಗೆ+ ಏಳು ಹೆಣ್ಣುಮಕ್ಕಳು ಇದ್ರು. ಅವರು ತಮ್ಮ ತಂದೆಯ ಆಡು-ಕುರಿಗಳಿಗೆ ನೀರು ಕುಡಿಸೋಕೆ ಆ ಬಾವಿ ಹತ್ರ ಬಂದ್ರು. ಅವರು ನೀರು ಸೇದಿ ತೊಟ್ಟಿಗಳನ್ನ ತುಂಬಿಸಬೇಕಂತ ಇದ್ರು. 17 ಆದ್ರೆ ಕುರುಬರು ಅಲ್ಲಿಗೆ ಬಂದು ಅವರನ್ನ ಓಡಿಸಿಬಿಟ್ರು. ಆ ಕುರುಬರು ಯಾವಾಗ್ಲೂ ಹೀಗೇ ಮಾಡ್ತಿದ್ರು. ಆಗ ಮೋಶೆ ಆ ಹೆಣ್ಣುಮಕ್ಕಳನ್ನ ಕಾಪಾಡಿ ಅವರ ಆಡು-ಕುರಿಗಳಿಗೆ ನೀರು ಕೊಟ್ಟ. 18 ಅವರು ಮನೆಗೆ ಬಂದಾಗ ಅವರ ತಂದೆ ರೆಗೂವೇಲ*+ ಆಶ್ಚರ್ಯದಿಂದ “ಇವತ್ತು ಹೇಗೆ ಇಷ್ಟು ಬೇಗ ಮನೆಗೆ ಬಂದ್ರಿ?” ಅಂತ ಕೇಳಿದ. 19 ಅದಕ್ಕೆ ಅವರು “ಈಜಿಪ್ಟಿನ ಒಬ್ಬ ವ್ಯಕ್ತಿ+ ಆ ಕುರುಬರಿಂದ ನಮ್ಮನ್ನ ಕಾಪಾಡಿದ. ಅಷ್ಟೇ ಅಲ್ಲ ನೀರು ಸೇದಿ ನಮ್ಮ ಆಡು-ಕುರಿಗಳಿಗೆ ಕುಡಿಯೋಕೆ ಕೊಟ್ಟ” ಅಂದ್ರು. 20 ಆಗ ತಂದೆ “ಅವನನ್ನ ಯಾಕೆ ಮನೆಗೆ ಕರ್ಕೊಂಡು ಬರಲಿಲ್ಲ? ಹೋಗಿ ಕರ್ಕೊಂಡು ಬನ್ನಿ, ಅವನು ನಮ್ಮ ಜೊತೆ ಊಟ ಮಾಡ್ಲಿ” ಅಂದ. 21 ಆಮೇಲೆ ಮೋಶೆ ಅವರ ಜೊತೆನೇ ಇರೋಕೆ ಒಪ್ಕೊಂಡ. ರೆಗೂವೇಲ ತನ್ನ ಮಗಳಾದ ಚಿಪ್ಪೋರಳನ್ನ+ ಮೋಶೆಗೆ ಕೊಟ್ಟು ಮದುವೆ ಮಾಡಿದ. 22 ಆಮೇಲೆ ಅವಳಿಗೆ ಒಂದು ಗಂಡುಮಗು ಆಯ್ತು. ಆಗ ಮೋಶೆ ಬೇರೆ ದೇಶಕ್ಕೆ ಬಂದು ವಿದೇಶಿಯಾಗಿ ವಾಸ ಮಾಡ್ತಾ ಇದ್ದದ್ರಿಂದ+ ತನ್ನ ಮಗುಗೆ ಗೇರ್ಷೋಮ್*+ ಅಂತ ಹೆಸರಿಟ್ಟ.
23 ತುಂಬ ವರ್ಷ ಆದ್ಮೇಲೆ ಈಜಿಪ್ಟಿನ ರಾಜ ತೀರಿಹೋದ.+ ಆದ್ರೆ ಇಸ್ರಾಯೇಲ್ಯರು ಗುಲಾಮರಾಗೇ ಇದ್ರು, ಕಷ್ಟದಿಂದ ನರಳ್ತಾ ದುಃಖದಿಂದ ಅಳ್ತಾ ಸಹಾಯ ಮಾಡು ಅಂತ ಸತ್ಯ ದೇವರನ್ನ ಕೇಳ್ತಾ ಇದ್ರು.+ 24 ಸಮಯ ಬಂದಾಗ ದೇವರು ಅವರ ನರಳಾಟದ ಕೂಗನ್ನ ಕೇಳಿದನು.+ ಅಬ್ರಹಾಮ, ಇಸಾಕ, ಯಾಕೋಬನ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ* ನೆನಪಿಸ್ಕೊಂಡನು.*+ 25 ಹಾಗಾಗಿ ದೇವರು ಇಸ್ರಾಯೇಲ್ಯರ ಕಡೆ ಅವರ ಕಷ್ಟಗಳ ಕಡೆ ಗಮನ ಕೊಟ್ಟನು.
3 ಮೋಶೆ ಕುರುಬನಾದ. ಅವನ ಮಾವ ಇತ್ರೋ+ ಮಿದ್ಯಾನಿನ ಪುರೋಹಿತನಾಗಿದ್ದ. ಮೋಶೆ ತನ್ನ ಮಾವನ ಕುರಿಗಳನ್ನ ಮೇಯಿಸ್ತಿದ್ದ. ಒಂದಿನ ಅವನು ಕಾಡಿನ* ಪಶ್ಚಿಮ ದಿಕ್ಕಿಗೆ ಕುರಿಗಳನ್ನ ಕರ್ಕೊಂಡು ಹೋಗ್ತಾ ಸತ್ಯ ದೇವರ ಬೆಟ್ಟಕ್ಕೆ ಅಂದ್ರೆ ಹೋರೇಬ್‌ಗೆ+ ಬಂದ. 2 ಅಲ್ಲಿ ಅವನಿಗೆ ಮುಳ್ಳಿನ ಪೊದೆಯೊಳಗೆ ಉರಿತಿದ್ದ ಬೆಂಕಿಯಲ್ಲಿ ಯೆಹೋವನ ದೂತ ಕಾಣಿಸ್ಕೊಂಡ.+ ಮೋಶೆ ಆ ಪೊದೆಯನ್ನೇ ನೋಡ್ತಿದ್ದ. ಆ ಮುಳ್ಳಿನ ಪೊದೆಗೆ ಬೆಂಕಿ ಹೊತ್ತಿ ಉರಿತಿದ್ರು ಅದು ಸುಟ್ಟು ಹೋಗಿಲ್ಲ. 3 ಆಗ ಮೋಶೆ “ಈ ಮುಳ್ಳಿನ ಪೊದೆ ಯಾಕೆ ಸುಟ್ಟು ಹೋಗ್ತಿಲ್ಲಾ? ಹತ್ರ ಹೋಗಿ ನೋಡ್ತೀನಿ” ಅಂದ್ಕೊಂಡ. 4 ಅವನು ಪೊದೆ ಹತ್ರ ಬರೋದನ್ನ ಯೆಹೋವ ನೋಡಿ ಪೊದೆ ಒಳಗಿಂದ “ಮೋಶೆ! ಮೋಶೆ!” ಅಂತ ಕರೆದನು. ಅದಕ್ಕವನು “ಹೇಳು ಸ್ವಾಮಿ” ಅಂದ. 5 ಆತನು “ಹತ್ರ ಬರಬೇಡ. ನಿನ್ನ ಚಪ್ಪಲಿ ಬಿಚ್ಚಿಡು. ಯಾಕಂದ್ರೆ ನೀನು ನಿಂತ ಜಾಗ ಪವಿತ್ರವಾಗಿದೆ” ಅಂದನು.
6 “ನಾನು ನಿನ್ನ ಪೂರ್ವಜರ* ದೇವರು, ಅಬ್ರಹಾಮನ ದೇವರು,+ ಇಸಾಕನ ದೇವರು,+ ಯಾಕೋಬನ ದೇವರು”+ ಅಂದನು. ಆಗ ಮೋಶೆ ಸತ್ಯ ದೇವರನ್ನ ನೋಡೋಕೆ ಭಯಪಟ್ಟು ಮುಖ ಮುಚ್ಕೊಂಡ. 7 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ “ಈಜಿಪ್ಟಲ್ಲಿ ಇರೋ ನನ್ನ ಜನ್ರ ನೋವು ನರಳಾಟವನ್ನ ನಾನು ಕಣ್ಣಾರೆ ನೋಡಿದ್ದೀನಿ. ಈಜಿಪ್ಟ್ ಜನ ಅವರನ್ನ ಬಲವಂತವಾಗಿ ದುಡಿಸ್ಕೊಳ್ತಿದ್ದಾರೆ. ಅದನ್ನ ತಾಳಕ್ಕಾಗದೆ ನನ್ನ ಜನ ಸಹಾಯಕ್ಕಾಗಿ ಬೇಡ್ಕೊಳ್ತಿದ್ದಾರೆ. ನಾನು ಅವರ ಪ್ರಾರ್ಥನೆ ಕೇಳಿದ್ದೀನಿ. ಅವರು ಎಷ್ಟು ನೋವು ಅನುಭವಿಸ್ತಾ ಇದ್ದಾರಂತ ನನಗೆ ಚೆನ್ನಾಗಿ ಗೊತ್ತು.+ 8 ಹಾಗಾಗಿ ನಾನು ಇಳಿದುಹೋಗಿ* ಅವರನ್ನ ಈಜಿಪ್ಟ್ ಜನ್ರ ಕೈಯಿಂದ ಬಿಡಿಸಿ ಆ ದೇಶದಿಂದ ಕರ್ಕೊಂಡು ಬರ್ತಿನಿ.+ ಅವರನ್ನ ಹಾಲೂ ಜೇನೂ ಹರಿಯೋ+ ವಿಶಾಲವಾದ ಒಳ್ಳೇ ದೇಶಕ್ಕೆ ಅಂದ್ರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರೋ ಪ್ರದೇಶಕ್ಕೆ ಕರ್ಕೊಂಡು ಹೋಗ್ತೀನಿ.+ 9 ಇಸ್ರಾಯೇಲ್ಯರ ಕೂಗು ನನಗೆ ಮುಟ್ಟಿದೆ. ಈಜಿಪ್ಟ್ ಜನ್ರು ಅವರ ಮೇಲೆ ಎಷ್ಟು ಕ್ರೂರವಾಗಿ ದಬ್ಬಾಳಿಕೆ ನಡೆಸ್ತಿದ್ದಾರೆ ಅಂತ ನಾನು ನೋಡ್ದೆ.+ 10 ಅದಕ್ಕೆ ನಿನ್ನನ್ನ ಫರೋಹನ ಹತ್ರ ಕಳಿಸ್ತೀನಿ. ನನ್ನ ಜನರಾದ ಇಸ್ರಾಯೇಲ್ಯರನ್ನ ನೀನು ಈಜಿಪ್ಟಿಂದ ಕರ್ಕೊಂಡು ಬರಬೇಕು”+ ಅಂದನು.
11 ಆದ್ರೆ ಮೋಶೆ ಸತ್ಯ ದೇವರಿಗೆ “ಫರೋಹನ ಹತ್ರ ಹೋಗೋಕೆ, ಈಜಿಪ್ಟಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬರೋಕೆ ನನಗೆ ಯಾವ ಯೋಗ್ಯತೆನೂ ಇಲ್ಲ” ಅಂದ. 12 ದೇವರು “ನಾನು ನಿನ್ನ ಜೊತೆ ಇರ್ತಿನಿ.+ ನೀನು ನನ್ನ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ ಮೇಲೆ ನೀವೆಲ್ಲ ಇದೇ ಬೆಟ್ಟದಲ್ಲಿ ಸತ್ಯ ದೇವರಾದ ನನ್ನನ್ನ ಆರಾಧನೆ* ಮಾಡ್ತೀರ. ನಾನೇ ನಿನ್ನನ್ನ ಕಳಿಸಿದ್ದು ಅನ್ನೋದಕ್ಕೆ ಇದೇ ಗುರುತು”+ ಅಂದನು.
13 ಆದ್ರೆ ಮೋಶೆ ಸತ್ಯ ದೇವರಿಗೆ “ನಾನು ಇಸ್ರಾಯೇಲ್ಯರ ಹತ್ರ ಹೋಗಿ ‘ನಿಮ್ಮ ಪೂರ್ವಜರ ದೇವರು ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ’ ಅಂದಾಗ ‘ಆತನ ಹೆಸರೇನು?’+ ಅಂತ ಅವರು ಕೇಳಿದ್ರೆ ನಾನೇನು ಹೇಳಲಿ?” ಅಂತ ಕೇಳಿದ. 14 ದೇವರು ಅವನಿಗೆ “ನಾನು ಏನಾಗಬೇಕು ಅಂತ ಇಷ್ಟಪಡ್ತಿನೋ* ಹಾಗೇ ಆಗ್ತೀನಿ”*+ ಅಂದನು. “‘ಆಗ್ತೀನಿ ಅನ್ನೋ ಹೆಸ್ರು ಇರೋ ದೇವರೇ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ’+ ಅಂತ ನೀನು ಇಸ್ರಾಯೇಲ್ಯರಿಗೆ ಹೇಳಬೇಕು” ಅಂದನು. 15 ದೇವರು ಮತ್ತೆ ಮೋಶೆಗೆ ಹೀಗಂದನು:
“‘ನಿಮ್ಮ ಪೂರ್ವಜರ ದೇವರು, ಅಬ್ರಹಾಮನ ದೇವರು,+ ಇಸಾಕನ ದೇವರು,+ ಯಾಕೋಬನ ದೇವರು+ ಆದ ಯೆಹೋವ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ’ ಅಂತ ನೀನು ಇಸ್ರಾಯೇಲ್ಯರಿಗೆ ಹೇಳಬೇಕು. ಸದಾಕಾಲಕ್ಕೂ ಇದೇ ನನ್ನ ಹೆಸ್ರು.+ ಎಲ್ಲ ಪೀಳಿಗೆಯವರು ಇದೇ ಹೆಸರಿಂದ ನನ್ನನ್ನ ನೆನಪಿಸ್ಕೊಳ್ಳಬೇಕು. 16 ನೀನೀಗ ಹೋಗಿ ಇಸ್ರಾಯೇಲ್ಯರ ಹಿರಿಯರನ್ನ ಸೇರಿಸಿ ಅವರಿಗೆ ‘ನಿಮ್ಮ ಪೂರ್ವಜರ ದೇವರು, ಅಬ್ರಹಾಮ, ಇಸಾಕ ಮತ್ತು ಯಾಕೋಬನ ದೇವರು ಆದ ಯೆಹೋವ ನನಗೆ ಕಾಣಿಸ್ಕೊಂಡನು. ಆತನು “ನಾನು ನಿಮ್ಮ ಪರಿಸ್ಥಿತಿಯನ್ನ ಕಣ್ಣಾರೆ ನೋಡಿದ್ದೀನಿ,+ ಈಜಿಪ್ಟಲ್ಲಿ ನೀವು ಎಷ್ಟು ಕಷ್ಟ ಪಡ್ತಾ ಇದ್ದೀರಂತ ನೋಡಿದ್ದೀನಿ. 17 ಹಾಗಾಗಿ ನಾನು ನಿಮಗೆ ಮಾತು ಕೊಡ್ತೀನಿ. ಏನಂದ್ರೆ ನಿಮಗೆ ಕಷ್ಟ ನೋವು ಕೊಡ್ತಿರೋ ಈಜಿಪ್ಟ್ ಜನ್ರಿಂದ ನಿಮ್ಮನ್ನ ಬಿಡಿಸ್ತೀನಿ.+ ಕಾನಾನ್ಯರು, ಹಿತ್ತಿಯರು, ಅಮೋರಿಯರು,+ ಪೆರಿಜೀಯರು, ಹಿವ್ವಿಯರು, ಯೆಬೂಸಿಯರು+ ವಾಸಿಸ್ತಾ ಇರೋ ಹಾಲೂ ಜೇನೂ ಹರಿಯೋ ಕಾನಾನ್ ದೇಶಕ್ಕೆ ನಿಮ್ಮನ್ನು ಕರ್ಕೊಂಡು ಹೋಗ್ತೀನಿ”+ ಅಂದಿದ್ದಾನೆ’ ಅಂತ ಹೇಳು.
18 ಅವರು ನಿನ್ನ ಮಾತು ಕೇಳೇ ಕೇಳ್ತಾರೆ.+ ನೀನು ಇಸ್ರಾಯೇಲ್ಯರ ಹಿರಿಯರ ಜೊತೆ ಈಜಿಪ್ಟಿನ ರಾಜನ ಹತ್ರ ಹೋಗಿ ಅವನಿಗೆ ‘ಇಬ್ರಿಯರ+ ದೇವರಾದ ಯೆಹೋವ ನಮ್ಮ ಜೊತೆ ಮಾತಾಡಿದ್ದಾನೆ. ನಾವು ನಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸೋಕೆ ಮೂರು ದಿನ ಪ್ರಯಾಣಮಾಡಿ ಕಾಡಿಗೆ ಹೋಗಬೇಕು. ದಯವಿಟ್ಟು ಅನುಮತಿ ಕೊಡು’+ ಅಂತ ಹೇಳಬೇಕು. 19 ಆದ್ರೆ ಅವನು ಅನುಮತಿ ಕೊಡಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ಈಜಿಪ್ಟಿನ ರಾಜನ ವಿರುದ್ಧ ನಾನು ನನ್ನ ಶಕ್ತಿ ತೋರಿಸ್ತೀನಿ.* ಆಗ ಅವನು ನಿಮ್ಮನ್ನ ಕಳಿಸ್ಲೇ ಬೇಕಾಗುತ್ತೆ.+ 20 ನಾನು ಕೈಚಾಚಿ ಈಜಿಪ್ಟಲ್ಲಿ ತುಂಬ ಅದ್ಭುತಗಳನ್ನ ಮಾಡಿ ಆ ದೇಶಕ್ಕೆ ಶಿಕ್ಷೆ ಕೊಡಬೇಕಾಗುತ್ತೆ. ಆಮೇಲೆ ಅವನು ನಿಮ್ಮನ್ನ ಕಳಿಸ್ತಾನೆ.+ 21 ನೀವು ಅಲ್ಲಿಂದ ಬರಿಗೈಲಿ ಬರಲ್ಲ. ಯಾಕಂದ್ರೆ ನನ್ನ ಜನರಾದ ನೀವು ಆ ದೇಶ ಬಿಟ್ಟು ಹೋಗುವಾಗ ಈಜಿಪ್ಟ್ ಜನರು ನಿಮಗೆ ದಯೆ ತೋರಿಸೋ ಹಾಗೆ ಮಾಡ್ತೀನಿ.+ 22 ಪ್ರತಿಯೊಬ್ಬ ಇಸ್ರಾಯೇಲ್ಯ ಸ್ತ್ರೀ, ಅಕ್ಕಪಕ್ಕ ಮನೆಯ ಸ್ತ್ರೀಯಿಂದ, ತನ್ನ ಮನೆಯಲ್ಲಿ ವಾಸಿಸೋ ವಿದೇಶೀ ಸ್ತ್ರೀಯಿಂದ ಚಿನ್ನಬೆಳ್ಳಿಯ ಒಡವೆಗಳನ್ನ, ಬಟ್ಟೆಗಳನ್ನ ಕೇಳಬೇಕು. ಅವನ್ನ ನೀವು ನಿಮ್ಮ ಗಂಡುಹೆಣ್ಣು ಮಕ್ಕಳಿಗೆ ಹಾಕಿ. ಹೀಗೆ ನೀವು ಈಜಿಪ್ಟ್ ಜನ್ರನ್ನ ಲೂಟಿ ಮಾಡ್ತೀರ.”+
4 ಆದ್ರೆ ಮೋಶೆ “ಅವರು ನನ್ನನ್ನ ನಂಬದೆ ನನ್ನ ಮಾತು ಕೇಳದಿದ್ರೆ ಏನು ಮಾಡೋದು?+ ‘ಯೆಹೋವ ನಿನಗೆ ಕಾಣಿಸ್ಕೊಂಡೇ ಇಲ್ಲ’ ಅಂತ ಹೇಳಿದ್ರೆ ಏನು ಮಾಡ್ಲಿ?” ಅಂದ. 2 ಅದಕ್ಕೆ ಯೆಹೋವ “ನಿನ್ನ ಕೈಯಲ್ಲೇನಿದೆ?” ಅಂತ ಕೇಳಿದಾಗ “ಕೋಲು” ಅಂದ. 3 ಆಗ ದೇವರು “ಅದನ್ನ ನೆಲದ ಮೇಲೆ ಬಿಸಾಕು” ಅಂದನು. ಮೋಶೆ ಆ ಕೋಲನ್ನ ನೆಲದ ಮೇಲೆ ಬಿಸಾಕಿದಾಗ ಅದು ಹಾವಾಯ್ತು!+ ಕೂಡ್ಲೇ ಮೋಶೆ ಅಲ್ಲಿಂದ ದೂರ ಓಡಿದ. 4 ಯೆಹೋವ ಮೋಶೆಗೆ “ನಿನ್ನ ಕೈಚಾಚಿ ಅದ್ರ ಬಾಲ ಹಿಡಿ” ಅಂದನು. ಅವನು ಹಿಡಿದಾಗ ಅದು ಮತ್ತೆ ಕೋಲಾಯ್ತು. 5 ಆಮೇಲೆ ದೇವರು “ಇದನ್ನೇ ಅವ್ರ ಮುಂದೆ ಮಾಡು. ಆಗ ಅವರ ಪೂರ್ವಜರ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು+ ಆದ ಯೆಹೋವ ನಿನಗೆ ಕಾಣಿಸ್ಕೊಂಡಿದ್ದಾನೆ+ ಅಂತ ನಂಬ್ತಾರೆ” ಅಂದನು.
6 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ “ದಯವಿಟ್ಟು ನಿನ್ನ ಕೈಯನ್ನ ನಿನ್ನ ಅಂಗಿಯ ಮೇಲ್ಭಾಗದ ಮಡಿಕೆಯಲ್ಲಿ ಇಡು” ಅಂದನು. ಆಗ ಮೋಶೆ ಕೈಯನ್ನ ಅಲ್ಲಿಟ್ಟ. ಕೈಯನ್ನ ಹೊರಗೆ ತೆಗೆದಾಗ ಅದು ಕುಷ್ಠಹಿಡಿದು ಹಿಮದ ಹಾಗೆ ಬೆಳ್ಳಗಾಗಿತ್ತು!+ 7 ಆಮೇಲೆ ದೇವರು “ನಿನ್ನ ಕೈಯನ್ನ ಮತ್ತೆ ಅಂಗಿಯ ಮೇಲ್ಭಾಗದ ಮಡಿಕೆಯಲ್ಲಿ ಇಡು” ಅಂದನು. ಮೋಶೆ ಕೈಯನ್ನ ಅಲ್ಲಿಟ್ಟ. ಕೈ ಹೊರಗೆ ತೆಗೆದಾಗ ಅದು ದೇಹದ ಉಳಿದ ಚರ್ಮದ ಹಾಗೇ ಆಗಿತ್ತು! 8 ಆಗ ದೇವರು “ನೀನು ಮೊದಲನೇ ಅದ್ಭುತ ಮಾಡಿದಾಗ ಅವರು ನಿನ್ನನ್ನ ನಂಬದಿದ್ರೆ ಎರಡನೇ ಅದ್ಭುತ ನೋಡಿದ ಮೇಲೆ ಖಂಡಿತ ನಂಬ್ತಾರೆ.+ 9 ಒಂದುವೇಳೆ ಈ ಎರಡು ಅದ್ಭುತ ನೋಡಿದ ಮೇಲೂ ಅವರು ನಂಬದಿದ್ರೆ, ನಿನ್ನ ಮಾತು ಕೇಳದಿದ್ರೆ ಆಗ ನೀನು ನೈಲ್ ನದಿಯಿಂದ ಸ್ವಲ್ಪ ನೀರು ತಗೊಂಡು ನೆಲದ ಮೇಲೆ ಸುರಿ. ಅದು ರಕ್ತ ಆಗುತ್ತೆ” ಅಂದನು.+
10 ಆದ್ರೆ ಮೋಶೆ ಯೆಹೋವನಿಗೆ “ನನ್ನನ್ನ ಕ್ಷಮಿಸು ಯೆಹೋವ. ನನಗೆ ಚೆನ್ನಾಗಿ ಮಾತಾಡೋಕೆ ಬರಲ್ಲ. ನಾನು ಮುಂಚೆನೂ ಸ್ಪಷ್ಟವಾಗಿ ಮಾತಾಡ್ತಾ ಇರಲಿಲ್ಲ. ನೀನು ನನ್ನ ಜೊತೆ ಮಾತಾಡೋಕೆ ಶುರುಮಾಡಿದ ಮೇಲೂ ಚೆನ್ನಾಗಿ ಮಾತಾಡೋಕೆ ಕಲ್ತಿಲ್ಲ”* ಅಂದ.+ 11 ಅದಕ್ಕೆ ಯೆಹೋವ “ಮನುಷ್ಯನಿಗೆ ಬಾಯಿ ಕೊಟ್ಟಿದ್ದು ಯಾರು? ಅವರನ್ನ ಮೂಕರಾಗಿ, ಕಿವುಡರಾಗಿ, ಕುರುಡರಾಗಿ ಮಾಡಿದ್ದು ಯಾರು? ಕಣ್ಣು ಕಾಣೋ ತರ ಮಾಡಿದವನು* ಯಾರು? ಯೆಹೋವನಾದ ನಾನೇ ಅಲ್ವಾ? 12 ನೀನು ಹೋಗು. ಮಾತಾಡೋಕೆ ನಾನು ಸಹಾಯ ಮಾಡ್ತೀನಿ.* ಏನು ಹೇಳಬೇಕಂತ ನಿನಗೆ ಕಲಿಸ್ಕೊಡ್ತೀನಿ” ಅಂದನು.+ 13 ಆದ್ರೆ ಅವನು “ಯೆಹೋವ, ನನ್ನನ್ನ ಕ್ಷಮಿಸು, ದಯವಿಟ್ಟು ಈ ಕೆಲಸಕ್ಕೆ ಬೇರೆ ಯಾರನ್ನಾದ್ರೂ ಕಳಿಸು” ಅಂದ. 14 ಆಗ ಯೆಹೋವನಿಗೆ ತುಂಬ ಕೋಪ ಬಂತು. ಆಮೇಲೆ ಆತನು “ಲೇವಿಯನಾದ ನಿನ್ನ ಅಣ್ಣ ಆರೋನ+ ತುಂಬ ಚೆನ್ನಾಗಿ ಮಾತಾಡ್ತಾನೆ. ನಿನ್ನನ್ನ ನೋಡೋಕೆ ಅವನು ಬರ್ತಿದ್ದಾನೆ. ನಿನ್ನನ್ನ ನೋಡಿದಾಗ ಅವನಿಗೆ ತುಂಬ ಖುಷಿ ಆಗುತ್ತೆ.+ 15 ನಾನು ನಿನಗೆ ಹೇಳಿದ್ದನ್ನೆಲ್ಲ ಅವನಿಗೆ ಹೇಳು.+ ನೀವಿಬ್ರು ಮಾತಾಡುವಾಗ ನಾನು ನಿಮ್ಮ ಜೊತೆ ಇರ್ತಿನಿ.+ ನೀವೇನು ಮಾಡಬೇಕು ಅಂತ ಕಲಿಸ್ತೀನಿ. 16 ಅವನು ನಿನ್ನ ಪ್ರತಿನಿಧಿಯಾಗಿ ನಿನಗೋಸ್ಕರ ಜನ್ರ ಹತ್ರ ಮಾತಾಡ್ತಾನೆ. ನೀನು ಅವನಿಗೆ ದೇವರ ತರ ಇರ್ತಿಯ.*+ 17 ಈ ಕೋಲನ್ನ ನೀನು ಕೈಯಲ್ಲಿ ಹಿಡ್ಕೊಂಡು ಹೋಗಿ ಅದ್ರಿಂದ ಅದ್ಭುತಗಳನ್ನ ಮಾಡ್ತಿಯ” ಅಂದನು.+
18 ಆಮೇಲೆ ಮೋಶೆ ತನ್ನ ಮಾವ ಇತ್ರೋ+ ಹತ್ರ ಬಂದು “ಈಜಿಪ್ಟಲ್ಲಿ ಇರೋ ನನ್ನ ಸಹೋದರರ ಹತ್ರ ಹೋಗಿ ಅವರು ಹೇಗಿದ್ದಾರಂತ ನಾನು ನೋಡಬೇಕು. ದಯವಿಟ್ಟು ನನಗೆ ಹೋಗೋಕೆ ಅನುಮತಿ ಕೊಡು” ಅಂದ. ಆಗ ಇತ್ರೋ “ಹೋಗು, ನಿನಗೆ ಒಳ್ಳೇದಾಗ್ಲಿ” ಅಂದ. 19 ಮೋಶೆ ಇನ್ನೂ ಮಿದ್ಯಾನಲ್ಲಿ ಇದ್ದಾಗ ಯೆಹೋವ ಅವನಿಗೆ “ನೀನು ಈಜಿಪ್ಟಿಗೆ ಹೋಗು. ಯಾಕಂದ್ರೆ ನಿನ್ನನ್ನ ಕೊಲ್ಲಬೇಕಂತ ಇದ್ದ ಎಲ್ರೂ ಸತ್ತು ಹೋಗಿದ್ದಾರೆ” ಅಂದನು.+
20 ಆಮೇಲೆ ಮೋಶೆ ತನ್ನ ಹೆಂಡತಿ, ಗಂಡುಮಕ್ಕಳನ್ನ ಕತ್ತೆ ಮೇಲೆ ಹತ್ತಿಸಿ ಈಜಿಪ್ಟಿಗೆ ಹೊರಟ. ಜೊತೆಗೆ ಸತ್ಯ ದೇವರು ಹೇಳಿದ್ದ ಕೋಲನ್ನೂ ತಗೊಂಡ. 21 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ಅದ್ಭುತ ಮಾಡೋಕೆ ನಿನಗೆ ಶಕ್ತಿ ಕೊಟ್ಟಿದ್ದೀನಿ. ನೀನು ಈಜಿಪ್ಟಿಗೆ ಹೋದ್ಮೇಲೆ ಫರೋಹನ ಮುಂದೆ ಆ ಎಲ್ಲ ಅದ್ಭುತ ಮಾಡು.+ ಆದ್ರೂ ಅವನು ನನ್ನ ಜನ್ರನ್ನ ಬಿಡಲ್ಲ.+ ಯಾಕಂದ್ರೆ ಅವನ ಹೃದಯ ಕಲ್ಲಾಗೋಕೆ ಬಿಡ್ತೀನಿ.+ 22 ನೀನು ಫರೋಹನಿಗೆ ‘ಯೆಹೋವ ಹೇಳೋದು ಏನಂದ್ರೆ “ಇಸ್ರಾಯೇಲ್ ನನ್ನ ಮಗ, ನನ್ನ ಮೊದಲನೇ ಮಗ.+ 23 ನನ್ನ ಮಗನನ್ನ ಕಳಿಸು. ಅವನು ನನ್ನ ಆರಾಧನೆ ಮಾಡಬೇಕು. ನೀನು ಅವನನ್ನ ಕಳಿಸೋಕೆ ಒಪ್ಪದಿದ್ರೆ ನಿನ್ನ ಮಗನನ್ನ, ನಿನ್ನ ಮೊದಲನೇ ಮಗನನ್ನ ಸಾಯಿಸ್ತೀನಿ”’ ಅಂತ ಹೇಳಬೇಕು.”+
24 ಮೋಶೆ ದಾರಿಯಲ್ಲಿ ಒಂದು ಛತ್ರದಲ್ಲಿದ್ದಾಗ ಯೆಹೋವ+ ಅವನಿಗೆ ಕಾಣಿಸ್ಕೊಂಡು ಅವನನ್ನ* ಸಾಯಿಸೋಕೆ+ ನೋಡ್ತಿದ್ದನು. 25 ಆಗ ಚಿಪ್ಪೋರ+ ಚೂಪಾದ ಕಲ್ಲು* ತಗೊಂಡು ತನ್ನ ಮಗನಿಗೆ ಸುನ್ನತಿ* ಮಾಡಿದಳು. ಅವನ ಮುಂದೊಗಲನ್ನ* ಅವನ* ಕಾಲಿಗೆ ಮುಟ್ಟಿಸಿ “ನೀನು ನನಗೆ ರಕ್ತದ ಮದುಮಗ” ಅಂದಳು. 26 ಹಾಗಾಗಿ ದೇವರು ಅವನನ್ನ ಬಿಟ್ಟುಬಿಟ್ಟನು. ಸುನ್ನತಿಯ ಕಾರಣದಿಂದಾನೇ ಆಗ ಅವಳು “ರಕ್ತದ ಮದುಮಗ” ಅಂದಿದ್ದಳು.
27 ಆಮೇಲೆ ಯೆಹೋವ ಆರೋನನಿಗೆ “ನೀನು ಕಾಡಿಗೆ ಹೋಗಿ ಮೋಶೆಯನ್ನ ನೋಡು” ಅಂದನು.+ ಆರೋನ ಹೋಗಿ ಸತ್ಯ ದೇವರ ಬೆಟ್ಟದಲ್ಲಿ+ ಮೋಶೆಯನ್ನ ಭೇಟಿಮಾಡಿ ಮುತ್ತು ಕೊಟ್ಟು ವಂದಿಸಿದ. 28 ಯೆಹೋವ ಹೇಳಿದ ಮಾತನ್ನೆಲ್ಲ ಮೋಶೆ ಆರೋನನಿಗೆ ಹೇಳಿದ.+ ಯಾವ ಅದ್ಭುತ ಮಾಡಬೇಕು ಅಂತ ದೇವರು ಆಜ್ಞೆ ಕೊಟ್ನೋ ಅದನ್ನೆಲ್ಲ ಹೇಳಿದ.+ 29 ಆಮೇಲೆ ಮೋಶೆ ಆರೋನ ಹೋಗಿ ಇಸ್ರಾಯೇಲ್ಯರ ಹಿರಿಯರನ್ನೆಲ್ಲ ಸೇರಿಸಿದ್ರು.+ 30 ಯೆಹೋವ ಮೋಶೆಗೆ ಹೇಳಿದ್ದ ಮಾತನ್ನೆಲ್ಲ ಆರೋನ ಅವರಿಗೆ ಹೇಳಿದ. ಮೋಶೆ ಜನ್ರ ಕಣ್ಮುಂದೆನೇ ಆ ಅದ್ಭುತಗಳನ್ನ+ ಮಾಡಿದ. 31 ಆಗ ಜನ್ರು ಮೋಶೆಯನ್ನ ನಂಬಿದ್ರು.+ ಯೆಹೋವ ಇಸ್ರಾಯೇಲ್ಯರನ್ನ+ ಗಮನಿಸಿದ್ದಾನೆ, ಅವರ ಕಷ್ಟ ನೋವನ್ನ ನೋಡಿದ್ದಾನೆ+ ಅಂತ ಕೇಳಿಸ್ಕೊಂಡಾಗ ಅವರು ದೇವರಿಗೆ ಅಡ್ಡಬಿದ್ರು.
5 ಆಮೇಲೆ ಮೋಶೆ ಆರೋನರು ಫರೋಹನ ಹತ್ರ ಹೋಗಿ “ಇಸ್ರಾಯೇಲಿನ ದೇವರಾದ ಯೆಹೋವ ನಿನಗೆ ಹೇಳೋದು ಏನಂದ್ರೆ ‘ನನ್ನ ಜನ್ರನ್ನ ಕಳಿಸು, ಅವರು ನನ್ನ ಘನತೆಗಾಗಿ ಕಾಡಲ್ಲಿ ಹಬ್ಬ ಆಚರಿಸಬೇಕು’” ಅಂದ್ರು. 2 ಅದಕ್ಕವನು “ಯಾರು ಯೆಹೋವ?+ ಅವನ ಮಾತು ಕೇಳಿ ನಾನ್ಯಾಕೆ ಇಸ್ರಾಯೇಲ್ಯರನ್ನ ಬಿಡ್ಲಿ?+ ಯೆಹೋವ ಯಾರೋ ನಂಗೊತ್ತಿಲ್ಲ. ಇಸ್ರಾಯೇಲ್ಯರನ್ನ ಹೋಗೋಕೆ ನಾನಂತೂ ಬಿಡಲ್ಲ”+ ಅಂದ. 3 ಆಗ ಅವರು “ಇಬ್ರಿಯರ ದೇವರು ನಮ್ಮ ಜೊತೆ ಮಾತಾಡಿದ್ದಾನೆ. ನಾವು ಮೂರು ದಿನ ಪ್ರಯಾಣ ಮಾಡೋಕೆ ದಯವಿಟ್ಟು ಅನುಮತಿ ಕೊಡು. ಕಾಡಿಗೆ ಹೋಗಿ ನಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಬೇಕು.+ ಇಲ್ಲದಿದ್ರೆ ಆತನು ನಮಗೆ ಕಾಯಿಲೆ ಬರೋ ಹಾಗೆ ಮಾಡಿ ಅಥವಾ ಕತ್ತಿಯಿಂದ ಸಾಯೋ ಹಾಗೆ ಮಾಡಿ ಶಿಕ್ಷೆ ಕೊಡ್ತಾನೆ” ಅಂದ್ರು. 4 ಅದಕ್ಕೆ ಈಜಿಪ್ಟಿನ ರಾಜ “ಮೋಶೆ! ಆರೋನ! ಜನ್ರು ಮಾಡ್ತಿರೋ ಕೆಲಸವನ್ನ ನೀವ್ಯಾಕೆ ನಿಲ್ಲಿಸ್ತಿರಾ? ಹೋಗಿ, ನಿಮಗೆ ಕೊಟ್ಟ ಕೆಲಸ ಮಾಡಿ!”+ ಅಂದ. 5 “ಈ ದೇಶದಲ್ಲಿ ನಿಮ್ಮವರು ಎಷ್ಟೊಂದು ಜನ ಇದ್ದಾರೆ ನೋಡಿ. ಅಷ್ಟು ಜನ್ರ ಕೆಲಸವನ್ನ ನಿಲ್ಲಿಸಬೇಕಂತ ಇದ್ದೀರಾ?” ಅಂದ.
6 ಅದೇ ದಿನ ಫರೋಹ ಬಿಟ್ಟಿಕೆಲಸ ಮಾಡಿಸೋ ಅಧಿಕಾರಿಗಳಿಗೆ, ಅವರ ಕೈಕೆಳಗಿದ್ದ ಮೇಸ್ತ್ರಿಗಳಿಗೆ ಹೀಗಂದ: 7 “ಇನ್ನು ಮೇಲೆ ನೀವು ಆ ಜನ್ರಿಗೆ ಇಟ್ಟಿಗೆ ಮಾಡೋಕೆ ಒಣಹುಲ್ಲು ಕೊಡಬಾರದು.+ ಅವರೇ ಹೋಗಿ ಒಣಹುಲ್ಲು ತರ್ಲಿ. 8 ಆದ್ರೆ ಇಲ್ಲಿ ತನಕ ಅವರು ದಿನಾ ಎಷ್ಟು ಇಟ್ಟಿಗೆ ಮಾಡ್ತಿದ್ರೋ ಅಷ್ಟೇ ಇಟ್ಟಿಗೆಗಳನ್ನ ಈಗ್ಲೂ ಅವರಿಂದ ಮಾಡಿಸಿ. ಒಂದು ಇಟ್ಟಿಗೆನೂ ಕಮ್ಮಿ ಆಗಬಾರದು. ಅವರು ಸೋಮಾರಿಗಳಾಗಿದ್ದಾರೆ.* ಅದಕ್ಕೇ ‘ನಾವು ಹೋಗಬೇಕು, ನಮ್ಮ ದೇವರಿಗೆ ಬಲಿ ಅರ್ಪಿಸಬೇಕು’ ಅಂತಿದ್ದಾರೆ. 9 ಅವರಿಗೆ ತುಂಬ ಕೆಲಸ ಕೊಡಿ. ಪುರುಸೊತ್ತೇ ಸಿಗಬಾರದು. ಆಗ ಈ ಸುಳ್ಳು ಮಾತಿಗೆಲ್ಲ ಅವರು ಗಮನಕೊಡಲ್ಲ.”
10 ಆ ಅಧಿಕಾರಿಗಳು+ ಮತ್ತು ಅವರ ಕೈಕೆಳಗಿದ್ದ ಮೇಸ್ತ್ರಿಗಳು ಜನ್ರ ಹತ್ರ ಬಂದು “ಫರೋಹ ನಿಮಗೆ ಹೇಳೋದು ಏನಂದ್ರೆ ‘ನಾನು ನಿಮಗೆ ಇನ್ನು ಮೇಲೆ ಒಣಹುಲ್ಲು ಕೊಡಲ್ಲ. 11 ನೀವೇ ಹೋಗಿ ಎಲ್ಲಾದ್ರೂ ಹುಡುಕಿ ತನ್ನಿ. ಆದ್ರೆ ಇಟ್ಟಿಗೆ ಮಾತ್ರ ಒಂದೂ ಕಮ್ಮಿ ಆಗಬಾರದು’ ” ಅಂದ್ರು. 12 ಆಗ ಜನ ಈಜಿಪ್ಟ್ ದೇಶದಲ್ಲೆಲ್ಲ ಹುಡುಕಿ ಒಣಹುಲ್ಲು ಬದಲು ಕೂಳೆ ಕೂಡಿಸೋಕೆ ಶುರು ಮಾಡಿದ್ರು. 13 ಬಿಟ್ಟಿಕೆಲಸ ಮಾಡಿಸೋ ಅಧಿಕಾರಿಗಳು ಜನ್ರಿಗೆ “ಹುಲ್ಲು ಕೊಡ್ತಿದ್ದಾಗ ಮಾಡಿದ್ದಷ್ಟೇ ಕೆಲಸ ಈಗ್ಲೂ ಪ್ರತಿಯೊಬ್ರು ಪ್ರತಿ ದಿನ ಮಾಡಿ ಮುಗಿಸಬೇಕು” ಅಂತ ಒತ್ತಾಯ ಮಾಡ್ತಾ ಇದ್ರು. 14 ಅಷ್ಟೇ ಅಲ್ಲ ಫರೋಹನ ಆ ಅಧಿಕಾರಿಗಳು ತಾವು ನೇಮಿಸಿದ್ದ ಇಸ್ರಾಯೇಲ್ಯ ಮೇಸ್ತ್ರಿಗಳಿಗೆ “ನೀವು ಮುಂಚೆ ಮಾಡ್ತಾ ಇದ್ದಷ್ಟು ಇಟ್ಟಿಗೆಗಳನ್ನ ಯಾಕೆ ಈಗ ಮಾಡ್ತಿಲ್ಲ? ನಿನ್ನೆನೂ ಮಾಡಿಲ್ಲ, ಇವತ್ತೂ ಮಾಡಿಲ್ಲ” ಅಂತ ಹೇಳಿ ಅವ್ರಿಗೆ ಹೊಡೆದ್ರು.+
15 ಹಾಗಾಗಿ ಇಸ್ರಾಯೇಲ್ಯ ಮೇಸ್ತ್ರಿಗಳು ಫರೋಹನ ಹತ್ರ ಹೋಗಿ ದೂರು ಕೊಟ್ರು. ಅವರು ಫರೋಹನಿಗೆ “ನಿನ್ನ ಸೇವಕರಾದ ನಮಗೆ ಯಾಕೆ ಹೀಗೆ ಮಾಡ್ತಾ ಇದ್ದಿಯಾ? 16 ನಿನ್ನ ಜನ್ರು ನಮಗೆ ಸ್ವಲ್ಪನೂ ಒಣಹುಲ್ಲು ಕೊಡ್ತಿಲ್ಲ. ‘ಇಟ್ಟಿಗೆಗಳನ್ನ ಮಾಡಿ ಮಾಡಿ’ ಅಂತ ಹೇಳ್ತಿದ್ದಾರೆ. ತಪ್ಪು ನಿನ್ನ ಜನ್ರದ್ದೇ ಆದ್ರೂ ನಮ್ಮನ್ನ ಹೊಡಿತಿದ್ದಾರೆ” ಅಂದ್ರು. 17 ಅದಕ್ಕೆ ಫರೋಹ “ನೀವು ಸೋಮಾರಿಗಳು,* ಮೈಗಳ್ಳರು!+ ಅದಕ್ಕೇ ‘ನಾವು ಹೋಗಬೇಕು, ಯೆಹೋವನಿಗೆ ಬಲಿ ಅರ್ಪಿಸಬೇಕು’+ ಅಂತಿದ್ದೀರ. 18 ಹೋಗಿ, ನಿಮ್ಮ ನಿಮ್ಮ ಕೆಲಸ ಮಾಡಿ. ನಿಮಗೆ ಒಣಹುಲ್ಲು ಕೊಡೋದೇ ಇಲ್ಲ, ಮೊದ್ಲು ಎಷ್ಟು ಇಟ್ಟಿಗೆ ಮಾಡ್ತಾ ಇದ್ರೋ ಈಗ್ಲೂ ಅಷ್ಟೇ ಮಾಡಬೇಕು” ಅಂದ.
19 “ಮುಂಚೆ ಮಾಡ್ತಾ ಇದ್ದಷ್ಟು ಇಟ್ಟಿಗೆಗಳನ್ನ ಪ್ರತಿದಿನ ಮಾಡಬೇಕು, ಒಂದೂ ಕಮ್ಮಿ ಆಗಬಾರದು” ಅನ್ನೋ ಆಜ್ಞೆಯಿಂದ ತಾವು ದೊಡ್ಡ ಕಷ್ಟದಲ್ಲಿ ಸಿಕ್ಕಿಕೊಂಡಿದ್ದೀವಿ ಅಂತ ಇಸ್ರಾಯೇಲ್ಯ ಮೇಸ್ತ್ರಿಗಳಿಗೆ ಗೊತ್ತಾಯ್ತು. 20 ಅವರು ಫರೋಹನ ಅರಮನೆಯಿಂದ ಹೊರಗೆ ಬಂದಾಗ ಮೋಶೆ ಆರೋನರನ್ನ ನೋಡಿದ್ರು. ಆ ಮೇಸ್ತ್ರಿಗಳ ಹತ್ರ ಮಾತಾಡೋಕೆ ಮೋಶೆ ಆರೋನ ಅಲ್ಲಿ ಕಾಯ್ತಿದ್ರು. 21 ತಕ್ಷಣ ಇಸ್ರಾಯೇಲ್ಯ ಮೇಸ್ತ್ರಿಗಳು ಅವರಿಬ್ಬರಿಗೆ “ಫರೋಹ ಮತ್ತು ಅವನ ಸೇವಕರು ನಮ್ಮನ್ನ ನೋಡಿ ಅಸಹ್ಯಪಡ್ತಾರೆ. ಇದಕ್ಕೆ ನೀವೇ ಕಾರಣ. ನಮ್ಮನ್ನ ಕೊಲ್ಲೋಕೆ ನೀವೇ ಅವರ ಕೈಗೆ ಕತ್ತಿ ಕೊಟ್ಟ ಹಾಗಿದೆ. ನೀವು ಮಾಡಿರೋದನ್ನ ಯೆಹೋವನೇ ನೋಡಿ ನಿಮಗೆ ಶಿಕ್ಷೆ ಕೊಡ್ಲಿ”+ ಅಂದ್ರು. 22 ಆಗ ಯೆಹೋವನಿಗೆ ಮೋಶೆ “ಯೆಹೋವ, ಈ ಜನ್ರಿಗೆ ಯಾಕಿಷ್ಟು ಕಷ್ಟ ಕೊಡ್ತಾ ಇದ್ದೀಯ? ನನ್ನನ್ನ ಯಾಕೆ ಇಲ್ಲಿಗೆ ಕಳಿಸ್ದೆ? 23 ನಾನು ಫರೋಹನ ಹತ್ರ ಹೋಗಿ ನಿನ್ನ ಹೆಸ್ರಲ್ಲಿ+ ಮಾತಾಡಿದ ಸಮಯದಿಂದ ಅವನು ಈ ಜನ್ರಿಗೆ ಇನ್ನೂ ಜಾಸ್ತಿ ಕಷ್ಟ ಕೊಡ್ತಿದ್ದಾನೆ.+ ನಿನ್ನ ಜನ್ರನ್ನ ಬಿಡಿಸೋಕೆ ನೀನು ಇದುವರೆಗೆ ಏನೂ ಮಾಡಿಲ್ಲ”+ ಅಂದ.
6 ಆಗ ಯೆಹೋವ ಮೋಶೆಗೆ “ನಾನೀಗ ಫರೋಹನಿಗೆ ಏನು ಮಾಡ್ತೀನಿ ಅಂತ ನೋಡು.+ ಅವನಿಗೆ ನನ್ನ ಶಕ್ತಿ ತೋರಿಸ್ತೀನಿ.* ಆಗ ನನ್ನ ಜನ್ರನ್ನ ಅವನು ಕಳಿಸ್ಲೇ ಬೇಕಾಗುತ್ತೆ. ನನ್ನ ಶಕ್ತಿ ನೋಡಿದ ಮೇಲೆ ನನ್ನ ಜನ್ರನ್ನ ಆ ದೇಶದಿಂದ ಓಡಿಸಿಬಿಡ್ತಾನೆ” ಅಂದನು.+
2 ಆಮೇಲೆ ದೇವರು ಮೋಶೆಗೆ ಹೀಗಂದನು: “ನಾನು ಯೆಹೋವ. 3 ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕಾಣಿಸ್ಕೊಂಡು ನಾನೇ ಸರ್ವಶಕ್ತ ದೇವರು ಅಂತ+ ಅವರಿಗೆ ತಿಳಿಸ್ತಿದ್ದೆ. ಆದ್ರೆ ಯೆಹೋವ ಅನ್ನೋ ನನ್ನ ಹೆಸರಿನ+ ವಿಷ್ಯದಲ್ಲಿ ಅವರಿಗೆ ಪೂರ್ತಿ ತಿಳಿಸಲಿಲ್ಲ.+ 4 ಅವರು ವಿದೇಶಿಯರಾಗಿ ಇದ್ದ ಕಾನಾನ್ ದೇಶನ ಅವರಿಗೆ ಕೊಡ್ತೀನಿ ಅಂತ ಅವರ ಜೊತೆ ಒಪ್ಪಂದ ಮಾಡಿದ್ದೆ.+ 5 ಈಗ ಆ ಒಪ್ಪಂದನ ನೆನಪು ಮಾಡ್ಕೊಂಡಿದ್ದೀನಿ. ಈಜಿಪ್ಟ್ ಜನ್ರ ಹತ್ರ ಗುಲಾಮರಾಗಿ ಇರೋ ಇಸ್ರಾಯೇಲ್ಯರ ಕಷ್ಟದ ಕೂಗನ್ನ ಕೇಳಿದ್ದೀನಿ.+
6 ಹಾಗಾಗಿ ನಾನು ಹೇಳಿದ್ದನ್ನ ಇಸ್ರಾಯೇಲ್ಯರಿಗೆ ಹೇಳು. ಏನಂದ್ರೆ ‘ನಾನು ಯೆಹೋವ. ಈಜಿಪ್ಟಿನವರು ನಿಮ್ಮ ಮೇಲೆ ಹಾಕಿರೋ ಭಾರವಾದ ಹೊರೆ ತೆಗೆದುಹಾಕಿ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ತೀನಿ.+ ನಾನು ಕೈಚಾಚಿ* ನಿಮ್ಮನ್ನ ರಕ್ಷಿಸ್ತೀನಿ, ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ.+ 7 ನಿಮ್ಮನ್ನ ನನ್ನ ಜನ್ರಾಗಿ ಮಾಡ್ಕೊಳ್ತೀನಿ. ನಾನು ನಿಮ್ಮ ದೇವರಾಗಿ ಇರ್ತಿನಿ.+ ಈಜಿಪ್ಟ್ ಜನ್ರ ಕೈಯಿಂದ ಬಿಡಿಸಿ ನಿಮ್ಮನ್ನ ಕರ್ಕೊಂಡು ಬರ್ತಿರೋ ನಾನೇ ನಿಮ್ಮ ದೇವರಾದ ಯೆಹೋವ ಅಂತ ಆಗ ನಿಮಗೆ ಖಂಡಿತ ಗೊತ್ತಾಗುತ್ತೆ. 8 ಅಬ್ರಹಾಮ, ಇಸಾಕ, ಯಾಕೋಬನಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶಕ್ಕೆ ನಾನು ನಿಮ್ಮನ್ನ ಕರ್ಕೊಂಡು ಹೋಗ್ತೀನಿ. ಅದನ್ನ ನಿಮಗೆ ಸೊತ್ತಾಗಿ ಕೊಡ್ತೀನಿ.+ ನಾನು ಯೆಹೋವ.’”+
9 ಮೋಶೆ ಈ ಮಾತನ್ನೆಲ್ಲ ಇಸ್ರಾಯೇಲ್ಯರಿಗೆ ಹೇಳಿದ. ಆದ್ರೆ ಅವರು ಆ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ. ಯಾಕಂದ್ರೆ ಅವರಿಗೆ ಬೇಜಾರಾಗಿತ್ತು, ಗುಲಾಮರಾಗಿ ಕೆಲಸ ಮಾಡಿ ಮಾಡಿ ಸುಸ್ತಾಗಿ ಹೋಗಿದ್ರು.+
10 ಆಮೇಲೆ ಯೆಹೋವ ಮೋಶೆಗೆ 11 “ನೀನು ಈಜಿಪ್ಟಿನ ರಾಜ ಫರೋಹನ ಹತ್ರ ಹೋಗು. ಇಸ್ರಾಯೇಲ್ಯರನ್ನ ತನ್ನ ದೇಶದಿಂದ ಕಳಿಸಬೇಕು ಅಂತೇಳು” ಅಂದನು. 12 ಆಗ ಮೋಶೆ ಯೆಹೋವನಿಗೆ “ಇಸ್ರಾಯೇಲ್ಯರೇ ನನ್ನ ಮಾತು ಕೇಳ್ತಿಲ್ಲ,+ ಇನ್ನು ಫರೋಹ ಕೇಳ್ತಾನಾ? ನನಗೆ ಸರಿಯಾಗಿ ಮಾತಾಡಕ್ಕೂ ಬರಲ್ಲ” ಅಂದ.+ 13 ಆಗ ಮೋಶೆ ಮತ್ತು ಆರೋನನ ಜೊತೆ ಯೆಹೋವ ಮತ್ತೆ ಮಾತಾಡಿದನು. ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರೋಕೆ ಇಸ್ರಾಯೇಲ್ಯರಿಗೂ ಈಜಿಪ್ಟಿನ ರಾಜ ಫರೋಹನಿಗೂ ದೇವರ ಆಜ್ಞೆಗಳನ್ನ ಹೇಳಬೇಕು ಅಂದನು.
14 ಇಸ್ರಾಯೇಲ್ಯರ ಕುಲಗಳ ಪ್ರಧಾನರ ಹೆಸ್ರು: ರೂಬೇನ್ ಕುಲದ ಪ್ರಧಾನರು ಯಾರಂದ್ರೆ ಹನೋಕ್, ಪಲ್ಲೂ, ಹೆಚ್ರೋನ್, ಕರ್ಮೀ.+ ಇವರು ಇಸ್ರಾಯೇಲನ ಮೊದಲನೇ ಮಗನಾದ ರೂಬೇನನ+ ಗಂಡುಮಕ್ಕಳು.
15 ಸಿಮೆಯೋನ್ ಕುಲದ ಪ್ರಧಾನರು ಯಾರಂದ್ರೆ ಯೆಮೂವೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಿಂದ ಹುಟ್ಟಿದ ಶೌಲ.+ ಇವರು ಸಿಮೆಯೋನನ ಗಂಡುಮಕ್ಕಳು.
16 ಲೇವಿಯ+ ಗಂಡುಮಕ್ಕಳು ಗೇರ್ಷೋನ್, ಕೆಹಾತ್, ಮೆರಾರೀ.+ ಇವರು ಅವರವರ ಕುಟುಂಬಗಳಿಗೆ ಪ್ರಧಾನರು. ಲೇವಿ 137 ವರ್ಷ ಬದುಕಿದ.
17 ಗೇರ್ಷೋನನ ಗಂಡುಮಕ್ಕಳು ಲಿಬ್ನಿ, ಶಿಮ್ಮಿ. ಇವರು ಅವರವರ ಕುಟುಂಬಗಳಿಗೆ ಪ್ರಧಾನರು.+
18 ಕೆಹಾತನ ಗಂಡುಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.+ ಕೆಹಾತ 133 ವರ್ಷ ಬದುಕಿದ.
19 ಮೆರಾರೀಯ ಗಂಡುಮಕ್ಕಳು ಮಹ್ಲಿ, ಮೂಷಿ.
ವಂಶಾವಳಿ ಪ್ರಕಾರ ಇವರೆಲ್ಲ ಲೇವಿ ಕುಲದ ಪ್ರಧಾನರು.+
20 ಅಮ್ರಾಮ ತನ್ನ ತಂದೆಯ ಸಹೋದರಿಯಾದ ಯೋಕೆಬೆದಳನ್ನ ಮದುವೆ ಆದ.+ ಅಮ್ರಾಮ ಮತ್ತು ಅವಳಿಗೆ ಆರೋನ, ಮೋಶೆ ಹುಟ್ಟಿದ್ರು.+ ಅಮ್ರಾಮ 137 ವರ್ಷ ಬದುಕಿದ.
21 ಇಚ್ಹಾರನ ಗಂಡುಮಕ್ಕಳು ಕೋರಹ,+ ನೆಫೆಗ್, ಜಿಕ್ರಿ.
22 ಉಜ್ಜೀಯೇಲನ ಗಂಡುಮಕ್ಕಳು ಮೀಷಾಯೇಲ್, ಎಲೀಚಾಫಾನ್,+ ಸಿತ್ರಿ.
23 ಆರೋನ ಅಮ್ಮೀನಾದಾಬನ ಮಗಳೂ ನಹಶೋನನ+ ತಂಗಿಯೂ ಆದ ಎಲೀಶೆಬಳನ್ನ ಮದುವೆ ಆದ. ಆರೋನ ಮತ್ತು ಅವಳಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್+ ಹುಟ್ಟಿದ್ರು.
24 ಕೋರಹನ ಗಂಡುಮಕ್ಕಳು ಅಸ್ಸೀರ್, ಎಲ್ಕಾನ, ಅಬೀಯಾಸಾಫ್.+ ಇವರು ಕೋರಹಿಯರ ಪ್ರಧಾನರು.+
25 ಆರೋನನ ಮಗ ಎಲ್ಲಾಜಾರ+ ಪೂಟಿಯೇಲನ ಒಬ್ಬ ಮಗಳನ್ನ ಮದುವೆ ಆದ. ಎಲ್ಲಾಜಾರ ಮತ್ತು ಅವಳಿಗೆ ಫೀನೆಹಾಸ+ ಹುಟ್ಟಿದ್ರು.
ವಂಶಾವಳಿ ಪ್ರಕಾರ ಇವರೇ ಲೇವಿ ಕುಲದ ಪ್ರಧಾನರು.+
26 ಆರೋನ ಮತ್ತು ಮೋಶೆಗೆ ಯೆಹೋವ “ಈಜಿಪ್ಟ್ ದೇಶದಿಂದ ಇಸ್ರಾಯೇಲ್ಯರನ್ನ ಸೈನ್ಯದ ಹಾಗೆ ಗುಂಪು ಗುಂಪಾಗಿ ಕರ್ಕೊಂಡು ಬನ್ನಿ” ಅಂತ ಆಜ್ಞೆ ಕೊಟ್ಟನು.+ 27 ಇಸ್ರಾಯೇಲ್ಯರನ್ನ ಈಜಿಪ್ಟಿಂದ ಕರ್ಕೊಂಡು ಬರೋಕೆ ಅಲ್ಲಿನ ರಾಜ ಫರೋಹನ ಜೊತೆ ಮಾತಾಡಿದವರು ಈ ಮೋಶೆ ಆರೋನರೇ.+
28 ಯೆಹೋವ ಈಜಿಪ್ಟ್ ದೇಶದಲ್ಲಿ ಮೋಶೆ ಜೊತೆ ಮಾತಾಡಿದನು. ಅದೇ ದಿನ 29 “ನಾನು ಯೆಹೋವ. ನಾನು ನಿನಗೆ ಹೇಳೋ ಎಲ್ಲ ಮಾತನ್ನ ಈಜಿಪ್ಟಿನ ರಾಜ ಫರೋಹನಿಗೆ ಹೇಳು” ಅಂತ ಮೋಶೆಗೆ ಯೆಹೋವ ಹೇಳಿದನು. 30 ಅದಕ್ಕೆ ಮೋಶೆ ಯೆಹೋವನಿಗೆ “ನನಗೆ ಸರಿಯಾಗಿ ಮಾತಾಡೋಕ್ಕೇ ಬರಲ್ಲ. ಫರೋಹ ನನ್ನ ಮಾತೆಲ್ಲಿ ಕೇಳ್ತಾನೆ?” ಅಂದ.+
7 ಆಗ ಯೆಹೋವ ಮೋಶೆಗೆ “ಫರೋಹನಿಗೆ ನಿನ್ನನ್ನ ದೇವರ ತರ* ಮಾಡಿದ್ದೀನಿ. ನಿನ್ನ ಅಣ್ಣ ಆರೋನ ಪ್ರವಾದಿಯಾಗಿ ನಿನಗೋಸ್ಕರ ಮಾತಾಡ್ತಾನೆ.+ 2 ನಾನು ನಿನಗೆ ಕೊಟ್ಟ ಆಜ್ಞೆಗಳನ್ನೆಲ್ಲ ಆರೋನನಿಗೆ ಹೇಳಬೇಕು. ಅವನು ಫರೋಹನ ಹತ್ರ ಮಾತಾಡ್ತಾನೆ. ಆಗ ಫರೋಹ ತನ್ನ ದೇಶದಿಂದ ಇಸ್ರಾಯೇಲ್ಯರನ್ನ ಬಿಡ್ತಾನೆ. 3 ಆದ್ರೆ ಫರೋಹನ ಹೃದಯ ಕಲ್ಲಾಗೋಕೆ ಬಿಡ್ತೀನಿ.+ ನಾನು ಈಜಿಪ್ಟ್ ದೇಶದಲ್ಲಿ ತುಂಬ ಅದ್ಭುತ ಮಾಡ್ತೀನಿ.+ 4 ಆಗ್ಲೂ ಫರೋಹ ನಿಮ್ಮ ಮಾತು ಕೇಳಲ್ಲ. ಆಗ ನಾನು ಈಜಿಪ್ಟ್ ದೇಶದ ವಿರುದ್ಧ ನನ್ನ ಕೈಯೆತ್ತಿ ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ. ದೊಡ್ಡ ಸೈನ್ಯ ತರ ಇರೋ ನನ್ನ ಜನರಾದ ಇಸ್ರಾಯೇಲ್ಯರನ್ನ ಆ ದೇಶದಿಂದ ಕರ್ಕೊಂಡು ಬರ್ತಿನಿ.+ 5 ನಾನು ಈಜಿಪ್ಟ್ ಜನ್ರಿಗೆ ಶಿಕ್ಷೆ ಕೊಟ್ಟು ಅವರ ಮಧ್ಯದಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬಂದಾಗ ನಾನು ಯೆಹೋವ+ ಅಂತ ಅವರಿಗೆ ಖಂಡಿತ ಗೊತ್ತಾಗುತ್ತೆ” ಅಂದನು. 6 ಮೋಶೆ ಆರೋನರು ಯೆಹೋವನ ಆಜ್ಞೆ ಪ್ರಕಾರನೇ ಮಾಡಿದ್ರು, ದೇವರು ಹೇಳಿದ ತರಾನೇ ಅವರು ಮಾಡಿದ್ರು. 7 ಫರೋಹನ ಹತ್ರ ಮಾತಾಡೋಕೆ ಹೋದಾಗ ಮೋಶೆಗೆ 80 ವರ್ಷ, ಆರೋನನಿಗೆ 83 ವರ್ಷ.+
8 ಯೆಹೋವ ಮೋಶೆ ಮತ್ತು ಆರೋನನಿಗೆ 9 “ಫರೋಹ ನಿಮಗೆ ಒಂದು ಅದ್ಭುತ ಮಾಡೋಕೆ ಹೇಳಿದ್ರೆ ನೀನು ಆರೋನನಿಗೆ ‘ಫರೋಹನ ಮುಂದೆ ನೆಲಕ್ಕೆ ನಿನ್ನ ಕೋಲು ಬಿಸಾಕು’ ಅಂತ ಹೇಳು. ಬಿಸಾಕಿದಾಗ ಅದು ದೊಡ್ಡ ಹಾವಾಗುತ್ತೆ”+ ಅಂದನು. 10 ಮೋಶೆ ಆರೋನ ಫರೋಹನ ಹತ್ರ ಹೋಗಿ ಯೆಹೋವ ಹೇಳಿದ ಹಾಗೇ ಮಾಡಿದ್ರು. ಆರೋನ ತನ್ನ ಕೋಲನ್ನ ಫರೋಹನ ಮುಂದೆ, ಅವನ ಸೇವಕರ ಮುಂದೆ ನೆಲದ ಮೇಲೆ ಹಾಕಿದ. ಆಗ ಅದು ದೊಡ್ಡ ಹಾವಾಯ್ತು. 11 ಅದನ್ನ ನೋಡಿ ಫರೋಹ ಈಜಿಪ್ಟಿನ ಜ್ಞಾನಿಗಳಿಗೆ, ಮಂತ್ರವಾದಿಗಳಿಗೆ ಅದೇ ತರ ಮಾಡೋಕೆ ಹೇಳಿದ. ಆಗ ಮಂತ್ರವಾದಿಗಳು+ ಮಂತ್ರವಿದ್ಯೆಯಿಂದ ಅದೇ ತರ ಅದ್ಭುತ ಮಾಡಿದ್ರು.+ 12 ಅವರಲ್ಲಿ ಪ್ರತಿಯೊಬ್ಬ ಅವನವನ ಕೋಲನ್ನ ನೆಲಕ್ಕೆ ಹಾಕಿದಾಗ ಆ ಕೋಲೆಲ್ಲ ದೊಡ್ಡ ದೊಡ್ಡ ಹಾವಾಯ್ತು. ಆದ್ರೆ ಆರೋನನ ಕೋಲು ಅವರ ಕೋಲುಗಳನ್ನ ನುಂಗಿಬಿಡ್ತು. 13 ಇದನ್ನ ನೋಡಿದ ಮೇಲೂ ಫರೋಹನ ಹೃದಯ ಕಲ್ಲಾಗೇ ಇತ್ತು.+ ಯೆಹೋವ ಹೇಳಿದ ಹಾಗೇ ಅವನು ಮೋಶೆ ಆರೋನರ ಮಾತು ಕೇಳಲಿಲ್ಲ.
14 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ಫರೋಹನ ಹೃದಯ ಒಂಚೂರೂ ಬದಲಾಗಿಲ್ಲ.+ ಅದಕ್ಕೆ ಅವನು ನನ್ನ ಜನ್ರನ್ನ ಕಳಿಸೋಕೆ ಒಪ್ಪಲಿಲ್ಲ. 15 ಬೆಳಿಗ್ಗೆ ಫರೋಹನ ಹತ್ರ ಹೋಗು. ಅವನು ನೈಲ್ ನದಿ ಹತ್ರ ಹೋಗ್ತಾನೆ. ನೀನು ಅವನ ಹತ್ರ ಮಾತಾಡೋಕೆ ನೈಲ್ ನದಿತೀರದಲ್ಲಿ ನಿಂತ್ಕೊ. ಈ ಮುಂಚೆ ಹಾವಾಗಿ ಬದಲಾದ ನಿನ್ನ ಕೋಲನ್ನ ಕೈಯಲ್ಲಿ ಹಿಡ್ಕೊಂಡು+ 16 ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವ ನನ್ನನ್ನ ನಿನ್ನ ಹತ್ರ ಕಳಿಸಿದ್ದಾನೆ.+ ಆತನು ನಿನಗೆ “ನನ್ನ ಆರಾಧನೆ ಮಾಡೋಕೆ ನನ್ನ ಜನ್ರನ್ನ ಕಾಡಿಗೆ ಕಳಿಸು” ಅಂತ ಹೇಳ್ತಾನೆ. ಆದ್ರೆ ನೀನು ಆತನ ಮಾತು ಕೇಳಲಿಲ್ಲ. 17 ಹಾಗಾಗಿ ಯೆಹೋವ ಹೇಳೋದು ಏನಂದ್ರೆ “ನಾನು ಯೆಹೋವ ಅಂತ ನಿನಗೆ ಗೊತ್ತಾಗೋ ತರ ಮಾಡ್ತೀನಿ.+ ನನ್ನ ಕೈಯಲ್ಲಿರೋ ಕೋಲಿಂದ ನೈಲ್ ನದಿ ನೀರನ್ನ ಹೊಡಿತೀನಿ. ಆ ನೀರೆಲ್ಲ ರಕ್ತ ಆಗುತ್ತೆ. 18 ನೈಲ್ ನದಿಯಲ್ಲಿರೋ ಮೀನೆಲ್ಲ ಸಾಯುತ್ತೆ. ಆ ನದಿಯಿಂದ ಕೆಟ್ಟ ವಾಸನೆ ಬರುತ್ತೆ. ಇದ್ರಿಂದ ಈಜಿಪ್ಟಿನ ಜನ್ರಿಗೆ ನೈಲ್ ನದಿ ನೀರು ಕುಡಿಯೋಕೆ ಆಗಲ್ಲ.”’”
19 ಯೆಹೋವ ಮತ್ತೆ ಮೋಶೆ ಹತ್ರ ಮಾತಾಡ್ತಾ “‘ಈಜಿಪ್ಟಿನ ಎಲ್ಲಾ ನದಿ,+ ಕಾಲುವೆ,* ಕೆರೆ, ಕೊಳಗಳ ಮೇಲೆ ನಿನ್ನ ಕೋಲು ಚಾಚು,+ ಆಗ ನೀರೆಲ್ಲ ರಕ್ತ ಆಗುತ್ತೆ’ ಅಂತ ಆರೋನನಿಗೆ ಹೇಳು. ಈಜಿಪ್ಟಲ್ಲಿ ಇರೋ ನೀರೆಲ್ಲ ರಕ್ತ ಆಗುತ್ತೆ. ಮರದ, ಕಲ್ಲಿನ ಪಾತ್ರೆಗಳಲ್ಲಿ ಇರೋ ನೀರೂ ರಕ್ತ ಆಗುತ್ತೆ” ಅಂದನು. 20 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಆರೋನ ತಕ್ಷಣ ಮಾಡಿದ್ರು. ಫರೋಹ ಮತ್ತು ಅವನ ಸೇವಕರ ಕಣ್ಮುಂದೆನೇ ಆರೋನ ತನ್ನ ಕೋಲೆತ್ತಿ ನೈಲ್ ನದಿ ನೀರನ್ನ ಹೊಡೆದ. ಆಗ ನೀರೆಲ್ಲ ರಕ್ತ ಆಯ್ತು,+ 21 ಮೀನೆಲ್ಲ ಸತ್ತೋಯ್ತು.+ ಆಗ ನದಿಯಿಂದ ಕೆಟ್ಟ ವಾಸನೆ ಬರೋಕೆ ಶುರು ಆಯ್ತು. ಹಾಗಾಗಿ ಈಜಿಪ್ಟ್ ಜನ್ರಿಗೆ ನೈಲ್ ನದಿನೀರನ್ನ ಕುಡಿಯೋಕೆ ಆಗಲಿಲ್ಲ.+ ಯಾಕಂದ್ರೆ ದೇಶದ ನೀರೆಲ್ಲ ರಕ್ತ ಆಗಿತ್ತು.
22 ಈಜಿಪ್ಟಿನ ಮಂತ್ರವಾದಿಗಳು ಕೂಡ ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದ್ರು.+ ಹಾಗಾಗಿ ಫರೋಹನ ಹೃದಯ ಕಲ್ಲಾಗೇ ಇತ್ತು. ಯೆಹೋವ ಹೇಳಿದ ತರಾನೇ ಆಯ್ತು. ಫರೋಹ ಮಾತು ಕೇಳಲಿಲ್ಲ.+ 23 ಆಮೇಲೆ ಫರೋಹ ಮನೆಗೆ ಹೋದ. ಆ ವಿಷ್ಯವನ್ನ ಅವನು ಮನಸ್ಸಿಗೇ ಹಾಕೊಳ್ಳಲಿಲ್ಲ. 24 ನೈಲ್ ನದಿ ನೀರು ಕುಡಿಯೋಕೆ ಆಗದಿದ್ದ ಕಾರಣ ಈಜಿಪ್ಟಿನ ಜನ್ರೆಲ್ಲ ಕುಡಿಯೋ ನೀರಿಗಾಗಿ ನೈಲ್ ನದಿ ಸುತ್ತ ಅಗೆಯುತಿದ್ರು. 25 ಯೆಹೋವ ನೈಲ್ ನದಿ ನೀರನ್ನ ಹೊಡೆದ ಮೇಲೆ ಏಳು ದಿನ ಆ ನೀರು ರಕ್ತವಾಗೇ ಇತ್ತು.
8 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ನಾನು ಹೇಳಿದ್ದನ್ನ ಫರೋಹನ ಹತ್ರ ಹೋಗಿ ಹೇಳು. ‘ಯೆಹೋವ ನಿನಗೆ ಹೇಳೋದು ಏನಂದ್ರೆ “ನನ್ನ ಜನ್ರು ನನ್ನ ಆರಾಧನೆ ಮಾಡಬೇಕು, ಅವರನ್ನ ಕಳಿಸು.+ 2 ಕಳಿಸೋಕೆ ನೀನು ಒಪ್ಪಿಕೊಳ್ಳದೇ ಇದ್ರೆ ನಾನು ನಿನ್ನ ದೇಶದಲ್ಲೆಲ್ಲ ಕಪ್ಪೆಗಳು ಬರೋ ಹಾಗೆ ಮಾಡಿ ಇಡೀ ದೇಶಕ್ಕೆ ಶಿಕ್ಷೆ ಕೊಡ್ತೀನಿ.+ 3 ನೈಲ್ ನದಿಯಲ್ಲೆಲ್ಲ ಕಪ್ಪೆಗಳು ತುಂಬ್ಕೊಳ್ಳುತ್ತೆ. ಅವು ನೀರಿಂದ ಮೇಲೆ ಬಂದು ನಿನ್ನ ಮನೆ ಒಳಗೆ, ಮಲಗೋ ಕೋಣೆಗೆ, ಹಾಸಿಗೆ ಮೇಲೆ, ನಿನ್ನ ಸೇವಕರ ಮನೆ ಒಳಗೆ, ನಿನ್ನ ಜನ್ರ ಮೇಲೆ, ನಿನ್ನ ಒಲೆಗಳಲ್ಲಿ, ಹಿಟ್ಟು ನಾದೋ ಪಾತ್ರೆಗಳಲ್ಲಿ ಬರುತ್ತೆ.+ 4 ಕಪ್ಪೆಗಳು ನಿನ್ನ ಮೈಮೇಲೆ, ನಿನ್ನ ಜನ್ರ ಮತ್ತು ನಿನ್ನ ಎಲ್ಲ ಸೇವಕರ ಮೈಮೇಲೆ ಹತ್ತುತ್ತೆ.”’”
5 ಆಮೇಲೆ ಯೆಹೋವ ಮೋಶೆ ಜೊತೆ ಮಾತಾಡಿ “ಆರೋನ ತನ್ನ ಕೋಲನ್ನ ಎಲ್ಲಾ ನದಿ, ನೈಲ್ ನದಿಯ ಕಾಲುವೆ, ಕೆರೆ ಮೇಲೆ ಚಾಚಿ ಇಡೀ ಈಜಿಪ್ಟ್ ದೇಶದಲ್ಲಿ ಕಪ್ಪೆಗಳು ಬರೋ ಹಾಗೆ ಮಾಡಬೇಕಂತ ಅವನಿಗೆ ಹೇಳು” ಅಂದನು. 6 ಆರೋನ ಈಜಿಪ್ಟಲ್ಲಿ ನೀರಿರೋ ಎಲ್ಲ ಸ್ಥಳಗಳ ಮೇಲೆ ಕೈಚಾಚಿದ. ಆಗ ನೀರಿಂದ ಕಪ್ಪೆಗಳು ಮೇಲೆ ಬಂದು ಈಜಿಪ್ಟ್ ದೇಶದಲ್ಲೆಲ್ಲ ತುಂಬ್ತು. 7 ಮಂತ್ರವಾದಿಗಳು ಸಹ ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿ ಮಾಡಿ ಈಜಿಪ್ಟಲ್ಲಿ ಕಪ್ಪೆಗಳು ಬರೋ ತರ ಮಾಡಿದ್ರು.+ 8 ಆಗ ಫರೋಹ ಮೋಶೆ ಮತ್ತು ಆರೋನನನ್ನ ಕರೆದು “ಯೆಹೋವನಿಗೆ ಬಲಿ ಅರ್ಪಿಸೋಕೆ ನಿಮ್ಮ ಜನ್ರನ್ನ ಕಳಿಸ್ತೀನಿ. ಹಾಗಾಗಿ ನನ್ನ ಮತ್ತು ನನ್ನ ಜನ್ರಿಂದ ಕಪ್ಪೆಗಳನ್ನ ತೆಗಿಯೋಕೆ ಯೆಹೋವನ ಹತ್ರ ಬೇಡ್ಕೊಳಿ”+ ಅಂದ. 9 ಅದಕ್ಕೆ ಮೋಶೆ “ಸರಿ, ಕಪ್ಪೆಗಳು ನಿನ್ನನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ, ನಿನ್ನ ಮನೆಗಳನ್ನ ಬಿಟ್ಟುಹೋಗೋಕೆ ನಾನು ದೇವರ ಹತ್ರ ಬೇಡ್ತೀನಿ. ನೈಲ್ ನದಿಯಲ್ಲಿ ಮಾತ್ರ ಕಪ್ಪೆಗಳು ಇರುತ್ತೆ. ಆದ್ರೆ ಯಾವಾಗ ಬೇಡ್ಕೊಬೇಕಂತ ದಯವಿಟ್ಟು ನೀನೇ ಹೇಳು” ಅಂದ. 10 ಅದಕ್ಕೆ ಫರೋಹ “ನಾಳೆ ಬೇಡ್ಕೊ” ಅಂದ. ಆಗ ಮೋಶೆ “ನೀನು ಹೇಳಿದ ಹಾಗೆ ಆಗುತ್ತೆ. ಇದ್ರಿಂದ ನಮ್ಮ ದೇವರಾದ ಯೆಹೋವನ ತರ ಬೇರೆ ಯಾವ ದೇವರೂ ಇಲ್ಲ ಅಂತ ನಿಂಗೆ ಗೊತ್ತಾಗುತ್ತೆ.+ 11 ಕಪ್ಪೆಗಳು ನಿನ್ನನ್ನ, ನಿನ್ನ ಮನೆಗಳನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ ಬಿಟ್ಟುಹೋಗುತ್ತೆ. ನೈಲ್ ನದಿಯಲ್ಲಿ ಮಾತ್ರ ಇರುತ್ತೆ”+ ಅಂದ.
12 ಮೋಶೆ ಆರೋನ ಫರೋಹನ ಹತ್ರದಿಂದ ಹೋದ್ರು. ಫರೋಹನ ಮೇಲೆ ಬಂದ ಕಪ್ಪೆಗಳನ್ನ ತೆಗಿಯೋಕೆ ಮೋಶೆ ಯೆಹೋವನನ್ನ ಬೇಡ್ಕೊಂಡ.+ 13 ಮೋಶೆ ಕೇಳಿದ ಹಾಗೇ ಯೆಹೋವ ಮಾಡಿದನು. ಹಾಗಾಗಿ ಮನೆಗಳಲ್ಲಿ, ಅಂಗಳಗಳಲ್ಲಿ, ಬಯಲುಗಳಲ್ಲಿದ್ದ ಕಪ್ಪೆಗಳು ಸತ್ತೋಯ್ತು. 14 ಜನ ಅವುಗಳನ್ನ ಅಲ್ಲಲ್ಲಿ ಗುಡ್ಡೆಹಾಕಿದ್ರು. ಎಲ್ಲಾ ಕಡೆ ಆ ಕಪ್ಪೆಗಳ ರಾಶಿಗಳೇ ತುಂಬಿದ್ರಿಂದ ದೇಶದಲ್ಲೆಲ್ಲ ಕೆಟ್ಟ ವಾಸನೆ ಹೆಚ್ಚಾಯ್ತು. 15 ಫರೋಹ ಕಪ್ಪೆಗಳ ಕಾಟ ನಿಂತದ್ದನ್ನ ನೋಡಿ ಹೃದಯ ಕಲ್ಲು ಮಾಡ್ಕೊಂಡ.+ ಯೆಹೋವ ಈ ಮುಂಚೆ ಹೇಳಿದ್ದ ಹಾಗೇ ಅವನು ಮೋಶೆ ಆರೋನರ ಮಾತು ಕೇಳಲಿಲ್ಲ.
16 ಆಗ ಯೆಹೋವ ಮೋಶೆ ಜೊತೆ ಮಾತಾಡಿ “ಕೋಲು ಚಾಚಿ ನೆಲದ ಧೂಳನ್ನ ಹೊಡಿಬೇಕಂತ ಆರೋನನಿಗೆ ಹೇಳು. ಆಗ ಆ ಧೂಳು ಸೊಳ್ಳೆಗಳಾಗಿ* ಈಜಿಪ್ಟಲ್ಲೆಲ್ಲ ತುಂಬಿಕೊಳ್ಳುತ್ತೆ” ಅಂದನು. 17 ಅವರು ಹಾಗೇ ಮಾಡಿದ್ರು. ಆರೋನ ಕೋಲು ತಗೊಂಡು ಕೈಚಾಚಿ ನೆಲದ ಮೇಲಿದ್ದ ಧೂಳನ್ನ ಹೊಡೆದ. ಆಗ ಈಜಿಪ್ಟ್ ದೇಶದಲ್ಲಿದ್ದ ಧೂಳೆಲ್ಲ ಸೊಳ್ಳೆಗಳಾಗಿ ಮನುಷ್ಯರನ್ನ, ಪ್ರಾಣಿಗಳನ್ನ ಕಚ್ಚಿತು.+ 18 ಮಂತ್ರವಾದಿಗಳು ತಮ್ಮ ರಹಸ್ಯ ವಿದ್ಯೆಗಳಿಂದ ಅದೇ ರೀತಿ ಮಾಡಿ ಸೊಳ್ಳೆಗಳನ್ನ ತರೋಕೆ ಪ್ರಯತ್ನಿಸಿದ್ರು.+ ಆದ್ರೆ ಅವರಿಂದ ಆಗಲಿಲ್ಲ. ಸೊಳ್ಳೆಗಳು ಮನುಷ್ಯರನ್ನ, ಪ್ರಾಣಿಗಳನ್ನ ಕಚ್ತಾ ಇತ್ತು. 19 ಅದಕ್ಕೆ ಮಂತ್ರವಾದಿಗಳು ಫರೋಹನಿಗೆ “ಇದು ದೇವರ ಶಕ್ತಿಯಿಂದಾನೇ* ಆಗಿರೋ ಕೆಲಸ!”+ ಅಂದ್ರು. ಆದ್ರೆ ಫರೋಹನ ಹೃದಯ ಕಲ್ಲಾಗೇ ಇದ್ದಿದ್ರಿಂದ ಯೆಹೋವ ಹೇಳಿದ ಹಾಗೇ ಅವನು ಅವರ ಮಾತು ಕೇಳಲಿಲ್ಲ.
20 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ನೀನು ಬೆಳಿಗ್ಗೆ ಬೇಗ ಎದ್ದು ಫರೋಹ ನದಿ ಹತ್ರ ಬರೋ ಮುಂಚೆ ಅಲ್ಲಿಗೆ ಹೋಗು. ಅವನು ಬಂದಾಗ ಅವನಿಗೆ ‘ಯೆಹೋವ ಹೀಗೆ ಹೇಳ್ತಾನೆ: “ನನ್ನ ಜನ್ರು ನನ್ನ ಆರಾಧನೆ ಮಾಡಬೇಕು, ಅವರನ್ನ ಬಿಡು. 21 ಬಿಡದಿದ್ರೆ ನಾನು ನಿನ್ನ ಮೇಲೆ, ನಿನ್ನ ಸೇವಕರ ಮೇಲೆ, ನಿನ್ನ ಜನ್ರ ಮೇಲೆ, ನಿನ್ನ ಮನೆ ಒಳಗೆ ರಕ್ತ ಹೀರೋ ನೊಣಗಳನ್ನ ಕಳಿಸ್ತೀನಿ. ಈಜಿಪ್ಟ್ ಜನ್ರ ಮನೆಲೆಲ್ಲ ಆ ನೊಣ ತುಂಬ್ಕೊಳ್ಳುತ್ತೆ, ಅವರಿರೋ ನೆಲವನ್ನ ಸಹ ಮುಚ್ಚಿಬಿಡುತ್ತೆ. 22 ಆದ್ರೆ ನನ್ನ ಜನ ವಾಸಿಸೋ ಗೋಷೆನ್ ಪ್ರದೇಶದಲ್ಲಿ ಮಾತ್ರ ರಕ್ತಹೀರೋ ನೊಣ ಇರಲ್ಲ.+ ಆ ದಿನ ನನ್ನ ಜನ್ರನ್ನ ಖಂಡಿತ ರಕ್ಷಿಸ್ತೀನಿ. ಇದ್ರಿಂದ ನಾನೇ ಯೆಹೋವ, ನನಗೆ ಇಡೀ ಭೂಮಿ ಮೇಲೆ ಅಧಿಕಾರ ಇದೆ ಅಂತ ನಿಂಗೆ ಗೊತ್ತಾಗುತ್ತೆ.+ 23 ನನ್ನ ಜನ್ರ ಮತ್ತು ನಿನ್ನ ಜನ್ರ ಮಧ್ಯ ವ್ಯತ್ಯಾಸ ತೋರಿಸ್ತೀನಿ. ನಾಳೆ ಈ ಅದ್ಭುತ ನಡಿಯುತ್ತೆ”’ ಅನ್ನಬೇಕು.”
24 ಯೆಹೋವ ತಾನು ಹೇಳಿದ ಹಾಗೆ ರಕ್ತಹೀರೋ ನೊಣಗಳು ಬರೋ ಹಾಗೆ ಮಾಡಿದನು. ಅವು ದಂಡುದಂಡಾಗಿ ಬಂದು ಫರೋಹನ ಮನೆ, ಸೇವಕರ ಮನೆ, ಇಡೀ ಈಜಿಪ್ಟ್ ದೇಶ ತುಂಬಿಕೊಳ್ತು.+ ಆ ನೊಣಗಳು ದೇಶನೇ ಹಾಳು ಮಾಡಿಬಿಡ್ತು.+ 25 ಕೊನೆಗೆ ಫರೋಹ ಮೋಶೆ ಮತ್ತು ಆರೋನನನ್ನ ಕರೆದು “ಹೋಗಿ, ನಿಮ್ಮ ದೇವರಿಗೆ ಬಲಿ ಅರ್ಪಿಸಿ. ಆದ್ರೆ ಅದನ್ನ ಈ ದೇಶದಲ್ಲೇ ಅರ್ಪಿಸಬೇಕು” ಅಂದ. 26 ಆಗ ಮೋಶೆ “ಹಾಗೆ ಮಾಡಕ್ಕಾಗಲ್ಲ. ಯಾಕಂದ್ರೆ ನಾವು ನಮ್ಮ ದೇವರಾದ ಯೆಹೋವನಿಗೆ ಏನನ್ನ ಬಲಿಯಾಗಿ ಅರ್ಪಿಸ್ತೀವೋ ಅದನ್ನ ಈಜಿಪ್ಟ್ ಜನ ನೋಡಿದ್ರೆ ನಮ್ಮ ಮೇಲೆ ಸಿಟ್ಟು ಮಾಡ್ಕೊಳ್ತಾರೆ.+ ಅವರ ಕಣ್ಮುಂದೆನೇ ಅಂಥ ಬಲಿ ಅರ್ಪಿಸಿದ್ರೆ ನಮ್ಮನ್ನ ಖಂಡಿತ ಕಲ್ಲೆಸೆದು ಕೊಲ್ತಾರೆ. 27 ಹಾಗಾಗಿ ನಮ್ಮ ದೇವರಾದ ಯೆಹೋವ ಹೇಳಿದ ಹಾಗೇ ಮೂರು ದಿನ ಪ್ರಯಾಣ ಮಾಡಿ ಕಾಡಿಗೆ ಹೋಗಿ ಅಲ್ಲಿ ಆತನಿಗೆ ಬಲಿ ಅರ್ಪಿಸ್ತೀವಿ”+ ಅಂದ.
28 ಅದಕ್ಕೆ ಫರೋಹ “ಸರಿ, ಕಾಡಿಗೆ ಹೋಗಿ ನಿಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಿ. ಆದ್ರೆ ತುಂಬ ದೂರ ಹೋಗಬಾರದು. ನನಗೋಸ್ಕರನೂ ನಿಮ್ಮ ದೇವರ ಹತ್ರ ಬೇಡ್ಕೊಳಿ”+ ಅಂದ. 29 ಆಗ ಮೋಶೆ “ನಾನೀಗ ಹೋಗಿ ಯೆಹೋವನ ಹತ್ರ ಬೇಡ್ತೀನಿ. ರಕ್ತಹೀರೋ ನೊಣಗಳು ನಾಳೆ ಫರೋಹನಾದ ನಿನ್ನನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ ಬಿಟ್ಟುಹೋಗುತ್ತೆ. ಆದ್ರೆ ನೀನು ಮತ್ತೆ ನಮಗೆ ಮೋಸ ಮಾಡಬಾರದು.* ಯೆಹೋವನಿಗೆ ಬಲಿ ಅರ್ಪಿಸೋಕೆ ಇಬ್ರಿಯರನ್ನ ಕಳಿಸಲ್ಲ ಅಂತ ಹೇಳಬಾರದು”+ ಅಂದ. 30 ಆಮೇಲೆ ಮೋಶೆ ಹೋಗಿ ಯೆಹೋವನ ಹತ್ರ ಬೇಡಿದ.+ 31 ಮೋಶೆ ಕೇಳಿದ ಹಾಗೆ ಯೆಹೋವ ಮಾಡಿದನು. ರಕ್ತಹೀರೋ ನೊಣಗಳು ಫರೋಹನನ್ನ, ಅವನ ಸೇವಕರನ್ನ, ಅವನ ಜನ್ರನ್ನ ಬಿಟ್ಟುಹೋಯ್ತು. ಒಂದೇ ಒಂದು ನೊಣ ಕೂಡ ದೇಶದಲ್ಲಿ ಉಳಿಲಿಲ್ಲ. 32 ಆದ್ರೆ ಫರೋಹ ಮತ್ತೆ ಹೃದಯ ಕಲ್ಲು ಮಾಡ್ಕೊಂಡು ಇಸ್ರಾಯೇಲ್ಯರನ್ನ ಬಿಡಲಿಲ್ಲ.
9 ಹಾಗಾಗಿ ಯೆಹೋವ ಮೋಶೆಗೆ “ನೀನು ಫರೋಹನ ಹತ್ರ ಹೋಗಿ ಅವನಿಗೆ ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವ ನಿನಗೆ ಹೇಳೋದು ಏನಂದ್ರೆ “ನನ್ನ ಜನ ನನ್ನ ಆರಾಧನೆ ಮಾಡಬೇಕು, ಅವರನ್ನ ಕಳಿಸು.+ 2 ನೀನು ಕಳಿಸೋಕೆ ಒಪ್ಪದೆ ಅವರನ್ನ ನಿನ್ನ ದೇಶದಲ್ಲೇ ಇಟ್ಕೊಂಡ್ರೆ 3 ಯೆಹೋವನಾದ ನಾನು ಬಯಲಲ್ಲಿ ಇರೋ ನಿನ್ನ ಪ್ರಾಣಿಗಳಿಗೆ ಕಾಯಿಲೆ ತರ್ತಿನಿ.+ ಕುದುರೆ, ಕತ್ತೆ, ಒಂಟೆ, ದನ-ಹೋರಿ, ಕುರಿ ಇದಕ್ಕೆಲ್ಲ ದೊಡ್ಡ ಕಾಯಿಲೆ+ ಬರುತ್ತೆ. 4 ಯೆಹೋವನಾದ ನಾನು ಈಜಿಪ್ಟಿನ ಪ್ರಾಣಿಗಳಿಗೆ ಕಾಯಿಲೆ ತಂದ್ರೂ ಇಸ್ರಾಯೇಲ್ಯರ ಪ್ರಾಣಿಗಳಿಗೆ ತರಲ್ಲ. ಇಸ್ರಾಯೇಲ್ಯರ ಪ್ರಾಣಿಗಳು ಸಾಯಲ್ಲ”’” ಅಂದನು.+ 5 ಅಷ್ಟೇ ಅಲ್ಲ ಆ ದೊಡ್ಡ ಕಾಯಿಲೆ ತರೋಕೆ ಯೆಹೋವ ಸಮಯ ನಿರ್ಧರಿಸಿದನು. ಹಾಗಾಗಿ “ಯೆಹೋವನಾದ ನಾನು ಇದನ್ನ ನಾಳೆನೇ ಈ ದೇಶದಲ್ಲಿ ಮಾಡ್ತೀನಿ” ಅಂದನು.
6 ಯೆಹೋವ ಮಾರನೆ ದಿನಾನೇ ಆ ಕಾಯಿಲೆ ತಂದನು. ಈಜಿಪ್ಟಿನ ಎಲ್ಲ ಪ್ರಾಣಿಗಳು ಸತ್ತೋಯ್ತು.+ ಆದ್ರೆ ಇಸ್ರಾಯೇಲ್ಯರ ಪ್ರಾಣಿಗಳಲ್ಲಿ ಒಂದೇ ಒಂದು ಪ್ರಾಣಿನೂ ಸಾಯಲಿಲ್ಲ. 7 ಫರೋಹ ತನ್ನ ಸೇವಕರನ್ನ ಕಳಿಸಿ ವಿಚಾರಿಸಿದಾಗ ಇಸ್ರಾಯೇಲ್ಯರ ಒಂದು ಪ್ರಾಣಿ ಕೂಡ ಸಾಯಲಿಲ್ಲ ಅಂತ ಗೊತ್ತಾಯ್ತು. ಹಾಗಿದ್ರೂ ಫರೋಹ* ಸ್ವಲ್ಪನೂ ಬದಲಾಗಲಿಲ್ಲ, ಇಸ್ರಾಯೇಲ್ಯರನ್ನ ಬಿಡಲಿಲ್ಲ.+
8 ಆಮೇಲೆ ಯೆಹೋವ ಮೋಶೆ ಆರೋನರಿಗೆ “ನೀವು ಇಟ್ಟಿಗೆ ಗೂಡಿನ ಹೊಗೆಮಸಿಯನ್ನ ಎರಡು ಕೈತುಂಬ ತಗೊಳಿ. ಮೋಶೆ ಅದನ್ನ ಫರೋಹನ ಕಣ್ಣ ಮುಂದೆ ಗಾಳಿಗೆ ತೂರಬೇಕು. 9 ಆಗ ಅದು ತುಂಬಾ ಹೆಚ್ಚಿ ಧೂಳಾಗಿ ಈಜಿಪ್ಟಲ್ಲೆಲ್ಲ ಹರಡ್ಕೊಳ್ಳುತ್ತೆ. ಆ ಧೂಳು ಈಜಿಪ್ಟಿನ ಜನ್ರ ಮೇಲೆ, ಪ್ರಾಣಿಗಳ ಮೇಲೆ ಬಿದ್ದು ಕೀವುಗಟ್ಟಿದ ಹುಣ್ಣುಗಳಾಗುತ್ತೆ” ಅಂದನು.
10 ಆಗ ಅವರು ಇಟ್ಟಿಗೆ ಗೂಡಿನ ಹೊಗೆಮಸಿ ತಗೊಂಡು ಫರೋಹನ ಮುಂದೆ ನಿಂತ್ರು. ಆಮೇಲೆ ಮೋಶೆ ಅದನ್ನ ಗಾಳಿಗೆ ತೂರಿದ. ಅದು ಜನ್ರ ಮೇಲೆ, ಪ್ರಾಣಿಗಳ ಮೇಲೆ ಬಿದ್ದು ಕೀವುಗಟ್ಟಿದ ಹುಣ್ಣುಗಳಾಯ್ತು. 11 ಈಜಿಪ್ಟಿನ ಎಲ್ಲ ಜನ್ರ ಮೈಮೇಲೆ, ಮಂತ್ರವಾದಿಗಳ ಮೈಮೇಲೆ ಹುಣ್ಣುಗಳಾಯ್ತು. ಹಾಗಾಗಿ ಆ ಮಂತ್ರವಾದಿಗಳಿಗೆ ಮೋಶೆ ಮುಂದೆ ನಿಲ್ಲೋಕೆ ಆಗಲಿಲ್ಲ.+ 12 ಇಷ್ಟೆಲ್ಲ ಆದ್ರೂ ಫರೋಹ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋ ತರ ಯೆಹೋವ ಬಿಟ್ಟನು. ಈ ಮುಂಚೆ ಯೆಹೋವ ಮೋಶೆಗೆ ಹೇಳಿದ್ದ ಹಾಗೇ ಫರೋಹ ಅವರ ಮಾತು ಕೇಳಲಿಲ್ಲ.+
13 ಆಮೇಲೆ ಯೆಹೋವ ಮೋಶೆಗೆ “ನೀನು ಬೆಳಿಗ್ಗೆ ಬೇಗ ಫರೋಹನ ಮುಂದೆ ನಿಂತು ಹೀಗೆ ಹೇಳು ‘ಇಬ್ರಿಯರ ದೇವರಾದ ಯೆಹೋವ ನಿನಗೆ ಹೀಗೆ ಹೇಳಿದ್ದಾನೆ: “ನನ್ನ ಜನ್ರು ನನ್ನ ಆರಾಧನೆ ಮಾಡಬೇಕು, ಅವರನ್ನ ಕಳಿಸು. 14 ಇಲ್ಲದಿದ್ರೆ ನಾನು ಎಲ್ಲ ಬಾಧೆಗಳಿಂದ ನಿನ್ನನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ ಹೊಡಿತೀನಿ. ಆಗ ಇಡೀ ಭೂಮೀಲಿ ನನ್ನ ಹಾಗೆ ಬೇರೆ ಯಾವ ದೇವರೂ ಇಲ್ಲ ಅಂತ ನಿನಗೆ ಗೊತ್ತಾಗುತ್ತೆ.+ 15 ಇಷ್ಟರೊಳಗೆ ನಾನು ಕೈಚಾಚಿ ನಿನಗೆ, ನಿನ್ನ ಜನ್ರಿಗೆ ಒಂದು ದೊಡ್ಡ ಕಾಯಿಲೆ ಬರೋ ಹಾಗೆ ಮಾಡಬಹುದಿತ್ತು. ಹಾಗೆ ಮಾಡಿದ್ರೆ ನೀನು ನಾಶವಾಗಿ ಭೂಮಿ ಮೇಲಿಂದ ನಾಪತ್ತೆ ಆಗಿಹೋಗ್ತಿದ್ದೆ. 16 ಆದ್ರೆ ನಿನಗೆ ನನ್ನ ಶಕ್ತಿ ತೋರಿಸಬೇಕು, ಇಡೀ ಭೂಮೀಲಿ ನನ್ನ ಹೆಸರನ್ನ ತಿಳಿಸಬೇಕು ಅಂತಾನೇ ನಿನ್ನನ್ನ ಇನ್ನೂ ಜೀವಂತ ಬಿಟ್ಟಿದ್ದೀನಿ.+ 17 ನೀನು ನನ್ನ ಜನ್ರನ್ನ ಹೋಗೋಕೆ ಬಿಡದೆ ಇನ್ನೂ ಅಹಂಕಾರದಿಂದ ನಡ್ಕೊಳ್ತಾ ಇದ್ದೀಯಾ? 18 ನೋಡು, ನಾಳೆ ಇಷ್ಟು ಹೊತ್ತಿಗೆ ತುಂಬ ಆಲಿಕಲ್ಲು ಬೀಳೋ ಹಾಗೆ ಮಾಡ್ತೀನಿ. ಅಂಥ ಆಲಿಕಲ್ಲು ಈಜಿಪ್ಟ್ ದೇಶದಲ್ಲಿ ಯಾವತ್ತೂ ಬಿದ್ದಿಲ್ಲ. 19 ಹಾಗಾಗಿ ಬಯಲಲ್ಲಿರೋ ನಿನ್ನ ಎಲ್ಲ ಪ್ರಾಣಿಗಳನ್ನ, ಸೊತ್ತುಗಳನ್ನ ಒಳಗೆ ತರೋಕೆ ಹೇಳು. ನಿನ್ನ ಎಲ್ಲ ಸೇವಕರಿಗೆ ಸಹ ಒಳಗೆ ಬರೋಕೆ ಹೇಳು. ಇಲ್ಲಾಂದ್ರೆ ಆಲಿಕಲ್ಲು ಬಿದ್ದು ಜನ್ರು ಸಾಯ್ತಾರೆ, ಪ್ರಾಣಿಗಳೂ ಸತ್ತುಹೋಗುತ್ತೆ”’” ಅಂದನು.
20 ಫರೋಹನ ಸೇವಕರಲ್ಲಿ ಯಾರೆಲ್ಲ ಯೆಹೋವನ ಮಾತು ಕೇಳಿ ಭಯಪಟ್ರೋ ಅವರೆಲ್ಲ ಬೇಗಬೇಗ ತಮ್ಮ ಸೇವಕರನ್ನ, ಪ್ರಾಣಿಗಳನ್ನ ಮನೆ ಒಳಗೆ ಕರ್ಕೊಂಡು ಬಂದ್ರು. 21 ಆದ್ರೆ ಯಾರೆಲ್ಲ ಯೆಹೋವನ ಮಾತು ಕೇಳಲಿಲ್ವೋ ಅವರೆಲ್ಲ ತಮ್ಮ ಸೇವಕರನ್ನ, ಪ್ರಾಣಿಗಳನ್ನ ಬಯಲಲ್ಲೇ ಬಿಟ್ರು.
22 ಆಮೇಲೆ ಯೆಹೋವ ಮೋಶೆಗೆ “ಆಕಾಶದ ಕಡೆ ನಿನ್ನ ಕೈ ಎತ್ತು. ಆಗ ಜನ್ರ ಮೇಲೆ, ಪ್ರಾಣಿಗಳ ಮೇಲೆ, ಬಯಲಲ್ಲಿರೋ ಎಲ್ಲ ಗಿಡಗಳ ಮೇಲೆ,+ ಹೀಗೆ ಇಡೀ ಈಜಿಪ್ಟ್ ದೇಶದ ಮೇಲೆ ಆಲಿಕಲ್ಲು+ ಬೀಳುತ್ತೆ” ಅಂದನು. 23 ಆಗ ಮೋಶೆ ಆಕಾಶದ ಕಡೆ ಕೋಲು ಎತ್ತಿದಾಗ ಗುಡುಗು, ಆಲಿಕಲ್ಲು, ಬೆಂಕಿ* ಬೀಳೋ ತರ ಯೆಹೋವ ಮಾಡಿದನು. ಈಜಿಪ್ಟ್ ದೇಶದ ಮೇಲೆ ಆಲಿಕಲ್ಲು ಬೀಳ್ತಾ ಇರೋ ಹಾಗೆ ಯೆಹೋವ ಮಾಡಿದನು. 24 ಆಲಿಕಲ್ಲು ತುಂಬ ಜೋರಾಗಿ ಬೀಳ್ತಿತ್ತು, ಅದ್ರ ಜೊತೆ ಬೆಂಕಿನೂ ಬೀಳ್ತಿತ್ತು. ಈಜಿಪ್ಟಿನ ಇತಿಹಾಸದಲ್ಲೇ ಯಾವತ್ತೂ ಈ ತರ ಆಲಿಕಲ್ಲು ಬಿದ್ದಿರಲಿಲ್ಲ.+ 25 ಆಲಿಕಲ್ಲಿಂದ ಇಡೀ ಈಜಿಪ್ಟ್ ದೇಶದಲ್ಲಿ ಬಯಲಲ್ಲಿದ್ದ ಎಲ್ಲ ನಾಶ ಆಯ್ತು. ಜನ್ರು ಪ್ರಾಣ ಕಳ್ಕೊಂಡ್ರು, ಪ್ರಾಣಿಗಳೂ ಸತ್ತೋಯ್ತು. ಎಲ್ಲ ಗಿಡ, ಮರ ನಾಶ ಆಯ್ತು.+ 26 ಆದ್ರೆ ಇಸ್ರಾಯೇಲ್ಯರು ಇದ್ದ ಗೋಷೆನ್‌ನಲ್ಲಿ ಮಾತ್ರ ಆಲಿಕಲ್ಲು ಬೀಳಲಿಲ್ಲ.+
27 ಆಗ ಫರೋಹ ಮೋಶೆ ಆರೋನರನ್ನ ಕರೆಸಿ “ನಾನು ಪಾಪ ಮಾಡಿದ್ದೀನಿ ಅಂತ ಈಗ ಅರ್ಥ ಆಯ್ತು. ಯೆಹೋವ ಮಾಡೋದೆಲ್ಲ ಸರಿನೇ.* ನಾನು, ನನ್ನ ಜನ್ರು ಮಾಡಿದ್ದು ತಪ್ಪು. 28 ಗುಡುಗು, ಸಿಡಿಲು, ಆಲಿಕಲ್ಲು ಬೀಳೋದನ್ನ ನಿಲ್ಲಿಸೋಕೆ ಯೆಹೋವನ ಹತ್ರ ಬೇಡಿ. ಆಗ ನಿಮ್ಮನ್ನ ಇಲ್ಲಿಂದ ಕಳಿಸ್ತೀನಿ, ಇನ್ನು ಮುಂದೆ ತಡಿಯಲ್ಲ” ಅಂದ. 29 ಅದಕ್ಕೆ ಮೋಶೆ “ನಾನು ಪಟ್ಟಣದಿಂದ ಹೊರಗೆ ಹೋದ ತಕ್ಷಣ ನನ್ನ ಕೈಗಳನ್ನ ಎತ್ತಿ ಯೆಹೋವನಿಗೆ ಪ್ರಾರ್ಥಿಸ್ತೀನಿ. ಆಗ ಗುಡುಗು, ಆಲಿಕಲ್ಲು ನಿಂತುಹೋಗುತ್ತೆ. ಇದ್ರಿಂದ ಯೆಹೋವನೇ ಇಡೀ ಭೂಮಿಗೆ ಒಡೆಯ ಅಂತ ನಿನಗೆ ಗೊತ್ತಾಗುತ್ತೆ.+ 30 ಆದ್ರೆ ಆಮೇಲೆ ನೀನು, ನಿನ್ನ ಸೇವಕರು ಯೆಹೋವ ದೇವರಿಗೆ ಭಯಪಡಲ್ಲ ಅಂತ ನಂಗೊತ್ತು” ಅಂದ.
31 ಆಲಿಕಲ್ಲು ಬೀಳೋ ಮುಂಚೆನೇ ಬಾರ್ಲಿ* ಕೊಯ್ಲಿಗೆ ಸಿದ್ಧವಾಗಿತ್ತು, ಅಗಸೆ ಗಿಡಗಳು ಮೊಗ್ಗು ಬಿಟ್ಟಿತ್ತು. ಹಾಗಾಗಿ ಆಲಿಕಲ್ಲು ಬಿದ್ದಾಗ ಆ ಎರಡೂ ಬೆಳೆಗಳು ನಾಶ ಆಯ್ತು. 32 ಆದ್ರೆ ಗೋದಿಗಳಲ್ಲಿ,* ಪೈರುಗಳಲ್ಲಿ ತೆನೆ ಬರೋಕೆ* ಇನ್ನೂ ತುಂಬ ದಿನ ಇತ್ತು. ಹಾಗಾಗಿ ಗೋದಿ ನಾಶ ಆಗಲಿಲ್ಲ. 33 ಮೋಶೆ ಫರೋಹನ ಹತ್ರದಿಂದ ಹೋಗಿ ಪಟ್ಟಣದ ಹೊರಗೆ ತನ್ನ ಕೈಗಳನ್ನ ಎತ್ತಿ ಯೆಹೋವನಿಗೆ ಪ್ರಾರ್ಥಿಸಿದ. ಆಗ ಗುಡುಗು, ಆಲಿಕಲ್ಲು, ಮಳೆ ನಿಂತುಹೋಯ್ತು.+ 34 ಅವೆಲ್ಲ ನಿಂತಿದ್ದನ್ನ ನೋಡಿ ಫರೋಹ ಹೃದಯ ಕಲ್ಲು ಮಾಡ್ಕೊಂಡ.+ ಹೀಗೆ ಅವನು ಮತ್ತೆ ಪಾಪಮಾಡಿದ. ಅವನ ಸೇವಕರು ಸಹ ಅದೇ ತರ ಪಾಪ ಮಾಡಿದ್ರು. 35 ಯೆಹೋವ ಈ ಮುಂಚೆ ಮೋಶೆ ಮೂಲಕ ಹೇಳಿದ ಹಾಗೆ ಫರೋಹನ ಹೃದಯ ಕಲ್ಲಾಗೇ ಇತ್ತು. ಅವನು ಇಸ್ರಾಯೇಲ್ಯರನ್ನ ಕಳಿಸಲಿಲ್ಲ.+
10 ಆಮೇಲೆ ಯೆಹೋವ ಮೋಶೆಗೆ “ನೀನು ಫರೋಹನ ಹತ್ರ ಹೋಗು. ಅವನು, ಅವನ ಸೇವಕರು* ಒಂಚೂರೂ ಬದಲಾಗಿಲ್ಲ. ಹಾಗೇ ಇರಲಿ ಅಂತ ಅವರನ್ನ ಬಿಟ್ಟಿದ್ದೀನಿ.+ ಇದ್ರಿಂದ ನಾನು ಫರೋಹನ ಕಣ್ಮುಂದೆನೇ ಅದ್ಭುತಗಳನ್ನ ಮಾಡಕ್ಕಾಗುತ್ತೆ.+ 2 ನಾನು ಈಜಿಪ್ಟಿಗೆ ಯಾವ್ಯಾವ ಶಿಕ್ಷೆ ಕೊಟ್ಟೆ, ಯಾವ್ಯಾವ ಅದ್ಭುತ ಮಾಡಿದೆ ಅಂತ ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೇಳಕ್ಕಾಗುತ್ತೆ.+ ಅಷ್ಟೇ ಅಲ್ಲ ನಾನೇ ಯೆಹೋವ ಅಂತ ನಿಮಗೆ ಖಂಡಿತ ಗೊತ್ತಾಗುತ್ತೆ” ಅಂದನು.
3 ಮೋಶೆ ಆರೋನ ಫರೋಹನ ಹತ್ರ ಹೋಗಿ ಹೀಗಂದ್ರು: “ಇಬ್ರಿಯರ ದೇವರಾದ ಯೆಹೋವ ನಿನಗೆ ಹೇಳೋದು ಏನಂದ್ರೆ ‘ಇನ್ನೆಷ್ಟು ದಿನ ನೀನು ನನ್ನ ಮುಂದೆ ತಗ್ಗಿಸಿಕೊಳ್ಳದೆ ಇರ್ತಿಯ?+ ನನ್ನ ಜನ್ರನ್ನ ಕಳ್ಸು. ಅವರು ನನ್ನ ಆರಾಧನೆ ಮಾಡಬೇಕು. 4 ಒಂದುವೇಳೆ ನೀನು ನನ್ನ ಜನ್ರನ್ನ ಕಳಿಸೋಕೆ ಒಪ್ಪದೇ ಇದ್ರೆ ನಾಳೆ ನಿನ್ನ ದೇಶದಲ್ಲಿ ಮಿಡತೆಗಳು ಬರೋ ಹಾಗೆ ಮಾಡ್ತೀನಿ. 5 ಅವು ನೆಲ ಕಾಣದಿರೋ ಹಾಗೆ ದೇಶವನ್ನ ಮುಚ್ಚಿಬಿಡುತ್ತೆ. ಹೊಲದಲ್ಲಿರೋ ಎಲ್ಲ ಮರಗಳ ಎಲೆಗಳನ್ನ ಒಂದೂ ಬಿಡದೆ ತಿಂದುಬಿಡುತ್ತೆ. ಆಲಿಕಲ್ಲು ಬಿದ್ದಾಗ ನಾಶ ಆಗದೆ ಉಳಿದ ಎಲ್ಲವನ್ನ ತಿಂದುಬಿಡುತ್ತೆ.+ 6 ಆ ಮಿಡತೆಗಳು ನಿನ್ನ ಮನೆಗಳಲ್ಲಿ, ನಿನ್ನ ಎಲ್ಲ ಸೇವಕರ ಮನೆಗಳಲ್ಲಿ, ಈಜಿಪ್ಟಿನ ಎಲ್ಲ ಮನೆಗಳಲ್ಲಿ ತುಂಬ್ಕೊಳ್ಳುತ್ತೆ. ಮಿಡತೆಗಳ ಅಂಥ ದೊಡ್ಡ ದಂಡನ್ನ ನಿನ್ನ ತಂದೆತಾತಂದಿರ ಕಾಲದಿಂದ ಇವತ್ತಿನ ತನಕ ಈ ದೇಶದಲ್ಲಿ ಯಾರೂ ನೋಡಿರಲ್ಲ.’”+ ಇದನ್ನ ಹೇಳಿ ಮೋಶೆ ಫರೋಹನ ಹತ್ರದಿಂದ ಹೋದ.
7 ಆಮೇಲೆ ಫರೋಹನಿಗೆ ಅವನ ಸೇವಕರು “ಈ ಮನುಷ್ಯ ಇನ್ನೆಷ್ಟು ದಿನ ನಮ್ಮ ಮೇಲೆ ಕಷ್ಟ ತರ್ತಾನೆ? ಆ ಜನ್ರನ್ನ ಬಿಟ್ಟುಬಿಡು, ಅವರು ತಮ್ಮ ದೇವರಾದ ಯೆಹೋವನ ಆರಾಧನೆ ಮಾಡ್ಲಿ. ಈಜಿಪ್ಟ್ ದೇಶವೆಲ್ಲ ನಾಶವಾಗಿ ಹೋಗಿದೆ. ಇನ್ನೂ ಇದು ನಿನಗೆ ಅರ್ಥ ಆಗ್ತಿಲ್ವಾ?” ಅಂದ್ರು. 8 ಆಗ ಮೋಶೆ ಆರೋನನನ್ನ ಫರೋಹ ಕರೆಸಿ “ಹೋಗಿ, ನಿಮ್ಮ ದೇವರಾದ ಯೆಹೋವನ ಆರಾಧನೆ ಮಾಡಿ. ಆದ್ರೆ ಯಾರೆಲ್ಲ ಹೋಗ್ತಿರ ಅಂತ ಹೇಳಿ” ಅಂದ. 9 ಅದಕ್ಕೆ ಮೋಶೆ “ನಾವು ಯೆಹೋವನ ಘನತೆಗಾಗಿ ಹಬ್ಬ ಮಾಡ್ತೀವಿ. ಹಾಗಾಗಿ ಯುವಕರು, ವಯಸ್ಸಾದವರು, ಗಂಡುಹೆಣ್ಣು ಮಕ್ಕಳು ಹೀಗೆ ನಮ್ಮವರೆಲ್ಲಾ ಹೋಗ್ತೀವಿ. ನಮ್ಮ ಕುರಿದನಗಳನ್ನೂ+ ತಗೊಂಡು ಹೋಗ್ತೀವಿ”+ ಅಂದ. 10 ಆಗ ಫರೋಹ “ನಾನು ನಿಮ್ಮನ್ನ, ನಿಮ್ಮ ಮಕ್ಕಳನ್ನ ನಿಜವಾಗ್ಲೂ ಕಳಿಸ್ತೀನಿ ಅಂದ್ಕೊಂಡ್ರಾ? ನಿಮ್ಮನ್ನ ಹೋಗೋಕೆ ಬಿಟ್ರೆ ಯೆಹೋವ ನಿಮ್ಮ ಜೊತೆ ಇದ್ದಾನೆ ಅನ್ನೋದು ನಿಜ ಆಗುತ್ತೆ!+ ನೀವು ಹೋಗಬೇಕಂತ ಹೇಳ್ತಿರೋದು ಏನೋ ಕೆಟ್ಟ ಉದ್ದೇಶ ಇಟ್ಕೊಂಡೇ ಅಂತ ನಂಗೊತ್ತು. 11 ನಾನು ಎಲ್ರನ್ನೂ ಕಳಿಸಲ್ಲ. ಬೇಕಿದ್ರೆ ನಿಮ್ಮಲ್ಲಿರೋ ಗಂಡಸರು ಮಾತ್ರ ಹೋಗಿ ಯೆಹೋವನ ಆರಾಧನೆ ಮಾಡಿ. ನೀವು ಕೇಳಿದ್ದು ಅದನ್ನೇ ತಾನೇ?” ಅಂದ. ಆಮೇಲೆ ಅವರನ್ನ ಫರೋಹನ ಎದುರಿಂದ ಓಡಿಸಿಬಿಟ್ರು.
12 ಆಮೇಲೆ ಯೆಹೋವ ಮೋಶೆಗೆ “ನೀನು ಈಜಿಪ್ಟ್ ದೇಶದ ಮೇಲೆ ಕೈಚಾಚು. ಆಗ ದೇಶದಲ್ಲೆಲ್ಲ ಮಿಡತೆಗಳು ಬರುತ್ತೆ. ಅವು ಆಲಿಕಲ್ಲಿಂದ ನಾಶ ಆಗದಿದ್ದ ಗಿಡಗಳನ್ನ, ಉಳಿದ ಬೆಳೆಗಳನ್ನ ತಿಂದುಬಿಡುತ್ತೆ” ಅಂದನು. 13 ತಕ್ಷಣ ಮೋಶೆ ತನ್ನ ಕೋಲನ್ನ ಈಜಿಪ್ಟ್ ದೇಶದ ಮೇಲೆ ಚಾಚಿದ. ಆಗ ಯೆಹೋವ ಹಗಲಿಡೀ, ರಾತ್ರಿಯಿಡೀ ಪೂರ್ವದಿಕ್ಕಿಂದ ಗಾಳಿ ಬೀಸೋ ಹಾಗೆ ಮಾಡಿದನು. ಬೆಳಿಗ್ಗೆ ನೋಡಿದಾಗ ಪೂರ್ವದಿಕ್ಕಿನ ಆ ಗಾಳಿ ಮಿಡತೆಗಳನ್ನ ಹೊತ್ತುತಂದಿತ್ತು. 14 ಮಿಡತೆಗಳು ಬಂದು ಆ ದೇಶದ ಎಲ್ಲಾ ಕಡೆ ಮುತ್ಕೊಂಡು ಬಿಡ್ತು.+ ಆ ಮಿಡತೆಗಳ ಕಾಟ ವಿಪರೀತ ಆಗಿತ್ತು.+ ಯಾವತ್ತೂ ಅಷ್ಟು ಮಿಡತೆಗಳು ಬಂದಿರಲಿಲ್ಲ, ಮುಂದೆನೂ ಬರಲ್ಲ. 15 ಮಿಡತೆಗಳ ಸಂಖ್ಯೆ ಎಷ್ಟು ಜಾಸ್ತಿ ಇತ್ತಂದ್ರೆ ಅವು ಇಡೀ ದೇಶದ ನೆಲವನ್ನ ಮುಚ್ಚಿಕೊಂಡಿತ್ತು. ಅವುಗಳಿಂದ ದೇಶದಲ್ಲೆಲ್ಲ ಕತ್ತಲೆ ಕವಿದಿತ್ತು. ಆಲಿಕಲ್ಲು ಬಿದ್ದಾಗ ನಾಶ ಆಗದೆ ಉಳಿದ ಎಲ್ಲ ಗಿಡಗಳನ್ನ, ಮರಗಳಲ್ಲಿದ್ದ ಎಲ್ಲ ಹಣ್ಣನ್ನ ಮಿಡತೆಗಳು ತಿಂದುಬಿಡ್ತು. ಇಡೀ ಈಜಿಪ್ಟ್ ದೇಶದಲ್ಲಿ ಒಂದೇ ಒಂದು ಹಸಿರು ಎಲೆ ಆಗ್ಲಿ ಹಸಿರು ಹುಲ್ಲಾಗ್ಲಿ ಕಾಣಿಸಲಿಲ್ಲ.
16 ಆಗ ಮೋಶೆ ಆರೋನರನ್ನ ಫರೋಹ ಬೇಗ ಕರೆಸಿ “ನಾನು ನಿಮ್ಮ ದೇವರಾದ ಯೆಹೋವನ ವಿರುದ್ಧ, ನಿಮ್ಮ ವಿರುದ್ಧ ಪಾಪ ಮಾಡಿದ್ದೀನಿ. 17 ದಯವಿಟ್ಟು ಇದೊಂದು ಸಲ ನನ್ನ ಪಾಪ ಕ್ಷಮಿಸಿ. ಜೀವ ತೆಗಿಯೋ ಈ ಶಿಕ್ಷೆಯನ್ನ ತೆಗೆದು ಹಾಕೋಕೆ ನಿಮ್ಮ ದೇವರಾದ ಯೆಹೋವನ ಹತ್ರ ಬೇಡ್ಕೊಳಿ” ಅಂದ. 18 ಹಾಗಾಗಿ ಅವನು* ಅಲ್ಲಿಂದ ಹೋಗಿ ಯೆಹೋವನ ಹತ್ರ ಬೇಡಿದ.+ 19 ಆಗ ಯೆಹೋವ ಗಾಳಿಯ ದಿಕ್ಕನ್ನ ಬದಲಾಯಿಸಿದನು. ಗಾಳಿ ಪಶ್ಚಿಮ ದಿಕ್ಕಿಂದ ತುಂಬ ಜೋರಾಗಿ ಬೀಸ್ತು. ಅದು ಮಿಡತೆಗಳನ್ನ ಹೊತ್ಕೊಂಡು ಹೋಗಿ ಕೆಂಪು ಸಮುದ್ರದಲ್ಲಿ ಹಾಕಿಬಿಡ್ತು. ಈಜಿಪ್ಟ್ ದೇಶದಲ್ಲಿ ಎಲ್ಲೂ ಒಂದೇ ಒಂದು ಮಿಡತೆನೂ ಇರಲಿಲ್ಲ. 20 ಆದ್ರೂ ಫರೋಹ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋಕೆ ಯೆಹೋವ ಬಿಟ್ಟನು.+ ಫರೋಹ ಇಸ್ರಾಯೇಲ್ಯರನ್ನ ಕಳಿಸಲಿಲ್ಲ.
21 ಆಮೇಲೆ ಯೆಹೋವ ಮೋಶೆಗೆ “ನಿನ್ನ ಕೈಯನ್ನ ಆಕಾಶದ ಕಡೆಗೆ ಚಾಚು. ಆಗ ಈಜಿಪ್ಟ್ ದೇಶದಲ್ಲಿ ಕತ್ತಲೆ ಕವಿಯುತ್ತೆ. ಅದು ಗಾಢ ಕತ್ತಲೆ ಆಗಿರುತ್ತೆ” ಅಂದನು. 22 ತಕ್ಷಣ ಮೋಶೆ ಕೈಯನ್ನ ಆಕಾಶದ ಕಡೆ ಚಾಚಿದ. ಆಗ ಇಡೀ ಈಜಿಪ್ಟ್ ದೇಶದಲ್ಲಿ ಗಾಢ ಕತ್ತಲೆ ಕವಿತು. ಮೂರು ದಿನ ದೇಶದಲ್ಲಿ ಕಾರ್ಗತ್ತಲೆ ಇತ್ತು.+ 23 ಆ ಮೂರು ದಿನ ಈಜಿಪ್ಟ್ ಜನ ಒಬ್ರು ಇನ್ನೊಬ್ರನ್ನ ನೋಡಕ್ಕಾಗಲಿಲ್ಲ, ಯಾರೂ ತಾವಿದ್ದ ಸ್ಥಳ ಬಿಟ್ಟು ಆಚೀಚೆ ಹೋಗಲಿಲ್ಲ. ಆದ್ರೆ ಇಸ್ರಾಯೇಲ್ಯರು ವಾಸವಾಗಿದ್ದ ಪ್ರದೇಶದಲ್ಲಿ ಬೆಳಕಿತ್ತು.+ 24 ಆಮೇಲೆ ಫರೋಹ ಮೋಶೆನ ಕರೆದು “ಹೋಗಿ, ಯೆಹೋವನ ಆರಾಧನೆ ಮಾಡಿ.+ ನಿಮ್ಮ ಮಕ್ಕಳನ್ನೂ ಕರ್ಕೊಂಡು ಹೋಗಬಹುದು. ನಿಮ್ಮ ಕುರಿ, ದನಗಳನ್ನ ಮಾತ್ರ ಇಲ್ಲೇ ಬಿಟ್ಟು ಹೋಗಬೇಕು” ಅಂದ. 25 ಅದಕ್ಕೆ ಮೋಶೆ “ನಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸೋಕೆ, ಸರ್ವಾಂಗಹೋಮ ಕೊಡೋಕೆ ನೀನು ನಮಗೆ ಪ್ರಾಣಿಗಳನ್ನ ಸಹ ಕೊಡಬೇಕು.+ 26 ಅದಕ್ಕೆ ನಾವು ನಮ್ಮ ಪ್ರಾಣಿಗಳನ್ನ ಸಹ ತಗೊಂಡು ಹೋಗ್ತೀವಿ. ಒಂದನ್ನೂ ಬಿಟ್ಟುಹೋಗೋಕೆ ಆಗಲ್ಲ. ಯಾಕಂದ್ರೆ ಅದ್ರಲ್ಲಿ ಕೆಲವನ್ನ ನಮ್ಮ ದೇವರಾದ ಯೆಹೋವನ ಆರಾಧನೆಗಾಗಿ ಉಪಯೋಗಿಸ್ತೀವಿ. ಅಷ್ಟೇ ಅಲ್ಲ ಯೆಹೋವನಿಗೆ ಯಾವ ಪ್ರಾಣಿಗಳನ್ನ ಅರ್ಪಿಸಬೇಕು ಅಂತ ಅಲ್ಲಿಗೆ ಹೋದ ಮೇಲೆನೇ ನಮಗೆ ಗೊತ್ತಾಗೋದು” ಅಂದ. 27 ಆಗ ಫರೋಹ ಇನ್ನೂ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋಕೆ ಯೆಹೋವ ಬಿಟ್ಟನು. ಫರೋಹ ಅವರನ್ನ ಕಳಿಸೋಕೆ ಒಪ್ಪಲಿಲ್ಲ.+ 28 ಫರೋಹ ಮೋಶೆಗೆ “ನನ್ನ ಕಣ್ಮುಂದೆ ನಿಲ್ಲಬೇಡ, ಹೋಗು. ಇನ್ನು ಮುಂದೆ ಯಾವತ್ತೂ ನನಗೆ ನಿನ್ನ ಮುಖ ತೋರಿಸಬೇಡ. ತೋರಿಸಿದ್ರೆ ನಿನ್ನನ್ನ ಸಾಯಿಸಿಬಿಡ್ತೀನಿ ಹುಷಾರ್!” ಅಂದ. 29 ಅದಕ್ಕೆ ಮೋಶೆ “ಸರಿ, ಇನ್ನು ಯಾವತ್ತೂ ನಾನು ನಿನ್ನ ಮುಂದೆ ಬರಲ್ಲ” ಅಂದ.
11 ಯೆಹೋವ ಮೋಶೆಗೆ “ನಾನು ಫರೋಹನಿಗೆ ಈಜಿಪ್ಟಿಗೆ ಇನ್ನೊಂದು ಶಿಕ್ಷೆ ಕೊಡ್ತೀನಿ. ಆಗ ಅವನು ನಿಮ್ಮನ್ನ ಇಲ್ಲಿಂದ ಕಳಿಸಿಬಿಡ್ತಾನೆ,+ ನಿಮ್ಮನ್ನ ಓಡಿಸೇ ಬಿಡ್ತಾನೆ.+ 2 ನೀನೀಗ ಇಸ್ರಾಯೇಲ್ಯರ ಎಲ್ಲ ಸ್ತ್ರೀಪುರುಷರಿಗೆ, ತಮ್ಮ ತಮ್ಮ ನೆರೆಯವರಿಂದ ಚಿನ್ನಬೆಳ್ಳಿಯ ಒಡವೆ-ವಸ್ತುಗಳನ್ನ ಕೇಳಿ ಅಂತ ಹೇಳು”+ ಅಂದನು. 3 ಈಜಿಪ್ಟ್ ಜನ್ರು ಇಸ್ರಾಯೇಲ್ಯರಿಗೆ ದಯೆ ತೋರಿಸೋ ತರ ಯೆಹೋವ ಮಾಡಿದನು. ಫರೋಹನ ಸೇವಕರು, ಈಜಿಪ್ಟ್ ಜನ್ರು ಮೋಶೆಗೆ ತುಂಬ ಗೌರವ ಕೊಡ್ತಿದ್ರು.
4 ಆಮೇಲೆ ಮೋಶೆ ಫರೋಹನಿಗೆ “ಯೆಹೋವ ನಿನಗೆ ಹೇಳೋದು ಏನಂದ್ರೆ: ನಾನು ಈಜಿಪ್ಟನ್ನ ಮಧ್ಯರಾತ್ರಿ ದಾಟಿ ಹೋಗ್ತೀನಿ.+ 5 ಆಗ ಈಜಿಪ್ಟ್ ದೇಶದ ಪ್ರತಿಯೊಬ್ಬ ಮೊದಲ ಮಗ ಸಾಯ್ತಾನೆ.+ ಸಿಂಹಾಸನದ ಮೇಲೆ ಕೂತಿರೋ ಫರೋಹನಾದ ನಿನ್ನ ಮೊದಲನೇ ಮಗನಿಂದ ಹಿಡಿದು ಬೀಸೋ ಕಲ್ಲಲ್ಲಿ ಧಾನ್ಯ ಬೀಸ್ತಿರೋ ದಾಸಿಯ ಮೊದಲ ಮಗನ ತನಕ ಎಲ್ಲ ಮೊದಲ ಗಂಡು ಮಕ್ಕಳು ಸಾಯ್ತಾರೆ. ಅಷ್ಟೇ ಅಲ್ಲ ಪ್ರತಿಯೊಂದು ಪ್ರಾಣಿಯ ಮೊದಲನೇ ಮರಿ ಸಹ ಸಾಯುತ್ತೆ.+ 6 ಆಗ ಈಜಿಪ್ಟ್ ದೇಶದಲ್ಲೆಲ್ಲ ದೊಡ್ಡ ಗೋಳಾಟ ಕೇಳಿಸುತ್ತೆ. ಅಂಥ ಗೋಳಾಟವನ್ನ ಯಾರೂ ಯಾವತ್ತೂ ಕೇಳಲಿಲ್ಲ, ಮುಂದೆನೂ ಕೇಳಲ್ಲ.+ 7 ಆದ್ರೆ ಇಸ್ರಾಯೇಲ್ಯರಿಗೆ ಮೊದ್ಲು ಹುಟ್ಟಿದ ಮಕ್ಕಳಾಗಲಿ ಅವರ ಪ್ರಾಣಿಗಳಿಗೆ ಹುಟ್ಟಿದ ಮೊದಲ ಮರಿಗಳಾಗಲಿ ಸಾಯಲ್ಲ. ಅವರನ್ನ ನೋಡಿ ಒಂದು ನಾಯಿ ಸಹ ಬೊಗಳಲ್ಲ. ಇದ್ರಿಂದ ಈಜಿಪ್ಟ್ ಜನ್ರ ಮತ್ತು ಇಸ್ರಾಯೇಲ್ಯರ ಮಧ್ಯ ವ್ಯತ್ಯಾಸ ತೋರಿಸೋ ಸಾಮರ್ಥ್ಯ ಯೆಹೋವನಿಗಿದೆ ಅಂತ ನಿಮಗೆ ಗೊತ್ತಾಗುತ್ತೆ”+ ಅಂದನು. 8 ಮೋಶೆ ಫರೋಹನಿಗೆ “ಆಗ ಖಂಡಿತ ನಿನ್ನ ಎಲ್ಲ ಸೇವಕರು ನನ್ನ ಹತ್ರ ಬಂದು ನನ್ನ ಮುಂದೆ ಅಡ್ಡಬಿದ್ದು ‘ನೀನು, ನಿನ್ನ ಜನ್ರು ಇಲ್ಲಿಂದ ಹೋಗಿ’+ ಅಂತಾರೆ. ಆಮೇಲೆ ನಾನು ಈ ದೇಶ ಬಿಟ್ಟು ಹೋಗ್ತೀನಿ” ಅಂದ. ಮೋಶೆ ಹೀಗೆ ಹೇಳಿ ತುಂಬ ಕೋಪದಿಂದ ಫರೋಹನ ಹತ್ರದಿಂದ ಹೋದ.
9 ಆಮೇಲೆ ಯೆಹೋವ ಮೋಶೆಗೆ “ನಿಮ್ಮಿಬ್ರ ಮಾತನ್ನ ಫರೋಹ ಕೇಳಲ್ಲ.+ ಹಾಗಾಗಿ ನಾನು ಮಾಡೋ ಇನ್ನೂ ತುಂಬ ಅದ್ಭುತವನ್ನ ಈಜಿಪ್ಟಿನ ಜನ್ರಿಗೆ ನೋಡಕ್ಕಾಗುತ್ತೆ”+ ಅಂದನು. 10 ಮೋಶೆ ಆರೋನ ಫರೋಹನ ಮುಂದೆ ಈ ಎಲ್ಲ ಅದ್ಭುತ ಮಾಡಿದ್ರು.+ ಆದ್ರೂ ಫರೋಹ ತನ್ನ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋಕೆ ಯೆಹೋವ ಬಿಟ್ಟನು. ಫರೋಹ ಇಸ್ರಾಯೇಲ್ಯರನ್ನ ತನ್ನ ದೇಶದಿಂದ ಕಳಿಸಲಿಲ್ಲ.+
12 ಈಜಿಪ್ಟ್ ದೇಶದಲ್ಲಿದ್ದ ಮೋಶೆ ಆರೋನರಿಗೆ ಯೆಹೋವ ಹೀಗಂದನು: 2 “ಈ ತಿಂಗಳು ನಿಮಗೆ ವರ್ಷದ ಎಲ್ಲ ತಿಂಗಳಲ್ಲಿ ಮೊದಲನೇ ತಿಂಗಳಾಗಿರುತ್ತೆ.+ 3 ನೀವು ಇಸ್ರಾಯೇಲ್ಯರ ಇಡೀ ಸಮೂಹಕ್ಕೆ ಹೀಗೆ ಹೇಳಿ: ‘ಈ ತಿಂಗಳ ಹತ್ತನೇ ದಿನ ನಿಮ್ಮಲ್ಲಿ ಪ್ರತಿಯೊಬ್ರು ತಮ್ಮತಮ್ಮ ಕುಟುಂಬಕ್ಕಾಗಿ,* ಒಂದು ಮನೆಗೆ ಒಂದು ಕುರಿ+ ತಗೋಬೇಕು. 4 ಆದ್ರೆ ನಿಮ್ಮ ಕುಟುಂಬ ಚಿಕ್ಕದಾಗಿದ್ದು ಒಂದು ಇಡೀ ಕುರಿ ತಿನ್ನೋಕೆ ಆಗದಿದ್ರೆ ನೀವು, ನಿಮ್ಮ ಪಕ್ಕದ ಮನೆಯ ಕುಟುಂಬ ಸೇರಿ ನಿಮ್ಮ ಮನೇಲಿ ತಿನ್ನಬೇಕು. ಹೀಗೆ ಮಾಡುವಾಗ ಒಟ್ಟು ಎಷ್ಟು ಜನ ಇದ್ದಾರೆ, ಒಬ್ಬೊಬ್ರು ಎಷ್ಟೆಷ್ಟು ಮಾಂಸ ತಿಂದ್ರು ಅನ್ನೋದನ್ನ ಲೆಕ್ಕಮಾಡಬೇಕು. 5 ನೀವು ಗಂಡು ಕುರಿಮರಿಯನ್ನೇ ತಗೋಬೇಕು, ಅದು ಒಂದು ವರ್ಷದ್ದಾಗಿರಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ ಕುರಿಮರಿ ಬದಲು ಆಡುಮರಿಯನ್ನ ಸಹ ತಗೋಬಹುದು. 6 ಅದನ್ನ ಈ ತಿಂಗಳ 14ನೇ ದಿನದ ತನಕ ಚೆನ್ನಾಗಿ ನೋಡ್ಕೊಬೇಕು.+ ಅದೇ ದಿನ ಸೂರ್ಯ ಮುಳುಗಿದ ಮೇಲೆ* ಇಸ್ರಾಯೇಲ್ ಸಭೆಯ ಪ್ರತಿಯೊಂದು ಕುಟುಂಬ* ತಮ್ಮತಮ್ಮ ಕುರಿ ಕಡಿಬೇಕು.+ 7 ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಯಾವ ಮನೇಲಿ ಕುರಿ ಮಾಂಸ ತಿಂತಾರೋ ಆ ಮನೆ ಬಾಗಿಲ ಚೌಕಟ್ಟಿನ ಎರಡೂ ಬದಿಗಳಿಗೆ ಮತ್ತು ಮೇಲೆ ಹಚ್ಚಬೇಕು.+
8 ಕುರಿ ಮಾಂಸನ ಆ ರಾತ್ರಿನೇ ತಿನ್ನಬೇಕು.+ ಅದನ್ನ ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿ+ ಮತ್ತು ಕಹಿಯಾದ ಸೊಪ್ಪಿನ ಜೊತೆ+ ತಿನ್ನಬೇಕು. 9 ಕುರಿಯ ಯಾವ ಭಾಗನೂ ನೀವು ಹಸಿಯಾಗಿ* ತಿನ್ನಬಾರದು, ನೀರಲ್ಲಿ ಬೇಯಿಸಿ ತಿನ್ನಬಾರದು. ಅದ್ರ ತಲೆ, ಕಾಲು, ಒಳಗಿನ ಅಂಗಗಳ ಸಮೇತ ಅದನ್ನೆಲ್ಲ ಬೆಂಕಿಯಲ್ಲಿ ಸುಟ್ಟು ತಿನ್ನಬೇಕು. 10 ಅದ್ರಲ್ಲಿ ಸ್ವಲ್ಪನೂ ಬೆಳಿಗ್ಗೆಗಂತ ಉಳಿಸಬಾರದು. ಬೆಳಿಗ್ಗೆ ಏನಾದ್ರೂ ಮಿಕ್ಕಿದ್ರೆ ಅದನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ 11 ನೀವು ಸೊಂಟಪಟ್ಟಿ ಕಟ್ಕೊಂಡು, ಕಾಲಿಗೆ ಚಪ್ಪಲಿ ಹಾಕೊಂಡು, ಕೈಯಲ್ಲಿ ಕೋಲು ಹಿಡಿದು ಅವಸರ ಅವಸರದಿಂದ ಅದನ್ನ ತಿನ್ನಬೇಕು. ಇದು ಯೆಹೋವನ ಘನತೆಗಾಗಿ ಆಚರಿಸೋ ಪಸ್ಕ* ಹಬ್ಬ. 12 ಯಾಕಂದ್ರೆ ನಾನು ಆ ರಾತ್ರಿ ಈಜಿಪ್ಟ್ ದೇಶವನ್ನ ದಾಟಿ ಹೋಗ್ತೀನಿ. ಆಗ ಈಜಿಪ್ಟ್ ದೇಶದ ಎಲ್ಲ ಮನುಷ್ಯರ ಮೊದಲನೇ ಮಕ್ಕಳನ್ನ, ಎಲ್ಲ ಪ್ರಾಣಿಗಳ ಮೊದಲನೇ ಮರಿಗಳನ್ನ ಕೊಲ್ತೀನಿ.+ ನಾನು ಈಜಿಪ್ಟಿನ ಎಲ್ಲ ದೇವರುಗಳಿಗೆ ಶಿಕ್ಷೆ ಕೊಡ್ತೀನಿ.+ ನಾನು ಯೆಹೋವ. 13 ನಿಮ್ಮ ಬಾಗಿಲ ಚೌಕಟ್ಟಿನ ಮೇಲಿರೋ ರಕ್ತ ನೀವಿರೋ ಮನೆಗಳಿಗೆ ಗುರುತಾಗಿರುತ್ತೆ. ನಾನು ಆ ರಕ್ತದ ಗುರುತು ನೋಡಿ ನಿಮ್ಮ ಮನೆ ಬಿಟ್ಟು ಮುಂದೆ ಹೋಗ್ತೀನಿ.* ನಾನು ಈಜಿಪ್ಟ್ ದೇಶಕ್ಕೆ ಶಿಕ್ಷೆ ಕೊಡುವಾಗ ಆ ವಿಪತ್ತು ನಿಮ್ಮ ಮೇಲೆ ಬರಲ್ಲ, ನೀವು ನಾಶ ಆಗೋದೂ ಇಲ್ಲ.+
14 ಆ ದಿನ ನೀವು ಸ್ಮರಿಸಬೇಕಾದ ದಿನವಾಗಿರುತ್ತೆ. ಅವತ್ತು ನೀವು ಯೆಹೋವನ ಘನತೆಗಾಗಿ ಹಬ್ಬ ಆಚರಿಸಬೇಕು. ಇದನ್ನ ಎಲ್ಲ ಪೀಳಿಗೆಯವರು ಆಚರಿಸಬೇಕು. ಇದು ನಿಮಗಿರೋ ಶಾಶ್ವತ ನಿಯಮ. 15 ಏಳು ದಿನ ನೀವು ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು.+ ಮೊದಲನೇ ದಿನದಲ್ಲೇ ಹುಳಿಹಿಟ್ಟನ್ನೆಲ್ಲ ನಿಮ್ಮ ಮನೆಯಿಂದ ತೆಗೆದುಹಾಕಬೇಕು. ಮೊದಲನೇ ದಿನದಿಂದ ಏಳನೇ ದಿನ ತನಕ ಹುಳಿ ಸೇರಿಸಿದ್ದನ್ನ ಯಾರಾದ್ರೂ ತಿಂದ್ರೆ ಅವನನ್ನ ಸಾಯಿಸಬೇಕು. 16 ನೀವು ಮೊದಲನೇ ದಿನ ದೇವರ ಆರಾಧನೆ ಮಾಡೋಕೆ ಸೇರಿಬರಬೇಕು. ಏಳನೇ ದಿನ ಇನ್ನೊಂದು ಸಾರಿ ಎಲ್ರೂ ಒಟ್ಟು ಸೇರಬೇಕು. ಆ ದಿನಗಳಲ್ಲಿ ಯಾವ ಕೆಲಸನೂ ಮಾಡಬಾರದು.+ ಪ್ರತಿಯೊಬ್ರಿಗೆ ಬೇಕಾಗುವಷ್ಟು ಆಹಾರ ಮಾತ್ರ ತಯಾರಿಸಬಹುದು.
17 ಹುಳಿ ಇಲ್ಲದ ರೊಟ್ಟಿ ಹಬ್ಬನ ನೀವು ಆಚರಿಸ್ಲೇ ಬೇಕು.+ ಯಾಕಂದ್ರೆ ಆ ದಿನ ನಾನು ನಿಮ್ಮ ದೊಡ್ಡ ಸಮೂಹನ* ಈಜಿಪ್ಟಿಂದ ಕರ್ಕೊಂಡು ಬರ್ತಿನಿ. ಎಲ್ಲ ಪೀಳಿಗೆಯವರು ಆ ದಿನವನ್ನ ಆಚರಿಸಬೇಕು. ಇದು ನಿಮಗಿರೋ ಶಾಶ್ವತ ನಿಯಮ. 18 ಮೊದಲನೇ ತಿಂಗಳ 14ನೇ ದಿನದ ಸಂಜೆಯಿಂದ ಹಿಡಿದು ಅದೇ ತಿಂಗಳ 21ನೇ ದಿನದ ಸಂಜೆ ತನಕ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ 19 ಏಳು ದಿನ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಲೇಬಾರದು. ಆ ಏಳು ದಿನ ವಿದೇಶದವನಾಗಲಿ ಸ್ವದೇಶದವನಾಗಲಿ+ ಹುಳಿ ಸೇರಿಸಿದ್ದನ್ನ ತಿಂದ್ರೆ ಅವನನ್ನ ಸಾಯಿಸಬೇಕು.+ 20 ಹುಳಿ ಸೇರಿಸಿರೋ ಯಾವುದನ್ನೂ ತಿನ್ನಬಾರದು. ನಿಮ್ಮೆಲ್ರ ಮನೇಲಿ ಹುಳಿ ಇಲ್ಲದ ರೊಟ್ಟಿಗಳನ್ನೇ ತಿನ್ನಬೇಕು.’”
21 ಮೋಶೆ ಕೂಡಲೇ ಇಸ್ರಾಯೇಲ್ಯರ ಎಲ್ಲ ಹಿರಿಯರನ್ನ+ ಕರೆದು ಅವರಿಗೆ ಹೀಗಂದ: “ನೀವು ಹೋಗಿ ನಿಮ್ಮನಿಮ್ಮ ಕುಟುಂಬಕ್ಕಾಗಿ ಒಂದೊಂದು ಕುರಿಮರಿಯನ್ನೋ ಆಡಿನ ಮರಿಯನ್ನೋ ಆರಿಸ್ಕೊಳ್ಳಿ. ಪಸ್ಕದ ಬಲಿ ಆಗಿರೋ ಆ ಮರಿನ ಕೊಯ್ಯಿರಿ. 22 ಆಮೇಲೆ ಅದ್ರ ರಕ್ತನ ಬೋಗುಣಿಯಲ್ಲಿ ಹಾಕಿ ಹಿಸ್ಸೋಪ್* ಗಿಡದ ಕಟ್ಟನ್ನ ರಕ್ತದಲ್ಲಿ ಅದ್ದಿ ಅದ್ರಿಂದ ನಿಮ್ಮ ಮನೆ ಬಾಗಿಲ ಚೌಕಟ್ಟಿನ ಮೇಲೆ ಮತ್ತು ಎರಡೂ ಬದಿಗೆ ಗುರುತು ಮಾಡಬೇಕು. ಬೆಳಿಗ್ಗೆ ತನಕ ನಿಮ್ಮಲ್ಲಿ ಯಾರೂ ಮನೆಯಿಂದ ಹೊರಗೆ ಹೋಗಬಾರದು. 23 ಯೆಹೋವ ಈಜಿಪ್ಟ್ ಜನ್ರಿಗೆ ಶಿಕ್ಷೆ ಕೊಡೋಕೆ ದಾಟಿ ಹೋಗ್ತಾನೆ. ಆಗ ನಿಮ್ಮ ಮನೆ ಬಾಗಿಲ ಚೌಕಟ್ಟಿನ ಮೇಲೆ ಮತ್ತು ಎರಡು ಬದಿಗಳಲ್ಲಿ ರಕ್ತದ ಗುರುತು ಇರೋದು ನೋಡಿ ನಿಮ್ಮ ಮನೆನ ದಾಟಿ ಹೋಗ್ತಾನೆ.* ನಿಮ್ಮ ಮನೆ ಒಳಗಿರೋ ಯಾರನ್ನೂ ಯೆಹೋವ ಸಾಯಿಸಲ್ಲ.+
24 ನೀವು ಈ ಹಬ್ಬ ಆಚರಿಸಬೇಕು. ಈ ನಿಯಮವನ್ನ ನೀವು ನಿಮ್ಮ ಮಕ್ಕಳು ಯಾವಾಗ್ಲೂ ಪಾಲಿಸಬೇಕು.+ 25 ಯೆಹೋವ ನಿಮಗೆ ಕೊಡ್ತಿನಂತ ಹೇಳಿದ ದೇಶಕ್ಕೆ ಆತನು ನಿಮ್ಮನ್ನ ಕರ್ಕೊಂಡು ಹೋದಾಗ ನೀವು ಈ ಆಚರಣೆ ಮಾಡಬೇಕು.+ 26 ಮುಂದೆ ನಿಮ್ಮ ಮಕ್ಕಳು ‘ಈ ಆಚರಣೆನ ಯಾಕೆ ಮಾಡಬೇಕು?’+ ಅಂತ ಕೇಳಿದಾಗ 27 ನೀವು ಅವರಿಗೆ ‘ಇಸ್ರಾಯೇಲ್ಯರು ಈಜಿಪ್ಟಲ್ಲಿದ್ದಾಗ ಆತನು ಈಜಿಪ್ಟಿನವರಿಗೆ ಶಿಕ್ಷೆ ಕೊಟ್ಟನು. ಆದ್ರೆ ಇಸ್ರಾಯೇಲ್ಯರ ಮನೆಗಳನ್ನ ದಾಟಿಹೋದನು. ಹೀಗೆ ನಮ್ಮ ಮನೆಗಳಲ್ಲಿ ಇದ್ದವರ ಜೀವ ಉಳಿಸಿದನು. ಹಾಗಾಗಿ ನಾವು ಯೆಹೋವನ ಘನತೆಗಾಗಿ ಈ ಪಸ್ಕದ ಬಲಿ ಅರ್ಪಿಸ್ತೀವಿ’ ಅಂತ ಹೇಳಬೇಕು.”
ಇದನ್ನ ಕೇಳಿ ಜನ್ರು ಅಡ್ಡಬಿದ್ದು ನಮಸ್ಕಾರ ಮಾಡಿದ್ರು. 28 ಇಸ್ರಾಯೇಲ್ಯರು ಅಲ್ಲಿಂದ ಹೋಗಿ ಮೋಶೆ ಆರೋನರಿಗೆ ಯೆಹೋವ ಆಜ್ಞೆಕೊಟ್ಟ ಹಾಗೇ ಮಾಡಿದ್ರು.+ ದೇವರು ಹೇಳಿದ ತರಾನೇ ಮಾಡಿದ್ರು.
29 ಮಧ್ಯರಾತ್ರಿ ಯೆಹೋವ ಈಜಿಪ್ಟ್ ದೇಶದ ಪ್ರತಿಯೊಬ್ಬ ಮೊದಲನೇ ಮಗನನ್ನ ಸಾಯಿಸಿದನು.+ ಸಿಂಹಾಸನದ ಮೇಲೆ ಕೂತಿದ್ದ ಫರೋಹನ ಮೊದಲನೇ ಮಗನಿಂದ ಹಿಡಿದು ಜೈಲಲ್ಲಿದ್ದ* ಕೈದಿಯ ಮೊದಲನೇ ಮಗನ ತನಕ ಎಲ್ಲ ಮೊದಲ ಮಕ್ಕಳನ್ನ ಸಾಯಿಸಿದನು. ಅಷ್ಟೇ ಅಲ್ಲ ಪ್ರತಿಯೊಂದು ಪ್ರಾಣಿಯ ಮೊದಲ ಮರಿನ ಸಹ ಸಾಯಿಸಿದನು.+ 30 ಆ ರಾತ್ರಿ ಫರೋಹನಿಗೆ, ಅವನ ಎಲ್ಲ ಸೇವಕರಿಗೆ, ಈಜಿಪ್ಟಿನ ಬೇರೆ ಜನರಿಗೆಲ್ಲ ನಿದ್ದೆಯಿಂದ ಎಚ್ಚರ ಆಯ್ತು. ಈಜಿಪ್ಟಲ್ಲಿ ಎಲ್ಲೆಲ್ಲೂ ಅಳು, ಗೋಳಾಟದ ಶಬ್ದ ಜೋರಾಗಿತ್ತು. ಯಾಕಂದ್ರೆ ಈಜಿಪ್ಟಿನವರ ಮಧ್ಯ ಸಾವಿಲ್ಲದ ಮನೆ ಒಂದೂ ಇರಲಿಲ್ಲ.+ 31 ಫರೋಹ ತಕ್ಷಣ ಆ ರಾತ್ರಿ ಮೋಶೆ ಆರೋನರನ್ನ ಕರೆಸಿ+ “ನೀವು ಎಲ್ಲ ಇಸ್ರಾಯೇಲ್ಯರನ್ನ ಕರ್ಕೊಂಡು ಇಲ್ಲಿಂದ ಹೋಗಿ. ನನ್ನ ಜನ್ರ ಮಧ್ಯ ಇರಲೇಬೇಡಿ, ನೀವು ಯೆಹೋವನ ಆರಾಧನೆ ಮಾಡಬೇಕು ಅಂತ ಕೇಳ್ಕೊಂಡ್ರಲ್ಲಾ, ಹೋಗಿ.+ 32 ನೀವು ಹೇಳಿದ ಹಾಗೇ ನಿಮ್ಮ ಕುರಿ ಆಡು ದನ ಎಲ್ಲ ತಗೊಂಡು ಹೋಗಿ.+ ಆದ್ರೆ ನನ್ನನ್ನ ಆಶೀರ್ವದಿಸಬೇಕು ಅಂತ ನಿಮ್ಮ ದೇವರ ಹತ್ರ ಬೇಡ್ಕೊಳ್ಳಿ” ಅಂದ.
33 ಈಜಿಪ್ಟಿನವರು ಇಸ್ರಾಯೇಲ್ಯರಿಗೆ “ನೀವು ಹೋಗದಿದ್ರೆ ನಾವೆಲ್ಲ ಸತ್ತುಹೋಗ್ತೀವಿ!”+ ಅಂತ ಹೇಳಿ ಈಜಿಪ್ಟನ್ನ ಬೇಗ ಬಿಟ್ಟುಹೋಗಿ ಅಂತ ಒತ್ತಾಯ ಮಾಡಿದ್ರು.+ 34 ಹಾಗಾಗಿ ಇಸ್ರಾಯೇಲ್ಯರು ನಾದಿದ ಹಿಟ್ಟಿಗೆ ಹುಳಿಹಾಕದೆ ಅದನ್ನ ಹಿಟ್ಟು ನಾದೋ ಪಾತ್ರೆ ಸಮೇತ ಬಟ್ಟೆಯಲ್ಲಿ ಸುತ್ತಿ ಹೆಗಲ ಮೇಲೆ ಹಾಕೊಂಡ್ರು. 35 ಇಸ್ರಾಯೇಲ್ಯರು ಮೋಶೆ ಹೇಳಿದ ಹಾಗೇ ಈಜಿಪ್ಟಿನವರ ಹತ್ರ ಹೋಗಿ ಚಿನ್ನಬೆಳ್ಳಿಯ ಒಡವೆ, ವಸ್ತುಗಳನ್ನ, ಬಟ್ಟೆಗಳನ್ನ ಕೇಳಿದ್ರು.+ 36 ಈಜಿಪ್ಟಿನವರು ಇಸ್ರಾಯೇಲ್ಯರಿಗೆ ದಯೆ ತೋರಿಸೋ ತರ ಯೆಹೋವ ಮಾಡಿದನು. ಹಾಗಾಗಿ ಇಸ್ರಾಯೇಲ್ಯರು ಕೇಳಿದ್ದನ್ನೆಲ್ಲ ಈಜಿಪ್ಟಿನವರು ಕೊಟ್ರು. ಹೀಗೆ ಅವರು ಈಜಿಪ್ಟಿನವರನ್ನ ಲೂಟಿ ಮಾಡಿದ್ರು.+
37 ಆಮೇಲೆ ಇಸ್ರಾಯೇಲ್ಯರು ರಮ್ಸೇಸ್+ ಪ್ರದೇಶದಿಂದ ಸುಕ್ಕೋತಿಗೆ+ ಹೊರಟ್ರು. ಅವರಲ್ಲಿ ಮಕ್ಕಳನ್ನ ಬಿಟ್ಟು ಸುಮಾರು 6,00,000 ಗಂಡಸರು* ಇದ್ರು.+ 38 ಇಸ್ರಾಯೇಲ್ಯರು ಪ್ರಾಣಿಗಳ ದೊಡ್ಡ ಹಿಂಡನ್ನೂ ತಮ್ಮ ಜೊತೆ ತಗೊಂಡು ಹೋದ್ರು. ಜೊತೆಗೆ ಬೇರೆ ಜನ್ರು*+ ಸಹ ಹೊರಟ್ರು. 39 ಅವರು ಈಜಿಪ್ಟಿಂದ ತಂದಿದ್ದ ನಾದಿದ ಹಿಟ್ಟಿಂದ ದುಂಡಗಿನ ರೊಟ್ಟಿಗಳನ್ನ ಮಾಡೋಕೆ ಶುರು ಮಾಡಿದ್ರು. ಅವು ಹುಳಿಯಿಲ್ಲದ ರೊಟ್ಟಿಗಳಾಗಿತ್ತು. ಇಸ್ರಾಯೇಲ್ಯರನ್ನ ಇದ್ದಕ್ಕಿದ್ದ ಹಾಗೆ ಈಜಿಪ್ಟಿಂದ ಓಡಿಸಿದ್ರಿಂದ ಹಿಟ್ಟಿಗೆ ಹುಳಿ ಸೇರಿಸೋಕೆ, ತಮಗಾಗಿ ಯಾವುದೇ ಆಹಾರ ಸಿದ್ಧ ಮಾಡೋಕೆ ಅವರಿಗೆ ಆಗಲಿಲ್ಲ.+
40 ಈಜಿಪ್ಟ್ ಬಿಟ್ಟು ಹೋಗೋಷ್ಟರಲ್ಲಿ ಇಸ್ರಾಯೇಲ್ಯರು ಒಟ್ಟು 430 ವರ್ಷ+ ವಿದೇಶಿಯರಾಗಿ ಜೀವಿಸಿದ್ರು.+ 41 ಆ 430 ವರ್ಷಗಳು ಮುಗಿದ ಅದೇ ದಿನ ಯೆಹೋವನ ಜನ್ರ ದೊಡ್ಡ ಸಮೂಹ* ಈಜಿಪ್ಟ್ ದೇಶ ಬಿಟ್ಟು ಹೊರಗೆ ಬಂತು. 42 ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಆ ರಾತ್ರಿ ಹೊರಗೆ ಕರ್ಕೊಂಡು ಬಂದಿದ್ದನ್ನ ನೆನಪಿಸ್ಕೊಳ್ಳೋಕೆ ಅವರು ಪ್ರತಿವರ್ಷ ಆ ರಾತ್ರಿ ಹಬ್ಬ ಆಚರಿಸ್ತಾರೆ. ಇಸ್ರಾಯೇಲ್ಯರ ಎಲ್ಲ ಪೀಳಿಗೆಯವರು ಆ ರಾತ್ರಿಯನ್ನ ಯೆಹೋವನ ಘನತೆಗಾಗಿ ಸ್ಮರಿಸಿ ಆಚರಿಸಬೇಕು.+
43 ಆಮೇಲೆ ಯೆಹೋವ ಮೋಶೆ ಆರೋನರಿಗೆ ಹೀಗಂದನು: “ಪಸ್ಕ ಹಬ್ಬದ ನಿಯಮ ಏನಂದ್ರೆ, ಯಾವ ವಿದೇಶಿ ಕೂಡ ಪಸ್ಕದ ಊಟ ತಿನ್ನಬಾರದು.+ 44 ಹಣಕ್ಕೆ ತಗೊಂಡ ದಾಸ ನಿಮಗೆ ಇರೋದಾದ್ರೆ ಅವನಿಗೆ ಸುನ್ನತಿ ಮಾಡಿಸಬೇಕು.+ ಆಗ ಮಾತ್ರ ಅವನು ಪಸ್ಕದ ಊಟ ತಿನ್ನಬಹುದು. 45 ವಲಸೆ ಬಂದವನು, ನಿಮ್ಮ ಹತ್ರ ಕೂಲಿ ಕೆಲಸ ಮಾಡೋನು ಅದನ್ನ ತಿನ್ನಬಾರದು. 46 ಪಸ್ಕದ ಒಂದು ಕುರಿಮರಿನ ಒಂದೇ ಮನೆಯೊಳಗೆ ತಿನ್ನಬೇಕು. ಅದ್ರ ಮಾಂಸದಲ್ಲಿ ಸ್ವಲ್ಪನೂ ಮನೆ ಹೊರಗೆ ತಗೊಂಡು ಹೋಗಬಾರದು. ಅದ್ರ ಒಂದು ಮೂಳೆನೂ ಮುರಿಬಾರದು.+ 47 ಎಲ್ಲ ಇಸ್ರಾಯೇಲ್ಯರು ಈ ಹಬ್ಬ ಆಚರಿಸಬೇಕು. 48 ನಿಮ್ಮ ಜೊತೆ ವಾಸ ಮಾಡ್ತಿರೋ ವಿದೇಶಿ ಯೆಹೋವನ ಘನತೆಗಾಗಿ ಪಸ್ಕ ಹಬ್ಬ ಆಚರಿಸೋಕೆ ಇಷ್ಟಪಟ್ರೆ ಅವನ ಕುಟುಂಬದಲ್ಲಿರೋ ಪ್ರತಿಯೊಬ್ಬ ಹುಡುಗನಿಗೂ ಪುರುಷನಿಗೂ ಸುನ್ನತಿ ಆಗಬೇಕು. ಆಗ ಅವನು ಪಸ್ಕ ಆಚರಿಸಬಹುದು. ಅಷ್ಟೇ ಅಲ್ಲ ಅವನು ಸ್ವದೇಶದವನ ತರಾನೇ ಆಗ್ತಾನೆ. ಆದ್ರೆ ಸುನ್ನತಿ ಆಗಿರದ ಯಾವ ಪುರುಷನೂ ಪಸ್ಕದ ಊಟ ತಿನ್ನಬಾರದು.+ 49 ಇಸ್ರಾಯೇಲ್ಯರಿಗೂ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೂ ಒಂದೇ ನಿಯಮ.”+
50 ಯೆಹೋವ ಮೋಶೆ ಆರೋನರಿಗೆ ಆಜ್ಞೆಕೊಟ್ಟ ಹಾಗೇ ಎಲ್ಲ ಇಸ್ರಾಯೇಲ್ಯರು ಮಾಡಿದ್ರು. ದೇವರು ಹೇಳಿದ ಹಾಗೇ ಅವರು ಮಾಡಿದ್ರು. 51 ಅದೇ ದಿನ ಯೆಹೋವ ಎಲ್ಲ ಇಸ್ರಾಯೇಲ್ಯರನ್ನ* ಈಜಿಪ್ಟ್ ದೇಶದಿಂದ ಹೊರಗೆ ಕರ್ಕೊಂಡು ಬಂದನು.
13 ಯೆಹೋವ ಮೋಶೆಗೆ 2 “ಇಸ್ರಾಯೇಲ್ಯರ ಎಲ್ಲ ಮೊದಲ ಗಂಡುಮಕ್ಕಳನ್ನ ನನ್ನ ಸೇವೆ ಮಾಡೋಕೆ ಕೊಡು.* ಇಸ್ರಾಯೇಲ್ಯರಿಗೆ ಹುಟ್ಟೋ ಮೊದಲನೇ ಗಂಡುಮಕ್ಕಳು, ಅವರ ಪ್ರಾಣಿಗಳಿಗೆ ಹುಟ್ಟೋ ಮೊದಲನೇ ಗಂಡುಮರಿಗಳು ನನಗೆ ಸೇರಿದ್ದು” ಅಂದನು.+
3 ಆಮೇಲೆ ಮೋಶೆ ಜನ್ರಿಗೆ ಹೀಗೆ ಹೇಳಿದ: “ಈ ದಿನವನ್ನ ನೆನಪಿಟ್ಕೊಳ್ಳಿ. ಯಾಕಂದ್ರೆ ನೀವು ಗುಲಾಮರಾಗಿದ್ದ ಈಜಿಪ್ಟ್ ದೇಶನ ಈ ದಿನ ಬಿಟ್ಟು ಬಂದಿದ್ದೀರ.+ ಯೆಹೋವ ತನ್ನ ಮಹಾ ಶಕ್ತಿಯಿಂದ* ನಿಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದ್ನಲ್ಲಾ.+ ಹಾಗಾಗಿ ಹುಳಿ ಸೇರಿಸಿರೋ ಯಾವುದನ್ನೂ ನೀವು ತಿನ್ನಬಾರದು. 4 ನೀವು ಅಬೀಬ್*+ ತಿಂಗಳ ಈ ದಿನ ಈಜಿಪ್ಟಿಂದ ಹೊರಗೆ ಬಂದಿದ್ದೀರ. 5 ಯೆಹೋವ ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ ಹಾಗೆ+ ನಿಮ್ಮನ್ನ ಹಾಲೂ ಜೇನೂ ಹರಿಯೋ ದೇಶಕ್ಕೆ+ ಅಂದ್ರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು, ಯೆಬೂಸಿಯರು+ ವಾಸವಾಗಿರೋ ದೇಶಕ್ಕೆ ಕರ್ಕೊಂಡು ಹೋಗಿ ಅದನ್ನ ನಿಮಗೆ ಕೊಟ್ಟಾಗ ನೀವು ಪ್ರತಿ ವರ್ಷ ಈ ತಿಂಗಳಲ್ಲಿ ಇದನ್ನ ಆಚರಿಸಬೇಕು. 6 ಏಳು ದಿನ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ ಏಳನೇ ದಿನ ಯೆಹೋವನಿಗೆ ಗೌರವ ಕೊಡೋಕೆ ಹಬ್ಬ ಮಾಡಬೇಕು. 7 ಹುಳಿ ಇಲ್ಲದ ರೊಟ್ಟಿನ ಆ ಏಳು ದಿನ ತಿನ್ನಬೇಕು.+ ಹುಳಿ ಸೇರಿಸಿದ ಯಾವುದೂ ನಿಮ್ಮ ಹತ್ರ ಇರಬಾರದು.+ ಹುಳಿ ಹಿಟ್ಟು ನಿಮ್ಮ ಹತ್ರ ಆಗಲಿ ನಿಮ್ಮ ಪ್ರದೇಶದಲ್ಲಾಗಲಿ ಇರಬಾರದು. 8 ಆ ದಿನ ನೀವು ನಿಮ್ಮ ಮಕ್ಕಳಿಗೆ ‘ಈಜಿಪ್ಟಿಂದ ಯೆಹೋವ ನನ್ನನ್ನ ಹೇಗೆ ಬಿಡಿಸ್ಕೊಂಡು ಬಂದನು ಅಂತ ನೆನಪಿಸಿಕೊಳ್ಳೋಕೆ ಈ ಆಚರಣೆ ಮಾಡ್ತೀನಿ’ ಅನ್ನಬೇಕು.+ 9 ಯೆಹೋವ ತನ್ನ ಮಹಾ ಶಕ್ತಿಯಿಂದ* ನಿಮ್ಮನ್ನ ಈಜಿಪ್ಟ್ ದೇಶದಿಂದ ಬಿಡಿಸಿದ್ದನ್ನ ನೀವು ಮರಿಯದೇ ಇರೋಕೆ ಈ ಆಚರಣೆ ನಿಮ್ಮ ಕೈ ಮೇಲೆ, ಹಣೆ ಮೇಲಿರೋ ಪಟ್ಟಿ*+ ತರ ಇರುತ್ತೆ. ಇದ್ರಿಂದ ನಿಮಗೆ ಯೆಹೋವನ ನಿಯಮ ಪುಸ್ತಕದ ಬಗ್ಗೆ ಯಾವಾಗ್ಲೂ ಮಾತಾಡೋಕೆ ಆಗುತ್ತೆ.* 10 ಪ್ರತಿ ವರ್ಷ ನೀವು ಈ ನಿಯಮದ ಪ್ರಕಾರ ನಡೆದು ಅದೇ ಸಮಯಕ್ಕೇ ಈ ಆಚರಣೆ ಮಾಡಬೇಕು.+
11 ಯೆಹೋವ ನಿಮಗೆ, ನಿಮ್ಮ ಪೂರ್ವಜರಿಗೆ+ ಕೊಡ್ತೀನಿ ಅಂತ ಮಾತು ಕೊಟ್ಟಿರೋ ಕಾನಾನ್ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಹೋದ್ಮೇಲೆ 12 ನಿಮಗೆ ಹುಟ್ಟೋ ದೊಡ್ಡ ಮಗನನ್ನ ಮತ್ತು ನಿಮ್ಮ ಪ್ರಾಣಿಗಳಿಗೆ ಹುಟ್ಟೋ ಮೊದಲನೇ ಗಂಡುಮರಿಯನ್ನ ಯೆಹೋವನಿಗೆ ಮೀಸಲಾಗಿ ಇಡಬೇಕು. ಎಲ್ಲ ಮೊದಲನೇ ಗಂಡುಮಕ್ಕಳು ಮೊದಲನೇ ಮರಿಗಳು ಯೆಹೋವನಿಗೆ ಸೇರಿದ್ದು.+ 13 ನಿಮ್ಮ ಹತ್ರ ಕತ್ತೆಯ ಮೊದಲ ಮರಿ ಇರೋದಾದ್ರೆ ನೀವು ಅದ್ರ ಬದಲು ಕುರಿಯನ್ನ ಬಲಿ ಅರ್ಪಿಸಿ ಕತ್ತೆ ಮರಿನ ಬಿಡಿಸ್ಕೊಳ್ಳಬೇಕು. ನೀವು ಆ ಕತ್ತೆ ಮರಿನ ಬಿಡಿಸ್ಕೊಳ್ಳದಿದ್ರೆ ಅದ್ರ ಕತ್ತು ಮುರಿದು ಸಾಯಿಸಬೇಕು. ನಿಮ್ಮ ಪ್ರತಿಯೊಬ್ಬ ಮೊದಲ ಮಗನನ್ನೂ ನೀವು ಬಿಡಿಸ್ಕೊಳ್ಳಬೇಕು.+
14 ಮುಂದೊಂದು ದಿನ ನಿಮ್ಮ ಮಕ್ಕಳು ‘ನಾವ್ಯಾಕೆ ಹೀಗೆ ಮಾಡ್ಬೇಕು?’ ಅಂತ ಕೇಳಿದ್ರೆ ನೀವು ಅವರಿಗೆ ‘ಈಜಿಪ್ಟ್ ದೇಶದಲ್ಲಿ ನಾವು ಗುಲಾಮರಾಗಿದ್ದಾಗ ಯೆಹೋವ ತನ್ನ ಮಹಾ ಶಕ್ತಿಯಿಂದ* ನಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದನು.+ 15 ಫರೋಹ ನಮ್ಮನ್ನ ಕಳಿಸಲ್ಲ ಅಂತ ಹಠಹಿಡಿದಾಗ+ ಯೆಹೋವ ಈಜಿಪ್ಟ್ ದೇಶದ ಎಲ್ಲ ಮೊದಲನೇ ಮಕ್ಕಳನ್ನ ಮತ್ತು ಎಲ್ಲ ಪ್ರಾಣಿಗಳ ಮೊದಲನೇ ಮರಿಗಳನ್ನ ಸಾಯಿಸಿದನು.+ ಅದಕ್ಕೇ ನಾವು ಪ್ರಾಣಿಗಳ ಪ್ರತಿಯೊಂದು ಮೊದಲನೇ ಮರಿನ ಯೆಹೋವನಿಗೆ ಬಲಿ ಕೊಡ್ತೀವಿ. ನಮ್ಮ ಪ್ರತಿಯೊಬ್ಬ ಮೊದಲನೇ ಮಗನನ್ನ ಬಿಡಿಸ್ಕೊಳ್ತೀವಿ’ ಅಂತ ಹೇಳಬೇಕು. 16 ಯೆಹೋವ ತನ್ನ ಮಹಾ ಶಕ್ತಿಯಿಂದ* ನಿಮ್ಮನ್ನ ಈಜಿಪ್ಟ್ ದೇಶದಿಂದ ಬಿಡಿಸಿದನು ಅಂತ ನೀವು ಮರಿಯದೆ ಇರೋಕೆ ಈ ಆಚರಣೆ ನಿಮ್ಮ ಕೈ ಮೇಲೆ, ಹಣೆ ಮೇಲಿರೋ ಪಟ್ಟಿ ತರ ಇರ್ಬೇಕು.”+
17 ಫರೋಹ ಇಸ್ರಾಯೇಲ್ಯರಿಗೆ ಈಜಿಪ್ಟಿಂದ ಹೋಗೋಕೆ ಹೇಳಿದಾಗ ಫಿಲಿಷ್ಟಿಯರ ದೇಶವನ್ನ ದಾಟ್ಕೊಂಡು ಹೋಗೋ ಒಂದು ದಾರಿ ಇತ್ತು. ಅದು ಹತ್ರ ದಾರಿ. ಆದ್ರೂ ದೇವರು ಅವರನ್ನ ಆ ದಾರೀಲಿ ಕರ್ಕೊಂಡು ಬರಲಿಲ್ಲ. ಯಾಕಂದ್ರೆ “ಇಸ್ರಾಯೇಲ್ಯರು ಅಲ್ಲಿಂದ ಹೋದ್ರೆ ಆ ಜನ್ರ ವಿರುದ್ಧ ಯುದ್ಧ ಮಾಡಬೇಕಾಗುತ್ತೆ. ಆಗ ಅವರ ಮನಸ್ಸು ಬದಲಾಗಿ ಅವರು ಈಜಿಪ್ಟಿಗೆ ವಾಪಸ್ ಹೋಗಬಹುದು” ಅಂತ ದೇವರು ಹೇಳಿದನು. 18 ಹಾಗಾಗಿ ದೇವರು ಅವರನ್ನ ಸುತ್ತಾಕಿಸಿಕೊಂಡು ಕೆಂಪು ಸಮುದ್ರ ಹತ್ರ ಇರೋ ಕಾಡಿನ ದಾರೀಲಿ ಕರ್ಕೊಂಡು ಬಂದನು.+ ಇಸ್ರಾಯೇಲ್ಯರು ಈಜಿಪ್ಟ್ ದೇಶದಿಂದ ಸೈನಿಕರ ತರ ಅಚ್ಚುಕಟ್ಟಾಗಿ ಹೊರಟ್ರು. 19 ಮೋಶೆ ಯೋಸೇಫನ ಮೂಳೆಗಳನ್ನೂ ತಗೊಂಡ. ಯಾಕಂದ್ರೆ ಯೋಸೇಫ ಇಸ್ರಾಯೇಲನ ಮಕ್ಕಳಿಗೆ “ದೇವರು ನಿಮಗೆ ಖಂಡಿತ ಸಹಾಯ ಮಾಡ್ತಾನೆ. ಅದಕ್ಕೇ ನೀವು ಇಲ್ಲಿಂದ ಹೋಗುವಾಗ ನನ್ನ ಮೂಳೆಗಳನ್ನ ತಗೊಂಡು ಹೋಗಬೇಕು” ಅಂತ ಅವರ ಹತ್ರ ಮಾತು ತಗೊಂಡಿದ್ದ.+ 20 ಅವರು ಸುಕ್ಕೋತಿಂದ ಹೊರಟು ಕಾಡಿನ ಅಂಚಿನಲ್ಲಿರೋ ಏತಾಮಿಗೆ ಬಂದು ಅಲ್ಲಿ ಡೇರೆ ಹಾಕೊಂಡ್ರು.
21 ಯೆಹೋವ ಅವರ ಮುಂದೆಮುಂದೆ ಹೋಗ್ತಾ ದಾರಿ ತೋರಿಸ್ತಿದ್ದನು. ಆತನು ಹಗಲಲ್ಲಿ ಮೋಡವಾಗಿ+ ರಾತ್ರಿಯಲ್ಲಿ ಬೆಳಕು ಕೊಡೋದಕ್ಕೆ ಬೆಂಕಿಯಾಗಿದ್ದು ಕರ್ಕೊಂಡು ಹೋದನು. ಹಾಗಾಗಿ ಅವರಿಗೆ ಹಗಲಲ್ಲೂ ರಾತ್ರಿಲೂ ಪ್ರಯಾಣ ಮಾಡೋಕೆ ಆಯ್ತು.+ 22 ಹಗಲಲ್ಲಿ ಮೋಡ ಮತ್ತು ರಾತ್ರಿಯಲ್ಲಿ ಬೆಂಕಿ ಜನ್ರ ಮುಂದೆನೇ ಇರ್ತಿತ್ತು, ಅವರಿಂದ ದೂರ ಹೋಗ್ತಿರಲಿಲ್ಲ.+
14 ಆಮೇಲೆ ಯೆಹೋವ ಮೋಶೆಗೆ 2 “ವಾಪಸ್ ಹೋಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯ, ಪೀಹಹೀರೋತಿನ ಹತ್ರ ಡೇರೆ ಹಾಕೊಳ್ಳೋಕೆ ಇಸ್ರಾಯೇಲ್ಯರಿಗೆ ಹೇಳು. ಸಮುದ್ರದ ಹತ್ರ ಬಾಳ್ಚೆಫೋನಿನ+ ಮುಂದೆ ನೀವು ಡೇರೆ ಹಾಕೊಳ್ಳಬೇಕು. 3 ಆಗ ಫರೋಹ ಇಸ್ರಾಯೇಲ್ಯರ ಬಗ್ಗೆ ‘ಅವರು ದಾರಿತಪ್ಪಿ ಅಲ್ಲಿ ಇಲ್ಲಿ ಅಲೆದಾಡ್ತಾ ಕಾಡಲ್ಲಿ ಸಿಕ್ಕಿಹಾಕೊಂಡಿದ್ದಾರೆ’ ಅಂತ ಹೇಳ್ತಾನೆ. 4 ಫರೋಹನ ಹೃದಯ ಕಲ್ಲಿನ ತರ ಆಗೋಕೆ+ ನಾನು ಬಿಡೋದ್ರಿಂದ ಅವನು ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಬರ್ತಾನೆ. ನಾನು ಫರೋಹನನ್ನ, ಅವನ ಎಲ್ಲ ಸೈನ್ಯವನ್ನ ಸೋಲಿಸಿ ನನ್ನ ಹೆಸರಿಗೆ ಗೌರವ ಬರೋ ತರ ಮಾಡ್ತೀನಿ.+ ಆಗ ಈಜಿಪ್ಟಿನವರಿಗೆ ನಾನೇ ಯೆಹೋವ ಅಂತ ಗೊತ್ತಾಗುತ್ತೆ”+ ಅಂದನು. ಇಸ್ರಾಯೇಲ್ಯರು ದೇವರು ಹೇಳಿದ ಹಾಗೇ ಮಾಡಿದ್ರು.
5 ಆಮೇಲೆ ಈಜಿಪ್ಟಿನ ರಾಜನಿಗೆ ಇಸ್ರಾಯೇಲ್ಯರು ಓಡಿಹೋದ್ರು ಅನ್ನೋ ಸುದ್ದಿ ಸಿಕ್ತು. ಆಗ ಫರೋಹ ಮತ್ತು ಅವನ ಸೇವಕರು ತಮ್ಮ ಮನಸ್ಸು ಬದಲಾಯಿಸ್ಕೊಂಡು+ “ನಾವು ಎಂಥ ಕೆಲಸ ಮಾಡಿಬಿಟ್ವಿ! ನಮಗೆ ಗುಲಾಮರಾಗಿದ್ದ ಇಸ್ರಾಯೇಲ್ಯರನ್ನ ಯಾಕಾದ್ರೂ ಹೋಗೋಕೆ ಬಿಟ್ವೋ?” ಅಂದ್ರು. 6 ಅವನು ತನ್ನ ಯುದ್ಧರಥಗಳನ್ನ ಸಿದ್ಧಮಾಡಿ ತನ್ನ ಸೈನಿಕರ ಜೊತೆ ಹೊರಟ.+ 7 ಅವನು 600 ಒಳ್ಳೇ ರಥಗಳನ್ನ, ಈಜಿಪ್ಟಿನ ಬೇರೆಲ್ಲ ರಥಗಳನ್ನ ತಗೊಂಡು ಹೋದ. ಎಲ್ಲ ರಥದಲ್ಲೂ ಸೈನಿಕರು ಇದ್ರು. 8 ಹೀಗೆ ಈಜಿಪ್ಟಿನ ರಾಜ ಫರೋಹನ ಹೃದಯ ಕಲ್ಲಿನ ತರ ಆಗೋಕೆ ಯೆಹೋವ ಬಿಟ್ಟನು. ಧೈರ್ಯದಿಂದ ಹೋಗ್ತಿದ್ದ ಇಸ್ರಾಯೇಲ್ಯರನ್ನ+ ಫರೋಹ ಅಟ್ಟಿಸ್ಕೊಂಡು ಹೋದ. 9 ಫರೋಹನ ಎಲ್ಲ ರಥಗಳು, ಕುದುರೆ ಸವಾರರು, ಅವನ ಸೈನಿಕರು ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಬಂದ್ರು.+ ಇಸ್ರಾಯೇಲ್ಯರು ಸಮುದ್ರದ ಹತ್ರ, ಪೀಹಹೀರೋತಿನ ಸಮೀಪ, ಬಾಳ್ಚೆಫೋನಿನ ಮುಂದೆ ಡೇರೆ ಹಾಕೊಂಡಿದ್ರು. ಅವರ ಹಿಂದೆ ಈಜಿಪ್ಟಿನವರು ಬರ್ತಾ ಇದ್ರು.
10 ಫರೋಹ ಮತ್ತು ಈಜಿಪ್ಟಿನ ಸೈನಿಕರು ಅಟ್ಟಿಸ್ಕೊಂಡು ಬರ್ತಾ ಇರೋದು ಇಸ್ರಾಯೇಲ್ಯರಿಗೆ ಕಾಣಿಸ್ತು. ಇಸ್ರಾಯೇಲ್ಯರು ಭಯಬಿದ್ದು ಯೆಹೋವನ ಹತ್ರ ಸಹಾಯಕ್ಕಾಗಿ ಬೇಡ್ಕೊಂಡ್ರು.+ 11 ಅವರು ಮೋಶೆಗೆ “ನಮ್ಮನ್ನ ಈಜಿಪ್ಟಿಂದ ಇಲ್ಲಿಗೆ ಯಾಕೆ ಕರ್ಕೊಂಡು ಬಂದೆ? ಇಲ್ಲಿ ಸಾಯ್ಲಿ ಅಂತಾನಾ?+ ಈಜಿಪ್ಟಲ್ಲಿ ಸಮಾಧಿ ಮಾಡೋಕೆ ಜಾಗ ಇರಲಿಲ್ವಾ? ನೋಡು, ನಿನ್ನಿಂದ ನಮಗೆ ಎಂಥಾ ಪರಿಸ್ಥಿತಿ ಬಂತು. 12 ‘ನಮ್ಮನ್ನ ನಮ್ಮ ಪಾಡಿಗೆ ಬಿಟ್ಟುಬಿಡು. ನಾವು ಈಜಿಪ್ಟಿನವರಿಗೆ ಗುಲಾಮರಾಗೇ ಇರ್ತೀವಿ’ ಅಂತ ಅಲ್ಲಿದ್ದಾಗ್ಲೇ ನಿನಗೆ ಹೇಳಿದ್ವಲ್ಲಾ? ಇಲ್ಲಿ ಸಾಯೋಕ್ಕಿಂತ ಈಜಿಪ್ಟಿನವರಿಗೆ ಗುಲಾಮರಾಗಿ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು” ಅಂದ್ರು.+ 13 ಆಗ ಮೋಶೆ “ಹೆದರಬೇಡಿ.+ ಸುಮ್ಮನೆ ನಿಂತು ಇವತ್ತು ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅಂತ ನೋಡಿ.+ ನೀವು ಇವತ್ತು ನೋಡ್ತಿರೋ ಈ ಈಜಿಪ್ಟಿನವರನ್ನ ಇನ್ಮುಂದೆ ಯಾವತ್ತೂ ನೋಡಲ್ಲ.+ 14 ಯೆಹೋವನೇ ನಿಮಗೋಸ್ಕರ ಯುದ್ಧ ಮಾಡ್ತಾನೆ.+ ನೀವು ಸುಮ್ಮನೆ ನಿಂತು ನೋಡ್ತೀರ” ಅಂದ.
15 ಆಗ ಯೆಹೋವ ಮೋಶೆಗೆ ಹೀಗೆ ಹೇಳಿದನು: “ನನ್ನ ಹತ್ರ ಯಾಕೆ ಸಹಾಯ ಕೇಳ್ತಾ ಇದ್ದೀಯಾ? ಇಸ್ರಾಯೇಲ್ಯರಿಗೆ ಡೇರೆ ಕಿತ್ತು ಹೊರಡೋಕೆ ಹೇಳು. 16 ನೀನು ನಿನ್ನ ಕೈಲಿರೋ ಕೋಲನ್ನ ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನ ಎರಡು ಭಾಗ ಮಾಡು. ಆಗ ಎಲ್ಲಾ ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದ ಮೇಲೆ ನಡ್ಕೊಂಡು ಹೋಗ್ತಾರೆ. 17 ನಾನು ಈಜಿಪ್ಟಿನವರ ಹೃದಯ ಕಲ್ಲಿನ ತರ ಆಗೋಕೆ ಬಿಟ್ಟಿದ್ದೀನಿ. ಅದಕ್ಕೆ ಅವರು ಇಸ್ರಾಯೇಲ್ಯರ ಹಿಂದೆನೇ ಸಮುದ್ರದ ಒಳಗೆ ಹೋಗ್ತಾರೆ. ಆಗ ನಾನು ಫರೋಹನನ್ನ, ಅವನ ಎಲ್ಲ ಸೈನಿಕರನ್ನ, ಯುದ್ಧರಥಗಳನ್ನ, ಕುದುರೆ ಸವಾರರನ್ನ ಸೋಲಿಸಿ ನನ್ನ ಹೆಸರಿಗೆ ಗೌರವ ಬರೋ ತರ ಮಾಡ್ತೀನಿ.+ 18 ಫರೋಹನನ್ನ, ಅವನ ಯುದ್ಧರಥಗಳನ್ನ, ಅವನ ಕುದುರೆ ಸವಾರರನ್ನ ಸೋಲಿಸಿ ನನ್ನ ಹೆಸರಿಗೆ ಗೌರವ ಬರೋ ತರ ಮಾಡಿದಾಗ ಈಜಿಪ್ಟಿನವರಿಗೆ ನಾನೇ ಯೆಹೋವ ಅಂತ ಗೊತ್ತಾಗುತ್ತೆ.”+
19 ಆಮೇಲೆ ಇಸ್ರಾಯೇಲ್ಯರ ಮುಂದೆ ಹೋಗ್ತಿದ್ದ ಸತ್ಯದೇವರ ದೂತ+ ಆ ಜಾಗ ಬಿಟ್ಟು ಅವರ ಹಿಂದಕ್ಕೆ ಬಂದ. ಅವರ ಮುಂದೆ ಇದ್ದ ಮೋಡ ಅವರ ಹಿಂದೆ ಬಂದು ನಿಂತ್ಕೊಳ್ತು.+ 20 ಹೀಗೆ ಅದು ಈಜಿಪ್ಟಿನವರ ಮತ್ತು ಇಸ್ರಾಯೇಲ್ಯರ ಮಧ್ಯ ಬಂದು ನಿಂತ್ಕೊಳ್ತು.+ ಆ ಮೋಡ ಒಂದು ಕಡೆ ಕತ್ತಲಾಗೋ ತರ ಮಾಡಿ ಇನ್ನೊಂದು ಕಡೆ ರಾತ್ರಿಯಿಡೀ ಬೆಳಕು ಕೊಡ್ತು.+ ಅದಕ್ಕೆ ಈಜಿಪ್ಟಿನವರಿಗೆ ಆ ರಾತ್ರಿಯೆಲ್ಲ ಇಸ್ರಾಯೇಲ್ಯರ ಹತ್ರ ಬರೋಕೆ ಆಗಲಿಲ್ಲ.
21 ಮೋಶೆ ಸಮುದ್ರದ ಮೇಲೆ ಕೈಚಾಚಿದ.+ ಆಗ ಯೆಹೋವ ಆ ರಾತ್ರಿಯಿಡೀ ಪೂರ್ವದಿಂದ ಜೋರಾಗಿ ಗಾಳಿ ಬೀಸೋ ತರ ಮಾಡಿ ನೀರನ್ನ ಹಿಂದಕ್ಕೆ ನೂಕಿದನು. ಸಮುದ್ರ ಎರಡು ಭಾಗ ಆಯ್ತು.+ ಸಮುದ್ರದ ತಳ ಒಣನೆಲ+ ಆಯ್ತು. 22 ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದಲ್ಲಿ ನಡ್ಕೊಂಡು ಹೋದ್ರು.+ ಆಗ ಅವರ ಬಲಗಡೆಯಲ್ಲೂ ಎಡಗಡೆಯಲ್ಲೂ ನೀರು ಗೋಡೆ ತರ ನಿಂತಿತ್ತು.+ 23 ಈಜಿಪ್ಟಿನವರು ಅವರನ್ನ ಅಟ್ಟಿಸ್ಕೊಂಡು ಬಂದ್ರು. ಫರೋಹನ ಎಲ್ಲ ಕುದುರೆಗಳು, ಯುದ್ಧರಥಗಳು, ಕುದುರೆ ಸವಾರರು ಇಸ್ರಾಯೇಲ್ಯರ ಹಿಂದೆ ಸಮುದ್ರದ ಮಧ್ಯ ಹೋಗೋಕೆ ಶುರುಮಾಡಿದ್ರು.+ 24 ಬೆಳಗ್ಗಿನ ಜಾವ* ಯೆಹೋವ ಬೆಂಕಿ ಮತ್ತು ಮೋಡದ ಒಳಗಿಂದ+ ಈಜಿಪ್ಟಿನವರನ್ನ ನೋಡಿ ಅವರನ್ನ ಗಲಿಬಿಲಿ ಮಾಡಿದನು. 25 ಅವರ ರಥದ ಚಕ್ರಗಳನ್ನ ತೆಗೆದುಬಿಟ್ಟನು. ಅವರು ರಥಗಳನ್ನ ತುಂಬ ಕಷ್ಟಪಟ್ಟು ಓಡಿಸಿದ್ರು. ಅದೂ ಅಲ್ಲದೆ ಈಜಿಪ್ಟಿನವರು “ಇಲ್ಲಿಂದ ಓಡಿ ಹೋಗೋಣ, ಇಸ್ರಾಯೇಲ್ಯರನ್ನ ಬಿಟ್ಟು ದೂರ ಹೋಗೋಣ. ಅವರ ಪರವಾಗಿ ಯೆಹೋವನೇ ನಮ್ಮ ವಿರುದ್ಧ ಯುದ್ಧ ಮಾಡ್ತಿದ್ದಾನೆ!”+ ಅಂತ ಒಬ್ರಿಗೊಬ್ರು ಹೇಳಿದ್ರು.
26 ಆಮೇಲೆ ಯೆಹೋವ ಮೋಶೆಗೆ “ಸಮುದ್ರದ ಮೇಲೆ ಕೈಚಾಚು. ಆಗ ಸಮುದ್ರದ ನೀರು ಈಜಿಪ್ಟಿನವರ ಮೇಲೆ, ಅವರ ಯುದ್ಧರಥಗಳ, ಕುದುರೆ ಸವಾರರ ಮೇಲೆ ಬಿದ್ದು ಅವರನ್ನ ಮುಳುಗಿಸಿಬಿಡುತ್ತೆ” ಅಂದನು. 27 ಆಗ ಮೋಶೆ ಸಮುದ್ರದ ಮೇಲೆ ಕೈ ಚಾಚಿದ. ಬೆಳಗಾಗ್ತಾ ಇದ್ದ ಹಾಗೆ ಸಮುದ್ರದ ನೀರು ಮೊದಲಿನ ತರ ಆಯ್ತು. ಈಜಿಪ್ಟಿನವರು ಅಲ್ಲಿಂದ ಓಡಿಹೋಗೋಕೆ ಪ್ರಯತ್ನ ಮಾಡ್ತಿದ್ದಾಗ ಯೆಹೋವ ಅವರನ್ನ ಸಮುದ್ರದ ಮಧ್ಯ ಎಸೆದುಬಿಟ್ಟನು.+ 28 ನುಗ್ಗಿ ಬರ್ತಿದ್ದ ನೀರು ಫರೋಹನ ಯುದ್ಧರಥಗಳನ್ನ, ಕುದುರೆ ಸವಾರರನ್ನ, ಅವನ ಎಲ್ಲ ಸೈನಿಕರನ್ನ ಮುಳುಗಿಸಿಬಿಡ್ತು.+ ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಸಮುದ್ರದ ಒಳಗೆ ಬಂದಿದ್ದ ಈಜಿಪ್ಟಿನವರಲ್ಲಿ ಒಬ್ಬನೂ ಉಳಿಲಿಲ್ಲ.+
29 ಆದ್ರೆ ಇಸ್ರಾಯೇಲ್ಯರು ಒಣಗಿದ್ದ ಸಮುದ್ರತಳದಲ್ಲಿ ನಡ್ಕೊಂಡು ಹೋದ್ರು.+ ಸಮುದ್ರದ ನೀರು ಅವರ ಬಲಗಡೆ ಮತ್ತು ಎಡಗಡೆ ಗೋಡೆ ತರ ನಿಂತಿತ್ತು.+ 30 ಹೀಗೆ ಆ ದಿನ ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟಿನವರ ಕೈಗೆ ಸಿಗದ ಹಾಗೆ ಕಾಪಾಡಿದನು.+ ಸಮುದ್ರತೀರದಲ್ಲಿ ಈಜಿಪ್ಟಿನವರ ಹೆಣಗಳು ಬಿದ್ದಿರೋದನ್ನ ಇಸ್ರಾಯೇಲ್ಯರು ನೋಡಿದ್ರು. 31 ಅವರನ್ನ ಯೆಹೋವ ತನ್ನ ಮಹಾ ಶಕ್ತಿಯಿಂದ* ನಾಶಮಾಡಿದ್ದನ್ನ ಇಸ್ರಾಯೇಲ್ಯರು ಕಣ್ಣಾರೆ ನೋಡಿದ್ರು. ಹಾಗಾಗಿ ಅವರು ಯೆಹೋವನಿಗೆ ಭಯಪಡೋಕೆ, ಯೆಹೋವನಲ್ಲೂ ಆತನ ಸೇವಕನಾದ ಮೋಶೆಯಲ್ಲೂ ನಂಬಿಕೆ ಇಡೋಕೆ ಶುರುಮಾಡಿದ್ರು.+
15 ಆಗ ಮೋಶೆ ಮತ್ತು ಇಸ್ರಾಯೇಲ್ಯರು ಯೆಹೋವನನ್ನ ಹೊಗಳ್ತಾ ಈ ಹಾಡು ಹಾಡಿದ್ರು:+
“ಯೆಹೋವನನ್ನ ಹೊಗಳ್ತಾ ನಾನು ಹಾಡ್ತೀನಿ. ಯಾಕಂದ್ರೆ ಆತನು ಅಮೋಘ ಜಯ ಪಡೆದಿದ್ದಾನೆ.+
ಕುದುರೆಗಳನ್ನ, ಕುದುರೆ ಸವಾರರನ್ನ ಸಮುದ್ರಕ್ಕೆ ಬಿಸಾಕಿದ್ದಾನೆ.+
2 ನನ್ನ ಬಲ, ನನ್ನ ಶಕ್ತಿ ಯಾಹುನೇ.* ಯಾಕಂದ್ರೆ ಆತನು ನನ್ನನ್ನ ರಕ್ಷಿಸಿದ್ದಾನೆ.+
ಆತನೇ ನನ್ನ ದೇವರು. ಆತನನ್ನೇ ನಾನು ಹೊಗಳ್ತೀನಿ.+ ಆತನೇ ನನ್ನ ತಂದೆಯ ದೇವರು.+ ಆತನನ್ನೇ ನಾನು ಕೊಂಡಾಡ್ತೀನಿ.+
3 ಯೆಹೋವ ಶೂರಸೈನಿಕ.+ ಯೆಹೋವ ಅನ್ನೋದೇ ಆತನ ಹೆಸರು.+
4 ಫರೋಹನ ರಥಗಳನ್ನ, ಸೈನಿಕರನ್ನ ಸಮುದ್ರದಲ್ಲಿ ಬಿಸಾಕಿದ್ದಾನೆ,+
ಫರೋಹನ ವೀರಸೈನಿಕರು ಕೆಂಪು ಸಮುದ್ರದಲ್ಲಿ ಮುಳುಗಿ ಹೋಗಿದ್ದಾರೆ.+
5 ಉಕ್ಕೇರೋ ಸಮುದ್ರ ಅವರನ್ನ ಮುಚ್ಚಿಬಿಟ್ಟಿದೆ, ಕಲ್ಲಿನ ತರ ಮುಳುಗಿ ಸಮುದ್ರತಳ ಸೇರಿದ್ದಾರೆ.+
6 ಯೆಹೋವನೇ, ನಿನ್ನ ಬಲಗೈಯಲ್ಲಿ ತುಂಬ ಶಕ್ತಿ+ ಇದೆ.
ಯೆಹೋವನೇ, ನಿನ್ನ ಬಲಗೈ ಶತ್ರುನ ಪುಡಿಪುಡಿ ಮಾಡುತ್ತೆ.
7 ನೀನು ಎಷ್ಟು ಮಹೋನ್ನತ ಅಂದ್ರೆ ನಿನ್ನ ವಿರುದ್ಧ ಏಳೋರನ್ನ ಕೆಡವಿಹಾಕ್ತೀಯ.+
ನಿನ್ನ ಕೋಪಾಗ್ನಿ ಕಳಿಸಿ ಅವರನ್ನ ಒಣ ಹುಲ್ಲಿನ ತರ ಭಸ್ಮಮಾಡ್ತೀಯ.
8 ನಿನ್ನ ಉಸಿರಿಂದ ಸಮುದ್ರದ ನೀರು ಒಂದಾಯ್ತು.
ನೀರು ಗೋಡೆ ತರ ನಿಂತು ಹರಿಯೋದೇ ನಿಂತೊಯ್ತು.
ಉಕ್ಕೇರೋ ನೀರು ಸಮುದ್ರದ ಮಧ್ಯ ಹೆಪ್ಪುಗಟ್ತು.
9 ‘ನಾನು ಅಟ್ಟಿಸ್ಕೊಂಡು ಹೋಗಿ ಹಿಡಿತೀನಿ!
ತೃಪ್ತಿಯಾಗೋ ತನಕ ಕೊಳ್ಳೆನ ಹಂಚಿಕೊಳ್ತೀನಿ!
ಕತ್ತಿನ ಹೊರಗೆ ತೆಗಿತೀನಿ! ನನ್ನ ಕೈಯಿಂದ ಅವರನ್ನ ಸೋಲಿಸ್ತೀನಿ!’+ ಅಂದ ಶತ್ರು.
10 ನಿನ್ನ ಉಸಿರಿಂದ ಸಮುದ್ರ ಅವರನ್ನ ಮುಚ್ಚಿಬಿಡ್ತು,+
ಅವರು ಸಮುದ್ರದ ನೀರಲ್ಲಿ ಭಾರವಾದ ಸೀಸದ ತರ ಮುಳುಗಿಹೋದ್ರು.
11 ಯೆಹೋವನೇ, ದೇವರುಗಳಲ್ಲಿ ನಿನಗೆ ಯಾರು ಸಮ?+
ನಿನ್ನ ಹಾಗೆ ಯಾರು ಅತೀ ಪವಿತ್ರ?+
ಭಯಭಕ್ತಿಗೆ, ಹಾಡಿಹೊಗಳೋಕೆ ನೀನೇ ಯೋಗ್ಯ. ಅದ್ಭುತ ಮಾಡೋನು ನೀನೇ.+
12 ನೀನು ನಿನ್ನ ಬಲಗೈಯನ್ನ ಚಾಚಿದೆ. ಆಗ ಭೂಮಿ ಬಾಯಿ ತೆಗೆದು ಅವರನ್ನ ನುಂಗಿಬಿಡ್ತು.+
13 ನೀನು ಬಿಡಿಸಿದ ನಿನ್ನ ಜನರಿಗೆ ಶಾಶ್ವತ ಪ್ರೀತಿ ತೋರಿಸಿ ಅವರನ್ನ ಕರ್ಕೊಂಡು ಬಂದೆ.+
ನಿನ್ನ ಬಲದಿಂದ ಅವರನ್ನ ನಿನ್ನ ಪವಿತ್ರ ವಾಸಸ್ಥಳಕ್ಕೆ ನಡಿಸ್ತಿಯ.
14 ದೇಶದ ಜನರು ಇದನ್ನೆಲ್ಲ ಕೇಳಿ+ ನಡುಗ್ತಾರೆ,
ಕಡು ಸಂಕಟ ಫಿಲಿಷ್ಟಿಯರನ್ನ ಆಕ್ರಮಿಸುತ್ತೆ.
ಕಾನಾನಿನ ಎಲ್ಲ ಜನರು ಎದೆಗುಂದಿ ಹೋಗ್ತಾರೆ.+
16 ಭಯ-ಭೀತಿ ಅವರನ್ನ ತುಂಬಿಕೊಳ್ಳುತ್ತೆ.+
ಯೆಹೋವನೇ, ಅವರ ಪ್ರದೇಶಗಳನ್ನ ನಿನ್ನ ಜನರು ದಾಟಿ ಹೋಗೋ ತನಕ,
ನೀನು ಸೃಷ್ಟಿಸಿದ+ ಜನರು ದಾಟಿ ಹೋಗೋ ತನಕ+
ಅವರು ನಿನ್ನ ತೋಳುಬಲ ನೋಡಿ ಕಲ್ಲಿನ ತರ ಕದಲದೆ ಇರ್ತಾರೆ.
17 ಯೆಹೋವನೇ, ನಿನ್ನ ಜನರನ್ನ ಕರ್ಕೊಂಡು ಬಂದು ನಿನ್ನ ಸೊತ್ತಾಗಿರೋ ಬೆಟ್ಟದಲ್ಲಿ,+
ನೀನು ಇರೋಕೆ ಸಿದ್ಧಮಾಡಿರೋ ಜಾಗದಲ್ಲಿ,
ಯೆಹೋವನೇ, ನೀನು ನಿನ್ನ ಕೈಯಿಂದ ಕಟ್ಟಿರೋ ಪವಿತ್ರ ಸ್ಥಳದಲ್ಲಿ ಅವರನ್ನ ಇರಿಸ್ತೀಯ.
18 ಯೆಹೋವ ಸದಾಕಾಲ ರಾಜನಾಗಿ ಆಳ್ತಾನೆ.+
19 ಫರೋಹನ ಕುದುರೆಗಳು, ಯುದ್ಧರಥಗಳು, ಕುದುರೆ ಸವಾರರು ಸಮುದ್ರದೊಳಗೆ ಹೋದಾಗ,+
ಯೆಹೋವ ಸಮುದ್ರದ ನೀರನ್ನ ಅವರ ಮೇಲೆ ಬೀಳಿಸಿ ಅವರನ್ನ ಮುಳುಗಿಸಿಬಿಟ್ಟನು.+
ಆದ್ರೆ ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದಲ್ಲಿ ನಡ್ಕೊಂಡು ಬಂದ್ರು.”+
20 ಆರೋನನ ಅಕ್ಕ ಮಿರ್ಯಾಮ ಪ್ರವಾದಿನಿ ಆಗಿದ್ದಳು. ಅವಳು ದಮ್ಮಡಿ ತಗೊಂಡು ಮುಂದೆ ಬಂದಳು. ಸ್ತ್ರೀಯರೆಲ್ಲ ದಮ್ಮಡಿ ಬಡಿತಾ ಕುಣಿದಾಡ್ತಾ ಅವಳ ಹಿಂದೆ ಹೋದ್ರು. 21 ಗಂಡಸರ ಹಾಡಿಗೆ ಪ್ರತಿಯಾಗಿ ಅವಳು ಹೀಗೆ ಹಾಡಿದಳು:
“ಯೆಹೋವನನ್ನ ಹಾಡಿ ಹೊಗಳಿ. ಯಾಕಂದ್ರೆ ಆತನು ಅಮೋಘ ಜಯ ಪಡೆದಿದ್ದಾನೆ.+
ಕುದುರೆಗಳನ್ನ, ಕುದುರೆ ಸವಾರರನ್ನ ಸಮುದ್ರಕ್ಕೆ ಬಿಸಾಕಿದ್ದಾನೆ.”+
22 ಆಮೇಲೆ ಮೋಶೆ ಇಸ್ರಾಯೇಲ್ಯರನ್ನ ಕೆಂಪು ಸಮುದ್ರದಿಂದ ಕರ್ಕೊಂಡು ಶೂರಿನ ಕಾಡಿಗೆ ಹೋದ. ಅವರು ಆ ಕಾಡಿನಲ್ಲಿ ಮೂರು ದಿನ ಪ್ರಯಾಣ ಮಾಡಿದ್ರು. ಅಲ್ಲಿ ಎಲ್ಲೂ ಅವರಿಗೆ ನೀರು ಸಿಗಲಿಲ್ಲ. 23 ಆಮೇಲೆ ಅವರು ಮಾರಾ*+ ಅನ್ನೋ ಸ್ಥಳಕ್ಕೆ ಬಂದ್ರು. ಅಲ್ಲಿ ನೀರು ಸಿಕ್ತು, ಆದ್ರೆ ಅದು ಕಹಿ ಆಗಿತ್ತು. ಅವರಿಗೆ ಕುಡಿಯೋಕೆ ಆಗಲಿಲ್ಲ. ಹಾಗಾಗಿ ಅವರು ಆ ಸ್ಥಳಕ್ಕೆ ಮಾರಾ ಅನ್ನೋ ಹೆಸರು ಇಟ್ರು. 24 ಜನ ಮೋಶೆಗೆ “ನಾವೀಗ ಏನು ಕುಡಿಯೋದು?” ಅಂತ ಗೊಣಗೋಕೆ ಶುರುಮಾಡಿದ್ರು.+ 25 ಆಗ ಮೋಶೆ ಯೆಹೋವನಿಗೆ ಪ್ರಾರ್ಥಿಸಿದ.+ ಯೆಹೋವ ಅವನಿಗೆ ಒಂದು ಗಿಡ ತೋರಿಸಿದನು. ಅವನು ಆ ಗಿಡನ ನೀರಲ್ಲಿ ಎಸೆದಾಗ ಆ ನೀರು ಸಿಹಿ ಆಯ್ತು.
ಹೀಗೆ, ಜನ್ರು ತನ್ನ ಮಾತು ಕೇಳ್ತಾರಾ ಇಲ್ವಾ ಅಂತ ತಿಳ್ಕೊಳ್ಳೋಕೆ ದೇವರು ಅವರನ್ನ ಪರೀಕ್ಷೆ ಮಾಡಿದನು. ಆತನು ಈ ಘಟನೆನ ಬಳಸಿ ತಾನು ಅವರಿಂದ ಏನು ಬಯಸ್ತೀನಿ ಅಂತ ಅವರು ತಿಳ್ಕೊಳ್ಳೋ ತರ ಮಾಡಿದನು.+ 26 ದೇವರು ಹೀಗೆ ಹೇಳಿದನು: “ನಿಮ್ಮ ದೇವರಾಗಿರೋ ಯೆಹೋವನಾದ ನನ್ನ ಮಾತನ್ನ ನೀವು ಕೇಳಿ ಅದನ್ನ ತಪ್ಪದೆ ಪಾಲಿಸಿ. ನನ್ನ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡಿ. ನನ್ನ ಆಜ್ಞೆಗಳನ್ನ ಕೇಳಿ ನನ್ನ ಎಲ್ಲ ನಿಯಮಗಳ ಪ್ರಕಾರ ನಡಿರಿ.+ ಹಾಗೆ ಮಾಡಿದ್ರೆ ನಾನು ಈಜಿಪ್ಟಿನವರ ಮೇಲೆ ತಂದ ಯಾವ ಕಾಯಿಲೆಯನ್ನೂ ನಿಮ್ಮ ಮೇಲೆ ತರಲ್ಲ.+ ಯೆಹೋವನಾದ ನಾನು ನಿಮ್ಮನ್ನ ಆರೋಗ್ಯವಾಗಿ ಇಡ್ತೀನಿ.”+
27 ಆಮೇಲೆ ಇಸ್ರಾಯೇಲ್ಯರು ಏಲೀಮಿಗೆ ಬಂದ್ರು. ಅಲ್ಲಿ 12 ನೀರಿನ ತೊರೆ, 70 ಖರ್ಜೂರ ಮರ ಇತ್ತು. ಹಾಗಾಗಿ ಅವರು ಆ ನೀರಿನ ತೊರೆ ಹತ್ರ ಡೇರೆ ಹಾಕೊಂಡ್ರು.
16 ಎಲ್ಲಾ ಇಸ್ರಾಯೇಲ್ಯರು ಏಲೀಮಿಂದ ಪ್ರಯಾಣ ಮಾಡ್ತಾ ಏಲೀಮ್ ಮತ್ತು ಸಿನಾಯಿಗೆ ಮಧ್ಯ ಇರೋ ಸೀನ್+ ಅನ್ನೋ ಕಾಡಿಗೆ ಬಂದ್ರು. ಅವರು ಈಜಿಪ್ಟನ್ನ ಬಿಟ್ಟುಬಂದ ಮೇಲೆ ಎರಡನೇ ತಿಂಗಳಿನ 15ನೇ ದಿನ ಅಲ್ಲಿಗೆ ಬಂದ್ರು.
2 ಆಮೇಲೆ ಆ ಕಾಡಲ್ಲಿ ಇಸ್ರಾಯೇಲ್ಯರೆಲ್ಲ ಮೋಶೆ ಆರೋನರ ವಿರುದ್ಧ ಗೊಣಗೋಕೆ ಶುರುಮಾಡಿದ್ರು.+ 3 ಇಸ್ರಾಯೇಲ್ಯರು ಅವರಿಗೆ “ಈಜಿಪ್ಟ್ ದೇಶದಲ್ಲಿ ನಮಗೆ ಹೊಟ್ಟೆ ತುಂಬ ಊಟ ಸಿಗ್ತಿತ್ತು, ಬೇಕಾದಷ್ಟು ಮಾಂಸ* ತಿಂತಿದ್ವಿ.+ ಅಲ್ಲಿದ್ದಾಗ್ಲೇ ನಾವು ಯೆಹೋವನ ಕೈಯಿಂದ ಸತ್ತಿದ್ರೆ ಎಷ್ಟೋ ಚೆನ್ನಾಗಿತ್ತು. ನಮ್ಮನ್ನೆಲ್ಲ ಹಸಿವೆಯಿಂದ ಸಾಯಿಸಬೇಕು ಅಂತಾನೇ ನೀವು ಇಲ್ಲಿಗೆ ಕರ್ಕೊಂಡು ಬಂದಿದ್ದೀರ”+ ಅಂತ ಮತ್ತೆಮತ್ತೆ ಹೇಳ್ತಿದ್ರು.
4 ಆಗ ಯೆಹೋವ ಮೋಶೆಗೆ “ನಾನು ನಿಮಗಾಗಿ ಆಕಾಶದಿಂದ ಆಹಾರ ಸುರಿಸ್ತೀನಿ.+ ನೀವೆಲ್ಲ ಪ್ರತಿದಿನ ಹೊರಗೆ ಹೋಗಿ ಆ ದಿನಕ್ಕೆ ಬೇಕಾದಷ್ಟು ಆಹಾರ ಕೂಡಿಸಿಕೊಳ್ಳಬೇಕು.+ ಹೀಗೆ ಅವರು ನನ್ನ ಮಾತು ಕೇಳ್ತಾರೋ ಇಲ್ವೋ ಅಂತ ನಾನು ಅವರನ್ನ ಪರೀಕ್ಷೆ ಮಾಡಿ ತಿಳ್ಕೊಳ್ತೀನಿ.+ 5 ಆದ್ರೆ ಆರನೇ ದಿನ+ ಅವರು ಬೇರೆ ದಿನಕ್ಕಿಂತ ಎರಡು ಪಟ್ಟು ಜಾಸ್ತಿ ಆಹಾರ ಕೂಡಿಸಬೇಕು. ಆ ದಿನಾನೇ ಅಡುಗೆ ಮಾಡಿಟ್ಕೊಬೇಕು”+ ಅಂದನು.
6 ಹಾಗಾಗಿ ಮೋಶೆ ಆರೋನ ಎಲ್ಲ ಇಸ್ರಾಯೇಲ್ಯರಿಗೆ “ನಿಮ್ಮನ್ನ ಈಜಿಪ್ಟ್ ದೇಶದಿಂದ ಬಿಡಿಸ್ಕೊಂಡು ಬಂದಿದ್ದು ಯೆಹೋವನೇ ಅಂತ ಸಂಜೆ ನಿಮಗೆ ಖಂಡಿತ ಗೊತ್ತಾಗುತ್ತೆ.+ 7 ನೀವು ಯಾರ ವಿರುದ್ಧ ಗೊಣಗ್ತಾ ಇದ್ದೀರ ಗೊತ್ತಾ? ಯೆಹೋವನ ವಿರುದ್ಧ. ಆತನಿಗೆ ನಿಮ್ಮ ಮಾತೆಲ್ಲ ಕೇಳಿದೆ. ಹಾಗಾಗಿ ಬೆಳಿಗ್ಗೆ ನೀವು ಯೆಹೋವನ ಶಕ್ತಿನ ನೋಡ್ತೀರ” ಅಂದ್ರು. 8 ಆಮೇಲೆ ಮೋಶೆ ಅವರಿಗೆ “ಸಂಜೆ ಯೆಹೋವ ನಿಮಗೆ ತಿನ್ನಕ್ಕೆ ಮಾಂಸ ಕೊಡ್ತಾನೆ, ಬೆಳಿಗ್ಗೆ ತೃಪ್ತಿಯಾಗುವಷ್ಟು ರೊಟ್ಟಿ ಕೊಡ್ತಾನೆ. ಆಗ ಯೆಹೋವನ ವಿರುದ್ಧ ನೀವು ಗೊಣಗಿದ ಮಾತುಗಳನ್ನ ಆತನು ಕೇಳಿಸ್ಕೊಂಡಿದ್ದಾನೆ ಅಂತ ನಿಮಗೆ ಗೊತ್ತಾಗುತ್ತೆ. ಯಾರ ವಿರುದ್ಧ ನೀವು ಗೊಣಗ್ತಾ ಇದ್ದೀರ ಗೊತ್ತಾ? ನಮ್ಮ ವಿರುದ್ಧ ಅಲ್ಲ, ಯೆಹೋವನ ವಿರುದ್ಧ”+ ಅಂದ.
9 ಆಮೇಲೆ ಮೋಶೆ ಆರೋನನಿಗೆ “ನೀನು ಇಸ್ರಾಯೇಲ್ಯರ ಹತ್ರ ಹೋಗಿ ಅವರು ಗೊಣಗೋದನ್ನ ಯೆಹೋವ ಕೇಳಿಸ್ಕೊಂಡಿದ್ದಾನೆ. ಹಾಗಾಗಿ ಅವರೆಲ್ಲ ಆತನ ಮುಂದೆ ಸೇರಿ ಬರಬೇಕು ಅಂತ ಹೇಳು”+ ಅಂದ. 10 ಆರೋನ ಹೋಗಿ ಅದನ್ನ ಎಲ್ಲ ಇಸ್ರಾಯೇಲ್ಯರಿಗೆ ಹೇಳಿದ. ತಕ್ಷಣ ಅವರೆಲ್ಲ ಹಿಂದೆ ತಿರುಗಿ ಕಾಡಿನ ಕಡೆ ನೋಡಿದಾಗ ಮೋಡದಲ್ಲಿ ಯೆಹೋವನ ಶಕ್ತಿ ಕಾಣಿಸ್ತು.+
11 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ 12 “ಇಸ್ರಾಯೇಲ್ಯರು ಗೊಣಗಿದ್ದನ್ನ ನಾನು ಕೇಳಿಸ್ಕೊಂಡಿದ್ದೀನಿ.+ ಅದಕ್ಕೆ ನೀನು ಈ ಮಾತುಗಳನ್ನ ಅವರಿಗೆ ಹೇಳು: ಸೂರ್ಯ ಮುಳುಗಿದ ಮೇಲೆ* ನೀವು ಮಾಂಸ ತಿಂತೀರ, ಬೆಳಿಗ್ಗೆ ಹೊಟ್ಟೆ ತುಂಬ ರೊಟ್ಟಿ ತಿಂತೀರ.+ ಆಗ ನಾನೇ ನಿಮ್ಮ ದೇವರಾದ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ”+ ಅಂದನು.
13 ಆ ಸಂಜೆ ಲಾವಕ್ಕಿಗಳು ಹಾರಿ ಬಂದು ಪಾಳೆಯನ ಮುಚ್ಚಿಕೊಂಡ್ವು.+ ಬೆಳಿಗ್ಗೆ ಪಾಳೆಯದ ಸುತ್ತಮುತ್ತ ಇಬ್ಬನಿಯ ಪದರ ಇತ್ತು. 14 ಆ ಇಬ್ಬನಿಯ ಪದರ ಆವಿ ಆದಾಗ ಕಾಡಿನ ನೆಲದ ಮೇಲೆಲ್ಲ ಚಿಕ್ಕಚಿಕ್ಕ ಕಾಳುಗಳು ಹಿಮದ ತರ ಬಿದ್ದಿದ್ವು.+ 15 ಇಸ್ರಾಯೇಲ್ಯರು ಅದನ್ನ ನೋಡಿ ಅದು ಏನಂತ ಗೊತ್ತಾಗದೆ ಒಬ್ರಿಗೊಬ್ರು “ಇದೇನು?” ಅಂತ ಕೇಳಿದ್ರು. ಅದಕ್ಕೆ ಮೋಶೆ “ಇದು ಯೆಹೋವ ನಿಮಗೋಸ್ಕರ ಕೊಟ್ಟ ಆಹಾರ.+ 16 ಯೆಹೋವ ಈ ಆಜ್ಞೆ ಕೊಟ್ಟಿದ್ದಾನೆ: ‘ಇದನ್ನ ಪ್ರತಿಯೊಬ್ರು ತಮಗೆ ತಿನ್ನೋಕೆ ಆಗುವಷ್ಟು ಕೂಡಿಸ್ಕೊಬೇಕು. ಡೇರೆಯಲ್ಲಿ ಎಷ್ಟು ಜನ ಇದ್ದಾರೋ ಅಷ್ಟು ಜನ್ರಿಗೆ ಒಬ್ಬೊಬ್ರಿಗೆ ಒಂದೊಂದು ಓಮೆರ್ ಅಳತೆಯಷ್ಟು*+ ಆಹಾರ ಕೂಡಿಸ್ಕೊಬೇಕು’ ” ಅಂದ. 17 ಇಸ್ರಾಯೇಲ್ಯರು ಹಾಗೇ ಮಾಡಿದ್ರು. ಸ್ವಲ್ಪ ಜನ ಜಾಸ್ತಿ ಕೂಡಿಸ್ಕೊಂಡ್ರು, ಇನ್ನು ಸ್ವಲ್ಪ ಜನ ಕಮ್ಮಿ ಕೂಡಿಸ್ಕೊಂಡ್ರು. 18 ಅವರು ಕೂಡಿಸಿದ್ದನ್ನ ಓಮೆರಿಂದ ಅಳತೆಮಾಡಿ ನೋಡಿದಾಗ ಜಾಸ್ತಿ ಕೂಡಿಸಿಕೊಂಡವನಿಗೆ ಜಾಸ್ತಿ ಏನೂ ಉಳಿಲಿಲ್ಲ, ಕಮ್ಮಿ ಕೂಡಿಸಿಕೊಂಡವನಿಗೆ ಏನೂ ಕಮ್ಮಿ ಆಗಲಿಲ್ಲ.+ ಪ್ರತಿಯೊಬ್ಬ ತನಗೆ ತಿನ್ನೋಕೆ ಆಗುವಷ್ಟೇ ಕೂಡಿಸ್ಕೊಂಡಿದ್ದ.
19 ಆಮೇಲೆ ಮೋಶೆ “ಇದ್ರಲ್ಲಿ ಸ್ವಲ್ಪಾನೂ ನಾಳೆ ಬೆಳಿಗ್ಗೆ ತನಕ ಯಾರೂ ಇಟ್ಕೊಬಾರದು”+ ಅಂದ. 20 ಆದ್ರೆ ಸ್ವಲ್ಪ ಜನ ಮೋಶೆ ಮಾತನ್ನ ಕೇಳಲಿಲ್ಲ, ಮಾರನೇ ದಿನ ಬೆಳಿಗ್ಗೆಗೆ ಅಂತ ಸ್ವಲ್ಪ ಇಟ್ಕೊಂಡ್ರು. ಬೆಳಿಗ್ಗೆ ಅದು ಹುಳ ಹಿಡಿದು ವಾಸನೆ ಬರ್ತಿತ್ತು. ಅವರ ಮೇಲೆ ಮೋಶೆಗೆ ತುಂಬ ಕೋಪ ಬಂತು. 21 ಹೀಗೆ ಪ್ರತಿದಿನ ಬೆಳಿಗ್ಗೆ ಅವರು ಆಹಾರ ಕೂಡಿಸ್ಕೊಳ್ತಿದ್ರು. ಪ್ರತಿಯೊಬ್ಬನು ತನಗೆ ತಿನ್ನೋಕೆ ಆಗುವಷ್ಟೇ ಕೂಡಿಸಿಕೊಳ್ತಿದ್ದ. ಬಿಸಿಲು ಜಾಸ್ತಿ ಆದಾಗ ಅದು ಕರಗಿಹೋಗ್ತಿತ್ತು.
22 ಆರನೇ ದಿನ ಅವರು ಎರಡು ಪಟ್ಟು ಆಹಾರ ಅಂದ್ರೆ ಒಬ್ಬೊಬ್ಬನಿಗೆ ಎರಡೆರಡು ಓಮೆರ್ ಆಹಾರನ ಕೂಡಿಸ್ಕೊಂಡ್ರು.+ ಆಗ ಇಸ್ರಾಯೇಲ್ಯರ ಎಲ್ಲ ಪ್ರಧಾನರು ಬಂದು ಆ ವಿಷ್ಯನ ಮೋಶೆಗೆ ತಿಳಿಸಿದ್ರು. 23 ಅದಕ್ಕೆ ಅವನು “ಯೆಹೋವ ಹೇಳೋದು ಏನಂದ್ರೆ: ನಾಳೆ ಎಲ್ರೂ ಪೂರ್ತಿ ವಿಶ್ರಾಂತಿ ಪಡ್ಕೊಳ್ಳಬೇಕು.* ಯಾಕಂದ್ರೆ ನಾಳೆ ಪವಿತ್ರ ಸಬ್ಬತ್* ದಿನ.+ ಯೆಹೋವನಿಗೆ ಗೌರವ ಕೊಡೋಕೆ ನಾವು ಅದನ್ನ ಆಚರಿಸ್ತೀವಿ. ಆಹಾರ ಸಿದ್ಧಮಾಡಿ ಇಟ್ಕೊಳ್ಳಿ. ಯಾವುದನ್ನ ಸುಡಬೇಕು ಅಂತಿದ್ದಿರೋ ಅದನ್ನ ಸುಟ್ಟು ಇಟ್ಕೊಳ್ಳಿ. ಯಾವುದನ್ನ ಬೇಯಿಸಬೇಕು ಅಂತಿದ್ದಿರೋ ಅದನ್ನ ಬೇಯಿಸಿ ಇಟ್ಕೊಳ್ಳಿ.+ ಇವತ್ತು ಉಳಿದ ಆಹಾರನ ನಾಳೆಗೆ ಇಟ್ಕೊಳ್ಳಿ” ಅಂದ. 24 ಅದಕ್ಕೆ ಅವರು ಮೋಶೆ ಆಜ್ಞೆ ಕೊಟ್ಟ ಹಾಗೆ ಅದನ್ನ ನಾಳೆ ಬೆಳಿಗ್ಗೆಗೆ ಇಟ್ಕೊಂಡ್ರು. ಬೆಳಿಗ್ಗೆ ಅದು ವಾಸನೆ ಬರಲೂ ಇಲ್ಲ, ಹುಳ ಹಿಡಿಲೂ ಇಲ್ಲ. 25 ಮೋಶೆ ಅವರಿಗೆ “ಇವತ್ತು ಅದನ್ನ ತಿನ್ನಿ. ಯಾಕಂದ್ರೆ ಈ ದಿನ ಯೆಹೋವನಿಗೆ ಗೌರವ ಕೊಡೋಕೆ ಆಚರಿಸೋ ಸಬ್ಬತ್ ದಿನ. ಇವತ್ತು ನೆಲದ ಮೇಲೆ ಆಹಾರ ಬೀಳಲ್ಲ. 26 ನೀವು ಆರು ದಿನ ಅದನ್ನ ಕೂಡಿಸ್ಕೊಳ್ತೀರ. ಆದ್ರೆ ಏಳನೇ ದಿನ ಅಂದ್ರೆ ಸಬ್ಬತ್+ ದಿನ ನಿಮಗೆ ಅದು ಸಿಗಲ್ಲ” ಅಂದ. 27 ಹಾಗಿದ್ರೂ ಏಳನೇ ದಿನ ಸ್ವಲ್ಪ ಜನ ಆಹಾರ ಕೂಡಿಸ್ಕೊಳ್ಳೋಕೆ ಹೊರಗೆ ಹೋದ್ರು. ಆದ್ರೆ ಅವರಿಗೆ ಏನೂ ಸಿಗಲಿಲ್ಲ.
28 ಹಾಗಾಗಿ ಯೆಹೋವ ಮೋಶೆಗೆ “ಇನ್ನೂ ಎಷ್ಟು ದಿನ ಅಂತ ನೀವು ನನ್ನ ಆಜ್ಞೆಗಳನ್ನ, ನಿಯಮಗಳನ್ನ ಪಾಲಿಸದೆ ಇರ್ತಿರ?+ 29 ಯೆಹೋವ ಸಬ್ಬತ್ತನ್ನ ನಿಮಗಾಗಿ ಏರ್ಪಾಡು ಮಾಡಿದ್ದಾನೆ ಅನ್ನೋದನ್ನ ಮರಿಬೇಡಿ.+ ಹಾಗಾಗಿ ಆರನೇ ದಿನ ಆತನು ನಿಮಗೆ ಎರಡು ದಿನಕ್ಕೆ ಬೇಕಾಗುವಷ್ಟು ಆಹಾರ ಕೊಡ್ತಿದ್ದಾನೆ. ಏಳನೇ ದಿನ ಹೊರಗೆ ಎಲ್ಲೂ ಹೋಗಬಾರದು, ಎಲ್ರೂ ಅವರಿರೋ ಜಾಗದಲ್ಲೇ ಇರ್ಬೇಕು” ಅಂದನು. 30 ಹಾಗಾಗಿ ಜನ ಏಳನೇ ದಿನ ಸಬ್ಬತ್ ಆಚರಿಸಿದ್ರು.*+
31 ಇಸ್ರಾಯೇಲ್ಯರು ಆ ಆಹಾರಕ್ಕೆ “ಮನ್ನ”* ಅಂತ ಹೆಸರಿಟ್ರು. ಅದು ಬೆಳ್ಳಗಿತ್ತು, ಕೊತ್ತಂಬರಿ ಬೀಜದ ತರ ಇತ್ತು. ಅದ್ರ ರುಚಿ ಜೇನುತುಪ್ಪ ಹಾಕಿದ ತೆಳ್ಳಗಿನ ರೊಟ್ಟಿ ತರ ಇತ್ತು.+ 32 ಆಮೇಲೆ ಮೋಶೆ “ಯೆಹೋವನ ಆಜ್ಞೆ ಏನಂದ್ರೆ ‘ನೀವು ಒಂದು ಓಮೆರ್ ಅಳತೆಯಷ್ಟು ಮನ್ನ ತೆಗೆದಿಡಿ. ನಾನು ಈಜಿಪ್ಟ್ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬರುವಾಗ ಕಾಡಲ್ಲಿ ತಿನ್ನೋಕೆ ನಿಮಗೆ ಕೊಟ್ಟ ಈ ಆಹಾರನ ನಿಮ್ಮ ಮುಂದಿನ ಪೀಳಿಗೆಯವರು ನೋಡ್ಲಿ’”+ ಅಂದನು. 33 ಹಾಗಾಗಿ ಮೋಶೆ ಆರೋನನಿಗೆ “ನೀನು ಒಂದು ಪಾತ್ರೆ ತಗೊಂಡು ಅದ್ರಲ್ಲಿ ಒಂದು ಓಮೆರ್ ಅಳತೆಯಷ್ಟು ಮನ್ನ ಹಾಕಿ ಯೆಹೋವನ ಮುಂದೆ ಇಡು. ಅದನ್ನ ಮುಂದಿನ ತಲೆಮಾರುಗಳ ತನಕ ಇಡಬೇಕು”+ ಅಂದ. 34 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಆ ಆಹಾರನ ಸಂರಕ್ಷಿಸಿ ಇಡೋಕೆ ಆರೋನ ಅದನ್ನ ಸಾಕ್ಷಿ ಮಂಜೂಷದ*+ ಮುಂದೆ ಇಟ್ಟ. 35 ಇಸ್ರಾಯೇಲ್ಯರು 40 ವರ್ಷ ಅಂದ್ರೆ ಬೇರೆ ಜನ್ರಿದ್ದ ದೇಶಕ್ಕೆ+ ಬರೋ ತನಕ ಮನ್ನಾನೇ ತಿಂದ್ರು.+ ಕಾನಾನ್ ದೇಶದ ಗಡಿ ತಲಪೋ ತನಕ ಮನ್ನಾನೇ ಅವರಿಗೆ ಆಹಾರ ಆಗಿತ್ತು.+ 36 ಒಂದು ಓಮೆರ್ ಅಂದ್ರೆ ಏಫಾ ಅಳತೆಯ* ಹತ್ತನೇ ಒಂದು ಭಾಗ.
17 ಇಸ್ರಾಯೇಲ್ಯರೆಲ್ಲ ಸೀನ್+ ಕಾಡಿಂದ ಮುಂದಕ್ಕೆ ಬಂದ್ರು. ಯೆಹೋವ ಅವರಿಗೆ ಎಲ್ಲೆಲ್ಲಿ ಡೇರೆ ಹಾಕೋಕೆ ಹೇಳಿದ್ನೋ+ ಅಲ್ಲೇ ಡೇರೆ ಹಾಕ್ತಾ ಮುಂದೆಮುಂದೆ ಪ್ರಯಾಣಿಸ್ತಾ ಹೋದ್ರು. ಕೊನೆಗೆ ರೆಫೀದೀಮಿಗೆ+ ಬಂದು ಡೇರೆ ಹಾಕೊಂಡ್ರು. ಆದ್ರೆ ಅಲ್ಲಿ ಅವರಿಗೆ ಕುಡಿಯೋಕೆ ನೀರು ಇರಲಿಲ್ಲ.
2 ಜನ್ರು ಮೋಶೆಗೆ “ನಮಗೆ ಕುಡಿಯೋಕೆ ನೀರು ಕೊಡು” ಅಂತ ಅವನ ಜೊತೆ ಜಗಳ ಮಾಡೋಕೆ ಶುರುಮಾಡಿದ್ರು.+ ಆಗ ಮೋಶೆ “ನೀವ್ಯಾಕೆ ನನ್ನ ಜೊತೆ ಜಗಳ ಮಾಡ್ತೀರ? ಯೆಹೋವನನ್ನ ಮತ್ತೆಮತ್ತೆ ಯಾಕೆ ಪರೀಕ್ಷಿಸ್ತೀರ?”+ ಅಂದ. 3 ಜನ್ರಿಗೆ ತುಂಬ ಬಾಯಾರಿಕೆ ಆಗಿತ್ತು. ಹಾಗಾಗಿ ಅವರು ಮೋಶೆ ವಿರುದ್ಧ ಗೊಣಗ್ತಾನೇ ಇದ್ರು.+ “ನಮ್ಮನ್ನ ಈಜಿಪ್ಟಿಂದ ಯಾಕೆ ಕರ್ಕೊಂಡು ಬಂದೆ? ಬಾಯಾರಿಕೆಯಿಂದ ಸಾಯಿಸಕ್ಕಾ? ನಾವು, ನಮ್ಮ ಮಕ್ಕಳು, ಪ್ರಾಣಿಗಳು ನೀರಿಲ್ಲದೆ ಸಾಯ್ತೀವಿ” ಅಂದ್ರು. 4 ಕೊನೆಗೆ ಮೋಶೆ ಯೆಹೋವನಿಗೆ ಪ್ರಾರ್ಥಿಸಿ “ನಾನೇನ್ ಮಾಡ್ಲಿ? ಇನ್ನು ಸ್ವಲ್ಪ ಹೊತ್ತು ಬಿಟ್ರೆ ಇವರು ನನ್ನನ್ನ ಕಲ್ಲು ಹೊಡೆದು ಸಾಯಿಸ್ತಾರೆ!” ಅಂದ.
5 ಅದಕ್ಕೆ ಯೆಹೋವ ಮೋಶೆಗೆ “ನೀನು ನೈಲ್ ನದಿಯನ್ನ+ ಹೊಡೆದ ಕೋಲನ್ನ ಹಿಡ್ಕೊ. ಇಸ್ರಾಯೇಲ್ಯರ ಹಿರಿಯರಲ್ಲಿ ಕೆಲವರನ್ನ ಆರಿಸಿ ಅವರನ್ನ ಕರ್ಕೊಂಡು ಜನ್ರ ಮುಂದೆ ನಡಿತಾ 6 ಹೋರೇಬ್‌ಗೆ ಹೋಗು. ಅಲ್ಲಿ ನಾನು ನಿನ್ನ ಮುಂದೆ ಬಂಡೆ ಮೇಲೆ ನಿಂತಿರ್ತೀನಿ. ನೀನು ಆ ಬಂಡೆನ ಕೋಲಿಂದ ಹೊಡಿ. ಆಗ ಆ ಬಂಡೆಯಿಂದ ನೀರು ಬರುತ್ತೆ. ಜನ್ರು ಅದನ್ನ ಕುಡಿತಾರೆ” ಅಂದನು.+ ಮೋಶೆ ಇಸ್ರಾಯೇಲ್ಯರ ಹಿರಿಯರ ಕಣ್ಮುಂದೆ ಹಾಗೇ ಮಾಡಿದ. 7 ಇಸ್ರಾಯೇಲ್ಯರು ಮೋಶೆ ಜೊತೆ ಜಗಳ ಮಾಡಿದ್ರಿಂದ, “ಯೆಹೋವ ನಮ್ಮ ಜೊತೆ ಇದ್ದಾನೋ ಇಲ್ವೋ?” ಅಂತ ಹೇಳಿ ಯೆಹೋವನನ್ನ ಪರೀಕ್ಷಿಸಿದ್ರಿಂದ+ ಮೋಶೆ ಆ ಜಾಗಕ್ಕೆ ಮಸ್ಸ*+ ಮತ್ತು ಮೆರೀಬಾ*+ ಅಂತ ಹೆಸರಿಟ್ಟ.
8 ಆಮೇಲೆ ಅಮಾಲೇಕ್ಯರು+ ರೆಫೀದೀಮಿನಲ್ಲಿದ್ದ+ ಇಸ್ರಾಯೇಲ್ಯರ ಮೇಲೆ ದಾಳಿ ಮಾಡಿದ್ರು. 9 ಆಗ ಮೋಶೆ ಯೆಹೋಶುವಗೆ+ “ನೀನು ಸ್ವಲ್ಪ ಜನ್ರನ್ನ ಆರಿಸ್ಕೊಂಡು ನಾಳೆ ಅಮಾಲೇಕ್ಯರ ವಿರುದ್ಧ ಯುದ್ಧಕ್ಕೆ ಹೋಗು. ಸತ್ಯ ದೇವರು ಹೇಳಿದ್ದ ಕೋಲನ್ನ ನಾನು ಹಿಡ್ಕೊಂಡು ಬೆಟ್ಟದ ತುದಿಗೆ ಹೋಗಿ ನಿಂತ್ಕೊಳ್ತೀನಿ” ಅಂದ. 10 ಮೋಶೆ ಹೇಳಿದ ತರಾನೇ ಯೆಹೋಶುವ ಮಾಡಿದ.+ ಅವನು ಅಮಾಲೇಕ್ಯರ ವಿರುದ್ಧ ಯುದ್ಧ ಮಾಡೋಕೆ ಹೋದ. ಮೋಶೆ, ಆರೋನ, ಹೂರ+ ಬೆಟ್ಟದ ತುದಿಗೆ ಹೋದ್ರು.
11 ಮೋಶೆ ಅಲ್ಲಿ ಕೈಗಳನ್ನ ಮೇಲಕ್ಕೆ ಎತ್ತಿ ಹಾಗೇ ನಿಂತ್ಕೊಂಡ. ಅವನು ಎಷ್ಟರ ತನಕ ಕೈಗಳನ್ನ ಎತ್ಕೊಂಡು ನಿಂತಿದ್ನೋ ಅಷ್ಟರ ತನಕ ಇಸ್ರಾಯೇಲ್ಯರು ಗೆಲ್ತಿದ್ರು. ಆದ್ರೆ ಅವನು ಕೈಗಳನ್ನ ಕೆಳಗೆ ಇಳಿಸಿದ್ರೆ ಅಮಾಲೇಕ್ಯರು ಗೆಲ್ತಿದ್ರು. 12 ಮೋಶೆ ಕೈಗಳು ಸೋತುಹೋದಾಗ ಆರೋನ ಮತ್ತು ಹೂರ ಅವನಿಗೆ ಕೂತ್ಕೊಳ್ಳೋಕೆ ಒಂದು ಕಲ್ಲು ತಂದ್ರು. ಮೋಶೆ ಅದ್ರ ಮೇಲೆ ಕೂತ. ಆಮೇಲೆ ಆರೋನ ಮತ್ತು ಹೂರ ಇಬ್ರೂ ಮೋಶೆಯ ಅಕ್ಕಪಕ್ಕ ನಿಂತು ಅವನ ಕೈಗಳನ್ನ ಎತ್ತಿ ಹಿಡಿದ್ರು. ಹೀಗೆ ಸೂರ್ಯ ಮುಳುಗೋ ತನಕ ಮೋಶೆ ಕೈಗಳು ಮೇಲೆನೇ ಇತ್ತು. 13 ಆಗ ಯೆಹೋಶುವ ಅಮಾಲೇಕ್ಯರನ್ನ ಸೋಲಿಸಿದ.+
14 ಆಮೇಲೆ ಯೆಹೋವ ಮೋಶೆಗೆ “‘ಅಮಾಲೇಕ್ಯರನ್ನ ಯಾರೂ ಯಾವತ್ತೂ ನೆನಪಿಸ್ಕೊಳ್ಳದೆ ಇರೋ ತರ ನಾನು ಅವರನ್ನ ಭೂಮಿ ಮೇಲಿಂದ ಪೂರ್ತಿ ನಾಶಮಾಡ್ತೀನಿ.’+ ಇದನ್ನ ಯೆಹೋಶುವಗೆ ಹೇಳು, ಇದನ್ನ ನೆನಪಿಡೋಕೆ ಪುಸ್ತಕದಲ್ಲಿ ಬರಿ” ಅಂದನು. 15 ಆಮೇಲೆ ಮೋಶೆ ಒಂದು ಯಜ್ಞವೇದಿ ಕಟ್ಟಿ ಅದಕ್ಕೆ ಯೆಹೋವ-ನಿಸ್ಸಿ* ಅಂತ ಹೆಸರಿಟ್ಟು, 16 “ಅಮಾಲೇಕ್ಯರು ಯಾಹು ಸಿಂಹಾಸನದ ವಿರುದ್ಧ ಕೈ ಎತ್ತಿದ+ ಕಾರಣ ಯೆಹೋವ ಅವರ ಮುಂದಿನ ಪೀಳಿಗೆಗಳ ವಿರುದ್ಧನೂ ಯುದ್ಧ ಮಾಡ್ತಾನೆ” ಅಂದನು.+
18 ಯೆಹೋವ ಮೋಶೆಗಾಗಿ, ಇಸ್ರಾಯೇಲ್ಯರಿಗಾಗಿ ಮಾಡಿದ್ದನ್ನೆಲ್ಲ ಅಂದ್ರೆ ಈಜಿಪ್ಟಿಂದ ಇಸ್ರಾಯೇಲ್ಯರನ್ನ ಹೇಗೆ ಬಿಡಿಸ್ಕೊಂಡು ಬಂದನು ಅನ್ನೋದನ್ನ ಮಿದ್ಯಾನಿನ ಪುರೋಹಿತನಾಗಿದ್ದ ಮೋಶೆಯ ಮಾವ+ ಇತ್ರೋ ಕೇಳಿಸ್ಕೊಂಡ.+ 2 ಮೋಶೆ ತನ್ನ ಹೆಂಡತಿ ಚಿಪ್ಪೋರಳನ್ನ ಇತ್ರೋ ಮನೆಗೆ ಕಳಿಸಿದ್ದ. ಮೋಶೆ ಮಾವ ಇತ್ರೋ ಅವಳನ್ನ, 3 ಅವಳ ಇಬ್ರು ಗಂಡುಮಕ್ಕಳನ್ನ+ ನೋಡ್ಕೊಳ್ತಿದ್ದ. ಮೋಶೆ “ನಾನು ಇಲ್ಲಿ ವಿದೇಶಿಯಾಗಿ ವಾಸಿಸ್ತಾ ಇದ್ದೀನಿ” ಅಂತ ಹೇಳಿ ತನ್ನ ಮಗನಿಗೆ ಗೇರ್ಷೋಮ್*+ ಅಂತ ಹೆಸರಿಟ್ಟಿದ್ದ. 4 “ನನ್ನ ತಂದೆಯ ದೇವರು ನಂಗೆ ಸಹಾಯಕನಾಗಿ ನನ್ನನ್ನ ಫರೋಹನ ಕತ್ತಿಯಿಂದ ತಪ್ಪಿಸಿ ಕಾಪಾಡಿದನು”+ ಅಂತ ಹೇಳಿ ಇನ್ನೊಬ್ಬ ಮಗನಿಗೆ ಎಲೀಯೆಜರ್* ಅಂತ ಹೆಸರಿಟ್ಟಿದ್ದ.
5 ಮೋಶೆಯ ಹೆಂಡತಿಮಕ್ಕಳನ್ನ ಕರ್ಕೊಂಡು ಅವನಿದ್ದ ಕಾಡಿಗೆ ಇತ್ರೋ ಬಂದ. ಮೋಶೆ ಅಲ್ಲಿ ಸತ್ಯದೇವರ ಬೆಟ್ಟದ ಹತ್ರ ಡೇರೆ ಹಾಕೊಂಡಿದ್ದ.+ 6 “ನಾನು ನಿನ್ನ ಮಾವ ಇತ್ರೋ ನಿನ್ನ ಹತ್ರ ಬರ್ತಾ ಇದ್ದೀನಿ.+ ನಿನ್ನ ಹೆಂಡತಿ, ಮಕ್ಕಳನ್ನ ಕರ್ಕೊಂಡು ಬರ್ತಾ ಇದ್ದೀನಿ” ಅಂತ ಇತ್ರೋ ಸುದ್ದಿ ಕಳಿಸಿದ. 7 ಸುದ್ದಿ ಸಿಕ್ಕಿದ ತಕ್ಷಣ ಮೋಶೆ ಮಾವನನ್ನ ನೋಡೋಕೆ ಹೋದ. ಅವನನ್ನ ನೋಡಿ ಬಗ್ಗಿ ನಮಸ್ಕಾರ ಮಾಡಿ ಮುತ್ತು ಕೊಟ್ಟ. ಅವರೆಲ್ಲ ಒಬ್ರಿಗೊಬ್ರು ಹೇಗಿದ್ದೀರ ಅಂತ ವಿಚಾರಿಸ್ಕೊಂಡು ಡೇರೆ ಒಳಗೆ ಹೋದ್ರು.
8 ಯೆಹೋವ ಇಸ್ರಾಯೇಲ್ಯರಿಗೋಸ್ಕರ ಫರೋಹನಿಗೂ ಈಜಿಪ್ಟಿಗೂ ಏನೆಲ್ಲ ಮಾಡಿದ ಅಂತ ಮೋಶೆ ಮಾವನಿಗೆ ಹೇಳಿದ.+ ಅಷ್ಟೇ ಅಲ್ಲ ಪ್ರಯಾಣ ಮಾಡ್ತಾ ಇದ್ದಾಗ ಅವರಿಗೆ ಏನೆಲ್ಲ ಕಷ್ಟ ಬಂತು,+ ಯೆಹೋವ ಆ ಕಷ್ಟಗಳಿಂದ ಹೇಗೆಲ್ಲ ಬಿಡಿಸಿದನು ಅಂತಾನೂ ಹೇಳಿದ. 9 ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡಿಸಿ ಅವರಿಗಾಗಿ ಮಾಡಿದ ಎಲ್ಲ ಒಳ್ಳೇ ವಿಷ್ಯಗಳನ್ನ ಕೇಳಿಸ್ಕೊಂಡಾಗ ಇತ್ರೋಗೆ ತುಂಬ ಖುಷಿ ಆಯ್ತು. 10 ಆಗ ಅವನು “ಈಜಿಪ್ಟಿನ ಕೈಯಿಂದ ಫರೋಹನ ಕೈಯಿಂದ ನಿಮ್ಮನ್ನ ಬಿಡಿಸಿದ, ಈಜಿಪ್ಟಿನ ಅಧಿಕಾರದ ಕೆಳಗಿಂದ ಇಸ್ರಾಯೇಲ್ಯರನ್ನ ಬಿಡಿಸಿ ಕಾಪಾಡಿದ ಯೆಹೋವನನ್ನ ಹೊಗಳಿ. 11 ತನ್ನ ಜನ್ರ ಜೊತೆ ದುರಹಂಕಾರದಿಂದ ನಡ್ಕೊಂಡವರಿಗೆ ಯೆಹೋವ ತನ್ನ ಶಕ್ತಿ ತೋರಿಸಿದ್ದಾನೆ. ಇದ್ರಿಂದ ಆತನೇ ಬೇರೆಲ್ಲ ದೇವರಿಗಿಂತ ಮಹೋನ್ನತ ದೇವರು+ ಅಂತ ನಂಗೀಗ ಗೊತ್ತಾಯ್ತು” ಅಂದ. 12 ಆಮೇಲೆ ಇತ್ರೋ ದೇವರಿಗೆ ಸರ್ವಾಂಗಹೋಮ ಬಲಿ ಮತ್ತು ಬೇರೆ ಬಲಿಗಳನ್ನ ಅರ್ಪಿಸೋಕೆ ಪ್ರಾಣಿಗಳನ್ನ ತಂದ. ಆರೋನ ಮತ್ತು ಇಸ್ರಾಯೇಲ್ಯರ ಎಲ್ಲ ಹಿರಿಯರು ಮೋಶೆ ಮಾವನ ಜೊತೆ ಸತ್ಯದೇವರ ಮುಂದೆ ಊಟ ಮಾಡೋಕೆ ಬಂದ್ರು.
13 ಮಾರನೇ ದಿನ ಮೋಶೆ ದಿನಾಲೂ ಮಾಡೋ ತರ ಜನ್ರಿಗೆ ನ್ಯಾಯತೀರಿಸೋಕೆ ಕೂತ. ಜನ ಬೆಳಿಗ್ಗೆಯಿಂದ ಸಂಜೆ ತನಕ ಮೋಶೆ ಮುಂದೆ ಬಂದು ನಿಲ್ತಿದ್ರು. 14 ಜನರಿಗಾಗಿ ಮೋಶೆ ಮಾಡ್ತಿದ್ದ ಎಲ್ಲವನ್ನ ಅವನ ಮಾವ ನೋಡಿ “ಹೀಗೆ ಯಾಕೆ ಮಾಡ್ತಾ ಇದ್ದೀಯ? ಬೆಳಿಗ್ಗೆಯಿಂದ ಸಂಜೆ ತನಕ ಜನ ಬಂದು ನಿನ್ನ ಮುಂದೆ ನಿಲ್ತಾರಲ್ಲ. ಒಬ್ಬನೇ ಯಾಕೆ ಇದನ್ನೆಲ್ಲ ಮಾಡ್ತಾ ಇದ್ದೀಯಾ?” ಅಂತ ಕೇಳಿದ. 15 ಅದಕ್ಕೆ ಮೋಶೆ “ಯಾಕಂದ್ರೆ ಜನ್ರು ದೇವರ ಮಾರ್ಗದರ್ಶನ ಕೇಳಿ ತಿಳ್ಕೊಳ್ಳೋಕೆ ನನ್ನ ಹತ್ರ ಬರ್ತಾರೆ. 16 ಏನಾದ್ರೂ ಜಗಳ ಆದ್ರೆ ನನ್ನ ಹತ್ರ ಬರ್ತಾರೆ. ಯಾರು ಸರಿ ಅಂತ ನಾನು ವಿಚಾರಣೆ ಮಾಡಿ ತೀರ್ಪು ಕೊಡ್ತೀನಿ. ಅಷ್ಟೇ ಅಲ್ಲ ಅದ್ರ ಬಗ್ಗೆ ಸತ್ಯದೇವರು ಏನು ಹೇಳ್ತಾನೆ, ಆತನ ನಿಯಮಗಳೇನು ಅಂತ ಹೇಳ್ತೀನಿ”+ ಅಂದ.
17 ಆಗ ಇತ್ರೋ ಹೀಗಂದ: “ನೀನು ಇದನ್ನ ಮಾಡ್ತಿರೋ ವಿಧಾನ ಸರಿ ಇಲ್ಲ. 18 ಇದು ತುಂಬ ದೊಡ್ಡ ಜವಾಬ್ದಾರಿ. ಇದನ್ನ ನೀನೊಬ್ಬನೇ ಮಾಡೋಕೆ ಆಗಲ್ಲ. ಹೀಗೇ ಮಾಡ್ತಿದ್ರೆ ನೀನೂ ಈ ಜನರೂ ಸುಸ್ತಾಗಿ ಹೋಗ್ತೀರ. 19 ನಾನು ಹೇಳಿದ ತರ ಮಾಡು. ದೇವರು ನಿನ್ನ ಜೊತೆ ಇರ್ತಾನೆ.+ ನೀನು ಜನ್ರ ಪ್ರತಿನಿಧಿಯಾಗಿ ಸತ್ಯದೇವರ ಹತ್ರ ಮಾತಾಡು,+ ಅವರು ಮಾಡೋ ಜಗಳದ ಬಗ್ಗೆ ಹೇಳು.+ 20 ಸತ್ಯದೇವರ ಆಜ್ಞೆಗಳು, ನಿಯಮಗಳು ಏನಂತ+ ಜನ್ರಿಗೆ ಹೇಳಿ ಅವರನ್ನ ಎಚ್ಚರಿಸು. ಅವರು ಹೇಗೆ ನಡ್ಕೊಬೇಕು, ಏನು ಕೆಲಸ ಮಾಡ್ಬೇಕು ಅನ್ನೋದನ್ನ ಅರ್ಥಮಾಡಿಸು. 21 ಅಷ್ಟೇ ಅಲ್ಲ ನೀನು ಜನ್ರಿಂದ ಯೋಗ್ಯ ಪುರುಷರನ್ನ+ ಆರಿಸ್ಕೊ. ಅವರಿಗೆ ದೇವರ ಮೇಲೆ ಭಯ ಇರಬೇಕು, ಅವರ ಮೇಲೆ ಜನರಿಗೆ ನಂಬಿಕೆ ಇರಬೇಕು, ಅವರಿಗೆ ದುರಾಸೆ ಇರಬಾರದು.+ ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸು.+ 22 ಜನ್ರ ಮಧ್ಯ ಜಗಳ ನಡೆದಾಗ ಆ ಮುಖ್ಯಸ್ಥರು ತೀರ್ಪು ಕೊಡ್ಲಿ. ಅವರಿಗೆ ಕಷ್ಟ ಆದ್ರೆ ನಿನ್ನ ಹತ್ರ ಬರಲಿ.+ ಚಿಕ್ಕ ಚಿಕ್ಕ ಜಗಳ ಆದ್ರೆ ಅವರೇ ವಿಚಾರಿಸಿ ತೀರ್ಮಾನ ಮಾಡ್ಲಿ. ಹೀಗೆ ನಿನ್ನ ಕೆಲಸನ ಅವರ ಜೊತೆ ಹಂಚ್ಕೊಂಡ್ರೆ ನಿನಗೆ ಸುಲಭ ಆಗುತ್ತೆ.+ 23 ಹೀಗೆ ಮಾಡೋಕೆ ದೇವರು ಒಪ್ಪಿಗೆ ಕೊಟ್ರೆ ಮಾಡು. ಆಗ ನಿನಗೆ ಸುಸ್ತಾಗಲ್ಲ. ಜನ್ರೆಲ್ಲ ನೆಮ್ಮದಿಯಿಂದ ಮನೆಗೆ ಹೋಗ್ತಾರೆ.”
24 ಮೋಶೆ ತಕ್ಷಣ ಮಾವನ ಮಾತಿಗೆ ಒಪ್ಪಿ ಹೇಳಿದ್ದೆಲ್ಲ ಮಾಡಿದ. 25 ಮೋಶೆ ಎಲ್ಲ ಇಸ್ರಾಯೇಲ್ಯರಲ್ಲಿ ಯೋಗ್ಯರಾಗಿದ್ದ ಪುರುಷರನ್ನ ಆರಿಸ್ಕೊಂಡ. ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸಿದ. 26 ಜನ್ರ ಮಧ್ಯ ಏನಾದ್ರೂ ಜಗಳ ಆದಾಗ ಆ ಮುಖ್ಯಸ್ಥರೇ ತೀರ್ಪು ಕೊಟ್ರು. ಕಷ್ಟ ಆದ್ರೆ ಮೋಶೆ ಹತ್ರ ಬರ್ತಿದ್ರು.+ ಚಿಕ್ಕ ಚಿಕ್ಕ ಜಗಳಗಳನ್ನ ಅವರೇ ವಿಚಾರಿಸಿ ತೀರ್ಮಾನ ತಗೊಳ್ತಾ ಇದ್ರು. 27 ಆಮೇಲೆ ಮೋಶೆ ತನ್ನ ಮಾವನನ್ನ ಕಳಿಸ್ಕೊಟ್ಟ.+ ಇತ್ರೋ ತನ್ನ ದೇಶಕ್ಕೆ ಹೋದ.
19 ಇಸ್ರಾಯೇಲ್ಯರು ಈಜಿಪ್ಟ್ ದೇಶ ಬಿಟ್ಟು ಬಂದ ಮೇಲೆ ಮೂರನೇ ತಿಂಗಳಲ್ಲಿ ಸಿನಾಯಿ ಕಾಡನ್ನ ತಲುಪಿದ್ರು. 2 ಇಸ್ರಾಯೇಲ್ಯರು ರೆಫೀದೀಮಿಂದ+ ಹೊರಟು, ಅದೇ ದಿನ ಸಿನಾಯಿ ಕಾಡಿಗೆ ಬಂದು ಅಲ್ಲಿ ಬೆಟ್ಟದ+ ಮುಂದೆ ಡೇರೆ ಹಾಕೊಂಡ್ರು.
3 ಆಮೇಲೆ ಮೋಶೆ ಸತ್ಯದೇವರ ಮುಂದೆ ಕಾಣಿಸ್ಕೊಳ್ಳೋಕೆ ಬೆಟ್ಟ ಹತ್ತಿ ಹೋದ. ಬೆಟ್ಟದಿಂದ ಯೆಹೋವ ಅವನಿಗೆ+ “ನೀನು ಯಾಕೋಬನ ವಂಶದವರಿಗೆ, ಇಸ್ರಾಯೇಲ್ಯರಿಗೆ ಹೀಗೆ ಹೇಳಬೇಕು: 4 ‘ಹದ್ದು ತನ್ನ ಮರಿಗಳನ್ನ ರೆಕ್ಕೆಗಳ ಮೇಲೆ ಹೊತ್ಕೊಂಡು ಬರೋ ತರ ನಾನು ನಿಮ್ಮನ್ನ ನನ್ನ ಹತ್ರ ಕರ್ಕೊಂಡು ಬಂದೆ.+ ಅದಕ್ಕಾಗಿ ಈಜಿಪ್ಟಿನವರಿಗೆ ಏನೆಲ್ಲ ಮಾಡ್ದೆ ಅಂತ ನೀವೇ ಕಣ್ಣಾರೆ ನೋಡಿದ್ರಿ.+ 5 ನೀವು ನನ್ನ ಮಾತನ್ನ ತಪ್ಪದೆ ಕೇಳಿದ್ರೆ, ನನ್ನ ಒಪ್ಪಂದಕ್ಕೆ ಒಪ್ಕೊಂಡ್ರೆ ಎಲ್ಲ ಜನ್ರಲ್ಲಿ ನೀವು ನನ್ನ ವಿಶೇಷ ಸೊತ್ತಾಗ್ತೀರ.*+ ಯಾಕಂದ್ರೆ ಇಡೀ ಭೂಮಿ ನಂದು.+ 6 ನೀವು ನಂಗೆ ಸೇರಿರೋ ಪವಿತ್ರ ಜನರಾಗ್ತೀರ ಮತ್ತು ರಾಜರ ತರ ಆಳೋ ಪುರೋಹಿತರಾಗ್ತೀರ.’*+ ಈ ಮಾತುಗಳನ್ನೇ ನೀನು ಇಸ್ರಾಯೇಲ್ಯರಿಗೆ ಹೇಳಬೇಕು” ಅಂದನು.
7 ಹಾಗಾಗಿ ಮೋಶೆ ಕೆಳಗೆ ಬಂದು ಇಸ್ರಾಯೇಲ್ಯರ ಹಿರಿಯರನ್ನ ಕರೆಸಿ ಯೆಹೋವ ಕೊಟ್ಟ ಆಜ್ಞೆಗಳನ್ನೆಲ್ಲ ಅವರಿಗೆ ಹೇಳಿದ.+ 8 ಆಮೇಲೆ ಜನ್ರೆಲ್ಲ ಒಂದೇ ಮನಸ್ಸಿಂದ “ಯೆಹೋವ ಹೇಳಿದ್ದೆಲ್ಲ ನಾವು ಮಾಡ್ತೀವಿ” ಅಂತ ಉತ್ತರ ಕೊಟ್ರು.+ ತಕ್ಷಣ ಮೋಶೆ ಜನ್ರ ಈ ಮಾತನ್ನ ಯೆಹೋವನಿಗೆ ಹೇಳಿದ. 9 ಯೆಹೋವ ಮೋಶೆಗೆ “ನಾನು ಕಪ್ಪು ಮೋಡದಲ್ಲಿ ನಿನ್ನ ಹತ್ರ ಬರ್ತಿನಿ. ಆಗ ನಾನು ನಿನ್ನ ಜೊತೆ ಮಾತಾಡೋದನ್ನ ಜನ್ರು ಕೇಳಿಸ್ಕೊಳ್ತಾರೆ. ಇದ್ರಿಂದ ಅವರು ನಿನ್ನ ಮೇಲೂ ಯಾವಾಗ್ಲೂ ನಂಬಿಕೆ ಇಡ್ತಾರೆ” ಅಂದನು. ಆಗ ಮೋಶೆ ಜನ್ರ ಮಾತುಗಳನ್ನ ಯೆಹೋವನಿಗೆ ಹೇಳಿದ.
10 ಆಮೇಲೆ ಯೆಹೋವ ಮೋಶೆಗೆ “ನೀನು ಇವತ್ತು ಮತ್ತೆ ನಾಳೆ ಜನ್ರನ್ನ ಪವಿತ್ರ ಮಾಡು. ಅವರು ತಮ್ಮ ಬಟ್ಟೆಗಳನ್ನ ಒಗೆದುಕೊಳ್ಳಬೇಕು. 11 ಅವರು ಮೂರನೇ ದಿನ ಸಿದ್ಧರಾಗಿ ಇರಬೇಕು. ಯಾಕಂದ್ರೆ ಮೂರನೇ ದಿನ ಎಲ್ಲ ಜನ್ರ ಕಣ್ಮುಂದೆ ಯೆಹೋವನಾದ ನಾನು ಸಿನಾಯಿ ಬೆಟ್ಟದ ಮೇಲೆ ಇಳಿದು ಬರ್ತಿನಿ. 12 ಜನ್ರು ಬೆಟ್ಟದ ಹತ್ರ ಬರದೆ ಇರೋ ತರ ಬೆಟ್ಟದ ಸುತ್ತ ನೀನು ಗುರುತು ಹಾಕಬೇಕು. ಅಷ್ಟೇ ಅಲ್ಲ ಅವರಿಗೆ ‘ನೀವು ಯಾರೂ ಬೆಟ್ಟ ಹತ್ತಬಾರದು. ಹತ್ತೋ ಪ್ರಯತ್ನನೂ ಮಾಡಬಾರದು. ಯಾರಾದ್ರೂ ಬೆಟ್ಟಕ್ಕೆ ಕಾಲಿಟ್ರೆ ಖಂಡಿತ ಸಾಯ್ತಾರೆ. 13 ಆ ವ್ಯಕ್ತಿನ ಯಾರೂ ಮುಟ್ಟಬಾರದು. ಅವನನ್ನ ಕಲ್ಲು ಹೊಡೆದು ಅಥವಾ ಆಯುಧದಿಂದ* ಕೊಲ್ಲಬೇಕು. ಬೆಟ್ಟವನ್ನ ಮುಟ್ಟೋ ಮನುಷ್ಯನಾಗ್ಲಿ ಪ್ರಾಣಿಯಾಗ್ಲಿ ಜೀವಂತ ಉಳಿಬಾರದು’+ ಅಂತ ಹೇಳು. ಆದ್ರೆ ಕೊಂಬು*+ ಊದಿದ ಶಬ್ದ ಕೇಳಿದಾಗ ಜನ ಬೆಟ್ಟದ ಹತ್ರ ಬರಬಹುದು” ಅಂದನು.
14 ಆಮೇಲೆ ಮೋಶೆ ಬೆಟ್ಟದಿಂದ ಇಳಿದು ಜನ್ರ ಹತ್ರ ಹೋಗಿ ಅವರನ್ನ ಪವಿತ್ರ ಮಾಡೋಕೆ ಶುರುಮಾಡಿದ. ಜನ್ರು ತಮ್ಮ ಬಟ್ಟೆ ಒಗೆದುಕೊಂಡ್ರು.+ 15 ಅವನು ಜನ್ರಿಗೆ “ನೀವು ಮೂರನೇ ದಿನ ಸಿದ್ಧರಾಗಿ. ನೀವು ನಿಮ್ಮ ಹೆಂಡತಿ ಜೊತೆ ಸಂಬಂಧ ಇಡಬಾರದು” ಅಂದ.
16 ಮೂರನೇ ದಿನ ಬೆಳಿಗ್ಗೆ ಬೆಟ್ಟದ ಮೇಲೆ ದಟ್ಟ ಮೋಡ+ ಕವಿದು ಗುಡುಗು, ಮಿಂಚು ಶುರು ಆಯ್ತು. ಕೊಂಬೂದೋ ಶಬ್ದ ತುಂಬ ಜೋರಾಗಿ ಕೇಳಿಸ್ತು. ಆಗ ಪಾಳೆಯದಲ್ಲಿದ್ದ ಜನ್ರೆಲ್ಲ ನಡುಗಿದ್ರು.+ 17 ಸತ್ಯದೇವರನ್ನ ಭೇಟಿಮಾಡೋಕೆ ಮೋಶೆ ಜನ್ರನ್ನ ಪಾಳೆಯದಿಂದ ಹೊರಗೆ ಕರ್ಕೊಂಡು ಬಂದ. ಆಗ ಜನ ಬೆಟ್ಟದ ಕೆಳಗೆ ನಿಂತ್ಕೊಂಡ್ರು. 18 ಯೆಹೋವ ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದಿದ್ರಿಂದ ಇಡೀ ಬೆಟ್ಟ ಹೊಗೆಯಿಂದ ತುಂಬ್ತು.+ ಆ ಹೊಗೆ ಆವಿಗೆ ತರ ಮೇಲೆ ಹೋಗ್ತಿತ್ತು. ಇಡೀ ಬೆಟ್ಟ ಕಂಪಿಸ್ತಿತ್ತು.+ 19 ಕೊಂಬಿನ ಶಬ್ದ ಜೋರಾಗ್ತಾ ಹೋದಾಗ ಮೋಶೆ ಮಾತಾಡಿದ, ಆಗ ಸತ್ಯದೇವರು ಅವನಿಗೆ ಉತ್ತರ ಕೊಟ್ಟನು.
20 ಯೆಹೋವ ಸಿನಾಯಿ ಬೆಟ್ಟದ ತುದಿಗೆ ಇಳಿದು ಬಂದನು. ಅಲ್ಲಿಗೆ ಹತ್ತಿ ಬರೋಕೆ ಯೆಹೋವ ಮೋಶೆಗೆ ಹೇಳಿದಾಗ ಅವನು ಹೋದ.+ 21 ಆಗ ಯೆಹೋವ ಮೋಶೆಗೆ “ನೀನು ಇಳಿದು ಹೋಗಿ ಜನ್ರು ಯೆಹೋವನಾದ ನನ್ನನ್ನ ನೋಡೋಕೆ ಹಾಕಿರೋ ಗುರುತನ್ನ ದಾಟಿಬರೋಕೆ ಪ್ರಯತ್ನ ಮಾಡಬಾರದು ಅಂತ ಅವರನ್ನ ಎಚ್ಚರಿಸು. ಒಂದುವೇಳೆ ದಾಟಿಬಂದ್ರೆ ತುಂಬ ಜನ ನಾಶ ಆಗ್ತಾರೆ. 22 ಯೆಹೋವನಾದ ನನಗೆ ಸೇವೆಮಾಡ್ತಿರೋ ಪುರೋಹಿತರು* ತಮ್ಮನ್ನ ಪವಿತ್ರ ಮಾಡ್ಕೊಳ್ಳೋಕೆ ಹೇಳು. ಹಾಗೆ ಮಾಡಿದ್ರೆ ಯೆಹೋವನಾದ ನಾನು ಅವರನ್ನ ಸಾಯಿಸಲ್ಲ” ಅಂದನು.+ 23 ಅದಕ್ಕೆ ಮೋಶೆ ಯೆಹೋವನಿಗೆ “ಜನ್ರು ಸಿನಾಯಿ ಬೆಟ್ಟದ ಹತ್ರ ಬರಲ್ಲ. ನೀನು ಮುಂಚೆನೇ ನಂಗೆ ‘ಬೆಟ್ಟದ ಸುತ್ತ ಗುರುತು ಹಾಕಿ ಅದು ಪವಿತ್ರ ಆಗಿದೆ ಅಂತೇಳು’ ಅಂತ ಎಚ್ಚರಿಕೆ ಕೊಟ್ಟಿದ್ದೆ” ಅಂದ.+ 24 ಆದ್ರೂ ಯೆಹೋವ ಅವನಿಗೆ, “ನೀನು ಇಳಿದು ಹೋಗು. ಆರೋನನನ್ನ ಕರ್ಕೊಂಡು ಮತ್ತೆ ಬೆಟ್ಟ ಹತ್ತಿ ಬಾ. ಆದ್ರೆ ಪುರೋಹಿತರಿಗೂ ಜನರಿಗೂ ಗುರುತನ್ನ ದಾಟಿ ಯೆಹೋವನಾದ ನನ್ನ ಹತ್ರ ಬರೋಕೆ ಪ್ರಯತ್ನ ಮಾಡಬಾರದು ಅಂತ ಹೇಳು. ದಾಟಿಬಂದ್ರೆ ನಾನು ಅವರನ್ನ ಸಾಯಿಸ್ತೀನಿ” ಅಂದನು.+ 25 ಹಾಗಾಗಿ ಮೋಶೆ ಇಳಿದು ಹೋಗಿ ಆ ಮಾತುಗಳನ್ನ ಜನ್ರಿಗೆ ಹೇಳಿದ.
20 ಆಮೇಲೆ ದೇವರು ಈ ಎಲ್ಲ ಆಜ್ಞೆಗಳನ್ನ ಕೊಟ್ಟನು:+
2 “ನಾನು ನಿಮ್ಮ ದೇವರಾದ ಯೆಹೋವ. ನೀವು ಗುಲಾಮರಾಗಿದ್ದ ಈಜಿಪ್ಟ್ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದವನು ನಾನೇ.+ 3 ನನ್ನನ್ನ ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು.*+
4 ನೀವು ಮೂರ್ತಿಗಳನ್ನ ಮಾಡ್ಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನೀರಲ್ಲಾಗಲಿ ಇರೋ ಯಾವುದರ ಮೂರ್ತಿನೂ ರೂಪಾನೂ ಮಾಡ್ಕೊಳ್ಳಬಾರದು.+ 5 ನೀವು ಅವುಗಳಿಗೆ ಅಡ್ಡಬೀಳಬಾರದು, ಮರುಳಾಗಿ ಅವುಗಳನ್ನು ಆರಾಧನೆ ಮಾಡಬಾರದು.*+ ಯಾಕಂದ್ರೆ ನಾನೇ ನಿಮ್ಮ ದೇವರಾದ ಯೆಹೋವ. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ*+ ದೇವರು ನಾನು. ನನ್ನನ್ನ ಬಿಟ್ಟು ನೀವು ಬೇರೆ ಯಾರನ್ನೂ ಆರಾಧನೆ ಮಾಡಬಾರದು. ತಂದೆಗಳು ನನ್ನನ್ನ ದ್ವೇಷಿಸಿದ್ರೆ ಅವರು ಮಾಡಿರೋ ಪಾಪದ ಪರಿಣಾಮಗಳನ್ನ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅನುಭವಿಸೋಕೆ ನಾನು ಬಿಟ್ಟುಬಿಡ್ತೀನಿ. 6 ಆದ್ರೆ ನನ್ನನ್ನ ಪ್ರೀತಿಸಿ ನನ್ನ ಆಜ್ಞೆಗಳನ್ನ+ ಪಾಲಿಸುವವರಿಗೆ ಸಾವಿರಾರು ಪೀಳಿಗೆ ತನಕ ಶಾಶ್ವತ ಪ್ರೀತಿ ತೋರಿಸ್ತೀನಿ.
7 ನೀವು ನಿಮ್ಮ ದೇವರಾದ ಯೆಹೋವನ ಹೆಸ್ರನ್ನ ಅಯೋಗ್ಯವಾಗಿ ಬಳಸಬಾರದು.+ ತನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸೋನಿಗೆ ಯೆಹೋವ ಶಿಕ್ಷೆ ಕೊಡದೆ ಬಿಡಲ್ಲ.+
8 ಮರಿಯದೆ ಸಬ್ಬತ್ ದಿನ ಆಚರಿಸಬೇಕು, ಅವತ್ತು ದೇವರ ವಿಷ್ಯಗಳನ್ನ ಮಾಡಬೇಕಾದ ದಿನ.+ 9 ನಿಮಗೆ ಯಾವುದೇ ಕೆಲಸ ಇರಲಿ, ದುಡಿಮೆ ಇರಲಿ ನೀವದನ್ನ ಆರು ದಿನದಲ್ಲೇ ಮಾಡ್ಕೊಬೇಕು.+ 10 ಆದ್ರೆ ಏಳನೇ ದಿನ ನೀವು ನಿಮ್ಮ ದೇವರಾದ ಯೆಹೋವನಿಗೆ ಗೌರವ ಕೊಡೋಕೆ ಸಬ್ಬತ್ತನ್ನ ಆಚರಿಸಬೇಕು. ಆ ದಿನ ನೀವಾಗ್ಲಿ ನಿಮ್ಮ ಮಗನಾಗ್ಲಿ ಮಗಳಾಗ್ಲಿ ನಿಮ್ಮ ದಾಸನಾಗ್ಲಿ ದಾಸಿಯಾಗ್ಲಿ ನಿಮ್ಮ ಪ್ರದೇಶದೊಳಗೆ ವಾಸಿಸೋ ವಿದೇಶಿಯಾಗ್ಲಿ ಯಾವ ಕೆಲಸನೂ ಮಾಡಬಾರದು. ನೀವು ಸಾಕಿರೋ ಪ್ರಾಣಿಯಿಂದಾನೂ ಯಾವ ಕೆಲಸ ಮಾಡಿಸಬಾರದು.+ 11 ಯಾಕಂದ್ರೆ ಆರು ದಿನದಲ್ಲಿ ಯೆಹೋವ ಆಕಾಶ, ಭೂಮಿ, ಸಮುದ್ರ, ಅದ್ರಲ್ಲಿ ಇರೋ ಎಲ್ಲನ ಸೃಷ್ಟಿಮಾಡಿ ಏಳನೇ ದಿನ ವಿಶ್ರಾಂತಿ ಪಡ್ಕೊಳ್ಳೋಕೆ ಶುರುಮಾಡಿದನು.+ ಅದಕ್ಕೆ ಯೆಹೋವ ಸಬ್ಬತ್ ದಿನನ ಆಶೀರ್ವದಿಸಿ ಪವಿತ್ರ ಮಾಡಿದನು.
12 ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಿ.+ ಗೌರವ ಕೊಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಜಾಸ್ತಿ ವರ್ಷ ಬದುಕ್ತೀರ.+
13 ನೀವು ಕೊಲೆ ಮಾಡಬಾರದು.+
15 ಕದಿಬಾರದು.+
16 ಇನ್ನೊಬ್ಬನ ವಿರುದ್ಧ ಸುಳ್ಳು ಸಾಕ್ಷಿ ಹೇಳಬಾರದು.+
17 ಇನ್ನೊಬ್ಬನ ಮನೆಯನ್ನ ಆಸೆಪಡಬಾರದು. ಇನ್ನೊಬ್ಬನ ಹೆಂಡತಿ,+ ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದನ್ನೂ ಆಸೆಪಡಬಾರದು.”+
18 ಆಗ ಅಲ್ಲಿ ಗುಡುಗು ಮಿಂಚು ಬಂತು, ಕೊಂಬಿನ ಶಬ್ದ ಕೇಳ್ತಿತ್ತು, ಬೆಟ್ಟದಿಂದ ಹೊಗೆ ಮೇಲೆ ಹೋಗ್ತಿತ್ತು. ಇದನ್ನೆಲ್ಲ ಜನ ನೋಡಿ, ಕೇಳಿ ನಡುಗ್ತಾ ದೂರದಲ್ಲೇ ನಿಂತಿದ್ರು.+ 19 ಹಾಗಾಗಿ ಅವರು ಮೋಶೆಗೆ “ನೀನೇ ನಮ್ಮ ಜೊತೆ ಮಾತಾಡು, ನಾವು ಕೇಳ್ತೀವಿ. ದೇವರು ನಮ್ಮ ಜೊತೆ ಮಾತಾಡೋದು ಬೇಡ. ಆತನು ಮಾತಾಡಿದ್ರೆ ನಾವು ಸತ್ತೇ ಹೋಗ್ತಿವೇನೋ ಅಂತ ಭಯ ಆಗ್ತಿದೆ”+ ಅಂದ್ರು. 20 ಅದಕ್ಕೆ ಮೋಶೆ “ಹೆದರಬೇಡಿ, ನಿಮ್ಮನ್ನ ಪರೀಕ್ಷಿಸೋಕೆ ಸತ್ಯದೇವರು ಬಂದಿದ್ದಾನೆ.+ ನೀವು ಆತನಿಗೆ ಯಾವಾಗ್ಲೂ ಭಯಪಡಬೇಕು, ಪಾಪ ಮಾಡಬಾರದು ಅನ್ನೋದೇ ಆತನ ಇಷ್ಟ”+ ಅಂದ. 21 ಜನ ದೂರದಲ್ಲೇ ನಿಂತಿದ್ರು. ಆದ್ರೆ ಮೋಶೆ ಸತ್ಯದೇವರಿದ್ದ ಕಪ್ಪು ಮೋಡದ ಹತ್ರ ಹೋದ.+
22 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ನನ್ನ ಈ ಮಾತುಗಳನ್ನ ಇಸ್ರಾಯೇಲ್ಯರಿಗೆ ಹೇಳು: ‘ನಾನು ಸ್ವರ್ಗದಿಂದ ನಿಮ್ಮ ಜೊತೆ ಮಾತಾಡಿದ್ದನ್ನ ನೀವೇ ನೋಡಿದ್ರಿ.+ 23 ನೀವು ನನ್ನನ್ನೂ ಆರಾಧಿಸ್ತಾ ಜೊತೆಗೆ ಚಿನ್ನಬೆಳ್ಳಿಯ ಮೂರ್ತಿಗಳನ್ನ ಮಾಡ್ಕೊಂಡು ಅವುಗಳನ್ನೂ ಆರಾಧಿಸಬಾರದು.+ 24 ನೀವು ನನಗಾಗಿ ಮಣ್ಣಿಂದ ಒಂದು ಯಜ್ಞವೇದಿ ಕಟ್ಟಬೇಕು. ನಿಮ್ಮ ಕುರಿದನಗಳಲ್ಲಿ ಕೆಲವನ್ನ ಸರ್ವಾಂಗಹೋಮ ಬಲಿಯಾಗಿ, ಸಮಾಧಾನ ಬಲಿಯಾಗಿ* ಅರ್ಪಿಸಬೇಕು. ನನ್ನ ಆರಾಧನೆಗಾಗಿ ನಾನು ಆರಿಸೋ* ಪ್ರತಿಯೊಂದು ಜಾಗದಲ್ಲಿ+ ನಿಮ್ಮ ಹತ್ರ ಬಂದು ನಿಮ್ಮನ್ನ ಆಶೀರ್ವದಿಸ್ತೀನಿ. 25 ನೀವು ಕಲ್ಲುಗಳಿಂದ ನನಗಾಗಿ ಯಜ್ಞವೇದಿ ಕಟ್ಟೋದಾದ್ರೆ ಉಳಿ ಮುಂತಾದ ಉಪಕರಣಗಳಿಂದ ಕತ್ತರಿಸಿದ ಕಲ್ಲುಗಳನ್ನ ಬಳಸಬಾರದು.+ ನೀವು ಅದಕ್ಕೆ ಉಳಿನ ತಾಗಿಸಿದ್ರೆ ಅದು ಅಶುದ್ಧ ಆಗುತ್ತೆ. 26 ನನ್ನ ಯಜ್ಞವೇದಿನ ಹತ್ತೋಕೆ ಮೆಟ್ಟಿಲು ಇಡಬಾರದು. ಯಾಕಂದ್ರೆ ಹಾಗೆ ಹತ್ತುವಾಗ ನಿಮ್ಮ ಗುಪ್ತಾಂಗಗಳು ಕಾಣಿಸುತ್ತೆ.’”
21 “ನೀನು ಅವರಿಗೆ ಹೇಳಬೇಕಾದ ತೀರ್ಪುಗಳು ಯಾವುದಂದ್ರೆ,+
2 ನೀವು ಒಬ್ಬ ಇಬ್ರಿಯ ದಾಸನನ್ನ ಕೊಂಡುಕೊಂಡ್ರೆ+ ಅವನು ಆರು ವರ್ಷ ನಿಮಗೆ ಗುಲಾಮನಾಗಿ ಇರಬೇಕು. ಆದ್ರೆ ಏಳನೇ ವರ್ಷ ಅವನಿಂದ ಏನನ್ನೂ ತಗೊಳ್ಳದೆ ಅವನನ್ನ ಬಿಡುಗಡೆ ಮಾಡಬೇಕು.+ 3 ಅವನು ಒಬ್ಬನೇ ಬಂದಿದ್ರೆ ಒಬ್ಬನೇ ಹೋಗಬೇಕು. ಹೆಂಡತಿ ಜೊತೆ ಬಂದಿದ್ರೆ ಅವಳು ಕೂಡ ಅವನ ಜೊತೆ ಹೋಗಬೇಕು. 4 ಒಂದುವೇಳೆ ಒಬ್ಬ ದಾಸನಿಗೆ ಅವನ ಯಜಮಾನ ಮದುವೆ ಮಾಡಿಸಿದ್ರೆ ಅವರಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರೂ ಅವನು ಬಿಡುಗಡೆಯಾಗಿ ಹೋಗುವಾಗ ಒಬ್ಬನೇ ಹೋಗಬೇಕು. ಯಾಕಂದ್ರೆ ಅವನ ಹೆಂಡತಿ-ಮಕ್ಕಳು ಯಜಮಾನನಿಗೆ ಸೇರಿದವರು.+ 5 ಆದ್ರೆ ಆ ದಾಸ ‘ನಾನು ಯಜಮಾನನನ್ನ, ಹೆಂಡತಿ ಮಕ್ಕಳನ್ನ ಪ್ರೀತಿಸ್ತೀನಿ. ಅದಕ್ಕೆ ನನಗೆ ಬಿಡುಗಡೆಯಾಗಿ ಹೋಗೋಕೆ ಇಷ್ಟ ಇಲ್ಲ’ ಅಂತ ಹೇಳಿದ್ರೆ+ 6 ಅವನ ಯಜಮಾನ ಅವನನ್ನ ಸತ್ಯ ದೇವರ ಮುಂದೆ ಕರ್ಕೊಂಡು ಬರಬೇಕು. ಆಮೇಲೆ ಅವನನ್ನ ಬಾಗಿಲು ಅಥವಾ ಅದ್ರ ಚೌಕಟ್ಟಿನ ಮುಂದೆ ಕರ್ಕೊಂಡು ಬಂದು ದೊಡ್ಡ ಸೂಜಿಯಿಂದ ಅವನ ಕಿವಿ ಚುಚ್ಚಬೇಕು. ಆಗ ಅವನು ಜೀವನ ಇಡೀ ಆ ಯಜಮಾನನ ದಾಸನಾಗಿ ಇರ್ತಾನೆ.
7 ಒಬ್ಬ ತನ್ನ ಮಗಳನ್ನ ದಾಸಿ ಆಗೋಕೆ ಮಾರಿದ್ರೆ ಒಬ್ಬ ದಾಸ ಬಿಡುಗಡೆಯಾಗಿ ಹೋಗೋ ತರ ಅವಳು ಬಿಡುಗಡೆಯಾಗಿ ಹೋಗೋ ಹಾಗಿಲ್ಲ. 8 ಯಜಮಾನನಿಗೆ ಅವಳು ಇಷ್ಟ ಆಗದಿದ್ರೆ ಅವಳನ್ನ ಉಪಪತ್ನಿಯಾಗಿ ಮಾಡ್ಕೊಳ್ಳದೆ ಬೇರೆಯವರಿಗೆ ಮಾರಬಹುದು. ಆದ್ರೆ ವಿದೇಶಿಯರಿಗೆ ಮಾರೋ ಅಧಿಕಾರ ಅವನಿಗಿಲ್ಲ. ಯಾಕಂದ್ರೆ ಅವನು ಆ ದಾಸಿಗೆ ದ್ರೋಹ ಮಾಡಿದ್ದಾನೆ. 9 ಒಂದುವೇಳೆ ಅವಳನ್ನ ತನ್ನ ಮಗನಿಗೆ ಮದುವೆ ಮಾಡಿದ್ರೆ ಒಬ್ಬ ಮಗಳಿಗಿರೋ ಹಕ್ಕುಗಳನ್ನ ಅವಳಿಗೆ ಕೊಡಬೇಕು. 10 ಅವನು ಇನ್ನೊಬ್ಬಳನ್ನ ಮದುವೆ ಆದ್ರೆ ಮೊದಲನೇ ಹೆಂಡತಿಗೆ ಊಟ-ಬಟ್ಟೆ ಕಮ್ಮಿ ಮಾಡಬಾರದು, ಲೈಂಗಿಕ ಸಂಬಂಧವನ್ನೂ+ ಬಿಟ್ಟುಬಿಡಬಾರದು. 11 ಈ ಮೂರನ್ನೂ ಕೊಡದಿದ್ರೆ ಅವಳು ಏನೂ ಹಣ ಕೊಡದೆ ಬಿಡುಗಡೆಯಾಗಿ ಹೋಗಬಹುದು.
12 ಒಬ್ಬ ಇನ್ನೊಬ್ಬನನ್ನ ಹೊಡೆದು ಕೊಂದ್ರೆ ಹೊಡೆದವನನ್ನ ಸಾಯಿಸಬೇಕು.+ 13 ಆದ್ರೆ ಅವನು ಅದನ್ನ ಬೇಕುಬೇಕಂತ ಮಾಡಿಲ್ಲಾಂದ್ರೆ, ಸತ್ಯದೇವರಾದ ನಾನು ಅದನ್ನ ಅನುಮತಿಸಿದ್ರೆ ನಾನು ಹೇಳೋ ಜಾಗಕ್ಕೆ ಅವನು ಓಡಿಹೋಗಿ ಅಲ್ಲಿ ಇರಬಹುದು.+ 14 ಒಬ್ಬ ವ್ಯಕ್ತಿ ತುಂಬ ಕೋಪದಿಂದ ಇನ್ನೊಬ್ಬನನ್ನ ಬೇಕಂತಾನೇ ಕೊಂದ್ರೆ ಅವನನ್ನ ಸಾಯಿಸಬೇಕು.+ ಅವನು ನನ್ನ ಯಜ್ಞವೇದಿ ಹತ್ರ ಇದ್ರೂ ಅವನನ್ನ ಅಲ್ಲಿಂದ ಹಿಡ್ಕೊಂಡು ಹೋಗಿ ಸಾಯಿಸಬೇಕು.+ 15 ಅಪ್ಪಅಮ್ಮನ ಮೇಲೆ ಕೈ ಮಾಡೋರನ್ನ ಸಾಯಿಸಬೇಕು.+
16 ಒಬ್ಬ ಯಾರನ್ನಾದ್ರೂ ಅಪಹರಿಸ್ಕೊಂಡು+ ಹೋಗಿ ಮಾರಿದ್ರೆ ಅಥವಾ ಆ ವ್ಯಕ್ತಿಯನ್ನ ತನ್ನ ಹತ್ರ ಇಟ್ಟುಕೊಂಡಿದ್ದಾಗಲೇ ಸಿಕ್ಕಿಬಿದ್ರೆ+ ಅವನನ್ನ ಸಾಯಿಸಬೇಕು.+
17 ಅಪ್ಪಅಮ್ಮಗೆ ಶಾಪ ಹಾಕಿದವನನ್ನ* ಸಾಯಿಸಬೇಕು.+
18 ಇಬ್ರು ಜಗಳ ಆಡ್ತಾ ಒಬ್ಬ ಇನ್ನೊಬ್ಬನನ್ನ ಕಲ್ಲಿಂದ ಅಥವಾ ಮುಷ್ಟಿಯಿಂದ* ಹೊಡೆದಾಗ ಗಾಯ ಆದವನ ಜೀವಕ್ಕೇನೂ ಅಪಾಯ ಆಗದಿದ್ರೂ ಹಾಸಿಗೆ ಹಿಡಿದ್ರೆ ನೀವು ಹೀಗೆ ಮಾಡಬೇಕು: 19 ಗಾಯ ಆದವನಿಗೆ ಕೆಲವು ದಿನ ಆದ್ಮೇಲೆ ಎದ್ದು ಕೋಲು ಹಿಡಿದು ಮನೆ ಹೊರಗೆ ನಡಿಯೋಕೆ ಆಗೋದಾದ್ರೆ ಹೊಡೆದವನಿಗೆ ಶಿಕ್ಷೆ ಆಗಬಾರದು. ಆದ್ರೂ ಗಾಯ ಆದವನಿಗೆ ಕೆಲಸ ಮಾಡೋಕೆ ಆಗದೇ ಹೋದ ಸಮಯದಿಂದ ಪೂರ್ತಿ ಗುಣ ಆಗೋ ತನಕ ಹೊಡೆದವನು ನಷ್ಟಭರ್ತಿ ಮಾಡಬೇಕು.
20 ಒಬ್ಬ ತನ್ನ ದಾಸ, ದಾಸಿನ ಕೋಲಿಂದ ಹೊಡೆದಾಗ ಅವರು ಸತ್ತರೆ ಹೊಡೆದವನಿಗೆ ತಕ್ಕ ಶಿಕ್ಷೆ ಕೊಡಬೇಕು.+ 21 ಆದ್ರೆ ಆ ದಾಸ ಒಂದೆರಡು ದಿನ ಜೀವದಿಂದ ಉಳಿದ್ರೆ ಹೊಡೆದವನಿಗೆ ಶಿಕ್ಷೆ ಕೊಡಬಾರದು. ಯಾಕಂದ್ರೆ ಹಣಕೊಟ್ಟು ತಗೊಂಡ ಆ ದಾಸನನ್ನ ಕಳ್ಕೊಳ್ಳೋದೇ ಯಜಮಾನನಿಗೆ ನಷ್ಟ.
22 ಇಬ್ರು ಜಗಳ ಆಡ್ತಿರುವಾಗ ಗರ್ಭಿಣಿಗೆ ಏಟು ಬಿದ್ದು ಹೆರಿಗೆ ಸಮಯಕ್ಕಿಂತ ಮುಂಚೆನೇ+ ಮಗು ಹುಟ್ಟಿದ್ರೆ ಮತ್ತು ತಾಯಿ ಮಗು ಇಬ್ರ ಜೀವಕ್ಕೇನೂ ಅಪಾಯ ಆಗದಿದ್ರೆ* ಹೊಡೆದವನು ನಷ್ಟಭರ್ತಿ ಮಾಡಬೇಕು. ಎಷ್ಟು ಹಣ ಕೊಡಬೇಕಂತ ಅವಳ ಗಂಡ ತೀರ್ಮಾನ ಮಾಡಬೇಕು. ಹೊಡೆದವನು ನ್ಯಾಯಾಧೀಶರ ಮೂಲಕ ಆ ಹಣವನ್ನ ಅವಳ ಗಂಡನಿಗೆ ಕೊಡಬೇಕು.+ 23 ಆದ್ರೆ ತಾಯಿ ಮಗು ಇಬ್ರಲ್ಲಿ ಒಬ್ರು ಸತ್ತರೂ ಅಪರಾಧಿಯನ್ನ ಸಾಯಿಸಬೇಕು. ಪ್ರಾಣಕ್ಕೆ ಪ್ರಾಣ ಕೊಡಬೇಕು.+ 24 ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು,+ 25 ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು ಕೊಡಬೇಕು.
26 ಒಬ್ಬ ತನ್ನ ದಾಸನ ಅಥವಾ ದಾಸಿಯ ಕಣ್ಣಿಗೆ ಹೊಡೆದು ಕುರುಡಾದ್ರೆ ಆ ಕಣ್ಣಿನ ನಷ್ಟಭರ್ತಿಗಾಗಿ ಅವನು ಆ ದಾಸನನ್ನ ಬಿಡುಗಡೆ ಮಾಡಬೇಕು.+ 27 ಅವನು ತನ್ನ ದಾಸನ ಅಥವಾ ದಾಸಿಯ ಹಲ್ಲು ಉದುರಿಸಿದ್ರೆ ಆ ಹಲ್ಲಿನ ನಷ್ಟಭರ್ತಿಗಾಗಿ ಅವನು ಆ ದಾಸನನ್ನ ಬಿಡುಗಡೆ ಮಾಡಬೇಕು.
28 ಒಂದು ಹೋರಿ ಯಾರನ್ನಾದ್ರೂ ಗುದ್ದಿ ಕೊಂದ್ರೆ ಅದನ್ನ ಕಲ್ಲು ಹೊಡೆದು ಸಾಯಿಸಬೇಕು.+ ಅದ್ರ ಮಾಂಸ ತಿನ್ನಬಾರದು. ಆ ಹೋರಿಯ ಯಜಮಾನನಿಗೆ ಶಿಕ್ಷೆ ಕೊಡಬಾರದು. 29 ಆದ್ರೆ ಒಂದು ಹೋರಿಗೆ ಮುಂಚಿಂದಾನೇ ಗುದ್ದೋ ಸ್ವಭಾವ ಇದ್ದು ಯಜಮಾನನಿಗೆ ಇದ್ರ ಬಗ್ಗೆ ಎಚ್ಚರಿಕೆ ಕೊಟ್ಟಿದ್ರೂ ಅವನು ಅದನ್ನ ಕಟ್ಟಿ ಹಾಕದಿದ್ದ ಕಾರಣ ಆ ಹೋರಿ ಯಾರನ್ನಾದ್ರೂ ಗುದ್ದಿ ಕೊಂದ್ರೆ ಅದನ್ನ ಕಲ್ಲು ಹೊಡಿದು ಸಾಯಿಸಬೇಕು. ಯಜಮಾನನನ್ನೂ ಸಾಯಿಸಬೇಕು. 30 ಒಂದುವೇಳೆ ಅವನ ಜೀವ ಬಿಡಿಸೋಕೆ ನಷ್ಟಭರ್ತಿ ಮಾಡಬೇಕು ಅಂತ ಹೇಳಿದ್ರೆ, ಅವನು ಆ ಪೂರ್ತಿ ಬೆಲೆ ಕೊಟ್ಟು ತನ್ನ ಜೀವವನ್ನ ಬಿಡಿಸಿಕೊಳ್ಳಬೇಕು. 31 ಹೋರಿ ಚಿಕ್ಕ ಮಕ್ಕಳನ್ನ ಗುದ್ದಿ ಕೊಂದ್ರೂ ಈ ತೀರ್ಪಿನ ಪ್ರಕಾರನೇ ಹೋರಿಯ ಯಜಮಾನನಿಗೆ ತೀರ್ಪು ಆಗಬೇಕು. 32 ಹೋರಿ ಒಬ್ಬ ದಾಸನನ್ನ ಗುದ್ದಿ ಕೊಂದ್ರೆ ಹೋರಿಯ ಯಜಮಾನ ಆ ದಾಸನ ಯಜಮಾನನಿಗೆ 30 ಶೆಕೆಲ್* ಕೊಡಬೇಕು. ಹೋರಿಯನ್ನ ಕಲ್ಲು ಹೊಡೆದು ಸಾಯಿಸಬೇಕು.
33 ಗುಂಡಿಯ ಬಾಯಿ ತೆರೆದು ಅದನ್ನ ಮುಚ್ಚದೇ ಬಿಟ್ಟಿದ್ರಿಂದ ಅಥವಾ ಗುಂಡಿ ತೋಡಿ ಅದ್ರ ಬಾಯನ್ನ ಮುಚ್ಚದೇ ಇದ್ದಿದ್ರಿಂದ ಹೋರಿ ಅಥವಾ ಕತ್ತೆ ಅದ್ರಲ್ಲಿ ಬಿದ್ದು ಸತ್ತರೆ 34 ಗುಂಡಿ ಯಾರದ್ದೋ ಆ ವ್ಯಕ್ತಿ ನಷ್ಟಭರ್ತಿ ಮಾಡಬೇಕು.+ ಅವನು ಆ ಪ್ರಾಣಿಯ ಯಜಮಾನನಿಗೆ ಬೆಲೆ ಕೊಡಬೇಕು, ಸತ್ತ ಪ್ರಾಣಿ ಅವನದ್ದಾಗುತ್ತೆ. 35 ಒಬ್ಬನ ಹೋರಿ ಇನ್ನೊಬ್ಬನ ಹೋರಿನ ಗುದ್ದಿ ಕೊಂದ್ರೆ ಜೀವದಿಂದಿರೋ ಹೋರಿನ ಅವರಿಬ್ರೂ ಮಾರಿ, ಬಂದ ಹಣನ ಸಮವಾಗಿ ಹಂಚ್ಕೊಳ್ಳಬೇಕು. ಸತ್ತ ಹೋರಿನ ಸಹ ಸಮವಾಗಿ ಹಂಚ್ಕೊಳ್ಳಬೇಕು. 36 ಆದ್ರೆ ಹೋರಿಗೆ ಮುಂಚಿಂದಾನೇ ಗುದ್ದೋ ಸ್ವಭಾವ ಇದ್ರೂ ಅದ್ರ ಯಜಮಾನ ಕಟ್ಟಿ ಹಾಕದಿದ್ರೆ ಅವನು ನಷ್ಟಭರ್ತಿಗಾಗಿ ಇನ್ನೊಂದು ಹೋರಿ ಕೊಡಬೇಕು. ಸತ್ತ ಹೋರಿ ಅವನದ್ದಾಗುತ್ತೆ.”
22 “ಒಬ್ಬ ಒಂದು ಹೋರಿ ಅಥವಾ ಕುರಿನ ಕದ್ದು ಅದನ್ನ ಕಡಿದ್ರೆ ಅಥವಾ ಮಾರಿದ್ರೆ ಆ ಒಂದು ಹೋರಿಗೆ ಐದು ಹೋರಿಗಳನ್ನ, ಒಂದು ಕುರಿಗೆ ನಾಲ್ಕು ಕುರಿಗಳನ್ನ ಕೊಟ್ಟು ನಷ್ಟಭರ್ತಿ ಮಾಡಬೇಕು.+
2 (ಕಳ್ಳ+ ರಾತ್ರಿ ಕದಿಯೋಕೆ ಮನೆಯೊಳಗೆ ನುಗ್ಗುವಾಗ್ಲೇ ಯಾರಾದ್ರೂ ಹೊಡೆದು ಅವನು ಸತ್ತರೆ ಹೊಡೆದವನು ಕೊಲೆಗಾರ ಆಗಲ್ಲ. 3 ಆದ್ರೆ ಸೂರ್ಯ ಹುಟ್ಟಿದ ಮೇಲೆ ಹೀಗೆ ನಡೆದ್ರೆ ಹೊಡೆದವನು ಕೊಲೆಗಾರ ಆಗ್ತಾನೆ.)
ಕಳ್ಳ ನಷ್ಟಭರ್ತಿ ಮಾಡ್ಲೇಬೇಕು. ಅವನ ಹತ್ರ ಏನೂ ಇಲ್ಲದಿದ್ರೆ ಕದ್ದ ವಸ್ತುಗಳ ನಷ್ಟಭರ್ತಿ ಮಾಡೋ ತನಕ ದಾಸನಾಗಿರೋಕೆ ಅವನನ್ನ ಮಾರಬೇಕು. 4 ಅವನು ಕದ್ದ ಹೋರಿಯಾಗ್ಲಿ ಕತ್ತೆಯಾಗ್ಲಿ ಕುರಿಯಾಗ್ಲಿ ಅವನ ಹತ್ರ ಜೀವಂತ ಸಿಕ್ಕಿದ್ರೆ ಅವನು ಅದ್ರ ಎರಡು ಪಟ್ಟು ವಾಪಸ್ ಕೊಡಬೇಕು.
5 ಒಬ್ಬ ತನ್ನ ಪ್ರಾಣಿಗಳನ್ನ ಹೊಲದಲ್ಲಿ ಅಥವಾ ದ್ರಾಕ್ಷಿತೋಟದಲ್ಲಿ ಮೇಯಿಸೋವಾಗ ಅವುಗಳನ್ನ ಬೇರೆಯವರ ಹೊಲದಲ್ಲಿ ಮೇಯೋಕೆ ಬಿಟ್ರೆ ಅವನು ತನ್ನ ಹೊಲದ ಅಥವಾ ದಾಕ್ಷಿತೋಟದ ಒಳ್ಳೇ ಬೆಳೆ ಕೊಟ್ಟು ನಷ್ಟಭರ್ತಿ ಮಾಡಬೇಕು.
6 ಒಬ್ಬ ಹೊತ್ತಿಸಿದ ಬೆಂಕಿ ಮುಳ್ಳಿನ ಪೊದೆಗಳಿಗೆ ತಗಲಿ ಬೇರೆಯವನ ಹೊಲದಲ್ಲಿರೋ ಸಿವುಡುಗಳನ್ನ, ಕೊಯ್ಲಿಗೆ ಸಿದ್ಧವಾಗಿರೋ ತೆನೆಗಳನ್ನ ಅಥವಾ ಇಡೀ ಹೊಲನ ಸುಟ್ಟುಬಿಟ್ರೆ ಬೆಂಕಿ ಹೊತ್ತಿಸಿದವನು ಸುಟ್ಟುಹೋಗಿರೋದರ ನಷ್ಟಭರ್ತಿ ಮಾಡಬೇಕು.
7 ಒಬ್ಬ ತನ್ನ ಹಣ ಅಥವಾ ವಸ್ತುಗಳನ್ನ ಸುರಕ್ಷಿತವಾಗಿ ಇಡೋಕಂತ ಇನ್ನೊಬ್ಬನಿಗೆ ಕೊಟ್ಟಾಗ ಅವು ಅವನ ಮನೆಯಿಂದ ಕಳವಾದ್ರೆ ಮತ್ತು ಕಳ್ಳ ಸಿಕ್ಕಿದ್ರೆ ಆ ಕಳ್ಳ ತಾನು ಕದ್ದದ್ರ ಎರಡುಪಟ್ಟು ವಾಪಸ್ ಕೊಡಬೇಕು.+ 8 ಕಳ್ಳ ಸಿಗದೆ ಹೋದ್ರೆ ಮನೆ ಯಜಮಾನನೇ ಅವುಗಳನ್ನ ಕದ್ದಿದ್ದಾನಾ ಇಲ್ವಾ ಅಂತ ಕಂಡುಹಿಡಿಯೋಕೆ ಅವನನ್ನ ಸತ್ಯದೇವರ ಮುಂದೆ+ ಕರ್ಕೊಂಡು ಬರಬೇಕು. 9 ಕಳೆದು ಹೋದ ತನ್ನ ಹೋರಿ, ಕತ್ತೆ, ಕುರಿ, ಬಟ್ಟೆ ಅಥವಾ ಬೇರೆ ಯಾವುದೇ ವಸ್ತು ಇನ್ನೊಬ್ಬನ ಹತ್ರ ಇರೋದನ್ನ ನೋಡಿ ‘ಇದು ನಂದು’ ಅಂತ ಹೇಳಿದಾಗ ಅವರಿಬ್ರ ಮಧ್ಯ ಜಗಳ ಆದ್ರೆ ಅವರ ಸಮಸ್ಯೆಯನ್ನ ಸತ್ಯದೇವರ ಮುಂದೆ ತರಬೇಕು.+ ಆಗ ದೇವರು ಯಾರು ತಪ್ಪು ಅಂತ ಹೇಳ್ತಾನೋ ಅವನು ಅದ್ರ ಎರಡುಪಟ್ಟು ಇನ್ನೊಬ್ಬನಿಗೆ ಕೊಡಬೇಕು.+
10 ಒಬ್ಬ ತನ್ನ ಕತ್ತೆ, ಹೋರಿ, ಕುರಿ ಅಥವಾ ಬೇರೆ ಯಾವುದೇ ಸಾಕುಪ್ರಾಣಿಯನ್ನ ಸ್ವಲ್ಪ ಸಮಯ ನೋಡ್ಕೊಳ್ಳೋಕೆ ಇನ್ನೊಬ್ಬನಿಗೆ ಕೊಟ್ಟಾಗ ಆ ಪ್ರಾಣಿ ಸತ್ತರೆ, ಊನವಾದ್ರೆ ಅಥವಾ ಯಾರೂ ನೋಡದಿದ್ದಾಗ ಬೇರೆಯವರು ಅದನ್ನ ಹೊಡ್ಕೊಂಡು ಹೋದ್ರೆ 11 ಆ ಪ್ರಾಣಿನ ನೋಡ್ಕೊಳ್ತಿದ್ದವನು ತಾನು ಅದನ್ನ ಕದ್ದಿಲ್ಲ ಅಂತ ಯೆಹೋವನ ಮುಂದೆ ಆಣೆ ಮಾಡಬೇಕು. ಆ ಮಾತನ್ನ ಪ್ರಾಣಿಯ ಯಜಮಾನ ಒಪ್ಕೊಳ್ಳಬೇಕು. ಆಗ ಆಣೆ ಮಾಡಿದವನು ನಷ್ಟಭರ್ತಿ ಮಾಡಬೇಕಾಗಿಲ್ಲ.+ 12 ಆದ್ರೆ ಆ ಪ್ರಾಣಿ ಅವನ ಬೇಜವಾಬ್ದಾರಿಯಿಂದ ಕಳವಾಗಿ ಹೋದ್ರೆ ಅವನು ಅದ್ರ ಯಜಮಾನನಿಗೆ ನಷ್ಟಭರ್ತಿ ಮಾಡಬೇಕು. 13 ಯಾವುದಾದ್ರೂ ಕಾಡುಪ್ರಾಣಿ ಅದನ್ನ ಸೀಳಿಹಾಕಿದ್ರೆ ಅವನು ಅದ್ರ ಉಳಿದ ಭಾಗವನ್ನ ಸಾಕ್ಷಿಯಾಗಿ ತಂದು ತೋರಿಸಬೇಕು. ಕಾಡುಪ್ರಾಣಿ ಕೊಂದದ್ದಕ್ಕೆ ಅವನು ನಷ್ಟಭರ್ತಿ ಮಾಡಬೇಕಾಗಿಲ್ಲ.
14 ಆದ್ರೆ ಒಬ್ಬ ಇನ್ನೊಬ್ಬನಿಂದ ಒಂದು ಪ್ರಾಣಿಯನ್ನ ಸ್ವಲ್ಪ ಸಮಯಕ್ಕಂತ ತಗೊಂಡು ಹೋದಾಗ, ಆ ಪ್ರಾಣಿಯ ಯಜಮಾನ ಇಲ್ಲದಿದ್ದಾಗ ಅದು ಊನವಾದ್ರೆ ಅಥವಾ ಸತ್ತುಹೋದ್ರೆ ಆ ಪ್ರಾಣಿನ ತಗೊಂಡವನು ನಷ್ಟಭರ್ತಿ ಮಾಡಬೇಕು. 15 ಒಂದುವೇಳೆ ಆ ಸಂದರ್ಭದಲ್ಲಿ ಪ್ರಾಣಿಯ ಯಜಮಾನ ಅಲ್ಲೇ ಇದ್ರೆ ನಷ್ಟಭರ್ತಿ ಮಾಡಬೇಕಾಗಿಲ್ಲ. ಆ ಪ್ರಾಣಿಯನ್ನ ಬಾಡಿಗೆಗೆ ತಗೊಂಡು ಹೋಗಿದ್ರೆ ಅದಕ್ಕಾಗಿ ಕೊಟ್ಟ ಬಾಡಿಗೆಯನ್ನೇ ನಷ್ಟಭರ್ತಿ ಅಂತ ನೆನಸಬೇಕು.
16 ಇನ್ನೂ ಮದುವೆ ನಿಶ್ಚಯ ಆಗದಿರೋ ಕನ್ಯೆನ ಒಬ್ಬ ಪುಸಲಾಯಿಸಿ ಅವಳ ಜೊತೆ ಸಂಬಂಧ ಇಟ್ಕೊಂಡ್ರೆ ಅವನು ವಧುದಕ್ಷಿಣೆ ಕೊಟ್ಟು ಅವಳನ್ನ ಮದುವೆ ಆಗಬೇಕು.+ 17 ಒಂದುವೇಳೆ ಅವಳ ತಂದೆ ಅವಳನ್ನ ಅವನಿಗೆ ಕೊಡೋದೇ ಇಲ್ಲ ಅಂತ ಖಂಡಿತವಾಗಿ ಹೇಳಿದ್ರೆ ಅವನು ವಧುದಕ್ಷಿಣೆಗೆ ಕೊಡುವಷ್ಟೇ ಹಣ ಕೊಡಬೇಕು.
18 ನೀವು ಮಾಟಗಾತಿಯನ್ನ ಜೀವಂತ ಉಳಿಸಬಾರದು.+
19 ಪ್ರಾಣಿಗಳ ಜೊತೆ ಸಂಭೋಗ ಮಾಡಿದವನನ್ನ ಸಾಯಿಸ್ಲೇಬೇಕು.+
20 ಯೆಹೋವನಿಗಲ್ಲದೆ ಬೇರೆ ದೇವರಿಗೆ ಬಲಿ ಅರ್ಪಿಸೋ ವ್ಯಕ್ತಿಯನ್ನ ನಾಶ ಮಾಡಬೇಕು.+
21 ನೀವು ವಿದೇಶಿ ಜೊತೆ ಕೆಟ್ಟದಾಗಿ ವರ್ತಿಸಬಾರದು, ಅವನನ್ನ ಪೀಡಿಸಲೂಬಾರದು.+ ಯಾಕಂದ್ರೆ ನೀವು ಸಹ ಈಜಿಪ್ಟ್ ದೇಶದಲ್ಲಿ ವಿದೇಶಿಯರಾಗಿ ಇದ್ರಲ್ಲಾ.+
22 ನೀವು ವಿಧವೆಗೆ, ಅನಾಥ* ಮಗುಗೆ ತೊಂದ್ರೆ ಕೊಡಬಾರದು.+ 23 ನೀವು ಅವರನ್ನ ಪೀಡಿಸಿ ಅವರೇನಾದ್ರೂ ನನಗೆ ಪ್ರಾರ್ಥನೆ ಮಾಡಿದ್ರೆ ನಾನು ಖಂಡಿತ ಅವರ ಪ್ರಾರ್ಥನೆ ಕೇಳ್ತೀನಿ.+ 24 ಆಗ ನನ್ನ ಕೋಪ ಹೊತ್ತಿ ಉರಿಯುತ್ತೆ, ನಿಮ್ಮನ್ನ ಕತ್ತಿಯಿಂದ ಕೊಲ್ತೀನಿ. ಇದ್ರಿಂದ ನಿಮ್ಮ ಹೆಂಡತಿಯರು ವಿಧವೆಯರಾಗ್ತಾರೆ, ನಿಮ್ಮ ಮಕ್ಕಳು ತಬ್ಬಲಿ ಆಗ್ತಾರೆ.
25 ನೀವು ನನ್ನ ಜನ್ರಲ್ಲಿ ಒಬ್ಬ ಬಡವನಿಗೆ ಸಾಲ ಕೊಟ್ರೆ ಬಡ್ಡಿ ವ್ಯವಹಾರ ಮಾಡೋರ ತರ* ಅವನ ಜೊತೆ ನಡ್ಕೊಳ್ಳಬಾರದು. ಅವನಿಂದ ಬಡ್ಡಿ ಕೇಳಬಾರದು.+
26 ನೀವು ಇನ್ನೊಬ್ಬನಿಗೆ ಸಾಲ ಕೊಡುವಾಗ ಅವನ ಮೇಲಂಗಿನ ಅಡವು+ ಇಟ್ಕೊಂಡ್ರೆ ಸೂರ್ಯ ಮುಳುಗೋ ಮುಂಚೆ ವಾಪಸ್ ಕೊಡಬೇಕು. 27 ಯಾಕಂದ್ರೆ ಅವನ ಹತ್ರ ಇರೋದು ಅದೊಂದೇ ಹೊದಿಕೆ, ಅದ್ರಿಂದಾನೇ ಅವನು ತನ್ನ ದೇಹ ಮುಚ್ಕೊಳ್ತಾನೆ. ಅದಿಲ್ಲಾಂದ್ರೆ ಅವನು ಮಲಗೋದು ಹೇಗೆ?+ ನಾನು ಕನಿಕರ ತೋರಿಸೋ ದೇವರು, ಅವನು ನನಗೆ ಪ್ರಾರ್ಥನೆ ಮಾಡಿದ್ರೆ ಖಂಡಿತ ಕೇಳ್ತೀನಿ.+
28 ನೀವು ದೇವರನ್ನ ಬೈಬಾರದು.*+ ನಿಮ್ಮ ಜನ್ರ ಪ್ರಧಾನನನ್ನ* ಸಹ ಬೈಬಾರದು.+
29 ನಿಮಗೆ ಸಿಕ್ಕಾಪಟ್ಟೆ ಬೆಳೆ ಬೆಳೆದಾಗ, ದ್ರಾಕ್ಷಾಮದ್ಯ ಎಣ್ಣೆ ತುಂಬಿತುಳುಕಿದಾಗ ನನಗೆ ಕಾಣಿಕೆ ಅರ್ಪಿಸೋಕೆ ಹಿಂದೆಮುಂದೆ ನೋಡಬಾರದು.+ ನಿಮ್ಮ ಮೊದಲನೇ ಗಂಡುಮಗನನ್ನ ನನಗೆ ಕೊಡಬೇಕು.+ 30 ನಿಮ್ಮ ಕುರಿದನಗಳ ಮೊದಲ ಮರಿ ಹುಟ್ಟಿದ ಮೇಲೆ ಏಳು ದಿನ ತಾಯಿ ಹತ್ರಾನೇ ಇರಬೇಕು.+ ಎಂಟನೇ ದಿನ ಅದನ್ನ ನನಗೆ ಕೊಡಬೇಕು.+
31 ನೀವು ನನಗೆ ಪವಿತ್ರ ಜನರಾಗಿ ಇರಬೇಕು.+ ಬಯಲಲ್ಲಿ ಕಾಡುಪ್ರಾಣಿ ಸೀಳಿಹಾಕಿದ ಯಾವುದರ ಮಾಂಸವನ್ನೂ ತಿನ್ನಬಾರದು.+ ಅದನ್ನ ನಾಯಿಗಳಿಗೆ ಹಾಕಬೇಕು.
23 “ನೀವು ಸುಳ್ಳು ಸುದ್ದಿ ಹಬ್ಬಿಸಬಾರದು.+ ಬೇರೆಯವರಿಗೆ ಕೆಟ್ಟದು ಮಾಡೋ ಉದ್ದೇಶದಿಂದ ಒಬ್ಬ ಕೆಟ್ಟ ವ್ಯಕ್ತಿ ಸಾಕ್ಷಿ ಹೇಳು ಅಂತ ನಿಮ್ಮನ್ನ ಕೇಳ್ಕೊಂಡ್ರೆ ಸಹಾಯ ಮಾಡಬಾರದು.+ 2 ತುಂಬ ಜನ ಕೆಟ್ಟದು ಮಾಡ್ತಿದ್ದಾರೆ ಅಂತ ನೀವೂ ಅವರ ಜೊತೆ ಸೇರ್ಕೊಂಡು ಕೆಟ್ಟದು ಮಾಡಬಾರದು. ತುಂಬ ಜನ್ರನ್ನ ಮೆಚ್ಚಿಸೋಕೆ ಸುಳ್ಳು ಸಾಕ್ಷಿ ಹೇಳಿ* ಇನ್ನೊಬ್ಬನಿಗೆ ನ್ಯಾಯ ಸಿಗದ ಹಾಗೆ ಮಾಡಬಾರದು. 3 ಬಡವನ ಸಮಸ್ಯೆಯನ್ನ ವಿಚಾರಣೆ ಮಾಡುವಾಗ ಅವನು ಬಡವ ಅನ್ನೋ ಕಾರಣಕ್ಕೆ ಅವನ ಪರವಾಗಿ ತೀರ್ಪು ಕೊಡಬಾರದು.+
4 ನಿಮ್ಮ ಶತ್ರುವಿನ ಹೋರಿ ಅಥವಾ ಕತ್ತೆ ತಪ್ಪಿಸ್ಕೊಂಡು ಹೋದಾಗ ಅದು ನಿಮಗೆ ಸಿಕ್ಕಿದ್ರೆ ನೀವು ಅದನ್ನ ಅವನಿಗೆ ಕೊಡಬೇಕು.+ 5 ನಿಮ್ಮನ್ನ ದ್ವೇಷಿಸೋ ವ್ಯಕ್ತಿಯೊಬ್ಬನ ಕತ್ತೆ ಹೊರೆ ಕೆಳಗೆ ಬಿದ್ದಿದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು. ಅದ್ರ ಮೇಲಿರೋ ಹೊರೆಯನ್ನ ಎತ್ತೋಕೆ ಆ ವ್ಯಕ್ತಿಗೆ ಸಹಾಯ ಮಾಡಬೇಕು.+
6 ನಿಮ್ಮಲ್ಲಿರೋ ಬಡವನ ಮೊಕದ್ದಮೆಯನ್ನ ವಿಚಾರಣೆ ಮಾಡುವಾಗ ನ್ಯಾಯವನ್ನ ತಿರುಚಿ ತೀರ್ಪು ಕೊಡಬಾರದು.+
7 ಸುಳ್ಳು ಆರೋಪದಿಂದ* ದೂರ ಇರಿ. ತಪ್ಪು ಮಾಡದ ನೀತಿವಂತನನ್ನ ಸಾಯಿಸಬೇಡಿ. ಯಾಕಂದ್ರೆ ಅಂಥ ಕೆಟ್ಟ ಕೆಲಸ ಮಾಡೋ ವ್ಯಕ್ತಿಯನ್ನ ನೀತಿವಂತ* ಅಂತ ನಾನು ಹೇಳಲ್ಲ.+
8 ನೀವು ಲಂಚ ತಗೊಳ್ಳಬಾರದು. ಯಾಕಂದ್ರೆ ಅದು ವಿವೇಚನೆ ಇರೋರ ಕಣ್ಣನ್ನ ಕುರುಡು ಮಾಡುತ್ತೆ, ನೀತಿವಂತರನ್ನ ಮಾತು ಬದಲಾಯಿಸೋ ತರ ಮಾಡುತ್ತೆ.+
9 ನೀವು ವಿದೇಶಿಯರಿಗೆ ತೊಂದ್ರೆ ಕೊಡಬಾರದು. ವಿದೇಶಿಯರ ಜೀವನ ಹೇಗಿರುತ್ತೆ* ಅಂತ ನಿಮಗೆ ಗೊತ್ತು. ನೀವೂ ಈಜಿಪ್ಟ್ ದೇಶದಲ್ಲಿ ವಿದೇಶಿಯರಾಗಿ ಇದ್ರಲ್ಲಾ.+
10 ನೀವು ಆರು ವರ್ಷ ನಿಮ್ಮ ಹೊಲದಲ್ಲಿ ಬೀಜ ಬಿತ್ತಿ ಬೆಳೆ ಕೂಡಿಸಬೇಕು.+ 11 ಆದ್ರೆ ಏಳನೇ ವರ್ಷ ಬೇಸಾಯ ಮಾಡದೆ ಹೊಲವನ್ನ ಹಾಗೇ ಬಿಟ್ಟುಬಿಡಬೇಕು. ಆ ವರ್ಷ ಹೊಲದಲ್ಲಿ ಅದರಷ್ಟಕ್ಕೆ ಬೆಳೆದದ್ದನ್ನ ನಿಮ್ಮ ಮಧ್ಯದಲ್ಲಿರೋ ಬಡವರು ತಿಂತಾರೆ. ಅವರು ಕೊಯ್ಯದೆಬಿಟ್ಟಿದ್ದನ್ನ ಕಾಡುಪ್ರಾಣಿಗಳು ತಿನ್ನುತ್ತೆ. ನಿಮ್ಮ ದ್ರಾಕ್ಷಿತೋಟ, ಆಲಿವ್ ಮರಗಳ ತೋಪಿನ ವಿಷ್ಯದಲ್ಲೂ ನೀವು ಹೀಗೇ ಮಾಡಬೇಕು.
12 ನೀವು ಆರು ದಿನ ಕೆಲಸ ಮಾಡಬೇಕು. ಆದ್ರೆ ಏಳನೇ ದಿನ ನೀವು ಯಾವ ಕೆಲಸನೂ ಮಾಡಬಾರದು. ಇದ್ರಿಂದ ನಿಮ್ಮ ಹೋರಿ, ಕತ್ತೆಗೆ ವಿಶ್ರಾಂತಿ ಸಿಗುತ್ತೆ. ನಿಮ್ಮ ದಾಸರು, ವಿದೇಶಿಯರು ವಿಶ್ರಾಂತಿ ಪಡೆದು ಚೈತನ್ಯ ಪಡಿತಾರೆ.+
13 ನಾನು ನಿಮಗೆ ಹೇಳಿದ್ದನ್ನೆಲ್ಲ ತಪ್ಪದೆ ಮಾಡಬೇಕು.+ ನೀವು ಬೇರೆ ದೇವರುಗಳ ಹೆಸರು ಎತ್ತಬಾರದು. ಆ ಹೆಸರುಗಳು ನಿಮ್ಮ ಬಾಯಲ್ಲಿ* ಬರಬಾರದು.+
14 ನೀವು ವರ್ಷದಲ್ಲಿ ಮೂರು ಸಲ ನನ್ನ ಘನತೆಗಾಗಿ ಹಬ್ಬ ಆಚರಿಸಬೇಕು.+ 15 ಹುಳಿ ಇಲ್ಲದ ರೊಟ್ಟಿ ಹಬ್ಬ ಆಚರಿಸಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಅಬೀಬ್* ತಿಂಗಳಲ್ಲಿ ನಾನು ಹೇಳಿರೋ ಸಮಯದಲ್ಲೇ ಏಳು ದಿನ ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ ಯಾಕಂದ್ರೆ ನೀವು ಈಜಿಪ್ಟಿಂದ ಹೊರಗೆ ಬಂದಿದ್ದು ಆ ಸಮಯದಲ್ಲೇ. ನಿಮ್ಮಲ್ಲಿ ಯಾರೂ ಕಾಣಿಕೆ ಇಲ್ಲದೆ ನನ್ನ ಮುಂದೆ ಬರಬಾರದು.+ 16 ನೀವು ಹೊಲದಲ್ಲಿ ಬೀಜಬಿತ್ತಿ ಶ್ರಮಪಟ್ಟು ಕೆಲಸಮಾಡಿ ವರ್ಷದ ಮೊದಲ ಬೆಳೆ ಕೊಯ್ದಾಗ ಕೊಯ್ಲಿನ ಹಬ್ಬ* ಆಚರಿಸಬೇಕು.+ ನಿಮ್ಮ ಶ್ರಮದ ಪ್ರತಿಫಲವಾಗಿ ಹೊಲದಿಂದ ವರ್ಷದ ಕೊನೇ ಬೆಳೆ ಕೂಡಿಸಿದಾಗ ಫಸಲು ಸಂಗ್ರಹ ಹಬ್ಬ* ಆಚರಿಸಬೇಕು.+ 17 ವರ್ಷಕ್ಕೆ ಮೂರು ಸಲ ನಿಮ್ಮಲ್ಲಿರೋ ಗಂಡಸರೆಲ್ಲ ನಿಜವಾದ ಒಡೆಯನಾದ ಯೆಹೋವನ ಮುಂದೆ ಬರಬೇಕು.+
18 ನೀವು ನನಗೆ ಬಲಿಯಾಗಿ ಕೊಟ್ಟ ಪ್ರಾಣಿಯ ರಕ್ತದ ಜೊತೆಗೆ ಹುಳಿ ಇರೋ ಯಾವುದನ್ನೂ ಅರ್ಪಿಸಬಾರದು. ನನ್ನ ಹಬ್ಬಗಳ ಸಮಯದಲ್ಲಿ ಅರ್ಪಿಸಿದ ಕೊಬ್ಬನ್ನ ಬೆಳಿಗ್ಗೆ ತನಕ ಇಡಬಾರದು.
19 ನಿಮ್ಮ ಹೊಲದ ಮೊದಲ ಬೆಳೆಯಲ್ಲಿ ತುಂಬ ಚೆನ್ನಾಗಿರೋದನ್ನ ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು.+
ನೀವು ಆಡುಮರಿಯ ಮಾಂಸವನ್ನ ಅದ್ರ ತಾಯಿ ಹಾಲಲ್ಲಿ ಬೇಯಿಸಬಾರದು.+
20 ದಾರಿಯಲ್ಲಿ ಕಾವಲಿದ್ದು ನಿಮ್ಮನ್ನ ಕಾಪಾಡೋಕೆ, ನಾನು ಸಿದ್ಧಮಾಡಿದ ಜಾಗಕ್ಕೆ ನಿಮ್ಮನ್ನ ಕರ್ಕೊಂಡು ಹೋಗೋಕೆ ನಿಮ್ಮ ಮುಂದೆ ಒಬ್ಬ ದೂತನನ್ನ+ ಕಳಿಸ್ತೀನಿ.+ 21 ಅವನು ಹೇಳೋದನ್ನ ಗಮನಕೊಟ್ಟು ಕೇಳಿ, ಅದೇ ತರ ಮಾಡಿ. ಅವನ ವಿರುದ್ಧ ದಂಗೆ ಏಳಬೇಡಿ. ದಂಗೆ ಎದ್ರೆ ಅವನು ನಿಮ್ಮನ್ನ ಕ್ಷಮಿಸಲ್ಲ.+ ಯಾಕಂದ್ರೆ ಅವನು ನನ್ನ ಹೆಸ್ರಲ್ಲಿ ಬರ್ತಾನೆ. 22 ನೀವು ಅವನ ಮಾತನ್ನ ತಪ್ಪದೆ ಕೇಳಿದ್ರೆ, ನಾನು ಹೇಳೋದನ್ನೆಲ್ಲ ಮಾಡಿದ್ರೆ ನಾನು ನಿಮ್ಮ ಶತ್ರುಗಳಿಗೆ ಶತ್ರು ಆಗಿರ್ತೀನಿ, ನಿಮ್ಮ ವಿರೋಧಿಗಳನ್ನ ವಿರೋಧಿಸ್ತೀನಿ. 23 ನನ್ನ ದೂತ ನಿಮ್ಮ ಮುಂದೆ ಹೋಗ್ತಾನೆ. ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು, ಯೆಬೂಸಿಯರು ಇರೋ ದೇಶಕ್ಕೆ ನಿಮ್ಮನ್ನ ಸೇರಿಸ್ತಾನೆ. ನಾನು ಅವರನ್ನೆಲ್ಲ ನಾಶ ಮಾಡ್ತೀನಿ.+ 24 ನೀವು ಅವರ ದೇವರುಗಳಿಗೆ ಅಡ್ಡಬೀಳಬಾರದು, ಬೇರೆಯವರ ಮಾತಿಗೆ ಮರುಳಾಗಿ ಅವುಗಳ ಸೇವೆ ಮಾಡಲೂಬಾರದು.+ ಅವರ ಪದ್ಧತಿಗಳನ್ನ ಪಾಲಿಸಬಾರದು. ನೀವು ಅವರ ಮೂರ್ತಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ ಪುಡಿಪುಡಿ ಮಾಡಬೇಕು.+ 25 ನೀವು ನಿಮ್ಮ ದೇವರಾಗಿರೋ ಯೆಹೋವನಾದ ನನ್ನ ಸೇವೆ ಮಾಡಬೇಕು.+ ಆಗ ನಾನು ನಿಮ್ಮನ್ನ ಆಶೀರ್ವದಿಸ್ತೀನಿ. ಇದ್ರಿಂದ ನಿಮಗೆ ಊಟಕ್ಕೂ ನೀರಿಗೂ ಏನೂ ಕಮ್ಮಿ ಆಗಲ್ಲ.+ ನಿಮ್ಮ ಕಾಯಿಲೆಗಳನ್ನ ತೆಗೆದುಹಾಕ್ತೀನಿ.*+ 26 ನಿಮ್ಮ ದೇಶದಲ್ಲಿರೋ ಸ್ತ್ರೀಯರಿಗೆ ಗರ್ಭಸ್ರಾವ ಆಗಲ್ಲ, ಅವರು ಬಂಜೆ ಆಗಿರಲ್ಲ.+ ಅಷ್ಟೇ ಅಲ್ಲ ನಿಮಗೆ ಪೂರ್ತಿ ಆಯಸ್ಸು ಕೊಡ್ತೀನಿ.
27 ನೀವು ಅಲ್ಲಿಗೆ ತಲುಪೋ ಮುಂಚೆನೇ ಅಲ್ಲಿನ ಜನ ನನಗೆ ಹೆದರೋ ತರ ಮಾಡ್ತೀನಿ.+ ನಿಮ್ಮ ವಿರುದ್ಧ ಹೋರಾಡೋ ಎಲ್ಲ ಜನ್ರನ್ನ ಗಲಿಬಿಲಿ ಮಾಡ್ತೀನಿ. ನಿಮ್ಮ ಶತ್ರುಗಳೆಲ್ಲ ಸೋತು* ಓಡಿಹೋಗೋ ತರ ಮಾಡ್ತೀನಿ.+ 28 ನೀವು ಅಲ್ಲಿ ತಲುಪೋ ಮುಂಚೆನೇ ನಿಮ್ಮ ಶತ್ರುಗಳು ಕಂಗಾಲಾಗಿ ಹೋಗೋ ತರ ಮಾಡ್ತೀನಿ.+ ಹಾಗಾಗಿ ಹಿವ್ವಿಯರು, ಕಾನಾನ್ಯರು, ಹಿತ್ತಿಯರು ನಿಮ್ಮ ಮುಂದೆ ನಿಲ್ಲದೆ ಓಡಿಹೋಗ್ತಾರೆ.+ 29 ಆದ್ರೆ ನಾನು ಅವರನ್ನೆಲ್ಲ ಒಂದೇ ವರ್ಷದಲ್ಲಿ ನಿಮ್ಮ ಎದುರಿಂದ ಓಡಿಸಲ್ಲ. ಹಾಗೆ ಓಡಿಸಿದ್ರೆ ದೇಶ ನಿರ್ಜನ ಆಗೋದ್ರಿಂದ ಕಾಡುಪ್ರಾಣಿಗಳು ಹೆಚ್ಚಾಗಿ, ನಿಮಗೆ ಹಾನಿ ಆಗುತ್ತೆ.+ 30 ನಿಮ್ಮ ವಂಶ ವೃದ್ಧಿಯಾಗಿ ನೀವು ದೇಶವನ್ನ ಸ್ವಾಧೀನ ಮಾಡ್ಕೊಳ್ಳೋ ತನಕ ನಾನು ಅವರನ್ನ ಸ್ವಲ್ಪಸ್ವಲ್ಪವಾಗಿ ನಿಮ್ಮ ಎದುರಿಂದ ಓಡಿಸ್ತೀನಿ.+
31 ನಿಮ್ಮ ದೇಶದ ಗಡಿಯನ್ನ ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ತನಕ, ಈ ಕಾಡಿಂದ ಮಹಾನದಿ* ತನಕ ವಿಸ್ತರಿಸ್ತೀನಿ.+ ಆ ದೇಶದ ಜನ್ರು ನಿಮ್ಮ ಕೈಯಲ್ಲಿ ಸೋಲೋ ತರ ಮಾಡ್ತೀನಿ. ನೀವು ಅವರನ್ನ ನಿಮ್ಮ ಎದುರಿಂದ ಓಡಿಸಿಬಿಡ್ತೀರ.+ 32 ನೀವು ಅವರ ಜೊತೆ, ಅವರ ದೇವರುಗಳ ಜೊತೆ ಒಪ್ಪಂದ ಮಾಡ್ಕೊಬಾರದು.+ 33 ಅವರು ನಿಮ್ಮ ದೇಶದಲ್ಲಿ ವಾಸ ಮಾಡಬಾರದು. ವಾಸ ಮಾಡಿದ್ರೆ ನೀವು ನನ್ನ ವಿರುದ್ಧ ಪಾಪ ಮಾಡೋ ತರ ನಿಮ್ಮನ್ನ ಪುಸಲಾಯಿಸ್ತಾರೆ. ನೀವು ಅವರ ದೇವರುಗಳ ಸೇವೆ ಮಾಡಿದ್ರೆ ಅದು ಖಂಡಿತ ನಿಮಗೆ ಉರ್ಲು ಆಗುತ್ತೆ.”+
24 ಆಮೇಲೆ ದೇವರು ಮೋಶೆಗೆ “ಆರೋನ, ನಾದಾಬ್, ಅಬೀಹೂ+ ಮತ್ತು ಇಸ್ರಾಯೇಲ್ಯರ 70 ಹಿರಿಯರನ್ನ ಕರ್ಕೊಂಡು ಬೆಟ್ಟ ಹತ್ತಿ ಬಾ. ನೀವು ದೂರದಲ್ಲೇ ಇದ್ದು ಯೆಹೋವನಾದ ನನಗೆ ಅಡ್ಡಬೀಳಬೇಕು. 2 ಯೆಹೋವನಾದ ನನ್ನ ಹತ್ರ ನೀನೊಬ್ಬನೇ ಬರಬೇಕು, ಉಳಿದವರು ಬರಬಾರದು. ಉಳಿದ ಜನ್ರು ಬೆಟ್ಟ ಹತ್ತಬಾರದು”+ ಅಂದನು.
3 ಆಮೇಲೆ ಮೋಶೆ ಜನ್ರ ಹತ್ರ ಬಂದು ಯೆಹೋವ ಹೇಳಿದ್ದನ್ನ, ಎಲ್ಲ ತೀರ್ಪುಗಳನ್ನ ಅವರಿಗೆ ತಿಳಿಸಿದ.+ ಆಗ ಜನ್ರೆಲ್ಲ ಒಟ್ಟಾಗಿ “ಯೆಹೋವ ಹೇಳಿದ್ದನ್ನೆಲ್ಲ ನಾವು ಮಾಡ್ತೀವಿ”+ ಅಂದ್ರು. 4 ಮೋಶೆ ಯೆಹೋವ ಹೇಳಿದ್ದನ್ನೆಲ್ಲ ಬರೆದಿಟ್ಟ.+ ಬೆಳಿಗ್ಗೆ ಬೇಗ ಎದ್ದು ಬೆಟ್ಟದ ಬುಡದಲ್ಲಿ ಒಂದು ಯಜ್ಞವೇದಿ ಕಟ್ಟಿ ಇಸ್ರಾಯೇಲ್ಯರ 12 ಕುಲಗಳಿಗೆ ಸರಿಯಾಗಿ 12 ಕಂಬಗಳನ್ನ ನಿಲ್ಲಿಸಿದ. 5 ಆಮೇಲೆ ಇಸ್ರಾಯೇಲ್ಯರ ಯುವಕರನ್ನ ಆರಿಸಿದ. ಅವರು ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಿದ್ರು, ಹೋರಿಗಳನ್ನ ಸಮಾಧಾನ ಬಲಿಗಳಾಗಿ+ ಅರ್ಪಿಸಿದ್ರು. 6 ಆಮೇಲೆ ಮೋಶೆ ಆ ಪ್ರಾಣಿಗಳ ರಕ್ತದಲ್ಲಿ ಅರ್ಧ ತಗೊಂಡು ಬೋಗುಣಿಗಳಲ್ಲಿ ಹಾಕಿದ. ಉಳಿದದ್ದನ್ನ ಯಜ್ಞವೇದಿ ಮೇಲೆ ಚಿಮಿಕಿಸಿದ. 7 ಆಮೇಲೆ ಅವನು ಒಪ್ಪಂದದ ಪುಸ್ತಕ ತಗೊಂಡು ಜನ್ರ ಮುಂದೆ ಗಟ್ಟಿಯಾಗಿ ಓದಿದ.+ ಆಗ ಜನ “ಯೆಹೋವ ಹೇಳಿದ್ದನ್ನೆಲ್ಲ ನಾವು ಮಾಡ್ತೀವಿ, ಆತನ ಆಜ್ಞೆಗಳನ್ನ ಪಾಲಿಸ್ತೀವಿ”+ ಅಂದ್ರು. 8 ಹಾಗಾಗಿ ಮೋಶೆ ರಕ್ತ ತಗೊಂಡು ಜನ್ರ ಮೇಲೆ ಚಿಮಿಕಿಸಿ+ “ಈ ರಕ್ತ ಯೆಹೋವ ನಿಮ್ಮ ಜೊತೆ ಮಾಡಿರೋ ಒಪ್ಪಂದವನ್ನ ಶುರುಮಾಡಿದೆ. ಈ ಒಪ್ಪಂದದಲ್ಲಿ ಇರೋ ಮಾತನ್ನೆಲ್ಲ ಪಾಲಿಸ್ತೀವಿ ಅಂತ ನೀವು ಒಪ್ಕೊಂಡಿದ್ದೀರ”+ ಅಂದ.
9 ಮೋಶೆ, ಆರೋನ, ನಾದಾಬ್, ಅಬೀಹೂ ಮತ್ತು ಇಸ್ರಾಯೇಲ್ಯರ 70 ಹಿರಿಯರು ಬೆಟ್ಟ ಹತ್ತಿ 10 ಇಸ್ರಾಯೇಲಿನ ದೇವರನ್ನ ನೋಡಿದ್ರು.+ ಆತನ ಕಾಲ ಕೆಳಗೆ ನೀಲಮಣಿಯ ನೆಲ ಇತ್ತು. ಅದು ಆಕಾಶದ ತರ ಶುಭ್ರವಾಗಿತ್ತು.+ 11 ಆತನು ಇಸ್ರಾಯೇಲ್ಯರ ಪ್ರಮುಖ ಪುರುಷರಿಗೆ+ ಹಾನಿ ಮಾಡಲಿಲ್ಲ. ಅವರು ತಿಂದು ಕುಡಿತಾ ಇರುವಾಗ ಒಂದು ದರ್ಶನದಲ್ಲಿ* ಸತ್ಯದೇವರನ್ನ ನೋಡಿದ್ರು.
12 ಆಗ ಯೆಹೋವ ಮೋಶೆಗೆ “ನೀನು ಬೆಟ್ಟ ಹತ್ತಿ ಬಂದು ನನ್ನ ಜೊತೆ ಇಲ್ಲೇ ಇರು. ಜನ್ರಿಗೆ ಕಲಿಸೋಕೆ ನಿಯಮಗಳನ್ನ, ಆಜ್ಞೆಗಳನ್ನ ನಾನು ಕಲ್ಲಿನ ಹಲಗೆಗಳ ಮೇಲೆ ಬರೆದು ಕೊಡ್ತೀನಿ”+ ಅಂದನು. 13 ಹಾಗಾಗಿ ಮೋಶೆ ತನ್ನ ಸಹಾಯಕ ಯೆಹೋಶುವನನ್ನ+ ಕರ್ಕೊಂಡು ಹೊರಟ. ಮೋಶೆ ಸತ್ಯ ದೇವರ ಬೆಟ್ಟ ಹತ್ತಿದ.+ 14 ಆದ್ರೆ ಅವನು ಹಿರಿಯರಿಗೆ “ನಾವು ವಾಪಸ್ ಬರೋ ತನಕ ನೀವು ಇಲ್ಲೇ ಇರಿ.+ ನಿಮ್ಮ ಜೊತೆ ಆರೋನ ಮತ್ತು ಹೂರ+ ಇರ್ತಾರೆ. ಯಾರಿಗಾದ್ರೂ ಮೊಕದ್ದಮೆ ಇದ್ರೆ ಅವರಿಬ್ರ ಹತ್ರ ಹೋಗಬಹುದು”+ ಅಂದ. 15 ಮೋಡ ಬೆಟ್ಟವನ್ನ ಆವರಿಸ್ತಿದ್ದಾಗ ಮೋಶೆ ಬೆಟ್ಟ ಹತ್ತಿದ.+
16 ಯೆಹೋವನ ಮಹಿಮೆ+ ಸಿನಾಯಿ ಬೆಟ್ಟದ+ ಮೇಲೆ ಇತ್ತು. ಆರು ದಿನ ಮೋಡ ಅದನ್ನ ಆವರಿಸಿತ್ತು. ಏಳನೇ ದಿನ ಆತನು ಮೋಡದ ಮಧ್ಯದಿಂದ ಮೋಶೆನ ಕರೆದನು. 17 ಬೆಟ್ಟವನ್ನೇ ನೋಡ್ತಿದ್ದ ಇಸ್ರಾಯೇಲ್ಯರಿಗೆ ತುದಿಯಲ್ಲಿ ಯೆಹೋವನ ಮಹಿಮೆ ಧಗಧಗನೆ ಉರಿಯೋ ಬೆಂಕಿ ತರ ಕಾಣಿಸ್ತು. 18 ಮೋಶೆ ಮೋಡದೊಳಗೆ ಹೋಗಿ ಬೆಟ್ಟ ಹತ್ತಿದ.+ ಅವನು 40 ದಿನ ಹಗಲೂರಾತ್ರಿ ಅಲ್ಲೇ ಇದ್ದ.+
25 ಆಮೇಲೆ ಯೆಹೋವ ಮೋಶೆಗೆ ಹೀಗಂದನು: 2 “ನನಗೋಸ್ಕರ ಕಾಣಿಕೆ ಕೊಡೋಕೆ ಇಸ್ರಾಯೇಲ್ಯರಿಗೆ ಹೇಳು. ಕಾಣಿಕೆ ನೀಡೋಕೆ ಯಾರ ಹೃದಯ ಪ್ರೇರಿಸುತ್ತೋ ಅವರಿಂದ ನನಗಾಗಿ ನೀನು ಕಾಣಿಕೆ ತಗೊಬೇಕು.+ 3 ಆ ಕಾಣಿಕೆಗಳು ಯಾವುದಂದ್ರೆ: ಚಿನ್ನ,+ ಬೆಳ್ಳಿ,+ ತಾಮ್ರ,+ 4 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ,* ಕಡುಗೆಂಪು ಬಣ್ಣದ ನೂಲು,* ಒಳ್ಳೇ ಗುಣಮಟ್ಟದ ನಾರುಬಟ್ಟೆ, ಆಡಿನ ಕೂದಲು, 5 ಕೆಂಪು ಬಣ್ಣ ಹಚ್ಚಿದ ಟಗರುಚರ್ಮ, ಸೀಲ್ ಪ್ರಾಣಿಯ* ಚರ್ಮ, ಅಕೇಶಿಯ ಮರ,*+ 6 ದೀಪಗಳಿಗೆ ಬೇಕಾದ ಎಣ್ಣೆ,+ ಅಭಿಷೇಕ ತೈಲಕ್ಕೆ,+ ಒಳ್ಳೇ ವಾಸನೆ ಇರೋ ಧೂಪಕ್ಕೆ+ ಬೇಕಾದ ಸುಗಂಧ ತೈಲ, 7 ಏಫೋದಿನಲ್ಲೂ*+ ಎದೆಪದಕದಲ್ಲೂ+ ಇಡೋಕೆ ಗೋಮೇದಕ ರತ್ನಗಳು, ಬೇರೆಬೇರೆ ವಿಧದ ರತ್ನಗಳು. 8 ಅವರು ನನಗೋಸ್ಕರ ಒಂದು ಆರಾಧನಾ ಸ್ಥಳ ಮಾಡಬೇಕು. ನಾನು ಅವರ ಮಧ್ಯ ವಾಸಿಸ್ತೀನಿ.+ 9 ಪವಿತ್ರ ಡೇರೆಯನ್ನ, ಅದ್ರ ಎಲ್ಲ ಸಾಮಗ್ರಿಗಳ ವಿನ್ಯಾಸ ತೋರಿಸ್ತೀನಿ. ಅದೇ ತರ ನೀನು ಅದನ್ನೆಲ್ಲಾ ಮಾಡಬೇಕು.+
10 ಅವರು ಅಕೇಶಿಯ ಮರದಿಂದ ಒಂದು ಮಂಜೂಷ ಮಾಡಬೇಕು. ಆ ಪೆಟ್ಟಿಗೆ ಎರಡೂವರೆ ಮೊಳ* ಉದ್ದ, ಒಂದೂವರೆ ಮೊಳ ಅಗಲ, ಒಂದೂವರೆ ಮೊಳ ಎತ್ತರ ಇರಬೇಕು.+ 11 ಒಳಗೂ ಹೊರಗೂ ಶುದ್ಧ ಚಿನ್ನದ ತಗಡುಗಳನ್ನ ಹೊದಿಸಬೇಕು.+ ಮೇಲ್ಭಾಗದ ಸುತ್ತ ಅಲಂಕಾರ ಇರೋ ಚಿನ್ನದ ಅಂಚು ಮಾಡಬೇಕು.+ 12 ಚಿನ್ನದ ನಾಲ್ಕು ಬಳೆಗಳನ್ನ ಅಚ್ಚಲ್ಲಿ ಮಾಡಿ ಮಂಜೂಷದ ನಾಲ್ಕು ಕಾಲುಗಳ ಮೇಲ್ಭಾಗದಲ್ಲಿ ಜೋಡಿಸಬೇಕು. ಎರಡೂ ಬದಿಗೆ ಎರಡೆರಡು ಬಳೆಗಳನ್ನ ಜೋಡಿಸಬೇಕು. 13 ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು.+ 14 ಆ ಕೋಲುಗಳನ್ನ ಮಂಜೂಷದ ಎರಡೂ ಬದಿಯಲ್ಲಿರೋ ಬಳೆಗಳ ಒಳಗೆ ಹಾಕಬೇಕು. ಇದ್ರಿಂದ ಮಂಜೂಷನ ಹೊತ್ಕೊಂಡು ಹೋಗೋಕೆ ಆಗುತ್ತೆ. 15 ಆ ಕೋಲುಗಳು ಮಂಜೂಷಕ್ಕಿರೋ ಬಳೆಗಳಲ್ಲೇ ಇರಬೇಕು. ಅವುಗಳಿಂದ ತೆಗಿಬಾರದು.+ 16 ಆಜ್ಞೆಗಳಿರೋ* ಕಲ್ಲಿನ ಹಲಗೆಗಳನ್ನ ಕೊಡ್ತೀನಿ. ನೀನು ಅವುಗಳನ್ನ ಮಂಜೂಷದ ಒಳಗೆ ಇಡಬೇಕು.+
17 ಮಂಜೂಷಕ್ಕಾಗಿ ಶುದ್ಧ ಚಿನ್ನದಿಂದ ಒಂದು ಮುಚ್ಚಳ ಮಾಡಬೇಕು. ಆ ಮುಚ್ಚಳ ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಇರಬೇಕು.+ 18 ಚಿನ್ನವನ್ನ ಸುತ್ತಿಗೆಯಿಂದ ಬಡಿದು ಕೆರೂಬಿಯರ ಎರಡು ಆಕೃತಿಗಳನ್ನ ಮಾಡಬೇಕು. ಅವುಗಳನ್ನ ಮುಚ್ಚಳದ ಮೇಲೆ ಎರಡು ಕೊನೆಗಳಲ್ಲಿ ಇಡಬೇಕು.+ 19 ಮುಚ್ಚಳದ ಒಂದು ಕೊನೆಯಲ್ಲಿ ಒಂದು, ಇನ್ನೊಂದು ಕೊನೆಯಲ್ಲಿ ಇನ್ನೊಂದು ಹೀಗೆ ಕೆರೂಬಿಯರ ಎರಡು ಆಕೃತಿಗಳನ್ನ ಇಡಬೇಕು. 20 ಆ ಕೆರೂಬಿಯರ ಎರಡೆರಡು ರೆಕ್ಕೆಗಳು ಬಿಚ್ಕೊಂಡಿದ್ದು ಮೇಲಕ್ಕೆ ಚಾಚ್ಕೊಂಡಿರಬೇಕು. ಅವರ ರೆಕ್ಕೆಗಳು ಮುಚ್ಚಳವನ್ನ ಆವರಿಸಿಕೊಂಡಿರಬೇಕು.+ ಕೆರೂಬಿಯರು ಎದುರುಬದುರಾಗಿ ಇರಬೇಕು. ಅವರ ಮುಖ ಮುಚ್ಚಳದ ಕಡೆಗೆ ಬಾಗಿರಬೇಕು. 21 ಆ ಮುಚ್ಚಳವನ್ನ+ ಮಂಜೂಷದ ಮೇಲೆ ಇಡಬೇಕು. ನಿನಗೆ ಕೊಡೋ ಕಲ್ಲಿನ ಹಲಗೆಗಳನ್ನ ಮಂಜೂಷದೊಳಗೆ ಇಡಬೇಕು. 22 ಪೆಟ್ಟಿಗೆಯ ಮುಚ್ಚಳದ ಮೇಲೆ ನಿನಗೆ ಕಾಣಿಸಿಕೊಳ್ತೀನಿ, ಅಲ್ಲಿಂದ ನಿನ್ನ ಜೊತೆ ಮಾತಾಡ್ತೀನಿ.+ ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದ ಎಲ್ಲ ಆಜ್ಞೆಗಳನ್ನ ನಾನು ಸಾಕ್ಷಿ ಮಂಜೂಷದ ಮೇಲಿರೋ ಕೆರೂಬಿಯರ ಮಧ್ಯದಿಂದ ನಿನಗೆ ಹೇಳ್ತೀನಿ.
23 ಅಕೇಶಿಯ ಮರದಿಂದ ಒಂದು ಮೇಜು+ ಸಹ ಮಾಡಬೇಕು. ಅದು ಎರಡು ಮೊಳ ಉದ್ದ, ಒಂದು ಮೊಳ ಅಗಲ, ಒಂದೂವರೆ ಮೊಳ ಎತ್ತರ+ ಇರಬೇಕು. 24 ಅದಕ್ಕೆ ಶುದ್ಧ ಚಿನ್ನದ ತಗಡುಗಳನ್ನ ಹೊದಿಸಬೇಕು. ಮೇಜಿನ ಸುತ್ತ ಚಿನ್ನದ ಅಂಚು ಮಾಡಬೇಕು. 25 ಆ ಅಂಚಿನ ಸುತ್ತ ಕೈಯಗಲದಷ್ಟು* ಇರೋ ಪಟ್ಟಿಯನ್ನ ಮಾಡಬೇಕು. ಆ ಪಟ್ಟಿಯ ಸುತ್ತ ಚಿನ್ನದ ಇನ್ನೊಂದು ಅಂಚು ಇರಬೇಕು. 26 ಮೇಜಿಗಾಗಿ ಚಿನ್ನದ ನಾಲ್ಕು ಬಳೆಗಳನ್ನ ಮಾಡಬೇಕು. ಮೇಜಿನ ನಾಲ್ಕು ಕಾಲುಗಳನ್ನ ಜೋಡಿಸಿರೋ ನಾಲ್ಕು ಮೂಲೆಗಳಲ್ಲಿ ಆ ಬಳೆಗಳನ್ನ ಹಾಕಬೇಕು. 27 ಆ ಬಳೆಗಳು ಪಟ್ಟಿ ಹತ್ರ ಇರಬೇಕು. ಮೇಜನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲುಗಳಿಗೆ ಆ ಬಳೆಗಳು ಹಿಡಿಗಳಾಗಿರುತ್ತೆ. 28 ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು. ಆ ಕೋಲುಗಳಿಂದಾನೇ ಮೇಜನ್ನ ಹೊತ್ಕೊಂಡು ಹೋಗಬೇಕು.
29 ಮೇಜಿನ ಮೇಲೆ ಇಡಬೇಕಾದ ತಟ್ಟೆ-ಲೋಟಗಳನ್ನ, ಪಾನ ಅರ್ಪಣೆ ಸುರಿಯೋಕೆ ಬೇಕಾದ ಹೂಜಿಗಳನ್ನ ಬೋಗುಣಿಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ 30 ನೀನು ಆ ಮೇಜಿನ ಮೇಲೆ ನನ್ನ ಮುಂದೆ ಯಾವಾಗ್ಲೂ ಅರ್ಪಣೆಯ ರೊಟ್ಟಿಗಳನ್ನ ಇಡಬೇಕು.+
31 ಶುದ್ಧ ಚಿನ್ನದಿಂದ ದೀಪಸ್ತಂಭ+ ಮಾಡಬೇಕು. ಚಿನ್ನವನ್ನ ಸುತ್ತಿಗೆಯಿಂದ ಬಡಿದು ಅದನ್ನ ಮಾಡಬೇಕು. ದೀಪಸ್ತಂಭದ ಬುಡ, ದಿಂಡು, ಕೊಂಬೆಗಳು, ಪುಷ್ಪಪಾತ್ರೆಗಳು, ಮೊಗ್ಗುಗಳು, ಹೂವುಗಳು ಇದನ್ನೆಲ್ಲ ಚಿನ್ನದ ಒಂದೇ ತುಂಡಿಂದ ಮಾಡಬೇಕು.+ 32 ದೀಪಸ್ತಂಭದ ದಿಂಡಿನ ಎರಡು ಬದಿಗಳಲ್ಲಿ ಒಟ್ಟು ಆರು ಕೊಂಬೆಗಳು ಇರಬೇಕು. ದಿಂಡಿನ ಒಂದು ಬದಿ ಮೂರು ಕೊಂಬೆ, ಇನ್ನೊಂದು ಬದಿ ಮೂರು ಕೊಂಬೆ. 33 ಒಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆಗಳು ಇರಬೇಕು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂವು ಇರಬೇಕು. ಇನ್ನೊಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆ ಇರಬೇಕು. ಒಂದೊಂದು ಪುಷ್ಪಪಾತ್ರೆ ನಂತ್ರ ಒಂದು ಮೊಗ್ಗು, ಒಂದು ಹೂ ಇರಬೇಕು. ದೀಪಸ್ತಂಭದ ಆರು ಕೊಂಬೆಗಳಲ್ಲೂ ಹೀಗೇ ಇರಬೇಕು. 34 ದೀಪಸ್ತಂಭದ ದಿಂಡಿನಲ್ಲಿ ಬಾದಾಮಿ ಹೂವಿನ ಆಕಾರದ ನಾಲ್ಕು ಪುಷ್ಪಪಾತ್ರೆ ಇರಬೇಕು. ಒಂದೊಂದು ಪುಷ್ಪಪಾತ್ರೆ ನಂತ್ರ ಒಂದು ಮೊಗ್ಗು, ಒಂದು ಹೂ ಇರಬೇಕು. 35 ಕವಲು ಒಡೆದಿರೋ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಮೊಗ್ಗು ಇರಬೇಕು. ದಿಂಡಿನಿಂದ ಕವಲು ಒಡೆದಿರೋ ಎಲ್ಲ ಆರು ಕೊಂಬೆಗಳ ಕೆಳಗೂ ಇದೇ ರೀತಿ ಇರಬೇಕು. 36 ಶುದ್ಧ ಚಿನ್ನದ ಒಂದೇ ತುಂಡಿಂದ ಮೊಗ್ಗುಗಳನ್ನ, ಕೊಂಬೆಗಳನ್ನ, ಇಡೀ ದೀಪಸ್ತಂಭವನ್ನ ಮಾಡಬೇಕು. ಚಿನ್ನವನ್ನ ಸುತ್ತಿಗೆಯಿಂದ ಬಡಿದು+ ಇದನ್ನೆಲ್ಲ ಮಾಡಬೇಕು. 37 ದೀಪಸ್ತಂಭಕ್ಕಾಗಿ ಏಳು ದೀಪಗಳನ್ನ ಮಾಡಬೇಕು. ದೀಪಗಳನ್ನ ಹಚ್ಚಿದಾಗ ಅದ್ರ ಮುಂದಿರೋ ಸ್ಥಳದಲ್ಲೆಲ್ಲ ಬೆಳಕು ಪ್ರಕಾಶಿಸುತ್ತೆ.+ 38 ಅದ್ರ ಚಿಮಟಗಳನ್ನ,* ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ 39 ದೀಪಸ್ತಂಭವನ್ನ, ಅದ್ರ ಎಲ್ಲ ಉಪಕರಣಗಳನ್ನ ಒಂದು ತಲಾಂತು* ಶುದ್ಧ ಚಿನ್ನದಿಂದ ಮಾಡಬೇಕು. 40 ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಮಾದರಿಯಲ್ಲೇ ನೀನು ಎಲ್ಲವನ್ನ ಜಾಗ್ರತೆಯಿಂದ ಮಾಡಬೇಕು.+
26 ಪವಿತ್ರ ಡೇರೆನ+ ಹತ್ತು ಬಟ್ಟೆಗಳಿಂದ ಮಾಡಬೇಕು. ಆ ಬಟ್ಟೆಗಳನ್ನ ಹೊಸೆದ ಒಳ್ಳೇ ಗುಣಮಟ್ಟದ ನಾರು, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲಿಂದ ಮಾಡಬೇಕು. ಆ ಬಟ್ಟೆಗಳ ಮೇಲೆ ಕೆರೂಬಿಯರ+ ಚಿತ್ರಗಳನ್ನ ಕಸೂತಿ ಹಾಕಿಸಬೇಕು.+ 2 ಪ್ರತಿಯೊಂದು ಬಟ್ಟೆ 28 ಮೊಳ* ಉದ್ದ, 4 ಮೊಳ ಅಗಲ ಇರಬೇಕು. ಎಲ್ಲ ಬಟ್ಟೆಗಳ ಅಳತೆ ಒಂದೇ ಆಗಿರಬೇಕು.+ 3 ಅವುಗಳಲ್ಲಿ ಐದು ಬಟ್ಟೆಗಳನ್ನ ಒಂದಕ್ಕೊಂದು ಸೇರಿಸಿ ಹೊಲಿಬೇಕು. ಆಗ ಅದು ಒಂದು ದೊಡ್ಡ ಬಟ್ಟೆ ಆಗುತ್ತೆ. ಇದೇ ತರ ಎರಡು ದೊಡ್ಡ ಬಟ್ಟೆಗಳನ್ನ ಮಾಡಬೇಕು. 4 ಆ ಎರಡನ್ನೂ ಜೋಡಿಸೋಕೆ ಅವುಗಳಲ್ಲಿ ಪ್ರತಿಯೊಂದ್ರ ಕೊನೆಯಲ್ಲೂ ನೀಲಿ ದಾರದಿಂದ ಕುಣಿಕೆಗಳನ್ನ ಹೊಲಿಬೇಕು. 5 ಒಂದು ಬಟ್ಟೆ ಕೊನೆಯಲ್ಲಿ 50 ಕುಣಿಕೆಗಳನ್ನ, ಇನ್ನೊಂದು ಬಟ್ಟೆ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಬೇಕು. ಆ ಎರಡು ಬಟ್ಟೆಗಳು ಜೋಡಣೆಯಾಗೋ ತರ ಅವುಗಳ ಕುಣಿಕೆಗಳನ್ನ ಎದುರುಬದುರಾಗಿ ಇಡಬೇಕು. 6 ಚಿನ್ನದ 50 ಕೊಂಡಿಗಳನ್ನ ಮಾಡಿ ಅವುಗಳಿಂದ ಆ ಎರಡು ದೊಡ್ಡ ಬಟ್ಟೆಗಳನ್ನ ಜೋಡಿಸಬೇಕು. ಆಗ ಪವಿತ್ರ ಡೇರೆಗೆ ಒಂದೇ ಬಟ್ಟೆ ಆಗುತ್ತೆ.+
7 ಪವಿತ್ರ ಡೇರೆಯ ಮೇಲೆ ಹೊದಿಸೋಕೆ ಆಡುಕೂದಲಿನ+ 11 ಬಟ್ಟೆಗಳನ್ನೂ ಮಾಡಬೇಕು.+ 8 ಪ್ರತಿಯೊಂದು ಬಟ್ಟೆ 30 ಮೊಳ ಉದ್ದ, 4 ಮೊಳ ಅಗಲ ಇರಬೇಕು. 11 ಬಟ್ಟೆಗಳ ಅಳತೆ ಒಂದೇ ಆಗಿರಬೇಕು. 9 ಅವುಗಳಲ್ಲಿ ಐದು ಬಟ್ಟೆಗಳನ್ನ ಒಂದಕ್ಕೊಂದು ಸೇರಿಸಿ ಹೊಲಿಬೇಕು. ಉಳಿದ ಆರು ಬಟ್ಟೆಗಳನ್ನ ಒಂದಕ್ಕೊಂದು ಸೇರಿಸಿ ಹೊಲಿಬೇಕು. ಆರನೇ ಬಟ್ಟೆಯನ್ನ ಡೇರೆಯ ಮುಂಭಾಗದಲ್ಲಿ ಮಡಚಬೇಕು. 10 ಒಂದು ದೊಡ್ಡ ಬಟ್ಟೆಯ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಬೇಕು. ಇನ್ನೊಂದು ದೊಡ್ಡ ಬಟ್ಟೆಗೆ, ಅದು ಮೊದಲನೇ ದೊಡ್ಡ ಬಟ್ಟೆ ಜೊತೆ ಜೋಡಣೆಯಾಗೋ ಅಂಚಿನಲ್ಲಿ 50 ಕುಣಿಕೆಗಳನ್ನ ಮಾಡಬೇಕು. 11 ತಾಮ್ರದ 50 ಕೊಂಡಿಗಳನ್ನ ಮಾಡಿಸಿ ಆ ಕೊಂಡಿಗಳನ್ನ ಕುಣಿಕೆಗಳಲ್ಲಿ ಸಿಕ್ಕಿಸಿ ಎರಡು ದೊಡ್ಡ ಬಟ್ಟೆಗಳನ್ನ ಕೂಡಿಸಬೇಕು. ಆಗ ಪವಿತ್ರ ಡೇರೆಗೆ ಒಂದೇ ಬಟ್ಟೆ ಆಗುತ್ತೆ. 12 ಹೆಚ್ಚಿರೋ ಬಟ್ಟೆನ ತೂಗಿಬಿಡಬೇಕು. ಪವಿತ್ರ ಡೇರೆಯ ಹಿಂಭಾಗದಲ್ಲಿ ಬಟ್ಟೆ 2 ಮೊಳ ಜಾಸ್ತಿ ಉದ್ದ ಇರುತ್ತೆ. ಅದನ್ನ ತೂಗಿಬಿಡಬೇಕು. 13 ಪವಿತ್ರ ಡೇರೆಯ ಎರಡು ಕಡೆಯಲ್ಲಿ ಬಟ್ಟೆ ಒಂದೊಂದು ಮೊಳ ಜಾಸ್ತಿ ಉದ್ದ ಇರುತ್ತೆ. ಅದನ್ನ ತೂಗಿಬಿಡಬೇಕು. ಇದ್ರಿಂದ ಎರಡೂ ಕಡೆ ಮುಚ್ಚೋಕಾಗುತ್ತೆ.
14 ಪವಿತ್ರ ಡೇರೆ ಮೇಲೆ ಹೊದಿಸೋಕೆ ನೀನು ಟಗರಿನ ಚರ್ಮದಿಂದ ಇನ್ನೊಂದು ಹೊದಿಕೆ ಮಾಡಬೇಕು. ಅದಕ್ಕೆ ಕೆಂಪು ಬಣ್ಣ ಹಾಕಿರಬೇಕು. ಆ ಕೆಂಪು ಬಟ್ಟೆ ಮೇಲೆ ಹಾಕೋಕೆ ಸೀಲ್ ಪ್ರಾಣಿ* ಚರ್ಮದ ಮತ್ತೊಂದು ಹೊದಿಕೆ ಮಾಡಬೇಕು.+
15 ನೀನು ಪವಿತ್ರ ಡೇರೆಗಾಗಿ ಅಕೇಶಿಯ ಮರದಿಂದ* ಚೌಕಟ್ಟುಗಳನ್ನ+ ಮಾಡಿ ನೆಟ್ಟಗೆ ನಿಲ್ಲಿಸಬೇಕು.+ 16 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದ, ಒಂದೂವರೆ ಮೊಳ ಅಗಲ ಇರಬೇಕು. 17 ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಕೂರಂಚುಗಳು* ಇರಬೇಕು. ಎಲ್ಲ ಕೂರಂಚುಗಳು ಒಂದೇ ಸಮ ಇರಬೇಕು. ನೀನು ಪವಿತ್ರ ಡೇರೆಯ ಎಲ್ಲ ಚೌಕಟ್ಟುಗಳನ್ನ ಹೀಗೇ ಮಾಡಬೇಕು. 18 ಪವಿತ್ರ ಡೇರೆಯ ದಕ್ಷಿಣ ಭಾಗಕ್ಕೆ 20 ಚೌಕಟ್ಟುಗಳನ್ನ ಮಾಡಬೇಕು.
19 ಆ 20 ಚೌಕಟ್ಟುಗಳ ಕೆಳಗೆ ಇಡೋಕೆ ಬೆಳ್ಳಿಯ 40 ಅಡಿಗಲ್ಲುಗಳನ್ನ+ ಮಾಡಬೇಕು. ಒಂದು ಚೌಕಟ್ಟಿನ ಕೆಳಗಿರೋ ಎರಡು ಕೂರಂಚುಗಳಿಗೆ ಎರಡು ಅಡಿಗಲ್ಲುಗಳು ಇರಬೇಕು. ನಂತ್ರ ಇರೋ ಪ್ರತಿಯೊಂದು ಚೌಕಟ್ಟಿನ ಎರಡೆರಡು ಕೂರಂಚುಗಳಿಗೂ ಎರಡೆರಡು ಅಡಿಗಲ್ಲು ಇರಬೇಕು.+ 20 ಪವಿತ್ರ ಡೇರೆಯ ಇನ್ನೊಂದು ಕಡೆಗೆ ಅಂದ್ರೆ ಉತ್ತರ ಭಾಗಕ್ಕೆ 20 ಚೌಕಟ್ಟುಗಳನ್ನ ಮಾಡಬೇಕು. 21 ಅವುಗಳಿಗಾಗಿ ಬೆಳ್ಳಿಯ 40 ಅಡಿಗಲ್ಲು ಮಾಡಬೇಕು. ಪ್ರತಿ ಚೌಕಟ್ಟಿನ ಕೆಳಗೆ ಎರಡೆರಡು ಅಡಿಗಲ್ಲು ಇರಬೇಕು. 22 ಪವಿತ್ರ ಡೇರೆಯ ಹಿಂಭಾಗಕ್ಕೆ ಅಂದ್ರೆ ಪಶ್ಚಿಮ ಭಾಗಕ್ಕೆ ಆರು ಚೌಕಟ್ಟುಗಳನ್ನ ಮಾಡಬೇಕು.+ 23 ಪವಿತ್ರ ಡೇರೆಯ ಹಿಂಭಾಗದ ಎರಡು ಮೂಲೆಗಳಲ್ಲಿ ಆಧಾರಕ್ಕಾಗಿ ಎರಡು ಚೌಕಟ್ಟುಗಳನ್ನ ಮಾಡಬೇಕು. 24 ಈ ಎರಡು ಚೌಕಟ್ಟುಗಳಲ್ಲಿ ಪ್ರತಿಯೊಂದಕ್ಕೂ ಕೆಳಗಿಂದ ಮೇಲಕ್ಕೆ ಎರಡು ಭಾಗ ಇರಬೇಕು. ಆ ಎರಡು ಭಾಗಗಳು ಮೊದಲ ಬಳೆ ಇರೋ ಕಡೆ ಕೂಡಬೇಕು. ಎರಡೂ ಚೌಕಟ್ಟುಗಳು ಹೀಗೇ ಇರಬೇಕು. ಅವು ಎರಡೂ ಮೂಲೆಗಳಿಗೆ ಆಧಾರವಾಗಿ ಇರುತ್ತೆ. 25 ಹೀಗೆ ಹಿಂಭಾಗದಲ್ಲಿ ಎಂಟು ಚೌಕಟ್ಟುಗಳು, ಅವುಗಳಿಗೆ ಬೆಳ್ಳಿಯ 16 ಅಡಿಗಲ್ಲು ಇರಬೇಕು. ಪ್ರತಿಯೊಂದು ಚೌಕಟ್ಟಿನ ಕೆಳಗೂ ಎರಡೆರಡು ಅಡಿಗಲ್ಲು ಇರಬೇಕು.
26 ಅಕೇಶಿಯ ಮರದಿಂದ ಕೋಲುಗಳನ್ನ ಮಾಡಬೇಕು. ಪವಿತ್ರ ಡೇರೆಯ ಒಂದು ಕಡೆಯಲ್ಲಿರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ+ ಐದು ಕೋಲು 27 ಮತ್ತು ಪವಿತ್ರ ಡೇರೆಯ ಇನ್ನೊಂದು ಕಡೆಯಲ್ಲಿರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲು ಇರಬೇಕು. ಅಷ್ಟೇ ಅಲ್ಲ ಪವಿತ್ರ ಡೇರೆಯ ಪಶ್ಚಿಮ ಭಾಗದಲ್ಲಿ ಅಂದ್ರೆ ಹಿಂಭಾಗದಲ್ಲಿ ಇರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲು ಇರಬೇಕು. 28 ಚೌಕಟ್ಟುಗಳ ಮಧ್ಯದಲ್ಲಿರೋ ಕೋಲು ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ ಇರಬೇಕು.
29 ನೀನು ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು.+ ಚೌಕಟ್ಟುಗಳಲ್ಲಿ ಚಿನ್ನದ ಬಳೆಗಳನ್ನ ಮಾಡಬೇಕು. ಆ ಬಳೆಗಳು ಕೋಲುಗಳಿಗೆ ಹಿಡಿಗಳಾಗಿ ಇರುತ್ತೆ. ಕೋಲುಗಳಿಗೂ ಚಿನ್ನದ ತಗಡುಗಳನ್ನ ಹೊದಿಸಬೇಕು. 30 ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ತರಾನೇ ನೀನು ಪವಿತ್ರ ಡೇರೆಯನ್ನ ಮಾಡಬೇಕು.+
31 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನಿಂದ ಒಂದು ಪರದೆ+ ಮಾಡಬೇಕು. ಅದ್ರ ಮೇಲೆ ಕೆರೂಬಿಯರ ಚಿತ್ರಗಳನ್ನ ಕಸೂತಿ ಹಾಕಿಸಬೇಕು. 32 ಅಕೇಶಿಯ ಮರದಿಂದ ನಾಲ್ಕು ಕಂಬ ಮಾಡಿ ಅದಕ್ಕೆ ಆ ಪರದೆ ತೂಗುಹಾಕಬೇಕು. ಕಂಬಗಳಿಗೆ ಚಿನ್ನದ ತಗಡನ್ನ ಹೊದಿಸಿ ಅವುಗಳಿಗೆ ಚಿನ್ನದ ಕೊಕ್ಕೆಗಳನ್ನ ಮಾಡಬೇಕು. ನಾಲ್ಕು ಕಂಬಗಳನ್ನ ಬೆಳ್ಳಿಯ ನಾಲ್ಕು ಅಡಿಗಲ್ಲುಗಳ ಮೇಲೆ ನಿಲ್ಲಿಸಬೇಕು. 33 ಡೇರೆಗೆ ಹೊದಿಸಲಾದ ಬಟ್ಟೆಗಳ ಕೊಂಡಿಗಳ ಕೆಳಗೆ ಆ ಪರದೆ ತೂಗುಹಾಕಬೇಕು. ಆ ಪರದೆ ಪವಿತ್ರ+ ಸ್ಥಳವನ್ನ ಮತ್ತು ಅತಿ ಪವಿತ್ರ+ ಸ್ಥಳವನ್ನ ಬೇರೆ ಬೇರೆ ಮಾಡುತ್ತೆ. ಸಾಕ್ಷಿ ಮಂಜೂಷವನ್ನ+ ಪರದೆಯೊಳಗೆ ತರಬೇಕು. 34 ಅತಿ ಪವಿತ್ರ ಸ್ಥಳದಲ್ಲಿರೋ ಸಾಕ್ಷಿ ಮಂಜೂಷದ ಮೇಲೆ ಮುಚ್ಚಳವನ್ನ ಇಡಬೇಕು.
35 ಪರದೆ ಹೊರಗೆ ಅಂದ್ರೆ ಪವಿತ್ರ ಡೇರೆಯ ಉತ್ತರ ಭಾಗಕ್ಕೆ ಮೇಜನ್ನ ಇಡಬೇಕು. ಅದ್ರ ಮುಂದೆ ಅಂದ್ರೆ ಪವಿತ್ರ ಡೇರೆಯ ದಕ್ಷಿಣ ಭಾಗಕ್ಕೆ ದೀಪಸ್ತಂಭ+ ಇಡಬೇಕು. 36 ಡೇರೆಯ ಬಾಗಿಲಿಗೆ ಹಾಕೋಕೆ ಒಂದು ಪರದೆ ಮಾಡಬೇಕು. ಈ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರು ಇದನ್ನೆಲ್ಲ ಒಟ್ಟಿಗೆ ನೇಯ್ದು ಮಾಡಬೇಕು.+ 37 ಆ ಪರದೆಯನ್ನ ತೂಗುಹಾಕೋಕೆ ಅಕೇಶಿಯ ಮರದಿಂದ ಐದು ಕಂಬ ಮಾಡಬೇಕು. ಆ ಕಂಬಗಳಿಗೆ ಚಿನ್ನದ ತಗಡನ್ನ ಹೊದಿಸಿ ಅವುಗಳಿಗೆ ಚಿನ್ನದ ಕೊಕ್ಕೆ ಮಾಡಬೇಕು. ಆ ಕಂಬಗಳನ್ನ ನಿಲ್ಲಿಸೋಕೆ ಅಚ್ಚಲ್ಲಿ ತಾಮ್ರ ಹೊಯ್ದು ಐದು ಅಡಿಗಲ್ಲುಗಳನ್ನ ಮಾಡಬೇಕು.
27 ಅಕೇಶಿಯ ಮರದಿಂದ* ಯಜ್ಞವೇದಿಯನ್ನ ಮಾಡಬೇಕು.+ ಅದು ಚೌಕಾಕಾರ ಆಗಿರಬೇಕು, ಐದು ಮೊಳ* ಉದ್ದ, ಐದು ಮೊಳ ಅಗಲ, ಮೂರು ಮೊಳ ಎತ್ತರ ಇರಬೇಕು.+ 2 ಅದ್ರ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬನ್ನ+ ಮಾಡಬೇಕು. ಯಜ್ಞವೇದಿ ಮತ್ತು ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು. ಯಜ್ಞವೇದಿಗೆ ತಾಮ್ರದ ತಗಡುಗಳನ್ನ ಹೊದಿಸಬೇಕು.+ 3 ಯಜ್ಞವೇದಿಯ ಬೂದಿ* ತಗೊಂಡು ಹೋಗೋಕೆ ಬಕೀಟುಗಳನ್ನ ಮಾಡಬೇಕು. ಅಷ್ಟೇ ಅಲ್ಲ ಸಲಿಕೆಗಳನ್ನ, ಬೋಗುಣಿಗಳನ್ನ, ಕವಲುಗೋಲುಗಳನ್ನ, ಕೆಂಡ ಹಾಕೋ ಪಾತ್ರೆಗಳನ್ನ ಮಾಡಬೇಕು. ಯಜ್ಞವೇದಿಯ ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಬೇಕು.+ 4 ಜೊತೆಗೆ ಯಜ್ಞವೇದಿಗಾಗಿ ತಾಮ್ರದ ಜಾಲರಿ ಮಾಡಬೇಕು. ಜಾಲರಿಯ ನಾಲ್ಕು ಮೂಲೆಗಳಲ್ಲಿ ತಾಮ್ರದ ನಾಲ್ಕು ಬಳೆಗಳನ್ನ ಮಾಡಬೇಕು. 5 ಆ ಜಾಲರಿನ ಯಜ್ಞವೇದಿ ಒಳಗೆ ಅಂದ್ರೆ ಪಟ್ಟಿಯ ಕೆಳಗೆ ಯಜ್ಞವೇದಿಯ ಮಧ್ಯದಲ್ಲಿ ಇಡಬೇಕು. 6 ಯಜ್ಞವೇದಿಗಾಗಿ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ತಾಮ್ರದ ತಗಡನ್ನ ಹೊದಿಸಬೇಕು. 7 ಆ ಕೋಲುಗಳನ್ನ ಯಜ್ಞವೇದಿಯ ಬಳೆಗಳಲ್ಲಿ ಹಾಕಬೇಕು. ಆಗ ಯಜ್ಞವೇದಿಯ ಎರಡೂ ಕಡೆಗಳಲ್ಲಿ ಕೋಲುಗಳು ಇರೋದ್ರಿಂದ ಹೊತ್ಕೊಂಡು ಹೋಗಕ್ಕಾಗುತ್ತೆ.+ 8 ಯಜ್ಞವೇದಿನ ಮರದ ಹಲಗೆಗಳಿಂದ ಪೆಟ್ಟಿಗೆ ಆಕಾರದಲ್ಲಿ ಮಾಡಬೇಕು. ಅದು ಮೇಲೆ ಕೆಳಗೆ ತೆರೆದಿರಬೇಕು. ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಹಾಗೇ ಅದನ್ನ ಮಾಡಬೇಕು.+
9 ಪವಿತ್ರ ಡೇರೆಗೆ ಅಂಗಳವನ್ನ+ ಮಾಡಬೇಕು. ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ತಯಾರಿಸಿದ ಪರದೆಗಳನ್ನ ನಾಲ್ಕೂ ಕಡೆಗಳಲ್ಲಿ ಹಾಕಿ ಆ ಅಂಗಳವನ್ನ ಮಾಡಬೇಕು. ಅಂಗಳದ ದಕ್ಷಿಣಕ್ಕೆ 100 ಮೊಳ ಉದ್ದದ ಪರದೆ ತೂಗಿಬಿಡಬೇಕು.+ 10 ಅದಕ್ಕೆ 20 ಕಂಬ, ಆ ಕಂಬಗಳಿಗೆ 20 ತಾಮ್ರದ ಅಡಿಗಲ್ಲು ಇರಬೇಕು. ಕಂಬಗಳ ಕೊಕ್ಕೆಗಳನ್ನ, ಅವುಗಳ ಕಟ್ಟುಗಳನ್ನ* ಬೆಳ್ಳಿಯಿಂದ ಮಾಡಬೇಕು. 11 ಅಂಗಳದ ಉತ್ತರಕ್ಕೂ 100 ಮೊಳ ಉದ್ದದ ಪರದೆಯನ್ನ ತೂಗಿಬಿಡಬೇಕು. ಅದಕ್ಕೆ 20 ಕಂಬಗಳು ಆ ಕಂಬಗಳಿಗೆ 20 ತಾಮ್ರದ ಅಡಿಗಲ್ಲು ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಕ್ಕೆಗಳು, ಕಟ್ಟುಗಳು* ಇರಬೇಕು. 12 ಪಶ್ಚಿಮ ಭಾಗದಲ್ಲಿ 50 ಮೊಳ ಉದ್ದದ ಪರದೆಯನ್ನ ತೂಗಿಬಿಡಬೇಕು. ಅದಕ್ಕಾಗಿ ಹತ್ತು ಕಂಬಗಳನ್ನ, ಹತ್ತು ಅಡಿಗಲ್ಲುಗಳನ್ನ ಮಾಡಬೇಕು. 13 ಪೂರ್ವದ ಅಂಗಳ 50 ಮೊಳ ಅಗಲ ಇರಬೇಕು. 14 ಮುಖ್ಯ ಬಾಗಿಲಿನ ಬಲಕ್ಕೆ 15 ಮೊಳ ಉದ್ದದ ಪರದೆ ತೂಗಿಬಿಡಬೇಕು. ಅದಕ್ಕಾಗಿ ಮೂರು ಕಂಬಗಳನ್ನ, ಮೂರು ಅಡಿಗಲ್ಲುಗಳನ್ನ ಮಾಡಬೇಕು.+ 15 ಬಾಗಿಲಿನ ಎಡಕ್ಕೆ 15 ಮೊಳ ಉದ್ದದ ಪರದೆ ತೂಗಿಬಿಡಬೇಕು. ಅದಕ್ಕಾಗಿ ಮೂರು ಕಂಬಗಳನ್ನ, ಮೂರು ಅಡಿಗಲ್ಲುಗಳನ್ನ ಮಾಡಬೇಕು.
16 ಅಂಗಳದ ಬಾಗಿಲಿಗೆ 20 ಮೊಳ ಉದ್ದದ ಒಂದು ಪರದೆ ಹಾಕಬೇಕು. ಆ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರು ಇವುಗಳನ್ನೆಲ್ಲ ಒಟ್ಟಿಗೆ ನೇಯ್ದು ಮಾಡಬೇಕು.+ ನಾಲ್ಕು ಕಂಬಗಳನ್ನ ಅವುಗಳಿಗೆ ನಾಲ್ಕು ಅಡಿಗಲ್ಲುಗಳನ್ನ ಸಹ ಮಾಡಬೇಕು.+ 17 ಅಂಗಳದ ಸುತ್ತ ಇರೋ ಎಲ್ಲ ಕಂಬಗಳಿಗೆ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಕ್ಕೆಗಳು ಇರಬೇಕು. ಆದ್ರೆ ಕಂಬಗಳ ಅಡಿಗಲ್ಲುಗಳು ತಾಮ್ರದ್ದಾಗಿರಬೇಕು.+ 18 ಅಂಗಳ 100 ಮೊಳ ಉದ್ದ,+ 50 ಮೊಳ ಅಗಲ, ಅಂಗಳದ ಸುತ್ತ ಇರೋ ಪರದೆ 5 ಮೊಳ ಎತ್ತರ ಇರಬೇಕು. ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ಪರದೆ ಮಾಡಬೇಕು. ಅಂಗಳದಲ್ಲಿರೋ ಅಡಿಗಲ್ಲುಗಳು ತಾಮ್ರದ್ದಾಗಿರಬೇಕು. 19 ಪವಿತ್ರ ಡೇರೆಯಲ್ಲಿನ ಕೆಲಸಕ್ಕಾಗಿ ಬಳಸೋ ಎಲ್ಲ ಉಪಕರಣಗಳನ್ನ, ವಸ್ತುಗಳನ್ನ, ಡೇರೆಯ ಗೂಟಗಳನ್ನ, ಅಂಗಳದ ಎಲ್ಲ ಗೂಟಗಳನ್ನ ತಾಮ್ರದಿಂದ ಮಾಡಬೇಕು.+
20 ದೀಪಗಳು ಯಾವಾಗ್ಲೂ ಉರಿತಾ ಇರೋಕೆ ಅವುಗಳಿಗಾಗಿ ಶುದ್ಧ ಆಲಿವ್ ಎಣ್ಣೆನ ತಂದುಕೊಡಬೇಕು ಅಂತ ನೀನು ಇಸ್ರಾಯೇಲ್ಯರಿಗೆ ಆಜ್ಞಾಪಿಸಬೇಕು.+ 21 ದೇವದರ್ಶನ ಡೇರೆಯಲ್ಲಿ ಸಾಕ್ಷಿ ಮಂಜೂಷದ+ ಹತ್ರ ಇರೋ ಪರದೆಯ ಹೊರಗೆ ದೀಪಗಳು ಸಂಜೆಯಿಂದ ಬೆಳಿಗ್ಗೆ ತನಕ ಯೆಹೋವನ ಮುಂದೆ ಉರಿತಾ ಇರೋ ಹಾಗೆ ಆರೋನ, ಅವನ ಮಕ್ಕಳು ಏರ್ಪಾಡು ಮಾಡಬೇಕು.+ ಇದು ಇಸ್ರಾಯೇಲ್ಯರು ಯಾವಾಗ್ಲೂ ಪಾಲಿಸಬೇಕಾದ ಶಾಶ್ವತ ನಿಯಮ.+
28 ಪುರೋಹಿತರಾಗಿ* ಸೇವೆ ಮಾಡೋಕೆ ನಿನ್ನ ಅಣ್ಣ ಆರೋನನನ್ನ,+ ಅವನ ಮಕ್ಕಳಾದ+ ನಾದಾಬ್, ಅಬೀಹೂ,+ ಎಲ್ಲಾಜಾರ್, ಈತಾಮಾರನನ್ನ+ ನನ್ನ ಮುಂದೆ ಬರೋಕೆ ಹೇಳಬೇಕು.+ 2 ನೀನು ಆರೋನನಿಗಾಗಿ ಪವಿತ್ರ ಬಟ್ಟೆಗಳನ್ನ ಮಾಡಬೇಕು. ಆ ಬಟ್ಟೆಗಳು ಅವನಿಗೆ ಗೌರವ, ಸೌಂದರ್ಯ ನೀಡುತ್ತೆ.+ 3 ನಾನು ಯಾರಿಗೆಲ್ಲ ವಿವೇಕ ಕೊಟ್ಟಿದ್ದೀನೋ ಆ ಎಲ್ಲ ನಿಪುಣ ವ್ಯಕ್ತಿಗಳ ಜೊತೆ+ ಮಾತಾಡು, ಆರೋನನ ಬಟ್ಟೆಗಳನ್ನ ತಯಾರಿಸೋಕೆ ಅವರಿಗೆ ಹೇಳು. ಪುರೋಹಿತನಾಗಿ ನನ್ನ ಸೇವೆ ಮಾಡೋಕೆ ಆರೋನನನ್ನ ಪವಿತ್ರ ಮಾಡಲಾಗಿದೆ ಅಂತ ಆ ಬಟ್ಟೆಗಳು ತೋರಿಸುತ್ತೆ.
4 ಆ ನಿಪುಣ ಕೆಲಸಗಾರರು ಮಾಡಬೇಕಾದ ಬಟ್ಟೆಗಳು ಯಾವುದಂದ್ರೆ ಒಂದು ಎದೆಪದಕ,+ ಒಂದು ಏಫೋದ್,+ ತೋಳಿಲ್ಲದ ಒಂದು ಅಂಗಿ,+ ಚೌಕಗಳಿರೋ ಒಂದು ಉದ್ದ ಅಂಗಿ, ಒಂದು ವಿಶೇಷ ಪೇಟ,+ ಒಂದು ನಡುಪಟ್ಟಿ.+ ನಿನ್ನ ಅಣ್ಣ ಆರೋನ, ಅವನ ಮಕ್ಕಳು ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಅವರಿಗಾಗಿ ಈ ಪವಿತ್ರ ಬಟ್ಟೆಗಳನ್ನ ತಯಾರಿಸಬೇಕು. 5 ಇವುಗಳನ್ನ ನಿಪುಣ ಕೆಲಸಗಾರರು ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.
6 ಅವರು ಏಫೋದನ್ನ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು. ಕಸೂತಿ ಹಾಕಿ ಅದನ್ನ ಮಾಡಬೇಕು.+ 7 ಏಫೋದಿನ ಎರಡು ಭಾಗಗಳ ಮೇಲಿನ ಅಂಚುಗಳನ್ನ ಹೆಗಲ ಮೇಲೆ ಜೋಡಿಸಬೇಕು. 8 ಏಫೋದನ್ನ ಭದ್ರವಾಗಿ ಕಟ್ಟೋಕೆ ಅದಕ್ಕೆ ಸೊಂಟಪಟ್ಟಿ*+ ಹೊಲಿಬೇಕು. ಆ ಪಟ್ಟಿನೂ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲಿಂದ, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.
9 ನೀನು ಎರಡು ಗೋಮೇದಕ ರತ್ನಗಳನ್ನ+ ತಗೊಂಡು ಅವುಗಳ ಮೇಲೆ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳನ್ನ ಕೆತ್ತಬೇಕು.+ 10 ಒಂದು ರತ್ನದ ಮೇಲೆ ಆರು ಜನ್ರ ಹೆಸರುಗಳನ್ನ, ಇನ್ನೊಂದು ರತ್ನದ ಮೇಲೆ ಇನ್ನು ಆರು ಜನ್ರ ಹೆಸರುಗಳನ್ನ ಅವರವರ ಜನನ ಕ್ರಮದ ಪ್ರಕಾರ ಕೆತ್ತಬೇಕು. 11 ಕಲ್ಲು ಕೆತ್ತನೆಗಾರ ಮುದ್ರೆಯನ್ನ ಕೆತ್ತೋ ತರ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳನ್ನ ಆ ಎರಡು ರತ್ನಗಳ ಮೇಲೆ ಕೆತ್ತಬೇಕು.+ ಆ ರತ್ನಗಳನ್ನ ಚಿನ್ನದ ಕುಂದಣಗಳಲ್ಲಿ ಕೂರಿಸಬೇಕು. 12 ಆ ಎರಡು ರತ್ನಗಳನ್ನ ಏಫೋದಿನ ಹೆಗಲಪಟ್ಟಿಗಳ ಮೇಲೆ ಇಡಬೇಕು. ಅವು ಇಸ್ರಾಯೇಲನ ಗಂಡುಮಕ್ಕಳಿಗೆ ಸ್ಮಾರಕ ರತ್ನಗಳಾಗಿ ಇರುತ್ತೆ.+ ಆರೋನ ಯೆಹೋವನ ಮುಂದೆ ಬರುವಾಗ ಆ ಏಫೋದನ್ನ ಹಾಕಬೇಕು. ಯಾಕಂದ್ರೆ ಎರಡು ಹೆಗಲಪಟ್ಟಿಗಳ ಮೇಲಿರೋ ಆ ಹೆಸರುಗಳು ದೇವರ ಮುಂದೆ ನೆನಪಿಗಾಗಿ ಇರುತ್ತೆ. 13 ನೀನು ಶುದ್ಧ ಚಿನ್ನದಿಂದ ಕುಂದಣಗಳನ್ನ ಮಾಡಬೇಕು. 14 ಹಗ್ಗದ ತರ ನೇಯ್ದಿರೋ ಎರಡು ಸರಪಣಿಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ ಆ ಸರಪಣಿಗಳನ್ನ ಕುಂದಣಗಳಿಗೆ ಕೂಡಿಸಬೇಕು.+
15 ನೀನು ಕಸೂತಿ ಕೆಲಸಗಾರನಿಂದ ದೇವನಿರ್ಣಯದ ಎದೆಪದಕ*+ ಮಾಡಿಸಬೇಕು. ಇದನ್ನ ಏಫೋದಿನ ತರಾನೇ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.+ 16 ಎದೆಪದಕ ಮಧ್ಯದಲ್ಲಿ ಮಡಚಿದಾಗ ಚೌಕಾಕಾರ ಆಗಿರಬೇಕು. ಅದು ಒಂದು ಗೇಣು* ಉದ್ದ, ಒಂದು ಗೇಣು ಅಗಲ ಇರಬೇಕು. 17 ನೀನು ಅದ್ರಲ್ಲಿ ರತ್ನಗಳನ್ನ ನಾಲ್ಕು ಸಾಲಾಗಿ ಕೂರಿಸಬೇಕು. ಮೊದಲನೇ ಸಾಲಲ್ಲಿ ಮಾಣಿಕ್ಯ, ಪುಷ್ಯರಾಗ, ಪಚ್ಚೆ, 18 ಎರಡನೇ ಸಾಲಲ್ಲಿ ವೈಢೂರ್ಯ, ನೀಲಮಣಿ, ಸೂರ್ಯಕಾಂತ ಶಿಲೆ, 19 ಮೂರನೇ ಸಾಲಲ್ಲಿ ಲೆಷೆಮ್ ರತ್ನ,* ಅಗೇಟು, ಪದ್ಮರಾಗ, 20 ನಾಲ್ಕನೇ ಸಾಲಲ್ಲಿ ಕ್ರಿಸಲೈಟ್ ರತ್ನ, ಗೋಮೇದಕ ರತ್ನ, ಜೇಡ್ ರತ್ನ ಇರಬೇಕು. ಅವುಗಳನ್ನ ಚಿನ್ನದ ಕುಂದಣಗಳಲ್ಲಿ ಕೂರಿಸಬೇಕು. 21 ಹೀಗೆ ಇಸ್ರಾಯೇಲನ 12 ಗಂಡುಮಕ್ಕಳಿಗೆ ಸರಿಯಾಗಿ 12 ರತ್ನ ಇರುತ್ತೆ. ಪ್ರತಿಯೊಂದು ರತ್ನದ ಮೇಲೆ ಒಬ್ಬೊಬ್ಬನ ಹೆಸ್ರನ್ನ ಮುದ್ರೆ ಕೆತ್ತಬೇಕು. ಒಬ್ಬೊಬ್ಬನ ಹೆಸ್ರು 12 ಕುಲಗಳಲ್ಲಿ ಒಂದೊಂದು ಕುಲವನ್ನ ಸೂಚಿಸುತ್ತೆ.
22 ಹಗ್ಗದ ತರ ನೇಯ್ದಿರೋ ಸರಪಣಿಗಳನ್ನ ನೀನು ಶುದ್ಧ ಚಿನ್ನದಿಂದ ಮಾಡಿ ಎದೆಪದಕಕ್ಕೆ ಜೋಡಿಸಬೇಕು.+ 23 ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಮೇಲ್ಭಾಗದ ಎರಡು ಮೂಲೆಗಳಿಗೆ ಜೋಡಿಸಬೇಕು. 24 ಚಿನ್ನದ ಎರಡು ಹಗ್ಗಗಳನ್ನ ಎದೆಪದಕದ ಮೇಲ್ಭಾಗದ ಮೂಲೆಗಳಲ್ಲಿರೋ ಎರಡು ಉಂಗುರಗಳಿಗೆ ಸಿಕ್ಕಿಸಬೇಕು. 25 ನೀನು ಆ ಎರಡು ಹಗ್ಗಗಳ ಎರಡು ತುದಿಗಳನ್ನ ಎರಡು ಕುಂದಣಗಳಿಗೆ ಸಿಕ್ಕಿಸಬೇಕು, ಅವುಗಳನ್ನ ಏಫೋದಿನ ಹೆಗಲಪಟ್ಟಿಗಳಿಗೆ ಮುಂಭಾಗದಲ್ಲಿ ಜೋಡಿಸಬೇಕು. 26 ನೀನು ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಒಳಭಾಗದ ಅಂದ್ರೆ ಏಫೋದಿಗೆ ತಾಗಿರೋ ಭಾಗದ ಕೆಳಗಿನ ಎರಡು ಮೂಲೆಗಳಲ್ಲಿ ಹಾಕಬೇಕು.+ 27 ಇನ್ನು ಎರಡು ಚಿನ್ನದ ಉಂಗುರಗಳನ್ನ ಮಾಡಬೇಕು. ಅವುಗಳನ್ನ ಏಫೋದಿನ ಮುಂದೆ ಅಂದ್ರೆ ಎರಡು ಹೆಗಲಪಟ್ಟಿಗಳ ಕೆಳಗೆ, ಸೊಂಟಪಟ್ಟಿ* ಮೇಲೆ, ಅದು ಏಫೋದಿಗೆ ಸೇರೋ ಸ್ಥಳದ ಹತ್ರ ಹಾಕಬೇಕು.+ 28 ಎದೆಪದಕದ ಒಳಭಾಗದ ಉಂಗುರಗಳಿಗೆ ನೀಲಿ ಹಗ್ಗವನ್ನ ಹಾಕಿ ಏಫೋದಿನ ಉಂಗುರಗಳಿಗೆ ಕಟ್ಟಬೇಕು. ಇದ್ರಿಂದ ಎದೆಪದಕ ಏಫೋದಿನ ಮೇಲೆ, ಸೊಂಟಪಟ್ಟಿಯ* ಮೇಲ್ಭಾಗದಲ್ಲಿ ಬಿಗಿಯಾಗಿ ಇರುತ್ತೆ.
29 ಆರೋನ ಪವಿತ್ರ ಸ್ಥಳಕ್ಕೆ ಬರುವಾಗೆಲ್ಲ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳು ಬರೆದಿರೋ ದೇವನಿರ್ಣಯದ ಎದೆಪದಕವನ್ನ ತನ್ನ ಎದೆಯ* ಮೇಲೆ ಹಾಕೊಂಡು ಬರಬೇಕು. ಈ ಪದಕ ಯೆಹೋವನ ಮುಂದೆ ಯಾವಾಗ್ಲೂ ನೆನಪಿಗಾಗಿ ಇರುತ್ತೆ. 30 ನೀನು ಊರೀಮ್ ಮತ್ತು ತುಮ್ಮೀಮ್*+ ಅನ್ನು ದೇವನಿರ್ಣಯದ ಎದೆಪದಕದೊಳಗೆ ಇಡಬೇಕು. ಇಸ್ರಾಯೇಲ್ಯರಿಗೆ ಹೇಳಬೇಕಾದ ಯೆಹೋವನ ತೀರ್ಪುಗಳನ್ನ ತಿಳ್ಕೊಳ್ಳೋಕೆ ಸಹಾಯ ಆಗೋ ಆ ಸಾಧನಗಳನ್ನ ಆರೋನ ಯೆಹೋವನ ಮುಂದೆ ಬರುವಾಗೆಲ್ಲ ತನ್ನ ಎದೆ* ಮೇಲೆ ಹಾಕೊಂಡಿರಬೇಕು.
31 ಏಫೋದಿನ ಒಳಗೆ ಹಾಕೋಕೆ ತೋಳಿಲ್ಲದ ಅಂಗಿ ಮಾಡಬೇಕು. ನೀನು ಅದನ್ನ ಪೂರ್ತಿಯಾಗಿ ನೀಲಿ ದಾರದಿಂದಾನೇ ಮಾಡಬೇಕು.+ 32 ಅಂಗಿಯ ಮೇಲ್ಭಾಗದ ಮಧ್ಯದಲ್ಲಿ ಕತ್ತು* ಇಡಬೇಕು. ಕತ್ತಿನ ಸುತ್ತ ಅಂಚು ಇರಬೇಕು. ಆ ಅಂಚನ್ನ ನೇಕಾರರಿಂದ ನೇಯಿಸಿರಬೇಕು. ಅದು ಯುದ್ಧಕವಚದ ಕತ್ತಿನ ತರ ಇರಬೇಕು. ಆಗ ಅದು ಹರಿದು ಹೋಗಲ್ಲ. 33 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲಿಂದ ನೀನು ದಾಳಿಂಬೆಗಳನ್ನ ಮಾಡಬೇಕು. ಅವು ಅಂಗಿ ಕೆಳಗಿರೋ ಮಡಚಿದ ಅಂಚಿನ ಸುತ್ತ ಇರಬೇಕು. ಅವುಗಳ ಮಧ್ಯ ಚಿನ್ನದ ಗಂಟೆಗಳು ಇರಬೇಕು. 34 ಹೀಗೆ ಚಿನ್ನದ ಗಂಟೆ ಮತ್ತೆ ದಾಳಿಂಬೆ ಒಂದಾದ ಮೇಲೆ ಒಂದು ತೋಳಿಲ್ಲದ ಅಂಗಿ ಕೆಳಗಿರೋ ಮಡಚಿದ ಅಂಚಿನ ಸುತ್ತಲೂ ಇರಬೇಕು. 35 ಆರೋನ ಸೇವೆ ಮಾಡುವಾಗ ಆ ಅಂಗಿ ಹಾಕಬೇಕು. ಅವನು ಪವಿತ್ರ ಕೋಣೆಯ ಒಳಗೆ ಯೆಹೋವನ ಮುಂದೆ ಹೋಗುವಾಗ, ಅಲ್ಲಿಂದ ಹೊರಗೆ ಬರುವಾಗ ಆ ಗಂಟೆಗಳ ಶಬ್ದ ಕೇಳಿಸಬೇಕು. ಇಲ್ಲಾಂದ್ರೆ ಅವನು ಸಾಯ್ತಾನೆ.+
36 ನೀನು ಶುದ್ಧ ಚಿನ್ನದಿಂದ ಪಳಪಳ ಹೊಳೆಯೋ ಫಲಕ ಮಾಡಬೇಕು. ಮುದ್ರೆಯನ್ನ ಕೆತ್ತೋ ತರ ಅದ್ರ ಮೇಲೆ ‘ಯೆಹೋವ ಪವಿತ್ರನು’*+ ಅಂತ ಕೆತ್ತಬೇಕು. 37 ಆ ಫಲಕನ ನೀಲಿ ಹಗ್ಗದಿಂದ ವಿಶೇಷ ಪೇಟಕ್ಕೆ+ ಕಟ್ಟಬೇಕು. ಫಲಕ ವಿಶೇಷ ಪೇಟದ ಮುಂಭಾಗದಲ್ಲಿ ಇರಬೇಕು. 38 ಅದು ಆರೋನನ ಹಣೆ ಮೇಲೆ ಇರಬೇಕು. ಇಸ್ರಾಯೇಲ್ಯರು ದೇವರಿಗೆ ಪವಿತ್ರ ಉಡುಗೊರೆಗಳಾಗಿ ಪ್ರತ್ಯೇಕಿಸೋ ಪವಿತ್ರ ವಸ್ತುಗಳ ವಿಷ್ಯದಲ್ಲಿ ಯಾರಾದ್ರೂ ಪಾಪ ಮಾಡಿದ್ರೆ ಅದಕ್ಕೆ ಆರೋನನೇ ಹೊಣೆ ಆಗಿರುತ್ತಾನೆ.+ ಅವರು ಯೆಹೋವನ ಮೆಚ್ಚುಗೆ ಪಡಿಯೋ ಹಾಗೆ ಆ ಫಲಕ ಯಾವಾಗ್ಲೂ ಆರೋನನ ಹಣೆ ಮೇಲೆ ಇರಬೇಕು.
39 ನೀನು ಒಳ್ಳೇ ಗುಣಮಟ್ಟದ ನಾರಿಂದ ಚೌಕಗಳಿರೋ ಉದ್ದ ಅಂಗಿ ನೇಯಬೇಕು, ಒಳ್ಳೇ ಗುಣಮಟ್ಟದ ನಾರಿಂದ ಒಂದು ವಿಶೇಷ ಪೇಟ ಮಾಡಬೇಕು, ಒಂದು ಸೊಂಟಪಟ್ಟಿ ನೇಯಬೇಕು.+
40 ನೀನು ಆರೋನನ ಮಕ್ಕಳಿಗೂ+ ಉದ್ದ ಅಂಗಿಗಳನ್ನ, ಸೊಂಟಪಟ್ಟಿಗಳನ್ನ, ಪೇಟಗಳನ್ನ ಮಾಡಬೇಕು. ಅವು ಅವರಿಗೆ ಗೌರವ, ಸೌಂದರ್ಯ ಕೊಡುತ್ತೆ.+ 41 ನಿನ್ನ ಅಣ್ಣ ಆರೋನನಿಗೆ, ಅವನ ಮಕ್ಕಳಿಗೆ ಆ ಬಟ್ಟೆಗಳನ್ನ ಹಾಕಬೇಕು. ಅವರನ್ನ ಪುರೋಹಿತರಾಗಿ ಅಭಿಷೇಕಿಸಿ,+ ನೇಮಿಸಿ,+ ಆ ಪವಿತ್ರ ಸೇವೆಗಾಗಿ ಅವರನ್ನ ಪ್ರತ್ಯೇಕಿಸಬೇಕು. ಆಗ ಅವರು ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ. 42 ಅವರ ಗುಪ್ತಾಂಗಗಳು ಕಾಣದ ಹಾಗೆ ಅವರಿಗಾಗಿ ನಾರಿನ ಚಡ್ಡಿಗಳನ್ನ* ಮಾಡಬೇಕು.+ ಅವು ಸೊಂಟದಿಂದ ತೊಡೆ ತನಕ ಇರಬೇಕು. 43 ಆರೋನ, ಅವನ ಮಕ್ಕಳು ದೇವದರ್ಶನ ಡೇರೆಯೊಳಗೆ ಬರುವಾಗ, ಆರಾಧನಾ ಸ್ಥಳದಲ್ಲಿ ಸೇವೆ ಮಾಡೋಕೆ ಯಜ್ಞವೇದಿ ಹತ್ರ ಬರುವಾಗ ಇವನ್ನ ಹಾಕಿರಬೇಕು. ಹಾಕದೇ ಇದ್ರೆ ಅವರು ಅಪರಾಧಿಗಳಾಗಿ ಸಾಯ್ತಾರೆ. ಇದು ಅವನೂ ಅವನ ಸಂತತಿಯವರೂ ಯಾವಾಗ್ಲೂ ಪಾಲಿಸಬೇಕಾದ ನಿಯಮ.
29 ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಅವರನ್ನ ಪ್ರತ್ಯೇಕಿಸೋಕೆ ನೀನು ಹೀಗೆ ಮಾಡಬೇಕು: ಒಂದು ಎಳೇ ಹೋರಿ, ಯಾವುದೇ ದೋಷ ಇಲ್ಲದ ಎರಡು ಟಗರುಗಳನ್ನ ನೀನು ತಗೊಳ್ಳಬೇಕು.+ 2 ಹುಳಿ ಇಲ್ಲದ ರೊಟ್ಟಿ, ಎಣ್ಣೆ ಬೆರೆಸಿ ಮಾಡಿದ ಬಳೆಯಾಕಾರದ ಹುಳಿ ಇಲ್ಲದ ರೊಟ್ಟಿಗಳು, ಎಣ್ಣೆ ಲೇಪಿಸಿದ ಹುಳಿ ಇಲ್ಲದ ತೆಳುವಾದ ರೊಟ್ಟಿಗಳನ್ನ ಸಹ ತಗೊಳ್ಳಬೇಕು.+ ರೊಟ್ಟಿಗಳನ್ನ ನುಣ್ಣಗಿನ ಗೋದಿ ಹಿಟ್ಟಿಂದ ಮಾಡಿ 3 ಒಂದು ಬುಟ್ಟಿಯಲ್ಲಿ ಹಾಕಬೇಕು. ಬುಟ್ಟಿಸಮೇತ+ ಅವುಗಳನ್ನ ಆ ಹೋರಿಯನ್ನ, ಎರಡು ಟಗರುಗಳನ್ನ ನನ್ನ ಮುಂದೆ ತರಬೇಕು.
4 ಆರೋನನನ್ನ, ಅವನ ಮಕ್ಕಳನ್ನ ನೀನು ದೇವದರ್ಶನ ಡೇರೆಯ ಬಾಗಿಲ ಹತ್ರ+ ಕರ್ಕೊಂಡು ಬಂದು ಅವರಿಗೆ ನೀರಿಂದ ಸ್ನಾನ ಮಾಡೋಕೆ ಹೇಳು.+ 5 ಆಮೇಲೆ ಬಟ್ಟೆಗಳನ್ನ+ ತಗೊಂಡು ಆರೋನನಿಗೆ ಹಾಕಬೇಕು. ನೀನು ಅವನಿಗೆ ಉದ್ದ ಅಂಗಿಯನ್ನ, ಏಫೋದಿನ ಒಳಗೆ ಹಾಕೋ ತೋಳಿಲ್ಲದ ಅಂಗಿಯನ್ನ, ಏಫೋದನ್ನ, ಎದೆಪದಕವನ್ನ ಹಾಕಬೇಕು. ಏಫೋದಿನ ಸೊಂಟಪಟ್ಟಿಯನ್ನ ಭದ್ರವಾಗಿ ಕಟ್ಟಬೇಕು.+ 6 ಅವನ ತಲೆ ಮೇಲೆ ವಿಶೇಷ ಪೇಟ, ಅದ್ರ ಮೇಲೆ ಪವಿತ್ರ ಚಿಹ್ನೆ* ಇಡಬೇಕು.+ 7 ಅಭಿಷೇಕ ತೈಲ+ ತಗೊಂಡು ಅವನ ತಲೆ ಮೇಲೆ ಹೊಯ್ದು ಅವನನ್ನ ಅಭಿಷೇಕಿಸಬೇಕು.+
8 ಆಮೇಲೆ ಅವನ ಮಕ್ಕಳನ್ನ ಮುಂದೆ ಕರ್ಕೊಂಡು ಬಂದು ಅವರಿಗೆ ಉದ್ದ ಅಂಗಿಗಳನ್ನ ಹಾಕಬೇಕು.+ 9 ಆರೋನನಿಗೂ ಅವನ ಮಕ್ಕಳಿಗೂ ಸೊಂಟಪಟ್ಟಿಗಳನ್ನ ಸುತ್ತಬೇಕು. ಪೇಟಗಳನ್ನ ಹಾಕಬೇಕು. ಆ ಸಮಯದಿಂದ ಅವರೂ ಅವರ ವಂಶದವರೂ ಪುರೋಹಿತರಾಗಿ ಸೇವೆ ಮಾಡ್ತಾರೆ. ಇದು ಸದಾ ಇರೋ ನಿಯಮ.+ ಹೀಗೆ ಆರೋನ, ಅವನ ಮಕ್ಕಳನ್ನ ಪುರೋಹಿತರಾಗಿ ಸೇವೆ ಮಾಡೋಕೆ ನೀನು ನೇಮಿಸಬೇಕು.+
10 ಆಮೇಲೆ ನೀನು ಹೋರಿಯನ್ನ ದೇವದರ್ಶನ ಡೇರೆ ಮುಂದೆ ತರಬೇಕು. ಆರೋನ, ಅವನ ಮಕ್ಕಳು ತಮ್ಮ ಕೈಗಳನ್ನ ಆ ಹೋರಿ ತಲೆ ಮೇಲೆ ಇಡಬೇಕು.+ 11 ಆ ಹೋರಿಯನ್ನ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ಬಲಿ ಕೊಡಬೇಕು.+ 12 ಆ ಹೋರಿಯ ರಕ್ತದಲ್ಲಿ ಸ್ವಲ್ಪ ನಿನ್ನ ಬೆರಳಿಂದ ತಗೊಂಡು ಯಜ್ಞವೇದಿಯ ಕೊಂಬುಗಳ ಮೇಲೆ ಹಚ್ಚಬೇಕು.+ ಉಳಿದ ರಕ್ತವನ್ನೆಲ್ಲ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 13 ಕರುಳಿನ ಸುತ್ತ ಇರೋ ಎಲ್ಲ ಕೊಬ್ಬು,+ ಪಿತ್ತಜನಕಾಂಗದ ಮೇಲಿರೋ ಕೊಬ್ಬು, ಎರಡು ಮೂತ್ರಪಿಂಡಗಳನ್ನ, ಅವುಗಳ ಮೇಲಿರೋ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು. ಆಗ ಅದ್ರ ಹೊಗೆ ಯಜ್ಞವೇದಿಯಿಂದ ಮೇಲೆ ಹೋಗುತ್ತೆ.+ 14 ಆದ್ರೆ ಆ ಹೋರಿಯ ಮಾಂಸ, ಚರ್ಮ, ಸಗಣಿಯನ್ನ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಇದು ಪಾಪಪರಿಹಾರಕ ಬಲಿ.
15 ಆಮೇಲೆ ನೀನು ಒಂದು ಟಗರು ತಗೊಂಡು ಅದ್ರ ತಲೆ ಮೇಲೆ ಆರೋನ, ಅವನ ಮಕ್ಕಳು ತಮ್ಮ ಕೈಗಳನ್ನ ಇಡಬೇಕು.+ 16 ಆ ಟಗರನ್ನ ಕಡಿದು ಅದ್ರ ರಕ್ತ ತಗೊಂಡು ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು.+ 17 ಟಗರನ್ನ ತುಂಡುತುಂಡಾಗಿ ಕತ್ತರಿಸಿ ಅದ್ರ ಕರುಳು, ಕಾಲುಗಳನ್ನ ತೊಳಿಬೇಕು.+ ಅದ್ರ ತಲೆಯನ್ನ ಆ ತುಂಡುಗಳನ್ನ ಯಜ್ಞವೇದಿಯ ಮೇಲೆ ಜೋಡಿಸಬೇಕು. 18 ನೀನು ಆ ಇಡೀ ಟಗರನ್ನ ಸುಡಬೇಕು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಇದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ.+ ಇದು ಯೆಹೋವನಿಗೆ ಅರ್ಪಿಸೋ ಸರ್ವಾಂಗಹೋಮ ಬಲಿ.
19 ಆಮೇಲೆ ನೀನು ಇನ್ನೊಂದು ಟಗರು ತಗೊಂಡು ಅದ್ರ ತಲೆ ಮೇಲೆ ಆರೋನ, ಅವನ ಮಕ್ಕಳು ತಮ್ಮ ಕೈಗಳನ್ನ ಇಡಬೇಕು.+ 20 ಆ ಟಗರನ್ನ ಕಡಿದು ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಅದನ್ನ ಆರೋನನ, ಅವನ ಮಕ್ಕಳ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು. ಯಜ್ಞವೇದಿಯ ಎಲ್ಲ ಬದಿಗಳಿಗೂ ಆ ಟಗರಿನ ರಕ್ತ ಚಿಮಿಕಿಸಬೇಕು. 21 ಯಜ್ಞವೇದಿಯ ಮೇಲಿರೋ ರಕ್ತದಲ್ಲಿ ಸ್ವಲ್ಪ ಮತ್ತು ಅಭಿಷೇಕ ತೈಲದಲ್ಲಿ+ ಸ್ವಲ್ಪ ತಗೊಂಡು ಆರೋನನ ಮೇಲೆ, ಅವನ ಬಟ್ಟೆಗಳ ಮೇಲೆ, ಅವನ ಮಕ್ಕಳ ಮೇಲೆ, ಅವರ ಬಟ್ಟೆಗಳ ಮೇಲೆ ಚಿಮಿಕಿಸಬೇಕು. ಇದ್ರಿಂದ ಆರೋನ, ಅವನ ಬಟ್ಟೆಗಳು, ಅವನ ಮಕ್ಕಳು, ಅವರ ಬಟ್ಟೆಗಳು ಪವಿತ್ರ ಆಗುತ್ತೆ.+
22 ಆಮೇಲೆ ಟಗರಿನ ಕೊಬ್ಬು ಅಂದ್ರೆ ಕೊಬ್ಬಿರೋ ಬಾಲ, ಕರುಳಿನ ಸುತ್ತಲಿರೋ ಕೊಬ್ಬು, ಪಿತ್ತಜನಕಾಂಗದ ಮೇಲಿರೋ ಕೊಬ್ಬು, ಎರಡು ಮೂತ್ರಪಿಂಡಗಳನ್ನ ಅವುಗಳ ಮೇಲಿರೋ ಕೊಬ್ಬು,+ ಬಲಗಾಲನ್ನ ತಗೊಳ್ಳಬೇಕು. ಯಾಕಂದ್ರೆ ಅವರನ್ನ ಪುರೋಹಿತ ಸೇವೆಗೆ ನೇಮಿಸುವಾಗ ಅರ್ಪಿಸಲಾದ ಟಗರು ಇದು.+ 23 ಯೆಹೋವನ ಮುಂದೆ ಬುಟ್ಟಿಯಲ್ಲಿ ಇಟ್ಟಿರೋ ಹುಳಿ ಇಲ್ಲದ ರೊಟ್ಟಿಗಳಲ್ಲಿ ಬಳೆಯಾಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ, ಎಣ್ಣೆ ಬೆರೆಸಿ ಮಾಡಿದ ಬಳೆಯಾಕಾರದ ಒಂದು ರೊಟ್ಟಿಯನ್ನ, ಒಂದು ತೆಳುವಾದ ರೊಟ್ಟಿಯನ್ನ ಸಹ ತಗೊಳ್ಳಬೇಕು. 24 ನೀನು ಅದನ್ನೆಲ್ಲ ಆರೋನನ ಕೈಗಳಲ್ಲಿ, ಅವನ ಮಕ್ಕಳ ಕೈಗಳಲ್ಲಿ ಇಟ್ಟು ಅವುಗಳನ್ನ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಇದು ಓಲಾಡಿಸೋ ಅರ್ಪಣೆ. 25 ನೀನು ಅದನ್ನೆಲ್ಲ ಅವರ ಕೈಗಳಿಂದ ತಗೊಂಡು ಯಜ್ಞವೇದಿಯಲ್ಲಿ ಸರ್ವಾಂಗಹೋಮ ಬಲಿ ಜೊತೆ ಸುಡಬೇಕು. ಇದ್ರ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಅದು ಯೆಹೋವನಿಗೆ ಬೆಂಕಿ ಮೂಲಕ ಮಾಡೋ ಅರ್ಪಣೆ.
26 ಆರೋನನನ್ನ ಪುರೋಹಿತ ಸೇವೆಗೆ ನೇಮಿಸುವಾಗ ಅವನ ಪರವಾಗಿ ಅರ್ಪಿಸಿದ ಟಗರಿನ ಎದೆಭಾಗವನ್ನ+ ನೀನು ತಗೊಂಡು ಓಲಾಡಿಸೋ ಅರ್ಪಣೆಯಾಗಿ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಆ ಭಾಗ ನಿನ್ನದಾಗುತ್ತೆ. 27 ಆರೋನನನ್ನ, ಅವನ ಮಕ್ಕಳನ್ನ ಪುರೋಹಿತ ಸೇವೆಗೆ ನೇಮಿಸುವಾಗ ಓಲಾಡಿಸೋ ಅರ್ಪಣೆಯ ಎದೆಭಾಗವನ್ನ, ಪವಿತ್ರ ಪಾಲಿನಲ್ಲಿರೋ ಕಾಲನ್ನ ನನಗಾಗಿ ಪವಿತ್ರ ಮಾಡಬೇಕು.+ 28 ಇದು ಪವಿತ್ರ ಪಾಲು ಆಗಿರೋದ್ರಿಂದ ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು. ಇದು ಇಸ್ರಾಯೇಲ್ಯರು ಸದಾ ಪಾಲಿಸಬೇಕಾದ ನಿಯಮ. ಇದು ಇಸ್ರಾಯೇಲ್ಯರು ಕೊಡಬೇಕಾದ ಪವಿತ್ರ ಪಾಲು.+ ಇದು ಅವರ ಸಮಾಧಾನ ಬಲಿಗಳಿಂದ ಅವರು ಯೆಹೋವನಿಗಾಗಿ ಕೊಡಬೇಕಾದ ಪವಿತ್ರ ಪಾಲು.+
29 ಆರೋನನ ಪವಿತ್ರ ಬಟ್ಟೆಗಳನ್ನ+ ಅವನ ನಂತ್ರ ಅವನ ಮಕ್ಕಳು ಉಪಯೋಗಿಸ್ತಾರೆ.+ ಅವರನ್ನ ಅಭಿಷೇಕಿಸಿ ಪುರೋಹಿತರಾಗಿ ನೇಮಿಸಿದಾಗ ಅವುಗಳನ್ನ ಬಳಸ್ತಾರೆ. 30 ಆರೋನನ ಮಕ್ಕಳಲ್ಲಿ ಅವನ ನಂತ್ರ ಅವನ ಸ್ಥಾನಕ್ಕೆ ಮತ್ತು ಆರಾಧನಾ ಸ್ಥಳದಲ್ಲಿ ಸೇವೆ ಮಾಡೋಕೆ ದೇವದರ್ಶನ ಡೇರೆಯೊಳಗೆ ಬರೋ ಪುರೋಹಿತ ಏಳು ದಿನ ತನಕ ಆ ಬಟ್ಟೆಗಳನ್ನ ಹಾಕೋಬೇಕು.+
31 ಪುರೋಹಿತ ಸೇವೆಗೆ ಅವರನ್ನ ನೇಮಿಸುವಾಗ ಅರ್ಪಿಸೋ ಟಗರಿನ ಉಳಿದ ಮಾಂಸವನ್ನ ನೀನು ತಗೊಂಡು ಒಂದು ಪವಿತ್ರ ಜಾಗದಲ್ಲಿ* ಬೇಯಿಸಬೇಕು.+ 32 ಆರೋನ, ಅವನ ಮಕ್ಕಳು ಆ ಟಗರಿನ ಮಾಂಸವನ್ನ, ಬುಟ್ಟಿಯಲ್ಲಿರೋ ರೊಟ್ಟಿಯನ್ನ, ದೇವದರ್ಶನ ಡೇರೆಯ ಬಾಗಿಲ ಹತ್ರ ತಿನ್ನಬೇಕು.+ 33 ಅವರನ್ನ ಪುರೋಹಿತರಾಗಿ ನೇಮಿಸೋಕೆ, ಆ ಸೇವೆಗಾಗಿ ಪ್ರತ್ಯೇಕಿಸೋಕೆ ಪ್ರಾಯಶ್ಚಿತ್ತವಾಗಿ ಅರ್ಪಿಸಿದ ಅವುಗಳನ್ನ ಅವರು ತಿನ್ನಬೇಕು. ಆದ್ರೆ ಪುರೋಹಿತನಲ್ಲದವನು* ಅವುಗಳನ್ನ ತಿನ್ನಬಾರದು. ಯಾಕಂದ್ರೆ ಅವು ಪವಿತ್ರ.+ 34 ಬಲಿಯಾಗಿ ಅರ್ಪಿಸಿದ ಆ ಟಗರಿನ ಮಾಂಸದಲ್ಲಿ, ರೊಟ್ಟಿಯಲ್ಲಿ ಏನಾದ್ರೂ ಬೆಳಿಗ್ಗೆ ತನಕ ಉಳಿದ್ರೆ ಅದನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ ಅದನ್ನ ತಿನ್ನಬಾರದು. ಯಾಕಂದ್ರೆ ಅದು ಪವಿತ್ರ.
35 ನಾನು ಆಜ್ಞಾಪಿಸಿದ ಹಾಗೇ ನೀನು ಎಲ್ಲಾನೂ ಆರೋನನಿಗೂ ಅವನ ಮಕ್ಕಳಿಗೂ ಮಾಡಬೇಕು. ಅವರನ್ನ ಪುರೋಹಿತರನ್ನಾಗಿ ನೇಮಿಸೋಕೆ ಏಳು ದಿನ ತಗೊಳ್ಳಬೇಕು.+ 36 ಅವ್ರ ಪ್ರಾಯಶ್ಚಿತ್ತಕ್ಕಾಗಿ ನೀನು ಪ್ರತಿದಿನ ಹೋರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು. ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಿ ಅದನ್ನ ಪರಿಶುದ್ಧ ಮಾಡಬೇಕು. ಅದನ್ನ ಅಭಿಷೇಕಿಸಿ ನನ್ನ ಆರಾಧನೆಗಾಗಿ ಪ್ರತ್ಯೇಕವಾಗಿ ಇಡಬೇಕು ಅಂತ ತೋರಿಸು.+ 37 ನೀನು ಏಳು ದಿನ ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ನೀನು ಯಜ್ಞವೇದಿಯನ್ನ ನನ್ನ ಆರಾಧನೆಗಾಗಿ ಪ್ರತ್ಯೇಕಿಸಬೇಕು. ಆಗ ಅದು ಅತಿ ಪವಿತ್ರ ಯಜ್ಞವೇದಿ ಆಗುತ್ತೆ.+ ಆ ಯಜ್ಞವೇದಿಯನ್ನ ಮುಟ್ಟೋನು ಪವಿತ್ರನಾಗಿರಬೇಕು.
38 ನೀನು ಪ್ರತಿ ದಿನ ಒಂದು ವರ್ಷದ ಎರಡು ಟಗರುಗಳನ್ನ ಯಜ್ಞವೇದಿ ಮೇಲೆ ಅರ್ಪಿಸಬೇಕು. ಇದನ್ನ ನೀನು ತಪ್ಪದೆ ಅರ್ಪಿಸಬೇಕು.+ 39 ಅವುಗಳಲ್ಲಿ ಒಂದು ಟಗರನ್ನ ಬೆಳಿಗ್ಗೆ ಇನ್ನೊಂದು ಟಗರನ್ನ ಸೂರ್ಯ ಮುಳುಗಿದ ಮೇಲೆ*+ ಅರ್ಪಿಸಬೇಕು. 40 ಮೊದಲ ಟಗರನ್ನ ಅರ್ಪಿಸುವಾಗ ಅದ್ರ ಜೊತೆ ಶುದ್ಧ ಆಲಿವ್ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟನ್ನ, ಪಾನ ಅರ್ಪಣೆಯಾಗಿ ದ್ರಾಕ್ಷಾಮದ್ಯವನ್ನ ಅರ್ಪಿಸಬೇಕು. ಶುದ್ಧ ಆಲಿವ್ ಎಣ್ಣೆ ಒಂದು ಹಿನ್* ಅಳತೆಯ ನಾಲ್ಕನೇ ಒಂದು ಭಾಗದಷ್ಟು ಇರಬೇಕು, ನುಣ್ಣಗಿನ ಹಿಟ್ಟು ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗದಷ್ಟು ಇರಬೇಕು. ದ್ರಾಕ್ಷಾಮದ್ಯ ಒಂದು ಹಿನ್ ಅಳತೆಯ ನಾಲ್ಕನೇ ಒಂದು ಭಾಗದಷ್ಟು ಇರಬೇಕು. 41 ಎರಡನೇ ಟಗರನ್ನ ಸೂರ್ಯ ಮುಳುಗಿದ ಮೇಲೆ* ಅರ್ಪಿಸಬೇಕು. ಅದರ ಜೊತೆ ಬೆಳಿಗ್ಗೆ ಅರ್ಪಿಸಿದ ಹಾಗೇ ಧಾನ್ಯ ಮತ್ತು ಪಾನ ಅರ್ಪಣೆಗಳನ್ನ ಅರ್ಪಿಸಬೇಕು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಇದ್ರಿಂದ ಬರೋ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ. 42 ನಾನು ನಿನಗೆ ಕಾಣಿಸ್ಕೊಂಡು ನಿನ್ನ ಜೊತೆ ಮಾತಾಡೋ ಸ್ಥಳದಲ್ಲಿ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಹತ್ರ ಯೆಹೋವನಾದ ನನ್ನ ಮುಂದೆ ಇದನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಇದನ್ನ ನೀವು ತಲೆಮಾರುಗಳ ತನಕ ತಪ್ಪದೆ ಅರ್ಪಿಸಬೇಕು.+
43 ನಾನು ಅಲ್ಲಿ ಇಸ್ರಾಯೇಲ್ಯರಿಗೆ ಕಾಣಿಸ್ಕೊಳ್ತೀನಿ. ಹಾಗಾಗಿ ಆ ಸ್ಥಳ ನನ್ನ ಮಹಿಮೆಯಿಂದ ಪವಿತ್ರ ಆಗುತ್ತೆ.+ 44 ನಾನು ದೇವದರ್ಶನ ಡೇರೆಯನ್ನ, ಯಜ್ಞವೇದಿಯನ್ನ ನನ್ನ ಆರಾಧನೆಗಾಗಿ ಪ್ರತ್ಯೇಕಿಸ್ತೀನಿ. ಆರೋನನನ್ನ, ಅವನ ಮಕ್ಕಳನ್ನ+ ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಪ್ರತ್ಯೇಕಿಸ್ತೀನಿ. 45 ನಾನು ಇಸ್ರಾಯೇಲ್ಯರ ಮಧ್ಯ ವಾಸಿಸ್ತೀನಿ, ನಾನು ಅವ್ರ ದೇವರಾಗಿ ಇರ್ತಿನಿ.+ 46 ಅವ್ರ ಮಧ್ಯ ವಾಸಿಸೋಕೆ ಈಜಿಪ್ಟ್ ದೇಶದಿಂದ ಹೊರಗೆ ಕರ್ಕೊಂಡು ಬಂದ ಅವ್ರ ದೇವರಾದ ಯೆಹೋವ ನಾನೇ ಅಂತ ಅವರಿಗೆ ಖಂಡಿತ ಗೊತ್ತಾಗುತ್ತೆ.+ ನಾನು ಅವ್ರ ದೇವರಾದ ಯೆಹೋವ.
30 ಧೂಪ ಸುಡೋಕೆ ನೀನು ಒಂದು ಧೂಪವೇದಿ ಮಾಡಬೇಕು.+ ಅದನ್ನ ಅಕೇಶಿಯ ಮರದಿಂದ*+ ಮಾಡು. 2 ಧೂಪವೇದಿ ಚೌಕಾಕಾರ ಇರಬೇಕು. ಒಂದು ಮೊಳ* ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇರಬೇಕು. ಅದಕ್ಕೆ ಕೊಂಬುಗಳು ಇರಬೇಕು. ಧೂಪವೇದಿಯನ್ನ, ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು.+ 3 ಶುದ್ಧ ಚಿನ್ನದಿಂದ ತಗಡುಗಳನ್ನ ಮಾಡಿ ಧೂಪವೇದಿ ಮೇಲೆ ಎಲ್ಲ ಬದಿಗಳಿಗೆ, ಅದ್ರ ಕೊಂಬುಗಳಿಗೆ ಹೊದಿಸಬೇಕು. ಧೂಪವೇದಿಯ ಮೇಲೆ ಸುತ್ತ ಒಂದು ಚಿನ್ನದ ಅಂಚನ್ನ ಮಾಡಬೇಕು. 4 ಧೂಪವೇದಿಯ ಎರಡು ಬದಿಗಳಲ್ಲಿ ಅಂದ್ರೆ ಎದುರುಬದುರಾಗಿರೋ ಬದಿಗಳಲ್ಲಿ ಎರಡೆರಡು ಚಿನ್ನದ ಬಳೆಗಳು ಇರಬೇಕು. ಆ ಬಳೆಗಳು ಅಂಚಿನ ಕೆಳಗೆ ಇರಬೇಕು. ಇವು ಧೂಪವೇದಿಯನ್ನ ಎತ್ತೋಕೆ ಬಳಸೋ ಕೋಲುಗಳಿಗೆ ಹಿಡಿಗಳಾಗಿ ಇರುತ್ತೆ. 5 ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು. 6 ನೀನು ಆ ಧೂಪವೇದಿಯನ್ನ ಅತಿ ಪವಿತ್ರ ಸ್ಥಳದ ಪರದೆ ಮುಂದೆ ಇಡು. ಆಗ ಧೂಪವೇದಿ ಸಾಕ್ಷಿ ಮಂಜೂಷಕ್ಕೆ ಹತ್ರ ಇರುತ್ತೆ.+ ಸಾಕ್ಷಿ ಮಂಜೂಷದ ಮುಚ್ಚಳದ ಮೇಲಿಂದ ನಾನು ನಿನಗೆ ಕಾಣಿಸ್ಕೊಳ್ತೀನಿ.+
7 ಆರೋನ+ ಪ್ರತಿ ದಿನ ಬೆಳಿಗ್ಗೆ ದೀಪಗಳನ್ನ+ ಸಿದ್ಧ ಮಾಡುವಾಗ ಆ ಧೂಪವೇದಿ ಮೇಲೆ ಒಳ್ಳೇ ವಾಸನೆ ಇರೋ ಧೂಪವನ್ನ+ ಸುಡಬೇಕು.+ 8 ಸೂರ್ಯ ಮುಳುಗಿದ* ನಂತ್ರ ಆರೋನ ದೀಪಗಳನ್ನ ಹೊತ್ತಿಸುವಾಗ್ಲೂ ಧೂಪ ಸುಡಬೇಕು. ಇದು ಯೆಹೋವನ ಮುಂದೆ ತಪ್ಪದೆ ಅರ್ಪಿಸೋ ಧೂಪ ಅರ್ಪಣೆ. ಇದನ್ನ ನೀವು ತಲೆಮಾರು ತಲೆಮಾರು ತನಕ ಅರ್ಪಿಸಬೇಕು. 9 ನೀವು ಧೂಪವೇದಿ ಮೇಲೆ ನಾನು ಹೇಳಿದ ಧೂಪವನ್ನ ಬಿಟ್ಟು ಬೇರೆ ಯಾವ ಧೂಪವನ್ನೂ ಅರ್ಪಿಸಬಾರದು,+ ಸರ್ವಾಂಗಹೋಮ ಬಲಿಯನ್ನಾಗಲಿ ಧಾನ್ಯ ಅರ್ಪಣೆಯನ್ನಾಗಲಿ ಅರ್ಪಿಸಬಾರದು, ಪಾನ ಅರ್ಪಣೆಯನ್ನೂ ಸುರಿಬಾರದು. 10 ಆರೋನ ವರ್ಷಕ್ಕೆ ಒಮ್ಮೆ ಧೂಪವೇದಿಯನ್ನ ಪರಿಶುದ್ಧ ಮಾಡಬೇಕು.+ ಅವನು ಪಾಪಪರಿಹಾರಕ ಬಲಿಯಾಗಿ ಅರ್ಪಿಸಲಾದ ಪ್ರಾಣಿಯ ರಕ್ತದಲ್ಲಿ ಸ್ವಲ್ಪ ತಗೊಂಡು ಧೂಪವೇದಿಯ ಕೊಂಬುಗಳಿಗೆ ಹಾಕೋ ಮೂಲಕ ಅದನ್ನ ಪರಿಶುದ್ಧ ಮಾಡಬೇಕು.+ ಇದನ್ನ ತಲೆಮಾರುಗಳ ತನಕ ಮಾಡಬೇಕು. ಈ ಧೂಪವೇದಿ ಯೆಹೋವನಿಗೆ ಅತಿ ಪವಿತ್ರ.”
11 ಯೆಹೋವ ಮೋಶೆಗೆ ಹೀಗಂದನು: 12 “ನೀನು ಜನಗಣತಿ ಮಾಡಿ ಇಸ್ರಾಯೇಲ್ಯರಲ್ಲಿರೋ ಗಂಡಸರನ್ನ ಲೆಕ್ಕ ಮಾಡಬೇಕು.+ ಹಾಗೆ ಲೆಕ್ಕಿಸುವಾಗ ಪ್ರತಿಯೊಬ್ಬ ಗಂಡಸು ತನ್ನ ಜೀವಕ್ಕಾಗಿ ಬಿಡುಗಡೆಯ ಬೆಲೆಯನ್ನ ಯೆಹೋವನಿಗೆ ಕೊಡ್ಲೇಬೇಕು. ಅವರ ನೋಂದಣಿ ಮಾಡುವಾಗ ಅವ್ರ ಮೇಲೆ ಯಾವ ವ್ಯಾಧಿನೂ ಬರಬಾರ್ದು ಅಂದ್ರೆ ಹೀಗೆ ಮಾಡಬೇಕು. 13 ನೋಂದಣಿ ಆದ ಪ್ರತಿಯೊಬ್ಬ ತನ್ನ ತನ್ನ ಜೀವದ ಬಿಡುಗಡೆಗಾಗಿ ಯೆಹೋವನಿಗೆ ಕೊಡಬೇಕಾದ ಬೆಲೆ ಎಷ್ಟೆಂದ್ರೆ ಅರ್ಧ ಶೆಕೆಲ್.* ಇದು ಆರಾಧನಾ ಸ್ಥಳದ ತೂಕದ ಪ್ರಕಾರ*+ ಇರಬೇಕು. ಒಂದು ಶೆಕೆಲ್ ಅಂದ್ರೆ ಇಪ್ಪತ್ತು ಗೇರಾ.*+ 14 ಪಟ್ಟಿ ಮಾಡಿದ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರೆಲ್ಲ ಈ ಬೆಲೆಯನ್ನ ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು.+ 15 ನಿಮ್ಮ ಜೀವಕ್ಕಾಗಿ ಪ್ರಾಯಶ್ಚಿತ್ತ ಮಾಡೋಕೆ ಯೆಹೋವನಿಗೆ ಅರ್ಧ ಶೆಕೆಲನ್ನ* ಕಾಣಿಕೆಯಾಗಿ ಕೊಡಬೇಕು. ಶ್ರೀಮಂತ ಅದಕ್ಕಿಂತ ಹೆಚ್ಚು ಕೊಡಬಾರದು, ಬಡವ ಅದಕ್ಕಿಂತ ಕಡಿಮೆ ಕೊಡಬಾರದು. 16 ಪ್ರಾಯಶ್ಚಿತ್ತಕ್ಕಾಗಿ ಇಸ್ರಾಯೇಲ್ಯರು ಕೊಡೋ ಬೆಳ್ಳಿ ಹಣವನ್ನ ನೀನು ತಗೊಂಡು ದೇವದರ್ಶನ ಡೇರೆಯಲ್ಲಿ ಮಾಡಲಾಗೋ ಸೇವೆಗಾಗಿ ಬಳಸಬೇಕು. ಈ ಹಣ ಇಸ್ರಾಯೇಲ್ಯರಿಗೋಸ್ಕರ ಯೆಹೋವನ ಮುಂದೆ ನೆನಪಿಗಾಗಿ ಇರುತ್ತೆ. ಅದ್ರಿಂದ ನಿಮ್ಮ ಜೀವಕ್ಕೆ ಪ್ರಾಯಶ್ಚಿತ್ತ ಆಗುತ್ತೆ.”
17 ಯೆಹೋವ ಮೋಶೆ ಜೊತೆ ಮಾತು ಮುಂದುವರಿಸಿ ಹೀಗಂದನು: 18 “ತಾಮ್ರದಿಂದ ಒಂದು ದೊಡ್ಡ ಬೋಗುಣಿಯನ್ನ ಅದಕ್ಕೆ ಪೀಠವನ್ನ ಮಾಡಬೇಕು.+ ಅದನ್ನ ದೇವದರ್ಶನ ಡೇರೆ, ಯಜ್ಞವೇದಿ ಮಧ್ಯ ಇಟ್ಟು ಅದ್ರಲ್ಲಿ ನೀರು ತುಂಬಿಸಬೇಕು.+ 19 ಆರೋನ, ಅವನ ಮಕ್ಕಳು ಅಲ್ಲಿ ತಮ್ಮ ಕೈಕಾಲುಗಳನ್ನ ತೊಳಿಬೇಕು.+ 20 ಅವರು ದೇವದರ್ಶನ ಡೇರೆಯೊಳಗೆ ಹೋಗುವಾಗ ಸೇವೆ ಮಾಡೋಕೆ, ಬೆಂಕಿಯಲ್ಲಿ ಅರ್ಪಣೆಗಳನ್ನ ಯೆಹೋವನಿಗೆ ಕೊಡೋಕೆ ಯಜ್ಞವೇದಿಯ ಹತ್ರ ಬರುವಾಗ ಆ ನೀರಿಂದ ತಮ್ಮನ್ನ ಶುದ್ಧ ಮಾಡ್ಕೊಬೇಕು. ಇಲ್ಲಾಂದ್ರೆ ಅವರು ಸಾಯ್ತಾರೆ. 21 ಅವರು ತಮ್ಮ ಕೈಕಾಲುಗಳನ್ನ ತೊಳಿಲೇಬೇಕು. ಆಗ ಅವರು ಸಾಯಲ್ಲ. ಇದು ಆರೋನನೂ ಅವನ ವಂಶದವರೂ ತಲೆಮಾರುಗಳ ತನಕ ಪಾಲಿಸ್ಲೇಬೇಕಾದ ನಿಯಮ.”+
22 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 23 “ನೀನು ಶ್ರೇಷ್ಠ ಸುಗಂಧ ದ್ರವ್ಯಗಳನ್ನ ತಗೊಬೇಕು. ಅವು ಯಾವುದಂದ್ರೆ, ಘನಗೊಳಿಸಿದ ಗಂಧರಸ* 500 ಶೆಕೆಲ್ ಮತ್ತು ಅದ್ರ ಅರ್ಧದಷ್ಟು ಅಂದ್ರೆ 250 ಶೆಕೆಲ್ ಒಳ್ಳೇ ವಾಸನೆ ಇರೋ ದಾಲ್ಚಿನ್ನಿ ಚಕ್ಕೆ, 250 ಶೆಕೆಲ್ ಸುವಾಸನೆ ಇರೋ ಬಜೆ, 24 ಆರಾಧನಾ ಸ್ಥಳದ ತೂಕದ ಪ್ರಕಾರ*+ 500 ಶೆಕೆಲ್ ದಾಲ್ಚಿನ್ನಿ ಚಕ್ಕೆ.* ಇವುಗಳ ಜೊತೆ ಒಂದು ಹಿನ್* ಆಲಿವ್ ಎಣ್ಣೆ ತಗೊಬೇಕು. 25 ಅದನ್ನೆಲ್ಲ ಕೌಶಲದಿಂದ*+ ಹದವಾಗಿ ಬೆರೆಸಿ ಅಭಿಷೇಕ ತೈಲ ತಯಾರಿಸಬೇಕು. ಇದು ಪವಿತ್ರವಾದ ಅಭಿಷೇಕ ತೈಲ.
26 ನೀನು ಆ ತೈಲದಿಂದ ದೇವದರ್ಶನ ಡೇರೆಯನ್ನ+ ಮತ್ತು ಸಾಕ್ಷಿ ಮಂಜೂಷವನ್ನ ಅಭಿಷೇಕಿಸಬೇಕು. 27 ಮೇಜು, ಅದ್ರ ಎಲ್ಲ ಉಪಕರಣಗಳನ್ನ, ದೀಪಸ್ತಂಭ, ಅದ್ರ ಉಪಕರಣಗಳನ್ನ, ಧೂಪವೇದಿಯನ್ನ, 28 ಸರ್ವಾಂಗಹೋಮದ ಯಜ್ಞವೇದಿ, ಅದ್ರ ಎಲ್ಲ ಉಪಕರಣಗಳನ್ನ, ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠವನ್ನೂ ಅಭಿಷೇಕಿಸಬೇಕು. 29 ಅವು ಅತಿ ಪವಿತ್ರ ಆಗೋ ತರ ನೀನು ಅವುಗಳನ್ನ ನನ್ನ ಸೇವೆಗಾಗಿ ಪ್ರತ್ಯೇಕಿಸಬೇಕು.+ ಅವುಗಳನ್ನ ಮುಟ್ಟೋ ಪ್ರತಿಯೊಬ್ಬ ಪವಿತ್ರನಾಗಿರಬೇಕು.+ 30 ನೀನು ಆರೋನನನ್ನ+ ಅವನ ಮಕ್ಕಳನ್ನ+ ಅಭಿಷೇಕಿಸಿ ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಪ್ರತ್ಯೇಕಿಸಬೇಕು.+
31 ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು ‘ಈ ಪವಿತ್ರ ಅಭಿಷೇಕ ತೈಲವನ್ನ ತಲೆಮಾರುಗಳ ತನಕ ನನ್ನ ಸೇವೆಯಲ್ಲಿ ಉಪಯೋಗಿಸಬೇಕು.+ 32 ಇದನ್ನ ಯಾರೂ ಮೈಗೆ ಹಚ್ಕೊಳ್ಳಬಾರದು. ಬೇರೆ ಯಾವುದೇ ಉದ್ದೇಶಕ್ಕಾಗಿ ನೀವು ಈ ತರದ ಮಿಶ್ರಣ ತಯಾರಿಸಬಾರದು. ಇದು ಪವಿತ್ರ. ಇದು ನಿಮಗೆ ಯಾವಾಗ್ಲೂ ಪವಿತ್ರವಾಗಿ ಇರಬೇಕು. 33 ಇದೇ ತರದ ಸುಗಂಧ ತೈಲನ ಯಾರಾದ್ರೂ ಮಾಡಿದ್ರೆ ಅವನನ್ನ ಸಾಯಿಸಬೇಕು. ಯಾರಾದ್ರೂ ಆ ತೈಲದಲ್ಲಿ ಸ್ವಲ್ಪವನ್ನ ಪುರೋಹಿತನಲ್ಲದವನ* ಮೇಲೆ ಹಚ್ಚಿದ್ರೆ ಹಚ್ಚಿದವನನ್ನೂ ಸಾಯಿಸಬೇಕು.’”+
34 ಯೆಹೋವ ಮೋಶೆಗೆ ಹೀಗಂದನು: “ನೀನು ಸುಗಂಧ ಅಂಟು, ಸುವಾಸನೆಯ ಚಿಪ್ಪುಗಳು, ಸುವಾಸನೆ ಇರೋ ಗುಗ್ಗುಲ, ಶುದ್ಧವಾದ ಸಾಂಬ್ರಾಣಿ, ಈ ಎಲ್ಲ ಸುಗಂಧ ದ್ರವ್ಯಗಳನ್ನ+ ಒಂದೇ ಅಳತೆ ಪ್ರಕಾರ ತಗೊಂಡು 35 ಅವುಗಳಿಂದ ಧೂಪ ತಯಾರಿಸಬೇಕು.+ ಅದನ್ನೆಲ್ಲ ಕೌಶಲದಿಂದ* ಹದವಾಗಿ ಬೆರೆಸಿರಬೇಕು, ಉಪ್ಪು ಹಾಕಿರಬೇಕು.+ ಧೂಪ ಶುದ್ಧವಾಗಿ ಪವಿತ್ರವಾಗಿ ಇರಬೇಕು. 36 ಅದ್ರಲ್ಲಿ ಸ್ವಲ್ಪ ಕುಟ್ಟಿ ನುಣ್ಣಗೆ ಪುಡಿ ಮಾಡಬೇಕು. ಆ ಪುಡಿಯಲ್ಲಿ ಸ್ವಲ್ಪ ದೇವದರ್ಶನ ಡೇರೆಯೊಳಗೆ ನಾನು ನಿನಗೆ ಕಾಣಿಸೋ ಜಾಗದಲ್ಲಿ ಅಂದ್ರೆ ಸಾಕ್ಷಿ ಮಂಜೂಷದ ಮುಂದೆ ಹಾಕಬೇಕು. ಆ ಧೂಪ ನಿಮಗೆ ಅತಿ ಪವಿತ್ರವಾಗಿ ಇರಬೇಕು. 37 ಈ ಮಿಶ್ರಣದಿಂದ ನಿಮ್ಮ ಸ್ವಂತ ಉಪಯೋಗಕ್ಕಾಗಿ ಧೂಪ ಮಾಡ್ಕೊಳ್ಳಬಾರದು.+ ಯಾಕಂದ್ರೆ ಇದು ಯೆಹೋವನಿಗೆ ಪವಿತ್ರ. 38 ಅದ್ರ ಸುವಾಸನೆಯನ್ನ ಆನಂದಿಸೋಕೆ ಯಾರಾದ್ರೂ ಅದೇ ತರದ ಧೂಪ ಮಾಡ್ಕೊಂಡ್ರೆ ಅವನನ್ನ ಸಾಯಿಸಬೇಕು.”
31 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ ಹೀಗಂದನು: 2 “ನೋಡು, ಯೆಹೂದ ಕುಲದ ಬೆಚಲೇಲನನ್ನ+ ನಾನು ಆರಿಸ್ಕೊಂಡಿದ್ದೀನಿ. ಅವನು ಊರಿಯ ಮಗ, ಹೂರನ ಮೊಮ್ಮಗ.+ 3 ಅವನಲ್ಲಿ ಪವಿತ್ರಶಕ್ತಿ ತುಂಬಿಸ್ತೀನಿ. ವಿವೇಕ, ತಿಳುವಳಿಕೆ ಮತ್ತು ಪ್ರತಿಯೊಂದು ರೀತಿಯ ಕರಕುಶಲ ಕೆಲಸಗಳ ಜ್ಞಾನವನ್ನ ಅವನಿಗೆ ಕೊಡ್ತೀನಿ. 4 ಇದ್ರಿಂದ ಅವನು ಕಲಾತ್ಮಕ ವಿನ್ಯಾಸಗಳನ್ನ ಮಾಡೋದ್ರಲ್ಲಿ, ಚಿನ್ನ, ಬೆಳ್ಳಿ, ತಾಮ್ರದ ಕೆಲಸದಲ್ಲಿ, 5 ರತ್ನಗಳನ್ನ ಕತ್ತರಿಸೋ, ಕುಂದಣಗಳನ್ನ ಮಾಡಿ ಅವುಗಳಲ್ಲಿ ರತ್ನಗಳನ್ನ ಕೂರಿಸೋ,+ ಮರದ ಎಲ್ಲ ರೀತಿಯ ವಸ್ತುಗಳನ್ನ ಮಾಡೋ ಕೆಲಸದಲ್ಲಿ ನಿಪುಣನಾಗ್ತಾನೆ.+ 6 ಬೆಚಲೇಲನಿಗೆ ಸಹಾಯ ಮಾಡೋಕೆ ದಾನ್ ಕುಲದ ಅಹೀಸಾಮಾಕನ ಮಗ ಒಹೊಲೀಯಾಬನನ್ನ+ ನೇಮಿಸಿದ್ದೀನಿ. ಅಷ್ಟೇ ಅಲ್ಲ ಯಾರಲ್ಲಿ ಕೌಶಲ ಇದ್ಯೋ ಅವರಿಗೆಲ್ಲ ವಿವೇಕ ಕೊಡ್ತೀನಿ. ಇದ್ರಿಂದ ನಾನು ನಿನಗೆ ಆಜ್ಞಾಪಿಸಿದ್ದೆಲ್ಲ ಅವರು ಮಾಡ್ತಾರೆ.+ 7 ದೇವದರ್ಶನದ ಡೇರೆ,+ ಸಾಕ್ಷಿ ಮಂಜೂಷ,+ ಅದ್ರ ಮುಚ್ಚಳ,+ ಡೇರೆಯಲ್ಲಿ ಇರಬೇಕಾದ ಎಲ್ಲ ಉಪಕರಣಗಳು, 8 ಮೇಜು,+ ಅದ್ರ ಉಪಕರಣಗಳು, ಶುದ್ಧ ಚಿನ್ನದ ದೀಪಸ್ತಂಭ, ಅದ್ರ ಎಲ್ಲ ಉಪಕರಣಗಳು,+ ಧೂಪವೇದಿ,+ 9 ಸರ್ವಾಂಗಹೋಮದ ಯಜ್ಞವೇದಿ,+ ಅದ್ರ ಎಲ್ಲ ಉಪಕರಣಗಳು, ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠ,+ 10 ಉತ್ತಮ ರೀತಿಯ ಹೆಣಿಗೆ ಕೆಲಸದಿಂದ ಮಾಡಿದ ಬಟ್ಟೆಗಳು, ಪುರೋಹಿತ ಆರೋನನ ಪವಿತ್ರ ಬಟ್ಟೆಗಳು, ಅವನ ಮಕ್ಕಳು ಪುರೋಹಿತರಾಗಿ ಸೇವೆ ಮಾಡುವಾಗ ಹಾಕೋ ಬಟ್ಟೆಗಳು,+ 11 ಅಭಿಷೇಕ ತೈಲ, ಆರಾಧನಾ ಸ್ಥಳದಲ್ಲಿ ಬಳಸೋ ಸುವಾಸನೆಯ ಧೂಪ,+ ಹೀಗೆ ನಾನು ನಿನಗೆ ಆಜ್ಞೆ ಕೊಟ್ಟ ಪ್ರತಿಯೊಂದನ್ನೂ ಅವರು ಮಾಡ್ತಾರೆ.”
12 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 13 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ಕೊಟ್ಟ ಸಬ್ಬತ್+ ನಿಯಮವನ್ನ ತಪ್ಪದೆ ಪಾಲಿಸಬೇಕು. ಯಾಕಂದ್ರೆ ನಾನು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದಕ್ಕೆ ಗುರುತು ಈ ಸಬ್ಬತ್. ಯೆಹೋವನಾದ ನಾನು ನಿಮ್ಮನ್ನ ಪವಿತ್ರ ಜನರಾಗಿ ಪ್ರತ್ಯೇಕಿಸ್ತಾ ಇದ್ದೀನಿ ಅಂತ ಈ ಗುರುತು ನಿಮ್ಮ ಎಲ್ಲ ಪೀಳಿಗೆಗೆ ನೆನಪು ಹುಟ್ಟಿಸುತ್ತೆ. 14 ಸಬ್ಬತ್ ಪವಿತ್ರ ಆಗಿರೋದ್ರಿಂದ ನೀವು ಅದನ್ನ ಆಚರಿಸ್ಲೇಬೇಕು.+ ಸಬ್ಬತ್ ನಿಯಮ ಮೀರುವವರನ್ನ ಸಾಯಿಸಬೇಕು. ಯಾರಾದ್ರೂ ಆ ದಿನ ಕೆಲಸ ಮಾಡಿದ್ರೆ ಅವನನ್ನ ಸಾಯಿಸಬೇಕು.+ 15 ಆರು ದಿನ ನೀವು ಕೆಲಸ ಮಾಡಬಹುದು, ಆದ್ರೆ ಏಳನೇ ದಿನ ಸಬ್ಬತ್ ಆಗಿರೋದ್ರಿಂದ ಪೂರ್ತಿ ವಿಶ್ರಾಂತಿ ತಗೊಬೇಕು.+ ಆ ದಿನ ಯೆಹೋವನಿಗೆ ಪವಿತ್ರ. ಯಾರಾದ್ರೂ ಸಬ್ಬತ್ ದಿನದಲ್ಲಿ ಕೆಲಸ ಮಾಡಿದ್ರೆ ಅವರನ್ನ ಸಾಯಿಸಬೇಕು. 16 ಇಸ್ರಾಯೇಲ್ಯರು ಸಬ್ಬತ್ ನಿಯಮ ಪಾಲಿಸ್ಲೇಬೇಕು. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು. ಇದು ಶಾಶ್ವತ ಒಪ್ಪಂದ. 17 ನಾನು ಇಸ್ರಾಯೇಲ್ಯರ ಜೊತೆ ಮಾಡಿರೋ ಒಪ್ಪಂದಕ್ಕೆ ಸಬ್ಬತ್ ಆಚರಣೆ ಯಾವಾಗ್ಲೂ ಗುರುತಾಗಿ ಇರುತ್ತೆ.+ ಯಾಕಂದ್ರೆ ಯೆಹೋವನಾದ ನಾನು ಆರು ದಿನದಲ್ಲಿ ಆಕಾಶ ಭೂಮಿಯನ್ನ ಸೃಷ್ಟಿ ಮಾಡಿ, ಏಳನೇ ದಿನ ಕೆಲಸ ನಿಲ್ಲಿಸಿ ವಿಶ್ರಾಂತಿ ತಗೊಂಡೆ.’”+
18 ಸಿನಾಯಿ ಬೆಟ್ಟದ ಮೇಲೆ ಮೋಶೆ ಜೊತೆ ಮಾತಾಡಿ ಮುಗಿಸಿದ ಕೂಡ್ಲೇ ದೇವರು ತನ್ನ ಆಜ್ಞೆಗಳಿರೋ ಎರಡು ಕಲ್ಲಿನ ಹಲಗೆಗಳನ್ನ ಅವನಿಗೆ ಕೊಟ್ಟನು.+ ದೇವರು ತನ್ನ ಕೈಯಿಂದಾನೇ*+ ಆ ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದನು.
32 ತುಂಬ ದಿನವಾದ್ರೂ ಮೋಶೆ ಬೆಟ್ಟದಿಂದ+ ಇಳಿದು ಬರದೇ ಇರೋದನ್ನ ಜನ ನೋಡಿ ಆರೋನನ ಹತ್ರ ಬಂದು ಗುಂಪುಗೂಡಿ “ನಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದ ಆ ಮೋಶೆಗೆ ಏನಾಯ್ತೋ ಗೊತ್ತಿಲ್ಲ. ಹಾಗಾಗಿ ನಮ್ಮನ್ನ ಮಾರ್ಗದರ್ಶಿಸಿ ಮುಂದಕ್ಕೆ ಕರ್ಕೊಂಡು ಹೋಗೋಕೆ ನಮಗೊಂದು ದೇವರನ್ನ ಮಾಡ್ಕೊಡು” ಅಂದ್ರು.+ 2 ಅದಕ್ಕೆ ಆರೋನ “ಸರಿ, ನಿಮ್ಮ ಹೆಂಡತಿ ಮಕ್ಕಳ ಕಿವಿಯಲ್ಲಿರೋ ಚಿನ್ನದ ಓಲೆಗಳನ್ನ+ ತಗೊಂಡು ಬಂದು ನನಗೆ ಕೊಡಿ” ಅಂದ. 3 ಅವರು ಹೋಗಿ ತಮ್ಮ ಹೆಂಡತಿ ಮಕ್ಕಳ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನ ತೆಗೆದು ಆರೋನನಿಗೆ ಕೊಟ್ರು. 4 ಅವನು ಅದನ್ನೆಲ್ಲ ಕರಗಿಸಿ ಅಚ್ಚಲ್ಲಿ ಹೊಯ್ದು ಕೆತ್ತನೆಯ ಸಲಕರಣೆಯಿಂದ ಒಂದು ಕರುವಿನ ಮೂರ್ತಿ ಮಾಡಿದ.+ ಆಗ ಜನ “ಇಸ್ರಾಯೇಲ್ಯರೇ, ನಮ್ಮ ದೇವರನ್ನ ನೋಡಿ. ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದಿದ್ದು ಈ ದೇವರೇ”+ ಅಂತ ಕೂಗೋಕೆ ಶುರುಮಾಡಿದ್ರು.
5 ಆರೋನ ಅದನ್ನ ನೋಡಿ ಆ ಕರುವಿನ ಮುಂದೆ ಒಂದು ಯಜ್ಞವೇದಿ ಕಟ್ಟಿದ. ಆಮೇಲೆ “ನಾಳೆ ಯೆಹೋವನಿಗಾಗಿ ಒಂದು ಹಬ್ಬ ಇರುತ್ತೆ” ಅಂತ ಎಲ್ರಿಗೂ ಹೇಳಿದ. 6 ಹಾಗಾಗಿ ಜನ್ರು ಮಾರನೇ ದಿನ ಬೆಳಿಗ್ಗೆ ಬೇಗ ಎದ್ದು ಸರ್ವಾಂಗಹೋಮ ಬಲಿಗಳನ್ನ ಸಮಾಧಾನ ಬಲಿಗಳನ್ನ ಅರ್ಪಿಸಿದ್ರು. ಕೂತು ತಿಂದ್ರು, ಕುಡಿದ್ರು. ಆಮೇಲೆ ಎದ್ದು ಮೋಜು ಮಾಡಿದ್ರು.+
7 ಆಗ ಯೆಹೋವ ಮೋಶೆಗೆ “ನೀನು ಬೆಟ್ಟದಿಂದ ಇಳಿದು ಹೋಗು. ನೀನು ಈಜಿಪ್ಟಿಂದ ಕರ್ಕೊಂಡು ಬಂದ ನಿನ್ನ ಜನ ಕೆಟ್ಟವರು ಆಗಿಬಿಟ್ರು.+ 8 ನಾನು ಕೊಟ್ಟ ಆಜ್ಞೆಗಳನ್ನ* ಅವರು ಎಷ್ಟು ಬೇಗ ಮೀರಿದ್ದಾರೆ!+ ಅವರು ತಮಗಾಗಿ ಒಂದು ಕರು ಮೂರ್ತಿ ಮಾಡ್ಕೊಂಡು ಅದಕ್ಕೆ ಅಡ್ಡಬೀಳ್ತಿದ್ದಾರೆ. ಅದಕ್ಕೆ ಬಲಿಗಳನ್ನ ಅರ್ಪಿಸ್ತಾ ‘ಇಸ್ರಾಯೇಲ್ಯರೇ, ನಮ್ಮ ದೇವರನ್ನ ನೋಡಿ, ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದಿದ್ದು ಈ ದೇವರೇ’ ಅಂತ ಹೇಳ್ತಿದ್ದಾರೆ” ಅಂದನು. 9 ಯೆಹೋವ ಮೋಶೆಗೆ “ಈ ಜನ್ರು ತುಂಬ ಹಠಮಾರಿಗಳು ಅಂತ ನಂಗೊತ್ತು.+ 10 ನನಗೆ ಅವರ ಮೇಲೆ ಕೋಪ ಹೊತ್ತಿ ಉರಿತಿದೆ. ನಾನು ಅವರನ್ನೆಲ್ಲ ನಾಶ ಮಾಡಿಬಿಡ್ತೀನಿ. ನೀನು ನನ್ನನ್ನ ತಡಿಬೇಡ. ಅವರ ಬದ್ಲು ನಿನ್ನ ವಂಶದವರನ್ನೇ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ”+ ಅಂದನು.
11 ಅದಕ್ಕೆ ಮೋಶೆ ತನ್ನ ದೇವರಾದ ಯೆಹೋವನ+ ಹತ್ರ ಮನವಿ ಮಾಡ್ತಾ “ಯೆಹೋವನೇ, ನೀನು ಅದ್ಭುತಗಳನ್ನ ಮಾಡಿ ನಿನ್ನ ಮಹಾಶಕ್ತಿಯಿಂದ ಈ ಜನ್ರನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದೆ ಅಲ್ವಾ. ಈಗ ಅವ್ರ ಮೇಲೆ ಯಾಕೆ ಕೋಪ ಮಾಡ್ಕೊಳ್ತೀಯ? ಅವರನ್ನ ಯಾಕೆ ಪೂರ್ತಿ ನಾಶಮಾಡಬೇಕು ಅಂತಿದ್ದೀಯ?+ 12 ನೀನು ಅವರನ್ನ ನಾಶಮಾಡಿದ್ರೆ ಈಜಿಪ್ಟಿನವರು ನಿನ್ನ ಬಗ್ಗೆ ತಪ್ಪಾಗಿ ಮಾತಾಡಬಹುದಲ್ವಾ? ‘ಈ ಜನ್ರಿಗೆ ಕೇಡು ಮಾಡಬೇಕು ಅನ್ನೋ ಉದ್ದೇಶದಿಂದಾನೇ ಅವ್ರ ದೇವರು ಅವರನ್ನ ಇಲ್ಲಿಂದ ಕರ್ಕೊಂಡು ಹೋದನು. ಅವರನ್ನ ಬೆಟ್ಟಗಳಿಗೆ ಕರ್ಕೊಂಡು ಹೋಗಿ ಸಾಯಿಸಿ ಭೂಮಿ ಮೇಲೆ ಅವರ ಹೆಸರೇ ಇಲ್ಲದ ಹಾಗೆ ಮಾಡಬೇಕು ಅನ್ನೋದೇ ಆತನ ಉದ್ದೇಶ ಆಗಿತ್ತು’ ಅಂತ ಅವರು ಹೇಳಲ್ವಾ?+ ಹಾಗಾಗಿ ಕೋಪ ಬಿಡು. ನಿನ್ನ ಜನ್ರನ್ನ ನಾಶಮಾಡಬೇಕು ಅನ್ನೋ ತೀರ್ಮಾನದ ಬಗ್ಗೆ ಇನ್ನೊಂದು ಸಲ ಯೋಚಿಸು.* 13 ನಿನ್ನ ಸೇವಕರಾದ ಅಬ್ರಹಾಮ, ಇಸಾಕ, ಇಸ್ರಾಯೇಲನಿಗೆ ನಿನ್ನ ಮೇಲೆ ಆಣೆಯಿಟ್ಟು ಹೇಳಿದ ಮಾತನ್ನ ನೆನಪು ಮಾಡ್ಕೊ. ‘ನಿಮ್ಮ ಸಂತತಿನ ಆಕಾಶದ ನಕ್ಷತ್ರಗಳ+ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ. ನಾನು ನಿಮ್ಮ ಸಂತತಿಗಾಗಿ ಇಟ್ಟಿರೋ ಈ ಇಡೀ ದೇಶನ ಅವರಿಗೆ ಕೊಡ್ತೀನಿ. ಅದು ಸದಾ ಅವರ ಆಸ್ತಿಯಾಗಿ ಇರುತ್ತೆ’ ಅಂತ ನೀನೇ ಮಾತು ಕೊಟ್ಟಿದ್ದೆ ತಾನೇ?”+ ಅಂದ.
14 ಹಾಗಾಗಿ ಯೆಹೋವ ತನ್ನ ತೀರ್ಮಾನ ಬದಲಾಯಿಸ್ಕೊಂಡನು, ತನ್ನ ಜನ್ರನ್ನ ಪೂರ್ತಿಯಾಗಿ ನಾಶಮಾಡಲಿಲ್ಲ.+
15 ಆಮೇಲೆ ಮೋಶೆ ದೇವರ ಆಜ್ಞೆಗಳಿದ್ದ ಎರಡು ಕಲ್ಲಿನ ಹಲಗೆಗಳನ್ನ+ ಕೈಯಲ್ಲಿ ಹಿಡ್ಕೊಂಡು ಬೆಟ್ಟದಿಂದ ಇಳಿದು ಹೋದ.+ ಆ ಕಲ್ಲಿನ ಹಲಗೆಗಳ ಹಿಂದೆ ಮುಂದೆ ಎರಡೂ ಕಡೆ ಅಕ್ಷರಗಳನ್ನ ಕೆತ್ತಿ ಬರೆಯಲಾಗಿತ್ತು. 16 ಆ ಕಲ್ಲಿನ ಹಲಗೆಗಳನ್ನ ದೇವರೇ ಮಾಡಿ ಆತನೇ ಅವುಗಳ ಮೇಲೆ ಕೆತ್ತಿದ್ದನು.+ 17 ಬೆಟ್ಟದ ಬುಡದಲ್ಲಿದ್ದ ಜನ ಕೂಗಾಡ್ತಾ ಇದ್ದ ಶಬ್ದ ಕೇಳಿಸಿದಾಗ ಯೆಹೋಶುವ ಮೋಶೆಗೆ “ಪಾಳೆಯದಲ್ಲಿ ಯುದ್ಧ ನಡಿತಿರೋ ಶಬ್ದ ಕೇಳ್ತಾ ಇದೆ” ಅಂದ. 18 ಅದಕ್ಕೆ ಮೋಶೆ
“ಜನ್ರು ಹಾಡ್ತಿರೋ ಶಬ್ದ ಕೇಳಿಸ್ತಿದೆ. ಆದ್ರೆ ಅದು ವಿಜಯ ಗೀತೆ ಅಲ್ಲ,
ಸೋತವರು ಗೋಳಾಡ್ತಿರೋ ಶಬ್ದ ಅಂತಾನೂ ಅನಿಸ್ತಿಲ್ಲ,
ಇದು ಬೇರೆ ಏನೋ ಶಬ್ದ” ಅಂದ.
19 ಮೋಶೆ ಪಾಳೆಯದ ಹತ್ರ ಬಂದ ಕೂಡಲೇ ಕರುವಿನ ಮೂರ್ತಿಯನ್ನ,+ ಜನ ಕುಣಿಯೋದನ್ನ ನೋಡಿದ. ಆಗ ಅವನಿಗೆ ಎಷ್ಟು ಕೋಪ ಬಂತಂದ್ರೆ ಕೈಯಲ್ಲಿದ್ದ ಕಲ್ಲಿನ ಹಲಗೆಗಳನ್ನ ಬೆಟ್ಟದ ಕೆಳಗೆ ಜೋರಾಗಿ ಎಸೆದುಬಿಟ್ಟ. ಆ ಹಲಗೆಗಳು ಚೂರುಚೂರಾಯ್ತು.+ 20 ಜನ್ರು ಮಾಡ್ಕೊಂಡಿದ್ದ ಕರುವಿನ ಮೂರ್ತಿನ ಅವನು ಬೆಂಕಿಯಲ್ಲಿ ಸುಟ್ಟುಬಿಟ್ಟ. ಅದನ್ನ ಪುಡಿಪುಡಿ ಮಾಡಿ+ ನೀರಿಗೆ ಹಾಕಿ ಇಸ್ರಾಯೇಲ್ಯರಿಗೆ ಆ ನೀರು ಕುಡಿಸಿದ.+ 21 ಮೋಶೆ ಆರೋನನಿಗೆ “ಇಷ್ಟು ಘೋರ ಪಾಪ ಜನ್ರ ತಲೆ ಮೇಲೆ ಬರೋ ತರ ಮಾಡಿದ್ಯಲ್ಲಾ? ಯಾಕೆ ಹೀಗಾಯ್ತು? ಈ ಜನ್ರು ಏನು ಮಾಡಿದ್ರು?” ಅಂತ ಕೇಳಿದ. 22 ಅದಕ್ಕೆ ಆರೋನ “ಸ್ವಾಮಿ ಕೋಪ ಮಾಡ್ಕೊಬೇಡ, ಈ ಜನ್ರ ಕೆಟ್ಟ ಬುದ್ಧಿ ನಿನಗೆ ಗೊತ್ತೇ ಇದೆ.+ 23 ಅವರು ನನ್ನ ಹತ್ರ ಬಂದು ‘ನಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದ ಆ ಮೋಶೆಗೆ ಏನಾಯ್ತೋ ಗೊತ್ತಿಲ್ಲ. ಈಗ ನಮ್ಮನ್ನ ಮುಂದೆ ಕರ್ಕೊಂಡು ಹೋಗೋಕೆ ನಮಗೊಂದು ದೇವರನ್ನ ಮಾಡ್ಕೊಡು’ ಅಂತ ಹೇಳಿದ್ರು.+ 24 ಅದಕ್ಕೇ ನಾನು ಅವರಿಗೆ ‘ನಿಮ್ಮ ಹತ್ರ ಇರೋ ಚಿನ್ನದ ಒಡವೆಗಳನ್ನ ಬಿಚ್ಚಿ ನನಗೆ ಕೊಡಿ’ ಅಂದೆ. ಅವರು ಕೊಟ್ಟ ಚಿನ್ನದ ಒಡವೆಗಳನ್ನ ನಾನು ಬೆಂಕಿಯಲ್ಲಿ ಹಾಕಿದಾಗ ಈ ಕರುವಿನ ಮೂರ್ತಿ ಬಂತು” ಅಂದ.
25 ಜನ ಎಲ್ಲೆಮೀರಿ ಹೋಗೋ ಹಾಗೆ ಆರೋನ ಬಿಟ್ಟಿದ್ರಿಂದ ಅವರು ತಮಗೆ ಇಷ್ಟ ಬಂದ ಹಾಗೆ ನಡೆದ್ರು ಅಂತ ಮೋಶೆಗೆ ಗೊತ್ತಾಯ್ತು. ಇಸ್ರಾಯೇಲ್ಯರು ಹಾಗೆ ಮಾಡಿ ವಿರೋಧಿಗಳ ಮುಂದೆ ಅವಮಾನಕ್ಕೆ ಗುರಿಯಾದ್ರು. 26 ಆಮೇಲೆ ಮೋಶೆ ಪಾಳೆಯದ ದ್ವಾರದಲ್ಲಿ ನಿಂತು “ಯೆಹೋವನ ಪಕ್ಷದಲ್ಲಿ ಇರೋರೆಲ್ಲ ನನ್ನ ಹತ್ರ ಬನ್ನಿ!”+ ಅಂದ. ಆಗ ಲೇವಿಯರೆಲ್ಲ ಅವನ ಸುತ್ತ ಬಂದು ನಿಂತ್ರು. 27 ಮೋಶೆ ಅವರಿಗೆ “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀವೆಲ್ಲ ನಿಮ್ಮ ಕತ್ತಿ ತಗೊಳ್ಳಿ. ಇಡೀ ಪಾಳೆಯದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿ ತನಕ ಹೋಗಿ* ಅಣ್ಣತಮ್ಮ, ನೆರೆಯವ, ಆಪ್ತ ಗೆಳೆಯ ಅಂತ ನೋಡದೆ ಜನ್ರನ್ನ ಸಾಯಿಸಿ’ ”+ ಅಂದ. 28 ಲೇವಿಯರು ಮೋಶೆ ಹೇಳಿದ ತರನೇ ಮಾಡಿದ್ರು. ಆ ದಿನ ಸುಮಾರು 3,000 ಗಂಡಸರನ್ನ ಸಾಯಿಸಿದ್ರು. 29 ಆಮೇಲೆ ಮೋಶೆ “ನಿಮ್ಮನ್ನ ಯೆಹೋವನ ಸೇವೆಗಾಗಿ ಇವತ್ತು ಪ್ರತ್ಯೇಕಿಸಿಕೊಳ್ಳಿ. ನೀವು ಆತನ ಮಾತನ್ನ ಕೇಳಿ ನಿಮ್ಮ ಅಣ್ಣತಮ್ಮಂದಿರ, ಮಕ್ಕಳ ವಿರುದ್ಧ ಹೋರಾಡಿದ್ದೀರ.+ ಹಾಗಾಗಿ ದೇವರು ನಿಮ್ಮನ್ನ ಇವತ್ತು ಆಶೀರ್ವದಿಸ್ತಾನೆ”+ ಅಂದ.
30 ಮಾರನೇ ದಿನನೇ ಮೋಶೆ ಜನ್ರಿಗೆ “ನೀವು ಘೋರ ಪಾಪ ಮಾಡಿದ್ದೀರ. ನಾನೀಗ ಬೆಟ್ಟ ಹತ್ತಿ ಯೆಹೋವನ ಹತ್ರ ಹೋಗಿ ನಿಮಗಾಗಿ ಅಂಗಲಾಚಿ ಬೇಡ್ತೀನಿ. ಆತನು ನಿಮ್ಮನ್ನ ಕ್ಷಮಿಸಬಹುದು”+ ಅಂದ. 31 ಮೋಶೆ ಮತ್ತೆ ಬೆಟ್ಟ ಹತ್ತಿ ಹೋಗಿ ಯೆಹೋವನಿಗೆ “ಈ ಜನ್ರು ತಮಗಾಗಿ ಒಂದು ಚಿನ್ನದ ದೇವರನ್ನ ಮಾಡ್ಕೊಂಡು ಘೋರ ಪಾಪ ಮಾಡಿದ್ದಾರೆ!+ 32 ನಿನಗೆ ಮನಸ್ಸಿದ್ರೆ ಜನ್ರ ಪಾಪನ ಕ್ಷಮಿಸು.+ ಇಲ್ಲಾಂದ್ರೆ ದಯವಿಟ್ಟು ನೀನು ಬರೆದಿರೋ ಪುಸ್ತಕದಿಂದ ನನ್ನ ಹೆಸರನ್ನೇ ಅಳಿಸಿಬಿಡು”+ ಅಂದ. 33 ಆದ್ರೆ ಯೆಹೋವ ಮೋಶೆಗೆ “ನನ್ನ ವಿರುದ್ಧ ಪಾಪಮಾಡಿದವರ ಹೆಸರುಗಳನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಹಾಕ್ತೀನಿ. 34 ಈಗ ಹೋಗು. ನಾನು ನಿನಗೆ ಹೇಳಿದ ಸ್ಥಳಕ್ಕೆ ಜನ್ರನ್ನ ಕರ್ಕೊಂಡು ಹೋಗು. ನನ್ನ ದೂತ ನಿನ್ನ ಮುಂದೆ ಹೋಗ್ತಾನೆ.+ ನಾನು ಅವರಿಗೆ ತೀರ್ಪು ಕೊಡೋ ದಿನದಲ್ಲಿ ಅವ್ರ ಪಾಪಕ್ಕೆ ಶಿಕ್ಷೆ ಕೊಡ್ತೀನಿ” ಅಂದನು. 35 ಜನ ಕರುವಿನ ಮೂರ್ತಿ ಮಾಡ್ಕೊಂಡಿದ್ರಿಂದ ಯೆಹೋವ ಅವರಿಗೆ ಕಾಯಿಲೆ ಬರೋ ತರ ಮಾಡಿದನು. ಆ ಮೂರ್ತಿನ ಅವರು ಆರೋನನ ಕೈಯಿಂದ ಮಾಡಿಸಿದ್ರು.
33 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ “ನೀನು ಈಜಿಪ್ಟಿಂದ ಕರ್ಕೊಂಡು ಬಂದ ಜನ್ರ ಜೊತೆ ಪ್ರಯಾಣ ಮುಂದುವರಿಸು. ನಾನು ಅಬ್ರಹಾಮ, ಇಸಾಕ, ಯಾಕೋಬರಿಗೆ ಯಾವ ದೇಶವನ್ನ ಅವರ ಸಂತತಿಗೆ ಕೊಡ್ತೀನಿ ಅಂತ ಹೇಳಿದ್ದೀನೋ ಆ ದೇಶಕ್ಕೆ ಈ ಜನ್ರನ್ನ ಕರ್ಕೊಂಡು ಹೋಗು.+ 2 ನಾನು ಒಬ್ಬ ದೂತನನ್ನ ನಿಮ್ಮ ಮುಂದೆ ಕಳಿಸ್ತೀನಿ.+ ಕಾನಾನ್ಯರನ್ನ, ಅಮೋರಿಯರನ್ನ, ಹಿತ್ತಿಯರನ್ನ, ಪೆರಿಜೀಯರನ್ನ, ಹಿವ್ವಿಯರನ್ನ, ಯೆಬೂಸಿಯರನ್ನ ಆ ದೇಶದಿಂದ ಓಡಿಸಿಬಿಡ್ತೀನಿ.+ 3 ನೀವು ಹಾಲೂ ಜೇನೂ ಹರಿಯೋ ಆ ದೇಶಕ್ಕೆ ಹೋಗಿ.+ ಆದ್ರೆ ನಾನು ನಿಮ್ಮ ಜೊತೆ ಬರಲ್ಲ. ಯಾಕಂದ್ರೆ ನೀವು ಹಠಮಾರಿಗಳು.+ ನಿಮ್ಮ ಹಠಮಾರಿತನ ನೋಡಿ ನಾನು ನಿಮ್ಮನ್ನ ದಾರಿಯಲ್ಲೇ ನಾಶ ಮಾಡ್ಲೂಬಹುದು.”+
4 ಜನ್ರು ಈ ಕಟುವಾದ ಮಾತು ಕೇಳಿ ತುಂಬ ದುಃಖಪಟ್ರು. ಅವರಲ್ಲಿ ಒಬ್ರು ಕೂಡ ಒಡವೆಗಳನ್ನಾಗಲಿ ಅಂದವಾದ ಬಟ್ಟೆಗಳನ್ನಾಗಲಿ ಹಾಕಲಿಲ್ಲ. 5 ಯೆಹೋವ ಮೋಶೆಗೆ “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಹಠಮಾರಿಗಳು.+ ನಾನು ಮನಸ್ಸು ಮಾಡಿದ್ರೆ ನಿಮ್ಮ ಮಧ್ಯ ಬಂದು ನಿಮ್ಮನ್ನೆಲ್ಲ ಒಂದೇ ಕ್ಷಣದಲ್ಲಿ ನಾಶ ಮಾಡಬಹುದು.+ ಈಗ ನೀವು ಒಡವೆಗಳನ್ನಾಗಲಿ ಅಂದವಾದ ಬಟ್ಟೆಗಳನ್ನಾಗಲಿ ಹಾಕಬೇಡಿ. ನಿಮಗೇನು ಮಾಡಬೇಕಂತ ಯೋಚಿಸ್ತೀನಿ” ಅಂದನು. 6 ಹಾಗಾಗಿ ಇಸ್ರಾಯೇಲ್ಯರು ಹೋರೇಬ್ ಬೆಟ್ಟದ ಹತ್ರ ಇದ್ದ ಸಮಯದಿಂದ ಒಡವೆಗಳನ್ನಾಗಲಿ ಅಂದವಾದ ಬಟ್ಟೆಗಳನ್ನಾಗಲಿ ಹಾಕಲಿಲ್ಲ.
7 ಮೋಶೆ ತನ್ನ ಡೇರೆ ಕಿತ್ತು ಪಾಳೆಯದ ಹೊರಗೆ ಸ್ವಲ್ಪ ದೂರ ಹೋಗಿ ಡೇರೆ ಹಾಕೊಂಡ. ಅವನು ಅದಕ್ಕೆ ದೇವದರ್ಶನ ಡೇರೆ ಅಂತ ಹೆಸರಿಟ್ಟ. ಯಾರಿಗಾದ್ರೂ ಯೆಹೋವನ ತೀರ್ಮಾನ ಏನಂತ ತಿಳ್ಕೊಳ್ಳೋಕೆ ಇಷ್ಟಪಟ್ರೆ+ ಅವರು ಪಾಳೆಯದ ಹೊರಗಿದ್ದ ದೇವದರ್ಶನ ಡೇರೆಗೆ ಹೋಗ್ತಿದ್ರು. 8 ಮೋಶೆ ಪಾಳೆಯದ ಹೊರಗಿದ್ದ ಆ ಡೇರೆ ಹತ್ರ ಹೋಗುವಾಗ ಜನ್ರೆಲ್ಲ ಕೂಡ್ಲೇ ಎದ್ದು ತಮ್ಮತಮ್ಮ ಡೇರೆಯ ಬಾಗಿಲಲ್ಲಿ ನಿಂತ್ಕೊಳ್ತಿದ್ರು. ಮೋಶೆ ಡೇರೆಯೊಳಗೆ ಹೋಗೋ ತನಕ ಅವನನ್ನೇ ನೋಡ್ತಾ ನಿಲ್ತಿದ್ರು. 9 ಮೋಶೆ ಡೇರೆಯೊಳಗೆ ಹೋದ ಕೂಡ್ಲೇ ಮೋಡ+ ಇಳಿದು ಬಂದು ಆ ಡೇರೆಯ ಬಾಗಿಲಲ್ಲಿ ನಿಲ್ತಿತ್ತು. ದೇವರು ಮೋಶೆ ಜೊತೆ ಮಾತಾಡ್ತಿರುವಾಗ+ ಅದು ಅಲ್ಲೇ ಇರ್ತಿತ್ತು. 10 ಮೋಡ ಆ ಡೇರೆಯ ಬಾಗಿಲಲ್ಲಿ ನಿಂತಿರೋದನ್ನ ಜನ್ರು ನೋಡಿದಾಗ ಅವರೆಲ್ಲ ತಮ್ಮತಮ್ಮ ಡೇರೆಯ ಬಾಗಿಲಲ್ಲೇ ಅಡ್ಡಬೀಳ್ತಿದ್ರು. 11 ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಮಾತಾಡೋ ಹಾಗೇ ಯೆಹೋವ ಮೋಶೆ ಜೊತೆ ಮಾತಾಡ್ತಿದ್ದನು.+ ಮೋಶೆ ಪಾಳೆಯಕ್ಕೆ ವಾಪಸ್ ಬಂದಾಗೆಲ್ಲ ಯೆಹೋಶುವ+ ಆ ಡೇರೆಯಲ್ಲಿ ಇರ್ತಿದ್ದ. ನೂನನ ಮಗನಾದ ಇವನು ಮೋಶೆಯ ಸೇವಕನೂ ಸಹಾಯಕನೂ ಆಗಿದ್ದ.+
12 ಮೋಶೆ ಯೆಹೋವನಿಗೆ “‘ಈ ಜನ್ರನ್ನ ಕರ್ಕೊಂಡು ಹೋಗು’ ಅಂತ ನನಗೆ ಹೇಳ್ದೆ. ಆದ್ರೆ ನನ್ನ ಜೊತೆ ಯಾರನ್ನ ಕಳಿಸ್ತಿಯ ಅಂತ ಹೇಳಲೇ ಇಲ್ವಲ್ಲಾ? ಅಷ್ಟೇ ಅಲ್ಲ ‘ನಿನ್ನನ್ನ ಚೆನ್ನಾಗಿ ತಿಳ್ಕೊಂಡಿದ್ದೀನಿ, ನಿನ್ನನ್ನ ನಾನು ಮೆಚ್ಚಿದ್ದೀನಿ’ ಅಂತ ಹೇಳ್ದೆ. 13 ನೀನು ನನ್ನನ್ನ ಮೆಚ್ಚಿರೋದಾದ್ರೆ ನೀನೇನು ಮಾಡ್ತೀಯ ಅಂತ ದಯವಿಟ್ಟು ನನಗೆ ಹೇಳು.+ ಆಗ ನಿನ್ನನ್ನ ಚೆನ್ನಾಗಿ ತಿಳ್ಕೊಳ್ಳೋಕೆ, ಯಾವಾಗ್ಲೂ ನಿನ್ನ ಮೆಚ್ಚುಗೆ ಪಡಿಯೋಕೆ ಆಗುತ್ತೆ. ಈ ಜನ್ರು ನಿನ್ನವರಲ್ವಾ?+ ಅದನ್ನ ಮರಿಬೇಡ” ಅಂದ. 14 ಅದಕ್ಕೆ ದೇವರು “ನಾನೇ ನಿನ್ನ ಜೊತೆ ಬರ್ತಿನಿ.+ ನಿನಗೆ ಶಾಂತಿ ಕೊಡ್ತೀನಿ” ಅಂದನು.+ 15 ಆಗ ಮೋಶೆ ದೇವರಿಗೆ “ನೀನು ನಮ್ಮ ಜೊತೆ ಬರದಿದ್ರೆ ನಮ್ಮನ್ನ ಇಲ್ಲಿಂದ ಮುಂದಕ್ಕೆ ಕಳಿಸಬೇಡ. 16 ನೀನು ಬರದಿದ್ರೆ ನನ್ನನ್ನ, ನಿನ್ನ ಜನ್ರನ್ನ ನೀನು ಮೆಚ್ಚಿದ್ದಿಯ ಅಂತ ನಮಗೆ ಹೇಗೆ ಗೊತ್ತಾಗುತ್ತೆ? ನೀನು ನಮ್ಮ ಜೊತೆ ಬಂದ್ರೆ+ ಮಾತ್ರ ಭೂಮಿಯಲ್ಲಿರೋ ಬೇರೆಲ್ಲ ಜನ್ರಿಗಿಂತ ನಾನು ಮತ್ತೆ ನಿನ್ನ ಜನ್ರು ಭಿನ್ನರಾಗಿ ಇದ್ದೀವಿ ಅಂತ ಗೊತ್ತಾಗುತ್ತೆ” ಅಂದ.+
17 ಯೆಹೋವ ಮೋಶೆಗೆ “ನಾನು ನಿನ್ನನ್ನ ಮೆಚ್ಚಿರೋದ್ರಿಂದ, ನಿನ್ನನ್ನ ಚೆನ್ನಾಗಿ* ತಿಳಿದಿರೋದ್ರಿಂದ ನೀನು ಕೇಳಿರೋ ಈ ವಿಷ್ಯವನ್ನ ಮಾಡ್ತೀನಿ” ಅಂದನು. 18 ಆಗ ಮೋಶೆ “ದಯವಿಟ್ಟು ನಿನ್ನ ಮಹಿಮೆನ ನನಗೆ ತೋರಿಸು” ಅಂದ. 19 ಅದಕ್ಕೆ ದೇವರು “ನಿನ್ನ ಮುಂದೆ ದಾಟಿ ಹೋಗ್ತೀನಿ. ಆಗ ನಾನು ಎಷ್ಟು ಒಳ್ಳೆಯವನು ಅಂತ ನಿನಗೆ ಗೊತ್ತಾಗುತ್ತೆ. ಯೆಹೋವ ಅನ್ನೋ ನನ್ನ ಹೆಸರನ್ನ ನಿನಗೆ ಪ್ರಕಟಿಸ್ತೀನಿ.+ ನಾನು ಯಾರನ್ನ ಮೆಚ್ಚುತ್ತೀನೋ ಅವರಿಗೆ ಹೆಚ್ಚು ದಯೆ ತೋರಿಸ್ತೀನಿ, ಯಾರಿಗೆ ಕರುಣೆ ತೋರಿಸೋಕೆ ಇಷ್ಟಪಡ್ತೀನೋ ಅವರಿಗೆ ಕರುಣೆ ತೋರಿಸ್ತೀನಿ” ಅಂದನು.+ 20 ಅಷ್ಟೇ ಅಲ್ಲ ಆತನು ಮೋಶೆಗೆ “ನಿನಗೆ ನನ್ನ ಮುಖ ನೋಡೋಕಾಗಲ್ಲ. ಯಾಕಂದ್ರೆ ನನ್ನನ್ನ ನೋಡಿದ ಯಾವ ಮನುಷ್ಯನೂ ಬದುಕಿ ಉಳಿಯಲ್ಲ” ಅಂದನು.
21 ಆಮೇಲೆ ಯೆಹೋವ ಮೋಶೆಗೆ “ನೋಡು, ನನ್ನ ಹತ್ರ ಇರೋ ಈ ಬಂಡೆ ಮೇಲೆ ನೀನು ನಿಲ್ಲು. 22 ನನ್ನ ಮಹಿಮೆ ನಿನ್ನ ಮುಂದೆ ದಾಟಿ ಹೋಗುವಾಗ ನಿನ್ನನ್ನ ಬಂಡೆಯ ಸಂದಲ್ಲಿ ಇಡ್ತೀನಿ. ನಾನು ದಾಟಿಹೋಗೋ ತನಕ ನನ್ನ ಕೈಯಿಂದ ನಿನ್ನನ್ನ ಮುಚ್ಚುತ್ತೀನಿ. 23 ಆಮೇಲೆ ನನ್ನ ಕೈ ತೆಗಿತೀನಿ. ಆಗ ನಿನಗೆ ನನ್ನ ಬೆನ್ನು ಕಾಣಿಸುತ್ತೆ. ಆದ್ರೆ ನನ್ನ ಮುಖ ನಿನಗೆ ಕಾಣಿಸಲ್ಲ” ಅಂದನು.+
34 ಆಮೇಲೆ ಯೆಹೋವ ಮೋಶೆಗೆ “ಈ ಮುಂಚೆ ನಾನು ನಿನಗೆ ಕೊಟ್ಟ ಕಲ್ಲಿನ ಹಲಗೆಗಳ ತರ ಎರಡು ಕಲ್ಲಿನ ಹಲಗೆಗಳನ್ನ ಕೆತ್ತು.+ ನೀನು ಒಡೆದುಬಿಟ್ಟ+ ಕಲ್ಲಿನ ಹಲಗೆಗಳ ಮೇಲಿದ್ದ ಮಾತುಗಳನ್ನ ನಾನು ಅವುಗಳ ಮೇಲೂ ಬರಿತೀನಿ.+ 2 ನೀನು ಬೆಳಿಗ್ಗೆ ಸಿನಾಯಿ ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ ನನ್ನ ಮುಂದೆ ಬರಬೇಕು. ಅದಕ್ಕಾಗಿ ಈಗ ತಯಾರಾಗು.+ 3 ಆದ್ರೆ ನಿನ್ನ ಜೊತೆ ಯಾರೂ ಬರಬಾರದು. ಆ ಬೆಟ್ಟದ ಮೇಲೆ ಎಲ್ಲೂ ಯಾರೂ ಇರಬಾರದು. ಬೆಟ್ಟದ ಹತ್ರ ಪ್ರಾಣಿ ಹಿಂಡುಗಳೂ ಮೇಯಬಾರದು”+ ಅಂದನು.
4 ಮೋಶೆ ಯೆಹೋವ ದೇವರು ಆಜ್ಞೆ ಕೊಟ್ಟ ಹಾಗೇ ಮಾಡಿದ. ಈ ಮುಂಚೆ ದೇವರು ಕೊಟ್ಟಿದ್ದ ಕಲ್ಲಿನ ಹಲಗೆಗಳ ತರ ಎರಡು ಕಲ್ಲಿನ ಹಲಗೆಗಳನ್ನ ಕೆತ್ತಿದ. ಬೆಳಿಗ್ಗೆ ಬೇಗ ಎದ್ದು ಅವುಗಳನ್ನ ಕೈಯಲ್ಲಿ ಹಿಡ್ಕೊಂಡು ಸಿನಾಯಿ ಬೆಟ್ಟ ಹತ್ತಿದ. 5 ಆಗ ಯೆಹೋವ ಮೋಡದಲ್ಲಿ ಇಳಿದುಬಂದು+ ಮೋಶೆ ಹತ್ರ ನಿಂತ. ಯೆಹೋವ ಅನ್ನೋ ತನ್ನ ಹೆಸರಿನ ಬಗ್ಗೆ ಒಂದು ಪ್ರಕಟಣೆ ಮಾಡಿದನು.+ 6 ಯೆಹೋವ ಅವನ ಮುಂದೆ ದಾಟಿಹೋಗ್ತಾ ಮಾಡಿದ ಪ್ರಕಟಣೆ ಏನಂದ್ರೆ “ಯೆಹೋವ, ಯೆಹೋವ, ಕರುಣೆ+ ಮತ್ತು ಕನಿಕರ ಇರೋ+ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ,+ ಯಾವಾಗ್ಲೂ ಸತ್ಯವಂತ*+ ಆಗಿರ್ತಾನೆ. 7 ಶಾಶ್ವತ ಪ್ರೀತಿನ ಸಾವಿರಾರು ಪೀಳಿಗೆ ಜನ್ರಿಗೆ ತೋರಿಸ್ತಾನೆ,+ ತಪ್ಪು ಅಪರಾಧ* ಪಾಪಗಳನ್ನ ಕ್ಷಮಿಸ್ತಾನೆ,+ ಆದ್ರೆ ಕೆಟ್ಟವರಿಗೆ ಶಿಕ್ಷೆ ಕೊಡದೆ ಬಿಡಲ್ಲ.+ ತಂದೆಗಳು ಮಾಡಿದ ಪಾಪಕ್ಕೆ ಅವರ ಮಕ್ಕಳ ಮೇಲೆ, ಮೊಮ್ಮಕ್ಕಳ ಮೇಲೆ, ಮರಿಮೊಮ್ಮಕ್ಕಳ ಮೇಲೆ ಶಿಕ್ಷೆ ಬರೋ ಹಾಗೆ ನಾನು ಮಾಡ್ತೀನಿ.”+
8 ತಕ್ಷಣ ಮೋಶೆ ಮಂಡಿಯೂರಿ ನಮಸ್ಕಾರ ಮಾಡಿದ. 9 ಅವನು ದೇವರಿಗೆ “ಯೆಹೋವನೇ, ನೀನು ನನ್ನನ್ನ ಮೆಚ್ಚಿರೋದಾದ್ರೆ ದಯವಿಟ್ಟು ನೀನು ನಮ್ಮ ಜೊತೆ ಬರಬೇಕು, ನಮ್ಮ ಜೊತೆ ಇರಬೇಕು.+ ನಾವು ಹಠಮಾರಿಗಳು.+ ಆದ್ರೂ ಯೆಹೋವನೇ, ನಮ್ಮ ತಪ್ಪು ಪಾಪಗಳನ್ನ+ ಕ್ಷಮಿಸಿ ನಮ್ಮನ್ನ ನಿನ್ನ ಆಸ್ತಿಯಾಗಿ* ಸ್ವೀಕರಿಸು” ಅಂದ. 10 ಅದಕ್ಕೆ ದೇವರು ಹೀಗಂದನು: “ನಾನು ನಿಮ್ಮ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ: ಎಲ್ರೂ ಆಶ್ಚರ್ಯ ಪಡೋ ವಿಷ್ಯಗಳನ್ನ ನಿನ್ನ ಜನ್ರ ಮುಂದೆ ಮಾಡ್ತೀನಿ. ಅಂಥ ವಿಷ್ಯವನ್ನ ಭೂಮಿ ಮೇಲೆ ನಾನು ಯಾವತ್ತೂ ಯಾವ ಜನಾಂಗದಲ್ಲೂ ಮಾಡಿಲ್ಲ.+ ಯೆಹೋವನಾದ ನಾನು ನಿಮಗಾಗಿ ಮಾಡೋ ಭಯ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ನಿಮ್ಮ ಸುತ್ತಮುತ್ತ ಇರೋ ಬೇರೆ ಜನ್ರೆಲ್ಲ ನೋಡ್ತಾರೆ.+
11 ನಾನು ಇವತ್ತು ನಿಮಗೆ ಕೊಡೋ ಆಜ್ಞೆಗಳನ್ನ ಗಮನಕೊಟ್ಟು ಕೇಳಿ.+ ಅಮೋರಿಯರನ್ನ ಕಾನಾನ್ಯರನ್ನ ಹಿತ್ತಿಯರನ್ನ ಪೆರಿಜೀಯರನ್ನ ಹಿವ್ವಿಯರನ್ನ ಯೆಬೂಸಿಯರನ್ನ ನಿಮ್ಮ ಮುಂದಿನಿಂದ ಓಡಿಸಿಬಿಡ್ತೀನಿ.+ 12 ನೀವು ಹೋಗೋ ದೇಶದ ಜನ್ರ ಜೊತೆ ಒಪ್ಪಂದ ಮಾಡ್ಕೊಳ್ಳಬೇಡಿ.+ ಈ ವಿಷ್ಯದಲ್ಲಿ ತುಂಬ ಜಾಗ್ರತೆಯಿಂದ ಇರಿ. ಒಪ್ಪಂದ ಮಾಡ್ಕೊಂಡ್ರೆ ಅದೇ ನಿಮಗೆ ಉರ್ಲು ಆಗುತ್ತೆ.+ 13 ನೀವು ಅವರ ಯಜ್ಞವೇದಿಗಳನ್ನ ನಾಶ ಮಾಡಬೇಕು, ಅವರ ವಿಗ್ರಹಸ್ತಂಭಗಳನ್ನ ಚೂರುಚೂರು ಮಾಡಬೇಕು, ಅವರ ಪೂಜಾಕಂಬಗಳನ್ನ* ಕಡಿದುಹಾಕಬೇಕು.+ 14 ನೀವು ಬೇರೆ ಯಾವ ದೇವರಿಗೂ ಅಡ್ಡಬೀಳಬಾರದು.+ ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಇಷ್ಟಪಡೋ ದೇವರು* ನಾನು. ಅದಕ್ಕೇ ನೀವು ಯೆಹೋವನಾದ ನನ್ನನ್ನ ಮಾತ್ರ ಆರಾಧಿಸಬೇಕು. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು ನಾನು.+ 15 ನೀವು ಹೋಗೋ ದೇಶದ ಜನ್ರ ಜೊತೆ ಒಪ್ಪಂದ ಮಾಡ್ಕೊಳ್ಳಬೇಡಿ. ಈ ವಿಷ್ಯದಲ್ಲಿ ತುಂಬ ಹುಷಾರಾಗಿ ಇರಿ. ಒಪ್ಪಂದ ಮಾಡ್ಕೊಂಡ್ರೆ ಅವರು ತಮ್ಮ ದೇವರುಗಳಿಗೆ ಪೂಜೆ ಮಾಡುವಾಗ, ಬಲಿ ಕೊಡುವಾಗ+ ನಿಮ್ಮನ್ನೂ ಕರೀತಾರೆ. ಆಗ ಅವರು ಬಲಿಯಾಗಿ ಕೊಟ್ಟಿದ್ದನ್ನ ನೀವು ತಿಂತೀರ.+ 16 ಖಂಡಿತ ನಿಮ್ಮ ಗಂಡುಮಕ್ಕಳಿಗಾಗಿ ಅವರಿಂದ ಹೆಣ್ಣುಮಕ್ಕಳನ್ನ ತರ್ತಿರ.+ ಸೊಸೆಯರಾಗಿ ಬರೋರು ಅವರ ದೇವರುಗಳನ್ನ ಪೂಜೆ ಮಾಡೋದಷ್ಟೇ ಅಲ್ಲ ನಿಮ್ಮ ಮಕ್ಕಳೂ ಆ ದೇವರುಗಳಿಗೆ ಪೂಜೆ ಮಾಡೋ ತರ ಮಾಡ್ತಾರೆ.+
17 ನೀವು ಲೋಹದ* ಮೂರ್ತಿಗಳನ್ನ ಮಾಡ್ಕೊಳ್ಳಬಾರದು.+
18 ನೀವು ಹುಳಿ ಇಲ್ಲದ ರೊಟ್ಟಿ ಹಬ್ಬ ಆಚರಿಸಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಅಬೀಬ್* ತಿಂಗಳಲ್ಲಿ ನಾನು ಹೇಳಿರೋ ಸಮಯದಲ್ಲೇ ಏಳು ದಿನ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು. ಯಾಕಂದ್ರೆ ನೀವು ಈಜಿಪ್ಟನ್ನ ಬಿಟ್ಟುಬಂದಿದ್ದು ಅಬೀಬ್+ ತಿಂಗಳಲ್ಲೇ ಅಲ್ವಾ?
19 ನಿಮಗೆ ಹುಟ್ಟೋ ಮೊದಲನೇ ಮಗು ಗಂಡಾಗಿದ್ರೆ ಆ ಮಗು ನನಗೆ ಸೇರಿದ್ದು.+ ನಿಮ್ಮ ದನಕುರಿ ಅಥವಾ ಬೇರೆ ಸಾಕುಪ್ರಾಣಿಗಳಿಗೆ ಹುಟ್ಟೋ ಮೊದಲ ಗಂಡುಮರಿನೂ ನಂದು.+ 20 ಕತ್ತೆಯ ಮೊದಲ ಮರಿ ಗಂಡಾಗಿದ್ರೆ ಕುರಿಯನ್ನ ಕೊಟ್ಟು ಆ ಮರಿನ ಬಿಡಿಸ್ಕೊಳ್ಳಬೇಕು. ಬಿಡಿಸ್ಕೊಳ್ಳದಿದ್ರೆ ಆ ಕತ್ತೆಮರಿಯನ್ನ ಕತ್ತು ಮುರಿದು ಸಾಯಿಸಬೇಕು. ನಿಮಗೆ ಹುಟ್ಟೋ ಮೊದಲನೇ ಗಂಡುಮಗುನ ಸಹ ನೀವು ಬಿಡಿಸ್ಕೊಳ್ಳಬೇಕು.+ ನಿಮ್ಮಲ್ಲಿ ಯಾರೂ ಕಾಣಿಕೆ ಇಲ್ಲದೆ ನನ್ನ ಮುಂದೆ ಬರಬಾರದು.
21 ಆರು ದಿನ ನೀವು ಕೆಲಸ ಮಾಡಬೇಕು. ಆದ್ರೆ ಏಳನೇ ದಿನ ವಿಶ್ರಾಂತಿ ತಗೊಬೇಕು.*+ ನೀವು ಹೊಲನ ಉಳ್ತಿರಲಿ, ಬೆಳೆ ಕೊಯ್ತಿರಲಿ ಏಳನೇ ದಿನ ವಿಶ್ರಾಂತಿ ತಗೊಬೇಕು.
22 ನೀವು ವಾರಗಳ ಹಬ್ಬ ಆಚರಿಸಬೇಕು. ಆ ಸಮಯದಲ್ಲಿ ಗೋದಿ ಕೊಯ್ಲಿನ ಮೊದಲ ಬೆಳೆಯನ್ನ ಅರ್ಪಿಸಬೇಕು. ವರ್ಷದ ಕೊನೆಯಲ್ಲಿ ಫಸಲು ಸಂಗ್ರಹ ಹಬ್ಬ* ಮಾಡಬೇಕು.+
23 ವರ್ಷದಲ್ಲಿ ಮೂರು ಸಲ ನಿಮ್ಮಲ್ಲಿರೋ ಎಲ್ಲ ಗಂಡಸರು ಇಸ್ರಾಯೇಲಿನ ದೇವರೂ ನಿಜವಾದ ಒಡೆಯನೂ ಆಗಿರೋ ಯೆಹೋವನ ಮುಂದೆ ಬರಬೇಕು.+ 24 ನೀವು ಹೋಗೋ ದೇಶದಲ್ಲಿನ ಜನ್ರನ್ನ ಅಲ್ಲಿಂದ ಓಡಿಸಿಬಿಡ್ತೀನಿ.+ ನಿಮ್ಮ ಪ್ರದೇಶದ ಗಡಿಗಳನ್ನ ವಿಸ್ತರಿಸ್ತೀನಿ. ನೀವು ವರ್ಷದಲ್ಲಿ ಮೂರು ಸಲ ನಿಮ್ಮ ದೇವರಾದ ಯೆಹೋವನ ಮುಂದೆ ಬರುವಾಗ ಯಾರೂ ನಿಮ್ಮ ಪ್ರದೇಶನ ವಶ ಮಾಡ್ಕೊಳ್ಳೋಕೆ ಆಸೆಪಡಲ್ಲ.
25 ನೀವು ನನಗೆ ಬಲಿಯಾಗಿ ಅರ್ಪಿಸಿದ ಪ್ರಾಣಿಯ ರಕ್ತದ ಜೊತೆ ಹುಳಿ ಇರೋ ಯಾವುದನ್ನೂ ಅರ್ಪಿಸಬಾರದು.+ ಪಸ್ಕಹಬ್ಬದ ಬಲಿನ ಬೆಳಿಗ್ಗೆ ತನಕ ಇಡಬಾರದು.+
26 ನಿಮ್ಮ ಹೊಲದ ಮೊದಲ ಬೆಳೆಯಲ್ಲಿ ತುಂಬ ಚೆನ್ನಾಗಿರೋದನ್ನ ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು.+
ನೀವು ಆಡುಮರಿಯ ಮಾಂಸವನ್ನ ಅದ್ರ ತಾಯಿ ಹಾಲಲ್ಲಿ ಬೇಯಿಸಬಾರದು.”+
27 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ “ನಾನು ನಿನಗೆ ಹೇಳಿದ ಎಲ್ಲ ಮಾತುಗಳನ್ನ ನೀನು ಬರಿ.+ ಯಾಕಂದ್ರೆ ಆ ಮಾತುಗಳ ಪ್ರಕಾರ ನಾನು ನಿನ್ನ ಜೊತೆ, ಇಸ್ರಾಯೇಲ್ಯರ ಜೊತೆ ಒಂದು ಒಪ್ಪಂದ ಮಾಡ್ಕೊಳ್ತೀನಿ”+ ಅಂದನು. 28 ಮೋಶೆ ಬೆಟ್ಟದ ಮೇಲೆ 40 ದಿನ ಹಗಲೂರಾತ್ರಿ ಯೆಹೋವನ ಜೊತೆ ಇದ್ದ. ಆ ಸಮಯದಲ್ಲಿ ಮೋಶೆ ಏನೂ ತಿನ್ನಲಿಲ್ಲ, ನೀರೂ ಕುಡಿಲಿಲ್ಲ.+ ದೇವರು ಕಲ್ಲಿನ ಹಲಗೆಗಳ ಮೇಲೆ ಒಪ್ಪಂದದ ಮಾತುಗಳನ್ನ ಅಂದ್ರೆ ಹತ್ತು ಆಜ್ಞೆಗಳನ್ನ ಬರೆದನು.+
29 ಮೋಶೆ ದೇವರ ಆಜ್ಞೆಗಳಿದ್ದ* ಎರಡು ಕಲ್ಲಿನ ಹಲಗೆಗಳನ್ನ ಕೈಯಲ್ಲಿ ಹಿಡ್ಕೊಂಡು ಸಿನಾಯಿ ಬೆಟ್ಟದಿಂದ ಇಳಿದುಬಂದ.+ ಮೋಶೆ ಬೆಟ್ಟದಲ್ಲಿ ದೇವರ ಜೊತೆ ಮಾತಾಡ್ತಿದ್ದ ಕಾರಣ ಇಳಿದುಬಂದಾಗ ಅವನ ಮುಖ ಹೊಳಿತಿತ್ತು. ಆದ್ರೆ ಅವನಿಗೆ ಅದು ಗೊತ್ತಿರಲಿಲ್ಲ. 30 ಮೋಶೆ ಮುಖ ಹೊಳಿಯೋದನ್ನ ಆರೋನ ಮತ್ತು ಎಲ್ಲ ಇಸ್ರಾಯೇಲ್ಯರು ನೋಡಿ ಅವನ ಹತ್ರ ಹೋಗೋಕೆ ಹೆದರಿದ್ರು.+
31 ಮೋಶೆ ಅವರನ್ನ ಕರೆದಾಗ ಆರೋನ ಮತ್ತು ಇಸ್ರಾಯೇಲ್ಯರ ಪ್ರಧಾನರೆಲ್ಲ ಅವನ ಹತ್ರ ಹೋದ್ರು. ಮೋಶೆ ಅವ್ರ ಜೊತೆ ಮಾತಾಡಿದ. 32 ಆಮೇಲೆ ಎಲ್ಲ ಇಸ್ರಾಯೇಲ್ಯರು ಅವನ ಹತ್ರ ಬಂದ್ರು. ಆಗ ಮೋಶೆ ಸಿನಾಯಿ ಬೆಟ್ಟದಲ್ಲಿ ಯೆಹೋವ ಕೊಟ್ಟ ಎಲ್ಲ ಆಜ್ಞೆಗಳನ್ನ ಅವರಿಗೆ ಹೇಳಿದ.+ 33 ಅವರ ಜೊತೆ ಮಾತಾಡಿ ಮುಗಿಸಿದ ಮೇಲೆ ಮೋಶೆ ತನ್ನ ಮುಖದ ಮೇಲೆ ಮುಸುಕು ಹಾಕೊಳ್ತಿದ್ದ.+ 34 ಮೋಶೆ ಯೆಹೋವನ ಜೊತೆ ಮಾತಾಡೋಕೆ ಆತನ ಮುಂದೆ ಹೋಗುವಾಗೆಲ್ಲ ಮುಸುಕು ತೆಗಿತಿದ್ದ.+ ಹೊರಗೆ ಬಂದು ದೇವರು ಕೊಟ್ಟ ಆಜ್ಞೆಗಳನ್ನ ಇಸ್ರಾಯೇಲ್ಯರಿಗೆ ಹೇಳ್ತಿದ್ದ.+ 35 ಆಗ ಮೋಶೆಯ ಮುಖ ಹೊಳೆಯೋದನ್ನ ಇಸ್ರಾಯೇಲ್ಯರು ನೋಡ್ತಿದ್ರು. ಮೋಶೆ ಮತ್ತೆ ದೇವರ ಜೊತೆ ಮಾತಾಡೋಕೆ ಹೋಗೋ ತನಕ ತನ್ನ ಮುಖಕ್ಕೆ ಮುಸುಕು ಹಾಕೊಂಡೇ ಇರ್ತಿದ್ದ.+
35 ಆಮೇಲೆ ಮೋಶೆ ಎಲ್ಲ ಇಸ್ರಾಯೇಲ್ಯರನ್ನ ಕರೆದು “ಯೆಹೋವ ಕೊಟ್ಟ ಆಜ್ಞೆ ಏನಂದ್ರೆ,+ 2 ಆರು ದಿನ ನೀವು ಕೆಲಸ ಮಾಡಬಹುದು. ಆದ್ರೆ ಏಳನೇ ದಿನ ಯಾವ ಕೆಲಸನೂ ಮಾಡದೆ ಪೂರ್ತಿ ವಿಶ್ರಾಂತಿ ತಗೊಬೇಕು. ಯಾಕಂದ್ರೆ ಅದು ಸಬ್ಬತ್ ದಿನ. ಅದು ನಿಮಗೆ ಪವಿತ್ರ ದಿನ, ಯೆಹೋವ ದೇವರ ವಿಷ್ಯಗಳನ್ನ ಮಾಡಬೇಕಾದ ದಿನ.+ ಯಾರಾದ್ರೂ ಆ ದಿನ ಕೆಲಸ ಮಾಡಿದ್ರೆ ಅವನನ್ನ ಸಾಯಿಸಬೇಕು.+ 3 ಸಬ್ಬತ್ ದಿನ ನಿಮ್ಮಲ್ಲಿ ಯಾರೂ ನೀವು ವಾಸ ಮಾಡೋ ಜಾಗದಲ್ಲಿ ಬೆಂಕಿ ಹೊತ್ತಿಸಬಾರದು” ಅಂದನು.
4 ಆಮೇಲೆ ಮೋಶೆ ಎಲ್ಲ ಇಸ್ರಾಯೇಲ್ಯರಿಗೆ ಹೀಗಂದ: “ಯೆಹೋವನ ಆಜ್ಞೆ ಏನಂದ್ರೆ 5 ‘ನೀವೆಲ್ಲ ಯೆಹೋವನಿಗಾಗಿ ಕಾಣಿಕೆ ತನ್ನಿ.+ ಉದಾರ ಮನಸ್ಸು+ ಇರೋರೆಲ್ಲ ಯೆಹೋವನಿಗೆ ಕಾಣಿಕೆಯಾಗಿ ಚಿನ್ನ, ಬೆಳ್ಳಿ, ತಾಮ್ರ, 6 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ,* ಕಡುಗೆಂಪು ಬಣ್ಣದ ನೂಲು,* ಒಳ್ಳೇ ಗುಣಮಟ್ಟದ ನಾರು ಬಟ್ಟೆ, ಆಡಿನ ಕೂದಲು,+ 7 ಕೆಂಪು ಬಣ್ಣ ಹಾಕಿದ ಟಗರುಚರ್ಮ, ಸೀಲ್ ಪ್ರಾಣಿಯ* ಚರ್ಮ, ಅಕೇಶಿಯ ಮರ,* 8 ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕ ತೈಲಕ್ಕೆ ಮತ್ತು ಸುವಾಸನೆ ಇರೋ ಧೂಪಕ್ಕೆ ಬೇಕಾದ ಸುಗಂಧ ತೈಲ,+ 9 ಏಫೋದಿನಲ್ಲೂ ಎದೆಪದಕದಲ್ಲೂ+ ಇಡೋಕೆ ಗೋಮೇದಕ ರತ್ನಗಳನ್ನ ಬೇರೆ ಬೇರೆ ವಿಧದ ರತ್ನಗಳನ್ನ+ ತನ್ನಿ.
10 ಕೌಶಲ ಇರೋ+ ಎಲ್ರೂ ಬಂದು ಯೆಹೋವ ಆಜ್ಞೆ ಕೊಟ್ಟಿರೋದನ್ನೆಲ್ಲ ಮಾಡಿ. 11 ಯಾವುದನ್ನೆಲ್ಲ ಮಾಡಬೇಕಂದ್ರೆ ಪವಿತ್ರ ಡೇರೆ, ಅದ್ರ ಎಲ್ಲ ಭಾಗಗಳು, ಅದ್ರ ಹೊದಿಕೆಗಳು, ಅದ್ರ ಬಟ್ಟೆಗೆ ಹಾಕೋ ಕೊಂಡಿಗಳು, ಡೇರೆಯ ಚೌಕಟ್ಟುಗಳು, ಚೌಕಟ್ಟುಗಳ ಅಡಿಗಲ್ಲುಗಳು, ಚೌಕಟ್ಟುಗಳಿಗೆ ಹಾಕೋ ಕೋಲುಗಳು, ಡೇರೆಯ ಕಂಬಗಳು, ಕಂಬಗಳ ಅಡಿಗಲ್ಲುಗಳು; 12 ಮಂಜೂಷ,+ ಅದ್ರ ಕೋಲುಗಳು,+ ಮಂಜೂಷದ ಮುಚ್ಚಳ,+ ಅದ್ರ ಎದುರಿಗೆ ತೂಗಿಬಿಡೋ ಪರದೆ;+ 13 ಮೇಜು,+ ಅದ್ರ ಕೋಲುಗಳು, ಅದ್ರ ಎಲ್ಲ ಉಪಕರಣಗಳು, ಅರ್ಪಣೆಯ ರೊಟ್ಟಿಗಳು;+ 14 ದೀಪಸ್ತಂಭ,+ ಅದ್ರ ಉಪಕರಣಗಳು, ದೀಪಗಳು, ದೀಪದ ಎಣ್ಣೆ;+ 15 ಧೂಪವೇದಿ,+ ಅದ್ರ ಕೋಲುಗಳು, ಅಭಿಷೇಕ ತೈಲ, ಸುವಾಸನೆ ಇರೋ ಧೂಪ,+ ಪವಿತ್ರ ಡೇರೆಯ ಬಾಗಿಲಿಗೆ ಹಾಕೋಕೆ ಪರದೆ; 16 ಸರ್ವಾಂಗಹೋಮದ ಯಜ್ಞವೇದಿ,+ ಅದ್ರ ತಾಮ್ರದ ಜಾಲರಿ, ಅದ್ರ ಕೋಲುಗಳು, ಎಲ್ಲ ಉಪಕರಣಗಳು; ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠ;+ 17 ಅಂಗಳದಲ್ಲಿ ತೂಗಿಬಿಡೋಕೆ ಪರದೆಗಳು,+ ಅಂಗಳದ ಕಂಬಗಳು, ಕಂಬಗಳ ಅಡಿಗಲ್ಲುಗಳು, ಅಂಗಳದ ಬಾಗಿಲಿಗೆ ಹಾಕೋಕೆ ಪರದೆ; 18 ಪವಿತ್ರ ಡೇರೆಯ ಗೂಟಗಳು, ಅಂಗಳದ ಗೂಟಗಳು, ಅವುಗಳ ಹಗ್ಗಗಳು;+ 19 ಆರಾಧನಾ ಸ್ಥಳದಲ್ಲಿ ಸೇವೆ ಮಾಡುವಾಗ ಹಾಕೋಕೆ ಒಳ್ಳೇ ರೀತಿಯ ಹೆಣಿಗೆ ಕೆಲಸದಿಂದ ಮಾಡಿದ ಬಟ್ಟೆಗಳು,+ ಪುರೋಹಿತನಾದ ಆರೋನನಿಗಾಗಿ ಪವಿತ್ರ ಬಟ್ಟೆಗಳು,+ ಅವನ ಗಂಡುಮಕ್ಕಳು ಪುರೋಹಿತರಾಗಿ ಸೇವೆ ಮಾಡುವಾಗ ಹಾಕೋಕೆ ಬಟ್ಟೆಗಳು. ಇದನ್ನೆಲ್ಲ ನೀವು ಮಾಡಬೇಕು.”
20 ಆಮೇಲೆ ಎಲ್ಲ ಇಸ್ರಾಯೇಲ್ಯರು ಮೋಶೆ ಎದುರಿಂದ ಹೋದ್ರು. 21 ಯೆಹೋವನಿಗೆ ಕಾಣಿಕೆ ಕೊಡೋಕೆ ಯಾರಿಗೆಲ್ಲ ಮನಸ್ಸಾಯ್ತೋ,+ ಯಾರ ಹೃದಯ ಪ್ರೇರಿಸ್ತೋ ಅವರೆಲ್ಲ ಕಾಣಿಕೆ ತಂದ್ರು. ದೇವದರ್ಶನ ಡೇರೆಯನ್ನ ಮಾಡೋಕೆ, ಅದ್ರೊಳಗೆ ನಡಿಯೋ ಸೇವೆಗೆ, ಪವಿತ್ರ ಬಟ್ಟೆಗಳನ್ನ ಸಿದ್ಧ ಮಾಡೋಕೆ ಅವರು ಕಾಣಿಕೆ ಕೊಟ್ರು. 22 ಉದಾರ ಮನಸ್ಸಿನ ಸ್ತ್ರೀಪುರುಷರೆಲ್ಲ ಕಾಣಿಕೆಗಳನ್ನ ತಂದ್ಕೊಡ್ತಾ ಇದ್ರು. ಅವರು ಅಲಂಕಾರಿಕ ಪಿನ್ನು, ಓಲೆ, ಉಂಗುರ, ಬೇರೆ ಆಭರಣ, ಬೇರೆ ಬೇರೆ ಚಿನ್ನದ ವಸ್ತುಗಳನ್ನ ತಂದು ಕೊಡ್ತಾ ಇದ್ರು. ಅವರೆಲ್ಲ ಚಿನ್ನವನ್ನ ಕಾಣಿಕೆಯಾಗಿ* ತಂದು ಯೆಹೋವನಿಗೆ ಅರ್ಪಿಸಿದ್ರು.+ 23 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರುಬಟ್ಟೆ, ಆಡಿನ ಕೂದಲು, ಕೆಂಪು ಬಣ್ಣ ಹಾಕಿದ ಟಗರುಚರ್ಮ, ಸೀಲ್ ಪ್ರಾಣಿಯ ಚರ್ಮ ಯಾರ ಹತ್ರ ಇತ್ತೋ ಅವರೆಲ್ಲ ಅದನ್ನ ತಂದ್ಕೊಟ್ರು. 24 ಬೆಳ್ಳಿ, ತಾಮ್ರವನ್ನ ಕೊಡೋ ಮನಸ್ಸಿದ್ದವರೆಲ್ಲ ಯೆಹೋವನಿಗೆ ಕಾಣಿಕೆಯಾಗಿ ತಂದು ಕೊಟ್ರು. ಯಾರ ಹತ್ರ ಅಕೇಶಿಯ ಮರದ ತುಂಡುಗಳು ಇತ್ತೋ ಅವರೆಲ್ಲ ಅವುಗಳನ್ನ ಪವಿತ್ರ ಡೇರೆಯ ಕೆಲಸಕ್ಕೆ ತಂದ್ಕೊಟ್ರು.
25 ನೂಲುವುದರಲ್ಲಿ ನಿಪುಣರಾದ ಸ್ತ್ರೀಯರೆಲ್ಲ+ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರನ್ನ ಕೈಯಲ್ಲಿ ಹೊಸೆದು ತಂದ್ಕೊಟ್ರು. 26 ಆಡಿನ ಕೂದಲನ್ನ ಹೊಸೆಯೋದ್ರಲ್ಲಿ ನಿಪುಣರಾದ ಸ್ತ್ರೀಯರು ಅದನ್ನ ಹೊಸೆದು ತಂದ್ಕೊಟ್ರು. ಅವರ ಹೃದಯ ಪ್ರೇರಿಸಿದ್ರಿಂದ ಹಾಗೆ ಮಾಡಿದ್ರು.
27 ಏಫೋದಿನಲ್ಲೂ ಎದೆಪದಕದಲ್ಲೂ+ ಇಡೋಕೆ ಗೋಮೇದಕ ರತ್ನಗಳನ್ನ, ಬೇರೆಬೇರೆ ವಿಧದ ರತ್ನಗಳನ್ನ ಇಸ್ರಾಯೇಲ್ಯರ ಪ್ರಧಾನರು ತಂದ್ಕೊಟ್ರು. 28 ಅಷ್ಟೇ ಅಲ್ಲ ಅವರು ದೀಪಗಳಿಗೆ, ಅಭಿಷೇಕ ತೈಲಕ್ಕೆ,+ ಸುವಾಸನೆ ಇರೋ ಧೂಪಕ್ಕೆ+ ಬೇಕಾದ ಸುಗಂಧ ತೈಲ, ಎಣ್ಣೆ ಕೊಟ್ರು. 29 ಉದಾರ ಮನಸ್ಸಿನ* ಆ ಸ್ತ್ರೀಪುರುಷರೆಲ್ಲ ಯೆಹೋವ ಮೋಶೆ ಮೂಲಕ ಆಜ್ಞಾಪಿಸಿದ ಕೆಲಸಕ್ಕಾಗಿ ಏನನ್ನಾದ್ರೂ ಕಾಣಿಕೆ ಕೊಡ್ತಾ ಇದ್ರು. ಹೀಗೆ ಇಸ್ರಾಯೇಲ್ಯರು ಯೆಹೋವನಿಗೆ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ರು.+
30 ಮೋಶೆ ಇಸ್ರಾಯೇಲ್ಯರಿಗೆ ಹೀಗಂದ: “ಯೆಹೂದ ಕುಲದ ಊರಿಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನನ್ನ ಯೆಹೋವ ಆರಿಸ್ಕೊಂಡಿದ್ದಾನೆ.+ 31 ತನ್ನ ಪವಿತ್ರಶಕ್ತಿನ ಅವನಲ್ಲಿ ತುಂಬಿಸಿದ್ದಾನೆ. ಜೊತೆಗೆ ವಿವೇಕ, ತಿಳುವಳಿಕೆ, ಪ್ರತಿಯೊಂದು ರೀತಿಯ ಕರಕುಶಲ ಕೆಲಸ ಮಾಡೋಕೆ ಬೇಕಾದ ಜ್ಞಾನ ಕೊಟ್ಟಿದ್ದಾನೆ. 32 ಹಾಗಾಗಿ ಬೆಚಲೇಲ ಕಲಾತ್ಮಕ ವಿನ್ಯಾಸಗಳನ್ನ ಮಾಡೋದ್ರಲ್ಲಿ ಮತ್ತು ಚಿನ್ನ, ಬೆಳ್ಳಿ, ತಾಮ್ರದ ಕೆಲಸದಲ್ಲಿ ನಿಪುಣನಾಗಿದ್ದಾನೆ. 33 ರತ್ನಗಳನ್ನ ಕತ್ತರಿಸೋ, ಕುಂದಣಗಳನ್ನ ಮಾಡಿ ಅವುಗಳಲ್ಲಿ ರತ್ನಗಳನ್ನ ಕೂರಿಸೋ, ಮರದ ಎಲ್ಲ ರೀತಿಯ ಕಲಾತ್ಮಕ ವಸ್ತುಗಳನ್ನ ಮಾಡೋ ಕೆಲಸದಲ್ಲೂ ನಿಪುಣನಾಗಿದ್ದಾನೆ. 34 ಈ ಕೆಲಸಗಳನ್ನ ಬೇರೆಯವ್ರಿಗೆ ಕಲಿಸೋ ಸಾಮರ್ಥ್ಯವನ್ನ ಸಹ ದೇವರು ಬೆಚಲೇಲನಿಗೆ, ದಾನ್ ಕುಲದ ಅಹೀಸಾಮಾಕನ ಮಗ ಒಹೊಲೀಯಾಬನಿಗೆ+ ಕೊಟ್ಟಿದ್ದಾನೆ. 35 ಎಲ್ಲ ಕರಕುಶಲ ಕೆಲಸ+ ಮತ್ತು ಕಸೂತಿ ಕೆಲಸ ಮಾಡೋಕೆ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರನ್ನ ಉಪಯೋಗಿಸಿ ಹೆಣೆಯೋ ಕೆಲಸ ಮಾಡೋಕೆ, ನೇಯೋ ಕೆಲಸ ಮಾಡೋಕೆ ದೇವರು ಅವರಿಗೆ ಕೌಶಲ ಕೊಟ್ಟಿದ್ದಾನೆ.* ಹಾಗಾಗಿ ದೇವರು ಹೇಳಿದ ಎಲ್ಲ ರೀತಿಯ ಕೆಲಸವನ್ನ ಎಲ್ಲ ರೀತಿಯ ವಿನ್ಯಾಸಗಳನ್ನ ಅವರು ಮಾಡ್ತಾರೆ.”
36 “ಒಹೊಲೀಯಾಬನ ಜೊತೆ, ನಿಪುಣ ಪುರುಷರೆಲ್ಲರ ಜೊತೆ ಬೆಚಲೇಲ ಕೆಲಸ ಮಾಡ್ತಾನೆ. ಅವ್ರಿಗೆ ಯೆಹೋವ ವಿವೇಕ, ತಿಳುವಳಿಕೆ ಕೊಟ್ಟಿದ್ದಾನೆ. ಹಾಗಾಗಿ ಪವಿತ್ರ ಡೇರೆಯ ಎಲ್ಲ ಕೆಲಸಗಳನ್ನ* ಯೆಹೋವ ಆಜ್ಞೆ ಕೊಟ್ಟ ತರಾನೇ ಮಾಡೋಕೆ ಅವರಿಗಾಗುತ್ತೆ.”+
2 ಬೆಚಲೇಲ, ಒಹೊಲೀಯಾಬ ಮತ್ತು ಯಾರಿಗೆಲ್ಲ ಯೆಹೋವ ವಿವೇಕ ಕೊಟ್ಟಿದ್ದನೋ ಆ ಎಲ್ಲ ನಿಪುಣ ಗಂಡಸರನ್ನ ಮೋಶೆ ಕರೆದ.+ ಪವಿತ್ರ ಡೇರೆಯ ಕೆಲಸ ಮಾಡೋಕೆ ಮುಂದೆ ಬರೋಕೆ ಯಾರ ಯಾರ ಹೃದಯ ಪ್ರೇರಿಸ್ತೋ ಅವ್ರನ್ನೆಲ್ಲ ಕರೆದ.+ 3 ಮೋಶೆಯಿಂದ ಅವರು ಪವಿತ್ರ ಡೇರೆಯ ಕೆಲಸಕ್ಕಾಗಿ ಇಸ್ರಾಯೇಲ್ಯರು ಕೊಟ್ಟಿದ್ದ ಎಲ್ಲ ಕಾಣಿಕೆಗಳನ್ನ+ ತಗೊಂಡ್ರು. ಇದಾದ ಮೇಲೂ ಇಸ್ರಾಯೇಲ್ಯರು ದಿನಾ ಬೆಳಿಗ್ಗೆ ಸ್ವಇಷ್ಟದಿಂದ ಕಾಣಿಕೆಗಳನ್ನ ತಂದು ಕೊಡ್ತಾ ಇದ್ರು.
4 ಎಲ್ಲ ನಿಪುಣ ಕೆಲಸಗಾರರು ಪವಿತ್ರ ಡೇರೆಯ ಕೆಲಸ ಶುರು ಮಾಡಿದ್ರು. ಆಮೇಲೆ ಇವರೆಲ್ಲ ಒಬ್ಬರಾದ ಮೇಲೆ ಒಬ್ರು 5 ಮೋಶೆ ಹತ್ರ ಬಂದು “ಜನ ಕಾಣಿಕೆಗಳನ್ನ ತರ್ತಾನೇ ಇದ್ದಾರೆ. ಯೆಹೋವ ಆಜ್ಞೆ ಕೊಟ್ಟ ಕೆಲಸಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚು ಕಾಣಿಕೆ ಬಂದಿದೆ” ಅಂದ್ರು. 6 ಆಗ ಮೋಶೆ ಪಾಳೆಯದಲ್ಲೆಲ್ಲ ಒಂದು ಪ್ರಕಟಣೆ ಮಾಡೋಕೆ ಹೇಳಿದ. ಹಾಗಾಗಿ “ಇಸ್ರಾಯೇಲ್ಯರೇ, ಪವಿತ್ರ ಡೇರೆಗಾಗಿ ನೀವು ಕಾಣಿಕೆ ತಂದ್ಕೊಟ್ಟಿದ್ದು ಸಾಕು, ಇನ್ಮೇಲೆ ತರಬೇಡಿ” ಅಂತ ಹೇಳಿದ್ರು. ಆಮೇಲೆ ಜನ ಕಾಣಿಕೆ ತರಲಿಲ್ಲ. 7 ಪವಿತ್ರ ಡೇರೆಯ ಎಲ್ಲ ಕೆಲಸಕ್ಕೆ ಬೇಕಾದಷ್ಟು ಸಾಮಗ್ರಿ ಇತ್ತು. ಬೇಕಾಗಿರೋದಕ್ಕಿಂತ ಜಾಸ್ತಿನೇ ಇತ್ತು.
8 ಎಲ್ಲ ನಿಪುಣ ಕೆಲಸಗಾರರು+ ಹತ್ತು ಬಟ್ಟೆಗಳಿಂದ ಪವಿತ್ರ ಡೇರೆ+ ಮಾಡಿದ್ರು. ಆ ಬಟ್ಟೆಗಳನ್ನ ಹೊಸೆದ ಉತ್ತಮ ಗುಣಮಟ್ಟದ ನಾರು, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲಿಂದ ತಯಾರಿಸಿದ್ರು. ಅವನು* ಆ ಬಟ್ಟೆಗಳ ಮೇಲೆ ಕೆರೂಬಿಯರ ಚಿತ್ರಗಳನ್ನ ಕಸೂತಿ ಹಾಕಿದ.+ 9 ಪ್ರತಿಯೊಂದು ಬಟ್ಟೆ 28 ಮೊಳ* ಉದ್ದ, 4 ಮೊಳ ಅಗಲ ಇತ್ತು. ಎಲ್ಲ ಬಟ್ಟೆಗಳ ಅಳತೆ ಒಂದೇ ಆಗಿತ್ತು. 10 ಬೆಚಲೇಲ ಅವುಗಳಲ್ಲಿ ಐದು ಬಟ್ಟೆಗಳನ್ನ ಒಂದಕ್ಕೊಂದು ಜೋಡಿಸಿದ. ಅದೇ ರೀತಿ ಇನ್ನೂ ಐದು ಬಟ್ಟೆಗಳನ್ನ ಒಂದಕ್ಕೊಂದು ಜೋಡಿಸಿದ. 11 ಆಮೇಲೆ ಅವನು ಆ ಎರಡೂ ದೊಡ್ಡ ಬಟ್ಟೆಗಳನ್ನ ಜೋಡಿಸೋಕಂತ ಅವುಗಳಲ್ಲಿ ಪ್ರತಿಯೊಂದ್ರ ಕೊನೆಯಲ್ಲೂ ನೀಲಿ ದಾರದಿಂದ ಕುಣಿಕೆಗಳನ್ನ ಹೊಲಿದ. 12 ಆಮೇಲೆ ಒಂದು ದೊಡ್ಡ ಬಟ್ಟೆಗೆ 50 ಕುಣಿಕೆಗಳನ್ನ ಇನ್ನೊಂದು ದೊಡ್ಡ ಬಟ್ಟೆಯ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಿದ. ಇದ್ರಿಂದಾಗಿ ಆ ಎರಡು ಬಟ್ಟೆಗಳು ಜೋಡಣೆ ಆಗೋ ಕಡೆ ಅವುಗಳ ಕುಣಿಕೆಗಳು ಎದುರುಬದುರಾಗಿ ಇತ್ತು. 13 ಕೊನೆಗೆ ಅವನು ಚಿನ್ನದ 50 ಕೊಂಡಿಗಳನ್ನ ಮಾಡಿ ಅವುಗಳಿಂದ ಆ ಎರಡು ದೊಡ್ಡ ಬಟ್ಟೆಗಳನ್ನ ಜೋಡಿಸಿದ. ಆಗ ಪವಿತ್ರ ಡೇರೆಗೆ ಒಂದೇ ಬಟ್ಟೆ ಆಯ್ತು.
14 ಆಮೇಲೆ ಅವನು ಪವಿತ್ರ ಡೇರೆ ಮೇಲೆ ಹೊದಿಸೋಕಂತ ಆಡುಕೂದಲಿನ 11 ಬಟ್ಟೆಗಳನ್ನ ಮಾಡಿದ.+ 15 ಪ್ರತಿಯೊಂದು ಬಟ್ಟೆ 30 ಮೊಳ ಉದ್ದ, 4 ಮೊಳ ಅಗಲ ಇತ್ತು. 11 ಬಟ್ಟೆಗಳ ಅಳತೆ ಒಂದೇ ಆಗಿತ್ತು. 16 ಆಮೇಲೆ ಅವನು ಆ ಬಟ್ಟೆಗಳಲ್ಲಿ ಐದನ್ನ ಒಂದಕ್ಕೊಂದು ಜೋಡಿಸಿದ. ಉಳಿದ ಆರು ಬಟ್ಟೆಗಳನ್ನೂ ಒಂದಕ್ಕೊಂದು ಜೋಡಿಸಿದ. 17 ಆಮೇಲೆ ಒಂದು ದೊಡ್ಡ ಬಟ್ಟೆಯ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಿದ. ಇನ್ನೊಂದು ದೊಡ್ಡ ಬಟ್ಟೆಗೆ ಅದು ಮೊದಲನೇ ದೊಡ್ಡ ಬಟ್ಟೆ ಜೊತೆ ಜೋಡಣೆ ಆಗೋ ಅಂಚಲ್ಲಿ 50 ಕುಣಿಕೆಗಳನ್ನ ಮಾಡಿದ. 18 ಎರಡು ದೊಡ್ಡ ಬಟ್ಟೆಗಳನ್ನ ಕೂಡಿಸಿ ಒಂದೇ ಬಟ್ಟೆ ಮಾಡೋಕೆ ತಾಮ್ರದ 50 ಕೊಂಡಿಗಳನ್ನ ಮಾಡಿದ.
19 ಪವಿತ್ರ ಡೇರೆಯ ಮೇಲೆ ಹೊದಿಸೋಕೆ ಅವನು ಕೆಂಪು ಬಣ್ಣ ಹಾಕಿದ ಟಗರುಚರ್ಮದಿಂದ ಇನ್ನೊಂದು ಹೊದಿಕೆ ಮಾಡಿದ. ಆ ಕೆಂಪು ಹೊದಿಕೆ ಮೇಲೆ ಹಾಕೋಕೆ ಸೀಲ್ ಪ್ರಾಣಿಯ* ಚರ್ಮದ ಮತ್ತೊಂದು ಹೊದಿಕೆ ಮಾಡಿದ.+
20 ಅವನು ಅಕೇಶಿಯ ಮರದಿಂದ*+ ಪವಿತ್ರ ಡೇರೆಯ ಚೌಕಟ್ಟುಗಳನ್ನ ಮಾಡಿ ನೇರವಾಗಿ ನಿಲ್ಲಿಸಿದ.+ 21 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದ ಒಂದೂವರೆ ಮೊಳ ಅಗಲ ಇತ್ತು. 22 ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಕೂರಂಚುಗಳು* ಇತ್ತು. ಎಲ್ಲ ಕೂರಂಚುಗಳು ಒಂದೇ ಸಮನಾಗಿ ಇತ್ತು. ಪವಿತ್ರ ಡೇರೆಯ ಎಲ್ಲ ಚೌಕಟ್ಟುಗಳನ್ನ ಅವನು ಹೀಗೇ ಮಾಡಿದ. 23 ಪವಿತ್ರ ಡೇರೆಯ ದಕ್ಷಿಣ ಭಾಗಕ್ಕಾಗಿ 20 ಚೌಕಟ್ಟುಗಳನ್ನ ಮಾಡಿದ. 24 ಒಂದೊಂದು ಚೌಕಟ್ಟಿಗೆ ಎರಡೆರಡು ಕೂರಂಚುಗಳು ಇದ್ವು. ಹಾಗಾಗಿ ಅವನು ಪ್ರತಿಯೊಂದು ಚೌಕಟ್ಟಿನ ಕೆಳಗೆ ಇಡೋಕಂತ ಎರಡೆರಡು ಅಡಿಗಲ್ಲುಗಳನ್ನ ಮಾಡಿದ. ಹೀಗೆ 20 ಚೌಕಟ್ಟುಗಳಿಗೆ ಬೆಳ್ಳಿಯ 40 ಅಡಿಗಲ್ಲುಗಳನ್ನ ಮಾಡಿದ.+ 25 ಪವಿತ್ರ ಡೇರೆಯ ಇನ್ನೊಂದು ಬದಿಗಾಗಿ ಅಂದ್ರೆ ಉತ್ತರ ಭಾಗಕ್ಕಾಗಿ ಅವನು 20 ಚೌಕಟ್ಟುಗಳನ್ನ ಮಾಡಿ 26 ಅವುಗಳಿಗಾಗಿ ಬೆಳ್ಳಿಯ 40 ಅಡಿಗಲ್ಲುಗಳನ್ನ ಮಾಡಿದ, ಅಂದ್ರೆ ಪ್ರತಿಯೊಂದು ಚೌಕಟ್ಟಿನ ಕೆಳಗೆ ಇಡೋಕಂತ ಎರಡೆರಡು ಅಡಿಗಲ್ಲುಗಳನ್ನ ಮಾಡಿದ.
27 ಪವಿತ್ರ ಡೇರೆಯ ಹಿಂಭಾಗಕ್ಕಾಗಿ ಅಂದ್ರೆ ಪಶ್ಚಿಮ ಭಾಗಕ್ಕಾಗಿ ಆರು ಚೌಕಟ್ಟುಗಳನ್ನ ಮಾಡಿದ.+ 28 ಪವಿತ್ರ ಡೇರೆಯ ಹಿಂಭಾಗದ ಎರಡು ಮೂಲೆಗಳಲ್ಲಿ ಆಧಾರಕ್ಕಾಗಿ ಎರಡು ಚೌಕಟ್ಟುಗಳನ್ನ ಮಾಡಿದ. 29 ಈ ಎರಡು ಚೌಕಟ್ಟುಗಳಲ್ಲಿ ಪ್ರತಿಯೊಂದಕ್ಕೂ ಕೆಳಗಿಂದ ಮೇಲಕ್ಕೆ ಎರಡು ಭಾಗ ಇತ್ತು. ಆ ಎರಡು ಭಾಗ ಮೊದಲ ಬಳೆ ಇರೋ ಕಡೆ ಕೂಡುತ್ತೆ. ಎರಡೂ ಮೂಲೆಗಳಿಗೆ ಆಧಾರವಾಗೋ ಎರಡೂ ಚೌಕಟ್ಟುಗಳಿಗೆ ಅವನು ಹೀಗೇ ಮಾಡಿದ. 30 ಹಿಂಭಾಗಕ್ಕಾಗಿ ಒಟ್ಟು ಎಂಟು ಚೌಕಟ್ಟುಗಳನ್ನ ಅವುಗಳಿಗೆ ಬೆಳ್ಳಿಯ 16 ಅಡಿಗಲ್ಲುಗಳನ್ನ ಮಾಡಿದ. ಪ್ರತಿಯೊಂದು ಚೌಕಟ್ಟಿನ ಕೆಳಗೆ ಇಡೋಕಂತ ಎರಡೆರಡು ಅಡಿಗಲ್ಲುಗಳನ್ನ ಮಾಡಿದ.
31 ಆಮೇಲೆ ಅವನು ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿದ. ಪವಿತ್ರ ಡೇರೆಯ+ ಒಂದು ಬದಿಯ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲುಗಳನ್ನ, 32 ಪವಿತ್ರ ಡೇರೆಯ ಇನ್ನೊಂದು ಬದಿಯ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲುಗಳನ್ನ ಮಾಡಿದ. ಪವಿತ್ರ ಡೇರೆಯ ಪಶ್ಚಿಮ ಭಾಗದ ಅಂದ್ರೆ ಹಿಂಭಾಗದ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲುಗಳನ್ನ ಮಾಡಿದ. 33 ಅವನು ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ ಇರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕಂತ ಚೌಕಟ್ಟುಗಳ ಮಧ್ಯದಲ್ಲಿ ಇಡೋಕೆ ಒಂದು ಕೋಲು ಮಾಡಿದ. 34 ಅವನು ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಿದ. ಚೌಕಟ್ಟುಗಳಲ್ಲಿ ಚಿನ್ನದ ಬಳೆಗಳನ್ನ ಮಾಡಿದ. ಆ ಬಳೆಗಳು ಕೋಲುಗಳಿಗೆ ಹಿಡಿಗಳಾಗಿ ಇತ್ತು. ಕೋಲುಗಳಿಗೂ ಚಿನ್ನದ ತಗಡುಗಳನ್ನ ಹೊದಿಸಿದ.+
35 ಆಮೇಲೆ ಅವನು ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಉತ್ತಮ ಗುಣಮಟ್ಟದ ನಾರಿಂದ ಒಂದು ಪರದೆ+ ಮಾಡಿದ. ಅದ್ರ ಮೇಲೆ ಕೆರೂಬಿಯರ+ ಚಿತ್ರಗಳನ್ನ ಕಸೂತಿ ಹಾಕಿದ.+ 36 ಆ ಪರದೆ ತೂಗುಹಾಕೋಕೆ ಅಕೇಶಿಯ ಮರದಿಂದ ನಾಲ್ಕು ಕಂಬಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಿದ. ಆ ಕಂಬಗಳಿಗೆ ಚಿನ್ನದ ಕೊಕ್ಕೆಗಳನ್ನ ಮಾಡಿದ. ಅಚ್ಚಲ್ಲಿ ಬೆಳ್ಳಿ ಹೊಯ್ದು ನಾಲ್ಕು ಅಡಿಗಲ್ಲುಗಳನ್ನ ಮಾಡಿದ. 37 ಆಮೇಲೆ ಅವನು ಡೇರೆಯ ಬಾಗಿಲಿಗೆ ಒಂದು ಪರದೆ ಮಾಡಿದ. ಈ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಉತ್ತಮ ಗುಣಮಟ್ಟದ ನಾರು ಇದನ್ನೆಲ್ಲ ಒಟ್ಟಿಗೆ ನೇಯ್ದು ಮಾಡಿದ.+ 38 ಪರದೆನ ತೂಗುಹಾಕೋಕಂತ ಐದು ಕಂಬಗಳನ್ನ ಕಂಬಗಳಲ್ಲಿ ಕೊಕ್ಕೆಗಳನ್ನ ಮಾಡಿದ. ಕಂಬಗಳ ಮೇಲ್ಭಾಗಕ್ಕೆ ಮತ್ತು ಕಟ್ಟುಗಳಿಗೆ* ಅವನು ಚಿನ್ನದ ತಗಡುಗಳನ್ನ ಹೊದಿಸಿದ. ಆದ್ರೆ ಕಂಬಗಳ ಐದು ಅಡಿಗಲ್ಲುಗಳನ್ನ ತಾಮ್ರದಿಂದ ಮಾಡಿದ.
37 ಆಮೇಲೆ ಬೆಚಲೇಲ+ ಅಕೇಶಿಯ ಮರದಿಂದ* ಮಂಜೂಷ+ ಮಾಡಿದ. ಹೇಗಂದ್ರೆ ಎರಡೂವರೆ ಮೊಳ* ಉದ್ದ, ಒಂದೂವರೆ ಮೊಳ ಅಗಲ, ಒಂದೂವರೆ ಮೊಳ ಎತ್ತರದ ಒಂದು ಪೆಟ್ಟಿಗೆ ಮಾಡಿದ.+ 2 ಅದ್ರ ಒಳಗೆ ಹೊರಗೆ ಶುದ್ಧ ಚಿನ್ನದ ತಗಡನ್ನ ಹೊದಿಸಿದ. ಅದ್ರ ಮೇಲೆ ಸುತ್ತ ಅಲಂಕಾರ ಇರೋ ಚಿನ್ನದ ಅಂಚು ಮಾಡಿದ.+ 3 ಅಚ್ಚಲ್ಲಿ ಚಿನ್ನ ಹೊಯ್ದು ನಾಲ್ಕು ಬಳೆಗಳನ್ನ ಮಾಡಿ ನಾಲ್ಕು ಕಾಲುಗಳಿಗೆ ಜೋಡಿಸಿದ. ಒಂದು ಬದಿಗೆ ಎರಡು ಬಳೆಗಳನ್ನ, ಇನ್ನೊಂದು ಬದಿಗೆ ಎರಡು ಬಳೆಗಳನ್ನ ಜೋಡಿಸಿದ. 4 ಆಮೇಲೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡನ್ನ ಹೊದಿಸಿದ.+ 5 ಮಂಜೂಷ ಹೊತ್ಕೊಂಡು ಹೋಗೋಕೆ ಆಗೋ ತರ ಆ ಕೋಲುಗಳನ್ನ ಮಂಜೂಷದ ಎರಡೂ ಬದಿಗಳಲ್ಲಿರೋ ಬಳೆಗಳ ಒಳಗೆ ಹಾಕಿದ.+
6 ಅವನು ಮಂಜೂಷಕ್ಕಾಗಿ ಶುದ್ಧ ಚಿನ್ನದಿಂದ ಒಂದು ಮುಚ್ಚಳ ಮಾಡಿದ.+ ಆ ಮುಚ್ಚಳ ಎರಡೂವರೆ ಮೊಳ ಉದ್ದ ಒಂದೂವರೆ ಮೊಳ ಅಗಲ ಇತ್ತು.+ 7 ಆಮೇಲೆ ಅವನು ಮುಚ್ಚಳದ+ ಮೇಲೆ ಎರಡು ಕೊನೆಗಳಲ್ಲಿ ಚಿನ್ನದಿಂದ ಎರಡು ಕೆರೂಬಿಯರನ್ನ+ ಮಾಡಿದ. ಇದನ್ನ ಅವನು ಚಿನ್ನವನ್ನ ಸುತ್ತಿಗೆಯಿಂದ ಬಡಿದು ಮಾಡಿದ. 8 ಮುಚ್ಚಳದ ಮೇಲೆ ಒಂದು ಕೊನೇಲಿ ಒಂದು ಕೆರೂಬಿ, ಇನ್ನೊಂದು ಕೊನೇಲಿ ಒಂದು ಕೆರೂಬಿ ಹೀಗೆ ಎರಡು ಕೊನೆಗಳಲ್ಲೂ ಕೆರೂಬಿಯರನ್ನ ಮಾಡಿದ. 9 ಆ ಕೆರೂಬಿಯರ ಎರಡೆರಡು ರೆಕ್ಕೆಗಳು ಬಿಚ್ಕೊಂಡು ಮೇಲಕ್ಕೆ ಚಾಚ್ಕೊಂಡಿತ್ತು. ಆ ರೆಕ್ಕೆಗಳು ಮುಚ್ಚಳವನ್ನ ಆವರಿಸ್ಕೊಂಡಿತ್ತು.+ ಕೆರೂಬಿಯರು ಎದುರುಬದುರಾಗಿ ಇದ್ರು. ಅವರ ಮುಖ ಮುಚ್ಚಳದ ಕಡೆಗೆ ಬಾಗಿತ್ತು.+
10 ಆಮೇಲೆ ಅವನು ಅಕೇಶಿಯ ಮರದಿಂದ ಮೇಜು ಮಾಡಿದ.+ ಅದು ಎರಡು ಮೊಳ ಉದ್ದ, ಒಂದು ಮೊಳ ಅಗಲ ಒಂದೂವರೆ ಮೊಳ ಎತ್ತರ ಇತ್ತು.+ 11 ಅದಕ್ಕೆ ಶುದ್ಧ ಚಿನ್ನದ ತಗಡನ್ನ ಹೊದಿಸಿದ, ಮೇಜಿನ ಸುತ್ತ ಚಿನ್ನದ ಅಂಚು ಮಾಡಿದ. 12 ಅದ್ರ ಮೇಲೆ ಕೈ ಅಗಲದಷ್ಟು* ಇರೋ ಪಟ್ಟಿಯನ್ನ ಆ ಪಟ್ಟಿಯ ಸುತ್ತ ಚಿನ್ನದ ಅಂಚನ್ನ ಮಾಡಿದ. 13 ಮೇಜಿಗಾಗಿ ಅಚ್ಚಲ್ಲಿ ಚಿನ್ನ ಹೊಯ್ದು ನಾಲ್ಕು ಬಳೆಗಳನ್ನ ಮಾಡಿದ. ಮೇಜಿನ ನಾಲ್ಕು ಕಾಲುಗಳನ್ನ ಜೋಡಿಸಿರೋ ನಾಲ್ಕು ಮೂಲೆಗಳಲ್ಲಿ ಆ ಬಳೆಗಳನ್ನ ಹಾಕಿದ. 14 ಬಳೆಗಳು ಪಟ್ಟಿಯ ಹತ್ರ ಇತ್ತು. ಮೇಜನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲುಗಳಿಗೆ ಆ ಬಳೆಗಳು ಹಿಡಿಗಳಾಗಿ ಇತ್ತು. 15 ಮೇಜನ್ನ ಹೊತ್ಕೊಂಡು ಹೋಗೋಕೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿದ. ಅವುಗಳಿಗೆ ಚಿನ್ನದ ತಗಡನ್ನ ಹೊದಿಸಿದ. 16 ಮೇಜಿನ ಮೇಲೆ ಇಡಬೇಕಾದ ತಟ್ಟೆಗಳನ್ನ, ಲೋಟಗಳನ್ನ ಮಾಡಿದ. ಪಾನ ಅರ್ಪಣೆಗಳನ್ನ ಸುರಿಯೋಕೆ ಬಳಸೋ ಬೋಗುಣಿಗಳನ್ನ, ಹೂಜಿಗಳನ್ನ ಮಾಡಿದ. ಅದನ್ನೆಲ್ಲ ಶುದ್ಧ ಚಿನ್ನದಿಂದ ಮಾಡಿದ.+
17 ಆಮೇಲೆ ಶುದ್ಧ ಚಿನ್ನದಿಂದ ದೀಪಸ್ತಂಭ+ ಮಾಡಿದ. ಚಿನ್ನವನ್ನ ಸುತ್ತಿಗೆಯಿಂದ ಬಡಿದು ಅದನ್ನ ಮಾಡಿದ. ದೀಪಸ್ತಂಭದ ಬುಡ, ದಿಂಡು, ಪುಷ್ಪಪಾತ್ರೆಗಳು, ಮೊಗ್ಗುಗಳು, ಹೂಗಳನ್ನ ಚಿನ್ನದ ಒಂದೇ ತುಂಡಿಂದ ಮಾಡಿದ.+ 18 ದೀಪಸ್ತಂಭದ ದಿಂಡಿಗೆ ಆರು ಕೊಂಬೆ ಇತ್ತು. ದಿಂಡಿನ ಒಂದು ಬದಿಯಲ್ಲಿ ಮೂರು ಕೊಂಬೆ, ಇನ್ನೊಂದು ಬದಿಯಲ್ಲಿ ಮೂರು ಕೊಂಬೆ ಇತ್ತು. 19 ಒಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆ ಇತ್ತು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂ ಇತ್ತು. ಇನ್ನೊಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆ ಇತ್ತು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂ ಇತ್ತು. ದೀಪಸ್ತಂಭದ ಆರು ಕೊಂಬೆಗಳಲ್ಲಿ ಪ್ರತಿಯೊಂದ್ರಲ್ಲೂ ಅವನು ಹೀಗೇ ಮಾಡಿದ. 20 ದೀಪಸ್ತಂಭದ ದಿಂಡಲ್ಲಿ ಬಾದಾಮಿ ಹೂವಿನ ಆಕಾರದ ನಾಲ್ಕು ಪುಷ್ಪಪಾತ್ರೆ ಇತ್ತು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂ ಇತ್ತು. 21 ದಿಂಡಿಂದ ಕವಲು ಒಡೆದಿದ್ದ ಎರಡು ಕೊಂಬೆಗಳ ಕೆಳಗೆ ಒಂದು ಮೊಗ್ಗಿತ್ತು. ಹೀಗೆ ಆರು ಕೊಂಬೆಗಳ ಕೆಳಗೂ ಒಂದೊಂದು ಮೊಗ್ಗು ಇತ್ತು. 22 ಮೊಗ್ಗುಗಳನ್ನ ಕೊಂಬೆಗಳನ್ನ ಇಡೀ ದೀಪಸ್ತಂಭವನ್ನ ಶುದ್ಧ ಚಿನ್ನದ ಒಂದೇ ತುಂಡಿಂದ ಮಾಡಿದ. ಚಿನ್ನವನ್ನ ಸುತ್ತಿಗೆಯಿಂದ ಬಡಿದು ಇದನ್ನೆಲ್ಲ ಮಾಡಿದ. 23 ಶುದ್ಧ ಚಿನ್ನದಿಂದ ದೀಪಸ್ತಂಭದ ಏಳು ದೀಪಗಳನ್ನ+ ಚಿಮಟಗಳನ್ನ* ಮಾಡಿದ. ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆಗಳನ್ನೂ ಮಾಡಿದ. 24 ದೀಪಸ್ತಂಭ, ಅದ್ರ ಎಲ್ಲ ಉಪಕರಣಗಳನ್ನ ಒಂದು ತಲಾಂತು* ಶುದ್ಧ ಚಿನ್ನದಿಂದ ಮಾಡಿದ.
25 ಅವನು ಅಕೇಶಿಯ ಮರದಿಂದ ಧೂಪವೇದಿ+ ಮಾಡಿದ. ಅದು ಚೌಕಾಕಾರ ಆಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇತ್ತು. ಧೂಪವೇದಿಗೆ ಕೊಂಬುಗಳು ಇತ್ತು. ಧೂಪವೇದಿ, ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಿದ.+ 26 ಶುದ್ಧ ಚಿನ್ನದಿಂದ ತಗಡನ್ನ ಮಾಡಿ ಧೂಪವೇದಿಯ ಮೇಲೆ, ಎಲ್ಲ ಬದಿಗಳಿಗೆ, ಕೊಂಬುಗಳಿಗೆ ಹೊದಿಸಿದ. ಧೂಪವೇದಿ ಮೇಲೆ ಸುತ್ತ ಒಂದು ಚಿನ್ನದ ಅಂಚು ಮಾಡಿದ. 27 ಧೂಪವೇದಿಯ ಎದುರುಬದುರು ಇರೋ ಎರಡು ಬದಿಗಳಲ್ಲಿ ಎರಡು ಚಿನ್ನದ ಬಳೆಗಳನ್ನ ಮಾಡಿದ. ಆ ಬಳೆಗಳು ಅಂಚಿನ ಕೆಳಗೆ ಇತ್ತು. ಅವು ಧೂಪವೇದಿನ ಎತ್ತೋಕೆ ಬಳಸೋ ಕೋಲುಗಳಿಗೆ ಹಿಡಿಗಳಾಗಿ ಇತ್ತು. 28 ಆಮೇಲೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡು ಹೊದಿಸಿದ. 29 ಅಭಿಷೇಕ ತೈಲ,+ ಪರಿಮಳ ಬರೋ ಶುದ್ಧ ಧೂಪನ+ ಕೌಶಲದಿಂದ* ತಯಾರಿಸಿದ. ಇದು ಪವಿತ್ರವಾದ ಅಭಿಷೇಕ ತೈಲ.
38 ಬೆಚಲೇಲ ಅಕೇಶಿಯ ಮರದಿಂದ ಸರ್ವಾಂಗಹೋಮದ ಯಜ್ಞವೇದಿ ಮಾಡಿದ. ಅದು ಚೌಕಾಕಾರ ಆಗಿತ್ತು. ಐದು ಮೊಳ* ಉದ್ದ, ಐದು ಮೊಳ ಅಗಲ, ಮೂರು ಮೊಳ ಎತ್ತರ ಇತ್ತು.+ 2 ಆಮೇಲೆ ಯಜ್ಞವೇದಿಯ ನಾಲ್ಕು ಮೂಲೆಗಳಲ್ಲೂ ಒಂದೊಂದು ಕೊಂಬು ಮಾಡಿದ. ಯಜ್ಞವೇದಿಯನ್ನ ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಿದ. ಯಜ್ಞವೇದಿಗೆ ತಾಮ್ರದ ತಗಡು ಹೊದಿಸಿದ.+ 3 ಯಜ್ಞವೇದಿಯ ಎಲ್ಲ ಉಪಕರಣಗಳನ್ನ ಅಂದ್ರೆ ಡಬ್ಬಿಗಳನ್ನ ಸಲಿಕೆಗಳನ್ನ ಬೋಗುಣಿಗಳನ್ನ ಕವಲುಗೋಲುಗಳನ್ನ ಕೆಂಡ ಹಾಕೋ ಪಾತ್ರೆಗಳನ್ನ ಮಾಡಿದ. ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಿದ. 4 ಯಜ್ಞವೇದಿಗಾಗಿ ತಾಮ್ರದ ಜಾಲರಿ ಮಾಡಿದ. ಅದನ್ನ ಯಜ್ಞವೇದಿಯ ಪಟ್ಟಿ ಕೆಳಗೆ, ಯಜ್ಞವೇದಿಯ ಮಧ್ಯದಲ್ಲಿ ಇಟ್ಟ. 5 ಅವನು ನಾಲ್ಕು ಬಳೆಗಳನ್ನ ಎರಕಹೊಯ್ದು ತಾಮ್ರದ ಆ ಜಾಲರಿ ಹತ್ರ ಯಜ್ಞವೇದಿಯ ನಾಲ್ಕು ಮೂಲೆಗಳಲ್ಲಿ ಜೋಡಿಸಿದ. ಆ ಬಳೆಗಳೇ ಕೋಲುಗಳಿಗೆ ಹಿಡಿಗಳು. 6 ಆಮೇಲೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ತಾಮ್ರದ ತಗಡು ಹೊದಿಸಿದ. 7 ಯಜ್ಞವೇದಿ ಎತ್ತೋಕೆ ಬಳಸೋ ಆ ಕೋಲುಗಳನ್ನ ಯಜ್ಞವೇದಿಯ ಎರಡು ಕಡೆಗಳಲ್ಲಿದ್ದ ಬಳೆಗಳಿಗೆ ಹಾಕಿದ. ಅವನು ಯಜ್ಞವೇದಿಯನ್ನ ಮರದ ಹಲಗೆಗಳಿಂದ ಪೆಟ್ಟಿಗೆ ಆಕಾರದಲ್ಲಿ ಮಾಡಿದ. ಅದು ಮೇಲೆ ಕೆಳಗೆ ತೆರೆದಿತ್ತು.
8 ಆಮೇಲೆ ತಾಮ್ರದಿಂದ ಒಂದು ದೊಡ್ಡ ಬೋಗುಣಿ,+ ಅದಕ್ಕೆ ಪೀಠ ಮಾಡಿದ. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲಲ್ಲಿ ಸುವ್ಯವಸ್ಥಿತವಾಗಿ ಸೇವೆಮಾಡ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ಕನ್ನಡಿಗಳಿಂದ* ಮಾಡಿದ.
9 ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ಪರದೆಗಳನ್ನ+ ತಯಾರಿಸಿದ. ಅವುಗಳನ್ನ ಹಾಕಿ ಅಂಗಳ ಮಾಡಿದ. ಅಂಗಳದ ದಕ್ಷಿಣ ಭಾಗಕ್ಕೆ 100 ಮೊಳ ಉದ್ದದ ಪರದೆ ತೂಗಿಬಿಟ್ಟ.+ 10 ಅದಕ್ಕೆ ತಾಮ್ರದ 20 ಕಂಬ, 20 ಅಡಿಗಲ್ಲು ಇತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. 11 ಅಂಗಳದ ಉತ್ತರಕ್ಕೆ 100 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ತಾಮ್ರದ 20 ಕಂಬ, 20 ಅಡಿಗಲ್ಲು ಇತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. 12 ಆದ್ರೆ ಪಶ್ಚಿಮದಲ್ಲಿ 50 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ಹತ್ತು ಕಂಬಗಳು, ಹತ್ತು ಅಡಿಗಲ್ಲು ಇತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. 13 ಪೂರ್ವದ ಅಂಗಳ 50 ಮೊಳ ಅಗಲ ಇತ್ತು. 14 ಅಂಗಳದ ಬಾಗಿಲ ಬಲ ಬದಿಯಲ್ಲಿ 15 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ಮೂರು ಕಂಬ ಮೂರು ಅಡಿಗಲ್ಲು ಇತ್ತು. 15 ಅಂಗಳದ ಬಾಗಿಲ ಎಡ ಬದಿಯಲ್ಲಿ 15 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ಮೂರು ಕಂಬ, ಮೂರು ಅಡಿಗಲ್ಲು ಇತ್ತು. 16 ಅಂಗಳದಲ್ಲಿ ತೂಗಿಬಿಟ್ಟ ಎಲ್ಲ ಪರದೆಗಳನ್ನ ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ಮಾಡಿದ್ರು. 17 ಕಂಬಗಳ ಅಡಿಗಲ್ಲುಗಳು ತಾಮ್ರದಾಗಿತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. ಕಂಬಗಳ ಮೇಲೆ ಬೆಳ್ಳಿ ತಗಡು ಹೊದಿಸಿದ್ರು. ಅಂಗಳದ ಎಲ್ಲ ಕಂಬಗಳ ಕಟ್ಟುಗಳನ್ನ ಬೆಳ್ಳಿಯಿಂದ ಮಾಡಿದ್ರು.+
18 ಅಂಗಳದ ಬಾಗಿಲಿಗೆ 20 ಮೊಳ ಉದ್ದದ, 5 ಮೊಳ ಎತ್ತರದ ಪರದೆ ಹಾಕಿದ್ರು. ಈ ಪರದೆಯ, ಅಂಗಳದಲ್ಲಿ ತೂಗಿಬಿಟ್ಟ ಪರದೆಗಳ ಎತ್ತರ ಒಂದೇ ಆಗಿತ್ತು. ಈ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರು ಇದನ್ನೆಲ್ಲ ಒಟ್ಟಿಗೆ ನೇಯ್ದು ಮಾಡಿದ್ರು.+ 19 ಅಂಗಳದ ಬಾಗಿಲ ಪರದೆಯ ನಾಲ್ಕು ಕಂಬಗಳನ್ನ ನಾಲ್ಕು ಅಡಿಗಲ್ಲುಗಳನ್ನ ತಾಮ್ರದಿಂದ ಮಾಡಿದ್ರು. ಕಂಬಗಳ ಕೊಕ್ಕೆಗಳು ಬೆಳ್ಳಿದಾಗಿತ್ತು. ಕಂಬಗಳ ಮೇಲೆ, ಕಟ್ಟುಗಳಿಗೆ* ಬೆಳ್ಳಿ ತಗಡು ಹೊದಿಸಿದ್ರು. 20 ಡೇರೆಯ ಗೂಟಗಳು, ಅಂಗಳದ ಎಲ್ಲ ಗೂಟಗಳು ತಾಮ್ರದಾಗಿತ್ತು.+
21 ಸಾಕ್ಷಿ ಮಂಜೂಷ ಇಡೋ+ ಪವಿತ್ರ ಡೇರೆ ಮಾಡೋಕೆ ಉಪಯೋಗಿಸಿದ ವಸ್ತುಗಳ ಪಟ್ಟಿ ಮಾಡಬೇಕಂತ ಮೋಶೆ ಆಜ್ಞೆಕೊಟ್ಟ. ಪುರೋಹಿತನಾದ ಆರೋನನ ಮಗ ಈತಾಮಾರನ+ ನಿರ್ದೇಶನದ ಪ್ರಕಾರ ಲೇವಿಯರು+ ಆ ಪಟ್ಟಿ ಮಾಡಿದ್ರು. 22 ಯೆಹೂದ ಕುಲದ ಊರಿಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲ+ ಮೋಶೆಗೆ ಯೆಹೋವ ಆಜ್ಞಾಪಿಸಿದ್ದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ. 23 ಅವನ ಜೊತೆ ದಾನ್ ಕುಲದ ಅಹೀಸಾಮಾಕನ ಮಗ ಒಹೊಲೀಯಾಬ+ ಕೆಲಸ ಮಾಡಿದ. ಇವನಿಗೆ ಕರಕುಶಲ ಕೆಲಸ, ಕಸೂತಿ ಕೆಲಸ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಒಳ್ಳೇ ಗುಣಮಟ್ಟದ ನಾರನ್ನ ನೇಯೋ ಕೆಲಸ ಗೊತ್ತಿತ್ತು.
24 ಪವಿತ್ರ ಡೇರೆಯ ಎಲ್ಲ ಕೆಲಸಗಳನ್ನ ಮುಗಿಸೋಕೆ ಒಟ್ಟು 29 ತಲಾಂತು,* 730 ಶೆಕೆಲ್* ಚಿನ್ನ ಬೇಕಾಯ್ತು. ಇದು ಆರಾಧನಾ ಸ್ಥಳದ ತೂಕದ ಪ್ರಕಾರ* ಇತ್ತು. ಅಷ್ಟೇ ಚಿನ್ನವನ್ನ ಜನ ಕಾಣಿಕೆಯಾಗಿ*+ ತಂದು ಕೊಟ್ಟಿದ್ರು. 25 ಇಸ್ರಾಯೇಲ್ಯರಲ್ಲಿ ಪಟ್ಟಿ ಆದವರು ಆರಾಧನಾ ಸ್ಥಳದ ತೂಕದ ಪ್ರಕಾರ* 100 ತಲಾಂತು ಮತ್ತು 1,775 ಶೆಕೆಲ್ ಬೆಳ್ಳಿ ತಂದು ಕೊಟ್ಟಿದ್ರು. 26 ಅವರಲ್ಲಿ ಪ್ರತಿಯೊಬ್ಬನೂ ಆರಾಧನಾ ಸ್ಥಳದ ತೂಕದ ಪ್ರಕಾರ* ಅರ್ಧ ಶೆಕೆಲ್ ಬೆಳ್ಳಿ ಕೊಟ್ಟಿದ್ದ. ಅವರು 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರಾಗಿದ್ರು.+ ಅವ್ರ ಒಟ್ಟು ಸಂಖ್ಯೆ 6,03,550.+
27 ಪವಿತ್ರ ಡೇರೆಯ ಚೌಕಟ್ಟುಗಳ ಅಡಿಗಲ್ಲುಗಳನ್ನ ಪರದೆಯ ಕಂಬಗಳ ಅಡಿಗಲ್ಲುಗಳನ್ನ ಎರಕಹೊಯ್ಯೋಕೆ ಬಳಸಿದ ಬೆಳ್ಳಿ 100 ತಲಾಂತು. 100 ಅಡಿಗಲ್ಲುಗಳನ್ನ ಎರಕಹೊಯ್ಯೋಕೆ 100 ತಲಾಂತು ಬೆಳ್ಳಿ ಅಂದ್ರೆ ಪ್ರತಿಯೊಂದು ಅಡಿಗಲ್ಲಿಗೆ ಒಂದೊಂದು ತಲಾಂತು ಬೆಳ್ಳಿ ಬಳಸಿದ್ರು.+ 28 ಅವನು ಕಂಬಗಳ ಕೊಕ್ಕೆಗಳನ್ನ ಮಾಡೋಕೆ, ಕಂಬಗಳ ಮೇಲೆ ಬೆಳ್ಳಿ ತಗಡು ಹೊದಿಸೋಕೆ ಕಂಬಗಳನ್ನ ಒಂದಕ್ಕೊಂದು ಜೋಡಿಸೋಕೆ ಉಪಯೋಗಿಸಿದ ಬೆಳ್ಳಿ 1,775 ಶೆಕೆಲ್.
29 ಜನ 70 ತಲಾಂತು ಮತ್ತು 2,400 ಶೆಕೆಲ್ ತಾಮ್ರ ಅರ್ಪಿಸಿದ್ರು.* 30 ಈ ತಾಮ್ರದಿಂದ ಅವನು ದೇವದರ್ಶನ ಡೇರೆಯ ಬಾಗಿಲ ಕಂಬಗಳ ಅಡಿಗಲ್ಲುಗಳನ್ನ, ಯಜ್ಞವೇದಿ ಮತ್ತು ಅದ್ರ ಜಾಲರಿಯನ್ನ, ಅದ್ರ ಎಲ್ಲ ಉಪಕರಣಗಳನ್ನ, 31 ಅಂಗಳದ ಎಲ್ಲ ಕಂಬಗಳ ಅಡಿಗಲ್ಲುಗಳನ್ನ, ಅಂಗಳದ ಬಾಗಿಲ ಕಂಬಗಳ ಅಡಿಗಲ್ಲುಗಳನ್ನ, ಪವಿತ್ರ ಡೇರೆಯ ಮತ್ತು ಅಂಗಳದ ಎಲ್ಲ ಗೂಟಗಳನ್ನ+ ಮಾಡಿದ.
39 ಆಮೇಲೆ ನಿಪುಣ ಕೆಲಸಗಾರರು ಆರಾಧನಾ ಸ್ಥಳದಲ್ಲಿ ಪುರೋಹಿತರು ಸೇವೆ ಮಾಡುವಾಗ ಹಾಕೊಳ್ಳೋಕೆ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲನ್ನ+ ಹೆಣೆದು ಒಳ್ಳೇ ಬಟ್ಟೆಗಳನ್ನ ಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಆರೋನನಿಗೆ ಪವಿತ್ರ ಬಟ್ಟೆಗಳನ್ನ ತಯಾರಿಸಿದ್ರು.+
2 ಬೆಚಲೇಲ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನ ದಾರದಿಂದ ಏಫೋದನ್ನ+ ತಯಾರಿಸಿದ. 3 ಅವರು ಚಿನ್ನದ ತಗಡನ್ನ ಸುತ್ತಿಗೆಯಿಂದ ಬಡಿದು ತೆಳ್ಳಗಿನ ಹಾಳೆಗಳ ತರ ಮಾಡಿದ್ರು. ಬೆಚಲೇಲ ಆ ಹಾಳೆಗಳನ್ನ ಸಣ್ಣಸಣ್ಣ ಎಳೆಗಳಾಗಿ ಕತ್ತರಿಸಿ ಚಿನ್ನದ ನೂಲು ಮಾಡಿದ. ಅವನು ಆ ನೂಲನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಒಳ್ಳೇ ಗುಣಮಟ್ಟದ ನಾರಿನ ದಾರದ ಜೊತೆ ಸೇರಿಸಿದ. ಇದನ್ನ ಬಳಸಿ ಏಫೋದಿನ ಮೇಲೆ ಕಸೂತಿ ಹಾಕಿದ್ರು. 4 ಅವರು ಏಫೋದಿಗೆ ಹೆಗಲಪಟ್ಟಿಗಳನ್ನ ಮಾಡಿ ಅದ್ರ ಅಂಚುಗಳನ್ನ ಒಂದಕ್ಕೊಂದು ಜೋಡಿಸಿದ್ರು. 5 ಏಫೋದನ್ನ ಗಟ್ಟಿಯಾಗಿ ಕಟ್ಟೋಕೆ ಅದಕ್ಕೆ ಸೊಂಟಪಟ್ಟಿ* ಹೊಲಿದ್ರು.+ ಅದನ್ನ ಸಹ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನ ದಾರದಿಂದ ಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು.
6 ಆಮೇಲೆ ಅವರು ಚಿನ್ನದ ಕುಂದಣಗಳಲ್ಲಿ ಗೋಮೇದಕ ರತ್ನಗಳನ್ನ ಕೂರಿಸಿದ್ರು. ಆ ರತ್ನಗಳಲ್ಲಿ ಇಸ್ರಾಯೇಲನ ಗಂಡುಮಕ್ಕಳ ಹೆಸರನ್ನ ಮುದ್ರೆ ಕೆತ್ತೋ ತರ ಕೆತ್ತಿದ್ರು.+ 7 ಅವು ಇಸ್ರಾಯೇಲನ ಮಕ್ಕಳ ಸ್ಮಾರಕ ರತ್ನಗಳಾಗಿ ಇರೋ ಹಾಗೆ ಬೆಚಲೇಲ ಆ ರತ್ನಗಳನ್ನ ಏಫೋದಿನ ಹೆಗಲಪಟ್ಟಿಗಳ ಮೇಲೆ ಇಟ್ಟ.+ ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವನು ಮಾಡಿದ. 8 ಆಮೇಲೆ ಏಫೋದನ್ನ ಮಾಡಿದ ತರಾನೇ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನ ದಾರ ಬಳಸಿ ಕಸೂತಿ ಹಾಕಿ ಎದೆಪದಕ+ ಮಾಡಿದ.+ 9 ಅದನ್ನ ಮಧ್ಯದಲ್ಲಿ ಮಡಚಿದಾಗ ಅದು ಚೌಕಾಕಾರ ಆಗಿತ್ತು. ಒಂದು ಗೇಣು* ಉದ್ದ, ಒಂದು ಗೇಣು ಅಗಲ ಇತ್ತು. 10 ಅವರು ಏಫೋದಲ್ಲಿ ರತ್ನಗಳನ್ನ ನಾಲ್ಕು ಸಾಲಾಗಿ ಕೂರಿಸಿದ್ರು. ಮೊದಲನೇ ಸಾಲಲ್ಲಿ ಮಾಣಿಕ್ಯ, ಪುಷ್ಯರಾಗ, ಪಚ್ಚೆ, 11 ಎರಡನೇ ಸಾಲಲ್ಲಿ ವೈಢೂರ್ಯ, ನೀಲಮಣಿ, ಸೂರ್ಯಕಾಂತ ಶಿಲೆ, 12 ಮೂರನೇ ಸಾಲಲ್ಲಿ ಲೆಷೆಮ್ ರತ್ನ,* ಅಗೇಟು, ಪದ್ಮರಾಗ, 13 ನಾಲ್ಕನೇ ಸಾಲಲ್ಲಿ ಕ್ರಿಸಲೈಟ್ ರತ್ನ, ಗೋಮೇದಕ ರತ್ನ, ಜೇಡ್ ರತ್ನ ಕೂರಿಸಿದ್ರು. ಈ ಎಲ್ಲ ರತ್ನಗಳನ್ನ ಚಿನ್ನದ ಕುಂದಣದಲ್ಲಿ ಕೂರಿಸಿದ್ರು. 14 ಇಸ್ರಾಯೇಲನ 12 ಮಕ್ಕಳಿಗೆ ಸರಿಯಾಗಿ ಆ 12 ರತ್ನ ಇಟ್ರು. ಪ್ರತಿಯೊಂದು ರತ್ನದ ಮೇಲೆ ಒಬ್ಬೊಬ್ಬನ ಹೆಸರನ್ನ ಮುದ್ರೆ ಕೆತ್ತೋ ತರ ಕೆತ್ತಿದ್ರು. ಒಂದೊಂದು ಹೆಸರು 12 ಕುಲಗಳಲ್ಲಿದ್ದ ಒಂದೊಂದು ಕುಲವನ್ನ ಸೂಚಿಸ್ತು.
15 ಆಮೇಲೆ ಅವರು ಹಗ್ಗದ ತರ ನೇಯ್ದಿರೋ ಸರಪಣಿಗಳನ್ನ ಶುದ್ಧ ಚಿನ್ನದಿಂದ ಮಾಡಿ ಎದೆಪದಕಕ್ಕೆ ಜೋಡಿಸಿದ್ರು.+ 16 ಆಮೇಲೆ ಚಿನ್ನದ ಎರಡು ಕುಂದಣಗಳನ್ನ ಮಾಡಿದ್ರು. ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಮೇಲೆ ಎರಡು ಮೂಲೆಗಳಿಗೆ ಜೋಡಿಸಿದ್ರು. 17 ಆಮೇಲೆ ಆ ಉಂಗುರಗಳಿಗೆ ಚಿನ್ನದ ಎರಡು ಹಗ್ಗಗಳನ್ನ ಸಿಕ್ಕಿಸಿದ್ರು. 18 ಆ ಎರಡು ಹಗ್ಗಗಳ ಎರಡು ತುದಿಗಳನ್ನ ಎರಡು ಕುಂದಣಗಳಿಗೆ ಸಿಕ್ಕಿಸಿದ್ರು. ಅವುಗಳನ್ನ ಏಫೋದಿನ ಮುಂದೆ ಹೆಗಲಪಟ್ಟಿಗಳಿಗೆ ಜೋಡಿಸಿದ್ರು. 19 ಆಮೇಲೆ ಅವರು ಚಿನ್ನದ ಎರಡು ಉಂಗುರಗಳನ್ನ ಮಾಡಿ ಏಫೋದಿನ ಮುಂದೆ ಇರೋ ಎದೆಪದಕದ ಒಳಗೆ ಕೆಳಗಿನ ಎರಡು ಮೂಲೆಗಳಲ್ಲಿ ಹಾಕಿದ್ರು.+ 20 ಅವರು ಇನ್ನೂ ಎರಡು ಚಿನ್ನದ ಉಂಗುರಗಳನ್ನ ಮಾಡಿದ್ರು. ಅವುಗಳನ್ನ ಏಫೋದಿನ ಮುಂದೆ ಅಂದ್ರೆ ಎರಡು ಹೆಗಲಪಟ್ಟಿಗಳ ಕೆಳಗೆ, ಸೊಂಟಪಟ್ಟಿ* ಏಫೋದಿಗೆ ಸೇರೋ ಸ್ಥಳದ ಮೇಲೆ ಹಾಕಿದ್ರು. 21 ಕೊನೆಗೆ ಅವರು ಎದೆಪದಕದ ಉಂಗುರಗಳಿಂದ ಏಫೋದಿನ ಉಂಗುರಗಳಿಗೆ ನೀಲಿ ಹಗ್ಗ ಹಾಕಿ ಕಟ್ಟಿದ್ರು. ಇದ್ರಿಂದ ಏಫೋದಿನ ಮೇಲೆ, ಸೊಂಟಪಟ್ಟಿ* ಮೇಲೆ ಎದೆಪದಕ ಬಿಗಿಯಾಗಿ ಇರ್ತಿತ್ತು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು.
22 ಆಮೇಲೆ ಏಫೋದಿನ ಒಳಗೆ ಹಾಕೋಕೆ ತೋಳಿಲ್ಲದ ಅಂಗಿಯನ್ನ ಬೆಚಲೇಲ ನೇಯ್ದ. ಅದನ್ನ ಪೂರ್ತಿ ನೀಲಿ ದಾರದಿಂದ ಮಾಡಿದ್ರು.+ 23 ಅಂಗಿಯಲ್ಲಿ ತಲೆ ತೂರಿಸೋಕೆ ಜಾಗ ಮಾಡಿದ. ಆ ಜಾಗ ಅಂದ್ರೆ ಕತ್ತಿನ ಸುತ್ತ ಅಂಚು ಮಾಡಿದ. ಆ ಅಂಚು ಹರಿದು ಹೋಗದೆ ಇರೋ ತರ ಅದನ್ನ ನೇಯ್ದ. ಅದು ಯುದ್ಧಕವಚದ ಕತ್ತಿನ ತರ ಇತ್ತು. 24 ಆಮೇಲೆ ಅವರು ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲನ್ನ ಒಟ್ಟಿಗೆ ಹೊಸೆದು ಅದ್ರಿಂದ ದಾಳಿಂಬೆಗಳನ್ನ ಮಾಡಿ ಆ ಅಂಗಿ ಕೆಳಗೆ ಮಡಚಿದ ಅಂಚಿನ ಸುತ್ತ ಇಟ್ರು. 25 ಶುದ್ಧ ಚಿನ್ನದಿಂದ ಗಂಟೆಗಳನ್ನ ಮಾಡಿ ಅಂಗಿ ಕೆಳಗೆ ಮಡಚಿದ ಅಂಚಿನ ಸುತ್ತ ದಾಳಿಂಬೆಗಳ ಮಧ್ಯ ಇಟ್ರು. 26 ತೋಳಿಲ್ಲದ ಅಂಗಿ ಕೆಳಗಿನ ಮಡಚಿದ ಅಂಚಿನ ಸುತ್ತ ಒಂದೊಂದು ದಾಳಿಂಬೆ ಆದ್ಮೇಲೆ ಒಂದೊಂದು ಗಂಟೆ ಇಟ್ರು. ಪುರೋಹಿತನಾಗಿ ಸೇವೆ ಮಾಡೋನಿಗೆ ಆ ಅಂಗಿಯನ್ನ ಸಿದ್ಧಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು.
27 ನೇಕಾರರು ನೇಯ್ದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಅವರು ಆರೋನನಿಗೆ, ಅವನ ಮಕ್ಕಳಿಗೆ ಉದ್ದ ಅಂಗಿಗಳನ್ನ ಮಾಡಿದ್ರು.+ 28 ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ವಿಶೇಷ ಪೇಟ,+ ಅಲಂಕಾರಿಕ ಪೇಟಗಳನ್ನ,+ ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಚಡ್ಡಿಗಳನ್ನ*+ ಮಾಡಿದ್ರು. 29 ಹೊಸೆದ ಒಳ್ಳೇ ಗುಣಮಟ್ಟದ ನಾರು, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲಿಂದ ನಡುಪಟ್ಟಿಗಳನ್ನೂ ಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು.
30 ಕೊನೆಗೆ ಶುದ್ಧ ಚಿನ್ನದಿಂದ ಪಳಪಳ ಅಂತ ಹೊಳೆಯೋ ಫಲಕ ಮಾಡಿದ್ರು. ಇದು ಪವಿತ್ರ ಚಿಹ್ನೆ ಆಗಿತ್ತು.* ಆ ಫಲಕದ ಮೇಲೆ ಮುದ್ರೆ ಕೆತ್ತೋ ತರ “ಯೆಹೋವ ಪವಿತ್ರನು”* ಅಂತ ಕೆತ್ತಿದ್ರು.+ 31 ನೀಲಿ ದಾರದಿಂದ ಮಾಡಿದ ಹಗ್ಗವನ್ನ ಆ ಫಲಕಕ್ಕೆ ಹಾಕಿ ವಿಶೇಷ ಪೇಟಕ್ಕೆ ಕಟ್ಟಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು.
32 ಹೀಗೆ ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಎಲ್ಲ ಕೆಲಸ ಮುಗಿತು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ಎಲ್ಲ ಮಾಡಿ ಮುಗಿಸಿದ್ರು.+ ದೇವರು ಹೇಳಿದ ತರಾನೇ ಮಾಡಿದ್ರು.
33 ಆಮೇಲೆ ಪವಿತ್ರ ಡೇರೆಯ+ ಎಲ್ಲ ಭಾಗಗಳನ್ನ, ಡೇರೆ ಬಟ್ಟೆಗಳನ್ನ+ ಎಲ್ಲ ಉಪಕರಣಗಳನ್ನ ಮೋಶೆ ಹತ್ರ ತಂದ್ರು. ಅವರು ಏನೇನು ತಂದ್ರು ಅಂದ್ರೆ ಪವಿತ್ರ ಡೇರೆ ಕೊಂಡಿಗಳು,+ ಚೌಕಟ್ಟುಗಳು,+ ಕೋಲುಗಳು,+ ಕಂಬಗಳು, ಅಡಿಗಲ್ಲುಗಳು.+ 34 ಕೆಂಪು ಬಣ್ಣದ ಟಗರುಚರ್ಮದ ಹೊದಿಕೆ,+ ಸೀಲ್ ಪ್ರಾಣಿಯ* ಚರ್ಮದ ಹೊದಿಕೆ, ಮಂಜೂಷದ ಮುಂದೆ ತೂಗಿಬಿಡೋ ಪರದೆ.+ 35 ಸಾಕ್ಷಿ ಮಂಜೂಷ, ಅದಕ್ಕೆ ಹಾಕೋ ಕೋಲುಗಳು,+ ಅದ್ರ ಮುಚ್ಚಳ.+ 36 ಮೇಜು, ಅದ್ರ ಎಲ್ಲ ಉಪಕರಣಗಳು,+ ಅರ್ಪಣೆಯ ರೊಟ್ಟಿಗಳು. 37 ಶುದ್ಧ ಚಿನ್ನದ ದೀಪಸ್ತಂಭ,+ ಅದ್ರ ಎಲ್ಲ ಉಪಕರಣಗಳು,+ ಸಾಲಾಗಿ ಇಡೋ ದೀಪಗಳು, ಅದಕ್ಕೆ ಎಣ್ಣೆ.+ 38 ಚಿನ್ನದ ಧೂಪವೇದಿ,+ ಅಭಿಷೇಕ ತೈಲ,+ ಸುವಾಸನೆ ಇರೋ ಧೂಪ,+ ಡೇರೆಯ ಬಾಗಿಲಿಗೆ ಹಾಕೋ ಪರದೆ.+ 39 ತಾಮ್ರದ ಯಜ್ಞವೇದಿ,+ ತಾಮ್ರದ ಜಾಲರಿ, ಕೋಲುಗಳು,+ ಎಲ್ಲ ಉಪಕರಣಗಳು,+ ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠ.+ 40 ಅಂಗಳಕ್ಕಾಗಿ ಬಳಸೋ ಪರದೆಗಳು, ಕಂಬಗಳು, ಅಡಿಗಲ್ಲುಗಳು,+ ಹಗ್ಗಗಳು, ಗೂಟಗಳು,+ ಅಂಗಳದ ಬಾಗಿಲಲ್ಲಿ ಹಾಕೋ ಪರದೆ,+ ಪವಿತ್ರ ಡೇರೇಲಿ ಸೇವೆ ಮಾಡುವಾಗ ಬಳಸೋ ಎಲ್ಲ ಉಪಕರಣಗಳು. 41 ಆರಾಧನಾ ಸ್ಥಳದಲ್ಲಿ ಸೇವೆ ಮಾಡುವಾಗ ಹಾಕೊಳ್ಳೋಕೆ ಚೆನ್ನಾಗಿ ಹೆಣೆದ ಬಟ್ಟೆಗಳು, ಪುರೋಹಿತ ಆರೋನನಿಗಾಗಿ ಪವಿತ್ರ ಬಟ್ಟೆಗಳು,+ ಅವನ ಮಕ್ಕಳು ಪುರೋಹಿತರಾಗಿ ಸೇವೆ ಮಾಡುವಾಗ ಹಾಕೊಳ್ಳೋಕೆ ಬಟ್ಟೆಗಳು.
42 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ತರಾನೇ ಇಸ್ರಾಯೇಲ್ಯರು ಎಲ್ಲವನ್ನೂ ಮಾಡಿದ್ರು.+ 43 ಅವರು ಮಾಡಿದ್ದನ್ನೆಲ್ಲ ಮೋಶೆ ಪರೀಕ್ಷಿಸಿದ. ಅವರು ಎಲ್ಲ ಕೆಲಸವನ್ನ ಯೆಹೋವ ಆಜ್ಞೆ ಕೊಟ್ಟ ತರಾನೇ ಮಾಡಿದ್ರು ಅಂತ ಅವನಿಗೆ ಗೊತ್ತಾಯ್ತು. ಹಾಗಾಗಿ ಮೋಶೆ ಅವರನ್ನ ಆಶೀರ್ವದಿಸಿದ.
40 ಆಮೇಲೆ ಯೆಹೋವ ಮೋಶೆಗೆ ಹೀಗಂದನು: 2 “ಮೊದಲನೇ ತಿಂಗಳಿನ ಮೊದಲನೇ ದಿನ ನೀನು ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಭಾಗಗಳನ್ನ ಜೋಡಿಸು.+ 3 ಅದ್ರೊಳಗೆ ಸಾಕ್ಷಿ ಮಂಜೂಷ ಇಡು.+ ಮಂಜೂಷ ಕಾಣದಿರೋ ತರ ಅದ್ರ ಮುಂದೆ ಪರದೆ ಹಾಕು.+ 4 ಮೇಜನ್ನ ಒಳಗೆ ತಂದಿಡು.+ ಅದ್ರ ಮೇಲೆ ಇಡಬೇಕಾದ ಎಲ್ಲವನ್ನ ಜೋಡಿಸಿಡು. ದೀಪಸ್ತಂಭ ಒಳಗೆ ತಂದು+ ಅದ್ರ ದೀಪಗಳನ್ನ ಹೊತ್ತಿಸು.+ 5 ಆಮೇಲೆ ಸಾಕ್ಷಿ ಮಂಜೂಷದ ಮುಂದೆ ಚಿನ್ನದ ಧೂಪವೇದಿ+ ಇಡು. ಪವಿತ್ರ ಡೇರೆಯ ಬಾಗಿಲಿಗೆ ಪರದೆ ಹಾಕು.+
6 ನೀನು ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಮುಂದೆ ಸರ್ವಾಂಗಹೋಮ ಕೊಡೋ ಯಜ್ಞವೇದಿ+ ಇಡು. 7 ದೇವದರ್ಶನ ಡೇರೆ ಮತ್ತು ಯಜ್ಞವೇದಿಯ ಮಧ್ಯ ತಾಮ್ರದ ದೊಡ್ಡ ಬೋಗುಣಿ ಇಡು. ಅದ್ರಲ್ಲಿ ನೀರು ತುಂಬಿಸು.+ 8 ದೇವದರ್ಶನ ಡೇರೆಯ ಸುತ್ತ ಅಂಗಳ ಇರ್ಲಿ,+ ಅದ್ರ ಸುತ್ತ ಪರದೆ ಹಾಕು.+ ಅಂಗಳದ ಬಾಗಿಲಿಗೂ ಪರದೆ ಹಾಕು. 9 ಆಮೇಲೆ ನೀನು ಅಭಿಷೇಕ ತೈಲ+ ತಗೊಂಡು ಪವಿತ್ರ ಡೇರೆ, ಅದ್ರಲ್ಲಿರೋ ಎಲ್ಲ ಉಪಕರಣಗಳನ್ನ ಅಭಿಷೇಕಿಸಿ+ ನನ್ನ ಸೇವೆಗಾಗಿ ಇಡು. ಇದ್ರಿಂದ ಆ ಡೇರೆ ಪವಿತ್ರ ಆಗುತ್ತೆ. 10 ಸರ್ವಾಂಗಹೋಮ ಕೊಡೋ ಯಜ್ಞವೇದಿ, ಅದ್ರ ಎಲ್ಲ ಉಪಕರಣಗಳನ್ನ ಅಭಿಷೇಕಿಸಿ ನನ್ನ ಸೇವೆಗಾಗಿ ಇಡು. ಇದ್ರಿಂದ ಯಜ್ಞವೇದಿ ಅತಿ ಪವಿತ್ರ ಆಗುತ್ತೆ.+ 11 ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠವನ್ನ ಅಭಿಷೇಕಿಸಿ ನನ್ನ ಸೇವೆಗಾಗಿ ಇಡು.
12 ಆಮೇಲೆ ಆರೋನನನ್ನ ಅವನ ಗಂಡುಮಕ್ಕಳನ್ನ ನೀನು ದೇವದರ್ಶನ ಡೇರೆಯ ಬಾಗಿಲ ಹತ್ರ ಕರ್ಕೊಂಡು ಬಂದು ಸ್ನಾನ ಮಾಡೋಕೆ ಹೇಳು.+ 13 ಆರೋನನಿಗೆ ಪವಿತ್ರ ಬಟ್ಟೆ ಹಾಕಿ+ ನನ್ನ ಸೇವೆ ಮಾಡೋಕೆ ಅವನಿಗೆ ಅಭಿಷೇಕ ಮಾಡು.+ ಅವನು ಪುರೋಹಿತನಾಗಿ ಸೇವೆ ಮಾಡ್ತಾನೆ. 14 ಆಮೇಲೆ ಅವನ ಮಕ್ಕಳನ್ನ ಕರ್ಕೊಂಡು ಬಂದು ಉದ್ದ ಅಂಗಿಗಳನ್ನ ಹಾಕು.+ 15 ನೀನು ಅವ್ರ ತಂದೆಯನ್ನ ಅಭಿಷೇಕ ಮಾಡಿದ ತರ ಅವರಿಗೂ ಅಭಿಷೇಕ ಮಾಡು.+ ಆಗ ಅವರು ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ. ಅಭಿಷೇಕ ಮಾಡಿದ ಮೇಲೆ ಅವ್ರ ವಂಶದವರು ತಲೆಮಾರುಗಳ ತನಕ ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ.”+
16 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಎಲ್ಲ ಮಾಡಿದ.+ ದೇವರು ಹೇಳಿದ ಹಾಗೇ ಮಾಡಿದ.
17 ಎರಡನೇ ವರ್ಷದ ಮೊದಲನೇ ತಿಂಗಳ ಮೊದಲನೇ ದಿನ ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿದ್ರು.+ 18 ಮೋಶೆ ಪವಿತ್ರ ಡೇರೆನ ಹೇಗೆ ಜೋಡಿಸಿದ ಅಂದ್ರೆ, ಮೊದ್ಲು ಅವನು ಅಡಿಗಲ್ಲಿಟ್ಟು+ ಅದ್ರ ಮೇಲೆ ಚೌಕಟ್ಟು+ ನಿಲ್ಲಿಸಿದ. ಚೌಕಟ್ಟುಗಳಿಗೆ ಕೋಲು+ ಹಾಕಿದ. ಆಮೇಲೆ ಕಂಬಗಳನ್ನ ನಿಲ್ಲಿಸಿದ. 19 ಅವುಗಳ ಮೇಲೆ ಡೇರೆ ಬಟ್ಟೆನ ಹೊದಿಸಿದ.+ ಯೆಹೋವ ದೇವರು ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.
20 ದೇವರ ಆಜ್ಞೆಗಳಿದ್ದ ಕಲ್ಲಿನ ಹಲಗೆಗಳನ್ನ+ ತಗೊಂಡು ಮಂಜೂಷದ ಒಳಗೆ+ ಇಟ್ಟ. ಮಂಜೂಷಕ್ಕಿದ್ದ ಬಳೆಗಳಲ್ಲಿ ಕೋಲುಗಳನ್ನ+ ಹಾಕಿ ಅದ್ರ ಮೇಲೆ ಮುಚ್ಚಳ+ ಇಟ್ಟ.+ 21 ಸಾಕ್ಷಿ ಮಂಜೂಷನ ಪವಿತ್ರ ಡೇರೆ ಒಳಗೆ ತಂದಿಟ್ಟು ಅದು ಕಾಣದಿರೋ ತರ ಅದ್ರ ಮುಂದೆ ಪರದೆ+ ಹಾಕಿದ.+ ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.
22 ಆಮೇಲೆ ಮೋಶೆ ಅತಿ ಪವಿತ್ರ ಸ್ಥಳದ ಹೊರಗೆ, ಪವಿತ್ರ ಡೇರೆಯಲ್ಲಿ ಉತ್ತರ ಭಾಗಕ್ಕೆ ಮೇಜನ್ನ+ ಇಟ್ಟ. 23 ಅದ್ರ ಮೇಲೆ ರೊಟ್ಟಿಗಳನ್ನ+ ಒಂದ್ರ ಮೇಲೆ ಒಂದಿಟ್ಟು ಯೆಹೋವನ ಮುಂದೆ ಜೋಡಿಸಿದ. ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.
24 ಆಮೇಲೆ ಅವನು ಪವಿತ್ರ ಡೇರೆಯಲ್ಲಿ ದಕ್ಷಿಣ ಭಾಗಕ್ಕೆ ಅಂದ್ರೆ ಮೇಜಿನ ಮುಂದೆ ದೀಪಸ್ತಂಭ+ ಇಟ್ಟ. 25 ಯೆಹೋವನ ಮುಂದೆ ದೀಪಗಳನ್ನ+ ಹಚ್ಚಿದ. ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.
26 ಆಮೇಲೆ ಅವನು ದೇವದರ್ಶನ ಡೇರೆಯಲ್ಲಿ ಪರದೆ ಮುಂದೆ ಚಿನ್ನದ ಧೂಪವೇದಿ+ ಇಟ್ಟ. 27 ಪರಿಮಳ ಬರೋ ಧೂಪ+ ಸುಡೋಕೆ ಅದನ್ನ ಅಲ್ಲಿಟ್ಟ.+ ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.
28 ಆಮೇಲೆ ಅವನು ಪವಿತ್ರ ಡೇರೆ ಬಾಗಿಲಿಗೆ ಪರದೆ+ ಹಾಕಿದ.
29 ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆ ಬಾಗಿಲ ಹತ್ರ ಯಜ್ಞವೇದಿ+ ಇಟ್ಟ. ಅದ್ರಲ್ಲಿ ಸರ್ವಾಂಗಹೋಮ ಬಲಿ,+ ಧಾನ್ಯ ಅರ್ಪಣೆ ಕೊಡ್ತಿದ್ರು. ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.
30 ಆಮೇಲೆ ದೇವದರ್ಶನ ಡೇರೆ ಮತ್ತು ಯಜ್ಞವೇದಿಯ ಮಧ್ಯ ತಾಮ್ರದ ದೊಡ್ಡ ಬೋಗುಣಿ ಇಟ್ಟ. ಕೈಕಾಲು ತೊಳೆಯೋಕೆ ಆ ಬೋಗುಣಿಯಲ್ಲಿ ನೀರು ತುಂಬಿಸಿದ.+ 31 ಮೋಶೆ, ಆರೋನ, ಅವನ ಮಕ್ಕಳು ಆ ನೀರಲ್ಲಿ ಕೈಕಾಲು ತೊಳ್ಕೊಂಡ್ರು. 32 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ತರಾನೇ ಆರೋನ, ಅವನ ಮಕ್ಕಳು ದೇವದರ್ಶನ ಡೇರೆ ಒಳಗೆ, ಯಜ್ಞವೇದಿ ಹತ್ರ ಹೋಗುವಾಗೆಲ್ಲ ಕೈಕಾಲು ತೊಳ್ಕೊಂಡು ಹೋಗ್ತಿದ್ರು.+
33 ಕೊನೆಗೆ ಅವನು ಪವಿತ್ರ ಡೇರೆ ಮತ್ತು ಯಜ್ಞವೇದಿ ಸುತ್ತ ಪರದೆ ಹಾಕಿ ಅಂಗಳ ಮಾಡಿದ.+ ಅದ್ರ ಬಾಗಿಲಿಗೆ ಪರದೆ ಹಾಕಿದ.+
ಹೀಗೆ ಮೋಶೆ ಎಲ್ಲ ಕೆಲಸ ಮಾಡಿಮುಗಿಸಿದ. 34 ಆಮೇಲೆ ದೇವದರ್ಶನ ಡೇರೆನ ಮೋಡ ಮುಚ್ಕೊಳ್ತು. ಡೇರೆಯಲ್ಲೆಲ್ಲ ಯೆಹೋವನ ಮಹಿಮೆ ತುಂಬ್ಕೊಳ್ತು.+ 35 ಮೋಶೆಗೆ ದೇವದರ್ಶನ ಡೇರೆ ಒಳಗೆ ಹೋಗೋಕೆ ಆಗಲಿಲ್ಲ. ಯಾಕಂದ್ರೆ ಮೋಡ ಡೇರೆನ ಮುಚ್ಕೊಳ್ತು. ಯೆಹೋವನ ಮಹಿಮೆ ಪವಿತ್ರ ಡೇರೆಯಲ್ಲೆಲ್ಲ ತುಂಬ್ಕೊಳ್ತು.+
36 ಇಸ್ರಾಯೇಲ್ಯರು ಇಡೀ ಪ್ರಯಾಣದಲ್ಲಿ ಪವಿತ್ರ ಡೇರೆನ ಮುಚ್ಚಿದ್ದ ಮೋಡ ಮೇಲೆದ್ದಾಗೆಲ್ಲ ತಮ್ಮ ಡೇರೆನ ಕಿತ್ತು ಪ್ರಯಾಣ ಮಾಡೋಕೆ ತಯಾರಾಗ್ತಿದ್ರು.+ 37 ಮೋಡ ಡೇರೆನ ಮುಚ್ಚಿದ್ದಾಗ ಅವರು ಅಲ್ಲೇ ಇರ್ತಿದ್ರು. ಮೋಡ ಮೇಲೆ ಏರೋ ತನಕ ಅವರು ಮುಂದಕ್ಕೆ ಪ್ರಯಾಣ ಮಾಡ್ತಾ ಇರಲಿಲ್ಲ.+ 38 ಹಗಲಲ್ಲಿ ಪವಿತ್ರ ಡೇರೆ ಮೇಲೆ ಯೆಹೋವನ ಮೋಡ ಇರ್ತಿತ್ತು, ರಾತ್ರಿಯಲ್ಲಿ ಆ ಡೇರೆ ಮೇಲೆ ಬೆಂಕಿ ಇರ್ತಿತ್ತು. ಇದು ಎಲ್ಲ ಇಸ್ರಾಯೇಲ್ಯರಿಗೆ ಅವ್ರ ಇಡೀ ಪ್ರಯಾಣದಲ್ಲಿ ಕಾಣಿಸ್ತಾ ಇತ್ತು.+
ಅಥವಾ “ಐಗುಪ್ತ.”
ಇದು ಇಸ್ರಾಯೇಲ್ಯರಿಗೆ ಇರೋ ಇನ್ನೊಂದು ಹೆಸ್ರು. ಪದವಿವರಣೆಯಲ್ಲಿ “ಇಬ್ರಿಯ” ನೋಡಿ.
ಅಥವಾ “ದಾದಿಯರಾಗಿದ್ರು.”
ಅಕ್ಷ. “ಹೆರಿಗೆ ಸಮಯದಲ್ಲಿ ತಾಯಿ ಮಣೆ ಮೇಲೆ ಕೂತಿರುವಾಗ.”
ಅಥವಾ “ಪೆಟ್ಟಿಗೆ.”
ಅರ್ಥ “ತಗೊಂಡಿದ್ದು,” ಅಂದ್ರೆ ನೀರಿಂದ ಕಾಪಾಡಿದ್ದು.
ಅಂದ್ರೆ, “ಇತ್ರೋ.”
ಅರ್ಥ “ಅಲ್ಲಿ ವಿದೇಶಿಯಾಗಿ ಇದ್ದವನು.”
ಅಥವಾ “ಒಡಂಬಡಿಕೆಯನ್ನ.”
ಅಥವಾ “ಒಪ್ಪಂದದ ಪ್ರಕಾರ ಮಾಡೋಕೆ ತೀರ್ಮಾನಿಸಿದನು.”
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಅಕ್ಷ. “ತಂದೆಯ.”
ಅಥವಾ “ಅವರ ಕಡೆಗೆ ಗಮನಹರಿಸಿ.”
ಅಕ್ಷ. “ಸೇವೆ.”
ಅಥವಾ “ಆರಿಸಿಕೊಳ್ತಿನೋ.”
ಅಥವಾ “ನಾನು ಏನಾಗಿ ಪರಿಣಮಿಸಬೇಕೋ ಅದಾಗಿ ಪರಿಣಮಿಸ್ತೀನಿ.” ಪರಿಶಿಷ್ಟ ಎ4 ನೋಡಿ.
ಅಕ್ಷ. “ಈಜಿಪ್ಟಿನ ರಾಜನನ್ನ ನನ್ನ ಬಲಿಷ್ಠ ಕೈ ಒತ್ತಾಯ ಮಾಡಿದಾಗ.”
ಅಕ್ಷ. “ನಾಲಿಗೆ ಮಂದ.”
ಅಥವಾ “ಹಾಗಾಗೋ ತರ ಬಿಟ್ಟವನು.”
ಅಥವಾ “ನಾನು ನಿನ್ನ ಜೊತೆ ಇರ್ತಿನಿ.”
ಅಥವಾ “ದೇವರನ್ನ ಪ್ರತಿನಿಧಿಸ್ತೀಯ.”
ಬಹುಶಃ ಮೋಶೆಯ ಮಗ.
ಅಥವಾ “ಕಲ್ಲಿನ ಚಾಕು.”
ಪದವಿವರಣೆ ನೋಡಿ.
ಅಂದ್ರೆ, “ಪುರುಷನ ಜನನಾಂಗದ ತುದಿಯ ಚರ್ಮವನ್ನ.”
ಬಹುಶಃ ದೇವದೂತನ ಕಾಲು.
ಅಥವಾ “ಸುಮ್ನೆ ಕಾಲ ಕಳಿತಿದ್ದಾರೆ.”
ಅಥವಾ “ಸುಮ್ನೆ ಕಾಲ ಕಳಿತಿದ್ದೀರ.”
ಅಕ್ಷ. “ನನ್ನ ಬಲಿಷ್ಠ ಕೈ ಅವನನ್ನ ಒತ್ತಾಯಿಸುತ್ತೆ.”
ಅಥವಾ “ನನ್ನ ಬಲಿಷ್ಠ ತೋಳಿಂದ.”
ಅಕ್ಷ. “ದೇವರನ್ನಾಗಿ.” ಇದರರ್ಥ, ದೇವರು ಮೋಶೆಗೆ ಫರೋಹನ ಮೇಲೆ ಅಧಿಕಾರ ಕೊಟ್ಟನು.
ಅಂದ್ರೆ, ನೈಲ್ ನದಿ ಕಾಲುವೆ.
ಇವು ಈಜಿಪ್ಟಲ್ಲಿ ಸಾಮಾನ್ಯವಾಗಿರೋ ಚಿಕ್ಕ ಕೀಟಗಳು. ಇವು ಸೊಳ್ಳೆಗಳ ತರ ಕಾಣುತ್ತೆ.
ಅಕ್ಷ. “ಬೆರಳಿಂದಾನೇ.”
ಅಥವಾ “ನಮ್ಮ ಜೊತೆ ಆಟ ಆಡಬಾರದು.”
ಅಕ್ಷ. “ಫರೋಹನ ಹೃದಯ.”
ಇದು ಭಯಂಕರ ಮಿಂಚು ಆಗಿರಬಹುದು.
ಅಥವಾ “ಯೆಹೋವ ನೀತಿವಂತ.”
ಅಥವಾ “ಜವೆಗೋದಿ.”
ಇಲ್ಲಿ, ಹೀಬ್ರು ಭಾಷೆಯಲ್ಲಿ ಎರಡು ವಿಧದ ಗೋದಿಯ ಹೆಸರುಗಳಿವೆ. ಇವುಗಳಲ್ಲಿ ಒಂದು ಪ್ರಾಚೀನ ಈಜಿಪ್ಟಲ್ಲಿ ಬೆಳಿತಿದ್ದ ಕಡಿಮೆ ಗುಣಮಟ್ಟದ ಗೋದಿ.
ಅಥವಾ “ಪೂರ್ತಿ ಬೆಳಿಯೋಕೆ.”
ಅಕ್ಷ. “ಅವನ ಮತ್ತು ಅವನ ಸೇವಕರ ಹೃದಯಗಳು.”
ಮೋಶೆ ಆಗಿರಬಹುದು.
ಅಕ್ಷ. “ತಂದೆಯ ಮನೆಗಾಗಿ.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಕ್ಷ. “ಇಸ್ರಾಯೇಲ್ ಸಮೂಹದ ಇಡೀ ಸಭೆ.”
ಅಂದ್ರೆ, ಹಸಿಯಾಗಿ ಅಥವಾ ಅರ್ಧ ಬೇಯಿಸಿ.
ಇದ್ರ ಅರ್ಥ “ದಾಟಿ ಹೋಗು.” ಪದವಿವರಣೆಯಲ್ಲಿ “ಪಸ್ಕ” ನೋಡಿ.
ಅಕ್ಷ. “ನಿಮ್ಮನ್ನ ದಾಟಿಹೋಗ್ತೀನಿ.”
ಅಕ್ಷ. “ನಿಮ್ಮ ಸೈನ್ಯಗಳನ್ನ.”
ಪದವಿವರಣೆ ನೋಡಿ.
ಅಕ್ಷ. “ಬಾಗಿಲು ದಾಟಿ ಹೋಗ್ತಾನೆ.”
ಅಕ್ಷ. “ಗುಂಡಿ-ಮನೆ.”
ಅಕ್ಷ. “ಕಾಲುನಡಿಗೆಯಲ್ಲಿ ಹೊರಟ ಗಂಡಸರು.” ಇದು, ಸೈನಿಕರಾಗೋಕೆ ಯೋಗ್ಯರಾದ ಗಂಡಸರನ್ನ ಸೂಚಿಸುತ್ತಿರಬೇಕು.
ಅಂದ್ರೆ, ಇಸ್ರಾಯೇಲ್ಯರಲ್ಲದ ಬೇರೆ ಜನ್ರು ಮತ್ತು ಈಜಿಪ್ಟಿನವರು.
ಅಕ್ಷ. “ಸೈನ್ಯಗಳು.”
ಅಕ್ಷ. “ಇಸ್ರಾಯೇಲ್ಯರನ್ನ ಅವರ ಸೈನ್ಯಗಳ ಜೊತೆ.”
ಅಕ್ಷ. “ಪವಿತ್ರೀಕರಿಸು.”
ಅಕ್ಷ. “ಬಲಿಷ್ಠ ಕೈಯಿಂದ.”
ಅಥವಾ “ನೈಸಾನ್.” ಪರಿಶಿಷ್ಟ ಬಿ15 ನೋಡಿ.
ಅಕ್ಷ. “ಬಲಿಷ್ಠ ಕೈಯಿಂದ.”
ಅಥವಾ “ಜ್ಞಾಪಕದ.”
ಅಕ್ಷ. “ಯೆಹೋವನ ನಿಯಮ ನಿಮ್ಮ ಬಾಯಲ್ಲಿರುತ್ತೆ.”
ಅಕ್ಷ. “ಬಲಿಷ್ಠ ಕೈಯಿಂದ.”
ಅಕ್ಷ. “ಬಲಿಷ್ಠ ಕೈಯಿಂದ.”
ಅಂದ್ರೆ, ಸುಮಾರು ಬೆಳಿಗ್ಗೆ 2-6 ಗಂಟೆ ತನಕ.
ಅಕ್ಷ. “ಬಲಿಷ್ಠ ಕೈಯಿಂದ.”
“ಯಾಹು” ಅನ್ನೋದು ಯೆಹೋವ ಹೆಸರಿನ ಸಂಕ್ಷಿಪ್ತರೂಪ.
ಕುಲಾಧಿಪತಿಗಳು
ಅರ್ಥ “ಕಹಿ.”
ಅಕ್ಷ. “ಮಾಂಸದ ಪಾತ್ರೆ ಹತ್ರ ಕೂತು.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ, ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಸುಮಾರು 2.2 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪ್ರತಿಯೊಬ್ರು ಸಬ್ಬತ್ ಆಚರಿಸಬೇಕು.”
ಪದವಿವರಣೆ ನೋಡಿ.
ಅಥವಾ “ವಿಶ್ರಾಂತಿ ಪಡ್ಕೊಂಡ್ರು.”
ಬಹುಶಃ “ಇದೇನು?” ಅನ್ನೋದಕ್ಕೆ ಹೀಬ್ರು ಭಾಷೆಯಲ್ಲಿರೋ ಪದ.
ಇದು, ಪ್ರಾಮುಖ್ಯ ದಾಖಲೆಗಳನ್ನ ಸುರಕ್ಷಿತವಾಗಿ ಇಡೋಕೆ ಬಳಸ್ತಿದ್ದ ಪೆಟ್ಟಿಗೆ.
ಒಂದು ಏಫಾ ಅಂದ್ರೆ 22 ಲೀ. ಪರಿಶಿಷ್ಟ ಬಿ14 ನೋಡಿ.
ಅರ್ಥ “ಪರೀಕ್ಷಿಸೋದು.”
ಅರ್ಥ “ಜಗಳ ಮಾಡೋದು.”
ಅರ್ಥ “ಯೆಹೋವ ನನ್ನ ಸೂಚನಾ ಕಂಬ.”
ಅರ್ಥ “ವಿದೇಶಿಯಾಗಿ ವಾಸ ಮಾಡೋನು.”
ಅರ್ಥ “ದೇವರೇ ನನ್ನ ಸಹಾಯಕ.”
ಅಥವಾ “ಅಮೂಲ್ಯ ಆಸ್ತಿಯಾಗ್ತೀರ.”
ಅಕ್ಷ. “ಪುರೋಹಿತ ರಾಜ್ಯ.”
ಬಾಣ ಬಿಡೋದು ಆಗಿರಬಹುದು.
ಅಕ್ಷ. “ಟಗರಿನ ಕೊಂಬು.”
ಬಹುಶಃ ಕುಟುಂಬದ ಯಜಮಾನ.
ಅಥವಾ “ನನ್ನನ್ನ ವಿರೋಧಿಸಿ ನೀವು ಬೇರೆ ದೇವರುಗಳನ್ನ ಆರಾಧಿಸಬಾರದು.”
ಅಕ್ಷ. “ಸೇವೆ ಮಾಡಲೂಬಾರದು.”
ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”
ಪದವಿವರಣೆ ನೋಡಿ.
ಅಥವಾ “ಸಹಭೋಜನ ಬಲಿ.” ಪದವಿವರಣೆ ನೋಡಿ.
ಅಕ್ಷ. “ನನ್ನ ಹೆಸ್ರು ನೆನಪಿಸಿಕೊಳ್ಳೋ ತರ ನಾನು ಮಾಡೋ.”
ಅಥವಾ “ಕೆಟ್ಟದಾಗಲಿ ಅಂತ ಬಯ್ಯುವವನನ್ನ.”
ಬಹುಶಃ, “ಒಂದು ಉಪಕರಣದಿಂದ.”
ಅಥವಾ “ತಾಯಿ ಮಗುವಿಗೆ ತೀವ್ರ ಹಾನಿ ಆಗದಿದ್ರೆ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ತಂದೆ ಇಲ್ಲದ.”
ಅಥವಾ “ಜಾಸ್ತಿ ಬಡ್ಡಿಗೆ ಸಾಲ ಕೊಡುವವನ ತರ.”
ಅಥವಾ “ಶಾಪ ಹಾಕಬಾರದು.”
ಅಥವಾ “ರಾಜನನ್ನ.”
ಅಥವಾ “ಜನಪ್ರಿಯವಾದ ಸಾಕ್ಷಿ ಹೇಳಿ.”
ಅಕ್ಷ. “ಮಾತು.”
ಅಥವಾ “ನಿರಪರಾಧಿ.”
ಅಕ್ಷ. “ವಿದೇಶಿ ಆಗಿರೋವಾಗ ಹೇಗನಿಸುತ್ತೆ.”
ಅಥವಾ “ತುಟಿಗಳಲ್ಲಿ.”
ಅಥವಾ “ನೈಸಾನ್.” ಪರಿಶಿಷ್ಟ ಬಿ15 ನೋಡಿ.
ಇದಕ್ಕೆ ವಾರಗಳ ಹಬ್ಬ, 50ನೇ ದಿನದ ಹಬ್ಬ ಅನ್ನೋ ಹೆಸರು ಕೂಡ ಇದೆ.
ಈ ಹಬ್ಬಕ್ಕೆ ಚಪ್ಪರಗಳ (ಡೇರೆಗಳ) ಹಬ್ಬ ಅನ್ನೋ ಹೆಸರೂ ಇದೆ.
ಅಥವಾ “ಕಾಯಿಲೆ ಬರದ ಹಾಗೆ ಕಾಪಾಡ್ತೀನಿ.”
ಅಥವಾ “ನಿಮ್ಮ ಶತ್ರುಗಳೆಲ್ಲ ನಿಮಗೆ ಬೆನ್ನು ತೋರಿಸಿ.”
ಅದು, ಯೂಫ್ರೆಟಿಸ್.
ಪದವಿವರಣೆ ನೋಡಿ.
ಅಥವಾ “ನಸುಗೆಂಪಾದ ನೇರಳೆ ಬಣ್ಣದ ಉಣ್ಣೆ.”
ಅಥವಾ “ಕಿರಮಂಜಿ ಕೆಂಪು ಬಣ್ಣದ ನೂಲು.” ಕಿರಮಂಜಿ ಉಜ್ವಲವಾದ ಕೆಂಪು ಬಣ್ಣ. ಈ ಬಣ್ಣವನ್ನ ಕಾಚಿನೀಲ್ ಕೀಟದಿಂದ ತೆಗೆಯಲಾಗುತ್ತೆ.
ಇದೊಂದು ಕಡಲ ಪ್ರಾಣಿ.
ಇದು ಜಾಲಿ ಕುಲಕ್ಕೆ ಸೇರಿದ ಮರ.
ಪದವಿವರಣೆ ನೋಡಿ.
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಅಥವಾ “ಸಾಕ್ಷಿಯಾಗಿ ಇರೋ.”
ಸುಮಾರು 7.4 ಸೆಂ.ಮೀ. (2.9 ಇಂಚು). ಪರಿಶಿಷ್ಟ ಬಿ14 ನೋಡಿ.
ಅಥವಾ “ದೀಪಶಾಮಕಗಳನ್ನ.”
ಒಂದು ತಲಾಂತು ಅಂದ್ರೆ 34.2 ಕೆ.ಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಇದು ಸಮುದ್ರದಲ್ಲಿರೋ ಒಂದು ಪ್ರಾಣಿ.
ಇದು ಜಾಲಿ ಕುಲಕ್ಕೆ ಸೇರಿದ ಮರ.
ಅಥವಾ “ಕಾಲುಗಳು.”
ಇದು ಜಾಲಿ ಕುಲಕ್ಕೆ ಸೇರಿದ ಮರ.
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಅದು, ಬಲಿಗಳ ಕೊಬ್ಬಿಂದ ನೆನೆದ ಬೂದಿ.
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಕ್ಷ. “ಯಾಜಕರಾಗಿ.”
ಅಥವಾ “ನೇಯ್ದ ಪಟ್ಟಿ.”
ಪದವಿವರಣೆ ನೋಡಿ.
ಸುಮಾರು 22.2 ಸೆಂ.ಮೀ. (8.75 ಇಂಚು). ಪರಿಶಿಷ್ಟ ಬಿ14 ನೋಡಿ.
ಇದು ಯಾವ ಅಮೂಲ್ಯ ರತ್ನ ಅಂತ ಖಚಿತವಾಗಿ ಗೊತ್ತಿಲ್ಲ. ಬಹುಶಃ ಆ್ಯಂಬರ್, ಹಯಸಿಂತ್, ಓಪಲ್ ಅಥವಾ ಟುಅರ್‌ಮಲೀನ್ ಆಗಿರಬಹುದು.
ಅಥವಾ “ನೇಯ್ದ ಪಟ್ಟಿ.”
ಅಥವಾ “ನೇಯ್ದ ಪಟ್ಟಿಯ.”
ಅಕ್ಷ. “ಹೃದಯದ.”
ಪದವಿವರಣೆ ನೋಡಿ.
ಅಕ್ಷ. “ಹೃದಯ.”
ಅಥವಾ “ತಲೆ ತೂರಿಸೋಕೆ ತೂತು.”
ಅಕ್ಷ. “ಪವಿತ್ರತೆ ಯೆಹೋವನಿಗೆ ಸೇರಿದ್ದು.”
ಅಥವಾ “ಒಳಉಡುಪುಗಳನ್ನ.”
ಅಥವಾ “ಆರೋನ ದೇವರಿಗೆ ಸಮರ್ಪಿತನಾಗಿದ್ದಾನೆ ಅಂತ ಸೂಚಿಸೋ ಚಿಹ್ನೆಯನ್ನ; ಪವಿತ್ರ ಮುಕುಟವನ್ನ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಕಿವಿಯ ಹಾಲೆಗೆ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.
ಅಕ್ಷ. “ಅಪರಿಚಿತ.” ಅಂದ್ರೆ ಆರೋನನ ಕುಟುಂಬಕ್ಕೆ ಸೇರದವನು.
ಅಕ್ಷ. “ಎರಡು ಸಂಜೆಗಳ ಮಧ್ಯೆ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಒಂದು ಹಿನ್ ಅಂದ್ರೆ 3.67 ಲೀ. ಪರಿಶಿಷ್ಟ ಬಿ14 ನೋಡಿ.
ಒಂದು ಏಫಾ ಅಂದ್ರೆ 22 ಲೀ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಎರಡು ಸಂಜೆಗಳ ಮಧ್ಯೆ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಇದು ಜಾಲಿ ಕುಲಕ್ಕೆ ಸೇರಿದ ಮರ.
ಸುಮಾರು 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಎರಡು ಸಂಜೆಗಳ ಮಧ್ಯೆ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಗೇರಾದ ತೂಕ 0.57 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ರಕ್ತಬೋಳ.”
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಕ್ಷ. “ಕ್ಯಾಸಿಯ.” ಪದವಿವರಣೆಯಲ್ಲಿ “ಕ್ಯಾಸಿಯ” ನೋಡಿ.
ಒಂದು ಹಿನ್ ಅಂದ್ರೆ 3.67 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸುಗಂಧ ತೈಲ ಮಾಡೋ ತರ.”
ಅಕ್ಷ. “ಅಪರಿಚಿತ.” ಅಂದ್ರೆ ಆರೋನನ ಕುಟುಂಬಕ್ಕೆ ಸೇರದವನು.
ಅಥವಾ “ಸುಗಂಧ ತೈಲ ಮಾಡೋ ತರ.”
ಅಕ್ಷ. “ಬೆರಳಿಂದ.”
ಅಕ್ಷ. “ಮಾರ್ಗ.”
ಅಥವಾ “ಮನಸ್ಸು ಬದಲಾಯಿಸ್ಕೊ.”
ಅಕ್ಷ. “ಬಾಗಿಲಿಂದ ಬಾಗಿಲಿಗೆ.”
ಅಕ್ಷ. “ನಿನ್ನನ್ನ ನಿನ್ನ ಹೆಸರಿಂದ.”
ಅಥವಾ “ನಂಬಿಗಸ್ತ.”
ಅಥವಾ “ಅವಿಧೇಯತೆ.”
ಅಥವಾ “ಜನರಾಗಿ.”
ಪದವಿವರಣೆಯಲ್ಲಿ “ಪೂಜಾಕಂಬ” ನೋಡಿ.
ಅಥವಾ “ಅನನ್ಯ ಭಕ್ತಿಯನ್ನ ಹಕ್ಕಿಂದ ಕೇಳೋನು.”
ಅಥವಾ “ಅಚ್ಚಲ್ಲಿ ಲೋಹ ಹೊಯ್ದು.”
ಅಥವಾ “ನೈಸಾನ್.” ಪರಿಶಿಷ್ಟ ಬಿ15 ನೋಡಿ.
ಅಥವಾ “ಸಬ್ಬತ್ ನಿಯಮ ಪಾಲಿಸಬೇಕು.”
ಈ ಹಬ್ಬಕ್ಕೆ ಚಪ್ಪರಗಳ (ಡೇರೆಗಳ) ಹಬ್ಬ ಅನ್ನೋ ಹೆಸರು ಕೂಡ ಇದೆ.
ಅಥವಾ “ಸಾಕ್ಷಿಯಂತಿದ್ದ.”
ಅಥವಾ “ನಸುಗೆಂಪಾದ ನೇರಳೆ ಬಣ್ಣ ಹಾಕಿದ ಉಣ್ಣೆ.”
ಅಥವಾ “ಕಿರಮಂಜಿ ಕೆಂಪು ಬಣ್ಣದ ನೂಲು.” ಕಿರಮಂಜಿ ಉಜ್ವಲವಾದ ಕೆಂಪು ಬಣ್ಣ. ಈ ಬಣ್ಣವನ್ನ ಕಾಚಿನೀಲ್ ಕೀಟದಿಂದ ತೆಗೆಯಲಾಗುತ್ತೆ.
ಇದೊಂದು ಕಡಲ ಪ್ರಾಣಿ.
ಇದು ಜಾಲಿ ಕುಲಕ್ಕೆ ಸೇರಿದ ಮರ.
ಅಥವಾ “ಓಲಾಡಿಸೋ ಅರ್ಪಣೆಯಾಗಿ.”
ಅಕ್ಷ. “ಹೃದಯ ಪ್ರೇರಿಸಿದ್ರಿಂದ.”
ಅಥವಾ “ವಿವೇಕಭರಿತರನ್ನಾಗಿ ಮಾಡಿದ್ದಾನೆ.”
ಅಥವಾ “ಪವಿತ್ರ ಸೇವೆನ.”
ಬೆಚಲೇಲನೇ ಆಗಿರಬೇಕು.
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಇದೊಂದು ಕಡಲ ಪ್ರಾಣಿ.
ಇದು ಜಾಲಿ ಕುಲಕ್ಕೆ ಸೇರಿದ ಮರ.
ಅಥವಾ “ಕಾಲುಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಇದು ಜಾಲಿ ಕುಲಕ್ಕೆ ಸೇರಿದ ಮರ.
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಸುಮಾರು 7.4 ಸೆಂ.ಮೀ. (2.9 ಇಂಚು). ಪರಿಶಿಷ್ಟ ಬಿ14 ನೋಡಿ.
ಅಥವಾ “ದೀಪಶಾಮಕಗಳನ್ನ.”
ಒಂದು ತಲಾಂತು ಅಂದ್ರೆ 34.2 ಕೆ.ಜಿ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸುಗಂಧ ತೈಲ ಮಾಡೋ ತರ.”
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಇವು ಚೆನ್ನಾಗಿ ಉಜ್ಜಿ ಹೊಳಿಯೋ ತರ ಮಾಡಿದ ಲೋಹದ ಕನ್ನಡಿಗಳು.
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಒಂದು ತಲಾಂತು ಅಂದ್ರೆ 34.2 ಕೆ.ಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಥವಾ “ಓಲಾಡಿಸೋ ಅರ್ಪಣೆಯಾಗಿ.”
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಥವಾ “ಓಲಾಡಿಸೋ ಅರ್ಪಣೆಯಾಗಿ ಕೊಟ್ಟಿದ್ರು.”
ಅಥವಾ “ನೇಯ್ದ ಪಟ್ಟಿ.”
ಸುಮಾರು 22.2 ಸೆಂ.ಮೀ. (8.75 ಇಂಚು). ಪರಿಶಿಷ್ಟ ಬಿ14 ನೋಡಿ.
ಇದು ಯಾವ ಅಮೂಲ್ಯ ರತ್ನವೆಂದು ಖಚಿತವಾಗಿ ಗೊತ್ತಿಲ್ಲ. ಬಹುಶಃ ಆ್ಯಂಬರ್, ಹಯಸಿಂತ್, ಓಪಲ್ ಅಥವಾ ಟುಅರ್‌ಮಲೀನ್ ಆಗಿರಬಹುದು.
ಅಥವಾ “ನೇಯ್ದ ಪಟ್ಟಿ.”
ಅಥವಾ “ನೇಯ್ದ ಪಟ್ಟಿ.”
ಅಥವಾ “ಒಳಉಡುಪುಗಳನ್ನ.”
ಅಥವಾ “ಆರೋನ ದೇವರಿಗೆ ಸಮರ್ಪಣೆ ಮಾಡ್ಕೊಂಡಿದ್ದಾನೆ ಅಂತ ಸೂಚಿಸೋ ಚಿಹ್ನೆ; ಪವಿತ್ರ ಕಿರೀಟ ಆಗಿತ್ತು.”
ಅಕ್ಷ. “ಪವಿತ್ರತೆ ಯೆಹೋವನಿಗೆ ಸೇರಿದ್ದು.”
ಇದೊಂದು ಸಮುದ್ರ ಪ್ರಾಣಿ.